Quantcast
Channel: Samvada
Viewing all 3435 articles
Browse latest View live

Global consensus on reformation of Islamic doctrine need of the hour : Webinar organised by VSK Karnataka

$
0
0

World is experiencing religious terrorism for the last 2000 years, which got aggravated with the advent of Islam. While the fingers point at growing Islamic thought on occurrence of such riots, hiding truth, protecting the perpetrators of terror happens every time. The oft repeated maxim “Blame terrorist not the religion” gets invoked time and again. Such superficial statements are dangerous to progressive world.

Vishwa Samvada Kendra, Karnataka, a Media Centre based out of Bengaluru had today organized a webinar to decipher reasons behind scrupulously planned and executed riots utilising local Muslim strength. YouTube channel and Facebook page

Monica Arora, Advocate from Delhi and Author of ‘Delhi Riots 2020 The Untold story’, T G Mohan Das, Advocate and Writer from Thiruvananthapuram, Debjani Bhattacharyya, Columnist based out of Kolkata and Madan Gopal, Retd, IAS and Member of Citizens for Democracy(CFD’s) Fact Finding Committee on Bengaluru Riots, participated in the seminar. The session was moderated by Research Scholar and Content Contributor of VSK Karnataka, Dr. Ragotham Sundararajan.

Detailed report:

Sri Madan Gopal in his opening remarks spoke about the CFD committee members who visited the affected place in Bengaluru immediately after the riots. He crisply pointed out that the Bengaluru riot was a preplanned attack on the symbols of the State and the way the prominent people in the locality were picked clearly drove the message of ‘Land Jihad’. He said that each small riot escalates to a larger one to eventually create fear psychosis in the minds of Hindus. The Committee has observed the locals being involved in large scale in the riot and their involvement should not be disregarded he said. Read the full findings of CFD

Monika Arora an advocate from Delhi spoke about the Delhi Riots and her experiences during the investigations on the Delhi riots which ran for months. She congratulated CFD team of Bengaluru for the daring report and said the truth had to be told openly. She opined putting out the truth in public domain may be suppressed by the Urban Naxal – Jihadi ecosystem to establish their anti India and anti peace agenda, but fearing to them would never be a solution. She condemned the publishing company which had succumbed to the global and local intellectual pressure of not publishing the book ‘The Delhi riots’ despite the agreements in place. She termed the shameful act as a infanticide while the social media brought the child’s life as it had the dire need for wanting to know the truth.

Monika Arora, Madan Gopal, T G Mohandas, Debjani Bhattacharyya attended the webinar organised by VSK Karnataka. Dr. Ragotham S moderated the webinar

Monika Arora in her address also stated the Muslim locals in Delhi had indulged in stone pelting, attacking homes has left the Hindus in Delhi in anguish and trauma and they worry of the hooligans back to attack them is still in the minds of the people. College going girls, burqa clad women have been involved in such stone pelting acts damaging public property.

Speaking about the riots in Sweden or Delhi or Bengaluru, she said the pattern remains constant. She attributed these riots to the brain wash which happens at the rudimentary level of Madrasas where they are taught that ‘every other religion is farce, there is only one God (Allah) and only one Holy book (Quran) also with the stern way of stating Islam would rule the world.‘ She termed this mentality of intolerance which is been planted in minds is resulting in rioting and terror worldwide.

Sri T G Mohandas on a question by Dr. Ragotham if the terror was an offshoot of Khilafat mindset stated that sadly Kerala has turned out to be the terror capital and terror headquarters of India it is sad to note that the CAA violence was being planned from Kerala and any arrests related to terror show a larger number of Keralite (Muslims) being involved. Speaking on major riots not happening in Kerala since 2003, weapons, publications, and planning of attacks are being managed from Kerala he said. Mohandas said that a book was published by PFI in the past which likened Kerala to POK, Tamil Nadu to ‘IOK’ and Karnataka to India’s Jammu which he said is the reason why there are no major riots.

PFI works meticulously through their offices on the national highways in order to attack and block roads to the Indian military during the time of distress is the idea behind strategically occupying such places he expressed. Speaking on the demography, he said 43% Muslims (and 41% Hindus and 16% Christians) in Kerala is troubling and boldly opined that it was Islam to be called out and not just Islamic fundamentalism for all the riots we have been facing. The mentality among the Islamists that there exists a Caliphate in Syria and the loyalty to him will disturb the peace in the nation he said.

Debjani Bhattacharyya from Kolkata in her pitch, said that the deep rooted problem was in the ‘ doctrine of Islam’ and the need of the hour was to modify it. Stone pelting, being a savage act is sadly being practiced in a civilized society and the motto of Destruction cannot be one’s way of life she argued. Speaking on the geography of state of West Bengal, she said that 2500 km long international border which the state possesses, the border with Bangladesh being free has resulted in various terror attacks. The bordering districts of Malda gets notoriously famous for fake currency, 24 Paraganas boasts of bovine trafficking, there are districts which are specialised in weapons, women trafficking and the government pays no heed to such dangerous planning. South 24 Paraganas is infamous for Rohingyas illegal entry into the state while the Government and the police remain mum she said.

The pattern of riots and terror gets rehearsed in various places of West Bengal and it is evident through the seizure of police stations, burning of fire extinguishers which come to douse fire, attacking the government apparatus, burning of trains etc.

said Debjani Bhattacharyya

Sri Madan Gopal to a question on how terror menace could be stopped, urged Governments to enforce strict laws. He said there has been a promising way of stopping the funding to such NGOs but there are innumerable number of organisations working globally for the cause of Islam. He said the terror being implemented locally is managed globally and the same has to be curbed undoubtedly. He also called for a strong societal response for nullification of terror groups. He concluded stating the political bankruptcy needs to be exposed and it was high time for the need for social media to get proactive rather than reactive.

Adding to Sri Madan Gopal, Sri T G Mohandas in his closing remarks said Population control and implementation of UCC is needed. With the current mindset of Hindus, the societal response might not just help and leaving it to political parties to solve the problem is one part of the solution he added. He called for strong administrative powers, judicial reforms and increasing the police power. He expressed his ire that a sedition case is not accepted even if anti national book is being written and convoluted logic of the judiciary needs some overhaul. Mohandas proudly said the Hindu culture is the one keeping Bharat safe for some handful of police stations cannot control the whole of Bharat.

Debjani Bhattacharyya in her concluding remarks said a special infrastructure for riot management a drone infrastructure to track the terror acts and repealing of Article 30 which provides freedom to have madrasas will need to be taken forward apart from UCC and population control. She said the world need to come together for a consensus to reform Islam and condemning all kinds of terror if not done could be disastrous.

The moderator, Dr. Ragotham, concluded the webinar invoking Bhagawan Sri Krishna’s words from Bhagavadgita and said cults come and go – dharma will always prevail.

Smt. Shakuntala Iyer welcomed and introduced the audience at the start of the event.


ವಿಶ್ವಾದ್ಯಂತ ಇಸ್ಲಾಮಿಕ್ ಆಕ್ರಮಣದ ಸಮಾನ ವಿನ್ಯಾಸವಿದೆ: ಭಯೋತ್ಪಾದನೆ ಮೂಲಕ ವೈಶ್ವಿಕ ಇಸ್ಲಾಮಿಕ್ ಆತಂಕದ ಕುರಿತು ಸಂವಾದ

$
0
0

ವಿಶ್ವದ ಯಾವುದೇ ದೇಶ, ರಾಜ್ಯ, ಪ್ರದೇಶದಲ್ಲಿ ನಡೆಯುವ ಇಸ್ಲಾಮಿಕ್ ದಂಗೆಗಳಲ್ಲಿ ಸಮಾನವಾದ ವಿನ್ಯಾಸವಿರುವುದು ಕಂಡುಬರುತ್ತಿದ್ದು, ಇಸ್ಲಾಂ ಮೂಲಭೂತವಾದವಲ್ಲದೆ, ಸ್ವತಃ ಇಸ್ಲಾಂ ಸಿದ್ಧಾಂತವೇ ಸಮಸ್ಯೆಯ ಮೂಲವಾಗಿದೆ ಎಂದು ಬೆಂಗಳೂರಿನ ಮಾಧ್ಯಮ ಕೇಂದ್ರವಾದ ವಿಶ್ವ ಸಂವಾದ ಕೇಂದ್ರ ಕರ್ನಾಟಕ ವತಿಯಿಂದ ಸೆ.12ರ ಶನಿವಾರ ಆನ್‌ಲೈನ್ ಮೂಲಕ ಆಯೋಜಿಸಿದ್ದ ಭಯೋತ್ಪಾದನೆ ಮೂಲಕ ವೈಶ್ವಿಕ ಇಸ್ಲಾಮಿಕ್ ಆತಂಕದ ಕುರಿತು ಸಂವಾದದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಂವಾದದಲ್ಲಿ ಸುಪ್ರೀಂಕೋರ್ಟ್ ವಕೀಲೆ ಹಾಗೂ ’ಡೆಲ್ಲಿ ರಯಟ್ಸ್ 2020’ ಕೃತಿಯ ಲೇಖಕಿ ಮೋನಿಕಾ ಅರೋರಾ, ತಿರುವನಂತಪುರದ ಲೇಖಕ ಹಾಗೂ ವಕೀಲ ಟಿ.ಜಿ. ಮೋಹನ್‌ದಾಸ್, ಕೊಲ್ಕತಾದ ಬರಹಗಾರ್ತಿ ದೇಬ್ಜಾನಿ ಭಟ್ಟಾಚಾರ್ಜಿ, ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ದಂಗೆಗಳ ಸತ್ಯಶೋಧನಾ ಸಮಿತಿ ಸದಸ್ಯ ಮದನ್ ಗೋಪಾಲ್ ಭಾಗವಹಿಸಿದರು. ವಿಎಸ್‌ಕೆ ಕರ್ನಾಟಕದ ಡಾ. ರಘೋತ್ತಮ್ ಸುಂದರರಾಜನ್ ನಿರೂಪಿಸಿದರು.

ಸಂವಾದದಲ್ಲಿ ಭಾಗವಹಿಸಿದವರನ್ನು ಪರಿಚಯಿಸಿದ ಉದ್ಯಮಿ ಶಕುಂತಲಾ ಅಯ್ಯರ್, ದೆಹಲಿ ನಂತರ ಬೆಂಗಳೂರಿನಲ್ಲೂ ದಂಗೆ ನಡೆಯಿತು. ಮೇಲ್ನೋಟಕ್ಕೆ ಪ್ರತಿಕ್ರಿಯಾತ್ಮಕ ಎನ್ನಿಸಿದರೂ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಹತ್ಯಾಕಾಂಡಗಳು ಭಯೋತ್ಪಾದನೆ ಕೃತ್ಯಕ್ಕಿಂತ ಯಾವ ನಿಟ್ಟಿನಲ್ಲೂ ಕಡಿಮೆಯಲ್ಲ ಎಂದರು.

ಪ್ರಸ್ತಾವಿಕ ನುಡಿಯ ಮೂಲಕ ನಿರೂಪಣೆ ಆರಂಭಿಸಿದ ರಘೋತ್ತಮ್ ಮಾತನಾಡಿ, ಒಂದು ತಿಂಗಳ ಹಿಂದಷ್ಟೇ ಬೆಂಗಳೂರು ಬೃಹತ್ ಹಿಂಸೆಗೆ ಸಾಕ್ಷಿಯಾಯಿತು. ಇತ್ತೀಚಿನ ವರ್ಷಗಳಲ್ಲಂತೂ ಬೆಂಗಳೂರು ಇಂತಹ ಹಿಂಸೆಯನ್ನು ಕಂಡುಕೇಳಿಲ್ಲ. ಮೂಲಭೂತವಾದಿಗಳು ವಾಹನಗಳಿಗೆ ಬೆಂಕಿ ಹಚ್ಚಿದರು, ಮನೆಗಳನ್ನು ಹಾಳು ಮಾಡಿದರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯನ್ನು ಸುಟ್ಟರು. ಶಾಸಕರ ಸಂಬಂಧಿ ನವೀನ್ ಎಂಬವರು ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಬರೆಹ ಬರೆದರು ಎಂಬುದು ನೆಪವಷ್ಟೆ ಎಂಬುದು ಒಟ್ಟಾರೆ ಘಟನೆಯನ್ನು ಕಂಡರೆ ತಿಳಿಯುತ್ತದೆ. ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ಈ ಕುರಿತು ಪರಿಶೀಲನೆಗೆ ನ್ಯಾ. ಶ್ರೀನಿವಾಸ್ ಬಬಲಾದಿ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಸಮಿತಿಯ ಸದಸ್ಯರಾಗಿ ಮದನ್ ಗೋಪಾಲ್ ಸಹ ಇದ್ದರು ಎಂದರು.

ಮದನ್ ಗೋಪಾಲ್ ಮಾತನಾಡುತ್ತಾ, ಸಮಿತಿ ಸದಸ್ಯನಾಗಿ ಮಾತ್ರವಲ್ಲ, ಅಧಿಕಾರಿಯಾಗಿದ್ದಾಗ ವಿಜಯಪುರ, ಕಲಬುರ್ಗಿ, ರಾಯಚೂರಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಸಮಿತಿಯು ಒಂದು ವಾರದೊಳಗೆ ಎರಡು ಬಾರಿ ದೇವರಜೀವನಹಳ್ಳಿ(ಡಿಜೆ ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ(ಕೆಜಿಹಳ್ಳಿ) ಪ್ರದೇಶಗಳಿಗೆ ಭೇಟಿ ನೀಡಿ 5-6 ಗಂಟೆ ಸಮಯ ಶೋಧನೆ ನಡೆಸಿತು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಸಂಬಂಧಿಕ ನವೀನ್ ಮನೆ ಜತೆಗೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದೆವು, ದಂಗೆಯಲ್ಲಿ ಸಾವನ್ನಪ್ಪಿದ ನಾಲ್ವರಲ್ಲಿ ಮೂವರ ಮನೆಗೂ ಭೇಟಿ ನೀಡಿದ್ದೇವೆ.


