Quantcast
Channel: Samvada
Viewing all 3435 articles
Browse latest View live

#RSSVijayadashami Utsav 2020 photo album from Nagpur

$
0
0
RSS Sarsanghachalak Dr. Mohan Bhagwat, Nagpur

ಸೇವೆಯೆಂಬ ಯಜ್ಞದಲ್ಲಿ ಸಂಘವೆಂಬ ಸಮಿಧೆ

$
0
0

ಸೇವೆಯೆಂಬ ಯಜ್ಞದಲ್ಲಿ ಸಂಘವೆಂಬ ಸಮಿಧೆ
ಆರೆಸ್ಸೆಸ್‍ಗೆ 95ರ ಹರೆಯ

ಲೇಖನ: ಟಿ. ಎಸ್. ವೆಂಕಟೇಶ್
ಕ್ಷೇತ್ರ ಸಂಪರ್ಕ ಪ್ರಮುಖ್, ದಕ್ಷಿಣ ಮಧ್ಯ ಕ್ಷೇತ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ

(ಆಕ್ಟೊಬರ್ 25 ರಂದು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ)


ವಿಜಯದಶಮಿ ದೇಶದೆಲ್ಲೆಡೆ ಒಂದು ಸಂಭ್ರಮದ ಹಬ್ಬ. ಆರೆಸ್ಸೆಸ್ಸಿನ ಸ್ವಯಂಸೇವಕರಿಗಂತೂ ಅದು ಇನ್ನೂ ಹೆಚ್ಚಿನ ಸಂಭ್ರಮದ ದಿನ. ಏಕೆಂದರೆ, ಆರೆಸ್ಸೆಸ್ ಸ್ಥಾಪನೆಯಾದದ್ದೂ ಇದೇ ವಿಜಯದಶಮಿಯ ಶುಭದಿನದಂದು. 1925ರಲ್ಲಿ ನಾಗಪುರದಲ್ಲಿ ಡಾಕ್ಟರ್ ಹೆಡಗೇವಾರರು ಕೆಲವು ಬಾಲಕರನ್ನು ಒಟ್ಟುಗೂಡಿಸಿ ಆರಂಭಿಸಿದ ಆರೆಸ್ಸೆಸ್ಇಂದು ಹೆಮ್ಮರವಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹಿಂದು ಸ್ವಯಂಸೇವಕ ಸಂಘ ಎಂಬ ಹೆಸರಿನಲ್ಲಿ ಸಂಘದ ಕೆಲಸ ನಡೆಯುತ್ತಿದೆ. ಸಮಾಜಕ್ಕೆ ಸಂಕಷ್ಟ-ಸವಾಲುಗಳು ಎದುರಾದಾಗಲೆಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರೆಸ್ಸೆಸ್ ನೆರವಿಗೆ ಧಾವಿಸಿದೆ. ಪ್ರಕೃತಿ ವಿಕೋಪ, ಯುದ್ಧದ ಸಂದರ್ಭದಲ್ಲಷ್ಟೇ ಅಲ್ಲದೇ ಭಾರತದ ಸರ್ವಾಂಗೀಣ ಪ್ರಗತಿಗಾಗಿ ಶಿಕ್ಷಣ, ಸೇವೆ, ಪರಿಸರ ರಕ್ಷಣೆ, ಗ್ರಾಮಗಳ ವಿಕಾಸ, ಸಂಸ್ಕøತಿ-ಪರಂಪರೆಗಳ ಬಗ್ಗೆ ಜಾಗೃತಿಯಲ್ಲೂ ಆರೆಸ್ಸೆಸ್ ಮುಂಚೂಣ ಯಾಗಿ ಕೆಲಸ ಮಾಡುತ್ತಿದೆ.

ಕೋವಿಡ್-19 ರ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾದಾಗ ಸಂಘದ ಸ್ವಯಂಸೇವಕರು ಹಸಿದವರ ಹೊಟ್ಟೆ ತಣ ಸುವ ಕೆಲಸ ಮಾಡಿದರು. ಸುಮಾರು 85 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ, ಒಟ್ಟು 7 ಕೋಟಿಗೂ ಅಧಿಕ ಜನರಿಗೆ ಊಟ ಒದಗಿಸಿದರು. 1.1 ಕೋಟಿ ರೇಶನ್ ಕಿಟ್ ವಿತರಣೆ, 28 ಲಕ್ಷದಷ್ಟು ವಲಸೆ ಕಾರ್ಮಿಕರಿಗೆ ಸಹಾಯ, 1.3 ಲಕ್ಷ ಜನರಿಗೆ ವಸತಿ ವ್ಯವಸ್ಥೆ ಮಾಡಿದರು. ತುರ್ತು ಔಷಧಿ ಪೂರೈಕೆ, ರಕ್ತದಾನ, ಕಷಾಯ ವಿತರಣೆ ಮೊದಲಾದ ಅನೇಕ ಸೇವಾಕಾರ್ಯಗಳಲ್ಲಿ ಒಟ್ಟು 4.7 ಲಕ್ಷ ಸ್ವಯಂಸೇವಕರು ತಮ್ಮನ್ನು ತೊಡಗಿಸಿಕೊಂಡಿದ್ದ ಒಂದು ವಿಶೇಷ ಸಂದರ್ಭ ಇದಾಗಿತ್ತು. ದೇಶದೆಲ್ಲೆಡೆ ಸ್ವಯಂಸೇವಕರೊಂದಿಗೆ ಸಮಾಜವೂ ಕೈಜೋಡಿಸಿದ್ದು ಸಂಘಕ್ಕೆ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿತು.

ಮೊದಲು ಕ್ರಾಂತಿಕಾರಿಯಾಗಿದ್ದ, ಬಳಿಕ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಡಾಕ್ಟರ್ ಹೆಡಗೇವಾರರು ‘ಭಾರತ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಏಕೆ?’ ಎನ್ನುವುದಕ್ಕೆ ಉತ್ತರವನ್ನು ಹುಡುಕುತ್ತ ಹೊರಟರು. ನಮ್ಮನಮ್ಮಲ್ಲಿನ ಭೇದಭಾವ, ಅಹಂಕಾರ, ಪರಸ್ಪರ ದ್ವೇಷ, ನಾವು ಯಾರೆಂಬುದನ್ನೇ ನಾವು ಮರೆತಿದ್ದೇ ಇದಕ್ಕೆ ಕಾರಣ ಎಂಬುದು ಸ್ಪಷ್ಟವಾಯಿತು. ಬ್ರಿಟಿಷರನ್ನು ಓಡಿಸಿದ ಮೇಲೆ ಮತ್ತೊಮ್ಮೆ ಅಂತಹ ಸನ್ನಿವೇಶ ಎದುರಾಗದೇ ಇರಬೇಕಾದರೆ ಸಮಾಜ ಸಂಘಟಿತವಾಗಿರಬೇಕು ಎಂದು ಮನಗಂಡರು. ರಾಷ್ಟ್ರ ಸುರಕ್ಷಿತವಾಗಿ ಪ್ರಗತಿಯಾಗಬೇಕಾದರೆ ಸಂಘಟಿತ ಸಮಾಜದ ಜೊತೆಗೇ, ಸಚ್ಚಾರಿತ್ರ್ಯವುಳ್ಳ ಸಮರ್ಥ ವ್ಯಕ್ತಿಗಳೂ ಅಗತ್ಯ ಎಂದು ಚಿಂತಿಸಿ, ವ್ಯಕ್ತಿನಿರ್ಮಾಣ ಮತ್ತು ಹಿಂದೂಸಮಾಜದ ಸಂಘಟನೆಯ ಕಾರ್ಯಕ್ಕೆ ಮುಂದಾದರು.

Swayamsevaks’ Route march undettered due to rains

ದೇಶವ್ಯಾಪಿ ಬೆಳೆದ ಆರೆಸ್ಸೆಸ್
ಸಂಘ ಬೆಳೆದಂತೆ ರಾಷ್ಟ್ರದ ಸರ್ವಾಂಗೀಣ ಉನ್ನತಿಯನ್ನು ಸಾಧಿಸುವುದಕ್ಕಾಗಿ ವಿವಿಧ ಸಂಘಟನೆಗಳು ಪ್ರಾರಂಭವಾದವು. ಎಬಿವಿಪಿ, ವಿಶ್ವ ಹಿಂದೂ ಪರಿಷತ್, ಭಾರತೀಯ ಕಿಸಾನ್ ಸಂಘ, ಕಾರ್ಮಿಕ ಕ್ಷೇತ್ರದಲ್ಲಿ ಭಾರತೀಯ ಮಜ್ದೂರ್ ಸಂಘ, ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿ ಇತ್ಯಾದಿ ಅನೇಕ ಸಂಘಟನೆಗಳು ಸ್ವಯಂಸೇವಕರಿಂದ ಪ್ರಾರಂಭಗೊಂಡವು. ವನವಾಸಿಗಳ ಕಲ್ಯಾಣಕ್ಕಾಗಿ ಆರಂಭವಾದ ವನವಾಸಿ ಕಲ್ಯಾಣ ಆಶ್ರಮ, ಸೇವಾ ಭಾರತಿ, ಹಿಂದೂ ಸೇವಾ ಪ್ರತಿಷ್ಠಾನ ಮೊದಲಾದ ಅನೇಕ ಸಂಘಟನೆಗಳು ಸಮಾಜಸೇವೆಯಲ್ಲಿ ನಿರತವಾದವು.
ಸಂಘದ ಪ್ರೇರಣೆಯಿಂದ ಆರಂಭವಾದ ಸಂಸ್ಕøತ ಭಾರತಿ ಸಂಸ್ಕøತವನ್ನು ಆಡುಭಾಷೆಯಾಗಿ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇಂದು ಅನೇಕ ಕುಟುಂಬಗಳಲ್ಲಿನ ಮಕ್ಕಳ ಮಾತೃಭಾಷೆ ಸಂಸ್ಕøತವೇ ಆಗಿದೆ ಎಂದರೆ ಆಶ್ಚರ್ಯವಾಗಬಹುದಾದರೂ ಇದು ಸತ್ಯ! ರಾಷ್ಟ್ರೋತ್ಥಾನ ಪರಿಷತ್‍ನಂತಹ ಅನೇಕ ಸಂಸ್ಥೆಗಳು ಸಾಹಿತ್ಯಕೃತಿಗಳ ಮುದ್ರಣ-ಪ್ರಸಾರ, ಗೋಶಾಲೆಗಳ ನಿರ್ವಹಣೆ, ರಕ್ತನಿಧಿ, ಶಾಲೆ, ಸ್ಲಮ್‍ಗಳಲ್ಲಿ ವ್ಯಾಸಂಗಕೇಂದ್ರ ಇತ್ಯಾದಿ ಅನೇಕ ಆಯಾಮಗಳಲ್ಲಿ ಕೆಲಸ ಮಾಡುತ್ತಿವೆ. ಇಂದು ವಿಶ್ವದೆಲ್ಲೆಡೆ ಭಾರತದ ಹೆಮ್ಮೆಯ ಯೋಗಕ್ಕೆ ಮನ್ನಣೆ ದೊರಕಿದೆ. 80ರ ದಶಕದಲ್ಲೇ, ಯೋಗಕ್ಕೆ ಈಗಿನಂತಹ ಪ್ರಚಾರವಿರದ ಸಮಯದಲ್ಲೇ ಆರೆಸ್ಸೆಸ್ ಯೋಗದ ಮಹತ್ತ್ವವನ್ನು ಜನರಿಗೆ ತಿಳಿಸುವ ಕಾರ್ಯ ಪ್ರಾರಂಭಿಸಿತ್ತು. ಆರೆಸ್ಸೆಸ್ ಹಿರಿಯ ಪ್ರಚಾರಕರಾಗಿದ್ದ ಸ್ವರ್ಗೀಯ ಅಜಿತ್‍ಕುಮಾರ್ ಅವರು ಸ್ವಯಂ ತಾವೇ ಬಿ ಕೆ ಎಸ್ ಅಯ್ಯಂಗಾರ್ ಅವರಿಂದ ಯೋಗ ಕಲಿತು ಕರ್ನಾಟಕದಾದ್ಯಂತ ಯೋಗದ ಪ್ರಚಾರಕ್ಕೆ ಮುಂದಾದರು. ಆರೆಸ್ಸೆಸ್ ಸೇವಾಪ್ರಕಲ್ಪಗಳು ಯೋಗವನ್ನು ಕಲಿಸುವ ಕೇಂದ್ರಗಳನ್ನು ತೆರೆದವು. ಶಾಖೆಗಳಲ್ಲಿ ಯೋಗ ಪ್ರಾರಂಭವಾಯಿತು.

ರಾಷ್ಟ್ರಹಿತದ ಕಾರ್ಯಕ್ಕೆ ಸದಾ ಸಿದ್ಧ
1947ರಲ್ಲಿ ದೇಶವಿಭಜನೆಯಾದಾಗ ಪಾಕಿಸ್ತಾನದಿಂದ ಬರುವ ಹಿಂದೂ ನಿರಾಶ್ರಿತರ ರಕ್ಷಣೆಯಾಗಲೀ, ಜಮ್ಮು-ಕಾಶ್ಮೀರದ ಮೇಲೆ ಪಾಕಿಸ್ತಾನ ನಡೆಸಿದ ಆಕ್ರಮಣದ ಸಂದರ್ಭವಿರಲಿ ಸಂಘದ ಸ್ವಯಂಸೇವಕರು ತಮ್ಮ ಜೀವವನ್ನೇ ಒತ್ತೆಯಿಟ್ಟು ದೇಶದ ರಕ್ಷಣೆಗೆ ಮುಂದಾದರು. 1962ರ ಚೀನಾ ಆಕ್ರಮಣದ ಸಂದರ್ಭದಲ್ಲಿಯೂ ಸೇನೆಯ ಕಾರ್ಯಕ್ಕೆ ಪೂರಕವಾಗಿ ಸಂಘ ನಿಂತಿತು. ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸಂತರು ಮತ್ತು ವಿಹಿಂಪ ನೇತೃತ್ವದಲ್ಲಿ ದೇಶವ್ಯಾಪಿ ನಡೆದ ಆಂದೋಲನದಲ್ಲಿ ಆರೆಸ್ಸೆಸ್ ಪೂರ್ಣಪ್ರಮಾಣದಲ್ಲಿ ಕೈಜೋಡಿಸಿತು.
ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಮಾತೃಭಾಷೆಯ ಬಳಕೆ ಹೆಚ್ಚಬೇಕು ಎಂಬ ಆಗ್ರಹದಿಂದ ಹಿಡಿದು ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಬೇಕು ಎನ್ನುವವರೆಗೆ ಅನೇಕ ವಿಷಯಗಳ ಬಗ್ಗೆ ಸಂಘ ಜನಜಾಗೃತಿ ಉಂಟುಮಾಡುವ ಕಾರ್ಯದಲ್ಲಿ ತೊಡಗಿದೆ. ಸಂಘದ ವಾರ್ಷಿಕ ಬೈಠಕ್ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಶಿಕ್ಷಣ, ಆರೋಗ್ಯ, ಪರಿಸರ, ಸುರಕ್ಷೆ, ಆರ್ಥಿಕತೆ, ಸಾಮಾಜಿಕ ಸಾಮರಸ್ಯ ಹೀಗೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಮೇಲೆ ಆಳವಾದ ಚರ್ಚೆಗಳು ನಡೆದು, ರಾಷ್ಟ್ರಹಿತಕ್ಕೆ ಪೂರಕವಾಗುವ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.

ಜಯಪ್ರಕಾಶ್ ನಾರಾಯಣ್ ಅವರ ಅನುಭವ
1975-76ರ ಸಮಯದಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಲ್ಪಟ್ಟಾಗ ಪ್ರಜಾಪ್ರಭುತ್ವವನ್ನು ಬಂಧನದಿಂದ ಬಿಡುಗಡೆಗೊಳಿಸಲು ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಮುಂದಾಳತ್ವದ ಸಂಪೂರ್ಣ ಕ್ರಾಂತಿ ಆಂದೋಲನದಲ್ಲಿ ಸಂಘದ ಸ್ವಯಂಸೇವಕರು ಧುಮುಕಿದರು. ಆ ಸಮಯದಲ್ಲಿ ಸ್ವಯಂಸೇವಕರ ಜೊತೆ ನಡೆದ ಚಿಕ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಪಿ ಅವರ ಮುಂದೆ ತಮ್ಮ ಪರಿಚಯ ಮಾಡಿಕೊಳ್ಳುತ್ತ ಪ್ರತಿಯೋರ್ವ ಸ್ವಯಂಸೇವಕ ತಾನು ಎಷ್ಟು ವರ್ಷಗಳಿಂದ ಆರೆಸ್ಸೆಸ್ ಸ್ವಯಂಸೇವಕ ಎನ್ನುವುದನ್ನೂ ಹೇಳುತ್ತಿದ್ದರು. ಸ್ವಯಂಸೇವಕರು ಇಪ್ಪತ್ತೈದು ಮೂವತ್ತು ನಲವತ್ತು ವರ್ಷಗಳಿಂದ ಸಂಘದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟ ಜೆಪಿ ತಾವು ನಂಬಿದ ಒಂದು ಧ್ಯೇಯಕ್ಕಾಗಿ ಜೀವವನ್ನೇ ಮುಡಿಪಾಗಿಡುವುದು ಅತ್ಯಂತ ದೊಡ್ಡ ವಿಚಾರ ಎಂದು ಹೇಳಿದ್ದರು.

ಆರೆಸ್ಸೆಸ್ ಕಳೆದ ತೊಂಬತ್ತೈದು ವರ್ಷಗಳಿಂದ ರಾಷ್ಟ್ರಸೇವೆಯ ಯಜ್ಞದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಅದಕ್ಕೆ ಸಮಾಜವೂ ಅಷ್ಟೇ ಪ್ರೀತಿಯಿಂದ ಸ್ಪಂದಿಸುತ್ತಿದೆ. ಸಂಘವನ್ನು ವಿರೋಧಿಸುವವರ ಯಾವ ಟೀಕೆ ಟಿಪ್ಪಣ ಗಳಿಗೂ ವಿಚಲಿತವಾಗದೇ ನಿತ್ಯ ಪ್ರಾರ್ಥನೆಯಲ್ಲಿ ಪುನರುಚ್ಚರಿಸುವಂತೆ ಮಾತೃಭೂಮಿಯನ್ನು ಪರಮ ವೈಭವಕ್ಕೆ ಕೊಂಡೊಯ್ಯುವ ತನ್ನ ಸಂಕಲ್ಪದಲ್ಲಿ ಆರೆಸ್ಸೆಸ್ ಕಟಿಬದ್ಧವಾಗಿದೆ. ರಾಷ್ಟ್ರೋನ್ನತಿಯ ಈ ಸಂಕಲ್ಪವನ್ನು ಸಂಘದ ಸಂಸ್ಥಾಪನಾ ದಿನವೂ ಆದ ವಿಜಯದಶಮಿಯ ಸಂದೇಶ ದೃಢಗೊಳಿಸುತ್ತದೆ.

ಟಿ. ಎಸ್. ವೆಂಕಟೇಶ್
ಕ್ಷೇತ್ರ ಸಂಪರ್ಕ ಪ್ರಮುಖ್, ದಕ್ಷಿಣ ಮಧ್ಯ ಕ್ಷೇತ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ

ಆ ವಿಜಯದಶಮಿಯಂದು ‘ಸಂಘ’ಮಾತ್ರವೇ ಪ್ರಾರಂಭವಾಗಲಿಲ್ಲ…

$
0
0

ಆ ವಿಜಯದಶಮಿಯಂದು ‘ಸಂಘ’ ಮಾತ್ರವೇ ಪ್ರಾರಂಭವಾಗಲಿಲ್ಲ…
ಲೇಖನ : ಪ್ರಕಾಶ್ ಮಲ್ಪೆ, ಮಂಗಳೂರು ವಿಭಾಗದ ಧರ್ಮ ಜಾಗರಣದ ಕಾರ್ಯಕರ್ತರು
(ಆಕ್ಟೊಬರ್ 25 ರಂದು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ)

ಕೆಲವು ದಶಕಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಾರಪತ್ರಿಕೆಯೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸರಸಂಘಚಾಲಕರಾಗಿದ್ದ ಶ್ರೀ ಬಾಳಾಸಾಹೇಬ ದೇವರಸರ ಭಾವ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿ ‘ಪ್ರಪಂಚದ ಅತ್ಯಂತ ಶಕ್ತಿಶಾಲಿ ವ್ಯಕ್ತಿ’ ಎಂದು ಬಣ್ಣಿಸಿತ್ತು.. ಇದು ಎಪ್ಪತ್ತರ ದಶಕದ ಘಟನೆ. ಸಂಘಟನೆಯೊಂದು ಪ್ರಾರಂಭವಾಗಿ ಕೇವಲ ನಲವತ್ತೈದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪತ್ರಿಕೆಯೊಂದು ಆ ರೀತಿ ಬರೆಯಬೇಕಾದರೆ ಸಂಘದ ಶಕ್ತಿ ಇವತ್ತು ಯಾವ ಮಟ್ಟಿಗಿದೆ ಎಂದು ನಾವು ಕಲ್ಪಿಸಿಕೊಳ್ಳಬಹುದು .

ಸ್ವಾಮಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾರವರು (ಮಾರ್ಗರೇಟ್ ಎಲಿಜಬೆತ್ ನೊಬೆಲ್) ನೀಡಿದ್ದ “ಭಾರತವು ಪಾರತಂತ್ರ್ಯದಿಂದ ವಿಮೋಚನೆಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ನಿತ್ಯವೂ ಸ್ವಲ್ಪ ಸಮಯವನ್ನು ರಾಷ್ಟ್ರಕ್ಕಾಗಿ ತೆಗೆದಿಡಬೇಕು” ಎಂಬ ಕರೆಯು ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರಲ್ಲಿ ‘ಸಂಘ’ ಪ್ರಾರಂಭಿಸುವ ಚಿಂತನೆಯ ಬೀಜವನ್ನು ಹಾಕಿತು. ಫಲವಾಗಿ ಇವತ್ತು ಜಗತ್ತಿನ ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಘಟನೆಯಾಗಿ ಸಂಘ ನಮ್ಮ ಕಣ್ಮುಂದೆ ನಿಂತಿದೆ. ಗೌರವಾನ್ವಿತ ಸ್ಥಾನಮಾನಗಳನ್ನು ಪಡೆದು ಅಧಿಕಾರದ ಫಲವನ್ನು ಸವಿಯುವ ಸುಲಭದ ಹಾಗೂ ಆಕರ್ಷಕ ಹಾದಿಯನ್ನು ಬಿಟ್ಟು ಅತಿ ಕಷ್ಟದ ಸಾಮಾಜಿಕ ಸಂಘಟನೆಯ ಹಾದಿಯನ್ನು ಹೆಡಗೇವಾರ್ ಹಿಡಿದರು. ಈ ಸಂಘಟನೆಯ ನಿರ್ಮಾಣಕ್ಕೆ ಅವರು ವಿನೂತನ ಸಾಧನವಾದ ನಿತ್ಯ ಶಾಖೆಯ ಕಾರ್ಯಪದ್ಧತಿಯನ್ನು ಹುಟ್ಟುಹಾಕಿದರು. ಈ ಹಾದಿ ಸುಧೀರ್ಘ ಮತ್ತು ಕಠಿಣವಾದ ಹಾದಿ ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಡಾಕ್ಟರ್ ಹೆಡಗೇವಾರರ ಅಚಲ ವಿಶ್ವಾಸ ಹಾಗೂ ಸೇವೆಯನ್ನು ಸ್ವಯಂ ಇಚ್ಛೆಯಿಂದ ಅಪ್ಪಿಕೊಂಡ ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರ ಕಾರಣದಿಂದ ಸಂಘ ಇವತ್ತು ವಿಶ್ವಾದ್ಯಂತ ಸರ್ವ ವ್ಯಾಪಿ ಸರ್ವಸ್ಪರ್ಶಿ ಯಾಗಿದೆ.

rss-path-sanchalan-bengaluru

ಆರೆಸ್ಸೆಸ್ ಪ್ರಾರಂಭವಾಗಿದ್ದು ಸಾವಿರದೊಂಬೈನೂರ ಇಪ್ಪತ್ತೈದರಂದು. ಅದೀಗ ತೊಂಭತ್ತೈದು ವಸಂತಗಳನ್ನು ಪೂರೈಸಿದೆ. ಆದರೆ ಸಂಘ ಎಂದಿಗೂ ಎರಡಾಗಿಲ್ಲ ಬದಲಿಗೆ ನಿರಂತರವಾಗಿ ಬೆಳೆಯುತ್ತಾ ಬಂದಿತು, ವಿಕಾಸಗೊಂಡಂತೆಲ್ಲ ಸಮಾಜದ ಪರಿಸ್ಥಿತಿಯು ‘ಸಂಘದ ಸ್ವಯಂಸೇವಕರು ಹೊಸದನ್ನೇನಾದರೂ ಮಾಡಬೇಕೆಂದು’ ಅಪೇಕ್ಷಿಸಿತ್ತು. ಅದರ ಪರಿಣಾಮವಾಗಿ ವಿವಿಧ ಕ್ಷೇತ್ರಗಳ ಮೂಲಕ ಕ್ರಮಬದ್ಧ ವಿಕಾಸ ಪ್ರಾರಂಭ ಆಯ್ತು .
ಅಂದರೆ ಆ ವಿಜಯದಶಮಿಯಂದು ಪ್ರಾರಂಭವಾಗಿದ್ದು ಸಂಘ ಮಾತ್ರವಲ್ಲ… ಅದು ತನ್ನ ಅನೇಕಾನೇಕ ಆಯಾಮಗಳಿಗೆ ಜನ್ಮನೀಡಿತು. ಸಂಘ ತನ್ನ ವಿವಿಧ ಕ್ಷೇತ್ರಗಳ ಮೂಲಕ ವಿಸ್ತಾರವನ್ನು ಪ್ರಾರಂಭಿಸಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮೂಲಕ. ಆಭಾವಿವಿಪ ರಾಷ್ಟ್ರೀಯ ದೃಷ್ಟಿಕೋನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಮತ್ತು ಶೈಕ್ಷಣಿಕ ಹಾಗೂ ರಾಷ್ಟ್ರೀಯ ಸುರಕ್ಷತೆಯ ಸಮಸ್ಯೆಗಳಿಗಾಗಿ ಸ್ಪಂದಿಸುವ ಸಂಘಟನೆಯಾಗಿ 1948 ರಲ್ಲಿ ಪ್ರಾರಂಭವಾಯಿತು. ಇವತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಗತ್ತಿನಲ್ಲಿ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆ.

1936 ರಲ್ಲಿ ಆರಂಭವಾದ ರಾಷ್ಟ್ರ ಸೇವಿಕಾ ಸಮಿತಿ ಈಗ ದೇಶಾದ್ಯಂತ 5200ಕ್ಕೂ ಹೆಚ್ಚು ಅಧಿಕ ಶಾಖೆಗಳ ಮೂಲಕ ಮಹಿಳೆಯರಿಗೆ ಭಾರತೀಯ ಸಂಸ್ಕೃತಿ ಮತ್ತು ಅದರ ಸಂರಕ್ಷಣೆಗೆ ಪ್ರೇರಣೆ ನೀಡುತ್ತಿದೆ. ಇದರ ಸ್ವಯಂ ಸೇವಕಿಯರು 700ಕ್ಕೂ ಅಧಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಮಹಿಳಾ ಸ್ವಯಂ ಸೇವಾ ಸಂಘಟನೆಯಾಗಿ ಇಂದು ನಮ್ಮ ಕಣ್ಣ ಮುಂದಿದೆ.

ಆಧುನಿಕ ಜಗತ್ತಿನ ಸಂಪರ್ಕಕ್ಕೆ ಬಾರದ ಬುಡಕಟ್ಟು ಜನರನ್ನು ರಾಷ್ಟ್ರೀಯ ಮುಖ್ಯಧಾರೆಗೆ ತರುವ ಪ್ರಯತ್ನವಾಗಿ 1952ರಲ್ಲಿ ಪ್ರಾರಂಭವಾದ ವನವಾಸಿ ಕಲ್ಯಾಣ ಆಶ್ರಮ ಭಾರತದಲ್ಲಿರುವ ಸುಮಾರು 10ಕೋಟಿ ವನವಾಸಿಗಳ ಅಭ್ಯುದಯಕ್ಕಾಗಿ ನಿರಂತರ ಶ್ರಮಿಸುತ್ತಿದೆ.

ಭಾರತೀಯ ಜನಸಂಘ ‘ಸಂಘ’ದ ಯೋಜನೆಯಂತೆ ಟಿಸಿಲೊಡೆದ ಸಂಘಟನೆಯಲ್ಲದಿದ್ದರೂ ಪ್ರಖರ ರಾಷ್ಟ್ರವಾದಿ ಆಗಿದ್ದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅಪೇಕ್ಷೆಯ ಮೇರೆಗೆ ಸಂಘದ ಅತ್ಯುತ್ತಮ ಪ್ರತಿಭೆಗಳನ್ನು ಭಾಜಪ ಕ್ಕೆ ಕಳುಹಿಸಿಕೊಡಲಾಯಿತು. ಭಾರತೀಯ ಜನತಾಪಕ್ಷವಾಗಿ ಪರಿವರ್ತನೆಗೊಂಡ ಸಂಘಟನೆ ಇಂದು ದೇಶದ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. ಇಂದು ದೇಶದ ಚುಕ್ಕಾಣಿ ಹಿಡಿವ ನಾಯಕರಿಂದ ಪ್ರಾರಂಭಿಸಿ ಅನೇಕ ಉನ್ನತ ಹುದ್ದೆಗಳಲ್ಲಿ ಸಂಘದ ಸ್ವಯಂಸೇವಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂಘಟನೆಯ ನಿಜವಾದ ಶಕ್ತಿಯ ಪರಿಚಯ ಮಾಡಿಸುತ್ತದೆ.

ಭಾರತೀಯ ಮಜ್ದೂರ್ ಸಂಘ
1955ರಲ್ಲಿ ಕುಶಲ ಸಂಘಟಕರು, ಹಾಗೂ ತತ್ವಜ್ಞಾನಿಯಾಗಿದ್ದ ಶ್ರೀ ದತ್ತೋಪಂತ ಠೇಂಗಡಿಯವರ ಪ್ರಾರಂಭಿಸಿದರು. “ರಾಷ್ಟ್ರವನ್ನು ಔದ್ಯೋಗೀಕರಣ ಗೊಳಿಸಿ, ಉದ್ಯೋಗವನ್ನು ಶ್ರಮಿಕೀಕರಣಗೊಳಿಸಿ, ಶ್ರಮಿಕರನ್ನು ರಾಷ್ಟ್ರೀಕರಣಗೊಳಿಸಿ” (Industrialize the nation, labourize the industry, nationalise the labour) ಎನ್ನುವ ಘೋಷವಾಕ್ಯದೊಂದಿಗೆ ಕಾರ್ಮಿಕ ಕ್ಷೇತ್ರದ ಬಗೆಗಿನ ಅವರ ಚಿಂತನೆಗಳು ಹೊಸ ಸಿದ್ಧಾಂತಕ್ಕೆ ನಾಂದಿಯಾದವು. ಪ್ರಸ್ತುತ 85ಲಕ್ಷ ಸದಸ್ಯತ್ವ ಹೊಂದಿರುವ ಭಾರತೀಯ ಮಜ್ದೂರ್ ಸಂಘ ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ.

ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಸಾಂಸ್ಕೃತಿಕ ಮೌಲ್ಯಾಧಾರಿತ ಸಂಸ್ಕಾರವು ಸಿಗುವಂತಾಗಬೇಕೆಂಬ ಹಂಬಲದಿಂದ 1977ರಲ್ಲಿ ಪ್ರಾರಂಭಗೊಂಡ ವಿದ್ಯಾಭಾರತಿ ಇಂದು ಇಪ್ಪತ್ತ್ 29 ಸಾವಿರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಸುಮಾರು 37 ಸಾವಿರ ಶಿಕ್ಷಕರು ಹಾಗೂ ಮೂವತ್ತು ಲಕ್ಷ ವಿದ್ಯಾರ್ಥಿಗಳು ವಿದ್ಯಾಭಾರತಿಯ ಯೋಜನೆಯಡಿ ಸಂಪರ್ಕ ಹೊಂದಿದ್ದಾರೆ. ದೇಶದ ಅತಿದೊಡ್ಡ ಸರಕಾರೇತರ ಶೈಕ್ಷಣಿಕ ಸಂಘಟನೆ ಎಂಬ ಗರಿಮೆ ಇಂದು ವಿದ್ಯಾಭಾರತಿ ಯದ್ದಾಗಿದೆ.

ಭಾರತೀಯ ಕಿಸಾನ್ ಸಂಘ
ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸುವುದಕ್ಕಾಗಿ ಕೃಷಿ ಸಂಶೋಧನೆಗೆ ಪ್ರೋತ್ಸಾಹ ಸೇರಿದಂತೆ ಅನೇಕ ರೈತರ ಕಲ್ಯಾಣದ ವಿವಿಧ ಸಂಕಲ್ಪಗಳೊಂದಿಗೆ ಪ್ರಾರಂಭವಾಗಿ ಇವತ್ತು 8 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ.

ಗುಡ್ಡಗಾಡು ಗ್ರಾಮೀಣ ಹಾಗೂ ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ ಅವಕಾಶವಂಚಿತರಿಗೆ ನೆರವು ನೀಡುವ ಉದ್ದೇಶದಿಂದ ಪ್ರಾರಂಭವಾಗಿದ್ದು ಸೇವಾಭಾರತಿ 1ಲಕ್ಷಕ್ಕೂ ಅಧಿಕ ಸೇವಾ ಯೋಜನೆಗಳನ್ನು ಇಂದಿಗೂ ಮುನ್ನಡೆಸುತ್ತಿದೆ.

ಪ್ರಕಾಶ್ ಮಲ್ಪೆ, ಮಂಗಳೂರು ವಿಭಾಗದ ಧರ್ಮ ಜಾಗರಣದ ಕಾರ್ಯಕರ್ತರು

ಎಲ್ಲ ಪ್ರಜೆಗಳೂ ರಾಷ್ಟ್ರಭಕ್ತಿಯನ್ನು ಅಂತರ್ಗತ ಹಾಗೂ ಅಭಿವ್ಯಕ್ತಗೊಳಿಸಬೇಕು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

$
0
0

ಎಲ್ಲ ಪ್ರಜೆಗಳೂ ರಾಷ್ಟ್ರಭಕ್ತಿಯನ್ನು ಅಂತರ್ಗತ ಹಾಗೂ ಅಭಿವ್ಯಕ್ತಗೊಳಿಸಬೇಕು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

ಅಕ್ಟೊಬರ್ 25, ಬೆಂಗಳೂರು: ರಾಷ್ಟ್ರಭಕ್ತಿಯನ್ನು ತಮ್ಮ ಜೀವನದಲ್ಲಿ ಅಂತರ್ಗತಗೊಳಿಸಿಕೊಳ್ಳುವ ಜತೆಗೆ ಅದನ್ನು ಅಭಿವ್ಯಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶೇಷಾದ್ರಿಪುರ ನಗರದ ಸದಾಶಿವನಗರ ವಸತಿಯಿಂದ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ 1925ರಲ್ಲಿ ಬಹಳ ದೂರದೃಷ್ಟಿಯಿಂದ ಆರಂಭವಾಯಿತು. ಎಂದಾದರೂ ಸ್ವಾತಂತ್ರ್ಯ ಬರುತ್ತದೆ, ಅದಕ್ಕೆ ದೇಶವನ್ನು ಸಜ್ಜುಗೊಳಿಸಬೇಕೆಂದು ಡಾ. ಹೆಡಗೇವಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆರಂಭಿಸಿದರು. ಅವರ ಪ್ರಯತ್ನದಿಂದಾಗಿ ಇಂದು ಲಕ್ಷಾಂತರ ಸ್ವಯಂಸೇವಕರು ಸೃಷ್ಟಿಯಾಗಿದ್ದಾರೆ. ಆರೆಸ್ಸೆಸ್ ಒಂದು ರಾಜಕೀಯ ಸಂಸ್ಥೆ ಅಲ್ಲ. ದೇಶದ ಶಾಶ್ವತ ಮೌಲ್ಯಗಳಾದ ಧರ್ಮ, ಸಂಸ್ಕೃತಿಗಳ ಆಧಾರದಲ್ಲಿ ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದೆ. ಈ ದೃಷ್ಟಿಯಲ್ಲಿ ಕಾರ್ಯನಡೆಸಲು ವಿಶ್ವಕ್ಕೆ ಕರೆ ನೀಡಿದ ಸಂಘ ಸ್ಥಾಪಕರಿಗೆ ಕೋಟಿ ಕೋಟಿ ನಮನ.

ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಪಾತ್ರ ವಹಿಸಿದ್ದೇನೆ. ಆರೆಸ್ಸೆಸ್ ಅಗತ್ಯ ಈ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ನಂಬಿರುವವರಲ್ಲಿ ನಾನೂ ಒಬ್ಬ. ರಾಮಕೃಷ್ಣಾಶ್ರಮದ ನಾಲ್ಕು ಗೋಡೆಗಳ ನಡುವೆ ಬೆಳೆದು ಪರಮಹಂಸರ, ವಿವೇಕಾನಂದರ ಉಪದೇಶದಿಂದ ಪ್ರೇರೇಪಿತನಾದವನು. ಆರೆಸ್ಸೆಸ್‌ಗೆ ನನ್ನ ಗೌರವ ಅರ್ಪಣೆ ಮಾಡಲು ಇಲ್ಲಿ ಬಂದಿದ್ದೇನೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

ಪ್ರತಿ ಪ್ರಜೆಯೂ ದೇಶಕ್ಕೆ ಎರಡು ವರ್ಷ ನೀಡಬೇಕು ಎಂಬ ನಿಯಮ ಅಮೆರಿಕದಲ್ಲಿದೆ. ಟ್ರಂಪ್ ತನ್ನ ಎರಡು ವರ್ಷಗಳನ್ನು ನೀಡದೆ ತಪ್ಪಿಸಿಕೊಂಡ ಎಂಬುದು ಇಂದು ಅಲ್ಲಿನ ಚುನಾವಣಾ ವಿಷಯವಾಗಿದೆ. ರಾಷ್ಟ್ರಾಭಿಮಾನ ನಮ್ಮಲ್ಲಿ ಅಂತರ್ಗತ ಆಗಬೇಕು ಹಾಗೂ ಆ ಭಾವನೆ ಅಭಿವ್ಯಕ್ತ ಆಗಬೇಕು. ನಮ್ಮ ಪ್ರಜಾಪ್ರಭುತ್ವವನ್ನು ಸದೃಢವಾಗಿ ರೂಪಿಸಲಾಗಿದೆ. ಪ್ರಜಾಪ್ರಭುತ್ವ ಉಳಿಸಲು ಚುನಾವಣಾ ಆಯೋಗದಂತಹ ಸಂಸ್ಥೆಗಳು ಕಟಿಬದ್ಧವಾಗಿವೆ. ಅಧಿಕಾರ ಕಳೆದುಕೊಂಡಾಗ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೇಟು ಹಾಕದೆ ನಗುನಗುತ್ತ ಅಧಿಕಾರ ತ್ಯಜಿಸಿದರು. ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬ ಈ ಮನಸ್ಥಿತಿ ಹಿಂದು ಧರ್ಮದ ಹಾಸುಹೊಕ್ಕಾದ ಅಂಶ. ಅಲ್ಲಿಂದಲೇ ಇಂತಹ ಪ್ರೇರಣೆ ದೊರಕುತ್ತದೆ. ನಮ್ಮ ಕುಟುಂಬಕ್ಕೆ, ನಮ್ಮ ವ್ಯಕ್ತಿಗತ ಉನ್ನತಿಗೆ ಸಮಯ ನೀಡುತ್ತೇವೆ. ಆದರೆ ದೇಶಕ್ಕೆ ಎಷ್ಟು ಸಮಯ ನೀಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಈ ದೇಶದಲ್ಲಿರುವ ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನರಾದಿಯಾಗಿ ಎಲ್ಲರೂ ಕೇಳಿಕೊಳ್ಳಬೇಕು. ನಮ್ಮ ಸಮಾಜವನ್ನು ಉತ್ತಮವಾಗಿ ರೂಪಿಸಲು ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ಆಗಬೇಕು. ಆಂಗ್ಲ ಪದ್ಧತಿಯಲ್ಲೆ ನಡೆಯುತ್ತಿದೆ. ದುರದೃಷ್ಟಕರವಾಗಿ ಶಿಕ್ಷಣ ಎಂಬುದು ರಾಜ್ಯದ ವಿಷಯವಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಮಧ್ಯಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಆರೆಸ್ಸೆಸ್‌ನಲ್ಲಿ ಲಕ್ಷಾಂತರ ಜನರು ತಮ್ಮನ್ನು ತಾವು ಅರ್ಪಿಸುಕೊಂಡಿದ್ದಾರೆ. ಇದು ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ.‌ ಇದನ್ನು ನಮ್ಮ ಇಳಿ ವಯಸ್ಸಿನಲ್ಲಿ ನೋಡುತ್ತಿದ್ದೇವೆ. ಇದನ್ನು ಎಳೆ ವಯಸ್ಸಿನಲ್ಲೆ ಮನಸ್ಸಿನಲ್ಲಿ ಮೂಡಿಸಿದರೆ ದೇಶದ ಆಳ ಅಗಲ ಅರಿಯಲು ಸಹಾಯಕವಾಗುತ್ತದೆ. ನಾನು ಸಂಸತ್‌ನಲ್ಲಿ ಅನೇಕ ಗಣ್ಯರ ಜತೆಗೆ ಕೆಲಸ ಮಾಡುವ ಅವಕಾಶವನ್ನು ಮಂಡ್ಯದ ಜನರು ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷರೊಬ್ಬರು ಈ ಸಮಯದಲ್ಲಿ ನಿಧನರಾದ ಸುದ್ದಿ ಕೇಳಿದೆ. ಅವರು ವಿಮಾನದಲ್ಲಲ್ಲದೆ, ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರಂತೆ. ತಮ್ಮನ್ನು ತಾವೇ ಉದಾಹರಣೆ ಮಾಡಿಕೊಂಡು ಸರಳ ಜೀವನ ನಡೆಸಿದವರು. ಅಂತಹ ಎತ್ತರ ಮುಟ್ಟುವ ಪ್ರಯತ್ನ ನಾವು ಮಾಡಬೇಕಿದೆ.

ದೇಶ ನಿನಗೇನು ಕೊಟ್ಟಿದೆ ಎಂಬುದಕ್ಕಿಂತಲೂ ನೀನು ದೇಶಕ್ಕೆ ಏನು ಕೊಟ್ಟಿದ್ದೀಯ ಎಂಬುದನ್ನು ಕೇಳಬೇಕು ಎಂದು ಕೆನಡಿಯವರ ಮಾತನ್ನು ಭಾರತದ ಎಲ್ಲ ಪ್ರಜೆಗಳೂ ಕೇಳಿಕೊಂಡು ಅವರೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಕ್ರೀಡಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕರಾದ ಚಂದ್ರಶೇಖರ ಜಹಗೀರದಾರ್ ಅವರು ಮಾತನಾಡಿ, ವಿಜಯದಶಮಿ ದಿನ ಯಾವುದೇ ಕೆಲಸ ಆರಂಭಿಸಿದರೂ ಯಶಸ್ವಿಯಾಗುತ್ತದೆ. ಸಂಘದ ಸ್ವಯಂಸೇವಕರಿಗೆ ಮತ್ತೂ ಮಹತ್ವದ ಸಂಗತಿ ಎಂದರೆ ಅದೇ ದಿನದಂದು ಸಂಘ ಆರಂಭವಾಯಿತು. ಹಿಂದು ಸಂಘಟನೆ ಮೂಲಕ ದೇಶದ ಸ್ವಾತಂತ್ರ್ಯವನ್ನು ಸ್ಥಾಪನೆಗೊಳಿಸಬೇಕು ಎಂಬುದು ಉದ್ದೇಶವಾಗಿತ್ತು. ದೇಶದ ಮೂಲ ಚಿಂತನೆಯೇ ಧರ್ಮ ಎಂದು ವಿವೇಕಾನಂದರಾದಿಯಾಗಿ ಎಲ್ಲ ಮಹಾ ಪುರುಷರೂ ಹೇಳಿದ್ದರು. ರಾಷ್ಟ್ರದ ಏಳುಬೀಳುಗಳ ಜತೆಗೆ ಹಿಂದು ಧರ್ಮದ ಏಳುಬೀಳು ಬೆಸೆದುಕೊಂಡಿದೆ, ಅದನ್ನು ಬೇರೆ ಮಾಡಲು ಸಾಧ್ಯವಿಲ್ಲ. ಹಿಂದು ಧರ್ಮದ ಸಂರಕ್ಷಣೆ ಮೂಲಕ ರಾಷ್ಟ್ರವನ್ನು ಪುನರ್ವೈಭವ ಸ್ಥಿತಿಗೆ ಕೊಂಡೊಯ್ಯುವತ್ತ ಸಂಘ ಕೆಲಸ ಮಾಡುತ್ತಿದೆ.
ಸಂಘ ಪ್ರಾರಂಭವಾಗಿ 95 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಸಂಘ ಏನು ಮಾಡಿತು ಎಂದು ಪ್ರಶ್ನಿಸಬಹುದು. ಸಂಘದ ಸ್ವಯಂಸೇವಕರು ಇಬ್ಬರು ಪ್ರಧಾನಿಯಾಗಿದ್ದಾರೆ, ಉಪರಾಷ್ಟ್ರಪತಿಯಾಗಿದ್ದಾರೆ, ಲೋಕಸಭೆ ಸ್ಪೀಕರ್‌ಗಳಾಗಿದ್ದಾರೆ ಎಂಬುದು ಹೊರಗಿನವರಿಗೆ ಕಾಣುವ ಸಾಧನೆ. ಆದರೆ ಸಂಘದ ಸ್ವಯಂಸೇವಕರಿಗೆ ಇದು ಮುಖ್ಯವೇ ಅಲ್ಲ. ಸಂಘದ ಕಾರ್ಯದಲ್ಲಿ ಇದೊಂದು ಸಣ್ಣ ಭಾಗ ಮಾತ್ರ.


ಈ ದೇಶದ ಹಿಂದುವಿಗೆ ತಾನು ಯಾರು ಎಂಬ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಪುತ್ತೂರಿನ ಕಾರ್ಯಕರ್ತರು ಇದನ್ನು ವಿವರಿಸಿದ್ದರು. 40 ವರ್ಷದ ಹಿಂದೆ ಪೇಟೆಯಿಂದ ಬಂದ ಯುವಕನೊಬ್ಬ ಮೈದಾನಕ್ಕೆ ಆಡಲು ಕರೆದ. ಒಂದು ದಿನ ಪ್ರಚಾರಕರು ಆಗಮಿಸಿ, ಸಂಘ ಹಿಂದು ಸಂಘಟನೆ ಕೆಲಸ ಮಾಡುತ್ತದೆ ಎಂದ. ಜೀವನದಲ್ಲಿ ಮೊಟ್ಟಮೊದಲಬಾರಿಗೆ ಹಿಂದು ಎಂಬ ಶಬ್ದವನ್ನು ಆತ ಕೇಳಿದ್ದ. ತಂದೆಯನ್ನು ಪ್ರಶ್ನಿಸಿದ, ಹಿಂದು ಎಂದರೆ ಏನು? ಎಂದ. ನಾಳಿದ್ದು ಪೂಜೆಗೆ ಭಟ್ಟರು ಬರುತ್ತಾರೆ, ಅವರನ್ನು ಕೇಳು ಎಂದರು. ಹಿಂದು ಎಂದರೆ ಪ್ರಾಯಶಃ ಉತ್ತರ ಭಾರತದಲ್ಲಿ ಯಾವುದೋ ಜಾತಿ ಹೆಸರು ಇರಬೇಕು ಎಂದರು ಭಟ್ಟರು. ಅವರ ಬಾಲ್ಯದಲ್ಲಿ ಈ ಘಟನೆ ನಡೆಯಿತು, ಇಂದು ಮಂಗಳೂರಿನಲ್ಲಿ ಲಕ್ಷಾಂತರ ಯುವಕರು ‘ಗರ್ವದಿಂದ ಗರ್ಜಿಸು ನಾನೊಬ್ಬ ಹಿಂದು’ ಎನ್ನುವಾಗ, ಸಂಘ ಇಷ್ಟು ವರ್ಷಗಳಲ್ಲಿ ಏನು ಮಾಡಿದೆ ಎಂಬುದು ತಿಳಿಯುತ್ತದೆ ಎಂದು ವಿವರಿಸಿದರು.
ಹಿಂದು ಸಮಾಜಕ್ಕೆ ಧಕ್ಕೆಯಾಗುವ ಯಾವುಕೇ ಕಾರ್ಯಕ್ಕೆ ಆಸ್ಪದ ನೀಡಬಾರದು ಎಂಬುದು ಸ್ವಯಂಸೇವಕನ ಪ್ರಯತ್ನ. ಹಿಂದು ಸ್ವಾಭಿಮಾನವನ್ನು ತುಳಿದು, ಶ್ರದ್ಧಾಕೇಂದ್ರವನ್ನು ಒಡೆದು ಮಸೀದಿ ಕಟ್ಟುತ್ತೇವೆ ಏನು ಮಾಡುತ್ತೀರ ಎಂಬ ದುಷ್ಟ ಸವಾಲಿಗೆ ಉತ್ತರ ನೀಡುವ ಮಟ್ಟಕ್ಕೆ ಹಿಂದು ಸಮಾಜ ಬಂದಿದೆ. ಹಿಂದು ಸಮಾಜವನ್ನು ಕೆಟ್ಟ ಕಣ್ಣಿನಿಂದ ನೋಡದಂತೆ ಮಾಡುವ ಶಕ್ತಿಯನ್ನು ಸಂಘ ನಿರ್ಮಿಸಿದೆ. ಹಿಂದು ಸ್ವಾಭಿಮಾನ ಜಾಗೃತವಾಗಿದ್ದು ಸಂಘದ ಸಾಧನೆ ಎನ್ನಬಹುದು. ಸ್ವಂತವನ್ನು ಮರೆತು ಸಮಾಜಕ್ಕೆ ತುಡಿಯುವ ಸ್ವಯಂಸೇವಕರನ್ನು ಸಂಘ ನಿರ್ಮಿಸಿದೆ.


ಜಯಪ್ರಕಾಶ ನಾರಾಯಣರು ಇಸ್ರೇಲ್‌ನಲ್ಲಿ ಕೃಷಿ ಸಾಧನೆಯನ್ನು ಕಂಡು ಮೆಚ್ಚಿದ್ದರು. ಚಿಕ್ಕ ದೇಶದ ಸುತ್ತ ಶತೃಗಳೇ ತುಂಬಿದ್ದಾರೆ, ಆದರೂ ಸಾಧನೆ ಮಾಡಿದೆ ಆ ದೇಶ. ನಿಮ್ಮ ದೇಶದಲ್ಲಿ ದೇಶಕ್ಕೋಸ್ಕರವೇ ಬದುಕುವ ಹಾಗೂ ಸಾಯುವವರು ಎಷ್ಟಿರಬಹುದು ಎಂದು ಆ ದೇಶದವರು ಕೇಳಿದರು. 30-40 ಕೋಟಿ ಭಾರತದ ಜನರಲ್ಲಿ ದೇಶಕ್ಕಾಗಿ ಕೇವಲ 10 ಲಕ್ಷ ಜನರು ಬದುಕುತ್ತಾರೆ ಎಂದರು ಜೆಪಿ. ನಮ್ಮ ದೇಶದಲ್ಲಿ ಎಲ್ಲ ಪ್ರಜೆಗಳೂ ದೇಶಕ್ಕಾಗಿಯೇ ಜೀವಿಸುತ್ತಾರೆ ಎಂದು ಇಸ್ರೇಲಿನವರು ಹೇಳಿದ್ದರು. ಈ ವಿಷಯವನ್ನು ಅನುಭವಿಸಿದ್ದ ಜೆಪಿ, ಆರೆಸ್ಸೆಸ್ ಕೋಮುವಾದಿಯಾದರೆ ನಾನೂ ಕೋಮುವಾದಿ ಎಂದಿದ್ದರು.


ದೇಶಕ್ಕೋಸ್ಕರ ಮಡಿಯುವುದು ಬಹುದು ಕಷ್ಟದ ಕೆಲಸ. ಆದರೂ ಆ ಕಾರ್ಯಕ್ಕಾಗಿ ದೇಶದ ಸೈನಿಕರಿಂದ ಪೊಲೀಸರವರೆಗೆ ಲಕ್ಷಾಂತರ ಜನರಿದ್ದಾರೆ. ಸಂಘವು, ದೇಶಕ್ಕಾಗಿ ಬದುಕುವ ಲಕ್ಷಾಂತರ ಜನರನ್ನು ಸಂಘ ರೂಪಿಸಿದೆ. ಇಂದು ವಿದ್ಯಾರ್ಥಿ, ಕಾರ್ಮಿಕ, ರಾಜಕೀಯ, ಧಾರ್ಮಿಕ ಸೇರಿ 58 ಕ್ಷೇತ್ರಗಳಲ್ಲಿ ಸಂಘದ ಕಾರ್ಯ ನಡೆಯುತ್ತದೆ. ಉದಾಹರಣೆಗೆ, ಕಾರ್ಮಿಕ ಸಂಘಟನೆಗಳ ಘೋಷಣೆ ಹೇಗಿತ್ತು? ಕೆಲಸ ಅರ್ಧ ಮಾಡಿದರೂ ಪೂರಾ ವೇತನ ಎನ್ನುತ್ತಿದ್ದರು. ಆದರೆ, ದೇಶಕ್ಕಾಗಿ ಕೆಲಸ ಮಾಡುತ್ತೇವೆ, ಪೂರ್ಣ ಕೆಲಸಕ್ಕೆ ಪೂರ್ಣ ವೇತನ ಎಂದು ಭಾರತೀಯ ಮಜ್ದೂರ್ ಸಂಘ ಸಂಘಟನೆ ಮಾಡಿತು.


ನಮ್ಮ ಸಮಾಜದ ಏಳಿಗೆ, ಅವನತಿಗೆ ಬೇರೆಯವರು ಕಾರಣರಲ್ಲ ಎಂದು ನಾವು ತಿಳಿಯಬೇಕು. ನಮ್ಮ ಸಮಾಜದ ದೋಷಗಳನ್ನು ತೆಗೆದುಹಾಕಬೇಕು. ನಾವು ಸೃಷ್ಟಿಯ ಎಲ್ಲ ಕಣದಲ್ಲೂ ನಾವು ದೈವತ್ವವನ್ನು ಕಾಣುತ್ತೇವೆ. ಆದರೆ ನಮ್ಮದೇ ಸಮಾಜದವರನ್ನು ಅಸ್ಪಶ್ಯತೆ ಎಂಬ ಹೆಸರಿನಲ್ಲಿ ದೂರ ಇಡುತ್ತಿದ್ದೇವೆ. ಇದಕ್ಕೆ ಹೊರಗಿನವರು ಕಾರಣರಲ್ಲ, ನಮ್ಮದೇ ಸಮಾಜದಲ್ಲಿ ಮೂಡಿಬಂದ ಅನಿಷ್ಠ ಪದ್ಧತಿ.


ಅಂತಿಮ ದಿನಗಳಲ್ಲಿ ಪಂಡರಾಪುರದ ದೇವರ ದರ್ಶನ ಮಾಡಬೇಕು ಎಂದು ಅಂಬೇಡ್ಕರ್ ಅವರ ಪತ್ನಿ ಕೇಳಿದ್ದರು. ಆದರೆ ಅಂದಿನ ದಿನಗಳಲ್ಲಿ ಅಂಬೇಡ್ಕರರೂ ಅಸಹಾಯಕರಾದರು, ಪತ್ನಿ ನಿಧನರಾದರು. ನಾಸಿಕದ ಕಾಳಾರಾಮ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನೀಡುವುದಿಲ್ಲ ಎಂದು ಅಂಬೇಡ್ಕರರನ್ನು ಅಲ್ಲಿನ ಅರ್ಚಕರು, ಸ್ಥಳೀಯರು ತಡೆದಿದ್ದರು. ಆದರೆ ಅದೇ ಅರ್ಚಕರ ಮೊಮ್ಮಗ ಸಂಘದ ಸ್ವಯಂಸೇವಕರಾದರು, ಇಂದು ದೇವಸ್ಥಾನಕ್ಕೆ ಎಲ್ಲರಿಗೂ ಪ್ರವೇಶ ನೀಡುವುದರ ಜತೆಗೆ ದಲಿತರ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ. ಚಂಡಾಲ ಎಂದು ಕರೆದವರ ಮನೆಯಲ್ಲಿ ಸಾಧುಸಂತರು ಊಟ ಮಾಡುವಂತಹ ಪ್ರಯತ್ನ ವಿಶ್ವ ಹಿಂದು ಪರಿಷತ್ ಮಾಡುತ್ತಿದೆ.
ಪ್ರತಿ ಹಿಂದು ಮನೆಯಲ್ಲಿ, ಮನದಲ್ಲಿ ಈ ಭಾವನೆಗಳನ್ನು ಕಿತ್ತೊಗೆಯುವವರೆಗೆ ಸಂಘದ ಕೆಲಸ ಪೂರ್ಣವಾಗುವುದಿಲ್ಲ.

ಈ 95 ವರ್ಷಗಳಲ್ಲಿ ನಾಡಿನ ಎಲ್ಲ ಅಂಗಗಳನ್ನೂ ಪರಿವರ್ತನೆ ಮಾಡುವತ್ತ ಕೆಲಸ ಮಾಡುತ್ತಿದೆ.
ದಿನದ ಒಂದು ಗಂಟೆ ಮಾತ್ರ ಸಂಘಕ್ಕೆ ಸಮಯ ನೀಡ ಎಂದು ಸಂಸ್ಥಾಪಕ ಡಾ. ಹೆಡಗೇವಾರರು ಹೇಳಿದ್ದರು. ಇಂದು ಸಾವಿರಾರು ಜನರು ತಮ್ಮ ಯೌವನದ ಸಮಯವನ್ನು ಸಮಾಜದ ಕೆಲಸಕ್ಕೆ ಮುಡುಪಾಗಿಟ್ಟಿದ್ದಾರೆ. ಬರುವ ಐದು ವರ್ಷದಲ್ಲಿ ಸಂಘದ ಕೆಲಸ ತೀವ್ರವಾಗಬೇಕು. ಸಮಾಜದ ಎಲ್ಲರೂ ತಮ್ಮ ಶಕ್ತ್ಯಾನುಸಾರ ಕೆಲಸದಲ್ಲಿ ತೊಡಗಿಸಬೇಕು ಎಂದು ವಿನಂತಿಸುತ್ತೇನೆ ಎಂದರು.

ಸಂಘದ ಸಸಿ ಇದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ..

$
0
0

ಸಂಘದ ಸಸಿ ಇದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ..

ಲೇಖನ: ಚಂದ್ರಶೇಖರ ಆಚಾರ್ಯ
(ಅಕ್ಟೊಬರ್ ೨೫ ರಂದು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟಿತ)

ಶ್ರೀ ರಾಮ ನಡೆದ ದಾರಿ ರಾಮಾಯಣ. ಸೂರ್ಯನ ಗತಿ ಆದರಿಸಿದ ಚಲನೆ ಉತ್ತರಾಯಣ, ದಕ್ಷಿಣಾಯನ.. ಅದೇ ದೃಷ್ಟಿಯಲ್ಲಿ ಯೋಚಿಸುವುದಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಈ ತೊಂಬತ್ತೈದು ವರ್ಷಗಳ ಸುಧೀರ್ಘ ಪಯಣವನ್ನು ಸಂಘಾಯಾನ ಎಂದು ಗುರುತಿಸುವುದಾದರೆ ತಪ್ಪೇನಿಲ್ಲ. ಈ ಸಂಘಾಯಾನ ಒಪ್ಪಿ ಆದರಿಸುವವರಿಗೆ ಹೇಗೆ ಶ್ರದ್ಧೆಯ ವಿಷಯವೋ, ಅಂತೆಯೇ ಸಂಘವನ್ನು ವೈಚಾರಿಕವಾಗಿ ವಿರೋಧಿಸುವವರಿಗೂ ಅಧ್ಯಯನ ವಿಷಯ. ಪ್ರತಿಕೂಲ, ಅನಾನುಕೂಲ ಪರಿಸ್ಥಿತಿ ಮತ್ತು ಸಂಧರ್ಭಗಳಲ್ಲೂ ಸಂಘದ ಕಾರ್ಯ ಮತ್ತು ಕಾರ್ಯಕರ್ತರ ವಿಶ್ವಾಸ ಎಳ್ಳಿನೀತೂ ಬದಲಾಗದೆ ಇರಲೂ ಕಾರಣವಾದ ಗಟ್ಟಿಯಾದ ವಿಚಾರ ಶಕ್ತಿ ಯಾವುದು? ಆ ಕುರಿತಂತೆ ಸ್ವಲ್ಪ ಆಲೋಚಿಸೋಣಾ..

ಈ ವಿಜಯದಶಮಿಗೆ ಸಂಘಕ್ಕೆ ಸರಿಯಾಗಿ ತೊಂಬತ್ತೈದು ವರ್ಷ. ಒಂದು ಸಂಘಟನೆಯಾಗಲಿ ಒಂದು ವ್ಯವಸ್ಥೆಗೆ ಆಗಲಿ ತೊಂಬತ್ತೈದು ವರ್ಷ ಎಂಬುದು ಸಣ್ಣ ಅವಧಿ ಅಲ್ಲ. ಇನ್ನೂ ಐದು ವರ್ಷ ಕಳೆದರೆ ಒಂದು ಶತಮಾನವಾಗುತ್ತದೆ ಸಂಘಕ್ಕೆ. ಆದರೆ ಇವತ್ತಿಗೂ ತನ್ನ ಕಾರ್ಯ ಶುದ್ಧತೆ, ಬದ್ಧತೆಯಲ್ಲಿ ಯಾವ ವ್ಯತ್ಯಾಸವನ್ನು ಕಂಡಿಲ್ಲ ಮಾಡಿಲ್ಲ. ಕಾರ್ಯ ಶೈಲಿಯಲ್ಲಿ, ಗಣವೇಷ(ಸಮವಸ್ತ್ರ) ದಲ್ಲಿ ಬದಲಾವಣೆ ಆಗಿರಬಹುದು. ಅದೇ ಸಂಘ ಕಾರ್ಯದ ವಿಶೇಷ.

1925 ರ ಇದೇ ವಿಜಯದಶಮಿಯ ದಿನ ನಾಗಪುರದ ರೇಶಂಭಾಗ್ ನ ಮೈದಾನದಲ್ಲಿ ಪರಮ ಪೂಜನೀಯ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಜೀ ಯವರು ಬಿತ್ತಿದ ಬೀಜವೊಂದು ಇಂದು ದೇಶದ ಗಡಿ ರೇಖೆಗಳನ್ನು ಮೀರಿ ವಿಶ್ವದ 40 ಕ್ಕೂ ಹೆಚ್ಚಿನ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಫಲ ನೀಡುತ್ತಿದೆ. ವಾಸ್ತವವಾಗಿ ಡಾ. ಹೆಗಡೇವಾರ್ ಜೀ ಕಲಿತಿದ್ದು ವೈದ್ಯಕೀಯ ಶಿಕ್ಷಣ, ಆದರೆ ಚಿಕಿತ್ಸೆ ನೀಡಲು ಆಯ್ದುಕೊಂಡಿದ್ದು ಮಾತ್ರ ರೋಗಗ್ರಸ್ತ ಹಿಂದು ಸಮಾಜವನ್ನು. ಚಿಕಿತ್ಸೆ ವಿಧಾನ ಮಾತ್ರ ಅತೀ ಸರಳ, ಸುಂದರ. ಒಂದು ನಿಶ್ಚಿತ ಸ್ಥಾನದಲ್ಲಿ, ನಿಶ್ಚಿತ ಸಮಯದಲ್ಲಿ ಒಟ್ಟು ಸೇರುವುದೇ ಈ ಸರಳ ಸೂತ್ರ. ಹೇಳುವುದಕ್ಕೆ ತುಂಬಾ ಸರಳ, ಆದರೆ ಅನುಷ್ಠಾನಕ್ಕೆ ತರುವುದು ಇದೆಯಲ್ಲ ಅದೇ ಸವಾಲು.. ಯಾಕೆಂದರೆ ಒಟ್ಟುಗೂಡಿಸಲು ಹೊರಟಿದ್ದು ಹಿಂದು ಸಮಾಜವನ್ನು.. ! ಆದರೆ ಅದು ಸಾಧ್ಯ ಆಯಿತು ಎಂಬುದೇ ಒಂದು ದೊಡ್ಡ ಪವಾಡ, ಮಾಯಾಜಾಲ.

ಇವತ್ತು ಸಂಘದ ತನ್ನದೇ ಆದ 42 ಕ್ಕೂ ಹೆಚ್ಚಿನ ಅಖಿಲ ಭಾರತೀಯ ಸ್ವರೂಪದ ವಿವಿಧಕ್ಷೇತ್ರ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಅವೆಲ್ಲವೂ ತಮ್ಮದೇ ಕ್ಷೇತ್ರದಲ್ಲಿ ಅತ್ತ್ಯುಚ್ಛ ಶ್ರೇಣಿಯಲ್ಲಿ ಕೆಲಸ ಮಾಡುತ್ತಿದೆ.ಆಶ್ಚರ್ಯವೆಂದರೆ ಈ ಪರಿವಾರ ಸಂಘಟನೆಯನ್ನು ಸಂಘ ತಾನೇ ಆರಂಭಿಸಿದಲ್ಲ. ಸಂಘದ ಸ್ವಯಂಸೇವಕರು ಆಯಾಯ ಸಂಧರ್ಭಗಳಲ್ಲಿ ಈ ಸಂಘಟನೆಗಳನ್ನು ಕಟ್ಟಿ ಬೆಳೆಸಿದರು.ಹೀಗೆ ಬೆಳೆದ ಸಂಘಟನೆಗಳಿಗೆ ಸಂಘ ಮಾತೃ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿ ಪೋಷಿಸಿತು. ಆಶ್ಚರ್ಯಎಂದರೆ ಈ ಎಲ್ಲ ಸಂಘಟನೆಗಳು ಆಯಾಯ ಕ್ಷೇತ್ರಗಳಲ್ಲಿ ಅತೀ ದೊಡ್ಡ ಮತ್ತು ಶ್ರೇಷ್ಠ ಸಂಘಟನೆಗಳಾಗಿ ರೂಪುಗೊಂಡಿದೆ. ಸಂಘ ಎಂಬ ಮಹಾ ಛತ್ರದ ಅಡಿಯಲ್ಲಿ ಈ ಎಲ್ಲವೂ ರಾಷ್ಟ್ರ ಕಾರ್ಯ ಮಾಡುತ್ತಿದೆ. ದಾರಿ ಬೇರೆ ಬೇರೆ, ಗುರಿ ಮಾತ್ರ ಒಂದೇ. ಪರಮ್ ವೈಭವನ್ ನೇತುಮ್ ಏತತ್ ಸ್ವರಾಷ್ಟ್ರಮ್..

ಸಂಘದ ಕಾರ್ಯಕರ್ತರಲ್ಲಿ ಈ ಪರಿಯ ಶುದ್ಧತೆ, ಬದ್ಧತೆ ಕಂಡು ಬರುವುದಕ್ಕೆ ಏನು ಕಾರಣ? ಇಲ್ಲಿ ಯಾವ ಬಗೆಯ ಮೌಲಿಕ, ನೈತಿಕ ಶಿಕ್ಷಣ ದೊರೆಯುತ್ತದೆ? ಈಶಾನ್ಯ ರಾಜ್ಯಗಳಿಂದ ಮಕ್ಕಳನ್ನು ನಮ್ಮ ರಾಜ್ಯಕ್ಕೆ ಸಂಘದ ಮೂಲಕ ವಿದ್ಯಾಭ್ಯಾಸಕ್ಕಾಗಿ ಕರೆ ತರುವ ವ್ಯವಸ್ಥೆ ಇದೆ. ಇಲ್ಲಿ ಆ ಮಕ್ಕಳು ಅವರು ಸಂಘದ ಕಾರ್ಯಕರ್ತರ ಮನೆಗಳಲ್ಲಿ, ಸಂಘದ ಕಾರ್ಯಾಲಯಗಳಲ್ಲಿ ಇದ್ದು ಓದುತ್ತಾರೆ. ಆಲೋಚಿಸಿ ನೋಡಿ ನಾಗಾಲ್ಯಾಂಡ್ ಗೋ, ಮಣಿಪುರಕ್ಕೊ ಇಲ್ಲಿಂದ ಹೋಗಲು ರೈಲಿನಲ್ಲಿ 3-4 ದಿನಗಳ ಪಯಣ. ಅಷ್ಟು ದೂರದಿಂದ ಬರುವ ಆ ವಿದ್ಯಾರ್ಥಿಗಳನ್ನು ಇಲ್ಲಿ ತಮ್ಮ ಮನೆ ಮಕ್ಕಳಂತೆ ಪಾಲಿಸಿ ಪೋಷಿಸುವ ಭಾವ ನಿರ್ಮಾಣವಾಗುವುದು ಹೇಗೆ? ದೈಹಿಕ ಚರ್ಯೆ ಬೇರೆ, ಭಾಷೆ ಗೊತ್ತಿಲ್ಲ, ಜಾತಿಯ ವಿಷಯವೇ ಇಲ್ಲ,ಅಷ್ಟೇಕೆ ಆ ಮಕ್ಕಳ ಹೆಸರು ಹಿಡಿದು ಕರೆಯುವುದೇ ದೊಡ್ಡ ಸವಾಲು.ಆದರೂ ಇಲ್ಲಿ ಆ ಮಕ್ಕಳು ಇಲ್ಲಿಯವರ ಹಾಗೆ ಎಲ್ಲರೊಂದಿಗೆ ಅರಿತು ಬೆರೆತು ಚೆನ್ನಾಗಿ ಓದುವ ಹಾಗೆ ವಾತಾವರಣ ನಿರ್ಮಾಣ ಮಾಡಿ ಕೊಡುತ್ತಾರಲ್ಲ, ಎಲ್ಲಿಂದ ಬಂತು ಈ ಸಂಸ್ಕಾರ? ತಮ್ಮ ಸೋದರ ಸಂಬಂಧಿ ಮಕ್ಕಳನ್ನೇ ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲದ ಈ ಕಾಲಘಟ್ಟದಲ್ಲಿ ಇದು ಹೇಗೆ ಸಾಧ್ಯವಾಗುತ್ತದೆ? ಯಾವ ವಿಶ್ವವಿದ್ಯಾಲಯದಲಿ ಈ ಬಗೆಯ ರಾಷ್ಟ್ರ ಜಾಗರಣದ ಅಂದರೆ ಈ ರಾಷ್ಟ್ರ ತನ್ನದು, ಇಲ್ಲಿ ಬಾಳಿ ಬದುಕುವ ಎಲ್ಲರೂ ತನ್ನವರೇ ಎಂಬ ಭಾವ ನಿರ್ಮಾಣದ ಶಿಕ್ಷಣ ದೊರೆಯುತ್ತದೆ?

ಇದು ಒಂದು ದಿನದಲ್ಲಿ ಎರಡು ದಿನದಲ್ಲಿ ಆದುದಲ್ಲ.ನಿತ್ಯ ನಿರಂತರವಾದ ತಪಸ್ವಿ, ನಿಸ್ವಾರ್ಥ ಮನೋಧರ್ಮದ ಗೃಹಸ್ಥ ಮತ್ತು ಸಂತ ಸದೃಶ ಪ್ರಚಾರಕ್ ಕಾರ್ಯಕರ್ತರಿಂದ ನಿರ್ಮಾಣವಾದುದು.. ಸಂಘ ಕಾರ್ಯಕ್ಕಾಗಿ ತಮ್ಮ ಇಡೀ ಬದುಕನ್ನು ಮೀಸಲಿಟ್ಟ ಒಬ್ಬ ಒಬ್ಬ ಪ್ರಚಾರಕರ ಬದುಕು ಅಂತೂ ಅಸದಳ.ಈ ಕಾರ್ಯಕ್ಕಾಗಿಯೇ ತಮ್ಮ ಇಡೀ ಜೀವನವನ್ನು ಶ್ರೀಗಂಧದ ಕೊರಡಿನಂತೆ ತಾವು ಸವೆದರು ಸವೆಸಿದರು.ಲೊಕ್ಕಕ್ಕೆ ಮಾತ್ರ ಸುಗಂಧ ನೀಡಿದರು.ಆದರೆ ತಾವು ಮಾತ್ರ ಅನಾಮದೇಯರಾಗಿ, ಅಜ್ಞಾತವಾಗಿಯೇ ಉಳಿದರು. ಸಿದ್ಧಿ, ಪ್ರಸಿದ್ಧಿಗಳ ಹಂಬಲವಿಲ್ಲ, ಅಧಿಕಾರ, ಪ್ರಶಸ್ತಿ, ಪುರಸ್ಕಾರ, ಮನ್ನಣೆಗಳ ದಾಹವಿಲ್ಲ.ಹೆಸರು, ಕೀರ್ತಿ, ಸಂಪತ್ತು ಯಾವುದು ಇಲ್ಲದ ನಿಜ ಸಂತರಂತೆ ಬಾಳಿ ಬದುಕಿದ, ಬದುಕುತ್ತಿರುವ ಈ ತಪಸ್ವಿಗಳ ತಪೋ ಮಹಿಮೆಯಿಂದ ಸಂಘ ಈ ನೆಲೆಯಲ್ಲಿ ಗಟ್ಟಿಯಾಗಿ ಬೆಳೆಯುವುದಕ್ಕೆ ಕಾರಣವಾಗಿದೆ. ಸಾವಿರ ಉದಾಹರಣೆಗಳು ಈ ಕುರಿತಂತೆ ಸಿಗುತ್ತದೆ.ಒಂದು ನಿದರ್ಶನ ಇಲ್ಲಿ ಕೊಟ್ಟರೆ ಅಪ್ರಸ್ತುತ ಆಗಲಾರದೇನೋ..!