ದಂಗೆಯು ತಕ್ಷಣದ ಪ್ರತಿಕ್ರಿಯೆ ಎಂಬುದು ಸತ್ಯವಲ್ಲ ಎಂಬುದು ನವೀನ್ ತಂದೆಯನ್ನು ಭೇಟಿಯಾದಾಗ ತಿಳಿಯಿತು. ಒಂದು ಸಣ್ಣ ಮುಸ್ಲಿಂ ಗುಂಪು ಒಂದೂವರೆ ವರ್ಷದಿಂದ ನವೀನ್ ಜತೆಗೆ ಹಿನ್ನೆಲೆ ಕಾಳಗ ನಡೆಸುತ್ತಲೇ ಇತ್ತು. ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಇದು ನಡೆಯುತ್ತಿತ್ತು. ಈ ಸರಪಳಿ ಕೊಂಡಿಯನ್ನು ಉದ್ದೇಶಪೂರ್ವಕವಾಗಿ ಕೆಲವರು ಮರೆಮಾಚುತ್ತಿದ್ದಾರೆ. ಕೃಷ್ಣಾಷ್ಟಮಿ ದಿನ ಒಬ್ಬರು ಕೃಷ್ಣನ ಕುರಿತು ಮಾಡಿದ ಆಕ್ಷೇಪಾರ್ಹ ಬರಹಕ್ಕೆ ನವೀನ್ ಉತ್ತರಿಸಿದ್ದ.

Monika Arora, Debjani Bhattacharyya, T G Mohandas. Madan Gopal attended the webinar organised by VSK Karnataka. The session was moderated by Dr. Ragotham S


ಇದು ಸಣ್ಣ ಗುಂಪು ಘರ್ಷಣೆ ಎಂದು ಬಿಂಬಿಸುತ್ತಿರುವುದೂ ಸತ್ಯವಲ್ಲ. ಇದು ರಾಜ್ಯಾಂಗದ ವಿರುದ್ಧ ನಡೆದ ದಂಗೆ. ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಶಾಸಕರಿಗಾಗಲಿ, ಇತರೆ ಉದ್ಯಮಿಗಳಿಗಾಗಲಿ ತಾವೇನು ತಪ್ಪು ಮಾಡಿದ್ದೇವೆ, ತಮ್ಮ ಆಸ್ತಿಪಾಸ್ತಿಗೇಗೆ ಬೆಂಕಿ ಹಚ್ಚಲಾಯಿತು ಎಂಬುದು ತಿಳಿದಿಲ್ಲ. ಪ್ರತಿಷ್ಠಿತರನ್ನು ಭಯಭೀತಗೊಳಿಸಿ, ಹಿಂದುಗಳ ಮನದಲ್ಲಿ ಭಯವನ್ನು ಸೃಷ್ಟಿಸುವುದು ಇದರ ಹಿಂದಿನ ಉದ್ದೇಶ.
ಈ ದಂಗೆಯ ಹಿಂದೆ ಭೂ ಜಿಹಾದ್ ಇದೆ ಎಂದು ನಾವು ಹೇಳಿದ್ದೇವೆ. ಯಾವುದೇ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮೊದಲು ಸಣ್ಣ ದಂಗೆ ನಡೆಸುವುದು, ನಿಧಾನವಾಗಿ ಹೆಚ್ಚಿಸಿಕೊಂಡು, ದೊಡ್ಡ ದಂಗೆ ನಡೆಸುವುದು. ಇದರಿಂದ ಹೆದರುವ ಅಲ್ಲಿರುವ ಇತರೆ ಸಮುದಾಯಗಳ ಆಸ್ತಿಯ ಬಾಡಿಗೆ ಪ್ರಮಾಣ ಇಳಿಕೆಯಾಗುತ್ತದೆ, ಆಸ್ತಿಯನ್ನು ಮುಸ್ಲಿಮರಿಗೆ ಮಾರುತ್ತವೆ. ಈ ಮೂಲಕ ಹಿಂದುಗಳನ್ನು ಓಡಿಸಿ ತಮ್ಮ ಅಸ್ತಿತ್ವ ಹೆಚ್ಚಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ.


ಸ್ಥಳೀಯ ಜನರು ದಂಗೆಯಲ್ಲಿ ಇಲ್ಲ ಎನ್ನುವುದು ಸತ್ಯವಲ್ಲ. ಅಲ್ಲಿನ ಜನರನ್ನು ಮಾತನಾಡಿಸಿದಾಗ, ಕೆಲವು ಜನರು ಒಂದು ವಾರದ ಹಿಂದೆಯೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು, ಎಲ್ಲೆಲ್ಲಿ ಹಿಂದುಗಳ ವಾಹನ ನಿಲ್ಲಿಸಲಾಗುತ್ತದೆ, ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ ಎಂಬುದನ್ನು ಪತ್ತೆ ಹಚ್ಚಿದ್ದರು. ದಾಳಿ ನಡೆಸಲಾಗಿರುವುದು ಪೂರ್ವಯೋಜಿತ ಕೃತ್ಯ ಎಂಬುದನ್ನು ಇದು ಪುಷ್ಟೀಕರಿಸುತ್ತದೆ. ಇವೆಲ್ಲವುಗಳ ಆಧಾರದಲ್ಲಿ, ಏನು ಮಾಡಬೇಕು ಎಂಬುದನ್ನು ನಾವು ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಿದ್ದೇವೆ. ಅಂತಾರಾಷ್ಟ್ರದಿಂದ ಸ್ಥಳೀಯತೆವರೆಗೆ ಒಂದು ಕಡೆ ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದಕರ ಗುಂಪು, ಮತ್ತೊಂದೆಡೆ ನಕ್ಸಲರು, ಇನ್ನೊಂದೆಡೆ ಡ್ರಗ್ಸ್ ಪೆಡ್ಲರ್‌ಗಳ ಜಾಲ ಬಲಗೊಳ್ಳುತ್ತಿರುವುದು ಕಾಣುತ್ತದೆ ಎಂದರು.

ಸಿಟಿಜನ್ಸ್ ಫಾರ್ ಡೆಮಾಕ್ರಸಿ ವರದಿ ಇಲ್ಲಿ ಓದಬಹುದು

ಮೋನಿಕಾ ಅರೋರಾ ಅವರು ಮಾತನಾಡುತ್ತಾ, ಬೆಂಗಳೂರು ದಂಗೆ ಕುರಿತು ಸತ್ಯಶೋಧನಾ ಸಮಿತಿ ಅತ್ಯುತ್ತಮ ಕಾರ್ಯ ಮಾಡಿದೆ. ನನ್ನ ಮನೆಯ 25 ಕಿ.ಮೀ. ಸುತ್ತಳತೆಯಲ್ಲಿ ದೆಹಲಿ ದಂಗೆ ನಡೆದಿದೆ. 300ಕ್ಕೂ ಹೆಚ್ಚು ವಕೀಲರು, ಪೊಲೀಸರು ಮುಂತಾದವರು ಸೇರಿ ಸಾರ್ವಜನಿಕ ವಲಯದಲ್ಲಿ ಈ ದಂಗೆಗಳ ಕುರಿತು ಸತ್ಯಾಂಶಗಳನ್ನು ನೀಡುತ್ತಿದ್ದೇವೆ. ನಮ್ಮ ಗುಂಪು ಆ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದೆ. ಅಲ್ಲಿ ಸುಟ್ಟ ವಾಹನಗಳು, ಮನೆಗಳ ಧೂಳು ನಮ್ಮ ಉಡುಪನ್ನು ಮೆತ್ತಿಕೊಳ್ಳುವಷ್ಟು ಪರಿಸ್ಥಿತಿ ಗಂಭಿರವಾಗಿತ್ತು.
ಈ ವರದಿಯನ್ನು ಗೃಹ ಸಚಿವಾಲಯಕ್ಕೆ ನೀಡಿ, ಇದು ಭಯೋತ್ಪಾದನಾ ಕೃತ್ಯವಾಗಿದ್ದು, ಎನ್‌ಐಎ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದೆವು.


ನಂತರ ಇದನ್ನು ನಾವು ಪುಸ್ತಕವಾಗಿ ಪ್ರಕಟಿಸಲು ಮುಂದಾದಾಗ, ಯಾವುದೇ ಪ್ರಕಾಶಕರು ಮುಂದೆ ಬರಲಿಲ್ಲ. ಅನೇಕ ಸುತ್ತಿನ ಮಾತುಕತೆ, ಚರ್ಚೆ ನಂತರ ಬ್ಲೂಮ್ಸ್‌ಬರ್ಗ್ ಪ್ರಕಟಿಸುವುದಾಗಿ ತಿಳಿಸಿತು. ಆದರೆ ಇನ್ನೇನು ಬಿಡುಗಡೆ ಆಗಬೇಕು ಎನ್ನುವಷ್ಟರಲ್ಲಿ ಬ್ಲೂಮ್ಸ್‌ಬರ್ಗ್‌ನಿಂದ ಫೋನ್ ಬಂತು, ನಮಗೆ ಒತ್ತಡ ಬರುತ್ತಿದೆ, ಹಾಗಾಗಿ ಪುಸ್ತಕವನ್ನು ಹಿಂಪಡೆಯುವಂತೆ ತಿಳಿಸಿತು. ಆದರೂ ಬಿಡುಗಡೆಯಾಯಿತು, ಅಮೇಜಾನ್‌ನಲ್ಲಿ ನಂ.1 ಆಯಿತು. ಆದರೆ ಬ್ಲೂಮ್ಸ್‌ಬರ್ಗ್ ಈ ಪುಸ್ತಕವನ್ನು ಹಿಂಪಡೆಯಿತು. ನಂತರ ಭಾರತೀಯ ಪ್ರಕಾಶಕರ ಬಳಿ ತೆರಳಿದೆವು, ಇಲ್ಲಿವರೆಗೆ 30 ಸಾವಿರ ಕೃತಿಗಳು ಮಾರಾಟವಾಗಿವೆ. ನವ ಭಾರತ ನಮ್ಮ ಬೆನ್ನಿಗೆ ನಿಂತಿತು. ನವ ಭಾರತವೇ ಈ ಪುಸ್ತಕವನ್ನು ಪೋಷಿಸಿದೆ. ಈ ಪುಸ್ತಕವನ್ನು ನಿಷೇಧಿಸಬೇಕು ಎಂಬುದರ ಹಿಂದೆ ಅರ್ಬನ್ ನಕ್ಸಲರ ಕೈವಾಡವಿದೆ ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದಾಗಲೆಲ್ಲ ಪ್ರಶಾಂತ್ ಭೂಷಣ್, ಸುಪ್ರೀಂಕೋರ್ಟನ್ನೇ ತೆಗಳುತ್ತಾರೆ, ಅಫ್ಜಲ್ ಗುರುವನ್ನು ಸಮರ್ಥಿಸಿಕೊಳ್ಳುತ್ತಾರೆ. ರಾಣಾ ಅಯ್ಯೂಬ್ ಗುಜರಾತ್ ದಂಗೆ ಬಗ್ಗೆ ಪುಸ್ತಕ ಬರೆದಾಗ ಅಭಿವ್ಯಕ್ತಿ ಸ್ವಾತಂತ್ರ್ಯವಾಗುತ್ತದೆ, ಆದರೆ ಸಂಪೂರ್ಣ ಸತ್ಯಾಂಶವನ್ನು ಇಟ್ಟುಕೊಂಡು ಬರೆದ ಪುಸ್ತಕಕ್ಕೆ ನಿಷೇಧ ಹೇರಲು ಪ್ರಯತ್ನಿಸುತ್ತಾರೆ.
ದೆಹಲಿಯಲ್ಲಿ ಶಹೀನ್ ಬಾಗ್ ರೀತಿಯ 15 ಪ್ರತಿಭಟನೆಗಳು ನಡೆದಿವೆ. ಎಲ್ಲ ಪ್ರತಿಭಟನೆಗಳೂ ಮಸೀದಿಗಳ ಸಮೀಪದಲ್ಲೇ ನಡೆದಿವೆ, ಮಹಿಳೆಯರನ್ನು ಒಗ್ಗೂಡಿಸಲು ಸುಲಭವಾಗಲಿ ಎಂಬುದಕ್ಕಾಗಿ. ಅಲ್ಲಿ ಕೂಗಿದ್ದೆಲ್ಲ-ಜಿನ್ನಾವಾಲಿ ಆಜಾದಿಯಂತಹ- ದೇಶವಿರೋಧಿ ಘೋಷಣೆಗಳೆ. ಶಹೀನ್ ಬಾಗ್‌ನಲ್ಲಿ ಬುರ್ಖಾದಲ್ಲಿ ಕಾಳಿ ಮಾತೆಯ ಪೋಸ್ಟರ್ ಬಳಸಿದರು. ಎಲ್ಲವೂ ಸಂವಿಧಾನ ವಿರೋಧಿ ಕೆಲಸಗಳನ್ನೇ ನಡೆಸಿದರು. ಅದೆಲ್ಲದರ ವರದಿ ಈ ಪುಸ್ತಕದಲ್ಲಿದೆ.