ಅವರು ಹುಟ್ಟಿದ್ದು ಪುಣ್ಯಕ್ಷೇತ್ರ ಶೃಂಗೇರಿಯಲ್ಲಿ, ಬಾಲ್ಯದಿಂದಲೇ ಸ್ವಯಂಸೇವಕರಾಗಿದ್ದ ಅವರು ತಮ್ಮ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಮಂಗಳೂರು ಬಳಿಯ ಸುರತ್ಕಲ್ ಎನ್ ಐ ಟಿ ಕೆ ಸೇರಿದರು.ಅದು ಎಪ್ಪತ್ತರ ದಶಕ, ಅವತ್ತಿಗೆ ಎನ್ ಐ ಟಿ ಕೆ ಯಲ್ಲಿ ಪ್ರವೇಶ ಸಿಗುವುದೇ ದೊಡ್ಡ ಪ್ರತಿಷ್ಠೆಯ ವಿಷಯ. ಚಿನ್ನದ ಪದಕದೊಂದಿಗೆ ಅವರು ತಮ್ಮ ಇಂಜಿನಿಯರಿಂಗ್ ಮುಗಿಸಿದರು. ಅಷ್ಟು ಪ್ರತಿಭಾವಂತ ವಿದ್ಯಾರ್ಥಿ. ಬೆಳ್ಳಿಯ ತಟ್ಟೆಯಲ್ಲಿ ಚಿನ್ನದ ಚಮಚದಲ್ಲಿ ಉಣ್ಣುವಷ್ಟು ಸಂಪಾದಿಸುವ ಎಲ್ಲ ಅವಕಾಶಗಳು ಅವರ ಮುಂದೆ ಆಗ ಇತ್ತು.ಆದರೆ ಅವರು ಆಯ್ಕೆ ಮಾಡಿಕೊಂಡ ದಾರಿ ಮಾತ್ರ ಬೇರಯೇ. ಸಂಘದ ಪ್ರಚಾರಕರಾದರು.ತಮ್ಮ ಸಂಘಟನಾ ಕುಶಲತೆಯಿಂದ ಹಂತ ಹಂತವಾಗಿ ತಾವು ಬೆಳೆದರು, ಸಂಘಟನೆಯನ್ನು ಬೆಳೆಸಿದರು.ಕರ್ನಾಟಕದಲ್ಲಿ ವನವಾಸಿ ಜನಗಳ ಮಧ್ಯೆ ಸಂಘ ಕಾರ್ಯ ನಡೆಸಬೇಕು ಎಂದು ಹಿರಿಯರು ಯೋಚಿಸಿದಾಗ ಆ ಜವಾಬ್ದಾರಿ ಹೆಚ್ಚುವರಿಯಾಗಿ ಇವರ ಹೆಗಲ ಮೇಲೆ ಬಂತು.ಮೊನ್ನೆ ಮೊನ್ನೆ ಕರ್ನಾಟಕ ವಿಧಾನಪರಿಷತ್ ಗೆ ನಾಮಕರಣ ಗೊಂಡ ಶ್ರೀ ಶಾಂತಾರಾಮ ಸಿದ್ದಿಯವರನ್ನು ಅವರ ಹೈಸ್ಕೂಲ್ ಹಂತದಲ್ಲೇ ಕಂಡು ಇವ ಮುಂದಕ್ಕೆ ತಯಾರು ಆದಾನು ಎಂದು ಗುರುತಿಸಿ ಅವರ ಪದವಿ ಶಿಕ್ಷಣ ಮುಗಿಯುವರೆಗೆ ಕಾದು, ಅವರ ಮೂಲಕ ಕರ್ನಾಟಕದಲ್ಲಿ ವನವಾಸಿ ಕಲ್ಯಾಣದ ಕಾರ್ಯಕ್ಕೆ ಶ್ರೀ ನಾಮ ಹಾಕಿಸಿದರು.ಆ ಕಾಲಕ್ಕೆ ಪಟ್ಟಣ,ನಗರಗಳಲ್ಲೇ ಸಂಘ ಕಾರ್ಯ ಮಾಡುವುದು ಕಷ್ಟ ಇತ್ತು.ಅಂಥವುದರಲ್ಲಿ ಸಾರಿಗೆ ಸಂಚಾರ ಸರಿ ಇಲ್ಲದ, ಬೆಟ್ಟ, ಗುಡ್ಡಗಳಲ್ಲಿ, ಕಾಡಿನಲ್ಲಿ ತಮ್ಮದೇ ಗುಂಪಿನಲ್ಲಿ ತಮ್ಮದೇ ಆಚಾರ, ಸಂಸ್ಕೃತಿಯೊಂದಿಗೆ ಬಾಳಿ ಬದುಕುತಿದ್ದ ಜನರೊಂದಿಗೆ ಕೆಲಸ ಆರಂಭಿಸುವುದು ಹೇಗೆ ಸಾಧ್ಯ? ಗದ್ದೆಯ ಬದುವಿನಲ್ಲಿ ರಾತ್ರಿ ಕಳೆದರು, ದೇವಸ್ಥಾನ, ಶಾಲೆಯ ಕಟ್ಟೆಯ ಮೇಲೆ ತೋಳನ್ನು ತಲೆ ದಿಂಬಾಗಿಸಿ ಒರಗಿದರು.. ಊಟ ತಿಂಡಿಗಳನ್ನು ಮರೆತರು.ಸತತವಾಗಿ ಓಡಾಡಿದರು, ನಗರ, ಗ್ರಾಮ, ವನವಾಸಿಗಳನ್ನು ಪರಸ್ಪರ ಜೋಡಿಸಿದರು.ನಾವೆಲ್ಲರೂ ಈ ಪವಿತ್ರ ಭಾರತ ಮಾತೆಯ ಮಕ್ಕಳು ಎಂಬುದು ಕೇವಲ ಘೋಷ ವಾಕ್ಯ ಅಲ್ಲ, ಅಕ್ಷರಶ: ನಿಜ ಗೊಳಿಸಿದರು. ತಮ್ಮ ಕೃತಿ ಯಿಂದ ನಡೆ ನುಡಿಯಿಂದ.ಎಷ್ಟೇ ಕಷ್ಟವಾದರೂ ಹಿಡಿದ ಕಾರ್ಯದಿಂದ ಹಿಂದೆ ಸರಿಯಲಿಲ್ಲ.ಉದ್ಯೋಗ ಸೇರಿಕೊಂಡಿದ್ದರೆ ಅರಮನೆಯಲ್ಲೇ ಬದುಕಬಹುದಿತ್ತು.ಆದರೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಈ ಸೇವಾ ಮಾರ್ಗ.. ಕಳೆದ ಎರಡು ವರ್ಷಗಳ ಹಿಂದೆ ಅವರು ತೀರಿಕೊಳ್ಳುವವರೆಗೂ ಅವರದ್ದು ಅವಿಶ್ರಾಂತ ದುಡಿಮೆ, ಜೀವನ, ಸತತ ಸಂಪರ್ಕ, ಪ್ರವಾಸ. ಇಡೀ ತಮ್ಮ ಜೀವ, ಜೀವನವನ್ನು ವನವಾಸಿಗಳ ಕಲ್ಯಾಣಕ್ಕಾಗಿಯೇ ಮುಡುಪಾಗಿಸಿದರು, ಇಡೀ ರಾಷ್ಟ್ರ ಸುತ್ತಾಡಿದರು. ಆದರೆ ಪ್ರಕಾಶ ಕಾಮತರೆಂಬ ಆ ಮಹಾಪುರುಷನ ಹೆಸರು ಬಲ್ಲವರು ಎಷ್ಟು ಮಂದಿ ಇರಬಹುದು? ಗೊತ್ತಿಲ್ಲ. ಇಂತಹ ಸಾವಿರ ಸಾವಿರ ವ್ಯಕ್ತಿಗಳ ತ್ಯಾಗ ಬಲಿದಾನಗಳ ಮೂಲಕವೇ ಸಂಘ ಸೌಧ ನಿಂತಿರುವುದು…

ಸಂಘ ಇಂದು ಒಂದು ನೆಲೆಯಲ್ಲಿ ಹೇಳುವುದಾದರೆ ಪರಮ ವೈಭವದ ಸ್ಥಿತಿಯಲ್ಲಿ ಇದೆ ಎನ್ನಬಹುದೇನೋ? ಈ ರಾಷ್ಟ್ರದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಕ್ಷಣಾ, ಗೃಹ ಮಂತ್ರಿ ಸೇರಿದಂತೆ ಉನ್ನತ ಸ್ಥಾನಮಾನದಲ್ಲಿ ಸಂಘದ ಸ್ವಯಂಸೇವಕರೇ ಇದ್ದಾರೆ.ಸ್ವಯಂಸೇವಕರೆಲ್ಲರಿಗೂ ಇದು ಹೆಮ್ಮೆಯ ಸಂಗತಿಯೇ ಹೌದು. ಯಾವುದನ್ನು ಸಂಘ ಅತ್ಯಂತ ಪ್ರಭಲವಾಗಿ ಪ್ರತಿಪಾದಿಸುತ್ತ ಬಂದಿದ್ದೇವೆಯೋ ಅದರಲ್ಲಿ ಆನೇಕ ಕಾರ್ಯಗಳು ಇಂದು ಕಾರ್ಯಗತಗೊಳ್ಳುವ ಹಂತದಲ್ಲಿ ಇದೆ.ಆದರೆ ಸಂಘದ ಯೋಚನೆ, ಯೋಜನೆ ಇದನ್ನು ಮೀರಿ ಇರುವುದು.ಯಾವ ಸಮಾಜ ತನ್ನನ್ನು ತಾನು ಹಿಂದು ಎಂದು ಕರೆಸಿಕೊಳ್ಳುವುದಕ್ಕೆ, ಕೇಸರಿಯನ್ನು ಧರಿಸಿ ಹೊರಗೆ ಬರುವುದಕ್ಕೆ ಅಂಜುತ್ತಿತ್ತೋ, ಅಳುಕುತಿತ್ತೋ ಆ ಸಮಾಜ ಇಂದು ಹೆಮ್ಮೆಯಿಂದ, ಗರ್ವದಿಂದ ತಾನೊಬ್ಬ ಹಿಂದು ಎಂದು ಹೇಳಿಕೊಳ್ಳುವ ಸ್ಥಿತಿಗೆ ಬಂದಿದೆ.ಇದು ಪರಿವರ್ತನೆ ತಾನೇ? ಯಾವ ದೂರಾಲೋಚನೆಯಿಂದ ಸಂಘವನ್ನು ಡಾಕ್ಟರ್ ಜೀ ಆರಂಭಿಸಿದ್ದರೋ, ಅದು ಇಂದು ಸಾಫಲ್ಯವನ್ನು ಹೊಂದಿದೆ.ಹಾಗಾಗಿ ಇವತ್ತು ನಾವು ಗರ್ವದಿಂದ ಕೂಗಿ ಕರೆಯಬಹುದು ಡಾಕ್ಟರ್ ಜೀವರನ್ನು, ಸಂಘದ ಸಸಿ ಇದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ ಎಂಬಂತೆ…

ಚಂದ್ರಶೇಖರ ಆಚಾರ್ಯ

ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಜಿ ಭಾಗವತ್ ಅವರ ವಿಜಯದಶಮಿ ಉತ್ಸವ ಭಾಷಣದ ಪ್ರಮುಖ ಅಂಶಗಳು

$
0
0
ಭಾನುವಾರ, ಅಕ್ಟೊಬರ್ ೨೫ ೨೦೨೦: ಪರಮಪೂಜನೀಯ ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರ ವಿಜಯದಶಮಿ ಉತ್ಸವ ೨೦೨೦ ರ ಪ್ರಯುಕ್ತದ ಹಿಂದಿ ಭಾಷಣದ ಕನ್ನಡಾನುವಾದದ ಪ್ರಮುಖ ಅಂಶಗಳು 1. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ದೀಪಾವಳಿಯ ಪರ್ವದ ನಂತರ ೯ನೇ ನವೆಂಬರ್ ೨೦೧೯ರಂದು ರಾಮ ಜನ್ಮಭೂಮಿ ವಿವಾದದ ಕುರಿತಾಗಿ ಸ್ಪಷ್ಟವಾದ ಹಾಗೂ ಐತಿಹಾಸಿಕ ತೀರ್ಪುನ್ನು ನೀಡಿತು. ನ್ಯಾಯಾಲಯದ ತೀರ್ಪಿಗಾಗಿ ಭಾರತೀಯರು ಸಂಯಮದಿಂದ ಕಾದು ಆಗಸ್ಟ್ ೫ರಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣಕ್ಕಾಗಿ ಭೂಮಿಪೂಜೆ, ಶಿಲಾನ್ಯಾಸದ ಸಮಾರಂಭವನ್ನು ಭಕ್ತಿ ಹಾಗೂ ಹಬ್ಬದ ಸಡಗರದೊಂದಿಗೆ ಸಂಭ್ರಮಿಸಿದ್ದು ಗೋಚರವಾಯಿತು. 2. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಯನ್ನು ನ್ಯಾಯಯುತವಾಗಿ ಜಾರಿಗೆ ತರಲಾಯಿತು. ನಮ್ಮ ನೆರೆಯ ದೇಶಗಳಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ನೀಡಲಾಗುವ ಕಿರುಕುಳ, ಉಪದ್ರವಗಳಿಗೆ ಹೆದರಿ ನಮ್ಮ ದೇಶಕ್ಕೆ ವಲಸೆ ಬಂದು ಇಲ್ಲಿ ಆಶ್ರಯ ಪಡೆಯುವವರಿಗೆ ಪೌರತ್ವ ನೀಡುವ ಕಾರ್ಯಕ್ಕೆ ಈ ಕಾಯಿದೆಯಿಂದ ಸಾಧ್ಯವಾಯಿತು. ಆದರೆ ಈ ಹೊಸ ಕಾನೂನನ್ನು ವಿರೋಧಿಸುವವರು ನಮ್ಮ ಮುಸಲ್ಮಾನ ಬ್ರಾತೃಗಳಲ್ಲಿ ವಿಷ ಬಿತ್ತುವ ಯೋಜನೆ ರೂಪಿಸಿ, ಮುಸಲ್ಮಾನ ಜನಸಂಖ್ಯೆಯನ್ನು ನಿಯಂತ್ರಿಸಲು ಈ ಕಾನೂನನ್ನು ರಚಿಸಲಾಗಿದೆ ಎಂಬ ಮಿಥ್ಯವನ್ನು ಸಾರಿದರು. ಪ್ರತಿಭಟನೆಯ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಕಾರ್ಯದಲ್ಲಿ ಅವಕಾಶವಾದಿಗಳು ಈ ಸೂಕ್ಷ್ಮ ಪರಿಸ್ಥಿತಿಯನ್ನು ಬಳಸಿಕೊಂಡರು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೂ ಅಪಾಯವುಂಟಾಯಿತು. 3. ಭಾರತ ಉಳಿದ ದೇಶಗಳ ತುಲನೆಯಲ್ಲಿ ಕೊರೋನಾ ವಿಪತ್ತನ್ನು ಧೈರ್ಯವಾಗಿ ಎದುರಿಸಿ ಸಮರ್ಥವಾಗಿ ಮುನ್ನುಗ್ಗುತ್ತಿದೆ. ಕೊರೋನಾವನ್ನು ನಾವು ದುರ್ಬಲಗೊಳಿಸಿದ್ದುದರ ಹಿಂದೆ ಹಾಗೂ ಇತರ ದೇಶಗಳು ಆ ಸಾಧನೆ ಮಾಡದ ಹಿಂದೆ ಹಲವು ಕಾರಣಗಳಿವೆ. ನಮ್ಮ ಸರ್ಕಾರಿ, ಆಡಳಿತ ವರ್ಗಗಳು ಪ್ರಾಮಾಣಿಕ ಪ್ರಯತ್ನವನ್ನು ಮುಂದಿಟ್ಟು ಕಾರ್ಯ ನಿರ್ವಹಿಸಿದವು. ನಾಗರಿಕರನ್ನು ಎಚ್ಚರಿಸುತ್ತಾ, ತುರ್ತು ನಿಗಾ ಘಟಕಗಳನ್ನು ರಚಿಸುತ್ತಾ ಸಮರ್ಥವಾಗಿ ಕೊರೋನಾ ನಿಯಂತ್ರಿಸುವ ಕಾರ್ಯವನ್ನು ನಿರ್ವಹಿಸಿದರು. ಮಾಧ್ಯಮದವರು ಈ ಸುದ್ದಿಯನ್ನು ಸದಾ ಬಿತ್ತರಿಸುತ್ತಿದ್ದರು. ಜನಸಾಮಾನ್ಯರಿಗೆ ಇದರಿಂದಾಗಿ ಅಪಾರವಾದ ಭಯದ ವಾತಾವರಣ ಉಂಟಾಯಿತಾದರೂ ಸಮಾಜದ ನಿಯಮಗಳನ್ನು ಪಾಲಿಸುತ್ತಾ, ಸಂಯಮವನ್ನು ಕಾಪಾಡುತ್ತಾ, ಜಾಗರೂಕರಾಗತೊಡಗಿದರು. ಸರ್ಕಾರಿ ಸೇವೆಯಲ್ಲಿನ ಅಧಿಕಾರಿಗಳು, ಯಾವುದೇ ವೈದ್ಯಕೀಯ ಕ್ರಮವನ್ನು ಪಾಲಿಸುವ ವೈದ್ಯರು, ಆರಕ್ಷಕ ದಳದವರು, ಸ್ವಚ್ಛತಾಕರ್ಮಿಗಳು ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ಪಾಲಿಸಿ ರೋಗಿಗಳ ಸೇವೆಯಲ್ಲಿ ತೊಡಗಿದರು. ಮಹಾಮಾರಿಯಿಂದಾಗಿ ಹಸಿವಿನಿಂದ ಬಳಲುತ್ತಿದ್ದವರು, ಕೆಲಸ ಕಳೆದುಕೊಂಡವರು, ಸ್ಥಳಾಂತರಗೊಂಡವರು ತಾಳ್ಮೆ ಸಹಿಷ್ಣುತೆಯನ್ನು ಮೆರೆದರು. ತಮ್ಮ ಸಮಸ್ಯೆಗಳನ್ನು ಬದಿಗೊತ್ತಿ, ಇತರರ ಸಮಸ್ಯೆಯನ್ನು ಬಗೆಹರಿಸುವವರು ಮುನ್ನೆಲೆಗೆ ಬಂದ ಎಷ್ಟೋ ನಿದರ್ಶನಗಳಿವೆ. ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸುವುದು, ಅವರಿಗೆ ಆಹಾರ ವ್ಯವಸ್ಥೆ, ತಂಗಲು ವ್ಯವಸ್ಥೆ, ಆಹಾರ-ಔಷಧದ ಅವಶ್ಯಕತೆ ಇದ್ದವರಿಗೆ ಅದನ್ನು ಪೂರೈಸುವುದು ಸಾಗಿತು. ಪರಿಚಿತ, ಅಪರಿಚಿತ ಸ್ವಯಂಸೇವಕರು, ಜೀವಂತವಾಗಿರುವವರು ಮತ್ತು ಸೇವೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದವರು, ವೈದ್ಯರು, ಸ್ವಚ್ಛತಾಕರ್ಮಿಗಳು ಮತ್ತು ಸಮಾಜದ ವಿವಿಧ ವರ್ಗದ ಎಲ್ಲರಿಗೂ ನಾನು ಗೌರವಯುತವಾಗಿ ನಮಸ್ಕರಿಸುತ್ತೇನೆ. ಅವರೆಲ್ಲರೂ ಶ್ಲಾಘನೆಗೆ ಪಾತ್ರರು. ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನಮ್ಮ ಪ್ರಾಮಾಣಿಕ ಗೌರವ ಸಲ್ಲಿಸೋಣ. ಪ್ರಸ್ತುತ ಸನ್ನಿವೇಶದಿಂದ ಹೊರಬರಲು ವಿಭಿನ್ನ ರೀತಿಯ ಸೇವಾ ಉಪಕ್ರಮಗಳ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವುದು, ಶಿಕ್ಷಕರಿಗೆ ಸೂಕ್ತ ಪರಿಹಾರ ನೀಡುವುದು, ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಕಾಲೇಜುಗಳಿಗೆ ಶುಲ್ಕವನ್ನು ಪಾವತಿಸಿ, ಕಳುಹಿಸುವುದು – ಈ ಕಾರ್ಯಗಳು ಪ್ರಯಾಸಕರವಾಗಿರುತ್ತವೆ.  ಶಾಲೆಗಳ ಪ್ರಾರಂಭ, ಶಿಕ್ಷಕರ ಸಂಬಳ ಮತ್ತು ವಿದ್ಯಾರ್ಥಿಗಳ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಾವು ಸೇವಾ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಸ್ಥಳಾಂತರಗೊಂಡವರು ನಿರುದ್ಯೋಗಿಗಳಾಗಿದ್ದಾರೆ. ಪರ್ಯಾಯ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ. ನೂತನ ವಲಯದಲ್ಲಿ ಉದ್ಯೋಗ ಪಡೆಯುವುದು ಪೂರ್ವ ತರಬೇತಿಯನ್ನು ಕಡ್ಡಾಯಗೊಳಿಸುತ್ತದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಕೌಶಲ್ಯರಹಿತರಿಗೆ ತರಬೇತಿ ನೀಡುವುದು ಅತ್ಯಗತ್ಯ. ಮಾರ್ಚಿ ತಿಂಗಳಿಂದ ಸಂಘದ ಸ್ವಯಂಸೇವಕರು, ಈ ಕಷ್ಟದ ಸಂದರ್ಭದಲ್ಲಿ ಅಗತ್ಯವಿರುವ ಕಡೆಗಳಲ್ಲಿ ತಮ್ಮ ಯೋಗದಾನ ನೀಡುತ್ತಿದ್ದಾರೆ. ಮೇಲೆ ವಿವರಿಸಿದ ಹೊಸ ಸೇವಾ ಉಪಕ್ರಮಗಳಲ್ಲಿ ಅವರು ಪೂರ್ಣ ಹೃದಯದಿಂದ ತಮ್ಮ ಕೊಡುಗೆಗಳನ್ನು ಸಹ ನೀಡುತ್ತಾರೆ. ಸಮಾಜದ ಇತರ ಸದಸ್ಯರು ಈ ನಿರಂತರ ದೀರ್ಘಕಾಲೀನ ಪ್ರಯತ್ನಗಳ ಅಗತ್ಯವನ್ನು ಅರ್ಥಮಾಡಿಕೊಂಡು ತಮ್ಮ ಕೊಡುಗೆಗಳನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ನಮ್ಮ ಸಮಾಜದ ಇತರ ಹಲವು ಅಂಶಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು. ಪ್ರಪಂಚದಾದ್ಯಂತ ಆತ್ಮಾವಲೋಕನದ ಪರವಾದ ಬದಲಾವಣೆಯ ಪ್ರವೃತ್ತಿ ಆರಂಭಗೊಂಡಿದೆ. “ನ್ಯೂ-ನಾರ್ಮಲ್” ಎಂಬ ನುಡಿಗಟ್ಟು ಹೆಚ್ಚಾಗಿ ಸಂಭಾಷಣೆಗಳಲ್ಲಿ ಬರುತ್ತದೆ. ಕರೋನಾ ಸಾಂಕ್ರಾಮಿಕವು ಜೀವನವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ, ಮನುಷ್ಯನು ಯಾಂತ್ರಿಕವಾಗಿ ನಡೆಸುತ್ತಿದ್ದ ಚಟುವಟಿಕೆ, ಜೀವನಶೈಲಿಯನ್ನು ಮೊಟಕುಗೊಳಿಸುವಂತೆ ಒತ್ತಾಯಿಸಿದೆ. ಆ ಚಟುವಟಿಕೆಗಳ ಯೋಗ್ಯತೆಯ ಮೌಲ್ಯಮಾಪನವು ಮಾನವ ಜೀವನದ ಮೇಲೆ ಆಕ್ರಮಣ ಮಾಡಿದ ಮೇಲ್ನೋಟದ ಆಚರಣೆಗಳು ಅನಗತ್ಯವೆಂದು ಸ್ಪಷ್ಟವಾಯಿತು. ಅಗತ್ಯವಾದವುಗಳು ಮಾತ್ರ ಅವನ ಜೀವನಕ್ಕೆ ಹತ್ತಿರವಾಗತೊಡಗಿವೆ. ಇನ್ನು ಕೆಲವು ಚಟುವಟಿಕೆಗಳು ಸಂಪೂರ್ಣವಾಗಿ ಮಸುಕಾಗಲಿಲ್ಲವಾದರೂ ಕಡಿಮೆಯಾಗಿವೆ. 4. ಭಾರತದ ಗಡಿಗಳಲ್ಲಿ ಭಯೋತ್ಪಾದನೆಯನ್ನು ಬಿಚ್ಚಿಡುವ ಮೂಲಕ ಮತ್ತು ನಮ್ಮ ಪ್ರದೇಶದ ಮೇಲೆ ಆಕ್ರಮಣ ಮಾಡುವ ಉತ್ಸಾಹಭರಿತ ಪ್ರಯತ್ನಗಳ ಮೂಲಕ ಚೀನಾ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುವುದು ಇಡೀ ಜಗತ್ತಿಗೆ ಚಿರಪರಿಚಿತವಾಗಿದೆ. ಭಾರತೀಯ ರಕ್ಷಣಾ ಪಡೆಗಳು, ಸರ್ಕಾರ ಮತ್ತು ಜನರು ಈ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. ಬಲವಾದ ನಿರ್ಣಯದ ಈ ಉದಾಹರಣೆ, ಸ್ವಾಭಿಮಾನ ಮತ್ತು ಧೈರ್ಯವನ್ನು ಚಲಾಯಿಸುವುದು ಚೀನಾವನ್ನು ದಿಗ್ಭ್ರಮೆಗೊಳಿಸಿದೆ. ಹಿಂದಿನಿಂದಲೂ ಸಹ, ಚೀನಾ ವಿಸ್ತರಣಾವಾದಿ ಮನೋಭಾವವನ್ನು ಮೈಗೂಡಿಸಿಕೊಂಡಿತ್ತು. ನಮ್ಮ ನೆರೆಹೊರೆಯವರೊಂದಿಗೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸಹಕಾರಿ ಸಂಬಂಧಗಳನ್ನು ಭದ್ರಪಡಿಸುವಲ್ಲಿ, ಆರ್ಥಿಕವಾಗಿ, ಕಾರ್ಯತಂತ್ರ ರೂಪಿಸಿ ಚೀನಾಕ್ಕಿಂತ ಮೇಲೇರುವುದು ಹಾಗೂ ಅವರ ರಾಕ್ಷಸೀ ಆಕಾಂಕ್ಷೆಗಳನ್ನು ತಟಸ್ಥಗೊಳಿಸುವುದೇ ಏಕೈಕ ಮಾರ್ಗವಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ (ಬ್ರಹ್ಮದೇಶ) – ಹೆಚ್ಚಿನ ನೆರೆಯ ರಾಷ್ಟ್ರಗಳು ನಮ್ಮೊಂದಿಗೆ ಸ್ನೇಹ ಸಂಬಂಧವನ್ನು ಹಂಚಿಕೊಂಡಿವೆ ಮತ್ತು ನಮ್ಮೊಂದಿಗೆ ಮೌಲ್ಯಗಳು ಮತ್ತು ನೈತಿಕ ಸಂಹಿತೆಯ ವಿಷಯಗಳ ಬಗ್ಗೆ ಹೆಚ್ಚು ಕಡಿಮೆ ಹೊಂದಾಣಿಕೆ ಮಾಡಿಕೊಂಡಿವೆ. ಈ ದೇಶಗಳೊಂದಿಗೆ ನಮ್ಮ ಬಂಧುತ್ವವನ್ನು ವೃದ್ಧಿಗೊಳಿಸುವ ನಮ್ಮ ಪ್ರಯತ್ನಗಳನ್ನು ನಾವು ಈಗ ವೇಗಗೊಳಿಸಬೇಕು. ನಾವು ಎಲ್ಲರೊಂದಿಗೂ ಸ್ನೇಹದಿಂದಿರಲು ಉದ್ದೇಶಿಸಿಸುತ್ತೇವೆ. ಇದು ನಮ್ಮ ಸ್ವಭಾವ. ಆದರೆ ಅದನ್ನು ದೌರ್ಬಲ್ಯವೆಂದು ಪರಿಗಣಿಸಿ ವಿವೇಚನಾರಹಿತ ಶಕ್ತಿಯಿಂದ ನಮ್ಮನ್ನು ವಿಘಟಿಸುವ ಅಥವಾ ದುರ್ಬಲಗೊಳಿಸುವ ಪ್ರಯತ್ನಗಳು ಸ್ವೀಕಾರಾರ್ಹವಲ್ಲ. ದೇಶದ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ಬಾಹ್ಯ ಬೆದರಿಕೆಗಳ ಬಗ್ಗೆ ನಮ್ಮ ಜಾಗರೂಕತೆಯಷ್ಟೇ ಸಾಲದು. ಕಳೆದ ವರ್ಷದ ಅನೇಕ ಆಂತರಿಕ ಘಟನೆಗಳ ವಿಶ್ಲೇಷಣೆ ಮತ್ತು ರಾಷ್ಟ್ರೀಯ ನಾಯಕತ್ವದ ಸಿದ್ಧತೆಯ ಬಗ್ಗೆಯೂ ಗಮನವಿರಿಸಬೇಕು. ಸರಕಾರದಿಂದ ಹೊರಗುಳಿದವರ ಅಧಿಕಾರದ ಹಪಾಹಪಿ, ರಾಜಕೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿರುತ್ತದೆ. ಆರೋಗ್ಯಕರ ಸ್ಪರ್ಧೆಯು ಎಂದಿಗೂ ಸ್ವಾಗತಾರ್ಹ. ಆದರೆ ದ್ವೇಷ, ಕಹಿಯಿಂದ ಸಾಮಾಜಿಕ ಸ್ವಾಸ್ಥ್ಯವನ್ನು ದುರ್ಬಲಗೊಳಿಸುವ ಸ್ಪರ್ಧೆಯು ಅನಗತ್ಯವಾಗಿರುತ್ತದೆ. ಪ್ರತಿಸ್ಪರ್ಧಿಗಳ ನಡುವಿನ ಬಿರುಕುಗಳಲ್ಲಿ ಅವಕಾಶವನ್ನು ನೋಡುವ ಪಕ್ಷಗಳು, ಭಾರತವನ್ನು ದುರ್ಬಲಗೊಳಿಸಲು ಮತ್ತು ಛಿದ್ರಗೊಳಿಸಲು ಬಯಸುತ್ತಿರುತ್ತವೆ. 5. ‘ಹಿಂದುತ್ವ’:  ಇದಕ್ಕೆ ಒಂದು ಧಾರ್ಮಿಕ ಅರ್ಥವನ್ನು ಸೇರಿಸುವ ಮೂಲಕ ಅದರ ಅರ್ಥವನ್ನು ವಿರೂಪಗೊಳಿಸಲಾಗಿದೆ. ಈ ತಪ್ಪು ಕಲ್ಪನೆಯನ್ನು ಉಲ್ಲೇಖಿಸಲು ಸಂಘ ಹಿಂದುತ್ವವನ್ನು ಬಳಸುವುದಿಲ್ಲ. ಇದು ನಮ್ಮ ಅಸ್ಮಿತೆಯನ್ನು ವ್ಯಕ್ತಪಡಿಸುವ ಪದವಾಗಿದ್ದು, ಅದರ ಆಧ್ಯಾತ್ಮಿಕತೆ ಆಧಾರಿತ ಸಂಪ್ರದಾಯಗಳ ನಿರಂತರತೆ ಮತ್ತು ಭಾರತ ಭೂಮಿಯಲ್ಲಿನ ಮೌಲ್ಯ ವ್ಯವಸ್ಥೆಯ ಸಂಪೂರ್ಣ ಸಂಪತ್ತು ಎಂದು ನಾವು ನಂಬಿದ್ದೇವೆ. ಆದ್ದರಿಂದ ತಾವು ಭರತವರ್ಷದ ಪುತ್ರ ಪುತ್ರಿಯರು ಎಂದು ಕರೆದುಕೊಳ್ಳುವ ಎಲ್ಲಾ ೧೩೦ ಕೋಟಿ ಜನರಿಗೆ ಇದು ಅನ್ವಯಿಸುತ್ತದೆ ಎಂದು ಸಂಘ ನಂಬುತ್ತದೆ. ಅಲ್ಲದೆ, ಅವರ ದೈನಂದಿನ ಜೀವನದಲ್ಲಿ ಸನಾತನ ನೈತಿಕತೆಯನ್ನು ಒಗ್ಗೂಡಿಸಿಕೊಂಡು, ಅವರ ಪೂರ್ವಜರ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೋ ಅವರಿಗೂ ಹಿಂದುತ್ವ ಅನ್ವಯವಾಗುತ್ತದೆ. ‘ಹಿಂದೂ’ ಎನ್ನುವುದು ಕೆಲವು ಪಂಥ ಅಥವಾ ಪಂಗಡದ ಹೆಸರಲ್ಲ, ಇದು ಪ್ರಾಂತೀಯ ಪರಿಕಲ್ಪನೆಯಲ್ಲ, ಇದು ಒಂದೇ ಜಾತಿಯ ವಂಶಾವಳಿಯಲ್ಲ ಅಥವಾ ನಿರ್ದಿಷ್ಟ ಭಾಷೆಯನ್ನು ಮಾತನಾಡುವವರ ಸವಲತ್ತು ಅಲ್ಲ. ಸಂಘವು ‘ಹಿಂದೂಸ್ಥಾನವು ಹಿಂದೂ ರಾಷ್ಟ್ರ’ ಎಂದು ಹೇಳಿದಾಗ ಅದರ ಮನಸ್ಸಿನಲ್ಲಿ ಯಾವುದೇ ರಾಜಕೀಯ ಅಥವಾ ಅಧಿಕಾರ ಕೇಂದ್ರಿತ ಪರಿಕಲ್ಪನೆ ಇಟ್ಟುಕೊಂಡಿರುವುದಿಲ್ಲ. ಈ ರಾಷ್ಟ್ರದ ‘ಸ್ವ’ (ಸ್ವತ್ವ)ದ ಸಾರಾಂಶವೇ ಹಿಂದುತ್ವ. ನಾವು ದೇಶದ ಸ್ವಾಭಿಮಾನವನ್ನು ಹಿಂದೂ ಎಂದು ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಿದ್ದೇವೆ ಬ್ಬರು ಜಾಗರೂಕರಾಗಿರಬೇಕು ಮತ್ತು ಪ್ರಾಬಲ್ಯದ ಸುಳ್ಳು ಕನಸುಗಳನ್ನು ತೋರಿಸುವುದರ ಮೂಲಕ ಜನರನ್ನು ಗೊಂದಲಕ್ಕೀಡುಮಾಡುವ ಮತ್ತು ಪ್ರಚೋದಿಸುವ ಸ್ವಾರ್ಥಿ ಮತ್ತು ದ್ವೇಷಪೂರಿತ ಶಕ್ತಿಗಳಿಂದ ದೂರವಿರಬೇಕು, ಆಮೂಲಾಗ್ರತೆಯನ್ನು ಪ್ರೋತ್ಸಾಹಿಸಬೇಕು ಮತ್ತು ಪ್ರತ್ಯೇಕತಾವಾದವನ್ನು ಬೆಳೆಸಕೂಡದು. ರಾಜಕೀಯ ಆಸಕ್ತಿ, ಪ್ರತ್ಯೇಕತಾವಾದಿ ಮತ್ತು ಮೂಲಭೂತವಾದಿ ಪ್ರವೃತ್ತಿಗಳು, ಭಾರತ ಮೇಲಿನ ದ್ವೇಷ ಮತ್ತು ಜಾಗತಿಕ ಪ್ರಾಬಲ್ಯದ ಅನ್ವೇಷಣೆಯ ಅಸಾಮಾನ್ಯ ಸಮ್ಮಿಶ್ರಣ ಭಾರತೀಯ ಏಕತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿವೆ. ಈ ವಿಷಯದ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ನಾವು ತಾಳ್ಮೆಯಿಂದ ಮುಂದುವರಿಯಬೇಕಾಗುತ್ತದೆ. ನಾವು ಸ್ವಯಂ ನಿಯಂತ್ರಣವನ್ನು ನಿರ್ವಹಿಸಿದರೆ, ಪರಸ್ಪರರ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡರೆ ಪರಸ್ಪರ ನಂಬಿಕೆಯ ವಾತಾವರಣವು ಮೇಲುಗೈ ಸಾಧಿಸಬಹುದು. ಒಬ್ಬರನ್ನೊಬ್ಬರು ನಂಬುವ ವಾತಾವರಣವನ್ನು ಹೆಚ್ಚಿಸಲು ಸ್ನೇಹಪರತೆ, ಸಂಯಮ ಮತ್ತು ತಾಳ್ಮೆ ನಮ್ಮ ಅತಿ ದೊಡ್ಡ ಅಸ್ಮಿತೆ. ಈ ಸತ್ಯವನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಮತ್ತು ಸ್ವೀಕರಿಸಬೇಕು. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಗೂ ಅದು ಸೃಷ್ಟಿಸುವ ಹೊಂದಾಣಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಭಾರತೀಯರನ್ನು ಭಾರತದಿಂದಲೇ ಹೊರಹಾಕಲಾಗುವುದಿಲ್ಲ. ಇದನ್ನು ಮಾಡುವ ಎಲ್ಲಾ ಪ್ರಯತ್ನಗಳು ಹಿಂದೆಯೂ ವಿಫಲವಾಗಿವೆ, ಅದನ್ನು ಸಾಬೀತುಪಡಿಸಲು ನಮ್ಮ ಮುಂದೆ ಅನೇಕ ಸಾಕ್ಷ್ಯಗಳಿವೆ. ಬಹು ನಂಬಿಕೆ ವ್ಯವಸ್ಥೆಗಳು ಮತ್ತು ಬಹು ನಂಬಿಕೆಗಳ ಸ್ವೀಕಾರ ಹಿಂದೂ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಹಲವು ಸಂಪ್ರದಾಯಗಳ ಬಗ್ಗೆ ಸಹಿಷ್ಣುತೆ ಮಾತ್ರವಲ್ಲದೆ, ಅವನ್ನು ಸ್ವೀಕರಿಸಿ, ಎಲ್ಲಕ್ಕೂ ಗೌರವ ಸೂಚಿಸುವುದನ್ನು ಭಾರತದ ಭಾವನಾತ್ಮಕ ಮನೋಭಾವ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಸಂಘದ ಪ್ರತಿಯೊಂದು ಮಾತಿನಲ್ಲೂ ‘ಹಿಂದೂ’ ಎಂಬ ಪದವಿದೆ, ಅಲ್ಲದೆ ಹಲವಾರು ತತ್ಸಂಬಂಧಿತ ಪದಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನುಗಳಿಸಿವೆ. ‘ಸ್ವದೇಶಿ’ ಎಂಬುದು ಅಂತಹ ಒಂದು ಪದವಾಗಿದ್ದು, ಈ ದಿನಗಳಲ್ಲಿ ಇದನ್ನು ಹೆಚ್ಚಾಗಿ ಚರ್ಚಿಸಲಾಗಿದೆ. ಇಲ್ಲಿರುವ ‘ಸ್ವ’ ಅಥವಾ ‘ಸ್ವಯಂ’ ಅದೇ ಹಿಂದುತ್ವವನ್ನು ಸೂಚಿಸುತ್ತದೆ. ಅಮೆರಿಕದ ಭೂಮಿಯಲ್ಲಿ ಸ್ವಾಮಿ ವಿವೇಕಾನಂದರು ಪ್ರಶಂಸಿಸಿದ ನಮ್ಮ ಸಹಿಷ್ಣು ಮತ್ತು ಸ್ವೀಕಾರಾರ್ಹ ಸ್ವಭಾವಕ್ಕೆ ಆಧಾರವಾಗಿರುವ ಆ ಶಾಶ್ವತ ತತ್ವಶಾಸ್ತ್ರವು ಎಲ್ಲ ಜನರನ್ನು ಸಹೋದರರು ಮತ್ತು ಸಹೋದರಿಯರು ಎಂದು ಉಲ್ಲೇಖಿಸುತ್ತದೆ, ಅಂದರೆ ಒಂದೇ ಘಟಕ ಅಥವಾ ಕುಟುಂಬದ ಭಾಗಗಳು. ಈ ‘ಸ್ವ’ ಎಂಬ ಚೇತನ ನಮ್ಮ ಬೌದ್ಧಿಕ ಕ್ರಿಯೆಯ ಯೋಜನೆಗಳನ್ನು ನಿರ್ದೇಶಿಸುವ ದಿಕ್ಸೂಚಿಯಾಗಿರಬೇಕು. ಇದು ನಮ್ಮ ದೇಶದ ಸಾಮೂಹಿಕ ಪ್ರಜ್ಞೆಯ ನಿರ್ದೇಶನಗಳು, ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಬೆಳಗಿಸುವ ಬೆಳಕಾಗಿರಬೇಕು. ಭೌತಿಕ ಸಮತಲದಲ್ಲಿ ನಮ್ಮ ಪ್ರಯತ್ನಗಳ ಫಲಿತಾಂಶಗಳು ಮತ್ತು ಅವುಗಳ ಪರಿಣಾಮಗಳು ಈ ತತ್ವಕ್ಕೆ ಅನುಗುಣವಾಗಿರಬೇಕು. ಆಗ ಮಾತ್ರ ಭಾರತ ಸ್ವಾವಲಂಬಿಯಾಗಿ ಅರ್ಹತೆ ಪಡೆಯುತ್ತದೆ. ಉತ್ಪಾದನೆಗೆ ಸ್ಥಳಗಳು, ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿರುವ ಕಾರ್ಯಪಡೆ, ಉತ್ಪಾದನೆಯ ಮಾರಾಟದಿಂದ ಹೊರಹೊಮ್ಮುವ ಆರ್ಥಿಕ ಲಾಭಗಳು ಮತ್ತು ಉತ್ಪಾದನೆಯ ಹಕ್ಕುಗಳು ನಮ್ಮ ರಾಷ್ಟ್ರೀಯ ನಿಯಂತ್ರಣದಲ್ಲಿರಬೇಕು. ಆದರೆ ಇದು ಕೇವಲ ಸ್ವದೇಶಿ ವಿಧಾನವಾಗಿ ಅರ್ಹತೆ ಪಡೆಯುವುದಿಲ್ಲ.  ದಿವಂಗತ ಶ್ರೀ ದತ್ತೋಪಂತ್ ಠೇಂಗಡಿ ಜಿ ಅವರು ಸರಕು ಮತ್ತು ಸೇವೆಗಳನ್ನು ಮೀರಿ ರಾಷ್ಟ್ರೀಯ ಸ್ವಾವಲಂಬನೆ, ಸಾರ್ವಭೌಮತ್ವ ಮತ್ತು ಸಮಾನತೆಯನ್ನು ಸಾಧಿಸುವ ಮೂಲಕ ಅಂತರರಾಷ್ಟ್ರೀಯ ಸಹಕಾರದ ಸ್ಥಾನವನ್ನು ‘ಸ್ವದೇಶೀ’ ಗಳಿಸಬಹುದು ಎಂದು ಹೇಳಿದ್ದಾರೆ. ಆದ್ದರಿಂದ ಭವಿಷ್ಯದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಮತ್ತು ಅಂತಾರಾಷ್ಟ್ರೀಯ ಸಹಕಾರದ ಸ್ಥಾನವನ್ನು ಪಡೆಯಲು ನಾವು ವಿದೇಶಿ ಹೂಡಿಕೆದಾರರಿಗೆ ಮುಕ್ತರಾಗಿದ್ದೇವೆ ಮತ್ತು ಹೊಸ ತಂತ್ರಜ್ಞಾನಗಳನ್ನು ನೀಡುವ ಕಂಪನಿಗಳಿಗೆ ಅವಕಾಶ ನೀಡುತ್ತೇವೆ, ಆದರೆ ಅವರು ನಮ್ಮ ನಿಯಮಗಳು ಮತ್ತು ಪರಸ್ಪರ ಒಪ್ಪುವ ಪರಿಸ್ಥಿತಿಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ವಾವಲಂಬನೆಯಲ್ಲಿ, “ಸ್ವಯಂ” ಎಂಬುದು ಮುಖ್ಯ ಹಾಗೂ ಅದನ್ನೇ ಉದ್ದೇಶಿಸಲಾಗಿದೆ. ಅದು ‘ಸ್ವ’ (ಸ್ವಯಂ) ನ ಚೈತನ್ಯ ಮತ್ತು ಭಾಗವಹಿಸುವಿಕೆಯಲ್ಲಿರುತ್ತದೆ. ಉದಾಹರಣೆಗೆ, ನಮ್ಮ ಕೃಷಿ ನೀತಿಯನ್ನು ವಿನ್ಯಾಸಗೊಳಿಸುವಾಗ ನಾವು ನಮ್ಮ ರೈತನಿಗೆ ಬಿತ್ತಲು, ಬೀಜ ದೊರಕಿಸುವುದು, ಗೊಬ್ಬರ, ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸ್ವಂತವಾಗಿ ರಚಿಸಲು ಅಥವಾ ಅವನ ಹಳ್ಳಿಯ ನೆರೆಹೊರೆಯ ಪ್ರದೇಶಗಳಿಂದ ಸಂಗ್ರಹಿಸಲು ಸದೃಢಗೊಳಿಸಬೇಕು. ತನ್ನ ಉತ್ಪನ್ನಗಳನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಕಲೆಯ ಬಗ್ಗೆ ಅವನಿಗೆ ಶಿಕ್ಷಣ ನೀಡಬೇಕು ಮತ್ತು ಅಂತಹ ಸೌಲಭ್ಯಗಳಿಗೆ ಪ್ರವೇಶ ಹೊಂದುವಂತೆ ಮಾಡಬೇಕು. ಸಂಶೋಧನೆಗಳ ಲಾಭದ ವ್ಯಾಖ್ಯಾನಗಳಲ್ಲಿ ಅಥವಾ ಕಾರ್ಪೊರೇಟ್ ವಲಯದ ಪ್ರಾಯೋಜಿತ ಸಂಶೋಧನೆಯಲ್ಲಿ ಅಥವಾ ಮಾರುಕಟ್ಟೆ ಶಕ್ತಿಗಳು ಮತ್ತು ಮಧ್ಯವರ್ತಿಗಳ ಒತ್ತಡದಲ್ಲಿ ರೈತ ಸಿಕ್ಕಿಹಾಕಿಕೊಳ್ಳಬಾರದು. ಆಗ ಮಾತ್ರ ಅಂತಹ ನೀತಿಯು ಭಾರತೀಯ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಮತ್ತು ನಿಜವಾದ ಸ್ವದೇಶಿ ಕೃಷಿ ನೀತಿಯಾಗಿರುತ್ತದೆ. 6. ನಮ್ಮ ಆರ್ಥಿಕ, ಕೃಷಿ, ಕಾರ್ಮಿಕ, ಉತ್ಪಾದನೆ ಮತ್ತು ಶಿಕ್ಷಣ ನೀತಿಯಲ್ಲಿ ಈ ‘ಸ್ವ’ ಅನ್ನು ಒಟ್ಟುಗೂಡಿಸುವ ದಿಕ್ಕಿನಲ್ಲಿ ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವ್ಯಾಪಕವಾದ ಚರ್ಚೆಗಳು ಮತ್ತು ಸಂವಾದದ ಆಧಾರದ ಮೇಲೆ ರೂಪುಗೊಂಡ ಹೊಸ ಶಿಕ್ಷಣ ನೀತಿಯನ್ನು ಘೋಷಿಸಲಾಗಿದೆ. ಇಡೀ ಶೈಕ್ಷಣಿಕ ಕ್ಷೇತ್ರದ ಜೊತೆಗೆ ಸಂಘ ಕೂಡ ಇದನ್ನು ಸ್ವಾಗತಿಸಿದೆ. ಸ್ವದೇಶಿಯ ಸಾಧ್ಯತೆಗಳ ಪರಿಶೋಧನೆಯಲ್ಲಿ “ವೋಕಲ್ ಫಾರ್ ಲೋಕಲ್” ಒಂದು ಉತ್ತಮ ಬೆಳವಣಿಗೆ. ‘ಸ್ವ’ ಅಥವಾ ಸ್ವಯಂ ಮನೋಭಾವವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಆಗ ಮಾತ್ರ ನಾವು ಸರಿಯಾದ ದಿಕ್ಕಿನಲ್ಲಿ ಮುಂದುವರಿಯಬಹುದಾಗಿದೆ. ನಮ್ಮ ಭಾರತೀಯ ಚಿಂತನೆಯು ಹೋರಾಟವನ್ನು ಪ್ರಗತಿಯ ಅಂಶವಾಗಿ ಅನುಮೋದಿಸುವುದಿಲ್ಲ. ಅನ್ಯಾಯವನ್ನು ತೊಡೆದುಹಾಕಲು ಹೋರಾಟವನ್ನು ಕೊನೆಯ ಉಪಾಯವೆಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಪ್ರಗತಿಯ ಪರಿಕಲ್ಪನೆ ಸಹಕಾರ ಮತ್ತು ಸಮನ್ವಯವನ್ನು ಆಧರಿಸಿದೆ. ಆದ್ದರಿಂದ, ಜೀವನದ ವಿವಿಧ ಆಯಾಮಗಳಲ್ಲಿ ಸ್ವಾವಲಂಬನೆಯನ್ನು ಸಾಕಾರಗೊಳಿಸಲು ಏಕತೆಯ ಮನೋಭಾವವು ನಿರ್ಣಾಯಕವಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಬೆಂಬಲಿಸುವ ಮೂಲಕ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಸ್ವಾವಲಂಬಿ ಉದ್ಯೋಗಿಗಳಿಗೆ ಸಹಾಯ ಮಾಡುವ ಮೂಲಕ, ಪರಿಸರ ಸ್ನೇಹಿ ವ್ಯವಹಾರಗಳನ್ನು ಪ್ರಾರಂಭಿಸುವ ಮೂಲಕ ಮತ್ತು ಆರ್ಥಿಕ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸ್ವಾವಲಂಬಿ ಉತ್ಪಾದನಾ ಘಟಕಗಳ ಮೂಲಕ ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳನ್ನು ವಿಕೇಂದ್ರೀಕರಿಸುವ ಅಗತ್ಯವಿದೆ. ಸರ್ಕಾರವು ಉದ್ಯಮಿಗಳಿಗೆ, ರೈತರಿಗೆ ಹೆಚ್ಚುವರಿ ಯೋಜನೆಗಳನ್ನು ಒದಗಿಸುವ ಅಗತ್ಯವಿರುತ್ತದೆ. ಅದರಿಂದ ಅವರು ವಿಶ್ವದರ್ಜೆಯ ಮಾನದಂಡಗಳನ್ನು ಸಾಧಿಸಬಹುದು ‘ಸ್ವಯಂ,’ ಏಕತೆಯ ಮನೋಭಾವ, ಜನರನ್ನು ಒಗ್ಗೂಡಿಸುವ ಮನೋಭಾವ, ಸಾಂಸ್ಕೃತಿಕ ಮೌಲ್ಯಗಳ ಮಹತ್ವ ಮತ್ತು ಪರಿಸರ ಜಾಗೃತಿ ಮತ್ತು ಅದರ ಸಮತೋಲನವನ್ನು ಪುನಃಸ್ಥಾಪಿಸಲು ಪರಿಹಾರ ಕ್ರಮಗಳ ಅಗತ್ಯತೆ ಇವುಗಳು ನಂತರದ ದಿನಗಳಲ್ಲಿ ಸಮಾಜದಿಂದ ಕಡೆಗಣಿಸಲ್ಪಡಬಾರದು. ನಾವು ಮೌಲ್ಯಗಳ ದೃಷ್ಟಿ ಕಳೆದುಕೊಳ್ಳಬಾರದು. 7. ಕುಟುಂಬ ವ್ಯವಸ್ಥೆಯಲ್ಲಿ ನಾವು ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿದರೆ, ಸಮಸ್ಯೆಯ ಪ್ರಸ್ತುತತೆಗೆ ಸಂಬಂಧಿಸಿದಂತೆ ವಿವೇಚನೆಯನ್ನು ಬಳಸಿ ನಡೆದುಕೊಂಡರೆ, ಸರಿಯಾದ ಆಯ್ಕೆ ಮಾಡಿ ಒಂದು ದೃಷ್ಟಿಕೋನವನ್ನು ಸ್ವೀಕರಿಸಿ ಅಥವಾ ತಿರಸ್ಕರಿಸಿದರೆ, ಅದರ ಪರಿಣಾಮವಾಗಿ ಉಂಟಾಗುವ ವರ್ತನೆಯ ಬದಲಾವಣೆಗಳು ಶಾಶ್ವತವಾಗಿರುತ್ತದೆ. ಪರಿಸರ ಕಾಳಜಿಗಳ ಬಗ್ಗೆ ಪ್ರತಿಯೊಬ್ಬರ ಪರಿಚಿತತೆಯ ಕಾರಣದಿಂದಾಗಿ, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಮಾರ್ಗಗಳು, ನೀರಿನ ಸಂರಕ್ಷಣೆ, ಹೂವಿನ ಗಿಡಗಳ ಸಸಿಗಳನ್ನು ನೆಡುವುದರ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸುವ ಬಗೆ, ಹಣ್ಣಿನ ಮರಗಳು ಮತ್ತು ತರಕಾರಿಗಳನ್ನು ನಮ್ಮ ಅಂಗಳ ಮತ್ತು ಟೆರೇಸ್‌ಗಳಲ್ಲಿ ಬೆಳೆಸುವ ಬಗ್ಗೆ ಚರ್ಚಿಸಬಹುದು ಮತ್ತು ಕ್ರಿಯಾಶೀಲ ಯೋಜನೆಗಳನ್ನು ಜಂಟಿಯಾಗಿ ರಚಿಸಬಹುದು. ನಾವು ದಿನನಿತ್ಯದ ಆಧಾರದ ಮೇಲೆ ನಮ್ಮ ಸಮಾಜಕ್ಕಾಗಿ ಎಷ್ಟು ಹಣವನ್ನು ಮತ್ತು ಸಮಯವನ್ನು ಅರ್ಪಿಸುತ್ತಿದ್ದೇವೆ ಮತ್ತು ಅದನ್ನು ಹೇಗೆ ಮಾಡಬೇಕೆಂಬುದನ್ನು ನಾವು ನಮ್ಮ ಚರ್ಚೆಯಲ್ಲಿ ಆಲೋಚಿಸಬಹುದು. ನಾವು ವಿವಿಧ ಜಾತಿ ಮತ್ತು ಪ್ರದೇಶಗಳಿಗೆ ಸೇರಿದ ಮತ್ತು ವೈವಿಧ್ಯಮಯ ಭಾಷೆಗಳನ್ನು ಮಾತನಾಡುವ ಜನರು ಮತ್ತು ಕುಟುಂಬಗಳೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದೇವಾ? ನಾವು ಆಳವಾಗಿ ಬೆರೆತಿದ್ದೇವೆ ಎನ್ನಲಾದ ಮನೆಗಳಿಗೆ ಆ ಪರಿಚಯಸ್ಥರ ಮನೆಗಳಿಗೆ ಭೇಟಿ ನೀಡಿದ್ದೇವೆಯೇ? ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಇವು ಪ್ರಮುಖ ಚರ್ಚಾ ವಿಷಯಗಳಾಗಿವೆ. ನಮ್ಮ ಕುಟುಂಬವು ರಕ್ತದಾನ, ನೇತ್ರದಾನದಲ್ಲಿ ಕೊಡುಗೆ ನೀಡಬಹುದು ಅಥವಾ ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಬಹುದು. 8.ರಾಷ್ಟ್ರೀಯ ಸ್ವಯಂಸೇವಕ ಸಂಘವು 1925 ರಿಂದ ಈ ಬದಲಾವಣೆಗಳನ್ನು ನೇರವಾಗಿ ಸಮಾಜದಲ್ಲಿ ಪರಿಣಾಮ ಬೀರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂಘಟಿತ ರಾಷ್ಟ್ರವು ಆರೋಗ್ಯಕರ ಸಮಾಜದ ಸ್ವಾಭಾವಿಕ ಸ್ಥಿತಿ. ಶತಮಾನಗಳ ಆಕ್ರಮಣಗಳ ಕತ್ತಲೆಯ ನಂತರ ಸ್ವತಂತ್ರವಾಗಿರುವ ಈ ದೇಶದ ಪುನರುತ್ಥಾನಕ್ಕೆ ಅಂತಹ ಸಂಘಟಿತ ಸಮಾಜವು ಅಗತ್ಯವಾಗಿದೆ. ಸಂಘ ಕಾರ್ಯವು ನಮ್ಮ ಸಂವಿಧಾನದ ಉದ್ದೇಶಗಳನ್ನು ಸಾಕಾರಗೊಳಿಸಲು ಸ್ಪಷ್ಟ ದೃಷ್ಟಿಯನ್ನು ಹುಟ್ಟುಹಾಕುವುದನ್ನು ಖಚಿತಪಡಿಸುತ್ತದೆ ಮತ್ತು ಪರಸ್ಪರ ಸಾಮರಸ್ಯದ ನಡವಳಿಕೆ, ಏಕತೆಯ ಮನೋಭಾವ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮನೋಭಾವವು ಅತ್ಯುನ್ನತವಾಗಿದೆ. ಈ ಗುರಿಯನ್ನು ಸಾಧಿಸುವಲ್ಲಿ ಸ್ವಯಂಸೇವಕರು ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಮತ್ತು ಸಮರ್ಪಕವಾಗಿ ತೊಡಗಿಸಿಕೊಂಡಿದ್ದಾರೆ. ಈ ಪುನರ್ನಿರ್ಮಾಣದ ಅಭಿಯಾನದಲ್ಲಿ ನೀವೆಲ್ಲರೂ ಕೈಜೋಡಿಸಿ ಎಂದು ಆಹ್ವಾನಿಸುತ್ತೇನೆ.