ಪ್ರೀತಿ ಗರ್ಗ್ ಎಂಬ ಗೃಹಿಣಿ ಮನೆಯಲ್ಲಿ ತಮ್ಮ ಪಾಡಿಗೆ ತಾವಿದ್ದಾಗ ಇಡೀ ಮನೆಗೆ ಬೆಂಕಿ ಹಚ್ಚಲಾಯಿತು. ತಮ್ಮ ಮಕ್ಕಳನ್ನು ಮೊದಲ ಮಹಡಿಯಿಂದ ಎಸೆದು ರಕ್ಷಿಸಿಕೊಂಡರು. ಆ ಮಕ್ಕಳು ಇನ್ನೂ ಅದೇ ಆಘಾತದಲ್ಲಿದ್ದಾರೆ.
ಒಂದು ಗ್ಯಾಂಗ್ ದಾಳಿ ಮಾಡುತ್ತದೆ, ಮತ್ತೊಂದು ಗ್ಯಾಂಗ್ ಪುಸ್ತಕ ಬರೆಯುತ್ತದೆ, ಮುಸ್ಲಿಮರನ್ನು ಹೇಗೆ ಹತ್ಯೆ ಮಾಡಲಾಯಿತು ಎಂಬುದರ ಕುರಿತು ಮೂರನೇ ಗುಂಪು ದಶಕಗಳವರೆಗೆ ಸುಳ್ಳು ಪ್ರಚಾರ ಮಾಡುತ್ತಲೇ ಇರುತ್ತದೆ. ಸ್ವೀಡನ್, ಬೆಂಗಳೂರು, ದೆಹಲಿ, ಎಲ್ಲ ಕಡೆಯೂ ಒಂದೇ ವಿನ್ಯಾಸವಿದೆ. ಒಬ್ಬನೇ ದೇವರು, ಒಂದೇ ಪುಸ್ತಕ, ಒಂದೇ ಪೂಜಾ ಪದ್ಧತಿ ಇದೆ ಎಂಬುದನ್ನು ಮದರಸಾಗಳಿಂದಲೇ ಮಕ್ಕಳ ಮನಸ್ಸಿನಲ್ಲಿ ತುಂಬಿಸುವುದು ಇದರ ಕಾರಣ. ನಾವು ಈಗಷ್ಟೇ ಪುಸ್ತಕವನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆ ಮಾಡಿದ್ದೇವೆ, ಸದ್ಯದಲ್ಲೆ ಅಮೆರಿಕದಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.

ಟಿ.ಜಿ. ಮೋಹನ್‌ದಾಸ್ ಮಾತನಾಡಿ, ಕೇರಳವು ಇದೀಗ ಭಾರತದ ಭಯೋತ್ಪಾದನೆ ರಾಜಧಾನಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಿಗೆ ಕೇರಳ ಸಂಪರ್ಕವಿರುತ್ತವೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಶೇ.20 ಜನರು ಕೇರಳದಿಂದ ತೆರಳಿದ್ದರು. ಶೇ.90 ಪ್ರತಿಭಟನೆಗಳು ಆಯೋಜನೆಯಾಗಿದ್ದು ಕೇರಳದಿಂದ. ಆದರೆ ಕೇರಳ ಶಾಂತಿಯುತ ಎಂದು ಹೇಳುತ್ತಾರೆ. ಏಕೆಂದರೆ 2003ರಲ್ಲಿ ನಡೆದ ದಂಗೆ ನಂತರ ಕೇರಳ ಮೇಲ್ನೋಟಕ್ಕೆ ಶಾಂತಿಯುತವಾಗಿದೆ. ಆದರೆ ಅಲ್ಲಿಂದ ನಂತರದ ದೇಶದಲ್ಲಿ ನಡೆಯುವ ಯಾವುದೇ ದಂಗೆಯಲ್ಲಿ ಜನರು, ಹಣ, ಶಸ ಅಥವಾ ಸಾಹಿತ್ಯ ಕೇರಳದಿಂದ ಹೋಗಿರುತ್ತದೆ.
ಮಲಪ್ಪುರಂ ಜಿಲ್ಲೆಯು ದುಬೈನಷ್ಟೆ ವಿಸ್ತೀರ್ಣವಾಗಿದ್ದು, ಅದನ್ನು ಸ್ವತಂತ್ರ ದೇಶವಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಕಡೆಗೆ ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಬದಿಯಲ್ಲಿ ಪಿ ಎಫ್ ಐ ಕಚೇರಿಗಳಿವೆ, ಅಗಾಧ ಪ್ರಮಾಣದ ಆಸ್ತಿಪಾಸ್ತಿ ಖರೀದಿ ಮಾಡಿದ್ದಾರೆ. 1995ರಿಂದ ಈ ಪ್ರಯತ್ನ ನಡೆಯುತ್ತಿದ್ದು, ಯಾವುದೇ ದಂಗೆಯಾದ ಸಂದರ್ಭದಲ್ಲಿ ಸೇನೆ, ಪೊಲೀಸರು ಆಗಮಿಸದಂತೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಬಹುದು.


ಬೆಂಗಳೂರು ದಂಗೆಯನ್ನು ಕೇರಳ ಸುದ್ದಿವಾಹಿನಿಗಳು ಬಿತ್ತರಿಸಲೇ ಇಲ್ಲ, ಆದರೆ ದೆಹಲಿ ದಂಗೆಯನ್ನು ಮುಸ್ಲಿಂ ಕೋನದಿಂದ ಬಿತ್ತರಿಸಿದವು. ಎರಡು ಚಾನೆಲ್‌ಗಳು ಮಾತ್ರ ಬೆಂಗಳೂರು ದಂಗೆ ಕುರಿತು ಸತ್ಯಾ ಹೇಳಿದವು. ಮುಖ್ಯವಾಹಿನಿ ಮಾಧ್ಯಮವು ಇಸ್ಲಾಂ ಒತ್ತಡಕ್ಕೆ ಮಣಿದಿದೆ. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಹಿಂದುಗಳ ಜನನ ಪ್ರಮಾಣ ಗಮನಿಸಿದರೆ ಅತ್ಯಂತ ಶೀಘ್ರದಲ್ಲಿ ಮುಸ್ಲಿಮರ ಸಂಖ್ಯೆ ತೀವ್ರ ಹೆಚ್ಚುವ ಅಪಾಯವಿದೆ. ಒಮ್ಮೆ ಈ ಜನಸಂಖ್ಯೆ ಹೆಚ್ಚಳವಾದರೆ ಕೇರಳವು ಭಾರತದಿಂದ ಬೇರ್ಪಡುತ್ತದೆ. ಕಾಶ್ಮೀರದಲ್ಲಿ 1990ರಲ್ಲಿ ಆದಂತೆಯೇ ಮುಂದೆ ಕೇರಳದಲ್ಲಿ ನಡೆಯುತ್ತದೆ.


ಶಿಕ್ಷಿತರು, ಜಾತ್ಯತೀತ ರಾಜ್ಯ ಕೇರಳ ಎಂದು ಬಿಂಬಿಸಲಾಗಿದೆ. ಆದರೆ ಅತ್ಯಂತ ಕೋಮುವಾದಿ ಕಾರ್ಯ ಕೇರಳದಲ್ಲಿ ನಡೆಯುತ್ತಿದೆ. ಶಿಕ್ಷಣ, ಪ್ರೇಮ, ಭೂಮಿ, ಹಣಕಾಸು… ಎಲ್ಲ ಕಡೆ ಕೋಮುವಾದ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಬಂಧನವಾಗುವ ಭಯೋತ್ಪಾದಕರಿಗೂ ಕೇರಳದ ನಂಟಿದೆ. ಇಸ್ಲಾಮಿಕ್ ಮೂಲಭೂತವಾದ ಸಮಸ್ಯೆಯಲ್ಲ, ಸ್ವತಃ ಇಸ್ಲಾಂ ಬಹುದೊಡ್ಡ ಸಮಸ್ಯೆ, ಹದೀಸ್ ಕೂಡ ಸಮಸ್ಯೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.

ಮೋಹನದಾಸ್ ಅವರ ಅಂತಿಮ ವಾಕ್ಯಗಳನ್ನು ಅನುಮೋದಿಸುತ್ತಲೇ ಮಾತನ್ನು ಆರಂಭಿಸಿದ ದೇಬ್ಜಾನಿ ಭಟ್ಟಾಚಾರ್ಯ, ಸ್ವತಃ ಸಿದ್ಧಾಂತವೇ ಸಮಸ್ಯೆ ಎಂಬುದು ಸತ್ಯ. ವಿಶ್ವದ ಅನೇಕ ಕಡೆಗಳಲ್ಲಿ ಅವರು ಕಲ್ಲೆಸೆಯುತ್ತಾರೆ. ಪಶ್ಚಿಮ ಬಂಗಾಳವು 2,500 ಕಿ.ಮೀ. ಅಂತಾರಾಷ್ಟ್ರೀಯ ಗಡಿ ಹೊಂದಿದ್ದು, ಬಹಳ ಪ್ರಮಾಣ ಬಾಂಗ್ಲಾದೇಶದ ಜತೆಗಿದೆ. ಇದು ಸಂಚಾರಕ್ಕೆ ಬಹುತೇಕ ಮುಕ್ತವಾಗಿದೆ. ವಿವಿಧ ಗಡಿಗಳು ವಿವಿಧ ಅಪರಾಧಗಳಿಗೆ ಮೀಸಲಾಗಿರುವಂತೆ ಬಳಕೆಯಾಗುತ್ತಿವೆ. ಮಾಲ್ಡಾ ಗಡಿ ಮೂಲಕ ನಕಲಿ ಕರೆನ್ಸಿಯು ಪಾಕಿಸ್ತಾನಂದಿಂದ ಆಗಮಿಸುತ್ತದೆ. ದೇಶದ ಯಾವುದೇ ಭಾಗದಲ್ಲಿ ನಡೆಯುವ ದಂಗೆಯ ಪ್ರಾತ್ಯಕ್ಷಿಕೆಯು ಪಶ್ಚಿಮ ಬಂಗಾಳದಲ್ಲಿ ನಡೆದಿರುತ್ತದೆ. ನಕಲಿ ನೋಟು ದಂಧೆಗೆ ತೊಂದರೆ ನೀಡುತ್ತಿದ್ದರು ಎಂಬ ಕಾರಣಕ್ಕೆ ಕಾಲಿಯಾ ಚೌಕ್‌ನಲ್ಲಿ ಮೊದಲಿಗೆ ಪೊಲೀಸ್ ಠಾಣೆಯನ್ನು ಸುತ್ತುವರಿದು ನಂತರ ದಂಗೆ ನಡೆಸಿದ್ದರು. 2017ರಲ್ಲಿ ಬದುರಿಯಾ, ನಾರ್ತ್ 24 ಜಿಲ್ಲೆಯಲ್ಲಿ, ಒಬ್ಬನ ಫೇಸ್‌ಬುಕ್ ಖಾತೆಯಲ್ಲಿ ಅವನ ಪರವಾಗಿ ಕೆಲವು ಆಕ್ಷೇಪಾರ್ಹ ಬರಹ ದಾಖಲಿಸಿ ಅವನ ಮನೆ ಮೇಲೆ ದಾಳಿ ನಡೆಸಿದರು. ನಂತರ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದರು. ಬೆಂಗಳೂರಿನಲ್ಲಿ ಪೊಲೀಸರು ಪ್ರತಿಕ್ರಿಯೆಯನ್ನಾದರೂ ನೀಡಿದರು, ಆದರೆ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸರ್ಕಾರದ ಕಾರಣದಿಂದಾಗಿ ಪೊಲೀಸರು ಸುಮ್ಮನಿದ್ದರು. ಡಿಜೆ ಹಳ್ಳಿಯಲ್ಲಿ ಪ್ರಮುಖರ ಮೇಲೆ ದಾಳಿ ಮಾಡುವ ಮೂಲಕ, ನಾವು ಯಾರ ಮೇಲೆ ಬೇಕಾದರೂ ದಾಳಿ ಮಾಡಬಲ್ಲೆವು ಎಂಬ ಸಂದೇಶ ನೀಡಲು ಮುಂದಾಗಿದ್ದಾರೆ.


ಪಶ್ಚಿಮ ಬಂಗಾಳದಲ್ಲಿ ಇಂತಹ ದಂಗೆಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ. ಸೌತ್ ಪರಗಣವು ಮಹಿಳಾ ಕಳ್ಳ ಸಾಗಣೆಗೆ ಕುಖ್ಯಾತ. ಕೆಲವು ಗಡಿಗಳು ರೋಹಿಂಗ್ಯಾ ಪ್ರವೇಶಕ್ಕೆ ಮೀಸಲಿವೆ. ಖಾಮ್ರೂದ್ ಜಮಾವುಲ್ಲಾ ಇದರ ನೇತೃತ್ವ ವಹಿಸಿದ್ದಾನೆ. ಅವರೆಲ್ಲರ ಗುರಿಯು ಬೆಂಗಳೂರೇ ಆಗಿದೆ.