RSS, A moment or a movement of Resurgence?

$
0
0

RSS, A moment or a movement of Resurgence?

-Shambu Nashipudi, IT Professional

What is the common thread in these events of post-Independence?
·         Struggle for restoring Democracy during Anti Emergency movement in 1970’s
·         Liberation Movements in Goa, Dadra and Hyderabad.
·         Rendering support to Indian Army during Pakistan and Chinese aggression
·         Strong stand against untouchability
·         Galvanizing Hindu society for restoration of Ram temple at Ayodhya
·         India against corruption movement

Years down the line, when the unbiased history of present day Bharat is written, a service organization will find a special place, an organization that thrives on human interactions, an organization not rigid in hierarchical structure. An organization which was started by a Medical Doctor in an obscure corner of Bharat in 1925 on the day of Vijayadashami is today’s world’s largest voluntary non-governmental organization.

Rashtriya Swayamsevak Sangh simply known as RSS is a Hindu Nationalist Organization. In today’s political discourse, when the word Hindu brings disdain in the intellectual and academic discourse, RSS is not apologetic being a Hindu Nationalist Organization. The Ideology of the organization is based on the principle of selfless service to nation and Hindu Civilization thought. It’s based on Dharmic values embracing nations’ century old culturally rooted traditions, the emphasis is on social-service-as-a-spiritual-path reflecting the traditionally held belief of Karma yoga as one of the paths of Moksha.

In post independent Bharat, there is not a single event which can be understood and analyzed without taking RSS into cognizance either its anti-emergency movement or the anti-corruption movement. Over a period of last 90 plus years, RSS has grown into an extremely prominent nationalist umbrella organization with its presence felt in all walks of life truly underlying the thought of Sarva-sparshi and Sarva-Vyapi. Today its breadth, depth and its ability to bring transformation in the society is envied by other organizations.


The ideal of the Sangha is to carry the nation to the pinnacle of its glory, through organizing the entire society and ensuring protection of Hindu Dharma. It strongly believes in building a strong and resilient nation and society on the sound edifice of individual character and the core work of man-making happens through Shakhas.

The Sangh’s way of working and the reason for its success is its daily Shakhas. The daily Shakha’s are undoubtedly the most visible symbol of the organization though simplest in structure & execution its self contained, bottom-up approach and people driven. It’s also the reason for Organizations stupendous success in spite of all the negative media coverage the organization receives. RSS does not have any formal membership; anyone can become a member by joining the nearest shakha, the basic unit of the Organization and he is called as Swayamsevak.

The differentiating factor of the organization is its profound thoughts deep rooted in the culture of the land, though sounding archaic at times but the process adapted is evolutionary, in spite of the formal structure the organization thrives on informality and human interactions. The values and ideals are cherished and eternal but the techniques adapted are evolved, absolutely contemporary and innovative.
The progressive unfoldment of the Organization in the last 90 years is worth the case study in any management schools. In pre independent Bharat, if it was an Organization for the organization sake in post Independent Bharat it graduated from being a mere organization to leading nationwide movements. Post the emergency period in the 70’s under the guidance of stalwarts the organization had greater impact on National Life in all spheres of the society. In the last few decades, there is growing acceptance of the organization across all sections of the society and its spearheading transformation in the society.


RSS is-a and will-be a force of National and cultural unity for all of Bharat. It has provided the required bulwark for Hindu society against the breaking India forces. Pseudo Secular forces, Marxist and Abrahmic forces would have had a field day in Bharat, if not for a Nationalistic Organization like RSS. The organization has maintained its national purpose and unflinching ethos in the last ninety years in spite of the forces to undermine it.

Today the organization is stronger than ever, undergoing new transformations and expansions in Bharat and looking forward to a new and brighter century where the country would regain its position as Viswa Guru and be a leading and guiding force to the world on both material and spiritual levels.

Shambu Nashipudi

@vsksamskritam initiates its operations from Vijayadashami #VSKSamskritam

$
0
0

VSKSamskritam : @vsksamskritam initiates its operations from Vijayadashami

#VSKSamskritam is an initiative of Vishwa Samvada Kendra, Karnataka (@VSKKarnataka) supported by Samskrita Bharati (@sb_bharatiya). A new social media news channel in Samskrita language & Devanagari script @vsksamskritam has initiated its operations on Vijayadashami, the day which marks the victory of good over evil. It has been a custom among Hindus to start any initiatives on this auspicious day of Vijayadashami and expected to borne great results.

We request you to support the endeavor and follow the twitter handle. @vsksamskritam

Samskrita is the best tool to remove the five types of social differences; linguistic, class, caste, sect and the north vs south division and most importantly it has a great potential to bind Bharat under her cultural and spiritual strength.

Samskrita Bharati is an organization started to protect, develop, propagate the oldest language of Bharat – Samskrita. Samskrita was a pan-Bharat language in the Vedic and classical period but has lost its place in modern Bharat.

The basic mission of Samskrita Bharathi is to popularize Samskrita by encouraging the use of simple Samskrita in everyday conversations. From being termed as Devabhasha Samskrita Bharathi is working towards making this easy language Samskrita into more a Janabhasha – language of common people through Samskrita itself as the medium of instruction.

#SpeakSamskritatHome With this hashtag on Twitter, @sb_bharatiya has regularly been adding Samskrita tweets of translations of common conversations on their handle @sb_bharatiya


ಡಾ. ಸಲ್ಮಾ ಆರೆಸ್ಸೆಸ್ ವಿಜಯದಶಮಿ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳು

$
0
0




ಒಬ್ಬ ಸ್ವಯಂಸೇವಕ ಇರುವ  ಮನೆ ಆತ ಇರುವ ಇಡೀ  ಬಡಾವಣೆಗೇ ರಕ್ಷಣೆ ನೀಡುತ್ತದೆ ಎಂದು ಧೃಡವಾಗಿ ಹೇಳಬಲ್ಲೆ: ಡಾ.ಸಲ್ಮಾ

ಡಾ.ಸಲ್ಮಾ, ಒಬ್ಬ ವಿದ್ಯಾವಂತ ಮುಸ್ಲಿಂ ಮಹಿಳೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಟ್ಟಂಬಿ ಪಟ್ಟಣದ RSS ವಿಜಯ ದಶಮಿ ಉತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಡಾ. ಸಲ್ಮಾ ಪಾಲಕ್ಕಾಡಿನ ಆರೆಸ್ಸೆಸ್ ವಿಜಯ ದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಸಲ್ಮಾ ಭಾಷಣದ ಸಾರಾಂಶ ಇಲ್ಲಿದೆ: 

'ಸಂಘದ ಶಾಖೆಗಳ ಮೂಲಕ ಒಳ್ಳೆಯ ಸಂಸ್ಕಾರ ಸಿಗುತ್ತದೆ, ಆ ಸಂಸ್ಕಾರವು ಸಮಾಜದಲ್ಲಿ ಸ್ವಯಂಸೇವಕರ ನಡವಳಿಕೆಯಲ್ಲಿ ಪ್ರತಿಫಲಿಸುತ್ತದೆ. ಮಹಿಳೆಯರ ಕುರಿತು  ಸಂಘದ ಸ್ವಯಂ ಸೇವಕರಿಗೆ ಇರುವ ಸದ್ಭಾವನೆ ಇನ್ನಿತರ ಯಾವುದೇ ಸಂಘಟನೆಯಲ್ಲಿ ಕಾಣಸಿಗದು. ಇಂಥ ಸುಗುಣ, ಸಚ್ಛಕ್ತಿ ಯನ್ನು ಶಾಖೆಯ ಚಟುವಟಿಕೆಗಳ ಮೂಲಕ ಮೈಗೂಡಿಸಿಕೊಳ್ಳುತ್ತಾರೆಂದು ತಿಳಿದಾಗ ನನಗೆ ಸಂಘದ ಮೇಲಿನ ಅಭಿಮಾನ ದ್ವಿಗುಣವಾಯಿತು. ಒಬ್ಬ ಸ್ವಯಂಸೇವಕ ಇರುವ  ಮನೆ ಆತ ಇರುವ ಇಡೀ  ಬಡಾವಣೆಗೇ ರಕ್ಷಣೆ ನೀಡುತ್ತದೆ ಎಂದು ಧೃಡವಾಗಿ ಹೇಳಬಲ್ಲೆ. ನಾನು ಪಾಲಿಸುವ ಧರ್ಮ ಬೇರೆಯದಿರಬಹುದು ಆದರೆ ನನ್ನ ಮೂಲ ಈ ಮಣ್ಣಿನದೇ. ನಾನು ಭಾರತಮಾತೆಯ ಪುತ್ರಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಭಾರತ್ ಮಾತಾ ಕೀ ಜೈ

ಮಾಹಿತಿ ಕೃಪೆ: ಶಿವಕೃಷ್ಣ ನಿಡುವಾಜೆ

ರಾಜ್ಯದ ಭೂಸುಧಾರಣೆ ಕಾಯ್ದೆಯಿಂದ ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಲು ಭ್ರಷ್ಟರಿಗೆ ಸುಲಭವಾಗಲಿದೆ : ಅಶೋಕ್ ಬಿ ಹಿಂಚಗೇರಿ

$
0
0

ವರದಿ: ರಾಧಾಕೃಷ್ಣ ಹೊಳ್ಳ

ರಾಜ್ಯದಲ್ಲಿ ಇತ್ತೀಚೆಗೆ ಜಾರಿಗೆ ತಂದ ಭೂಸುಧಾರಣೆ ಕಾಯ್ದೆಯಿಂದ ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಲು ಭ್ರಷ್ಟರಿಗೆ ಸುಲಭವಾಗಲಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ ಹಿಂಚಗೇರಿ ಅವರು ಅಭಿಪ್ರಾಯಪಟ್ಟರು. ‘ಇತ್ತೀಚಿನ ಕೃಷಿ ಕಾನೂನುಗಳ ಸಾಧಕ-ಬಾಧಕಗಳು’ ಎಂಬ ವಿಷಯದ ಬಗ್ಗೆ ಭಾರತೀಯ ಕಿಸಾನ್ ಸಂಘ – ಕರ್ನಾಟಕ ಪ್ರದೇಶ ಮತ್ತು ಭಾರತೀಯ ಕೃಷಿ ಆರ್ಥಿಕ ಸಂಶೋಧನಾ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಎಲ್ಲ ಉದ್ಯಮಗಳಿಗೆ ತಾವು ಬೆಳೆದ ಉತ್ಪನ್ನದ ಬೆಲೆ ನಿರ್ಧರಿಸುವ ಹಕ್ಕಿದೆ. ರೈತರಿಗೆ ಮಾತ್ರ ಅಂತಹ ಹಕ್ಕಿಲ್ಲ. ಬಂದ ಬೆಲೆಗೆ ಮಾರುವ ಅನಿವಾರ್ಯ ಪರಿಸ್ಥಿತಿಯಿದೆ. ಇದು ಬದಲಾಗಬೇಕು ಎಂದರು. ಹಾಗೆಯೇ, ಬ್ರಿಟಿಷರ ಕಾಲದ ಭೂಕಂದಾಯ ವಸೂಲಿ ಮಾಡುವ ಕ್ರಮ ಇಂದು ಅಗತ್ಯವಿದೆಯೇ ಎಂದೂ ಕೂಡ ವಿಮರ್ಶೆ ಮಾಡಬೇಕು. ಇದರಿಂದ ಸರ್ಕಾರಕಮ್ ಅದಾಯಕ್ಕಿಂತ ಖರ್ಚೆ ಹೆಚ್ಚು ಇರಬಹುದು ಎಂದು ಹೇಳಿದ ಅವರು, ಕೃಷಿ ಕಾನೂನುಗಳ ಬಗ್ಗೆ ಸಮಗ್ರ ಚಿಂತನೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

 

ಬೆಂಗಳೂರು ವಿಶ್ವವಿದ್ಯಾಲಯದ ನಗರ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಆರ್ಥಿಕತಜ್ಞ ಡಾ. ಸಮೀರ್ ಕಾಗಲ್ಕರ್, ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಟಿ ಎನ್ ವೆಂಕಟ ರೆಡ್ಡಿ, ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ ಎನ್ ಪ್ರಕಾಶ್ ಕಮ್ಮರಡಿ, ಕೃಷಿ ನೀತಿ ತಜ್ಞರಾದ ಪ್ರದೀಪ್ ಪೂವಯ್ಯ, ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ, ರಾಷ್ಟ್ರೀಯ ಕಾನೂನು ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ ಕೆ ರಮೇಶ್, ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಎನ್ ಸತೀಶ್ ಗೌಡ, ಸುಪ್ರೀಂ ಕೋರ್ಟಿನ ವಕೀಲ ರಾಘವೇಂದ್ರ ಶ್ರೀವತ್ಸ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಕಾಡೆಮಿಯ ಅಧ್ಯಕ್ಷರಾದ ಎಸ್ ಎಫ್ ಗೌತಮ್ ಚಂದ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. 

ಸಮೀರ್ ಕಾಗಲ್ಕರ್ ಅವರು ಮಾತನಾಡುತ್ತಾ, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿದ್ದ ಜನಸಂಖ್ಯೆಗಿಂತ ಈಗ 3.5 ರಷ್ಟು ಹೆಚ್ಚಿದೆ. ಈಗಿನ ಆಹಾರ ಉತ್ಪಾದನೆ ಆಗಿನದಕ್ಕಿಂತ 6 ಪಟ್ಟು ಹೆಚ್ಚಿದೆ. ಆಹಾರದ ಕೊರತೆ ಇಂದು ಇಲ್ಲ. ಹಾಗಾಗಿ ಅಂದು ಉದ್ದ ಅಗತ್ಯ ವಸ್ತುಗಳ ಕಾಯ್ದೆ ಈಗ ಅಗತ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಕಾನೂನಿನಲ್ಲಿ ಬದಲಾವಣೆ ಮಾಸಿಸ್ಸು ಸೂಕ್ತವಾಗಿದೆ ಎಂದರು. 1991ರ ಉದಾರೀಕರಣ ಕೃಷಿ ಕ್ಷೇತ್ರಕ್ಕೆ ಮಾತ್ರ ಬರಲಿಲ್ಲ. ತನ್ನ ವಸ್ತುವಿನ ಬೆಲೆ ನಿಗದಿ ಮಾಡುವ ಅಧಿಕಾರ ಮಾತ್ರ ಕೃಷಿಕನಿಗೆ ಬರಲಿಲ್ಲ. ಮಾರುವವರು ಮತ್ತು ಕೊಳ್ಳುವವರಿಗೆ ಈಗ ಸ್ವಾತಂತ್ರ್ಯ ಕೊಟ್ಟಿರುವುದರಿಂದ ಎಪಿಎಂಸಿ ವ್ಯವಸ್ಥೆಯ ಏಕಸ್ವಾಮ್ಯ ಇನ್ನು ಮುಂದೆ ಇರುವುದಿಲ್ಲ. ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗಿಯವರಿಗೆ, ವಿದೇಶಿ ಹೂಡಿಕೆಗೆ ಮುಕ್ತಗೊಳಿಸಿದಾಗಲೂ ನಮ್ಮ ಬ್ಯಾನ್ಕುಗಳು ಮುಳುಗುತ್ತವೆ ಅನ್ನಿಸಿತ್ತು. ಆದರೂ ಇಂದು ಸರ್ಕಾರಿ ಬ್ಯಾನ್ಕುಗಳು ಎಲ್ಲರೊಂದಿಗೆ ಸ್ಪರ್ಧೆ ಮಾಡುತ್ತಿವೆ. ಹಾಗೇ ಸ್ಪರ್ಧೆ ಪ್ರಾರಂಭವಾದರೆ ರೈತರಿಗೆ ಅನುಕೂಲವೇ ಆಗಲಿವೆ ಎಂದರು. 

ಕನಿಷ್ಠ ಬೆಂಬಲ ಬೆಲೆ ಹೆಚ್ಚೇ ಆಗಿದೆ. ಅದೇನೂ ವ್ಯತ್ಯಾಸವಾಗಿಲ್ಲ. ಆ ವ್ಯವಸ್ಥೆಯನ್ನೂ ರೈತರು ಉಪಯೋಗಿಸಿಕೊಳ್ಳಬಹುದು. ಎಪಿಎಂಸಿ ಇದ್ದೇ ಇರುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಅಲ್ಲೂ ಮಾರಬಹುದು ಎಂದು ವಿವರಿಸಿದರು. ಕಾಂಟ್ರಾಕ್ಟ್ ಫಾರ್ಮಿಂಗ್ ನಲ್ಲಿ ತನ್ನ ಖರ್ಚು ಮತ್ತು ಲಾಭ ಸೇರಿಸಿ ರೈತ ಬೆಲೆ ನಿಗದಿ ಮಾಡಬಹುದು. ಬೆಲೆ ಅನಿಶ್ಚಿತತೆ ಇರುವುದಿಲ್ಲ. ಕೃಷಿಕ vs ವ್ಯಾಪಾರಿ ಅಲ್ಲ. ಇಬ್ಬರ ಸಹಕಾರದೊಂದಿಗೆ ಕೃಷಿ ನಡೆಯುತ್ತದೆ. ತಂತ್ರಜ್ಞಾನದ ಸಹಾಯವನ್ನು ಕಂಪೆನಿಗಳು ಕೊಡಬಹುದು. ಇದರಿಂದ ಉತ್ಪತ್ತಿ ಜಾಸ್ತಿಯಾಗುತ್ತದೆ. ಕಾಂಟ್ರಾಕ್ಟ್ ನಲ್ಲಿ ನಿಗದಿಯಾದ ಬೆಲೆಗಿಂತ ಹೆಚ್ಚಿನ ಬೆಲೆ ಮಾರುಕಟ್ಟೆಯಲ್ಲಿದ್ದರೆ ರೈತರಿಗೂ ಅದರ ಪಾಲು ಸಿಗುತ್ತದೆ. ಆದ್ದರಿಂದ ರೈತರು ಹೆದರುವ ಅಗತ್ಯವಿಲ್ಲ ಎಂದರು.