ಔರಂಗಾಬಾದ್, ಶಾಹೀನ್ ಬಾಗ್, ಬಿಲಾಲ್ ಬಾಗ್ ಸೇರಿ ಅನೇಕ ಸ್ಲೀಪರ್ ಸೆಲ್‌ಗಳು ದೇಶಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ. ಸದ್ಯದಲ್ಲೆ ಪಶ್ಚಿಮ ಬಂಗಾಳಕ್ಕೆ ಆಗಮಿಸುತ್ತೇವೆ ಎಂದು ಐಸಿಸ್ ತಿಳಿಸಿದೆ.
ದೇಶದಲ್ಲಿ ಮೊದಲು ಸಿಎಎ ವಿರೋಧಿ ಪ್ರತಿಭಟನೆಗಳು ನಡೆದದ್ದು ಪಶ್ಚಿಮ ಬಂಗಾಳದಲ್ಲಿ, ಅದೂ ಸಂಸತ್ತಿನಲ್ಲಿ ಸಿಎಎಗೆ ಒಪ್ಪಿಗೆ ಪಡೆದ ಮರುದಿನವೇ(ಡಿ.13) ಮುರ್ಷಿದಾಬಾದ್‌ನಲ್ಲಿ. ರೈಲ್ವೆ ಅಧಿಕಾರಿಗಳ ಮೇಲೆ, ಆರ್ ಪಿ ಎಫ್ ಸಿಬ್ಬಂದಿ ಮೇಲೆ ದಾಳಿ ಮಾಡಿ, ರೈಲ್ವೆ ಹಳಿಗಳನ್ನು ಕಿತ್ತುಹಾಕಿದರು, ರೈಲುಗಳನ್ನು ಸುಟ್ಟರು, ಅಗ್ನಿಶಾಮಕ ವಾಹನವನ್ನೂ ಸುಟ್ಟರು. ಯಾವುದೇ ಪರಿಸ್ಥಿತಿಗೆ ಅವರು ಸಾಕಷ್ಟು ಸಿದ್ಧರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಅವರು ರಸ್ತೆಗಳನ್ನು ಬಂದ್ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಡ್ರೋನ್ ಮುಂತಾದ ತಂತ್ರಜ್ಞಾನದ ಮೂಲ ಸೌಕರ್ಯ ಅಭಿವೃದ್ಧಿಮಾಡುವುದು ಮುಖ್ಯವಾಗುತ್ತದೆ.

ಆಡಳಿತಾತ್ಮಕ ನಿರ್ಧಾರದ ಜತೆಗೆ ಆರ್ಟಿಕಲ್ 30 ಪ್ರಕಾರ ಅಲ್ಪಸಂಖ್ಯಾತರಿಗೆ ಮಾತ್ರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡುವುದನ್ನು ಸ್ಥಗಿತಮಾಡಬೇಕು. ದೂರಗಾಮಿಯಾಗಿ, ಇಸ್ಲಾಂ ಸುಧಾರಣೆಗಾಗಿ ವೈಶ್ವಿಕ ಧ್ವನಿ ಮೊಳಗಬೇಕಿದೆ. ಇಸ್ಲಾಮನ್ನು ಈಗಿನ ಜಗತ್ತಿಗೆ ಅನುಗುಣವಾಗಿ ರೂಪಿಸಬೇಕಿದೆ ಎಂದು ಹೇಳಿದರು.

ಪ್ರಶ್ನೋತ್ತರದಲ್ಲಿ, ಇದೆಲ್ಲ ಸಮಸ್ಯೆಗಳ ಬಗ್ಗೆ ನಾವೇನಾದರೂ ಮಾಡಲು ಸಾಧ್ಯವಿದೆಯೇ? ಎಂಬ ಕುರಿತು ಮದನ್ ಗೋಪಾಲ್ ಪ್ರತಿಕ್ರಿಯಿಸಿದರು. 9/11ರ ನಂತರ, ಇಸ್ಲಾಮಿಕ್ ಮೂಲಭೂತ ಯಾವ ರೀತಿ ನಡೆಯುತ್ತದೆ ಎಂಬುದು ಎಲ್ಲ ದೇಶಗಳಿಗೂ ಅರಿವಿಗೆ ಬಂದಿದೆ. ಸ್ಪೇನ್, ಸ್ವೀಡನ್, ಫ್ರಾನ್ಸ್, ಇಟಲಿ, ಆಸಟ್ರಿಯಾದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಿದರೆ, ಒಟ್ಟಾರೆ ಯೋಜನೆ ತಿಳಿಯುತ್ತದೆ.


ಈ ಐಡಿಯಾಲಜಿಗಳ ರಾಜಕೀಯ ದೀವಾಳಿತನವನ್ನು ನಾವು ನಿರೂಪಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುವ ಬದಲಿಗೆ ಪ್ರೊ ಆಕ್ಟಿವ್ ಆಗಿರಬೇಕು, ಮಾನವ ಹಕ್ಕುಳ ಕುರಿತು ನಮ್ಮ ದೃಷ್ಟಿಕೋನದಲ್ಲಿ ಮಾತನಾಡಲು ಆರಂಭಿಸಬೇಕು ಎಂಬುದು ಪರಿಹಾರ ಎಂದರು.

ಮತ್ತೊಂದು ಪ್ರಶ್ನೆಯ ಕುರಿತು ಪ್ರತಿಕ್ರಿಯಿಸಿದ ಮೋಹನದಾಸ್ ಅವರು, ಸಮಾಜವನ್ನು ಸಂಘಟಿಸದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಆ ಕಾರ್ಯವನ್ನು ಆರೆಸ್ಸೆಸ್ 90 ವರ್ಷಗಳಿಂದ ನಡೆಸುತ್ತಿದೆ. ಆಡಳಿತದಲ್ಲಿ ಸದೃಢ ವ್ಯಕ್ತಿಗಳನ್ನು ನಾವು ಹೊಂದಬೇಕಿದೆ. ನ್ಯಾಯಾಂಗದಲ್ಲಿ ಸುಧಾರಣೆ ಆಗಬೇಕಿದೆ. ಅನೇಕ ನ್ಯಾಯಾಧೀಶರ ಮನಸ್ಥಿತಿ ಅರ್ಬನ್ ನಕ್ಸಲರಿಗೆ ಸಹಾಯ ಮಾಡುವಂತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಪೊಲೀಸರು ಹೆಚ್ಚು ಸದೃಢವಾಗಬೇಕು. ಕೇರಳವು ದೇಶದಿಂದ ಕೈತಪ್ಪುವ ಸಾಧ್ಯತೆಯಿದ್ದರೂ, ಸದೃಢ ನಿರ್ಧಾರಗಳ ಮೂಲಕ ಅದನ್ನು ಹಿಂಪಡೆಯಲು ಅವಕಾಶವಿದೆ. ಮುಖ್ಯವಾಹಿನಿ ಮಾಧ್ಯಮದ ಜತೆಗೆ ಸಾಮಾಜಿಕ ಜಾಲತಾಣಗಳೂ ಅರ್ಬನ್ ನಕ್ಸಲರ ಕೈನಲ್ಲಿವೆ. ಮೇಲ್ನೋಟಕ್ಕೆ ಕಾಣುವಷ್ಟು ಸಣ್ಣ ಸಮಸ್ಯೆ ಇದಲ್ಲ. ಕೇರಳ ಹೋದರೆ ಕನಿಷ್ಟ ಕರ್ನಾಟಕವನ್ನು ಅದು ಜತೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಶಕುಂತಲಾ ಅಯ್ಯರ್ ಅತಿಥಿಗಳನ್ನು ಸ್ವಾಗತಿಸಿದರು.

Veteran RSS Pracharak and Editor of ‘Vijayabharatam’ Sri M Veerabahu passes away.

$
0
0

One of the senior pracharaks of RSS in Tamilnadu and Editor of Nationalist Tamil weekly Vijayabharatham, Sri M Veerabahu passed away on September 12. He was 72. He fell  victim to covid-19. He was undergoing  treatment at Rajiv Gandhi  government General Hospital, Chennai.

Born in a lower  middle class family of Tirunelveli town, Veerabahu joined RSS Shakha in early 1969 when he was 15. Soon he became Sangh pracharak devoting himself in Hindu consolidation work for the past five decades and more in several parts of Tamilnadu.

VEERABAHU. M
(January 14,  1949 —  September 12, 2020)

He was Mukhya Shikshak in the annual RSS training camps and the commands in Sanskrit in  his booming voice thrilled  thousands of participants. His fearless attitude  sent shivers in anti social elements as is borne out by what happened to a group of Communists in Kanyakumari. Veerabahu was a Pracharak there. He stayed in  Kuzhithurai.  A few Comrades of the town held out a threat to RSS. Veerabahu walked straight into the local Communist Party office and gave a stern warning to the inmates  that if anti RSS  propaganda is not stopped forthwith, they would have to face the consequence. It had the desired effect.

A young man in his 20s, Veerabahu  was appalled by the 1971 obscene DK procession in Salem vilifying Hindu Gods and Goddesses.The result was total Bazaar hartal in the Arcot town where  he was a pracharak then. He could thus inspire Hindus of the town into action successfully.

When Veerabahu was Vellore Vibhag pracharak,  Vellore witnessed something historic. Sri Jalakanteshwara, the Shiva Lingam of the ancient Vellore Fort Temple, was reinstalled with grand fanfare in the temple after 4 centuries. Veerabahu played a pivotal role in this episode by motivating Hindu organisations and mobilizing public support in a big way in favour of the move. The  Lingam had been removed from the temple to protect it from the invading hordes  of Muslims. Thus the return of Jalakanteshwara  in fact inspired the Ayodhya Ram Janmabhoomi Movement in recent times, according to observers.

From RSS work, Veerabahu was assigned state level responsibilities in Vishva Hindu Parishad as well as Hindu Munnani. He led a team of Hindu activists in organising a massive Hindu conference in  Tiruchirappalli, the hotbed of missionary activities.

Veerabahu edited Hindu Sanga Seidhi, a Hindu  awareness  bulletin that reaches every panchayat of  Tamilnadu. He became, 8 years ago, the editor of the nationalist Tamil weekly Vijayabharatham published from Chennai. Even while he activated a group of thinkers and writers to take active interest in running the weekly, Veerabahu simultaneously concentrated on the circulation aspect of  the weekly which touched 25,000 quickly and it is growing — because Veerababu perceived Vijayabharatham as not just a magazine but as a vehicle of Hindu awareness message. The growth in the strength of this Hindu Nationalist weekly was  a constant irritant to the anti Hindu, separatist gangs in Tamilnadu. An always-upbeat Veerabahu saw to it that weekly publication comes out on a daily basis in the form of an e-magazine once Vijaya bharatham office building was shut down during the covid-19 lockdown. The online circulation of the e-magazine touched 2 lakhs just last week, but the author of this effective daily Hindu message, Shri Veerababu, did not live long enough to see its circulation touch the five lakh mark, a target he had set.

Among the mourners of Veerabahu’s demise across all social media were thousands of Hindu activists as well as pious devotees of all Hindu denominations. His body was cremated at 4 pm on September 12, observing all covid -19 norms at the Villivakkam crematorium in Chennai.

Credits: VSK Tamilnadu

Revisiting Integral Humanism of Pandit Deen Dayal Upadhyaya – Dr. Ragotham Sundararajan

$
0
0

Revisiting Integral Humanism of Pandit Deen Dayal Upadhyaya – Dr. Ragotham Sundararajan

Pandit Deen Dayal Upadhyaya proposed the framework of Ekatma Manava Dharshan or Integral Humanism in a series of four speeches in Bombay in 1965. Since then, it has been part of our public discourse to varying degrees. It is worth reinforcing Integral Humanism on his Birth anniversary on 25th September.

Integral Humanism was proposed in the context of the question – what socio-economic model or path of progress and development should be pursued by India after Independence? Pandit Deen Dayal Upadhyaya understood that the two dominant or popular models, Capitalism and Communism, being pursued in their various versions by different nations, including India at that point of time were fundamentally deficient and flawed. Capitalism, based on excessive and incessant competition, was exploitative of the workers and reduces a Human to focus only on his or her material needs. Communism, while talking about freedom and equality really is about state dictatorship and centralization of power, which does not recognize the spiritual aspects of Human life. Integral Humanism seeks to address the material and spiritual needs of Individuals and the Society.

Unlike Capitalism and Communism by whatever names they may be followed, Integral Humanism focuses on balanced existence and living, including the balance between spiritual and material human needs as well as the balance between Individual, Family and the Society. Policies and programs of the Government should aim to nurture this balance between the different interests of the Individual, Family, Society and Nation. An approach based on cooperation and harmony instead of competition and conflict should be followed by everyone.

This approach is not a new invention. It is based on and reiterates the innate nature (Chiti) of Bharatiya culture, followed by the Hindu society for millennia. It is based on the preponderance of Dharma, which is the force of balance, harmony and holistic growth. It expresses the same principles as contained in the PurusharthasDharma, Artha, Kama and Moksha. Dharma is the foundation and the law, Artha is the enabler, Kama is the fuel in the form of desires and aspirations as well as seeking of happiness in the material world and Moksha is the recognition and effort toward self-realisation (experiencing the Ultimate) and liberation of the Atman from all bondages of phenomenal existence. Purusharthas encapsulate the integral perspective of human life. They remind us to live in an integral way which benefits the Individual, Society, Nature and the whole of Humanity.

Other thinkers such as Abraham Maslow (Self-Actualisation and Hierarchy of Human needs) have discussed fulfillment of various needs of Humans – personal, material, and psychological. However, Integral Humanism goes beyond all such hierarchies and provides a unified approach. Today, as the world is grappling with conflicts related to work-life balance, individual rights vs collective good, wealth vs health and happiness and development vs nature, it is imperative to recognise and reinforce the idea that frameworks or approaches that have conflict ingrained in them cannot solve the conflicts that play out in the individual or society.