ತಮ್ಮ ಅಭಿಪ್ರಾಯ ಮಂಡಿಸಿದ ನಿವೃತ್ತ ಪ್ರಾಧ್ಯಾಪಕ ವೆಂಕಟ ರೆಡ್ಡಿಯವರು ಹಳೆ ಕಾನೂನು ಹೊಸ ಕಾನೂನಿನಲ್ಲಿ ಏನೂ ಬಹಳ ವ್ಯತ್ಯಾಸವಿಲ್ಲ ಈ ಕಾನೂನು ರೈತರುಗೆ ಒಳ್ಳೆಯದನ್ನೇ ಮಾಡಲಿದೆ ಎಂದರು. ವ್ಯಾಜ್ಯ ತೀರ್ಮಾನ ಮಂಡಳಿಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇರಬೇಕು. ಈ ಬದಲಾವಣೆಯನ್ನು ಸರ್ಕಾರ ಮಾಡಲಿ ಎಂದು ಆಶಿಸಿದರು. ಒಪ್ಪಂದ ಕೃಷಿ ಮೂಲಕ ಬೀಜೋತ್ಪಾದನೆ ಈಗ ಬರಲಿದೆ. ಇದು ಒಳ್ಳೆಯದು. ⅔ ಹಣ ಕೊಟ್ಟು ರೈತರಿಂದ ಬೀಜ ತೆಗೆಸುಕೊಂಡು ಹೋಗಬೇಕು ಎಂಬ ಅಂಶ ಕಾನೂನಿನಲ್ಲಿದೆ. 30 ದಿನದಲ್ಲಿ ಉಳಿಕೆ ಹಣ ಕೊಡಬೇಕು. ಮೊದಲೆಲ್ಲ ಆರು ತಿಂಗಳಾದರೂ ಬೀಜ ಉತ್ಪಾದನೆ ಮಾಡುವ ರೈತನಿಗೆ ಕಂಪೆನಿಗಳು ಹಣ ಕೊಡುತ್ತಿರಲಿಲ್ಲ ಎಂದರು. ಒಪ್ಪಂದ ಕೃಷಿಯಲ್ಲಿ ಯಾವುದು ಅಗತ್ಯ ಇದೆಯೋ ಅದನ್ನು ಮಾತ್ರ ಕಂಪೆನಿಗಳು ಒಪ್ಪಂದ ಮಾಡಿಕೊಳ್ಳುತ್ತವೆ. ಹಾಗಾಗಿ ಅವೈಜ್ಞಾನಿಕ ಯವುದೋ ಬೆಳೆ ಬೆಳೆದು ರಸ್ತೆಗೆ ಸುರಿಯುವ ಪ್ರಮೇಯ ಇಲ್ಲ ಇನ್ಸು ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ಕೊಡಬೇಕಾದ ಸೆಸ್ ಒಂದು ರೀತಿ ಹಫ್ತಾ ಇದ್ದ ಹಾಗೆ. ಸರ್ಕಾರಕ್ಕೆ 600 ರಿಂದ 700 ಕೋಟಿ ಆದಾಯ. ಅದಕ್ಕಿಂತ ಹೆಚ್ಚು ಸರ್ಕಾರ ಎಪಿಎಂಸಿ ನೌಕರರ ಸಂಬಳಕ್ಕೆ ಹೆಚ್ಚು ಖರ್ಚು ಮಾಡುತ್ತೆ. ಈ ಸೆಸ್ ಅನ್ನು ತೆಗೆದರೆ ಅಲ್ಲಿನ ವ್ಯಾಪಾರಿಗಳಿಗೂ ಎಲ್ಲರೊಂದಿಗೆ ಸ್ಪರ್ಧೆ ಮಾಡಲು ಸಾಧ್ಯ ಎಂದರು.

ಆಫ್ ಲೈನ್ ಟ್ರೇಡಿಂಗ್ ನ ವ್ಯವಹಾರಕ್ಕೆ ಏನೂ ದಾಖಲೆಯಿರುವುದಿಲ್ಲ. ಅಂತಹ ಒಂದು ರೆಕಾರ್ಡಿಂಗ್ ವ್ಯವಸ್ಥೆ ತರುವುದು ಒಳ್ಳೆಯದು. ಇದರಿಂದ ಪ್ರೈಸ್ ರಿಕವರಿ ಪ್ರೊಸೆಸ್ ಗೆ ಅನುಕೂಲವಾಗುತ್ತದೆ. ಈ ತಿದ್ದುಪಡಿ ಮಾಡಬೇಕು: ನಿವೃತ್ತ ಪ್ರಾಧ್ಯಾಪಕ ವೆಂಕಟ ರೆಡ್

ಆಗಬೇಕಾದ ತಿದ್ದುಪಡಿ

ಈಗ ಹಲವು ಸ್ತರದ ಮಧ್ಯವರ್ತಿಗಳು ಸಂಖ್ಯೆ ಕಡಿಮೆಯಾಗುತ್ತಿದ್ದು ಕೃಷಿಕರಿಗೆ ಹೆಚ್ಚು ಹಣ ಬರುತ್ತದೆ. ವ್ಯಾಪಾರಿಗಳು ದಾಸ್ತಾನು ಮಾಫಾಳು ಈಗ ನಿರ್ಬಂಧ ಇಲ್ಲದ್ದರಿಂದ ರಫ್ತು, ಪ್ರೊಸೆಸ್ಡ್ ಉತ್ಪನ್ನಗಳು ಈಗ ಸಾಧ್ಯ. ಉತ್ಪಾದನೆ ಇದ್ದರೂ ರಫ್ತಿನಲ್ಲಿ ಭಾರತಕ್ಕೆ 80 ನೇ ಸ್ಥಾನ. ಉಗ್ರಾಣ, ಸಾಗಾಣಿಕೆ, ಕೋಲ್ಡ್ ಸ್ಟೋರೇಜ್ ಬೆಳೆಯಲಿದೆ, ರಫ್ತು ಹೆಚ್ಚಲು ಇದು ಅನುಕೂಲ. ಒಂದು ಲಕ್ಷ ಕೋಟಿ ಆಹಾರ ಧಾನ್ಯ ಪ್ರತಿ ವರ್ಷ ಹಾಳಾಗುತ್ತಿದೆ. ಇಲಿ, ಹೆಗ್ಗಣ, ತೇವಾಂಶ ಇತ್ಯಾದಿ ಕಾರಣದಿಂದ. ಮುಂದೆ ಇವೆಲ್ಲ ತಪ್ಪಲಿದೆ ಎಂದರು. 

ಬೆಲೆ ಕುಸಿದಾಗ ತಕ್ಷಣ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು. ಈಗ ಸರ್ಕಾರ ನಿಧಾನಗತಿಯಲ್ಲಿ ಖರೀದಿ ಕೇಂದ್ರ ತೆರೆಯುತ್ತಿದೆ. ರೈತರು ಅಷ್ಟರಲ್ಲಿ ಮಾರಿರುತ್ತಾರೆ. ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.

ಆಂಧ್ರದಲ್ಲಿ ಮೂರು ಹಳ್ಳಿಗೊಂದರಂತೆ ಖರೀದಿ ಕೇಂದ್ರ ಇದೆ. ಒದ್ದೆ ಭತ್ತವಾದರೂ ಖರೀದಿ ಮಾಡಿ ಆಮೇಲೆ ಒಣಗಿಸಿಕೊಂಡಿವೆ ಸರ್ಕಾರಿ ಸಂಸ್ಥೆಗಳು. ಅಂತಹ ರೈತಪರ ನಿಲುವು ಅಗತ್ಯ ಎಂದು ಅವರು ಹೇಳಿದರು. 

  • ಬೆಳೆ ವೈವಿಧ್ಯ ಕರ್ನಾಟಕದಲ್ಲಿದೆ, ಇಲ್ಲಿ 92 ಬೆಳೆಗಳಿವೆ. ಉಪ್ರ, ಪಂಜಾಬ್, ಹರಿಯಾಣದಲ್ಲಿ 10 ಬೆಳೆಗಳಿರಬಹುದು.
  • ಪಿ ಡಿ ಎಸ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಹೊಸ ಕಾನೂನಿನಿಂದ ಏನೂ ತೊಂದರೆಯಿಲ್ಲ.
  • ಮೂಲಭೂತ ಸೌಕರ್ಯಗಳನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಬ್ಯಾಡಗಿಯಲ್ಲಿ 100 ಕೋಲ್ಡ್ ಸ್ಟೋರೇಜ್ ಬೇಕು. ಕೇವಲ 25 ಇವೆ. ಖಾಸಗಿಯವರಿಗೆ ಪಿಪಿಪಿ ಮಾಡೆಲ್ ನಲ್ಲಿ ಇದನ್ನು ನಿರ್ಮಿಸಲು ಹೇಳಿದರೆ ಉತ್ತಮ
  • ಎಪಿಎಂಸಿ ಎಂಬುದು ರಾಜಕೀಯ ವ್ಯವಸ್ಥೆಯಾಗಿದೆ. ಜಿಲ್ಲೆಗೆ ಎರಡೇ ಸಾಕು. ಅವುಗಳನ್ನು ಉತ್ತಮವಾಗಿ ನಿರ್ವಾಹಿಸಿದರೆ ಸ್ಪರ್ಧೆ ಮಾಡಲು ಸಾಧ್ಯ. 
  • ಬೆಲೆ ಸ್ಥಿರೀಕರಣ ನಿಧಿ ಅಗತ್ಯ. ಆಂಧ್ರಪ್ರದೇಶ ಸರ್ಕಾರ ಬಜೆಟ್ ನಿಂದ ಇದನ್ನು ಕೊಡುತ್ತಿದೆ.
  • ಎ ಬಿ ಸಿ ಡಿ ಹೀಗೆ ಎಲ್ಲ ಗುಣಮಟ್ಟದ್ದನ್ನು ಖರೀದಿ ಮಾಡಬೇಕು ಎಂದು ಕಾಂಟ್ರಾಕ್ಟ್ ಫಾರ್ಮಿಂಗ್ ಕಾನೂನಿನಲ್ಲಿ ಸೇರಿಸಬೇಕು. ಆಗ ರೈತರು ಎಲ್ಲವನ್ನೂ ಒಂದೇ ಕಂಪೆನಿಗೆ ಮಾರಬಹುದು. ಇಲ್ಲವಾದರೆ, ಸಿ ಮತ್ತು ಡಿ ದರ್ಜೆಯ ಉತ್ಪನ್ನ ಮಾರಲು ಬೇರೆಡೆಗೆ ಹೋಗಬೇಕಾಗುತ್ತದೆ.

ಸಫಲ್ ಒಂದು ಯಶಸ್ವಿ ಮಾದರಿ. ಸ್ಥಾಪಿತ ಹಿತಾಸಕ್ತಿಯ ಕೆಲವು ವ್ಯಾಪಾರಿಗಳು ಇದನ್ನು ಬಹಿಷ್ಕರಿಸಿದರು. ಸಫಲ್ ಅನ್ನು ಬಲಪಡಿಸಬೇಕು: ಪ್ರದೀಪ್ ಪೂವಯ್ಯ

  • ಕೃಷಿ ಸಾಲದ ಬಡ್ಡಿ ಹೆಚ್ಚು. MSME, ಅಥವಾ ಬ್ಯುಸಿನೆಸ್ ಗೆ ಕಸಿಮೆ ದರದಲ್ಲಿ ಸಾಲ ಕೊಡ್ತಾರೆ. ಆಂಧ್ರದಲ್ಲಿ ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿದರೆ ಬಡ್ಡಿ ಸರ್ಕಾರ ಕಟ್ಟುತ್ತೆ.
  • ಬ್ರೆಜಿಲ್ ಕೃಷಿ ಜಿಡಿಪಿ 40%. 4% ಬಡ್ಡಿಯಲ್ಲಿ ಸಾಲ.
  • ಸಬ್ಸಿಡಿ ಕೊಡದಿದ್ದರೂ ಪರ್ವಾಗಿಲ್ಲ. ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಬೇಕು.
  • ಎಫ್ ಪಿ ಒ ಗಳನ್ನು ಬಲಪಡಿಸಬೇಕು. ಎಫ್ ಪಿ ಒ ಗೆ ಒಂದು ಬ್ರಾಂಡ್ ಇರುತ್ತೆ. ಅವರು ನೇರವಾಗಿ ಯಾವುದೇ ಕಂಪೆನಿಗೆ ಮಾರಬಹುದು.
  • ಎ ಪಿ ಎಂ ಸಿ ಗೆ ಚುನಾವಣೆ ಬೇಡ. ರಾಜಕೀಯ, ಲಂಚ ಇಂದು ಹೆಚ್ಚಿದೆ.

ಭೂ ಸುಧಾರಣಾ ಕಾಯ್ದೆ ಬಗ್ಗೆ ಮಾತನಾಡಿದ ವಕೀಲ ರಾಘವೇಂದ್ರ ಶ್ರೀವತ್ಸ ಅವರು ಈ ಮೊದಲೂ ಕಾನೂನಿನ ಲೋಪಗಳನ್ನು ಬಳಸಿಕೊಂಡು ರಾಜಕಾರಣಿಗಳು, ಉದ್ಯಮಿಗಳು ಕೃಷಿ ಜಮೀನನ್ನು ಖರೀದಿಸಿ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಈಗ ನಿರ್ಬಂಧಗಳನ್ನು ತೆಗೆದಿದ್ದರಿಂದ ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂದರು.

ತಮ್ಮ ಅಭಿಪ್ರಾಯ ಹಂಚಿಕೊಂಡ ಡಾ. ಪ್ರಕಾಶ್ ಕಮ್ಮರಡಿ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ಅಗತ್ಯ, ತಮ್ಮ ಪಡಿತರ ವಿತರಣೆಗಾಗಿ ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ರೈತರಿಂದ ಧಾನ್ಯಗಳನ್ನು ಖರೀದಿಸುವಂತೆ ಕಾನೂನಿನಲ್ಲಿ ತಿದ್ದುಪಡಿ ಅಗತ್ಯ ಎಂದರು. ಮುಂದುವರಿದು, ಚುನಾಯಿತ ಸಂಸ್ಥೆಯಾದ ಎಪಿಎಂಸಿಯ ಪಾತ್ರ ಈ ಕಾನೂನಿನಿಂದಾಗಿ ದುರ್ಬಲವಾಗಲಿದೆ ಎಂದರು. ಅಷ್ಟಕ್ಕೂ, ರಾಜ್ಯಪಟ್ಟಿಯ ವಿಷಯವಾದ ಕೃಷಿ ಮತ್ತು ಮಾರುಕಟ್ಟೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕಾನೂನು ಜಾರಿ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಮಾತನಾಡಿದ ಹರಿಪ್ರಕಾಶ್ ಕೋಣೆಮನೆ ಅವರು, ಸರ್ಕಾರದ ಪ್ರಮುಖರಿಗೆ ರೈತರ ಹಿತಾಸಕ್ತಿ ಕಾಪಾಡುವ ಇರಾದೆಯಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಅಧಿಕಾರಿಗಳು ಮಂತ್ರಿಗಳ ದಾರಿ ತಪ್ಪಿಸುವುದರಿಂದ ಕಾನೂನುಗಳು ರೈತರಿಗೆ ಮಾರಕವಾಗುವ ಸಾಧ್ಯತೆಗಳಿರುತ್ತವೆ. ಆರ್ ಸಿ ಇ ಪಿ ಒಪ್ಪಂದಕ್ಕೆ ಇನ್ನೇನು ಸಹಿ ಹಾಕುವುದರಲ್ಲಿದ್ದ ಕೇಂದ್ರ ಸರ್ಕಾರ ಸೂಕ್ತ ಸಂದರ್ಭದಲ್ಲಿ ಮಾಧ್ಯಮಗಳ ಮಧ್ಯಪ್ರವೇಶದಿಂದ ಎಚ್ಚರಗೊಂಡಿತು ಎಂದರು. ಈಗ ಬಂದಿರುವ ಕಾನೂನುಗಳು ಮೊದಲ ಹೆಜ್ಜೆ, ಎಚ್ಚರ ವಹಿಸದಿದ್ದರೆ, ಕ್ರಮೇಣ ಕೃಷಿಯಲ್ಲಿ ಕಾರ್ಪೊರೇಟ್ ಕಂಪೆನಿಗಳ ಹಿಡಿತ ಮೇಲಾಗುತ್ತದೆ ಎಂದು ಎಚ್ಚರಿಸಿದರು.

ಸತೀಶ್ ಗೌಡ ಮಾತನಾಡಿ, ಕೃಷಿಕರಿಗೆ ಇನ್ನೂ ಸೌಲಭ್ಯಗಳನ್ನು ಕೊಡುವ ಬದಲು ಶ್ರೀಮಂತರಿಗೆ ಅನುಕೂಲ ಮಾಡುವ ಕಾನೂನನ್ನು ಸರ್ಕಾರ ತಂದಿದೆ. ಉದಾಹರಣೆಗೆ ಹತ್ತು ವರ್ಷ ಕೃಷಿ ಮಾಡುವುದು ಕಡ್ಡಾಯ. ಆಮೇಲೆ ಮಾತ್ರ ಭೂ ಪರಿವರ್ತನೆ ಅಂತ ನಿಯಮ ಹಾಕಬಹುದಿತ್ತು. ಅಥವಾ ಬಂಜರು ಭೂಮಿಗೆ ಮಾತ್ರ ಈ ನಿಯಮ ಸಡಿಲ ಮಾಡಬಹುದಿತ್ತು. ಈಗ ಮಾಡಿರುವುದನ್ನು ನೋಡಿದರೆ, ಈಗಾಗಲೇ ಜಮೀನು ಖರೀದಿಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕೆಲವರಿಗೆ ಸಹಾಯ ಮಾಡಲು ಕಾನೂನು ತಂಡ ಹಾಗಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಗೌತಮ್ ಚಂದ್ ಅವರು, ಕೃಷಿಕರ ಜೊತೆ ವಕೀಲರ ಸಮೂಹ ಇದೆ. ಇದು ವೈಯಕ್ತಿಕ ಹಿತಾಸಕ್ತಿಯ ವಿಚಾರವಲ್ಲ. ಜನರ ಜೀವನದ ವಿಚಾರ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಕೃಷಿಕರಿಗೆ ಅಭಯ ಕೊಟ್ಟರು.

The post ರಾಜ್ಯದ ಭೂಸುಧಾರಣೆ ಕಾಯ್ದೆಯಿಂದ ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಲು ಭ್ರಷ್ಟರಿಗೆ ಸುಲಭವಾಗಲಿದೆ : ಅಶೋಕ್ ಬಿ ಹಿಂಚಗೇರಿ first appeared on Vishwa Samvada Kendra.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಸಮೀಕ್ಷೆ : #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ವಿಶ್ವ ಸಂವಾದ ಕೇಂದ್ರವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಸಮೀಕ್ಷೆ ನಡೆಸುತ್ತಿದೆ. ಆನ್ಲೈನ್ ಮತಗಳ ಮೂಲಕ ನಿಮ್ಮ ಆಯ್ಕೆಗಳನ್ನು ದಾಖಲಿಸಬಹುದಾಗಿತಿದೆ.

ಸಾವಿರ ಸಂಖ್ಯೆಯಲ್ಲಿ ಈ ಪ್ರಶ್ನೆಗಳಿಗೆ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ನೆಚ್ಚಿನ ಕನ್ನಡ ಸಿನಿಮಾ, ನೆಚ್ಚಿನ ಸಿನಿಮಾ ಹಾಡು ಎಂಬ ಪ್ರಶ್ನೆಗಳನ್ನು ಮುಂದಿಡದೆ ಯಾವ ಚಿತ್ರ ಕನ್ನಡವನ್ನು ಹೆಚ್ಚು ಪ್ರತಿನಿಧಿಸುತ್ತದೆ, ಯಾವ ಗಾಯಕಿಯ ಹಾಡು ಸರ್ವಕಾಲಕ್ಕೂ ಉಳಿಯುತ್ತದೆ ಎಂಬಂತಹ ಪ್ರಶ್ನೆಗಳು ಈಗಾಗಲೇ ಪ್ರಕಟಿಸಿದ್ದೇವೆ.

ಆಯ್ಕೆ ನಿರ್ಧರಿಸುವ ಸಮಯವಾಗಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳು ಇಂತಿವೆ. ಇನ್ನೂ ಪ್ರಶ್ನೆಗಳು ನಿಮ್ಮ ಮುಂದೆ ಬರಲಿವೆ. ಜನರ ಅಭಿಪ್ರಾಯಗಳನ್ನೂ ನಿಮ್ಮ ಮುಂದೆ ಇಡಲಿದ್ದೇವೆ. ಹರಿದು ಬರುತ್ತಿವೆ.

#ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ ಈ ಹ್ಯಾಶ್ ಟ್ಯಾಗ್ ಬಳಸಿ ನಮ್ಮ ಟ್ವಿಟರ್, ಫೇಸ್ಬುಕ್ ನಲ್ಲಿ ಹುಡುಕಿದರೆ ನಿಮಗೆ ಪ್ರಶ್ನೆಗಳು ಸಿಗುತ್ತವೆ . ನಿಮ್ಮ ಅಭಿಪ್ರಾಯಗಳು ಹರಿದು ಬರಲಿ.

The post ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಸಮೀಕ್ಷೆ : #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಅಪೂರ್ವ ಸೇವೆ

$
0
0

ರಾಜ್ಯದಿಂದ ರಾಜ್ಯಕ್ಕೆ ಕೆಲಸದ ಸಲುವಾಗಿ ಜನರು ವಲಸೆ ಹೋಗುವುದು ಸಾಮಾನ್ಯ. ತಮ್ಮ ಹೊಟ್ಟೆ ಪಾಡು, ತಮ್ಮ ಕುಟುಂಬ, ಊರಲ್ಲಿರುವ ತಂದೆ ತಾಯಿಯರನ್ನು ಸಾಕುವುದು ಮತ್ತೆಲ್ಲೋ ಸಾಲ ತೀರಿಸಬೇಕು. ಕಷ್ಟವಾದರೇನಂತೆ ಊರು ಬಿಟ್ಟು ಕೆಲಸ ಹುಡುಕೋಣವೆಂದು, ತಾವಿದ್ದ ಊರಿನಲ್ಲಿ ಕೆಲಸವೂ ಸಿಗದಿದ್ದಾಗ ಧಿಡೀರನೆ ಊರು ಬಿಟ್ಟು ಹೊರಟುಬಿಡುತ್ತಾರೆ. ಹಾಗೆ ಕರ್ನಾಟಕಕ್ಕೂ ವಲಸೆ ಬಂದು ಜೀವನ ಕಟ್ಟಿಕೊಳ್ಳುವವರು ಸಾಕಷ್ಟು ಮಂದಿಯಿದ್ದಾರೆ. ಕೆಲವರು ಹವಾನಿಯಂತ್ರಿತ ಆಫೀಸ್ ಒಳಗೆ ಕುಳಿತು ಕೆಲಸ ಮಾಡಿ ದುಡ್ಡು ಎಣಿಸಿಕೊಳ್ಳುತ್ತಾರೆ; ಹಲವಾರು ಮಂದಿ ಕೆಲಸ ಅರಸಿ ಬರುವುದು ಸಣ್ಣ ಪುಟ್ಟ ಕೆಲಸಕ್ಕಾಗಿಯೇ. ಗಾರ್ಮೆಂಟ್ಸ್, ಗ್ರೆನೈಟ್, ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಎಂಬ ಹೆಸರಿನಲ್ಲಿ ಭಾರತದ ಮೂಲೆ ಮೂಲೆಗಳಿಂದ ಕರ್ನಾಟಕಕ್ಕೆ ಬರುತ್ತಾರೆ. ಹವಾನಿಯಂತ್ರಿತ ಕಚೇರಿಯಲ್ಲಿ ಕೆಲಸ ಮಾಡುವವರು ಇಲ್ಲಿಯ ಭಾಷೆ ಕಲಿಯಲೇ ಬೇಕು ಎಂಬ ತೀವ್ರ ಹಠ ಇಟ್ಟುಕೊಂಡಿರುವುದಿಲ್ಲ. ವ್ಯವಹಾರಕ್ಕೆ ಇಂಗ್ಲಿಷ್, ಹಿಂದಿ ಬಂದರೆ ಸಾಕೆ ಸಾಕು. ಕನ್ನಡಿಗರು ಸ್ವಲ್ಪ ಉದಾರವಾದಿಗಳೇ ಅಲ್ಲವೇ? ಅಂಗಡಿ, ಮಾರುಕಟ್ಟೆಗೆ ಇವರು ಹೋದರೆ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿಯೇ ಸಂವಹನ. ಕನ್ನಡ ಕಲಿಯಲೇ ಬೇಕು ಎಂಬ ವಾಂಛೆ ವಲಸೆ ಬಂದವರಿಗೂ ಇರುವುದಿಲ್ಲ. ಅವರಿಗೆ ಕನ್ನಡ ಕಲಿಸಬೇಕೆಂಬ ಉತ್ಸಾಹವನ್ನು ನಾವೂ ತೋರುವುದಿಲ್ಲ.

ಶ್ರೀ ನರಸಿಂಹರಾಜು. ಊರು: ತುಮಕೂರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ಊರಿಗೆ ಹತ್ತಿರವಿರುವ ಡಾಬಸ್ಬೇಟೆ ಹಲವು ವರ್ಷಗಳಿಂದ ಬೇರೆ ಊರುಗಳಿಂದ – ವಿಶೇಷವಾಗಿ ಒಡಿಶಾ, ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳಿಂದ ಕೆಲಸ ಅರಸಿ ಬರುವವರನ್ನು ನೋಡುತ್ತಲಿದ್ದರು. ಆದರೆ ಸುಮ್ಮನೆ ಕೂರಲಿಲ್ಲ. ಕಳೆದ ಐದು ವರ್ಷಗಳಿಂದ ಹೀಗೆ ತಮ್ಮ ಊರಿಗೆ ವಲಸೆ ಬರುವವರಿಗೆ ಕನ್ನಡ ಹೇಳಿಕೊಡುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಬಂದವರಿಗೆ ಕನ್ನಡ ಹೇಳಿಕೊಡಬೇಕು ಎಂಬ ಯೋಚನೆ ಬಂದದ್ದಾದರೂ ಹೇಗೆ ಎಂದು ಕೇಳಿದರೆ, ನರಸಿಂಹ ರಾಜು ಹೇಳುತ್ತಾರೆ “ಬೆಂಗಳೂರಿನಂತಹ ಊರುಗಳಲ್ಲಿ ಹಿಂದಿಯಲ್ಲೋ ಇಂಗ್ಲಿಷ್ ನಲ್ಲಿಯೂ ಮಾತನಾಡುವ ಕನ್ನಡಿಗರು ಸಿಗುತ್ತಾರೆ. ತುಮಕೂರಿನಲ್ಲಿ ಆ ಸಂಖ್ಯೆ ಕಡಿಮೆ. ಅಲ್ಲದೇ ಅನ್ಯ ರಾಜ್ಯಗಳಿಂದ ಬರುವವರು ನಮ್ಮ ಸೊಗಸಾದ ಭಾಷೆ ಕಲಿತರೆ ಸಂವಹನಕ್ಕೆ ಸುಲಭವಲ್ಲವೇ?” ಅಲ್ಲದೆ, ಪ್ರತಿಬಾರಿಯೂ ಹೊರಗಿನಿಂದ ಬಂದವರು ಎಂಬುದನ್ನೇ ಹೇಳಿ ಅವರಿಗೆ ನಮ್ಮ ಕೈಲಾದ ಸಹಾಯ ಮಾಡದಿದ್ದರೆ ಹೇಗೆ ಎಂದು ಯೋಚಿಸಿ ನರಸಿಂಹ ರಾಜು ಅವರು ಶನಿವಾರ ಭಾನುವಾರಗಳಂದು ಇವರಿದ್ದಲ್ಲಿಗೆ ಹೋಗಿಯೋ ಅಥವಾ ಅವರು ಇವರಲ್ಲಿಗೆ ಬಂದು ಭಾಷೆ ಕಲಿಯುವ ವ್ಯವಸ್ಥೆ ರೂಪಿಸಿದ್ದಾರೆ.

ಕೆಲವರಿಗೆ ವ್ಯವಹಾರಕ್ಕೆ ಬೇಕಾದ ಕನ್ನಡ ಕಲಿತರೆ ಸಾಕು. ಮತ್ತೆ ಕೆಲವರು ಜೀವನವನ್ನು ಇಲ್ಲಿಯೇ ಕಟ್ಟಿಕೊಳ್ಳಬೇಕು ಎಂದು ಪಾತ್ರೆ ಪಗಡಿ ಸಮೇತ ಈ ಊರಿಗೆ ಬಂದವರಿರುತ್ತಾರೆ. ಅವರ ಮಕ್ಕಳಿಗೂ ಕನ್ನಡ ಹೇಳಿಕೊಡುತ್ತಾರೆ ನರಸಿಂಹರಾಜು. ಹೀಗೆ ವಲಸೆ ಬಂದ ಕಾರ್ಮಿಕರ ಮಕ್ಕಳೂ ಕನ್ನಡವನ್ನು ಚೆನ್ನಾಗಿಯೇ ಕಲಿತಿದ್ದಾರೆ. ಕೇವಲ ಮಾತುಗಳಲ್ಲಿ ಎಲ್ಲರೂ ಕನ್ನಡವನ್ನಷ್ಟೇ ಮಾತನಾಡಬೇಕು ಎಂಬುದನ್ನು ಹೇಳುವವರ ಮಧ್ಯದಲ್ಲಿ, ಅನ್ಯ ಭಾಷಿಗರು ಭಾರತದವರೇ ಅಲ್ಲ ಎಂಬಂತೆ ವರ್ತಿಸುವವರ ಮಧ್ಯದಲ್ಲಿ, ಈ ತರಹದ ಸೇವೆ ಅಪೂರ್ವ ಹಾಗೂ ಅನುಪುಮ. ಇವರಿಂದ ಪ್ರೇರಿತರಾಗಿ ಇನ್ನಷ್ಟು ಜನರಿಗೆ ಕನ್ನಡ ಕಲಿಸುವ ಕೆಲಸಕ್ಕೆ ನಾವೆಲ್ಲರೂ ಮುಂದಾಗೊಣ. ನರಸಿಂಹರಾಜು ಅವರ ಕಾವ್ಯ ಸೇವೆಗೆ ಹಾಗೂ ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ಸೇವೆಯನ್ನು ಪರಿಗಣಿಸಿ ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡ ಸೇವಾ ರತ್ನ’ ಪ್ರಶಸ್ತಿಯನ್ನು ನರಸಿಂಹರಾಜು ಅವರಿಗೆ ಘೋಷಿಸಿದೆ. ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ ಅವರನ್ನು ಲಿ ಸನ್ಮಾನಿಸಲಾಗಿದೆ.

ನರಸಿಂಹರಾಜು ಅವರ ಕನ್ನಡ ಸೇವೆ ಮತ್ತಷ್ಟು ಮೈಲಿಗಲ್ಲು ದಾಟಲಿ ಎಂಬುದು ವಿಶ್ವ ಸಂವಾದ ಕೇಂದ್ರದ ಹಾರೈಕೆ.

The post ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಅಪೂರ್ವ ಸೇವೆ first appeared on Vishwa Samvada Kendra.

‘ನನ್ನ ಹೆಮ್ಮೆಯ ಕರ್ನಾಟಕ’ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ 2020 ಫಲಿತಾಂಶ

$
0
0

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ಶಾಲಾ ವಿದ್ಯಾರ್ಥಿಗಳಿಗಾಗಿ ‘ನನ್ನ ಹೆಮ್ಮೆಯ ಕರ್ನಾಟಕ’ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಗೆ 5 ದೇಶಗಳು, ಭಾರತದ 6 ರಾಜ್ಯಗಳು ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಒಟ್ಟು 2210 ಶಾಲಾ ವಿದ್ಯಾರ್ಥಿಗಳು ತಮ್ಮ ಭಾಷಣವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ವಿವಿಧ ಹಂತಗಳ ಮೌಲ್ಯಮಾಪನದ ನಂತರ ಈ ಕೆಳಗಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಬಹುಮಾನ ವಿಜೇತರು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ರಾಷ್ಟ್ರೋತ್ಥಾನ ಪರಿಷತ್ ತಿಳಿಸಿದೆ.

ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ಫಲಿತಾಂಶ

  1. ಪ್ರಥಮ ಬಹುಮಾನ: ಆಶಿಕಾ, 9ನೇ ತರಗತಿ, ಸರ್ಕಾರಿ ಪ್ರೌಢಶಾಲೆ ಸಿದ್ಧಾಪುರ, ಕುಂದಾಪುರ 576229
  2. ದ್ವಿತೀಯ ಬಹುಮಾನ : ಮೇಧಾ ಉಡುಪ, 7ನೇ ತರಗತಿ, ಪಿ.ಆರ್.ಎನ್. ಅಮೃತ ವಿದ್ಯಾಲಯ, ಹೆಬ್ರಿ, ಕಾರ್ಕಳ 576212
  3. ಮೂರನೇ ಬಹುಮಾನ : ಮಾನಸಿ, 8ನೇ ತರಗತಿ, ವೆಂಕಟ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು 560079

ಮೆಚ್ಚುಗೆ ಪಡೆದ ಭಾಷಣಗಳು

  1. ಯಶಸ್ವಿನಿ ಪಾಟೀಲ್, 6ನೇ ತರಗತಿ, ಬಸವೇಶ್ವರ ಅಂತಾರಾಷ್ಟ್ರೀಯ ಆಂಗ್ಲ ಮಾದ್ಯಮಶಾಲೆ, ಬಸವನ ಬಾಗೇವಾಡಿ, ವಿಜಯಪುರ 586203
  2. ಮನಸ್ವಿ, 4ನೇ ತರಗತಿ, ಸ.ಹಿ. ಪ್ರಾ. ಶಾಲೆ. ಕಲಂಬಾಡಿ ಪದವು, ಉಡುಪಿ 576 117
  3. ಸಿಂಚನಾ, 8ನೇ ತರಗತಿ, ಸೌಂದರ್ಯ ಸೆಂಟ್ರಲ್ ಸ್ಕೂಲ್, ನಾಗಸಂದ್ರ, ಬೆಂಗಳೂರು 560073
  4. ಬಿಂದು ಎಸ್.ಹೆಚ್., 6ನೇ ತರಗತಿ, ಸ.ಹಿ. ಪ್ರಾ. ಶಾಲೆ, ಬಗನಕಟ್ಟೆ, ಶಿಕಾರಿಪುರ, ಶಿವಮೊಗ್ಗ 577427
  5. ಅರ್ಚಿತಾ ಎಚ್.ಎಸ್., 8ನೇ ತರಗತಿ, ಶ್ರೀನಿಕೇತನ್ ಸ್ಕೂಲ್, ಶಿರಸಿ, ಉತ್ತರ ಕನ್ನಡ 581402
  6. ಶರಣ್ಯ ತಂತ್ರಿ, 9ನೇ ತರಗತಿ, ಸಂತ ಜೋಸೆಫರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ಮಣ್, ಉಡುಪಿ 576111
  7. ಈಶ್ವರಿ ಎನ್., 9ನೇ ತರಗತಿ, ಸಾಂದೀಪನಿ ಇಂಗ್ಲಿಷ್ ಪ್ರೌಢಶಾಲೆ, ಶಿವಮೊಗ್ಗ
  8. ಸಿಂಚನಾ ಎಸ್., 6ನೇ ತರಗತಿ, ಶ್ರೀಕುಮಾರನ್ ಚಿಲ್ಡ್ರನ್ಸ್ ಹೋಂ, ಟಾಟಾ ಸಿಲ್ಕ್ ಫಾರ್ಮ್, ಬೆಂಗಳೂರು 560004
  9. ಶಿವಾನಿ ವಿ., 9ನೇ ತರಗತಿ, ಲಯನ್ಸ್ ಅಕಾಡೆಮಿ ಶಾಲೆ, ಎಚ್.ಡಿ. ಕೋಟೆ, ಮೈಸೂರು, 571121
  10. ದೀಕ್ಷಾ, 6ನೇ ತರಗತಿ, ಗುರೂಜಿ ವಿದ್ಯಾನಿಕೇತನ ಶಾಲೆ, ಆನೆಕಲ್, ಬೆಂಗಳೂರು ದಕ್ಷಿಣ 562106

The post ‘ನನ್ನ ಹೆಮ್ಮೆಯ ಕರ್ನಾಟಕ’ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ 2020 ಫಲಿತಾಂಶ first appeared on Vishwa Samvada Kendra.

ರಾಜ್ಯೋತ್ಸವಕ್ಕೆ ಶಿವಮೊಗ್ಗದ ರಾಜಾರಾಮ್ ಬುಕ್ ಹೌಸ್ ಕಥೆ

$
0
0

ಇಂದು ಓದುಗರಿಗೆ ಪುಸ್ತಕ ಕೊಳ್ಳಲು ಅನೇಕ ಅವಕಾಶಗಳು ಲಭ್ಯವಿವೆ. ಅನೇಕ ಪುಸ್ತಕದಂಗಡಿಗಳು, ಆನ್ಲೈನ್ ಮಾರಾಟ ಮಳಿಗೆಗಳು, ಕಿಂಡಲ್ ರೀತಿಯ ಉಪಕರಣಗಳು, ಆಡಿಯೋ ಬುಕ್ಸ್, ನಗರಕೇಂದ್ರ ಗ್ರಂಥಾಲಯಗಳು, ವಿಕಿಪೀಡಿಯ, ಆನ್ಲೈನ್ ಎನ್ಸೈಕ್ಲೋಪಿಡಿಯಾ, ವೆಬ್ಸೈಟ್ಗಳು ಇತ್ಯಾದಿ ಇತ್ಯಾದಿ. ಆದರೆ ಸುಮಾರು 65 ವರ್ಷಗಳ ಹಿಂದೆ ಅದಾವುದೂ ಇರಲಿಲ್ಲ. ಸಾಹಿತ್ಯವನ್ನುಕೊಂಡು ಓದಬೇಕೆನ್ನುವ ಹಂಬಲ ಇರುವವರಿಗೆ ಸಾಹಿತ್ಯದ ಲಭ್ಯತೆ ಬಹಳ ಕಡಿಮೆ ಇತ್ತು. ಶಿವಮೊಗ್ಗದ ಓದುಗರಿಗೆ ಪುಸ್ತಕಗಳು ಮರೀಚಿಕೆಯೇ ಆಗಿದ್ದವು. ಆ ಕಾಲದಲ್ಲಿ ಶಿವಮೊಗ್ಗದ ಓದುಗರಿಗೆ ಉತ್ತಮ ರೀತಿಯ ಎಲ್ಲ ಅಭಿರುಚಿಯ ಸಾಹಿತ್ಯಗಳು, ಪುಸ್ತಕಗಳು ಲಭ್ಯವಾಗುವಂತಹ ಒಂದು ಪುಸ್ತಕದ ಅಂಗಡಿಯನ್ನು ಶಿವಮೊಗ್ಗದ ಪ್ರಖ್ಯಾತ ಗಾಂಧಿ ಬಜಾರ್ ಪ್ರವೇಶದ್ವಾರದಲ್ಲಿಯೇ ಪ್ರಾರಂಭ ಮಾಡಿದವರು ಶಿವಮೊಗ್ಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಕಾರ್ಯಕರ್ತರಾಗಿದ್ದಂತಹ ಶ್ರೀ ಕ. ನಾಗರಾಜರಾವ್ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, ಬಿಹಾರದ ರಾಜ್ಯಪಾಲರಾಗಿ ನಿವೃತ್ತರಾದ ಗೌರವಾನ್ವಿತ ಶ್ರೀ ರಾಮಾಜೋಯಿಸ್ ರವರು. ಕ.ನಾಗರಾಜ ಹೆಸರಿನ ಉತ್ತರಾರ್ಧವನ್ನು ಮತ್ತು ರಾಮಾಜೋಯಿಸ್ ಹೆಸರಿನ ಪೂರ್ವಾರ್ಧವನ್ನು ಸೇರಿಸಿ “ರಾಜಾರಾಮ್ ಬುಕ್ ಹೌಸ್” ಪ್ರಾರಂಭ ಮಾಡಿದರು.