India and the world need an approach that is fundamentally designed on the basis of balance, harmony and sustainability. Integral Humanism is such an approach, which needs to be adapted and implemented at various levels by individuals and institutions, including governments. It is a Dharma-centric approach which provides opportunities and avenues to humans to expand and fulfill their material and spiritual potential without causing immense damage to the Society or Nature. It empowers Sattva, the goodness that is inherent in the individual and society, which will lead to universal happiness, harmony and real progress.

Dr. Ragotham Sundararajan, Research Scholar,

ಡಾ. ಎಸ್ಪಿಬಿಗೆ ನುಡಿ ನಮನ ‘ರಸಸಿದ್ಧರಿಗೆ ಮರಣವಿಲ್ಲ’ : ಪ್ರದೀಪ್ ಮೈಸೂರು

$
0
0

ಡಾ. ಎಸ್ಪಿಬಿಗೆ ನುಡಿ ನಮನ ‘ರಸಸಿದ್ಧರಿಗೆ ಮರಣವಿಲ್ಲ’

ಲೇಖನ: ಪ್ರದೀಪ್ ಮೈಸೂರು, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್, ಆರೆಸ್ಸೆಸ್

“.. ಏ ದೇಖಕೆ ದಿಲ್ ಝೂಮಾ… ” ಇದು ನನ್ನನ್ನು ಬಹುವಾಗಿ ಸೆಳೆದ ಹಾಡು. ಇಂಜಿನಿಯರಿಂಗ್ ಕಲಿಯಲು ಕಾಲೇಜಿಗೆ ಸೈಕಲ್ ನಲ್ಲಿ ‌ಹೋಗುವಾಗ ದಾರಿ ಬದಿಯ ಅಂಗಡಿಯಲ್ಲಿ ಈ ಹಾಡು ಕೇಳಿದರೆ ಅಲ್ಲೇ ನಿಂತು ಪೂರ್ತಿಯಾಗಿ ಕೇಳಿ ನಂತರವೇ ಮುಂದೆ ಹೋಗುತ್ತಿದ್ದೆ. ಆ ಹಾಡಿನಲ್ಲಿ ‌ರಫಿಯವರು ಝೂಮಾ… ಪದದಲ್ಲಿ ಮಾ… ಅಕ್ಷರವನ್ನು ಮೃದುಗೊಳಿಸಿರುವ ರೀತಿ ಅನೂಹ್ಯವಾದದ್ದು ಎಂದು ಸೋನು ನಿಗಮ್ ನಡೆಸುತ್ತಿದ್ದ Zee ಸರಿಗಮಪ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬಂದಿದ್ದ ಬಾಲು – ನಿಮ್ಮನ್ನು ಪ್ರಭಾವಿಸಿದ ಗಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ. ಗಾಯಕನ ಪ್ರಭಾವಳಿಯಲ್ಲಿ ಕಳೆದು ಹೋಗುವುದು ಒಂದಾದರೆ, ಗಾಯನದ ಸೂಕ್ಷ್ಮಗಳನ್ನು ಗ್ರಹಿಸುವುದು ವಿದ್ಯಾರ್ಥಿಯ ಮತ್ತು ರಸಿಕನ ಗುಣ.

ಬಾಲು ಅದನ್ನೇ ಹೇಳಿದರು. ಸೂಕ್ಷ್ಮ ಗ್ರಹಿಕೆ. ಕೇಳಡಿ ಕಣ್ಮಣಿ ಸಿನಿಮಾದಲ್ಲಿ ‌ಅವರು ಹಾಡಿದ್ದ ಬ್ರೆತ್ಲೆಸ್ ಹಾಡು ಆಗ ಬಹಳ ಪ್ರಸಿದ್ಧವಾಗಿತ್ತು. ಆ ಹಾಡಿಗಾಗಿ ನೀವೇನು ತಯಾರಿ ಮಾಡಿದ್ದಿರಿ ಎಂಬ ಪ್ರಶ್ನೆಗೆ ಬಾಲು ಅತಿಮಾನುಷವಾದ, ಅವಾಸ್ತವವಾದ, ಅತಿರಂಜನೀಯವಾದ ಉತ್ತರವನ್ನು‌ ನೀಡದೆ – “ನನ್ನಂತಹ ಸ್ಥೂಲ ಕಾಯದ ಮನುಷ್ಯ ಉಸಿರುಗಟ್ಟಿ‌ ಹಾಡಲು ಸಾಧ್ಯವೇ? ಆ ಹಾಡನ್ನು ಎರಡು ಮೂರು ಟೇಕ್ ಗಳಲ್ಲಿ ಹಾಡಿದ್ದೇನೆ” ಎಂದುತ್ತರಿಸಿದರು.

Dr. S P Balasubramaniam, the doyen of Carnatic music passed away on Sep 25 2020

ಪ್ರಮಾಣಿಕತೆ, ನೈಜತೆ ಅವರ ವ್ಯಕ್ತಿತ್ವದ ಮೂಲ ಧಾತು.ಅವರೇ ನಡೆಸುತ್ತಿದ್ದ ಎದೆ‌ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ – ಅನಿಸುತಿದೆ ಯಾಕೋ ಇಂದು ಹಾಡನ್ನು ಹಾಡಿದ ಸ್ಪರ್ಧಿಗೆ ಅಭಿಪ್ರಾಯ ಮಂಡನೆಯ ಸಂದರ್ಭದಲ್ಲಿ ಬಾಲು ಕೇಳಿದ್ದು ನಿಮ್ಮ ಉಚ್ಚಾರಣೆ ಏಕೆ ಹೀಗಿದೆ? ಮೂಲ ಗಾಯಕರು ಹಾಡಿರುವ ಹಾಗೆಯೇ ನಾನೂ ಹಾಡಿದ್ದೇನೆ ಎಂದು ಸ್ಪರ್ಧಿ ಉತ್ತರ ಕೊಟ್ಟಾಗ – ‘ಕನ್ನಡವನ್ನು ಕನ್ನಡದ ರೀತಿ ಉಚ್ಚರಿಸಬೇಕು. ಹಿಂದಿಯವರಂತೆ ಕನ್ನಡವನ್ನು ಆಡಬಾರದು’ ಎಂದು ನವಿರಾಗಿ ಆದರೆ ದೃಢವಾಗಿ ಕನ್ನಡ ಪರ‌ ದನಿಯಾದರು‌ ಅಷ್ಟೇ ಅಲ್ಲ, ಕನ್ನಡವನ್ನು ಉಳಿಸಲು ಕನ್ನಡ ಮಾತಾಡುವವರು ಸ್ಪಷ್ಟವಾಗಿ ಮಾತಾಡಬೇಕು ಎಂಬುದು ಪ್ರಾಥಮಿಕ ಅಗತ್ಯ ಎಂಬುದನ್ನು ವಿಶದಪಡಿಸಿದರು.ಮಾದಕತೆಯಿಂದ ಕೂಡಿರುವ ಹಾಡುಗಳನ್ನು ಪುಟಾಣಿ ಸ್ಪರ್ಧಿಗಳು ಹಾಡಿದಾಗ – ಈ ಹಾಡನ್ನು ನಿನಗೆ ಆಯ್ಕೆ ಮಾಡಿಕೊಟ್ಟವರು ಯಾರು? ಎಂದು ಪ್ರಶ್ನಿಸದೇ ಬಿಡುತ್ತಿರಲಿಲ್ಲ.

ನನ್ನ ಮಮ್ಮಿ ಮತ್ತು ಡ್ಯಾಡಿ ಎಂದೇನಾದರೂ ಪುಟಾಣಿ ಉತ್ತರಿಸಿದರೆ ಅದೇ ಸಭೆಯಲ್ಲೇ ಮಮ್ಮಿ ಮತ್ತು ಡ್ಯಾಡಿಗೆ – ಈ ವಯಸ್ಸಿನಲ್ಲಿ ನಿಮ್ಮ ಕಂದಮ್ಮಗಳ ಬಾಯಲ್ಲಿ ಇಂತಹ ಹಾಡು ಹಾಡಿಸಬೇಡಿ ಎಂದು ಕೋಮಲವಾಗಿ‌ ತಾಕೀತು ಮಾಡಿದ ಉದಾಹರಣೆಗಳು ವಿಪುಲವಾಗಿ ಸಿಗುತ್ತವೆ. ಒಟ್ಟಾರೆ ಸಿನಿಮಾ ಹಾಡುಗಳು ಯಾವ ಯಾವ ರಾಗಗಳಲ್ಲಿ ಇದೆ ಎಂದೇನಾದರೂ ವರ್ಗೀಕರಿಸಿದರೆ ಒಂದಿಪ್ಪತ್ತು, ಇಪ್ಪತ್ತೈದು ರಾಗಗಳ ಒಳಗೆ ಬಂದು ಬಿಡುತ್ತವೆ. ಕಷ್ಟಕರ ‌ರಾಗಗಳಲ್ಲಿ ಸಂಯೋಜನೆ ಮಾಡುವವರು ವಿರಳವಾದರೆ ಅದನ್ನು ಹಾಡಿ ನಿಭಾಯಿಸಬಲ್ಲ ಗಾಯಕ/ಕಿಯರೂ ದುರ್ಲಭವೇ. ಶಾಸ್ತ್ರೀಯ ಸಂಗೀತಗಾರರೂ ನಿಬ್ಬೆರಗಾಗುವಷ್ಟರ ಮಟ್ಟಿಗೆ ಶಾಸ್ತ್ರೀಯ ಸಂಗೀತವನ್ನು ಅಷ್ಟಾಗಿ ಅಭ್ಯಸಿಸದ ಬಾಲು ಅವರು ಹಾಡಿದ್ದಾರೆ ಎಂಬುದು ಮಹತ್ವದ ವಿಷಯ. ಬಾಲು ಹಾಡುತ್ತಾರೆಂದರೆ ರಾಗ ಸಂಯೋಜನೆಯಲ್ಲಿ ‌ಸಾಹಸ ಮಾಡಲು ಸಂಗೀತ ನಿರ್ದೇಶಕರಿಗೆ ವಿಶ್ವಾಸ.

ಶಂಕರಾಭರಣಂ, ಮಲಯ ಮಾರುತ, ಸಾಗರ ಸಂಗಮಂ, ಸ್ವಾತಿ ಮುತ್ಯಂ ಸಿನಿಮಾದಲ್ಲಿರುವ ಮಧ್ಯಮಾವತಿ ರಾಗದ ಸುವ್ವಿ‌ ಸುವ್ವಿ ಹಾಡಿನಲ್ಲಿ ಬಾಲು ಅವರು ಅಳೆದಿರುವ ಧ್ವನಿಯ ಮಂದ್ರ ಮತ್ತು ತಾರಕಗಳು ಅವರ ಸಿದ್ಧಿಯ ದ್ಯೋತಕ. ‌ದೃಶ್ಯ ಮಾಧ್ಯಮ ಬೆಳೆದಂತೆ ಸಂಗೀತ ನಿರ್ದೇಶಕ ಮತ್ತು ಗಾಯಕರ ಮುಖ ಪರಿಚಯ ಜನತೆಗೆ ಆಗುವುದು ಹೆಚ್ಚಾಯಿತು. ಅಲ್ಲಿಯವರೆಗೆ ಸಂಗೀತ ನಿರ್ದೇಶಕ ತನ್ನ ಸಂಗೀತದಿಂದಲೂ ಗಾಯಕ ತನ್ನ ಧ್ವನಿಯಿಂದಲೂ ಜನರ ಭಾವಕೋಶವನ್ನು ಪ್ರವೇಶಿಸುತ್ತಿದ್ದರು. ಅವರ ಹೆಸರು ಉಲ್ಲೇಖ ಆಗುತ್ತಿದ್ದದ್ದು ಆಕಾಶವಾಣಿಯ “ಕೇಳುಗರ ಕೋರಿಕೆ, ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ” ಕಾರ್ಯಕ್ರಮದಲ್ಲಿ. “ಇದೇ ನಾಡು, ಇದೇ ಭಾಷೆ” ಹಾಡಿನಲ್ಲಿ ಬಾಲು ಅವರು ಕಾಣಿಸಿಕೊಳ್ಳುವವರೆಗೆ ಅವರ ಧ್ವನಿಯೇ‌ ಅವರ ಪಹಚಾನ್ ಆಗಿತ್ತು. ನಟರು ಪಾತ್ರ ಪ್ರವೇಶ ಮಾಡಬೇಕು ಎಂಬುದು ಅಗತ್ಯವೇ. ಆದರೆ ಗಾಯಕ ಪಾತ್ರ ಪ್ರವೇಶ ಮಾಡುವುದು ಅಸಾಧ್ಯದ ಸಂಗತಿ. ಇದನ್ನು ಮಾಡಿ ತೋರಿದವರು ಬಾಲು. ಪ್ರೇಮದ ಕಾದಂಬರಿ, ವೇದಂ‌ ಅಣು ಅಣುವುನ ನಾದಂ, ಸುಂದರಿ ಸುಂದರಿ ‌ಸುರ ಸುಂದರಿ ಸುಂದರಿ ಹಾಡುಗಳು ಅವರ ಸಾಮರ್ಥ್ಯಕ್ಕೆ ಕೆಲ ಉದಾಹರಣೆಗಳು ಅಷ್ಟೇ.