ಹೀಗೆ ಶಿವಮೊಗ್ಗದ ಮೊದಲ ಪುಸ್ತಕದ ಅಂಗಡಿಯಾಗಿ ಪ್ರಾರಂಭವಾದದ್ದು, ಕಳೆದ 65 ವರ್ಷಗಳಿಂದ ಶಿವಮೊಗ್ಗದ ಸಾಹಿತ್ಯಾಸಕ್ತರ, ಓದುಗರ ನೆಚ್ಚಿನ ಮೆಚ್ಚಿನ ಆಕರವಾಗಿ ಇಂದಿಗೂ ತನ್ನ ಸೇವೆಯನ್ನು ಸಲ್ಲಿಸುತ್ತಲೇ ಇದೆ. ಇಂದು ಶ್ರೀ ಕ.ನ ಮಂಜುನಾಥ್, ದಿವಂಗತ ನಾಗರಾಜರವರ ಮಗ, ಈ ಪುಸ್ತಕದ ಅಂಗಡಿಯನ್ನು ನಡೆಸುತ್ತಿದ್ದಾರೆ. ತನ್ನ ಮೂಲಸ್ಥಾನದಿಂದ ಹೊಸ ಸ್ಥಳಕ್ಕೆ ಸ್ಥಿತ್ಯಂತರವಾಗಿ ಹೊಸರೂಪದೊಂದಿಗೆ, ಆಧುನಿಕ ಸೌಲಭ್ಯಗಳೊಂದಿಗೆ ಇಂದಿಗೂ ಶಿವಮೊಗ್ಗದ ಬಹು ಮೆಚ್ಚಿನ ಪುಸ್ತಕದ ಅಂಗಡಿಯಾಗಿ ಗ್ರಾಹಕರನ್ನು, ಓದುಗರನ್ನು ಸೆಳೆಯುತ್ತಲೇ ಇದೆ. 1943-44 ರಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭವಾದ ಆರೆಸ್ಸೆಸ್ನ ದುರ್ಗಿ ಶಾಖೆಯ ಮೂಲಕ ಸಂಘ ಪ್ರವೇಶ ಮಾಡಿದ ಶ್ರೀ ನಾಗರಾಜರಾವ್ ಮೈಸೂರಿನಲ್ಲಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಸಂಘಕ್ಕೆ ಇನ್ನಷ್ಟು ಹತ್ತಿರವಾದರು.

ಸಂಘದ ಮೇಲೆ ಪ್ರತಿಬಂಧ ಇದ್ದ ಸಂದರ್ಭದಲ್ಲಿ ಪ್ರಥಮ ಬಿಎಸ್ಸಿ ವಿದ್ಯಾರ್ಥಿಯಾಗಿದ್ದ ಇವರು ಜೈಲುವಾಸವನ್ನೂ ಅನುಭವಿಸಿದರು. ನಂ ಮಧ್ವರಾವ್, ಮೈ ಚ ಜಯದೇವ್ ಮೊದಲಾದವರ ಸಹವಾಸ ಸಿಕ್ಕಿತ್ತು. ನಂತರ ನಾಗಮಂಗಲದಲ್ಲಿ ವಿಸ್ತಾರಕ್ಕಾಗಿ ಕೂಡ ಕೆಲಸ ಮಾಡಿದರು. ಮದ್ರಾಸಿನಲ್ಲಿ ಪ್ರಥಮ ವರ್ಷ ಸಂಘ ಶಿಕ್ಷಾ ವರ್ಗ ಪೂರೈಸಿದರು. ಭದ್ರಾವತಿಯಲ್ಲಿ ನಡೆದ ಜನಸಂಘದ ಕಾರ್ಯಕ್ರಮದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ್ದರು. ಸ್ವರ್ಗೀಯ ಯಾದವರಾವ್ ಜೋಶಿಯವರು ಸಂಘದ ದ್ವಿತೀಯ ಸರಸಂಘಚಾಲಕರಾದ ಶ್ರೀ ಗುರೂಜಿಯವರಿಗೆ ಇವರನ್ನು ‘ಕರ್ನಾಟಕದ ಬುದ್ಧಿಜೀವಿ’ ಎಂದೇ ಪರಿಚಯ ಮಾಡಿಕೊಡುತ್ತಿದ್ದರು. ಇವರೊಬ್ಬರು ಕವಿ, ರಾಗ ಸಂಯೋಜಕ ಮತ್ತು ಹಾಡುಗಾರ. ಅನೇಕ ದೇಶಭಕ್ತಿಗೀತೆಗಳ ರಚನೆಕಾರರು.

ಸರ್ವ ಸುಂದರ ನಾಡು ವೀರವರ್ಯರ ಬೀಡುಕರ್ಮಭೂಮಿಯ ನೋಡು ಭಾರತದೊಳಿಲ್ಲಿ… ಅವರ ಪ್ರಖ್ಯಾತ ರಚನೆ. ಶ್ರೀ ಗುರೂಜಿ ಅವರು ಶಿವಮೊಗ್ಗಕ್ಕೆ ಬಂದಾಗ ಯಾದವರಾವ್ ಜೋಶಿಯವರ ಅಪೇಕ್ಷೆಯಂತೆ ‘ಸ್ವಾಗತವು ಸ್ವಾಗತವು ಪೂಜ್ಯ ಶ್ರೀ ಮಾಧವಗೆ ಸ್ವಾಗತವು ‘ ಗೀತೆಯನ್ನು ರಚಿಸಿ ಶ್ರೀ ಗುರೂಜಿ ಅವರ ಮುಂದೆ ಅವರೇ ಹಾಡಿದ್ದರು. ಹಿಂದೂಸ್ತಾನ್ ಸಮಾಚಾರ ಪತ್ರಿಕೆಗೆ ಪ್ರತಿನಿಧಿಯಾಗಿದ್ದರು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದಾಗ ವಿಶೇಷ ಬಾತ್ಮೀದಾರರಾಗಿ ಭಾಗವಹಿಸಿ ವಿಶ್ಲೇಷಣೆಯನ್ನು ಆರ್ಗನೈಸರ್ ಪತ್ರಿಕೆಗೆ ಬರೆದಿದ್ದರು. ಅದು ಮುಖಪುಟದಲ್ಲಿಯೇ ಪ್ರಕಟವಾಗಿತ್ತು. ಆರ್ಗನೈಸರ್ ಮತ್ತು ವಿಕ್ರಮ ಪತ್ರಿಕೆಗಳಿಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ನಾಗರಾಜರಾವ್ ರವರೇ ಪ್ರಾರಂಭಮಾಡಿದ ‘ಮಲ್ನಾಡ್ ವಾರ್ತಾ’ ಪತ್ರಿಕೆಗೆ ತಾವೇ ಪ್ರಕಾಶಕರು ಮತ್ತು ಸಂಪಾದಕರಾಗಿ ಹಾಗೂ ಶ್ರೀ ರಾಮಾಜೋಯಿಸ್ ರವರು ಸಹ ಸಂಪಾದಕರಾಗಿ ಕೆಲಸ ಮಾಡಿದ್ದರು. 1965-66ರಲ್ಲಿ ಅಮೆರಿಕಾ ಪ್ರವಾಸ ಮಾಡಿ ಅಲ್ಲಿನವರಿಗೆ ಕನ್ನಡ ಕಲಿಸಲು ಆರು ತಿಂಗಳುಗಳ ಕಾಲ ಅಮೆರಿಕದಲ್ಲಿ ಉಳಿದಿದ್ದರು. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಭಾರತ-ಭಾರತಿ ಪುಸ್ತಕ ಸಂಗ್ರಹದಲ್ಲಿ ಶ್ರೀ ಬಾಯಿ ಪರಮಾನಂದ ರ ಬಗ್ಗೆ ಪುಸ್ತಕವನ್ನು ಕ.ನಾಗರಾಜರು ಬರೆದಿದ್ದಾರೆ. ಹೀಗೆ 50- 60ರ ದಶಕದಲ್ಲಿಯೇ ಕನ್ನಡದ ಸೇವೆಯನ್ನು ಶಿವಮೊಗ್ಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರೀರ್ವರು ಮಾಡಿದ್ದರು. ಇಂದು ಕನ್ನಡ ರಾಜ್ಯೋತ್ಸವ, ಹಾಗಾಗಿ ಇದೆಲ್ಲ ಮತ್ತೆ ನೆನಪಾಯಿತು.

  • ಮಧುಕರ ಮತ್ತೂರು, ಶಿವಮಗ್ಗ

The post ರಾಜ್ಯೋತ್ಸವಕ್ಕೆ ಶಿವಮೊಗ್ಗದ ರಾಜಾರಾಮ್ ಬುಕ್ ಹೌಸ್ ಕಥೆ first appeared on Vishwa Samvada Kendra.

ಅರ್ನಬ್ ಗೋಸ್ವಾಮಿ ವಿರುದ್ಧ ನಡೆದ ದಬ್ಬಾಳಿಕೆ, ಬಂಧನ : ವಿ ಎಚ್ ಪಿ ಖಂಡನೆ

$
0
0

ಶ್ರೀ ಕೇಶವ ಹೆಗಡೆ,
ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷದ್ ಅವರ ಪತ್ರಿಕಾ ಪ್ರಕಟಣೆ

ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ನಡೆದ ದಬ್ಬಾಳಿಕೆ ಹಾಗೂ ಅವರನ್ನು ಇಂದು ಬಂಧಿಸುವ ಪ್ರಯತ್ನ ಪತ್ರಕರ್ತರಿಗೆ ಭಯ ಹುಟ್ಟಿಸುವಂತಹದ್ದಾಗಿದೆ. ೧೯೭೫ರ ತುರ್ತು ಪರಿಸ್ಥಿತಿಯ ನೆನಪನ್ನು ಮಾಡಿಸುವ ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ. ಅರ್ನಾಬ್ ಗೋಸ್ವಾಮಿ ವಿವಿಧ ವಿಷಯಗಳಲ್ಲಿ ರಾಜಕೀಯ ಹಾಗೂ ಇನ್ನಿತರ ಪ್ರಭಾವಿ ವ್ಯಕ್ತಿಗಳ ಭ್ರಷ್ಟತೆಯನ್ನು ಬಯಲಿಗೆಳೆದಿರುವುದು ಎಲ್ಲರ ಕೆಂಗಣ್ಣಿಗೆ ಪಾತ್ರವಾಗಿದೆ. ರಾಜಕೀಯ ಹಾಗೂ ಸ್ವಾರ್ಥ ಹಿತಾಸಕ್ತಿಯ ಕೈಗೊಂಬೆಯಾಗಿರುವ ಮುಂಬೈ ಪೊಲೀಸ್ ಆಯುಕ್ತರಾದ ಪರಂ ಬೀರ್ ಸಿಂಗ್ ಸಂವಿಧಾನದ ಚೌಕಟ್ಟು ಮೀರಿ ದ್ವೇಷಪೂರಿತರಾಗಿ ಅರ್ನಬ್ ಗೋಸ್ವಾಮಿಯವರ ವಿರುದ್ಧ ಹಗೆ ಸಾಧಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಏಕಪಕ್ಷವಾಗಿ ವರ್ತಿಸುತ್ತಿರುವ ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸ್ ಆಯುಕ್ತರಾದ ಪರಂ ಬೀರ್ ಸಿಂಗ್ ಹಾಗೂ ಅಲ್ಲಿನ ಆರಕ್ಷಕರು ಸಭ್ಯತೆಯಿಂದ ವರ್ತಿಸಬೇಕು ಹಾಗೂ ಈ ವಿಷಯವಾಗಿ ಸಂಪೂರ್ಣ ನಿಷ್ಪಕ್ಷವಾದ ತನಿಖೆಯಾಗಬೇಕು ಎಂದು ವಿ ಎಚ್ ಪಿ ಆಗ್ರಹಿಸುತ್ತದೆ.

ಶ್ರೀ ಕೇಶವ ಹೆಗಡೆ,
ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷದ್ ಅವರ ಪತ್ರಿಕಾ ಪ್ರಕಟಣೆ

ಶ್ರೀ ಕೇಶವ ಹೆಗಡೆ



The post ಅರ್ನಬ್ ಗೋಸ್ವಾಮಿ ವಿರುದ್ಧ ನಡೆದ ದಬ್ಬಾಳಿಕೆ, ಬಂಧನ : ವಿ ಎಚ್ ಪಿ ಖಂಡನೆ first appeared on Vishwa Samvada Kendra.


ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ!

$
0
0

ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ!

ನವೆಂಬರ್ ೧೦, ೨೦೧೫ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವವಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ಟಿಪ್ಪು ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸಿತು. ಅಲ್ಲಿಯವರೆಗೆ ಮುಸ್ಲಿಂ ಓಲೈಕೆ ಕರ್ನಾಟಕಕ್ಕೆ, ಭಾರತಕ್ಕೆ ಹೊಸದೇನೂ ಆಗಿರಲಿಲ್ಲ. ಸಾಕಷ್ಟು ಓಲೈಕೆ ರಾಜಕಾರಣವನ್ನು ಅಲ್ಲಿಯವರೆಗೆ ಜನರು ನೋಡಿದ್ದರು. ಆದರೆ ಒಬ್ಬ ಕ್ರೂರ ಹಿನ್ನಲೆಯುಳ್ಳ ಟಿಪ್ಪುವನ್ನು ನೆನೆಸಿಕೊಂಡು ಓಲೈಕೆಗೆ ಮುಂದಾಗಿದ್ದನ್ನು ಜನರು ಮೊದಲ ದಿನದಿಂದಲೇ ಪ್ರತಿಭಟಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕಾರಣ ಓಲೈಕೆಯ ಅಮಲು ನಾಯಕರನ್ನು ಕಟ್ಟಿಹಾಕಿತ್ತು. ನವೆಂಬರ್ ತಿಂಗಳು ಕರ್ನಾಟಕ, ಕನ್ನಡವನ್ನು ಸಂಭ್ರಮಿಸಲೋಸುಗವೇ ಮೀಸಲು. ಆ ತಿಂಗಳಿನಲ್ಲಿ ಟಿಪ್ಪುವಿನಂತಹ - ಕನ್ನಡವನ್ನು ಧಿಕ್ಕರಿಸಿ ಪರ್ಷಿಯನ್ ಭಾಷೆಯನ್ನು ಕಡ್ಡಾಯಗೊಳಿಸಿದವನ, ಕನ್ನಡಿಗ ಹಿಂದೂ-ಕ್ರಿಶ್ಚಿಯನ್ನರ ನರಮೇಧ ನಡೆಸಿದ ಮತಾಂಧನ ಜಯಂತಿ ಆಚರಿಸಿದ್ದು ವಿಪರ್ಯಾಸವಲ್ಲದೇ ಮತ್ತೇನು? ೨೦೧೫ರಲ್ಲಿ ಆರಂಭಗೊಂಡ ಟಿಪ್ಪು ಜಯಂತಿಯ ನಂತರದ ದಿನಗಳಲ್ಲಿ ಕರ್ನಾಟಕದ ವಿವಿಧೆಡೆಗಳಲ್ಲಿ ಮತಾಂಧತೆಯೂ ಹೆಚ್ಚಾಗಿ ೨೦ಕ್ಕೂ ಹೆಚ್ಚು ಅಮಾಯಕ ಹಿಂದೂ ಕಾರ್ಯಕರ್ತರು ಜೀವ ಕಳೆದುಕೊಂಡರು. ಆ ಕೊಲೆಗಳ ಹಿಂದೆ, ಟಿಪ್ಪು ಸುಲ್ತಾನನನ್ನು ತಮ್ಮ ಭಿತ್ತಿಪತ್ರಗಳಲ್ಲಿ ರಾರಾಜಿಸಿಕೊಂಡ ಸಂಘಟನೆಗಳು ಭಾಗಿಯಾಗಿದ್ದವು ಎಂಬುದು ಹೊರಬಂದವು. ಓಲೈಕೆಗೆಂದೇ ಬಂದ ಈ ಜಯಂತಿಯನ್ನು ೨೦೧೯ರಲ್ಲಿ ಯಡಿಯೂರಪ್ಪನವರ ಭಾಜಪ ಸರ್ಕಾರ ರದ್ದುಗೊಳಿಸಿತು. ಈ ಸುದ್ದಿ ಕನ್ನಡಿಗರಲ್ಲಿ ಸಂತಸ ತಂದಿತ್ತು. ಮತಾಂಧ ಟಿಪ್ಪುವನ್ನು ಸ್ಮರಿಸಬೇಕೆಂದರೆ ಅದು ಅವನ ದುರ್ವರ್ತನೆಯನ್ನು ಜನರಿಗೆ ಹೇಳಿಯೇ. ತನ್ನಿಮಿತ್ತ ಈ ಲೇಖನ ಶ್ರೀ ಮಾರುತೀಶ್ ಅಗ್ರಾರ ಅವರಿಂದ.

ಅನೇಕರಿಗೆ ನೆನಪಿರಬಹುದು, ಐದು ವರ್ಷದ ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮತಬ್ಯಾಂಕಿನ ಓಲೈಕೆಗಾಗಿ" ಹಾಗೂಮುಸ್ಲಿಮರನ್ನ ತೃಪ್ತಿ”ಪಡಿಸುವುದಕ್ಕಾಗಿ ಪ್ರತಿವರ್ಷ ನವೆಂಬರ್ ೧೦ರಂದು ಸರ್ಕಾರದ ವತಿಯಿಂದಲೇ “ಟಿಪ್ಪು ಜಯಂತಿ”ಆಚರಿಸಲಾಗುವುದೆನ್ನುವ ಆದೇಶ ಹೊರಡಿಸಿ ಇತಿಹಾಸದ ಖಳನಾಯಕನನ್ನು(ಟಿಪ್ಪು) ರಾಷ್ಟ್ರಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಎಂದೆಲ್ಲಾ ಸಮಾಜದೆದುರು ವೈಭವಿಕರಿಸಿ ಪ್ರಜಾಪೀಡಕ ದೊರೆಯ ಜಯಂತಿ ಆಚರಿಸಿದ್ದು ನಾಡಿನ ದೌರ್ಭಾಗ್ಯವೇ ಸರಿ. ಅಂದು ಕಾಂಗ್ರೆಸ್ ಸರ್ಕಾರ ಆದೇಶಿಸಿದ ಟಿಪ್ಪು ಜಯಂತಿ ಆಚರಣೆಗೆ ನಾಡಿನಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಯಿತು. ಮಡಿಕೇರಿಯ ಕುಟ್ಟಪ್ಪ ಎಂಬ ಅಮಾಯಕ ವ್ಯಕ್ತಿ ಟಿಪ್ಪು ಜಯಂತಿ ಆಚರಣೆಯ ವಿರೋಧಿ ಹೋರಾಟದಲ್ಲಿ ಸಿಲುಕಿ ಬೀದಿ ಹೆಣವಾದ! ಅದಕ್ಕು ತಲೆಕೆಡಿಸಿಕೊಳ್ಳದ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತಾಂಧನೊಬ್ಬನ ಜಯಂತಿಯನ್ನು ಪ್ರತಿವರ್ಷವೂ(2018ರ ವರೆಗೂ)ವಿಜೃಂಭಣೆಯಿಂದ ಮಾಡುತ್ತಾ ಬಂತು. ಹಿಂದೂಪರ ಸಂಘಟನೆಗಳು ಯಾವುದೇ ಕಾರಣಕ್ಕೂ ನಾವು ಟಿಪ್ಪು ಜಯಂತಿ ಆಚರಿಸವುದಕ್ಕೆ ಬಿಡುವುದಿಲ್ಲ, ಆತನೊಬ್ಬ ದೇಶದ್ರೋಹಿ,ಹಿಂದೂ ವಿರೋಧಿ,ಕೊಲೆಗಾರ, ಮತಾಂಧ, ಅತ್ಯಾಚಾರಿ ಅಂಥವನ ಜಯಂತಿ ಆಚರಣೆ ಸರಿಯಲ್ಲ ಮೊದಲು ಮತಾಂಧ ಟಿಪ್ಪು ಜಯಂತಿ ಆಚರಣೆಯ ಆದೇಶವನ್ನು ಹಿಂಪಡೆಯಿರಿ ಎಂದು ಅಂದು ಸಿದ್ದರಾಮಯ್ಯನವರನ್ನು ಹಿಂದೂ ಪರ ಸಂಘಟನೆಗಳು ಕೇಳಿಕೊಂಡರೂ ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಸಿದ್ದರಾಮಯ್ಯನವರು ತಾವು ಅಧಿಕಾರದಲ್ಲಿರುವವರೆಗೂ ಟಿಪ್ಪು ಜಯಂತಿಯನ್ನು ಮಾತ್ರ ರದ್ದು ಮಾಡಲಿಲ್ಲ. ನಿಜ ಹೇಳಬೇಕೆಂದರೆ ಟಿಪ್ಪು ಜಯಂತಿ ಆಚರಣೆ(ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ)ಯಾರಿಗೂ ಬೇಕಾಗಿರಲಿಲ್ಲ! ಯಾಕೆಂದರೆ ಟಿಪ್ಪು ತನ್ನ ಅಧಿಕಾರಾವಧಿಯಲ್ಲಿ ಇಡೀ ರಾಜ್ಯವನ್ನು ದಾರ್-ಉಲ್-ಇಸ್ಲಾಂ ಮಾಡಬೇಕೆಂಬ ಕಲ್ಪನೆಯನ್ನು ಹೊಂದಿ ಅದರಂತೆ ಆಡಳಿತ ನಡೆಸಿದ ಮತಾಂಧ. ಆತ ಹೋರಾಡಿದ್ದು ಇಸ್ಲಾಂ ಸಾಮ್ರಾಜ್ಯವನ್ನು ಕಟ್ಟಬೇಕೆಂದೆ ವಿನಾಃ,ಬೇರೆ ಯಾವ ಒಳ್ಳೆಯ ಉದ್ದೇಶವಾಗಲಿ, ದೇಶಾಭಿಮಾನವಾಗಲಿ ಆತನಲ್ಲಿ ಇರಲಿಲ್ಲ! ಜತೆಗೆ ಎಡಪಂಥಿಯರು,ಕಾಂಗ್ರೆಸಿಗರು ಹೇಳುವಂತೆ ಆತನೇನು ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ! ದೇಶಪ್ರೇಮಿಯೂ ಅಲ್ಲ ಹಾಗೂ ಕನ್ನಡಾಭಿಮಾನಿಯೂ ಆಗಿರಲಿಲ್ಲ! ಹಿಂದಿನ ಮೈಸೂರು ರಾಜ್ಯದ ನೈಜ ಇತಿಹಾಸವನ್ನು ಓದಿದವರಿಗೆ ಟಿಪ್ಪು ಎಂಥ ಅಯೋಗ್ಯ, ಮತಾಂಧ ದೊರೆ ಆಗಿದ್ದನು ಎಂಬುದರ ಅರಿವಾಗುತ್ತದೆ. ಇಂದು ನಾವು ಆತನನ್ನು ನೆನೆಯುವುದೇ ಅವಮಾನಕರ ಹಾಗೂ ದೇಶಕ್ಕೆ ಮಾಡುವ ದ್ರೋಹ! ಟಿಪ್ಪು ಜಯಂತಿ ಆಚರಣೆಯನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದಾದರು ಯಾವ ಪುರುಷಾರ್ಥಕ್ಕೆ ಎಂದು ಕೇಳಿಕೊಂಡರೆ ಉತ್ತರ ಸಿಗದು. ಹಾಗಾದರೆ ಟಿಪ್ಪುವಿನ ಇತಿಹಾಸವೇನು? ಆತ ಮಾಡಿದ ಘನಂದಾರಿ ಕೆಲಸಗಳೇನು? ನಾವ್ಯಾಕೆ ಟಿಪ್ಪುವನ್ನು ವಿರೋಧಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Tipu jayanti at Kodagu 2015

ಆತನೊಬ್ಬ ದೇಶದ್ರೋಹಿ, ಜಿಹಾದಿ ದೊರೆ
ಕಾಂಗ್ರೆಸ್ ನಾಯಕರು, ಎಡಪಂಥೀಯರು, ಬುದ್ಧಿಜೀವಿಗಳು,ಪ್ರಗತಿಪರರು, ತಥಾಕಥಿತ ಹೋರಾಟಗಾರರು ಹೇಳುವಂತೆ ಟಿಪ್ಪು ದೇಶಪ್ರೇಮಿಯಲ್ಲ, ಸ್ವಾತಂತ್ರ್ಯ ಸೇನಾನಿಯೂ ಅಲ್ಲ! ಆತನೊಬ್ಬ ದೇಶದ್ರೋಹಿ, ಜಿಹಾದಿ ದೊರೆ, ಹಿಂದೂ ವಿರೋಧಿ, ಮತಾಂಧ ಹಾಗೂ ಕಟ್ಟರ್ ಮುಸ್ಲಿಂ ಮೂಲಭೂತವಾದಿ ದೊರೆ! ಅಂದು ಮೈಸೂರು ರಾಜ್ಯವಾಗಿದ್ದ ಇಂದಿನ ಕರ್ನಾಟಕವನ್ನು ಫ್ರೆಂಚರಿಗೆ ಮಾರಾಟ ಮಾಡಲು ಟಿಪ್ಪು ಸುಲ್ತಾನ್ ಮುಂದಾಗಿದ್ದನ್ನ ಕಾಂಗ್ರೆಸಿಗರು ದೇಶಪ್ರೇಮವೆನ್ನುತ್ತಾರೆಯೇ?! ಇಡೀ ಮೈಸೂರು ರಾಜ್ಯದ ಆಡಳಿತ(ಕನ್ನಡ)ಭಾಷೆಯನ್ನು ಟಿಪ್ಪು ಬದಲಾಯಿಸಿ, ಮೈಸೂರು ರಾಜ್ಯದ ಆಡಳಿತ ಪರ್ಷಿಯನ್ ಭಾಷೆಯಾಗಬೇಕೆಂದು ಅಪ್ಪಣೆಯನ್ನು ಮಾಡಿದ್ದ ಎನ್ನುವುದನ್ನು ಇತಿಹಾಸವೇ ಸಾರಿಸಾರಿ ಹೇಳುತ್ತದೆ. ಇತಿಹಾಸದ ಪುಟಗಳಲ್ಲಿ ಪರ್ಷಿಯನ್ ಇತಿಹಾಸಕಾರನೊಬ್ಬ ದಾಖಲಿಸಿರುವ ಪ್ರಕಾರ, ಟಿಪ್ಪು ಸುಲ್ತಾನನ ಅಧಿಕಾರಾವಧಿಯಲ್ಲಿ ರೆವಿನ್ಯೂ ದಾಖಲೆಗಳನ್ನೆಲ್ಲ ಕನ್ನಡ ಹಾಗು ಇತರ ಸ್ಥಳೀಯ ಭಾಷೆಗಳಿಗೆ ಬದಲಾಗಿ ಫಾರಸಿ ಭಾಷೆಯಲ್ಲಿಯೇ ಇರಬೇಕೆಂದು ಟಿಪ್ಪು ಆಜ್ಞೆ ಮಾಡಿದ್ದನಂತೆ.ಇದರ ಪರಿಣಾಮವಾಗಿ ರೆವಿನ್ಯೂ ಇಲಾಖೆಯಲ್ಲಿದ್ದ ಹಿಂದೂ ಸಿಬ್ಬಂದಿಗಳನ್ನು ಬದಲಾಯಿಸಿ, ಮುಸ್ಲಿಂ ಸಿಬ್ಬಂದಿಗಳನ್ನು ಆ ಜಾಗಗಳಿಗೆ ನೇಮಿಸಲಾಯಿತು ಎನ್ನುವುದು ಪರ್ಷಿಯನ್ ಇತಿಹಾಸಕಾರನ ಮಾತು. ಟಿಪ್ಪು ಸುಲ್ತಾನ್ ಎಂಥ ಮತಾಂಧನೆಂದರೆ ತನ್ನ ಆಳ್ವಿಕೆಯನ್ನು ಖುದಾದದ್ ಸರ್ಕಾರ್"(ಅಲ್ಲಾಹ್ ನೀಡಿದ ಸರ್ಕಾರ) ಎಂದು ಕರೆದುಕೊಂಡು, ತನ್ನ ಎಲ್ಲ ವ್ಯವಹಾರಗಳನ್ನು ಈ ಹೆಸರಿನಲ್ಲಿಯೇ ಮಾಡಿದ ಎನ್ನುವುದು ಇತಿಹಾಸದ ದಾಖಲೆಯಲ್ಲಿರುವ ಸತ್ಯ ಸಂಗತಿ. ಟಿಪ್ಪು ತನ್ನ ಅಧಿಕಾರಾವಧಿಯಲ್ಲಿ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಜಾರಿಗೆ ತಂದ. ಅವೆಲ್ಲವೂ ಕೂಡ ಇಸ್ಲಾಮೀ ಸ್ವರೂಪದ ಲಕ್ಷಣಗಳನ್ನೇ ಹೊಂದಿದ್ದವು. ನಾಣ್ಯದ ಮುಂಭಾಗದಲ್ಲಿಹೈದರನ ವಿಜಯಗಳಿಂದಾಗಿ ಅಹಮದರ ಧರ್ಮವು ಜಗತ್ತನ್ನು ಬೆಳಗಿದೆ” ಎಂದು ಬರೆದಿದ್ದರೆ ಹಿಂಭಾಗದಲ್ಲಿ “ಅವನೇ(ಅಲ್ಲಾಹ್) ಏಕೈಕ ಹಾಗೂ ನ್ಯಾಯವಾದ ದೊರೆ” ಎಂದು ಬರೆಯಲಾಗಿದೆ. ಇವುಗಳನ್ನು ಪ್ರವಾದಿ ಮಹಮ್ಮದರ ಹೆಸರಿನಲ್ಲಿ ಹಾಗೂ ಶಿಯಾ ಸಂಪ್ರದಾಯದ ಹನ್ನೆರಡು ಮಂದಿ ಇಮಾಮರ ಹೆಸರಿನಲ್ಲಿ ಹೊರತರಲಾಗಿತ್ತೆಂದು ಅವನ ಸಮಕಾಲೀನ ಇತಿಹಾಸಕಾರರ ದಾಖಲೆಗಳು ಹೇಳುತ್ತವೆ.

ಟಿಪ್ಪುವಿನ ಸ್ವಭಾವ ಹಾಗೂ ಆತನ ವ್ಯಕ್ತಿತ್ವದ ಬಗ್ಗೆ ಸಂಶೋಧನೆ ಮಾಡಿದ್ದ ವಿದೇಶಿ ಲೇಖಕ ಡಾಡ್ ವೆಲ್ Cambridge History Of India ಎಂಬ ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ಉಲ್ಲೇಖ ಮಾಡುತ್ತಾ, ಟಿಪ್ಪು ಕ್ರೂರ ಹಾಗೂ ಗಗನಗಾಮಿ ಮಹತ್ತ್ವಕಾಂಕ್ಷೆಗಳ ವ್ಯಕ್ತಿಯಾಗಿದ್ದ. ಆತನು ಕಟ್ಟರ್ ಇಸ್ಲಾಮಿನ ದೊರೆಯಾಗಿ ಹಿಂದೂ ಜನಸಮುದಾಯದ ಮೇಲೆ ದಬ್ಬಾಳಿಕೆ ನಡೆಸಿದ.ಹಿಂದೂ ಸಮುದಾಯವನ್ನು ಆತ ಅತ್ಯಂತ ಕ್ರೂರವಾಗಿ ಹಿಂಸಿಸಿದ್ದ.ಆದ್ದರಿಂದಲೇ ಮೈಸೂರಿನ ಸುತ್ತಮುತ್ತಲಿನ ಪ್ರದೇಶದ ಜನರು ಆತನ ವಿಷಯದಲ್ಲಿ ಅಸಹ್ಯಪಟ್ಟುಕೊಳ್ಳುತ್ತಿದ್ದರು ಎಂದು ಡಾಡ್ ವೆಲ್ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಿದ್ದಾನೆ. ಇನ್ನು ಸ್ವತಃ ಟಿಪ್ಪುಸುಲ್ತಾನನೇ ತನ್ನ ಕೈಯ್ಯಾರೆ ಕೇರಳದ ಮಲಬಾರ್ ಪ್ರದೇಶದ ತನ್ನ ಅಧಿಕಾರಿಗಳಿಗೆ ಒಳಗಿಂದೊಳಗೆ ಪತ್ರಗಳನ್ನು ಬರೆದು,ಅದರ ಪ್ರಕಾರ ಆದೇಶ ನೀಡಿರುವುದು ಇತಿಹಾಸದ ದಾಖಲೆಗಳಲ್ಲಿ ದಾಖಲಾಗಿವೆ. ಜನರಿಂದ ‘ಮೈಸೂರು ಹುಲಿ’ ಎಂದು ಹೆಮ್ಮೆಯಿಂದ ಕರೆಯಿಸಿಕೊಂಡಿದ್ದ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಅಧಿಕಾರಿಗಳಿಗೆ ಬರೆದ ಪತ್ರಗಳನ್ನು ಓದಿದರೆ ಅವನೆಂಥ ಕ್ರೂರಿ, ಹಿಂದೂ ವಿರೋಧಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆತನೇ ತನ್ನ ಕೈಯಾರೆ ಬರೆದ ಪತ್ರಗಳು ಹೀಗಿವೆ:

14.12.1788 ರಲ್ಲಿ ಬರೆದ ಪತ್ರ… ಟಿಪ್ಪು ಕಲ್ಲಿಕೋಟೆಯ ಸೇನಾಧಿಪತಿಗೆ ಪತ್ರ ಬರೆದು, ಮೀರ್ ಹುಸೇನ್ ಆಲಿಯನ್ನು ಇಬ್ಬರು ಅಂಗರಕ್ಷಕರೊಂದಿಗೆ ಕಳುಹಿಸಲಾಗಿದೆ. ಆತನು ನಿಗದಿತ ಸ್ಥಳವನ್ನು ದೇವರ ಕೃಪೆಯಿಂದ ಸೇರಲಿದ್ದಾನೆ. ನೀನು ಆತನ ಜೊತೆಗೂಡಿ, ದೇವರಲ್ಲಿ ನಂಬಿಕೆಯಿಲ್ಲದ ಎಲ್ಲ ನಾಸ್ತಿಕರನ್ನು ಬಂಧಿಸಿ ನಂತರ ಕೊಲ್ಲಬೇಕು. ಇಪ್ಪತ್ತು ವರ್ಷಗಳಿಗಿಂತ ಕಿರಿಯ ತರುಣರನ್ನು ಸೆರೆಮನೆಯಲ್ಲಿಟ್ಟು ಉಳಿದಂತೆ ಕನಿಷ್ಠ ಐದು ಸಾವಿರ ಮಂದಿಯನ್ನು ಮರಗಳಿಗೆ ನೇಣುಕಾಬೇಕು ಎಂದು ಟಿಪ್ಪು ಪತ್ರದ ಮೂಲಕ ತಿಳಿಸಿದ್ದಾನೆ.

14.12.1788 ರಲ್ಲಿ ಕೊಡಗೇರಿಯ ಸೇನಾಧಿಪತಿ ಮೀರ್ ಹೈದರನಿಗೆ ಟಿಪ್ಪು ಪತ್ರ… ರಹಸ್ಯ ಮೂಲಗಳಿಂದ ತಿಳಿದು ಬಂದಿರುವಂತೆ ಕೊಡಗೇರಿ ಮತ್ತು ಕೊಡತ್ತನಾಟ್ಟು ರಾಜರು ಒಂದಾಗಿದ್ದಾರೆ. ನೀನು ಕುಟಿಲೊಪಾಯಗಳನ್ನಾದರೂ ಸರಿಯೇ ಬಳಸಿ, ಅವರನ್ನು ಬಂಧಿಸಿ ಅವರನ್ನು ನಿರ್ನಾಮ ಮಾಡಿ ಅವರಿಗೆಲ್ಲ ನರಕದ ಹಾದಿ ತೋರಬೇಕು. ಆ ಎರಡೂ ನಾಯಿಗಳನ್ನು ಹಿಡಿದ ತಕ್ಷಣ ಮೇಲಿನ ನಮ್ಮ ಆಜ್ಞೆಯಂತೆ ಅವರನ್ನು ಶಿಕ್ಷಿಸಬೇಕು ಎಂದು ಮೀರ್ ಹೈದರನಿಗೆ ಟಿಪ್ಪು ಆದೇಶ ಪತ್ರ ರವಾನಿಸಿದ್ದಾನೆ.

21.12.1788 ರಲ್ಲಿ ಶೇಖ್ ಕುತ್ಬುದೀನನಿಗೆ ಪತ್ರ ಬರೆದ ಟಿಪ್ಪು, ನಿನ್ನ ವರದಿಯಿಂದ ಅತೀವ ಹರ್ಷವಾಗಿದೆ. ಸೆರೆಸಿಕ್ಕವರಲ್ಲಿ ಇಪ್ಪತ್ತು ವರ್ಷಗಳಿಗೆ ಮೇಲ್ಪಟ್ಟವರನ್ನೇಲ್ಲ ಮರಗಳಿಗೆ ನೇಣು ಹಾಕಬೇಕು. ಬೆಟ್ಟಗುಡ್ಡ, ಕಾಡುಮೇಡುಗಳಲ್ಲಿ ಅಡಗಿದ್ದರೆ ಅವರನ್ನು ಹಿಡಿದು ಶಿಕ್ಷಿಸಬೇಕು. ಈ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲು ದಿಲೀರ್ ಮತ್ತು ಧೀಲ್ಖಾನರ ನೇತೃತ್ವದಲ್ಲಿ ಸೇನೆಯನ್ನು ಎರಡು ಭಾಗಗಳನ್ನಾಗಿ ಮಾಡಲು ಅವರ ಜೊತೆ ಒಪ್ಪಂದ ಮಾಡಿಕೊಳ್ಳಬಹುದು ಎಂದು ಶೇಖ್ ಕುತ್ಬುದೀನನಿಗೆ ಸಲಹೆ ಕೊಟ್ಟಿರುವ ಟಿಪ್ಪು, ನಂತರ ಬಂಧಿತರಾಗಿರುವ 242 ನಾಯರುಗಳನ್ನು ಕಳುಹಿಸಿ ಕೊಟ್ಟಿದ್ದೇವೆ. ಅವರ ಸ್ಥಾನಮಾನಗಳ ವಿವಾರವಾದ ಪಟ್ಟಿ ಕೂಡ ಕಳುಹಿಸಲಾಗಿದೆ.ಅವರೆಲ್ಲರನ್ನೂ ಇಸ್ಲಾಮಿಗೆ ಮತಾಂತರಿಸಿ ಬಳಿಕ ಪುರುಷರಿಗೆ ಆರು ಅಡಿ ಉದ್ದದ ಬಟ್ಟೆ ಹಾಗೂ ರುಮಾಲುಗಳನ್ನು, ಸ್ತ್ರೀಯರಿಗೆ ಎಂಟು ಅಡಿ ಉದ್ದದ ಬಟ್ಟೆ ಮತ್ತು ರವಿಕೆಗಳನ್ನು ಒದಗಿಸುವುದು. ಅವರೆಲ್ಲರ ಮೇಲೆ ತೀವ್ರ ನಿಗಾ ಇರಲಿ. ಮೇಲಿನ ನನ್ನ ಆಜ್ಞೆಗಳ ಉಲ್ಲಂಘನೆಯಾದಲ್ಲಿ ಬಂಧನದಿಂದ ಯಾರಾದರೂ ತಪ್ಪಿಸಿಕೊಂಡಲ್ಲಿ ನನ್ನ ತೀವ್ರ ಆಕ್ರೋಶಕ್ಕೆ ನೀನು ಗುರಿಯಾಗುತ್ತೀಯ ಎಂದು ಎಚ್ಚರಿಕೆಯನ್ನು ಟಿಪ್ಪು ಕೊಟ್ಟಿದ್ದಾನೆ.
ಮತ್ತೊಂದು ಪತ್ರದಲ್ಲಿ ನೀನು ಇಪ್ಪತ್ತೈದು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸೈನಿಕರನ್ನು ಕೊಂದಿರುವೆ.ಅಂತಹ ನೀನು ಸರ್ಕಾರಿ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇನ್ನು ಮೇಲೆ ನೀನು ಇಂತಹ ಕೃತ್ಯಗಳಿಗೆ ಕೈಹಾಕಿದರೆ ಇಸ್ಲಾಂ ಧರ್ಮದ ನಿಯಮಗಳನುಸಾರ ನೀನು ಪ್ರತಿಫಲಗಳನ್ನು ಪಡೆಯುವೆ ಎಂದು 1789 ರಲ್ಲಿ ಟಿಪ್ಪು ಘೋಷಿಸಿದ್ದಾನೆ.

22.3.1789 ರ ಕೊಡೆಂಗೇರಿ ಅಬ್ದುಲ್ ಖಾದೀಗೆ ಬರೆದ ಪತ್ರದಲ್ಲಿ, ಸುಮಾರು ಹನ್ನೆರಡು ಸಾವಿರ ನಾಸ್ತಿಕರನ್ನು ಇಸ್ಲಾಮಿಗೆ ಮತಾಂತರಿಸಲಾಗಿದೆ.ಅವರಲ್ಲಿ ಕೆಲವು ಸೈನಿಕರು, ನಂಬೂದಿರಿಗಳು ಇದ್ದಾರೆ. ಈ ಅಂಶವನ್ನು ಆ ಪ್ರದೇಶದ ಇತರರ ಗಮನಕ್ಕೆ ತರತಕ್ಕದ್ದು ಜೊತೆಗೆ ಇತರರನ್ನೂ ಆಹ್ವಾನಿಸಿ ಅವರನ್ನು ಇಸ್ಲಾಮಿಗೆ ಮತಾಂತರಗೊಳಿಸು. ಈ ವಿಷಯದಲ್ಲಿ ಸೈನಿಕರು ಮತ್ತು ನಂಬೂದಿರಿಗಳು ಎಂಬ ಭೇದ ಬೇಡ. ಮತಾಂತರ ಆದವರಿಗೆ ನೀಡಲಾಗುವ ವಿಶೇಷ ಉಡುಪುಗಳು ಸರಬರಾಜಾಗುವ ತನಕ ಅವರು ಕಾಯಬೇಕಾಗುತ್ತದೆ ಎಂಬ ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಡು ಎಂದು ಅಬ್ದುಲ್ ಖಾದಿಗೆ ತಿಳಿಸಿದ್ದಾನೆ.

18.01.1790 ರಲ್ಲಿ ಸೈಯದ್ ಅಬ್ದುಲ್ ಮಲ್ ಮಲಕ್ ಗೆ ಬರೆದ ಪತ್ರದಲ್ಲಿ ಪ್ರವಾದಿ ಮಹಮ್ಮದರ ಕೃಪೆ ಮತ್ತು ಅಲ್ಲಾಹನ ದಯೆಯಿಂದ ನಾವು ಕಲ್ಲಿಕೋಟೆಯ ಸುಮಾರು ಎಪ್ಪತ್ತೈದರಷ್ಟು ನಾಸ್ತಿಕರನ್ನು ಇಸ್ಲಾಮಿಗೆ ಮತಾಂತರಿಸಿದ್ದೇವೆ. ಕೊಚ್ಚಿಯ ಗಡಿ ಪ್ರದೇಶಗಳಲ್ಲಿ ಇಸ್ಲಾಮಿಗೆ ಮತಾಂತರಗೊಂಡಿರದವರು ಕೆಲವರು ಇನ್ನೂ ಇದ್ದಾರೆ. ಅವರನ್ನೂ ತಕ್ಷಣ ಮತಾಂತರಗೊಳಿಸಲು ಸಂಕಲ್ಪಿಸಿದ್ದೇನೆ. ಇದನ್ನು ನಾನು ಒಂದು “ಧರ್ಮಯುದ್ಧ”ವೆಂದೇ ಪರಿಗಣಿಸುತ್ತೇನೆ ಎಂದು ಮಲಕ್ ಹೇಳಿದ್ದಾನೆ.

ಇನ್ನು 19.01.1790 ರ ಬದ್ರು ಸುಸ್ಮಾನ್ ಖಾನ್ ಗೆ ಬರೆದ ಪತ್ರದಲ್ಲಿ, ಇತ್ತೀಚೆಗೆ ನಾವು ಸುಮಾರು ನಾಲ್ಕು ಲಕ್ಷ ಜನರನ್ನು ಇಸ್ಲಾಮಿಗೆ ಮತಾಂತರಿಸುವ ವಿಷಯದಲ್ಲಿ ಸಾಧಿಸಿದ ಯಶಸ್ಸು ನಿನ್ನ ಗಮನಕ್ಕೆ ಬಂದಿರಬಹುದು. ವಿನಾಶದ ಅಂಚಿಗೆ ತಲುಪಿರುವ ರಾಮನ್ ನಾಯರನ(ರಾಮನ್ ನಾಯರ್ ಎಂಬ ರಾಜ ಬೇರೆ ಯಾರೂ ಅಲ್ಲ, ಧರ್ಮರಾಜನೆಂದು ಖ್ಯಾತನಾದ ಸುಪ್ರಸಿದ್ಧ ರಾಮವರ್ಮ ಮಹಾರಾಜ) ವಿರುದ್ಧ ದಂಡೆತ್ತಿ ಹೋಗಲು ನಿರ್ಧರಿಸಿಯಾಗಿದೆ. ಅವನನ್ನು ಅವನ ಪ್ರಜೆಗಳ ಸಹಿತ ಮತಾಂತರಗೊಳಿಸಿ ಸಂತೋಷಪಡುವವರೆಗೆ ನಾನು ಶ್ರೀರಂಗಪಟ್ಟಣಕ್ಕೆ ವಾಪಸ್ ಹೋಗದಿರಲು ನಿರ್ಧರಿಸಿದ್ದೇನೆ ಎಂದು ಸುಸ್ಮಾನ್ ಖಾನ್ ಜೊತೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾನೆ ‘ಕೆಲವರ ಪಾಲಿನ’ ಈ ಹುಲಿ.


ಆತನೇ ತನ್ನ ಕೈಯಾರೆ ಬರೆದ ಪತ್ರಗಳನ್ನು ಓದಿದ ಮೇಲೆ ಟಿಪ್ಪುವಿನ ಉದ್ದೇಶ ಮುಸ್ಲಿಂ ಅಲ್ಲದವರನ್ನು ಹೆದರಿಸಿ, ಬೆದರಿಸಿ ಅಥವಾ ಹಿಂಸಿಸಿ ಅವರನ್ನು ಇಸ್ಲಾಂಗೆ ಮತಾಂತರಿಸುವುದೇ ಅವನ ನಿಜವಾದ ಉದ್ದೇಶ ಎಂಬುದು ಸ್ಪಷ್ಟವಾಗುತ್ತದೆ.

ಒಂದುಕಾಲದಲ್ಲಿ ಮೈಸೂರ ಅರಸರನ್ನು ಬದಿಗೊತ್ತಿ ಸರ್ವಾಧಿಕಾರಿಯಾದ ಹೈದರನ ಮಗ ಟಿಪ್ಪುವು ಒಂದು ಹೆಜ್ಜೆ ಮುಂದೆ ಹೋಗಿ ತಾನೇ ಮೈಸೂರು ರಾಜ್ಯದ ‘ಬಾದಷಹ’ನೆಂದು ಘೋಷಿಸಿ, ವಿಧವೆ ರಾಣಿ ಲಕ್ಷ್ಮೀ ಅಮ್ಮಣ್ಣಿಯನ್ನು ಸೆರೆಯಲ್ಲಿಟ್ಟು ರಾಜನಾಗಿ ಮೆರೆದು, ನವಾಬನಾದ. 1761ರಲ್ಲಿ ಮೈಸೂರಿನ ಸರ್ವಾಧಿಕಾರಿಯಾದರೂ ಹೈದರನು, ತನ್ನನ್ನು ರಾಜ್ಯದ ಕಾರ್ಯಕರ್ತ ಎಂದು ಮಾತ್ರ ಕರೆದುಕೊಂಡನೇ ಹೊರತು ಮೈಸೂರು ರಾಜ್ಯವು ಅರಸು ದೊರೆಗಳಿಗೆ ಸೇರಿದ್ದು ಎನ್ನುವಂತೆ ನಡೆದುಕೊಂಡ. ಮುಂದೆ ಕನ್ನಡವನ್ನು ಆಡಳಿತ ಭಾಷೆಯಾಗಿ ಮುಂದುವರಿಸಿದ. ಆದರೆ ಹೈದರನ ಸಾವಿನ ಬಳಿಕ ಟಿಪ್ಪುಸುಲ್ತಾನ್ ತನ್ನನ್ನು ಸಾರ್ವಭೌಮನೆಂದು ಘೋಷಿಸಿಕೊಂಡು ತನ್ನದು ‘ಅಲ್ಲಾಹ್ ನೀಡಿದ ಸರಕಾರ’ ಎಂದು ಭಾವಿಸಿದ. ಆರಂಭದಲ್ಲಿ ಅವನ ಆಡಳಿತ ಭಾಷೆ ಕನ್ನಡವಾಗಿದ್ದರೂ 1792ರ ಬಳಿಕ ಅವನು ಅದರ ಜಾಗದಲ್ಲಿ ಪರ್ಷಿಯನ್ ಭಾಷೆಯನ್ನು ಜಾರಿಗೊಳಿಸಿದುದಕ್ಕೆ ಅವನ ಸಮಕಾಲೀನರ ಹೇಳಿಕೆಗಳು ಮತ್ತು ಅವನ ಆಜ್ಞೆಗಳು ಆಧಾರವಾಗಿವೆ ಎಂಬುದನ್ನು ಈಗಾಗಲೇ ನಾವು ಓದಿದ್ದೇವೆ. ಡೆಕನ್ ಪ್ರದೇಶದಲ್ಲಿ ಮೊಘಲರು ಪರ್ಷಿಯನ್ ಭಾಷೆ ಜಾರಿಗೊಳಿಸಿದ್ದರೂ ಅದು ಮೈಸೂರಲ್ಲಿ ಬಳಕೆಗೆ ಬಂದುದು 1792 ರಲ್ಲಿ. ಅದು ಟಿಪ್ಪುಸುಲ್ತಾನನ ಆಡಳಿತದ ಕೊನೆ ವರ್ಷಗಳಲ್ಲಿ. ಅವನ ಉದ್ದೇಶ ಅಂದಿನ ಮೈಸೂರು ರಾಜ್ಯವನ್ನು ಪರ್ಷಿಯನ್ ಭಾಷೆಯಾ ನಾಡನ್ನಾಗಿ ಮಾಡುವುದಿತ್ತು.ಹೀಗಾಗಿ ಅವನು ಊರುಗಳ ಹೆಸರನ್ನು ಪರ್ಷಿಯನ್ ಭಾಷೆಗೆ ಬದಲಾಯಿಸಿದ. ಚಿತ್ರದುರ್ಗ-ಪುರೊಕ್ಯಬ್ ಹಿಫರ್ ಆಯಿತು, ದೇವನಹಳ್ಳಿ-ಯುಸುಫಾಬಾದ್ ಆಯಿತು, ಮೈಸೂರು-ನಜರಾಬಾದ್ ಆಯಿತು, ಹಾಸನ-ಖುಯೇಮಾಬಾದ್ ಆಯಿತು, ಶಿರಾ-ರುಸ್ತುಮಾಬಾದ್ ಆಯಿತು, ಮಡಿಕೇರಿ-ಜಾಫರ್ ಬಾದ್ ಆಯಿತು, ಭಾಗಮಂಡಲ-ಅಫ್ಜಲ್ ಬಾದ್ ಆಯಿತು ಹೀಗೆ ಅನೇಕ ಸ್ಥಳಗಳ ಹೆಸರನ್ನು ಬದಲಾಯಿಸಿ ಕನ್ನಡ ಭಾಷೆಗೆ ಮೋಸಮಾಡಿದ. ಇಷ್ಟೇ ಅಲ್ಲ ಮೈಸೂರಿನ ಪ್ರಸಿದ್ದ “ಕೋಡಿ ಭೈರವೇಶ್ವರ” ಗುಡಿಯನ್ನು ನೆಲಸಮಗೊಳಿಸಿದ್ದು ಸಹ ಇದೇ ಟಿಪ್ಪು ಸುಲ್ತಾನ್! ಇಂತಹ’ನಾಡದ್ರೋಹಿ’ಯನ್ನು ವೈಭವಿಕರಿಸಿ ಆತನ ಜಯಂತಿ ಆಚರಿಸಿದ್ದು ಸಿದ್ದರಾಮಯ್ಯನವರ ಮೂರ್ಖತನವೆನ್ನದೇ ಎನನ್ನಬೇಕು? ದೇಶದಲ್ಲಿದ್ದುಕೊಂಡೆ ಧರ್ಮವಿರೋಧಿ ಚಟುವಟಿಕೆಗಳನ್ನು ಮಾಡಿದ ಟಿಪ್ಪು, ದೇಶಭಕ್ತನಾಗಲು ಸಾಧ್ಯವೇ? ರಾಷ್ಟ್ರಪ್ರೇಮಿ ಅನ್ನಿಸಿಕೊಳ್ಳಲು ಯೋಗ್ಯನೇ? ತನ್ನ ಧರ್ಮವನ್ನು ಉಳಿಸಲು ಅನ್ಯಧರ್ಮಿಯರನ್ನು ಕೊಂದ ಟಿಪ್ಪು ಹೇಗೆ ದೇಶಪ್ರೇಮಿಯಾಗುತ್ತಾನೆ ಹೇಳಿ?

ಆದಾಗ್ಯೂ ಅಂದಿನ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಆದೇಶಿಸಿದ್ದ ಟಿಪ್ಪು ಜಯಂತಿಯನ್ನ ಈಗಲೂ ಸಮರ್ಥಿಸಿಕೊಳ್ಳುವರು ಯಾರಾದರೂ ಇದ್ದರೆ ಅಂಥವರನ್ನು ಟಿಪ್ಪು ಸಂತತಿಯವರೆಂದೇ ಕರೆಯಬೇಕು! ನಿಜ ಹೇಳಬೇಕೆಂದರೆಮೈಸೂರು ರಾಜರು ನಮ್ಮ ನಾಡಿಗೆ ಸಲ್ಲಿಸಿರುವ ಸೇವೆಗಳ ಮುಂದೆ, ಟಿಪ್ಪುವಿನ ಬೂಟಾಟಿಕೆಯ ಕೊಡುಗೆ ನಗಣ್ಯ. ಅದರೂ ಕೆಲವರು ಟಿಪ್ಪು ಸುಲ್ತಾನ್ ಅನೇಕ ದೇವಸ್ಥಾನಗಳಿಗೆ, ಮಠಮಾನ್ಯಗಳಿಗೆ ದಾನ ದತ್ತಿಗಳನ್ನು ಕೊಟ್ಟಿದ್ದಾನೆ ಎನ್ನುತ್ತಾರೆ. ಹಾಗಾದರೆ ದಾನ ದತ್ತಿಗಳನ್ನು ಕೊಟ್ಟ ಮಾತ್ರಕ್ಕೆ ಅವನು ಒಳ್ಳೆಯವನಾಗುತ್ತಾನೆಯೇ? ತಾನು ಸಮಾಜದ ದೃಷ್ಟಿಯಲ್ಲಿ ಒಳ್ಳೆಯವನಾಗಲು, ತಾನು ಮಾಡುವ ಕುತಂತ್ರದ ಕೆಲಸಗಳನ್ನು ಯಾರು ಪ್ರಶ್ನಿಸಬಾರದು, ನನ್ನ ವಿರೋಧಿಸುವವರು ಯಾರು ಇರಬಾರದೆಂದು ದಾನ ದತ್ತಿಗಳನ್ನು ಕೊಟ್ಟಿರಲಿಕ್ಕೆ ಸಾಧ್ಯವಿಲ್ಲ ಎಂದಕ್ಕೆ ಯೋಚಿಸಬಾರದು? ಹೋಗಲಿ, ಟಿಪ್ಪು ಒಳ್ಳೆಯವನಾಗಿದ್ದರೆ ಕೊಡಗಿನ ಕೊಡವರು, ದುರ್ಗದ ವಾಲ್ಮೀಕಿ ಜನಾಂಗದವರು, ಮಂಗಳೂರಿನ ಕೊಂಕಣಿ ಕ್ರೈಸ್ತರು, ಮೈಸೂರು-ಮಂಡ್ಯ ಭಾಗದ ಜನರೆಕೇ ಟಿಪ್ಪುವನ್ನು ಪ್ರೀತಿಸುವುದಿಲ್ಲ. ಟಿಪ್ಪುವಿನ ಕ್ರೂರ ಹಾಗೂ ರಕ್ತಸಿಕ್ತ ಇತಿಹಾಸವೇ ನಮ್ಮ ಕಣ್ಣಮುಂದಿದೆ. ಇಂಥ ಒಬ್ಬ ಮತಾಂಧ, ದೇಶವಿರೋಧಿ, ಹಿಂದೂ ವಿರೋಧಿ,ಸಮಾಜಘಾತುಕ ದೊರೆಯ ಜಯಂತಿ ಆಚರಣೆಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರದ್ದು ಮಾಡಿದ್ದು ಅಮೋಘ ನಡೆ? ಅಂದಹಾಗೆ ಟಿಪ್ಪುವಿನ ನೈಜ ಇತಿಹಾಸವನ್ನು ಅಧ್ಯಯನ ಮಾಡಿದ ಯಾರೂ ಟಿಪ್ಪುವಿನ ಫೋಟೋಗೆ ದೊಡ್ಡ ದೊಡ್ಡ ಹೂವಿನ ಹಾರ ಹಾಕಿ ಖಳನಾಯಕನನ್ನು ಜನನಾಯಕ ಎಂದು ಕರೆದು ಆತನನ್ನು ಗೌರವಪೂರ್ವಕವಾಗಿ ಸ್ಮರಿಸುವ ಕಾಂಗ್ರೆಸ್ ನ “ಮುಸ್ಲಿಮ್ ತುಷ್ಟೀಕರಣದ” ನೀತಿಯನ್ನು ಒಪ್ಪವುದಿಲ್ಲ. ಹಾಗಾಗಿ ಸಮಾಜದಲ್ಲಿ ಅಶಾಂತಿ ಕದಡಬಾರದು ಹಾಗೂ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಬಾರದು ಎನ್ನುವ ಉದ್ದೇಶದಿಂದ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿದ ಕ್ರಮ ಶ್ಲಾಘನೀಯ.

Maruteesh Agrara, Columnist, Tumakuru

The post ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ! first appeared on Vishwa Samvada Kendra.

ಭಾರತದ ಸ್ವಾಭಿಮಾನ ಎತ್ತಿಹಿಡಿದ ಸ್ವಾಭಿಮಾನಿ ವನವಾಸಿಗಳು

$
0
0

ನವೆಂಬರ್ 15: ಗಿರಿಜನ ಸ್ವಾಭಿಮಾನ ದಿನ. ತನ್ನಿಮಿತ್ತ ಈ ವಿಶೇಷ ಲೇಖನ.
(ಈ ಲೇಖನ ಇಂದಿನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.)

ಲೇಖನ: ಸತ್ಯಪ್ರಕಾಶ, ಸಾಫ್ಟ್ ವೇರ್ ತಂತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು.


ಭಾರತಕ್ಕೆ ಭವ್ಯವಾದ ಇತಿಹಾಸ ಇದೆ. ಸಾವಿರಾರು ವರ್ಷಗಳ ಶ್ರೇಷ್ಠ ಸಂಸ್ಕೃತಿ ಇದೆ. ಅದರೆ ಈ ದೇಶದ ಜನರು ಸುಖ ನಿದ್ರೆ ಗೆ ಜಾರಿದಾಗಲೆಲ್ಲಾ ಆದ ಆಕ್ರಮಣಗಳು ಒಂದಲ್ಲಾ, ಎರಡಲ್ಲಾ. ಭಾರತೀಯರು ಆತ್ಮವಿಸ್ಮೃತಿ ಹೊಂದಿದಾಗಲೆಲ್ಲಾ ವಿದೇಶಿಯರು ನಮ್ಮ ಮೇಲೆ ಆಕ್ರಮಣ ಮಾಡಿದರು. ಹೂಣರು, ಶಕರು, ಮೊಘಲರು, ಬ್ರಿಟೀಷರು ಹೀಗೆ ಒಬೊಬ್ಬರಾಗಿ ಭಾರತವನ್ನು ಕೊಳ್ಳೆ ಹೊಡೆಯಲು ಅಗ್ರೇಸರರಾದರು. ಇಲ್ಲಿಯ ಜನರ ಮುಗ್ಧತೆ, ಸರಳತೆ, ಮೃದು ಸ್ವಭಾವ, ಬಡತನ ಇವುಗಳನ್ನು ಕಂಡು ತಾವು ಸುಲಭವಾಗಿ ಈ ದೇಶವನ್ನು ಆಳಬಹುದು ಎಂದು ಅರಿತುಕೊಂಡರು. ಭಾರತದಲ್ಲಿ ದೀರ್ಘಕಾಲ ಆಳ್ವಿಕೆ ಮಾಡಬೇಕಾದರೆ ಇಲ್ಲಿಯ ಜನರ ನಂಬಿಕೆ, ಶ್ರದ್ಧಾಕೇಂದ್ರಗಳನ್ನು ನಾಶಮಾಡಬೇಕು ಎಂದು ಕಂಡುಕೊಂಡರು. ಈ ರಾಷ್ಟ್ರಕ್ಕೆ ಶ್ರೇಷ್ಠವಾದ ಪರಂಪರೆ ಇದೆ, ಅನೇಕ ಮಹಾಪುರುಷರು, ವೀರರು, ಸಾಧು ಸಂತರು, ಕವಿಗಳು, ಋಷಿಗಳು, ವಿಜ್ಞಾನಿಗಳು, ಸಮಾಜ ಸುಧಾರಕರು, ವ್ಯಾಪಾರಿಗಳು, ಅರ್ಥಶಾಸ್ತ್ರಜ್ಞರು, ಕ್ರಾಂತಿಕಾರಿಗಳು ಜನಿಸಿದ್ದಾರೆಂದು ಇಲ್ಲಿಯ ಜನ ಮರೆಯುವಂತೆ ಷಡ್ಯಂತ್ರ ಮಾಡಿದರು.

ಹೀಗೆ ಭಾರತ ತನ್ನ ಅಸ್ತಿತ್ವವನ್ನು ಮರೆತು, ಹತಾಶವಾಗಿ, ಸ್ವಾಭಿಮಾನವೇ ಸತ್ತಂತಹ ಸಂದರ್ಭದಲ್ಲಿ ರಾಷ್ಟ್ರವನ್ನು ಬಡಿದೆಬ್ಬಿಸಿ ಜಾಗೃತ ಸಮಾಜನಿರ್ಮಾಣ ಮಾಡಿದವರು ಅನೇಕರು. ಅದರಲ್ಲಿ ವನವಾಸಿಗಳ ಪಾತ್ರ ಬಹಳ ಮುಖ್ಯವಾದದು. ರಾಜಸ್ತಾನದ ಪೂಂಜಾಭಿಲ್, ನಾಗಾಲ್ಯಾಂಡ್ ನ ಜಾದೋನಾ0ಗ್, ರಾಣಿ ಗಾಯಿಡಿನುಲ್ಯೂ, ಆಂಧ್ರದ ಅಲ್ಲೂರಿ ಸೀತಾರಾಮರಾಜು, ಬಿಹಾರದ ಸಿದ್ದು ಕಾನ್ಹೋ, ತಿಲಕಾ ಮ್ಹಾಜೀ, ಜತರಾಭಗತ, ಕೇರಳದ ತಲಕ್ಕಲ್ ಚಂದು, ಕರ್ನಾಟಕದ ಸುರಪುರದ ವೆಂಕಟಪ್ಪನಾಯಕ ಮುಂತಾದವರು ಹೆಮ್ಮೆಯಿಂದ ನೆನೆಯಬೇಕಾದ ಸ್ವಾಭಿಮಾನಿ ವನವಾಸಿ ಹುತಾತ್ಮರು. ಇಂತಹ ಅಸಂಖ್ಯಾತ ವನವಾಸಿ ಸ್ವತಂತ್ರ ಹೋರಾಟಗಾರರ ಪೈಕಿ ಸ್ವಾತಂತ್ರ ಸೇನಾನಿ ವನವಾಸಿ ಕ್ರಾಂತಿಕಾರಿ ಭಗವಾನ್ ಬಿರಸಾ ಮುಂಡಾರವರ ಹೆಸರು ಅಗ್ರಗಣ್ಯವಾದುದು. ವಿದೇಶಿ ಮಿಷನರಿಗಳ ಮತಾಂತರದ ಷಡ್ಯಂತ್ರದ ವಿರುದ್ಧ ಬ್ರಿಟಿಷರ ದಮನಕಾರಿ ಮತ್ತು ಕ್ರೂರ ಶಾಸನದ ವಿರುದ್ಧ ತನ್ನ ಚಿಕ್ಕ ವಯಸ್ಸಿನಲ್ಲೇ ಹೋರಾಡಿದ ಹಾಗೂ ತನ್ನ ಸಮುದಾಯದ ಜನರನ್ನು ಸಂಘಟಿಸಿ ಕ್ರಾಂತಿಯ ಅಲೆಯನ್ನು ಹಬ್ಬಿಸಿದವನು “ಭಗವಾನ್ ಬಿರಸಾ ಮುಂಡಾ”.

ಈಗಿನ ಝಾರ್ಖಂಡ್ ಮತ್ತು ದಕ್ಷಿಣ ಬಿಹಾರ ಪ್ರದೇಶಗಳನ್ನು ಛೋಟಾ ನಾಗಪುರ ಎಂದು ಕರೆಯುತ್ತಾರೆ.
ಈ ಪ್ರದೇಶದಗಳು ದಟ್ಟವಾದ ಅರಣ್ಯ ಮತ್ತು ಬೆಟ್ಟಗಳಿಂದ ಕೂಡಿದ್ದು ಇಲ್ಲಿ 90 ಪ್ರತಿಶತ ವನವಾಸಿಗಳಾದ “ಮುಂಡಾ” ಹಾಗು ಉರಾಂವ್ ಸಮುದಾಯದವರು ವಾಸಿಸುತ್ತಾರೆ. ಮುಂಡಾ ಎಂದರೆ ಮುಖ್ಯಸ್ಥ ಎಂದು ಅರ್ಥ. ಅವರ ಭಾಷೆ ಮುಂಡಾರಿ. ಛೋಟಾ ನಾಗಪುರದ ಉಲಿಹಾತು ಗ್ರಾಮದಲ್ಲಿ ನವೆಂಬರ್ 15 1875 ರಂದು ಮುಂಡಾ ಸಮುದಾಯದಲ್ಲಿ ಒಬ್ಬ ಮಹಾನ್ ವ್ಯಕ್ತಿಯ ಜನ್ಮವಾಯಿತು ಆ ವ್ಯಕ್ತಿಯ ಹೆಸರೇ “ಬಿರಸಾ ಮುಂಡಾ”. ತಂದೆ ಸುಗನ ಮುಂಡಾ ಹಾಗು ತಾಯಿ ಕಾರ್ಮಿಹಾತುರಿಗೆ 4 ನೇ ಪುತ್ರ ಬಿರಸಾ.

ಚಿಕ್ಕಂದಿನಿಂದಲೇ ತನ್ನ ಸಮುದಾಯದ ಮಕ್ಕಳನ್ನು ಸಂಘಟಿಸಿ ಆಟಗಳನ್ನು ಆಡುತ್ತ ತನ್ನ ತಂದೆ ತಾಯಿಗೆ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಬೆಳೆದನು. ಕಾಡಿನಲ್ಲಿ ಕುರಿ ಕಾಯಲು ಹೋದಾಗ ತಾನೇ ಕೊಳಲನ್ನು ತಯಾರಿಸಿ ಮಧುರವಾಗಿ ನುಡಿಸುತ್ತಿದ್ದ. ಮುಂಡಾ ಜನಾಂಗದಲ್ಲಿ ಒಂದು ನಂಬಿಕೆ ಇತ್ತು. ಅದರ ಪ್ರಕಾರ, ಮುಂಡಾ ಜನಾಂಗದಲ್ಲಿ ಒಬ್ಬ ದೇವತೆ ಜನಿಸಿ ಮುಂಡಾ ಸಮುದಾಯವನ್ನು ಮುನ್ನಡೆಸುವನು ಮತ್ತು ಅವನು ತನ್ನ ಕೊಳಲಿನ ನಾದದಿಂದ ಜನರನ್ನು ಹೋರಾಟಕ್ಕೆ ಪ್ರೇರೇಪಿಸುವನು ಎಂದು. ಇದು ಸತ್ಯವೇ ಆಯಿತು.

ಬಿರಸಾ ಕಲಿಕೆಯಲ್ಲಿ ಬಹಳ ಚುರುಕಾಗಿದ್ದ ಕಾರಣ ಅವನನ್ನು ಜರ್ಮನ್ ಮಿಷನರಿ ಶಾಲೆಗೇ ಸೇರಿಸಲು ಪೋಷಕರು ಮುಂದಾದರು. ಆದರೆ ಜರ್ಮನ್ ಮಿಷನರಿ ಶಾಲೆಯಲ್ಲಿ ಕೇವಲ ಕ್ರಿಶ್ಚಿಯನರಿಗೆ ಮಾತ್ರವೇ ಅವಕಾಶವಿತ್ತು ಹಾಗಾಗಿ ಬಿರಸಾನ ಕುಟುಂಭವು ಕ್ರೈಸ್ತ ಮತಕ್ಕೆ ಮತಾಂತರವಾಯಿತು. ಅವರಿಗೆಲ್ಲ ಬ್ಯಾಪ್ಟಿಸಮ್ ಕ್ರಿಯೆ ಮಾಡಲಾಯಿತು. ಶಿಶಾ(ಜುಟ್ಟು) ಹೊಂದಿದ್ದ ಬಿರಸಾನ ಜುಟ್ಟನ್ನು ಕತ್ತರಿಸಲಾಯಿತು. ಇದು ಆ ಎಳೆಯ ಮನಸ್ಸಿಗೆ ಬಹಳ ಆಘಾತವನ್ನು ಮಾಡಿತು.

ಮಿಷನರಿಯ ವಂಚನೆ:
ಒಂದು ರವಿವಾರ ಚಾಯಬಾಸದ ಚರ್ಚಿನಲ್ಲಿ ಜನರು ಪ್ರಾರ್ಥನೆಗಾಗಿ ಸೇರಿದ್ದರು. ಹೆಚ್ಚಿನವರು ಮುಂಡಾ ಜನರೇ ಇದ್ದರು. ಫಾದರ್ ನೋಟ್ರೋಸ್ ಈಶ್ವರನ ರಾಜ್ಯದ ಬಗ್ಗೆ ಹೇಳುತ್ತಾ ಭೂತಖೇತ್, ಸಹನಾಯಿ ಮುಂತಾದ ಮುಂಡಾ ಜನರ ಹಳ್ಳಿಗಳ ಸುತ್ತಲಿನ ಕಾಡನ್ನು ಮಿಷನರಿಗೆ ಒಪ್ಪಿಸುವಂತೆ ಹೇಳಿದನು. ಇದನ್ನು ಮುಂಡಾ ಜನರು ವಿರೋಧಿಸಿದಾಗ ಸಿಟ್ಟಾದ ಫಾದರ್ ಮುಂಡಾ ಜನರನ್ನು ವಂಚಕರು, ಕಳ್ಳರು, ಅಪ್ರಾಮಾಣಿಕರು ಎಂದು ನಿಂದಿಸಿದನು. ತನ್ನ ಜನಾಂಗದವರ ನಿಂದನೆ ಕೇಳಿದ ೧೪ ವರ್ಷದ ಬಿರಸಾನ ರಕ್ತ ಕುದಿಯ ಹತ್ತಿತು. ಅವನು ಎದ್ದು ನಿಂತು “ನೀವು ಯಾರನ್ನು ವಂಚಕರು ಕಳ್ಳರು ಅಪ್ರಾಮಾಣಿಕರು ಎನ್ನುತ್ತೀರಿ? ನಾವು ವನವಾಸಿಗಳು ಇದುವರೆಗೆ ಯಾರಿಗೂ ವಂಚಿಸಿಲ್ಲ. ನಮ್ಮಂತಹ ಸರಳ ವ್ಯಕ್ತಿಗಳು ವಿಶ್ವದಲ್ಲೇ ಸಿಗುವುದಿಲ್ಲ. ನೀವು ಬಿಳಿಯರು, ಶಾಸಕರೂ ಬಿಳಿಯರು ಹಾಗಾಗಿ ನೀವು ಅವರ ಪಕ್ಷ ವಹಿಸುತ್ತೀರಿ” ಎಂದು ಗದರಿದನು. ಈ ಘಟನೆಯ ನಂತರ ಬಿರಸನನ್ನು ಮಿಷನರಿ ಶಾಲಯಿಂದ ಹೊರಹಾಕಲಾಯಿತು.

ಬಿರಸಾ ಮುಂದೆ ಆಧ್ಯಾತ್ಮದಲ್ಲಿ ಆಸಕ್ತಿ ತಳೆದು ವೇದ, ರಾಮಾಯಣ, ಮಹಾಭಾರತ, ಉಪನಿಷತ್ ಮುಂತಾದವುಗಳನ್ನು ಅಧ್ಯಯನ ಮಾಡಿದನು. ಚೈತನ್ಯ ಮಹಾಪ್ರಭುಗಳ ಸಂಪರ್ಕಕ್ಕೆ ಬಂದನು. ಈ ಸಾಧನೆಗಳಿಂದ ಅವನ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆ ಆಯಿತು. ಅವನು ಇನ್ನಷ್ಟು ಪರಿಪೂರ್ಣ ವ್ಯಕ್ತಿತ್ವ ಹೊಂದಲು ಇದು ಸಹಾಯವಾಯಿತು.

ಬ್ರಿಟೀಷರ ಮತ್ತು ಮಿಷನರಿಗಳ ಪಿತೂರಿ:
1857 ರ ಪ್ರಥಮ ಸ್ವತಂತ್ರ ಸಂಗ್ರಾಮದಿಂದ ಎಚ್ಚೆತ್ತ ಬ್ರಿಟೀಷರು, ಯೂರೋಪಿನಿಂದ ರೋಮನ್ ಕಥೊಲಿಕ್ ಮಿಷನ್ ಮತ್ತು ಜರ್ಮನ್ ಲೂಥರನ್ ಚರ್ಚ್ ಮಿಷನರಿಗಳ ಒಂದು ತಂಡವನ್ನು ಛೋಟಾ ನಾಗಪುರಕ್ಕೆ ಕರೆಸಿಕೊಂಡುರು. ಮುಂಡಾ ಜನಾಂಗವನ್ನು ತಮ್ಮ ವಶದಲ್ಲಿ ಇಡಲು ಮಿಷನರಿಗಳ ಸಹಾಯವನ್ನು ಬ್ರಿಟೀಷರು ಪಡೆದರು. ಮಿಷನರಿಗಳು ಮುಂಡಾ ಹಾಗೂ ಉರಾಂವ್ ಜನರಿಗೆ ಶಿಕ್ಷಣ, ಆಸ್ಪತ್ರೆ ವ್ಯವಸ್ಥೆ, ಸಣ್ಣ ಪುಟ್ಟ ಸಹಾಯವೂ ಮಾಡುತ್ತಾ ಅವರನ್ನು ಮತಾಂತರ ಮಾಡಲಾರಂಭಿಸಿದರು.