ಬಾಲು ಅವರನ್ನು ಪ್ರೇರೇಪಿಸಿದ ರಫಿ ಅವರಿಗೂ ಪಾತ್ರ ಪ್ರವೇಶದ ಶಕ್ತಿ ಇತ್ತು. ಬೈಜು ಬಾವರಾ ಚಿತ್ರದಲ್ಲಿ ಅವರು ಹಾಡಿರುವ – ಓ ದುನಿಯಾ ಕೇ ರಖವಾಲೇ ಹಾಡನ್ನು ರೆಕಾರ್ಡ್ ಮಾಡುವಾಗ ಅವರು ತಲ್ಲೀನರಾಗಿಬಿಟ್ಟಿದ್ದರು. ಆ ಗೀತೆಯ ಸ್ವರ ಸಂಚಾರವು ಮನುಷ್ಯನೊಬ್ಬ ಸಾಧಾರಣವಾಗಿ ತಲುಪಲಾಗದ ತಾರಕವಾಗಿತ್ತು.‌ ಕಂಠ ಬಿರಿದೇ ಹೋಯಿತು ಎಂಬಷ್ಟು ಎತ್ತರದ ಸ್ವರಗಳು. ಭಕ್ತಿ ರಸದಲ್ಲಿ ಮಿಂದ ಸಾಹಿತ್ಯ ಬೇರೆ. ರಫಿ ತಲ್ಲೀನರಾಗಿ ಹಾಡುವಾಗ – ಆ ಎತ್ತರದಲ್ಲಿ ಹಾಡಲು‌ ಆಗದು, ಅವನು ಸತ್ತೇ‌ ಹೋದಾನು ಅವನನ್ನು ತಡೆಯಿರಿ ಎಂದು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಇದ್ದವರು ಹೇಳಿದ್ದನ್ನು ಹಿರಿಯ ಸಂಗೀತ ನಿರ್ದೇಶಕ ನೌಶಾದ್ ಕಾರ್ಯಕ್ರಮವೊಂದರಲ್ಲಿ ಸ್ಮರಿಸಿದ್ದರು.

ಡಿಜಿಟಲ್ ಲೋಕ ಸ್ಫೋಟಗೊಂಡ ನಂತರವಂತೂ ಸಿನಿಮಾ ಸಂಗೀತ, ಗಾಯಕನ ಧ್ವನಿ ಪರಿಚಯ ಇತ್ಯಾದಿಗಳ ವ್ಯಾಕರಣ ಬದಲಾಗಿ ಹೋಗಿದೆ. ಈಗ ಗಾಯಕ/ಕಿಯರು ತಮ್ಮ ಉಪಸ್ಥಿತಿಯನ್ನು ಪ್ರತ್ಯಕ್ಷವಾಗಿ ತೋರ್ಪಡಿಸಲು ಉತ್ಸುಕರಾಗಿದ್ದಾರೆ. ಇನ್ನೂ ಮುಂದುವರೆದು, ರಿಯಾಲಿಟಿ ಶೋಗಳಲ್ಲಿ ಗಾಯಕನಿಗೆ ತಕ್ಕ ಮಟ್ಟಿನ ಕುಣಿತವೂ ಬರಬೇಕೆಂಬ ಅಲಿಖಿತ ನಿಯಮವೂ ಚಾಲ್ತಿಯಲ್ಲಿದೆ. ಇಂತಹ ಯುಗದಲ್ಲಿ ಬಾಲು ಅವರು ಗಾಯಕನ ಗುರುತನ್ನು ಕಳೆದುಕೊಳ್ಳಲಿಲ್ಲ ಎಂಬುದು ಅವರ ಬದುಕಿನ ಮೂಲಕ ಮುಂಬರುವ ಪೀಳಿಗೆಗೆ ಮಾಡದೆಯೇ ಮಾಡಿರುವ ಪಾಠವಾಗಿದೆ – ಬಾಲು ಪಾಠ.ತಮ್ಮ ಧ್ವನಿಯ ಮೂಲಕ ಬಾಲು ನಲ್ಲ ನಲ್ಲೆಯರು, ಪಡ್ಡೆ‌ ಹುಡುಗರು, ಹೋರಾಟಗಾರರು, ವಿರಹಿಗಳು ಇನ್ನೂ ಅನೇಕರ ಹಾಡುಗಳಲ್ಲಿ ಜೀವಂತವಾಗಿರುತ್ತಾರೆ. ಅದು ನಿಜವಾಗಿ ಕಲಾವಿದನ ಜಾಗ.

ಭರ್ತೃಹರಿ ಹೇಳುವಂತೆ –

ಜಯಂತಿ ತೇ ಸುಕೃತಿನೋರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇಜರಾಮರಣಜಂ ಭಯಮ್ ||

(ರಸಸಿದ್ಧಿಯಾದವನಿಗೆ ಜರ ಮತ್ತು ಮರಣಗಳ ಭಯವಿರದು ಎಂಬುದು ಇದರ ತಾತ್ಪರ್ಯ)

ಈ ಸಾಲುಗಳನ್ನು ಸಾಗರ ಸಂಗಮಂ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ. ಹಂಸಾನಂದಿ ರಾಗದಲ್ಲಿ ಬಾಲು ಅವರೇ ಹಾಡಿದ್ದಾರೆ. ಪಾತ್ರ ಪ್ರವೇಶಿಸಿದ್ದಾರೆ) ಈ ಸಾಲುಗಳು ಅವರಿಗೇ ಮುಡಿಪು. ಏಕೆಂದರೆ ಅವರು ರಸಜ್ಞ, ರಸಸಿದ್ಧ. ಅಂತಹವರಿಗೆ ಮರಣವಿಲ್ಲ.

Sri Pradeep Mysuru, Pranth Prachar Pramukh – Karnataka Dakshina, RSS

Sri M.P. Kumar is the new President of Rashtrotthana Parishat, Sri Dwarakanath is the Vice President.

$
0
0

Sept 27, Bengaluru: Rashtrotthana Parishat’s working committee met today. RSS’ Sah-Sarkaryavah Sri Mukunda C R was a special invitee to the meeting. The President of the Parishat Nadoja S R Ramaswamy said that the work of Rashtrotthana Parishat is growing in a big way in various dimensions. A greater professional approach is the need of the hour to carry forward further more Parishat’s activities in future he opined. Expansion of the work being the prime reason, he also proposed Sri M P Kumar who has served actively in the past with Rashtrotthana Parishat and ABVP as the next President of the Parishat. Sri M P Kumar has been the pioneer in starting and leading the Global Edge software company to global heights. Sri A R Dwarakanath will be Rashtrotthana Parishat’s Vice President.

Sri M P Kumar, President of Rashtrotthana Parishat.
Sri A R Dwarakanath, Vice President of Rashtrotthana Parishat

RSS Sah-Sarkaryavah Sri C R Mukunda in his address wishing Rashtrotthana Parishat the best guided the Parishat to undertake more activities related to education and Yoga which would help the society in a bigger way. Sri Mukunda also called for Parishat to work in the lines of Indianising Education. The need for English works related to Bharatiya thoughts is essential today and Rashtrotthana not only should publish some English works but should take up leadership in this endeavor he wished.

Rashtrotthana Parishat’s working committee is re constituted as below:

President: Sri M P Kumar, Renowned Industrialist
Vice President: Sri A R Dwarakanath, Retd Director, BHEL
General Secretary: Sri Na Dinesh Hegde, Social Worker
Treasurer: Sri Ganapati Hegde, Social Worker.

Parishat’s members would include

Sri Ashok Sonkar, Retd. Senior Superintendent of Post Offices
Sri K S Narayana, Social Worker
Sri B S Ravikumar, Social Worker
Smt Malini Bhaskar, Social worker
Sri Gajanan Londhe, Retd employee of Nokia Technologies

Special invitees would include:

Nadoja Sri S R Ramaswamy, Eminent writer
Sri A Gopalakrishna Nayak, Retd Employee, ITI
Sri Rajaram, Social Worker
Sri Basavanagowda, Social Worker

ಶ್ರೀ ಎಂ ಪಿ ಕುಮಾರ್ ರಾಷ್ಟ್ರೋತ್ಥಾನ ಪರಿಷತ್ತಿನ ನೂತನ ಅಧ್ಯಕ್ಷರು, ಶ್ರೀ ದ್ವಾರಕಾನಾಥ್ ಉಪಾಧ್ಯಕ್ಷರು

$
0
0


ಸೆಪ್ಟೆಂಬರ್ 27, ಬೆಂಗಳೂರು : ಇಂದು ರಾಷ್ಟ್ರೋತ್ಥಾನ ಪರಿಷತ್ ಆಡಳಿತ ಮಂಡಳಿಯ ಸಭೆ ನಡೆಯಿತು. ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ್ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.
ಇದೇ ವೇಳೆ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಎಸ್.ಆರ್. ರಾಮಸ್ವಾಮಿ ಅವರು ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ ಇದೀಗ ವಿವಿಧ ಮುಖಗಳಲ್ಲಿ ಬೆಳೆಯುತ್ತಿದೆ. ಇದಕ್ಕೆ ವೃತ್ತಿಪರತೆಯ ಸ್ಪರ್ಶ ಸಿಗಬೇಕಾಗಿದೆ. ಹೀಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೋತ್ಥಾನ ಪರಿಷತ್‍ನಂತಹ ಸಾಮಾಜಿಕ ಸಂಘಟನೆಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಹಾಗೂ ಗ್ಲೋಬಲ್ ಎಡ್ಜ್‍ನಂತಹ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳನ್ನು ಕಟ್ಟಿಬೆಳೆಸಿರುವ ಅನುಭವವಿರುವ ಎಂ.ಪಿ. ಕುಮಾರ್ ಅವರನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಮುಂದಿನ ಅಧ್ಯಕ್ಷರಾಗಿ ಸೂಚಿಸುತ್ತಿದ್ದೇನೆ ಎಂದರು.


ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ್ ಅವರು ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್‍ನ ಮುಂದಿನ ದಿನಗಳಲ್ಲಿ ವಿಶೇಷ ಗಮನ ಹರಿಸಬೇಕಾದ ಸಂಗತಿಗಳ ಕುರಿತು ಮಾರ್ಗದರ್ಶನ ಮಾಡಿದರು. ಶಿಕ್ಷಣದಲ್ಲಿ ಭಾರತೀಯತೆಯನ್ನು ತರಲು ಒತ್ತು ನೀಡಬೇಕು. ಇಂದು ಭಾರತದಲ್ಲಿ ಭಾರತೀಯಚಿಂತನೆಯ ಇಂಗ್ಲಿಷ್ ಸಾಹಿತ್ಯಗಳ ಅಗತ್ಯವಿದೆ. ಈ ಕೊರತೆಯನ್ನು ತುಂಬುವ ಮಾತೃವಲ್ಲದೇ ಇಂಗ್ಲಿಷ್ ಸಾಹಿತ್ಯ ಪ್ರಕಾಶನದಲ್ಲಿ ನೇತೃತ್ವ ವಹಿಸುವಷ್ಟು ಉತ್ತಮ ಪ್ರಕಟಣೆಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯದಿಂದ ಹೊರಬರಬೇಕು. ಹಾಗೂ ಸಮಾಜದ ಮೇಲೆ ಪ್ರಭಾವ ಬೀರುವ ಚಟುವಟಿಕೆಗಳಾದ ಶೈಕ್ಷಣ ಕ ಚಟುವಟಿಕೆಗಳು, ಯೋಗ ಮುಂತಾದವುಗಳು ಸಂಖ್ಯಾತ್ಮಕವಾಗಿ ಹೆಚ್ಚಾಗಬೇಕು ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ವಾರ್ಷಿಕ ಸಭೆ ನಡೆಯಿತು. ಸಭೆಯಲ್ಲಿ ಪರಿಷತ್‍ನ ವಿವಿಧ ಪ್ರಕಲ್ಪಗಳ ಪ್ರಮುಖರು ತಮ್ಮ ಚಟುವಟಿಕೆಗಳ ವರದಿ ನೀಡಿದರು.

ಶ್ರೀ ಎಂ ಪಿ ಕುಮಾರ್
ಶ್ರೀ ದ್ವಾರಕಾನಾಥ್

ರಾಷ್ಟ್ರೋತ್ಥಾನ ಪರಿಷತ್‍ನ ನೂತನ ಆಡಳಿತ ಮಂಡಳಿ
ಅಧ್ಯಕ್ಷರು : ಶ್ರೀ ಎಂ.ಪಿ. ಕುಮಾರ್, ಖ್ಯಾತ ಉದ್ಯಮಿಗಳು
ಉಪಾಧ್ಯಕ್ಷರು : ಶ್ರೀ ಎ.ಆರ್. ದ್ವಾರಕಾನಾಥ್, ವ್ಯವಸ್ಥಾಪಕರು (ನಿ) ಬಿಎಚ್‍ಇಎಲ್
ಪ್ರಧಾನ ಕಾರ್ಯದರ್ಶಿ : ಶ್ರೀ ನಾ. ದಿನೇಶ್ ಹೆಗ್ಡೆ, ಸಾಮಾಜಿಕ ಕಾರ್ಯಕರ್ತರು
ಖಜಾಂಚಿ : ಶ್ರೀ ಗಣಪತಿ ಹೆಗಡೆ, ಸಾಮಾಜಿಕ ಕಾರ್ಯಕರ್ತರು


ಸದಸ್ಯರು :
ಶ್ರೀ ಅಶೋಕ್ ಸೋನಕರ್, ಸಿನಿಯರ್ ಸೂಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸಸ್ (ನಿ)
ಶ್ರೀ ಕೆ.ಎಸ್. ನಾರಾಯಣ, ಸಾಮಾಜಿಕ ಕಾರ್ಯಕರ್ತರು
ಶ್ರೀ ಬಿ.ಎಸ್. ರವಿಕುಮಾರ್, ಸಾಮಾಜಿಕ ಕಾರ್ಯಕರ್ತರು
ಶ್ರೀಮತಿ ಮಾಲಿನಿ ಭಾಸ್ಕರ್, ಸಾಮಾಜಿಕ ಕಾರ್ಯಕರ್ತರು
ಶ್ರೀ ಗಜಾನನ ಲೋಂಢೆ, ನಿವೃತ್ತ ಅಧಿಕಾರಿಗಳು, ನೋಕಿಯಾ ಟೆಕ್ನಾಲಜಿ

ವಿಶೇಷ ಅಹ್ವಾನಿತರು :
ಶ್ರೀ ಎಸ್.ಆರ್. ರಾಮಸ್ವಾಮಿ, ಸಾಹಿತಿಗಳು
ಶ್ರೀ ಎ. ಗೋಪಾಲಕೃಷ್ಣ ನಾಯಕ್, ನಿವೃತ್ತ ಅಧಿಕಾರಿಗಳು, ಐಟಿಐ
ಶ್ರೀ ರಾಜಾರಾಮ್, ಸಾಮಾಜಿಕ ಕಾರ್ಯಕರ್ತರು
ಶ್ರೀ ಬಸವನಗೌಡ, ಸಾಮಾಜಿಕ ಕಾರ್ಯಕರ್ತರು

ಲಾಲ್ ಬಹದ್ದೂರ್ ಶಾಸ್ತ್ರಿ: ಭಾರತೀಯರ ಆತ್ಮಶಕ್ತಿಯನ್ನೇ ಬಡಿದೆಬ್ಬಿಸಿದ ಮಹಾನ್ ನೇತಾರ

$
0
0

ಲಾಲ್ ಬಹದ್ದೂರ್ ಶಾಸ್ತ್ರಿ: ಭಾರತೀಯರ ಆತ್ಮಶಕ್ತಿಯನ್ನೇ ಬಡಿದೆಬ್ಬಿಸಿದ ಮಹಾನ್ ನೇತಾರ
ಲೇಖಕರು: ಎಸ್.ಉಮೇಶ್, ಮೈಸೂರು 9742281766

ಅಕ್ಟೋಬರ್ 2, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಅಷ್ಟೇ ಅಲ್ಲ ಅದು ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನವೂ ಹೌದು. ಶಾಸ್ತ್ರೀಜಿ ಈ ದೇಶ ಕಂಡ ಮಹಾನ್ ನಾಯಕ. ಪ್ರಾಮಾಣಿಕತೆ, ಸರಳತೆ ಮತ್ತು ಸಜ್ಜನಿಕೆಯ ಪ್ರತೀಕ. ಅಂತಹ ಮೇರು ವ್ಯಕ್ತಿತ್ವದ ಶಾಸ್ತ್ರೀಜಿಯವರ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾರ್ಥಕ ಬದುಕು, ಮಹೋನ್ನತ ಆದರ್ಶ ಮತ್ತು ನಿಗೂಢ ಸಾವಿನ ಬಗ್ಗೆ ಬೆಳಕು ಚೆಲ್ಲುವ ವಿಶೇಷ ಲೇಖನ ಇದು.

ಕುಳ್ಳಗಿನ ದೇಹ, ಶಾಂತ ಮುಖಭಾವ, ಮಗುವಿನಂತಹ ನಗು, ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಹೌದು! ಅವರೇ ದೇಶದ ಹೆಮ್ಮೆಯ ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ. ಈ ದೇಶದ ಮಹಾನ್ ನೇತಾರ. ದೇಶಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ, ಧೀಮಂತ ಜನನಾಯಕ ಹಾಗೂ ಸಜ್ಜನ ರಾಜಕಾರಣಿ. ಶಾಸ್ತ್ರೀಜಿಯವರು ಅವರು ಹುಟ್ಟಿ ಬೆಳೆದದ್ದೆಲ್ಲ ಮೊಘಲ್‍ಸರಾಯ್‍ನಲ್ಲಿ. ತಂದೆ ಶಾರದಾ ಪ್ರಸಾದ್. ವೃತ್ತಿಯಲ್ಲಿ ಶಾಲಾ ಮೇಷ್ಟ್ರು. ತಾಯಿ ರಾಮ್ ದುಲಾರಿ. ಶಾಸ್ತ್ರೀಜಿಯವರ ವಿದ್ಯಾಭ್ಯಾಸವೆಲ್ಲ ಮೊಘಲ್‍ಸರಾಯ್‍ನ ಪೂರ್ವ ಕೇಂದ್ರ ರೈಲ್ವೆ ಕಾಲೇಜಿನಲ್ಲಿ. ಪದವಿ ಕಾಶಿ ವಿದ್ಯಾಪೀಠದಲ್ಲಿ. ಶಾಸ್ತ್ರೀಜಿಯವರ ಮೂಲ ಹೆಸರು ಲಾಲ್ ಬಹದ್ದೂರ್ ಶ್ರೀವಾತ್ಸವ. ಆದರೆ ಶ್ರೀವಾತ್ಸವ ಎನ್ನುವುದು ಜಾತಿ ಸೂಚಕ ಎಂದು ಶಾಸ್ತ್ರೀಜಿಯವರು ಅದನ್ನು ತಮ್ಮ ಹೆಸರಿನಿಂದ ತೆಗೆದುಬಿಟ್ಟರು. ಅವರು ಪದವಿ ಮುಗಿಸಿದಾಗ ಕಾಶಿ ವಿದ್ಯಾಪೀಠ ಅವರಿಗೆ ನೀಡಿದ ಬಿರುದು `ಶಾಸ್ತ್ರಿ' ಎಂದು. ಮುಂದೆ ಅದು ಅವರ ಹೆಸರಿನಲ್ಲೇ ಸೇರಿಕೊಂಡಿತು. ಮೊದಲಿಗೆ ಶಾಸ್ತ್ರೀಜಿಯವರು ಗುರುನಾನಕರಿಂದ ಪ್ರಭಾವಿತರಾಗಿದ್ದರು. ಅವರ ಸಂದೇಶಗಳನ್ನು ನಿತ್ಯ ಓದುತ್ತಿದ್ದರು. 1915ರಲ್ಲಿ ವಾರಣಾಸಿಯಲ್ಲಿ ಗಾಂಧೀಜಿಯವರ ಭಾಷಣ ಕೇಳಿ ಆಕರ್ಷಿತರಾದರು. ಅದು ಅವರ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತು. ದೇಶಸೇವೆಗೆ ಮನಸ್ಸು ಹಾತೊರೆಯಲಾರಂಭಿಸಿತು. 1921ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿ ಕೈಗೊಂಡಾಗ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 1927ರಲ್ಲಿ ಶಾಸ್ತ್ರೀಜಿಯವರು ಮಿರ್‍ಜಾಪುರ್‍ನ ಲಲಿತಾದೇವಿಯವರನ್ನು ವಿವಾಹವಾದರು. 

ದೇಶ ಕಂಡ ಅತ್ಯಂತ ಸರಳ ಸಜ್ಜನಿಕೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಎಂತಹ ಕಠಿಣ ಸಂದರ್ಭವನ್ನೂ ಎದುರಿಸುವ ಅದ್ಭುತ ಸಾಮಥ್ರ್ಯ ಶಾಸ್ತ್ರೀಜಿಯವರಿಗಿತ್ತು. ಅವರೆಂದೂ ಅನ್ಯಾಯವನ್ನು ಸಹಿಸಿದವರಲ್ಲ, ಸ್ವಾರ್ಥಕ್ಕೆ ಬಲಿಯಾದವರಲ್ಲ, ತಾವು ನಂಬಿದ್ದ ತತ್ವ ಮತ್ತು ಸಿದ್ಧಾಂತದಿಂದ ದೂರ ಸರಿದವರಲ್ಲ. ಅವರ ಬದುಕಿನ ಒಂದೊಂದು ಘಟನೆಗಳೂ ಅವರ ಉದಾತ್ತ ಚಿಂತನೆಗಳು ಮತ್ತು ಆದರ್ಶಗಳಿಗೆ ಹಿಡಿದ ಕನ್ನಡಿಯಂತೆ ನಮ್ಮ ಮುಂದಿವೆ. 

ವಾಮನಮೂರ್ತಿಯ ವಿರಾಟ ದರ್ಶನ:
ಎರಡು ದಶಕಗಳ ನೆಹರೂ ಆಡಳಿತ ಕೊನೆಗೊಂಡಾಗ ಭಾರತವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ದೇಶದ ಜನರಿಗೆ ಬೇಕಾಗಿದ್ದದ್ದು ಒಬ್ಬ ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ. ದೇಶದ ಆರ್ಥಿಕತೆಗೆ ಶಕ್ತಿ ತುಂಬಬಲ್ಲ ಸಮರ್ಥ ನಾಯಕ. ಭಾರತದ ಜನ ಲಾಲ್ ಬಹದ್ದೂರ್ ಶಾಸ್ತ್ರಿಯವರಲ್ಲಿ ಈ ಎಲ್ಲ ಗುಣಗಳನ್ನು ಕಂಡಿದ್ದರು. ಸಹಜವಾಗಿ ದೇಶ ಪ್ರಧಾನಿ ಹುದ್ದೆಗೆ ಶಾಸ್ತ್ರೀಜಿಯವರನ್ನು ಬಯಸಿತ್ತು. ಶಾಸ್ತ್ರೀಜಿ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದರು. ಶಾಸ್ತ್ರೀಜಿ ಪ್ರಧಾನಿಯಾದ ಸಂದರ್ಭದಲ್ಲಿ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಕೃಷಿ ಕ್ಷೇತ್ರ ಆತಂಕಕಾರಿಯಾಗಿ ಅವನತಿಯ ಹಾದಿಯತ್ತ ಸಾಗುತ್ತಿತ್ತು. ಎಲ್ಲೆಲ್ಲೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ. ಜೊತೆಗೆ ದೇಶಾದ್ಯಂತ ಬರಗಾಲ. ಆದರೆ ಆ ಸಮಯದಲ್ಲಿ ಶಾಸ್ತ್ರೀಜಿಯವರಿಗಿದ್ದ ಗುರಿ ಒಂದೇ. ಭಾರತವನ್ನು ಸ್ವಾವಲಂಭಿ ರಾಷ್ಟ್ರವನ್ನಾಗಿ ಮಾಡಬೇಕು, ನಾವೆಂದೂ ಮತ್ತೊಬ್ಬರ ಮುಂದೆ ಕೈಚಾಚಿ ನಿಲ್ಲಬಾರದು, ಭಾರತ ಸಶಕ್ತ, ಸಮೃದ್ಧ, ಸ್ವಾಭಿಮಾನಿ ರಾಷ್ಟ್ರವಾಗಿ ರೂಪುಗೊಳ್ಳಬೇಕು ಎನ್ನುವುದು.


ಶಾಸ್ತ್ರೀಜಿಯವರು ಆಡಳಿತ ನಡೆಸಿದ್ದು ಕೇವಲ 18 ತಿಂಗಳು ಮಾತ್ರ. ಅಷ್ಟು ಸಣ್ಣ ಅವಧಿಯಲ್ಲೇ ಅಗಾಧವಾದ ಸಾಧನೆ ಮಾಡಿದ್ದರು. ಆ ಸಂದರ್ಭದಲ್ಲಿ ದೇಶ ಆಹಾರ ಕೊರತೆಯನ್ನು ಅನುಭವಿಸುತ್ತಿತ್ತು. ಕೂಡಲೆ ಅವರು ಆಹಾರ ಧಾನ್ಯಗಳ ಬೆಲೆ ಇಳಿಸುವ ಕೆಲಸಕ್ಕೆ ಕೈಹಾಕಿದರು. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಿದರು. ಭಾರತ ದೇಶದ ಗ್ರಾಮಗಳು ಅಭಿವೃದ್ಧಿಯಾಗಬೇಕು ಮತ್ತು ಅಲ್ಲಿನ ಜನ ಸ್ವಾವಲಂಭಿಗಳಾಗಬೇಕು ಎನ್ನುವ ದೃಷ್ಟಿಯಿಂದ ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದರು. ದೇಶದ ರೈತರ ನೆರವಿಗೆ ನಿಂತರು. ಪರಿಣಾಮ ಕೃಷಿ, ಹೈನುಗಾರಿಕೆ ಮತ್ತು ಹಾಲು ಉತ್ಪಾದನೆಯಲ್ಲಿ ಭಾರತ ಸ್ವಾವಲಂಭಿಯಾಯಿತು. ದೇಶದ ಆರ್ಥಿಕತೆಯನ್ನು ತರ್ಕಬದ್ದ ಮತ್ತು ವೈಜ್ಞಾನಿಕ ರೀತಿಯಲ್ಲಿ ಯೋಜಿಸಿದ ಪರಿಣಾಮ ದೇಶ ಪ್ರಗತಿ ಪಥದತ್ತ ಮುನ್ನಡೆದಿತ್ತು. ಕೈಗಾರಿಕಾ ಕ್ಷೇತ್ರ ಗಣನೀಯ ಚೇತರಿಕೆ ಕಂಡಿತು. ಶಾಸ್ತ್ರೀಜಿಯವರು ಭವಿಷ್ಯದ ಭಾರತವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯ ನೀತಿಗಳನ್ನು ರೂಪಿಸುತ್ತಿದ್ದರು. ಅವರ `ಜೈ ಜವಾನ್, ಜೈ ಕಿಸಾನ್’ ಕೇವಲ ಘೋಷಣೆಯಷ್ಟೇ ಆಗಿರಲಿಲ್ಲ. ಅದು ಕೋಟ್ಯಾಂತರ ಭಾರತೀಯರ ಮಹತ್ವಾಂಕಾಕ್ಷೆಯ ಪ್ರತಿಬಿಂಬವಾಗಿತ್ತು.
1962ರ ಯುದ್ಧದ ಸೋಲು ಭಾರತಕ್ಕೆ ಮರೆಯಲಾರದ ಪಾಠ ಕಲಿಸಿತ್ತು. ಆ ಸಮಯದಲ್ಲಿ ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದ ಭಾರತೀಯ ಸೈನ್ಯಕ್ಕೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾಗಿತ್ತು. ಹಾಗಾಗಿ ಏಪ್ರಿಲ್ 5, 1965ರಂದು ಶಾಸ್ತ್ರೀಜಿ ಭಾರತದ ವಿಜ್ಞಾನಿಗಳಿಗೆ ಪರಮಾಣು ಸ್ಫೋಟಕಗಳನ್ನು ತಯಾರಿಸುವುದಕ್ಕೆ ಅನುಮತಿ ನೀಡಿದರು. ಕೂಡಲೆ ಡಾ.ಹೋಮಿ ಜೆಹಂಗೀರ್ ಬಾಬಾರವರ ನೇತೃತ್ವದಲ್ಲಿ ಪರಮಾಣು ವಿನ್ಯಾಸಗಾರರ ಒಂದು ತಂಡ ಶಾಂತಿಯುತ ಉದ್ದೇಶಕ್ಕಾಗಿ ಪರಮಾಣು ಸ್ಫೋಟಗಳ ಅಧ್ಯಯನಕ್ಕೆ ಮುಂದಾಯಿತು. ನಂತರದ ವರ್ಷಗಳಲ್ಲಿ ಭಾರತ ಪರಮಾಣು ಶಕ್ತಿ ಹೊಂದಿದ ರಾಷ್ಟ್ರವಾಗಲು ಇದು ಸಹಕಾರಿಯಾಯಿತು.