ಭಾರತದ ವನ ಸಂಪತ್ತಿನ ಮೇಲೆ ಹಿಡಿತ ಸಾಧಿಸಿ ಹಣ ಸಂಪಾದಿಸಲು 1865 ರಲ್ಲಿ “ಭಾರತೀಯ ವನ ಅಧಿನಿಯಮ” ಎಂಬ ಕಾನೂನನ್ನು ತಂದರು. ಈ ಕಾನೂನಿನಿಂದ ವನವಾಸಿಗಳು ಕಾಡಿನ ಮೇಲಿನ ಅನೇಕ ಅಧಿಕಾರಗಳನ್ನು ಕಳೆದುಕೊಂಡುರು. ಬುಡಕಟ್ಟು ಜನರು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾದರೆ ಅವರ ಭೂಮಿ ಮತ್ತು ಇತರೆ ಅಧಿಕಾರಗಳು ಸಿಗುವುದಾಗಿ ಮಿಷನರಿಗಳು ನಂಬಿಸಿ ಗ್ರಾಮ ಗ್ರಾಮವೇ ಮಾತಂತರ ಮಾಡಿದರು.
ಕಾಡಿನಲ್ಲಿ ಸಿಗುವ ಗೆಡ್ಡೆ, ಗೆಣಸು, ಜೇನು, ಹಣ್ಣು, ಹಂಪಲು, ಹಾಗೂ ಇನ್ನಿತರ ಕಾಡಿನ ಉಪನ್ನಗಳನ್ನು ಮಾರಾಟಮಾಡಿ ಜೀವನ ನಡೆಸುತ್ತಿದ್ದ ವನವಾಸಿಗಳಿಗೆ ಈ ಕಾನೂನಿನಿಂದ ಜೀವನ ಮಾಡುವುದೇ ಕಷ್ಟವಾಯಿತು. ಬ್ರಿಟೀಷರಿಗೂ ಮುಂಚಿನ ಸಮಯದವರೆಗೂ ಯಾವ ರಾಜರು ವನವಾಸಿಗಳ ಅರಣ್ಯಾಧಿಕಾರಕ್ಕೆ ಚುತಿ ಮಾಡಿರಲಿಲ್ಲ. ಅನೇಕ ವನವಾಸಿಗಳೇ ರಾಜರು ಸಹ ಆಗಿದ್ದರು. ಮಧ್ಯಪ್ರದೇಶದ ಗೊಂಡ ಸಂಸ್ಥಾನ, ಕರ್ನಾಟಕದ ಸುರಪುರದ ಬೇಡ ನಾಯಕರ ಸಂಸ್ಥಾನ ಬಹಳ ಅಚ್ಚುಕಟ್ಟಾಗಿ ರಾಜ್ಯಭಾರ ಮಾಡಿದ್ದರು. ಆದರೆ ಬ್ರಿಟೀಷರ ಆಳ್ವಿಕೆಯಲ್ಲಿ ವನವಾಸಿಗಳ ಜೀವನ ಬರ್ಬರವಾಯಿತು. ಅರಣ್ಯ ಸಂಪತ್ತು ಬ್ರಿಟೀಷರ ಕೈ ಸೇರಿತು. ಇದು ಸಾಲದೆಂಬಂತೆ 1878 ರಲ್ಲಿ ಈ ನಿಯಮಕ್ಕೆ ಮತ್ತಷ್ಟು ತಿದ್ದುಪಡಿ ತಂದು ವನವಾಸಿಗಳು ಅರಣ್ಯ ಸಂಪತ್ತನ್ನು ಸಂಗ್ರಹಿಸದಂತೆ ಮಾಡಿದರು. ಹೀಗೆ ವನವಾಸಿಗಳು ಮಿಷನರಿ, ಬ್ರಿಟೀಷ್ ಮತ್ತು ವ್ಯಾಪಾರಿಗಳ ಮಧ್ಯೇ ತತ್ತರಿಸಿದರು.

ಇದರ ಜೊತೆಗೆ ಇಂಗ್ಲಿಷ್ ಪ್ರಚಾರ ಪ್ರಸಾರ ಹೆಚ್ಚಾಯಿತು. ಎಲ್ಲಾ ಪತ್ರಗಳು ಇಂಗ್ಲಿಷ್ನಲ್ಲಿಯೇ ಬರಲಾರಂಭಿಸಿದವು. ಇಂಗ್ಲಿಷ್ ಬಾರದ ಮುಂಡಾ ಜನಾoಗದವರು ಮೋಸಹೋದರು. ಮಿಷನರಿಗಳ ಶಾಲೆಯಲ್ಲಿ ಮುಂಡಾ ಜನರ ಭಾಷೆ , ಸಂಸ್ಕೃತಿ, ಪದ್ದತಿ, ಸಮಾಜ ವ್ಯವಸ್ಥೆಗಳ ಬಗ್ಗೆ ಕೀಳರಿಮೆ ಬರುವಂತೆ ಭೋದಿಸಲಾಯಿತು.
ಇತ್ತ ಮಿಷನರಿಗಳು ನೀಡಿದ ಭೂಮಿ ಮತ್ತು ಅಧಿಕಾರದ ಆಶ್ವಾಸನೆಗಳು ಸುಳ್ಳಾದವು. ವನವಾಸಿಗಳ ಸಹನೆ ಮಿತಿ ಮೀರಿತ್ತು. ಮತಾಂತರಗೊಂಡ ಮುಂಡಾ ಸಮುದಾಯದವರು ಪಾದ್ರಿಯನ್ನು ಪ್ರಶ್ನಿಸಲಾರಂಭಿಸಿದರು. ಅನೇಕ ಕುಟುಂಭಗಳು ಮರಳಿ ಮಾತೃಧರ್ಮಕ್ಕೆ ಬಂದರು. ಬಿರಸಾ ನ ಕುಟುಂಭವೂ 1890 ರಲ್ಲಿ ಪುನಃ ಮಾತೃಧರ್ಮಕ್ಕೆ ಬಂದರು.

ಬಿರಸಾ ತನ್ನ ಸಮುದಾಯದ ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ , ಪರಂಪರೆಯ ಪುನರುತ್ಥಾನಕ್ಕೆ ಸಂಕಲ್ಪ ಮಾಡಿ ಯುವಜನರನ್ನು ಸಂಘಟಿಸಿ ಬ್ರಿಟೀಷರ ವಿರುದ್ಧ ಹೋರಾಡಲು ಅವರಲ್ಲಿ ಚೈತನ್ಯ ತುಂಬಲು ತನನ್ನು “ದೇವರ ಅವತಾರ” ಎಂದು ಘೋಷಿಸಿದ. “ಬ್ರಿಟೀಷರು ಹಾಗೂ ಮಿಷನರಿಗಳು ಒಂದೇ ಅವರು ನಮ್ಮ ಸಮಾಜವನ್ನು ದುರ್ಬಲ ಗೊಳಿಸುತ್ತಿದ್ದಾರೆ. ಅವರು ಮೊದಲು ನಮ್ಮ ಹೆಸರು ಬದಲಿಸಿ ನಮ್ಮ ಜುಟ್ಟು ಕತ್ತರಿಸಿ ಶಿಲುಬೆಯನ್ನು ಹಾಕುತ್ತಾರೆ ನಂತರ ನಮ್ಮ ಉಡುಗೆತೊಡುಗೆ ಬದಲಾಗುತ್ತದೆ. ಹೀಗೆ ಆದರೆ ಮುಂಡಾ ಜನಾಂಗ ಈ ಭೂಮಿಯಿಂದ ಮಾಯವಾಗುತ್ತದೆ” ಎಂದು ತನ್ನ ಪ್ರವಚನದಲ್ಲಿ ಹೇಳಿ ಎಚ್ಚರಿಸುತ್ತಿದ್ದನು.

ಬ್ರಿಟಿಷರಿಗೆ ಬಿಸಿ ಮಟ್ಟಿಸಿದ್ದು:

1894 ರಲ್ಲಿ ಬರಗಾಲ ಬಂದಿತ್ತು. ಆದರೆ ಬ್ರಿಟೀಷ ಶಾಸನ ಮತ್ತೊಂದು ಆದೇಶ ಹೊರಡಿಸಿ, ಕಾಡುಗಳನ್ನು ರಕ್ಷಿತ ಅರಣ್ಯ ಎಂದು ಘೋಷಿಸಿತು. ಈ ನೀತಿಯ ವಿರುದ್ಧ ಬಿರಸಾ ತನ್ನ ಎಲ್ಲಾ ಜನಪ್ರಿಯತೆ ಬಳಸಿ ಸ್ವತಂತ್ರ ಸಂಗ್ರಾಮವನ್ನು ಹಬ್ಬಿಸಿದ. “ಅಬುವ ರಾಜ್ ಹಾರೆ ಜಾನಾ ಓರೊ ಮಹಾರಾಣಿ ರಾಜ್ ಟಂಡು ಜಾನಾ”
ಅಂದರೆ ನಮ್ಮ ಶಾಸನ ಬಂದಿದೆ , ಮಹಾರಾಣಿ ಎಲಿಜಿಬತ್ ಶಾಸನ ಹೋಗಿದೆ ಎಂದು ಹೇಳುತ್ತಿದ್ದನು.
19 ವರ್ಷದ ಯುವ ನೇತಾರ ಬಿರಸಾ ಮುಂಡಾ ನ ಮಾತಿನಿಂದ ಪ್ರೇರಣೆ ಪಡೆದು ಅನೇಕ ಕಡೆ ಬ್ರಿಟೀಷರ ವಿರುದ್ಧ ಆಂದೋಲನಗಳು ನಡೆದವು.

ಜೈಲುವಾಸ :

ಶಾಸನದ ವಿರುದ್ಧ ಎತ್ತಿ ಕಟ್ಟಿದ ಆರೋಪದ ಮೇಲೆ ಬಿರಸಾ ಗೆ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿತು ಬ್ರಿಟೀಷ ಸರಕಾರ. ಕೇವಲ 20 ವರ್ಷದ ವಯಸಿನ್ನಲ್ಲಿ ಬಿರಸಾ ಒಬ್ಬ ಮಹಾಪುರುಷನಾಗಿ ಪರಿಗಣಿಸಲ್ಪಟ್ಟ . “ವಿಶ್ವದ ತಂದೆ ಭಗವಾನ್ ಬಿರಸಾ ” ಎಂಬ ಘೋಷಣೆ ಎಲ್ಲೆಲ್ಲೂ ಮೊಳಗ ತೊಡಗಿತು.

ಸಶಸ್ತ್ರ ಹೋರಾಟ:

30 ನವೆಂಬರ್ 1897 ಜೈಲಿನಿಂದ ಹೊರಬಂದ ಬಿರಸಾ ಹೋರಾಟದ ರೂಪವನ್ನೇ ಬದಲಿಸಿದ. ಭೂಗತನಾಗಿ ಸಶಸ್ತ್ರ ಹೋರಾಟಕ್ಕೆ ಮುಂದಾದ. ಗೆರಿಲ್ಲಾ ಸೈನಿಕರ ಪಡೆಯನ್ನು ಕಟ್ಟಿದ, 2 ವರುಷ ತನ್ನ ಸೈನ್ಯದ ತರಬೇತಿಗೆ ಮೀಸಲಿಟ್ಟ. 1899 ಡಿಸೇಂಬೆರ್ ನಲ್ಲಿ ಬ್ರಿಟೀಷರ ವಿರುದ್ಧ ಬಂಡಾಯದ ಕರೆ ನೀಡಿದ. ಬ್ರಿಟೀಷರ ಕಛೇರಿ, ಕಟ್ಟಡಗಳು ಮತ್ತು ಬ್ರಿಟೀಷರನ್ನು ಬೆಂಬಲಿಸುವ ಜನರ ಮನೆಗಳ ಮೇಲೆ ಬಿರಸಾ ಗೆರಿಲ್ಲಾ ಸೈನಿಕರು ಧಾಳಿ ಮಾಡಿದರು. “ಉಲಗುಲಾನ್” (ಕ್ರಾಂತಿಯ ಕಹಳೆ) ಗುಪ್ತ ಸಂಕೇತ ಬಿರಸಾ ಸೈನಿಕರಿಗೆ ಮಾತ್ರವೇ ತಿಳಿದಿತ್ತು. 24 ಡಿಸೆಂಬರ್ 1899 ಸುಮಾರು 7000 ಸೈನಿಕರೊಂದಿಗೆ 550 ಚದುರ ಮೀಟರ್ ಕ್ಷೀತ್ರದ ಬ್ರಿಟೀಷ್ ಅಧಿಕಾರಿಗಳ ಮನೆಗಳು, ಕ್ಲಬ್ ಗಳು, ಪೊಲೀಸ್ ಠಾಣೆಗಳು, ಕ್ರಿಶ್ಚಿಯನ್ ಮಿಷನರಿಗಳ ಮೇಲೆ ಬಿರಸಾ ಸೈನಿಕರುಬಾಣಗಾಳ ಮಳೆ ಸುರಿಸಿದರು. ಮರುದಿನ ಬ್ರಿಟೀಷರಿಗೆ ಯಾರು ಮಾಡಿದ್ದು, ಯಾರನ್ನು ಬಂದಿಸಬೇಕು ಎಂಬುದೇ ತಿಳಿಯಲಿಲ್ಲ. ಈ ಹೋರಾಟದ ಪರಿಣಾಮ ಮುಂಡಾ ಸಮುದಾಯಕ್ಕೆ ತಮ್ಮ ಹಕ್ಕನ್ನು ತೆಗೆದು ಕೊಳ್ಳುವ ಬಗೆ ತಿಳಿಯಿತು. ಮುಂಡಾ ಸಮುದಾಯ ಮತ್ತೆ ಸ್ವಾಭಿಮಾನದಿಂದ ತಲೆ ಎತ್ತಿ ನಿಂತಿತು. ಜೆನವರಿ 8 1900 ರಂದು ಮತ್ತೆ ಬ್ರಿಟಿಷರ ಮೇಲೆ ಆಕ್ರಮಣ ಮಾಡಿತು ಬಿರಸಾ ಸೈನ್ಯ. ಈ ಬಾರಿ 4000 ಹೆಚ್ಚು ಪುರುಷರು, ಮಕ್ಕಳೂ, ಮಹಿಳೆಯರೂ ಹೋರಾಟದಲ್ಲಿ ಸೇರಿದರು. ಬ್ರಿಟೀಷ್ ಸರಕಾರ ಈ ಬಾರಿ ಹೆಚ್ಚು ಸೈನ್ಯ ಕರೆಸಿತ್ತು ಮತ್ತು ಗೋಲಿಬಾರ್ ಗೆ ಆದೇಶ ನೀಡಿದ ಕಾರಣ ಅನೇಕ ಜನ ಹುತಾತ್ಮರಾದರು. ಬಿರಸಾ ನನ್ನು ಕಾಪಾಡಿ ಅವನ ಸೈನಿಕರು ಕರೆದೊಯ್ದರು. ಬಿರಸಾನ ಸುಳಿವು ನೀಡಿದವರಿಗೆ 500 ರೂ ಬಹುಮಾನ ಘೋಷಿಸಿದರು ಬ್ರಿಟೀಷರು . ಗುಪ್ತಚರರ ಸಹಾಯದಿಂದ ಮಾರ್ಚ್ 3 1900 ರಂದು ಬಿರಸಾನನ್ನು ಬಂಧಿಸಲಾಯಿತು. ಬಿರಸಾ ಮುಂಡಾ ಬ್ರಿಟೀಷರ ಭಯಂಕರ ಯಾತನೆಯನ್ನು ತಾಳಲಾರದೆ ಅವನ ಆರೋಗ್ಯ ಹದಗೆಟ್ಟಿತು. ಕೇವಲ 25 ವರ್ಷದ ಬಿರಸಾ ಮುಂಡಾ ಜೂನ್ 9 1900 ರಂದು ತನ್ನ ಜನರಿಗೆ ಮತ್ತು ಇಡೀ ಭಾರತಕ್ಕೆ ಸ್ವಾಭಿಮಾನದ ಪಾಠವನ್ನೇ ಕಲಿಸಿ ತನ್ನ ಜೀವನವನ್ನು ಸಾರ್ಥಕ ಮಾಡಿ ಹುತಾತ್ಮನಾದ. ಬಿರಸಾ ನ ಜೇವನ ನಮೆಲ್ಲರಿಗೆ ಪ್ರೇರಣೆ.

ಬಿರಸಾನಂತಹ ಅನೇಕ ವನವಾಸಿಗಳ ಶೌರ್ಯ ಪರಾಕ್ರಮವನ್ನು ನಮ್ಮಿಂದ ಮುಚ್ಚಿಡಲಾಗಿದೆ ಏಕೆ ? ಈ ವ್ಯಕ್ತಿಗಳು ನಮ್ಮ ಪಠ್ಯಪುಸ್ತಕದಲಿಲ್ಲ ಏಕೆ ? ಬ್ರಿಟೀಷರು ತಮಗೆ ಬೇಕಾದಹಾಗೆ ನಮ್ಮ ಚರಿತ್ರೆ ಬರೆಯಿಸಿದರು. ಹಾಗಾಗಿ ನಮಗೆ ವನವಾಸಿ ಸ್ವತಂತ್ರ ಹೋರಾಟಗಾರರ ಮಾಹಿತಿ ಇಲ್ಲ. ನಮ್ಮ ಸರಕಾರಗಳು ಸ್ವಾತಂತ್ರದ ನಂತರ ಈ ಕೆಲಸ ಮಾಡಬೇಕಿತ್ತು. ಯಾವ ಮುಖ್ಯ ಮಾಧ್ಯಮಗಳು ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಲಿಲ್ಲ ಮತ್ತು ಈ ವರಗೆ ಕಥೆ, ಸಿನಿಮಾಗಳು ಬರಲಿಲ್ಲ. ವನವಾಸಿಗಳ ಸಾಹಸ, ಸ್ವಾಭಿಮಾನ ಮತ್ತು ಶೌರ್ಯದ ಕಥೆಗಳು ಬೆಳಕಿಗೆ ಬಂದಿಲ್ಲ. ವನವಾಸಿಗಳಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ವನವಾಸಿಗಳಿಗೆ ಸೂಕ್ತವಾದ ಅನುಕೂಲತೆಗಳನ್ನು ಮಾಡಿಕೊಡಲು ಸರಕಾರಗಳು ವಿಫಲವಾಗಿದೆ. ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಇಂದಿಗೂ ಮಿಷನರಿಗಳು ಅವ್ಯಾಹತವಾಗಿ ಮತಾಂತರ ಮಾಡುತ್ತಿದ್ದಾರೆ. “India Is land of diversity” ನಮ್ಮ ದೇಶ ವಿವಿಧತೆಗೆ ಹೆಸರುವಾಸಿ. ಅದರಲ್ಲೂ ವನವಾಸಿಗಳ ಸಂಸ್ಕೃತಿ, ಪರಂಪರೆ, ಕಲೆ, ಜೀವನ ಪದ್ಧತಿ, ಸಾಮಾಜಿಕ ವ್ಯವಸ್ಥೆ ವಿಶಿಷ್ಟವಾಗಿದೆ. ಇಂತಹವರನ್ನು ಮತಾಂತರಿಸಿ ಒಂದೇ ಅಚ್ಚಿನೊಳಗೆ ಹಾಕುವುದು ಎಷ್ಟು ಸರಿ? ಇದರ ಮಧ್ಯೆ ಆಶಾಕಿರಣದಂತೆ ಕೆಲವು ಸಂಸ್ಥೆಗಳು ವನವಾಸಿಗಳ ಮಧ್ಯೆ ಸೇವಾ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಆರೋಗ್ಯ, ವಿದ್ಯಾಭ್ಯಾಸ, ಗುಡಿಕೈಗಾರಿಕೆ ಹೀಗೆ ವನವಾಸಿಗಳ ಮೂಲ ಸಂಸ್ಕೃತಿಯನ್ನು ಅಳಿಸದೇ ಸೇವೆಮಾಡುತ್ತಿರುವ ಸಂಸ್ಥೆಗಳಲ್ಲಿ ಅಗ್ರಮಾನ್ಯವಾದದ್ದು “ವನವಾಸಿ ಕಲ್ಯಾಣ ಆಶ್ರಮ”. ಸ್ವಾಭಿಮಾನಿ ಹಾಗು ಆತ್ಮ ನಿರ್ಭರ ವನವಾಸಿಗಳನ್ನಾಗಿ ಮಾಡುತ್ತಿರುವ ಈ ಸಂಸ್ಥೆಗೆ ನನ್ನ ಅಭಿನಂಧನೆಗಳು. ಇದು ಭಗವಾನ್ ಬಿರಸಾ ತೋರಿಸಿದ ದಾರಿಯೇ ಆಗಿದೆ. ವನವಾಸಿಗಳ ಸ್ವತಂತ್ರ ಹೋರಾಟಗಾರರ ಗೌರವಾರ್ಥವಾಗಿ ಹಾಗು ಭಗವಾನ್ ಬಿರಸಾ ಮುಂಡಾ ಜಯಂತಿಯ ಅಂಗವಾಗಿ ನವೆಂಬರ್ 15 “ಗಿರಿಜನ ಸ್ವಾಭಿಮಾನ ದಿನ” ಎಂದು ಆಚರಿಸಲಾಗುತ್ತಿದೆ. ಬನ್ನಿ ಸ್ವಾಭಿಮಾನಿ ವನವಾಸಿಗಳಿಗೆ ಶುಭಕೋರೋಣ, ಪ್ರೇರಣೆ ಪಡೆಯೋಣ.

ಸತ್ಯಪ್ರಕಾಶ: ಸಾಫ್ಟ್ ವೇರ್ ತಂತ್ರಜ್ಞರು, ಸಾಮಾಜಿಕ ಕಾರ್ಯಕರ್ತರು

The post ಭಾರತದ ಸ್ವಾಭಿಮಾನ ಎತ್ತಿಹಿಡಿದ ಸ್ವಾಭಿಮಾನಿ ವನವಾಸಿಗಳು first appeared on Vishwa Samvada Kendra.

#SamvadaWorld: New web portal of VSK Karnataka to be launched today

$
0
0

Vishwa Samvada Kendra, Karnataka will be starting a new web portal from today. www.samvadaworld.com #SamvadaWorld, a media portal in English language is intended to cater with a special focus on International affairs, Geopolitics, Defence and Security. Looking through the world through the lenses of Bharat is utmost essential in today’s global scenario and SamvadaWorld is designed for the purpose.

Sri V Nagaraj, RSS Sanghachalak of Dakshina Madhya Kshetra comprising of states of Karnataka Andhra and Telangana will be launching the new website of #SamvadaWorld today (16th Nov2020) at 4:30pm.

Dignitaries including CM of Karnataka Sri B S Yeddyurpappa, Dy CM Dr. C N Ashwathnarayan and celebreties have wished their best for the launch event through tweets. The launch will be live on Facebook.com/SamvadaWorld at 4:30 pm

VSK Karnataka team invites everyone to join the online program at 4:30pm and follow the new website.

The post #SamvadaWorld: New web portal of VSK Karnataka to be launched today first appeared on Vishwa Samvada Kendra.

Launch of new web portal www.samvadaworld.com

$
0
0

Vishwa Samvada Kendra, Karnataka’s new initiative www.samvadaworld.com was launched today. Sri V Nagaraj, Sanghachalak of RSS’ Dakshina Madhya Kshetra comprising of states of Karnataka, Andhra and Telangana, Hon Secretary of Mythic Society launched the website and the operations of Samvada World.

launch of the website www.samvadaworld.com by Sri V Nagaraj. Sri Na Thippeswamy, Sri Prashanth Vaidyaraj, (Editor) and Smt Kshama Naragund also seen.

Samvada World news is an absolute necessity and we cannot remain isolated from entire world. India narrowed herself in the past and being alert to global developments and sharing notes is the need of the hour. Swami Vivekananda had also observed this earlier, Sri Nagaraj said in his address today after the launch.

In this Multipolar world, we have observed that globalisation has failed the world. The country has to grow based on cultural ethos supplemented by interdependence on the world which has increased over the years Sri Nagaraj said.

Expansionist mindset of countries needs to be understood for our own security and welfare of the country. Common man’s participation is utmost required in democracy and he cannot shy away himself from global developments. The common man can now connect with the world and the analysis the website produces so as to be aware of the threats associated for the country

Sri V Nagaraj wished his best to samvadaworld and opined that it would work in not mere disseminating news but more of a think tank, analysing world news.

Sri V Nagaraj, Sri Na Thippeswamy, Sri Prashanth Vaidyaraj


Vishwa Samvada Kendra (VSK) is a media centre working closely with the activities of journalism- Print, Electronic and Social media. Apart from felicitating journalists on Maharshi Narada Jayanti (considered Pioneer journalist) for their impactful stories, reports which shape the society VSK Karnataka is also involved aggregating news disseminating news and also actively training interested ones in the field of ‘letters to editor’, writing of articles etc. It also conducts seminars, analysis activities which have relevance with time.

Connected with the global world through samvada.org and @VSKKarnataka Twitter accounts, VSK Karnataka started its educational and journalism video story presentation through their Facebook(samvada) and YouTube(samvadk) accounts which has now garnered great following. On Vijayadashami day recently, VSK Karnataka started its new Twitter initiative of @vsksamskritam which was started to share news only in Samskrita language with the help of Samskrita Bharati.

Now with the launch of www.samvadaworld.com and @SamvadaWorld Twitter accounts, SamvadaWorld is intended as a media portal in English language with a special focus on International affairs, Geopolitics, Defence and Security. Looking through the world through the lenses of Bharat is utmost essential in today’s global scenario and SamvadaWorld is designed for the purpose.


Sri Prashanth Vaidyaraj will be the editor of SamvadaWorld. He has been the editor of Aseema English magazine in the past and also was the South India Bureau chief of Organiser weekly.

RSS’ Dakshina Madhya Kshetra’s Karyavah and a retired official of KIADB Sri Na Thippeswamy, VSK’s trustees, its coordinator and friends of VSK were present at the gathering at Rashtrothana Parishat’s Keshava Shilpa auditorium. Smt. Kshama Naragund, one of the Trustees of VSK anchored the event.

The post Launch of new web portal www.samvadaworld.com first appeared on Vishwa Samvada Kendra.

www.samvadaworld.com ಎಂಬ ನೂತನ ವೆಬ್ ಪೋರ್ಟಲ್ ಲೋಕಾರ್ಪಣೆ

$
0
0

ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ನೂತನ ಜಾಲತಾಣ ಸಂವಾದವರ್ಲ್ಡ್.ಕಾಮ್ (www.samvadaworld.com) ಇಂದು ಲೋಕಾರ್ಪಣೆಗೊಂಡಿದೆ. ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರಾದ ಶ್ರೀ ವಿ ನಾಗರಾಜ್ ಅವರು ಜಾಲತಾಣದ ಲೋಕಾರ್ಪಣೆಯನ್ನು ಇಂದು ನೆರವೇರಿಸಿದರು. SamvadaWorld, VSKKarnatakaMedia ನ ಫೇಸ್ಬುಕ್ ಪೇಜ್ ಗಳಿಂದ ಈ ಕಾರ್ಯಕ್ರಮ ನೇರ ಪ್ರಸಾರಗೊಂಡಿತು.

ಜಾಲತಾಣದ ಲೋಕಾರ್ಪಣೆ ಶ್ರೀ ವಿ ನಾಗರಾಜ್ ಅವರಿಂದ. ಸಂಪಾದಕರಾದ ಪ್ರಶಾಂತ್ ವೈದ್ಯರಾಜ್, ಶ್ರೀ ನ ತಿಪ್ಪೇಸ್ವಾಮಿ, ಕ್ಷಮ ನರಗುಂದ ಉಪಸ್ಥಿತರಿದ್ದರು.

ಜಾಗತೀಕರಣದಿಂದ ನಾವು ಸೋತಿದ್ದೇವೆ. ನಾವು ನಮ್ಮ ಸುತ್ತಲಿನ ಜಗತ್ತನ್ನು ನೋಡುತ್ತಾ, ಅಲ್ಲಿನ ಆಗುಹೋಗುಗಳನ್ನು ಗಮನಿಸಿ ಸುಮ್ಮನಿದ್ದುಬಿಡಲು ಯಾವುದೇ ಅವಕಾಶವಿಲ್ಲ ಎಂದು ಶ್ರೀ ವಿ ನಾಗರಾಜ್ ಸಂವಾದವರ್ಲ್ಡ್ ಜಾಲತಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಈ ವಿಷಯವಾಗಿ ಹಿಂದೆ ಮಾತನಾಡಿ ಭಾರತ ಜಗತ್ತಿನ ಸಂಪರ್ಕದಲ್ಲಿ ಸದಾ ಇರಬೇಕು ಎಂದು ಎಚ್ಚರಿಸಿದ್ದರು ಎಂದು ಶ್ರೀ ನಾಗರಾಜ್ ತಿಳಿಸಿದರು.

ದೇಶದ ಸಾಮಾನ್ಯ ಪ್ರಜೆಯೂ ಸಹಿತ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲೇಬೇಕು ಹಾಗೂ ಜಗತ್ತಿನ ಆಗುಹೋಗುಗಳಿಗೆ ಸರ್ಕಾರ, ರಾಜಕೀಯ ನಾಯಕರಷ್ಟೇ ಹೊಣೆ ಎಂದು ಹೇಳಿ ತಪ್ಪಿಸಿಕೊಳ್ಳುವ ಯಾವುದೇ ಆಸ್ಪದ ಇಂದಿನ ದಿವಸದಲ್ಲಿ ಯಾರಿಗೂ ಉಳಿದಿಲ್ಲ ಎಂದು ಅವರು ನುಡಿದರು.

ಶ್ರೀ ನಾಗರಾಜ್ ವಿ, ಶ್ರೀ ನ ತಿಪ್ಪೇಸ್ವಾಮಿ, ಶ್ರೀ ಪ್ರಶಾಂತ್ ವೈದ್ಯರಾಜ್

ಸಂವಾದ ವರ್ಲ್ಡ್ ಕೈಗೊಂಡಿರುವ ಸಾಹಸವನ್ನು ಶ್ಲಾಘಿಸುತ್ತಾ ಮುಂದಿನ ದಿನಗಳಲ್ಲಿ ಕೇವಲ ಸುದ್ದಿಯನ್ನು ಬಿತ್ತರಿಸುವ, ಮಾಹಿತಿ ತಲುಪಿಸುವ ಕೆಲ್ಸವನ್ನಷ್ಟೇ ಮಾಡದೇ ವಿಚಾರ ವೇದಿಕೆಯ ಮಾಧ್ಯಮವಾಗಿ ಕಾರ್ಯ ನಿರ್ವಹಿಸಿ ಜನಸಾಮಾನ್ಯರಿಗೆ ದೇಶದ ಬಗ್ಗೆ, ವಿಶ್ವದ ಬಗ್ಗೆ ಮಂಥನ ನಡೆಸುವ ಲೇಖನಗಳು ಜಾಲತಾಣದಲ್ಲಿ ಮೂಡಿ ಬರಲಿ ಎಂದು ಆಶಿಸಿದರು.

ವಿಶ್ವ ಸಂವಾದ ಕೇಂದ್ರ, (ವಿ ಎಸ್ ಕೆ ) ಕರ್ನಾಟಕ ಎಂಬ ಮಾಧ್ಯಮ ಕೇಂದ್ರವು ಕಳೆದ ಹಲವು ವರ್ಷಗಳಿಂದ ಮುದ್ರಣ ಮತ್ತು ವಿದ್ಯುನ್ಮಾನ  ಸಂಬಂಧಿತ ಬಹುವಿಧ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ವಿಶ್ವ ಸಂವಾದ ಕೇಂದ್ರ, ಕರ್ನಾಟಕ ಆಧುನಿಕ ಲೋಕದಲ್ಲಿ ಜಗತ್ತಿನ ಆದ್ಯ ಪತ್ರಕರ್ತರೆಂದು ಕರೆಯಲ್ಪಡುವ ನಾರದ ಮಹರ್ಷಿಯ ಜಯಂತಿಯಂದು ಸಮಾಜದ ಓರೇ ಕೋರೆಗಳನ್ನು ತಮ್ಮ ಲೇಖನ, ವರದಿಯ ಮುಖಾಂತರ ತಿದ್ದುವ ಪತ್ರಕರ್ತರನ್ನು ಸನ್ಮಾನಿಸುತ್ತಿದೆ. ಸಾಮಾಜಿಕ ಮಹತ್ತ್ವದ ವಿಷಯಗಳ ಕುರಿತು ವಿಚಾರಗೋಷ್ಠಿಗಳು, ಸಾಮಯಿಕ ಘಟನೆಗಳ ಬಗ್ಗೆ ವಿಶ್ಲೇಷಣೆ, ಪ್ರಮುಖ ನಾಯಕರ ಮತ್ತು ಚಿಂತಕರ ಸಂದರ್ಶನ, ಸಾಂದರ್ಭಿಕ ವಿದ್ಯಮಾನಗಳಿಗೆ ಸಂಬಂಧಿಸಿ ಅಧ್ಯಯನಪೂರ್ಣ ಲೇಖನಗಳ ಪ್ರಕಾಶನ, ಉದಯೋನ್ಮುಖ ಪತ್ರಕರ್ತರ ಅಭ್ಯಾಸ ವರ್ಗ, ಆಸಕ್ತ ಕಿರಿಯರಿಗೆ ’ಸಂಪಾದಕರಿಗೆ ಪತ್ರಲೇಖನ’ ಕಲೆಯ ಪ್ರಶಿಕ್ಷಣ ಮುಂತಾದ ಕೆಲಸಗಳನ್ನು ಮಾಡುತ್ತಲಿದೆ.

samvada.org ಎಂಬ ಜಾಲತಾಣದ ಮೂಲಕ, @VSKKarnataka ಎಂಬ ಟ್ವಿಟರ್ ಖಾತೆಯ ಮೂಲಕ ಸುದ್ದಿ ಸಮಾಚಾರಗಳನ್ನು, ಲೇಖನಗಳನ್ನು ಪ್ರಕಟಿಸುತ್ತಿದ್ದ ವಿಎಸ್ ಕೆ ಸಂಸ್ಥೆ, ಕಳೆದವರ್ಷ ತನ್ನ ಸಂವಾದ (samvada, samvadk) ಎಂಬ ಯುಟ್ಯೂಬ್/ಫೇಸ್ಬುಕ್ ವಾಹಿನಿಯ ಮೂಲಕ ನಾನಾ ತರಹದ ಸಮಾಜಮುಖಿ ವಿಡಿಯೋಗಳನ್ನು ಪ್ರಕಟಿಸುತ್ತಿದೆ. ಇತ್ತೀಚೆಗಷ್ಟೇ, ವಿಜಯದಶಮಿಯಂದು ವಿ ಎಸ್ ಕೆ ಯ ಹೊಸ ಟ್ವಿಟರ್ ಖಾತೆ ಆರಂಭವಾಯಿತು. @vsksamskritam ಟ್ವಿಟರ್ ಖಾತೆಯಿಂದ ಸಂಸ್ಕೃತ ಭಾಷೆಯಲ್ಲಿ ಸಮಾಚಾರವನ್ನು ಪ್ರಕಟಿಸುವ ಕೆಲಸದಲ್ಲಿ ಸಂಸ್ಕೃತ ಭಾರತೀಯ ಜೊತೆ ಕೈಜೋಡಿಸಿದೆ. ಇದೀಗ ಜಾಗತಿಕ ಮಟ್ಟದ ಸುದ್ದಿಗಳು, ಅವುಗಳ ವಿಶ್ಲೇಷಣೆ, ವಿಜ್ಞಾನ ತಂತ್ರಜ್ಞಾನ, ಭದ್ರತೆ ಮತ್ತು ರಕ್ಷಣೆ ಈ ವಿಷಯಗಳಲ್ಲಿ ಸಮಾಚಾರವನ್ನು ಓದಲು samvadaworld.com ರಚಿತವಾಗಿದೆ.

ಶ್ರೀ ಪ್ರಶಾಂತ್ ವೈದ್ಯರಾಜ್ ಹೊಸ ಜಾಲತಾಣದ ಸಂಪಾದಕರಾಗಿರುತ್ತಾರೆ. ಹಿಂದೆ ಅಸೀಮ (ಆಂಗ್ಲ) ಮಾಸಿಕ ಪತ್ರಿಕೆಯ ಸಂಪಾದಕರಾಗಿ, ಆರ್ಗನೈಸರ್ ಸಾಪ್ತಾಹಿಕದ ದಕ್ಷಿಣ ಭಾರತದ ಬ್ಯುರೋ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಪ್ರಶಾಂತ್ ವೈದ್ಯರಾಜ್ ಅವರಿಗಿದೆ.

ಆರೆಸ್ಸೆಸ್ ದಕ್ಷಿಣ ಮಧ್ಯಕ್ಷೇತ್ರದ ಕಾರ್ಯವಾಹರಾದ ನ ತಿಪ್ಪೇಸ್ವಾಮಿಯವರು, ವಿಶ್ವ ಸಂವಾದ ಕೇಂದ್ರದ ವಿಶ್ವಸ್ತರು, ಸಂಯೋಜಕರು ಹಾಗೂ ಜಾಲತಾಣದ ಲೋಕಾರ್ಪಣೆಯನ್ನು ನೇರವಾಗಿ ನೋಡಲು ವಿ ಎಸ ಕೆ ಅಭಿಮಾನಿಗಳು ಇಂದು ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವ ಶಿಲ್ಪದಲ್ಲಿ ನೆರೆದಿದ್ದರು.

The post www.samvadaworld.com ಎಂಬ ನೂತನ ವೆಬ್ ಪೋರ್ಟಲ್ ಲೋಕಾರ್ಪಣೆ first appeared on Vishwa Samvada Kendra.

Viewing all 3435 articles
Browse latest View live


<script src="https://jsc.adskeeper.com/r/s/rssing.com.1596347.js" async> </script>