ಜಗತ್ತಿಗೆ ಉತ್ತರ ಕೊಡುವ ಜವಾಬ್ದಾರಿ ನನ್ನದು. ಹೋರಾಟ ನಿಮ್ಮದು:
ಶಾಸ್ತ್ರೀಜಿಯವರು ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಪರಿಸ್ಥಿತಿ ತೀರಾ ಸಂಕೀರ್ಣವಾಗಿತ್ತು. ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಒಂದೆಡೆ ದೇಶದಲ್ಲಿ ಆಹಾರ ಸಮಸ್ಯೆ. ಮತ್ತೊಂದೆಡೆ ಗಡಿಯಲ್ಲಿ ಪಾಕಿಸ್ತಾನ ಆಗಾಗ ಕ್ಯಾತೆ ತೆಗೆಯುತ್ತಿತ್ತು. ಆ ಸಮಯದಲ್ಲಿ ಪಾಕಿಸ್ತಾನ ಮಾತ್ರ ಭಾರತದ ಮೇಲೆ ಯುದ್ಧ ಮಾಡಿಯೇ ತೀರಬೇಕೆಂಬ ನಿರ್ಧಾರಕ್ಕೆ ಬಂದಿತ್ತು. ಅದಕ್ಕೆ ಕಾರಣ ಸ್ಪಷ್ಟವಾಗಿತ್ತು. ಚೀನಾ ಯುದ್ಧದಿಂದ ಭಾರತೀಯ ಸೈನಿಕರ ಮನಸ್ಥೈರ್ಯ ಕುಗ್ಗಿತ್ತು. ದೇಶದಲ್ಲಿ ರಾಜಕೀಯ ವಿಪ್ಲವವಿತ್ತು.
ಅದು ಆಗಸ್ಟ್ 31, 1965. ಅಂದು ರಾತ್ರಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಊಟಕ್ಕೆ ಕುಳಿತಿದ್ದರು. ಭಾರತೀಯ ಸೈನ್ಯದ ಮೂರು ಪಡೆಯ ಮುಖ್ಯಸ್ತರು ಪ್ರಧಾನಿ ನಿವಾಸಕ್ಕೆ ದೌಡಾಯಿಸಿದರು. ಸಭೆ ಪ್ರಾರಂಭವಾಯಿತು. ಆಶ್ಚರ್ಯವೆಂಬಂತೆ ಕೇವಲ ಏಳೇ ನಿಮಿಷದಲ್ಲಿ ಪ್ರಧಾನಿಗಳು ಸಭೆ ಮುಗಿಸಿ ಹೊರಬಂದರು. ವಾಸ್ತವದಲ್ಲಿ ಸೇನಾಪಡೆಯ ಮುಖ್ಯಸ್ಥರು ಪಾಕಿಸ್ತಾನಿ ಸೈನ್ಯ ಛಾಂಬ್ ಸೆಕ್ಟರ್‍ನಲ್ಲಿ ಅಂತರಾಷ್ಟ್ರೀಯ ಗಡಿಯನ್ನು ದಾಟಿ ಬರುತ್ತಿದೆ. ಈಗ ನಾವು ಅವರನ್ನು ತಡೆಯದಿದ್ದರೆ ಜಮ್ಮು-ಕಾಶ್ಮೀರ ಭಾರತದಿಂದ ಬೇರ್ಪಡುವ ಎಲ್ಲ ಸಾಧ್ಯತೆಗಳೂ ಇವೆ. ಈಗೇನು ಮಾಡುವುದು ಎಂಬ ಪ್ರಶ್ನೆಯನ್ನು ಪ್ರಧಾನಿಗಳ ಮುಂದೆ ಇಟ್ಟಿದ್ದರು. ಅದಕ್ಕೆ ಶಾಸ್ತ್ರಿಜಿಯವರು “ಕೂಡಲೆ ಸೇನಾದಾಳಿ ಮಾಡಿ. ಪಾಕಿಸ್ತಾನಿ ಸೈನ್ಯವನ್ನು ಹಿಮ್ಮೆಟ್ಟಿಸಿ. ವಾಯುಪಡೆಯ ವಿಮಾನಗಳಿಂದಲೂ ದಾಳಿ ನಡೆಸಿ. ಒಮ್ಮೆ ಆಕ್ರಮಣ ಪ್ರಾರಂಭಗೊಂಡರೆ ಲಾಹೋರ್‍ವರೆಗೂ ಮುನ್ನುಗ್ಗಿ. ಛಾಂಬ್ ಕೈಜಾರುವ ಮೊದಲು ಲಾಹೋರ್‍ನನ್ನು ವಶಪಡಿಸಿಕೊಳ್ಳಿ. ಜಗತ್ತಿಗೆ ಉತ್ತರ ಕೊಡುವ ಜವಾಬ್ದಾರಿ ನನ್ನದು. ಹೋರಾಟ ನಿಮ್ಮದು” ಎಂಬ ಖಡಕ್ ಆದೇಶ ನೀಡಿದ್ದರು. ಪ್ರಧಾನಿಗೆ ಆ ಸಮಯದಲ್ಲಿ ಭಾರತದ ರಕ್ಷಣೆಯಷ್ಟೇ ಮುಖ್ಯವಾಗಿತ್ತು. ಹಾಗಾಗಿ ಸಂಪುಟ ಸಭೆ ಕರೆಯಲಿಲ್ಲ, ಯಾರನ್ನೂ ಕೇಳಲಿಲ್ಲ. ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ. ಅಂತರಾಷ್ಟ್ರೀಯ ಒತ್ತಡಗಳ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಳು ನಿಮಿಷದಲ್ಲಿ ಎದೆ ಝಲ್ಲೆನೆಸುವ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರು. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿಯವರು ಸೈನಿಕರನ್ನು ಹುರಿದುಂಬಿಸಿ ಆಡುತ್ತಿದ್ದ ಮಾತುಗಳು, ಭಾಷಣಗಳು, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಸೈನ್ಯಕ್ಕೆ ಭೀಮಬಲವನ್ನು ತಂದುಕೊಟ್ಟಿದ್ದವು.
ಶಾಸ್ತ್ರೀಜಿಯವರ ದಿಟ್ಟ ನಿರ್ಧಾರ ಮತ್ತು ಸೈನ್ಯಕ್ಕೆ ನೀಡಿದ ಪರಮಾಧಿಕಾರದ ಪರಿಣಾಮ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದಿತ್ತು. ಭಾರತೀಯ ಸೈನ್ಯ ಲಾಹೋರ್‍ನ ಹೆಬ್ಬಾಗಿಲಿಗೆ ಬಂದು ನಿಂತಿತ್ತು. ಮುಂದಿನ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳು ಭಾರತದ ಕೈವಶವಾಗುವುದರಲ್ಲಿತ್ತು. ಅಷ್ಟರಲ್ಲಿ ಪಾಕಿಸ್ತಾನ ಲಜ್ಜೆಬಿಟ್ಟು ಅಮೆರಿಕಾ, ರಷ್ಯಾ ಮತ್ತು ವಿಶ್ವಸಂಸ್ಥೆಯ ಮುಂದೆ ಮಂಡಿಯೂರಿ ಕುಳಿತು ಯುದ್ಧ ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೆ ಗೋಗರೆಯಲಾರಂಭಿಸಿತು. ಹಾಗಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಶಾಸ್ತ್ರೀಜಿ ಶಾಂತಿ ಮಾತುಕತೆಗೆ ತಾಷ್ಕೆಂಟ್‍ಗೆ ಹೊರಟರು. ತಾಷ್ಕೆಂಟ್‍ನಲ್ಲಿ ಸತತ ಏಳು ದಿನಗಳ ಕಾಲ ಶೃಂಗಸಭೆ ನಡೆಯಿತು. ಅಂತಿಮವಾಗಿ ಶೃಂಗಸಭೆಯಲ್ಲಿ ಶಾಂತಿ ಸಂಧಾನಕ್ಕೆ ಉಭಯ ನಾಯಕರಿಂದ ಸಹಿ ಬಿತ್ತು. ಆದರೆ ಆ ಸಹಿಯ ಶಾಯಿ ಆರುವ ಮುನ್ನವೇ ಶಾಸ್ತ್ರೀಜಿ ಸಾವಿನ ಸುದ್ದಿ ಬರಸಿಡಿಲಿನಂತೆ ಭಾರತಕ್ಕೆ ಬಡಿದಿತ್ತು.

ಜನವರಿ 10, 1965.
ತಾಷ್ಕೆಂಟ್ ಶೃಂಗಸಭೆಯ ಯಶಸ್ಸಿನ ಹಿನ್ನೆಲೆಯಲ್ಲಿ ಸೋವಿಯತ್ ಒಕ್ಕೂಟ ಅಂದು ಸಂಜೆ ಭಾರಿ ಪಾರ್ಟಿಯೊಂದನ್ನು ಏರ್ಪಡಿಸಿತ್ತು. ಪಾರ್ಟಿಯಲ್ಲಿ ಎರಡೂ ದೇಶಗಳ ನಾಯಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಪಾರ್ಟಿಯಲ್ಲಿ ವಿಸ್ಕಿ ನೀರಿನ ಹೊಳೆಯಂತೆ ಹರಿದಿತ್ತು. ಮೋಜು ಮಸ್ತಿ ಜೋರಾಗಿತ್ತು. ಶಾಸ್ತ್ರೀಜಿಯವರು ಸ್ವಲ್ಪ ಹೊತ್ತಷ್ಟೇ ಅಲ್ಲಿದ್ದು ನಂತರ ಅಲ್ಲಿಂದ ತಮ್ಮ ಹೋಟೆಲ್‍ಗೆ ಹೊರಟರು. ಜೊತೆಯಲ್ಲಿ ಭಾರತೀಯ ಅಧಿಕಾರಿಗಳಿದ್ದರು. ಅವರ್ಯಾರಿಗೂ ಮುಂದೇನು ನಡೆಯುತ್ತದೆ ಎನ್ನುವ ಸಣ್ಣ ಸುಳಿವೂ ಇರಲಿಲ್ಲ.
ರಾತ್ರಿ ಹತ್ತು ಗಂಟೆಯ ವೇಳೆಗೆ ಪ್ರಧಾನಿಗಳು ಒಂದಷ್ಟು ಬೇಯಿಸಿದ ಪಾಲಕ್ ಮತ್ತು ಆಲೂಗಡ್ಡೆ ಪಲ್ಯ ತಿಂದರು. ನಂತರ ತಮ್ಮ ಕಾರ್ಯದರ್ಶಿ ಸಹಾಯ್‍ರೊಂದಿಗೆ ನಾಳಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಭಾರತಕ್ಕೆ ಹೋದ ನಂತರ ಮಾಡಬೇಕಾದ ಕೆಲಸಗಳ ಬಗ್ಗೆಯೂ ದೆಹಲಿಯಲ್ಲಿದ್ದ ತಮ್ಮ ಸಹಾಯಕರೊಂದಿಗೆ ಚರ್ಚಿಸಿದರು. ನಂತರ ನವದೆಹಲಿಯ ತಮ್ಮ ನಿವಾಸಕ್ಕೆ ಕರೆಮಾಡಿ ಕುಟುಂಬದವರೊಂದಿಗೆ ಮಾತನಾಡಿದರು. ಆ ನಂತರ ರೂಮಿನಲ್ಲಿ ಒಬ್ಬರೇ ಒಂದಷ್ಟು ಹೊತ್ತು ಅತ್ತಿತ್ತ ಓಡಾಡುತ್ತಿದ್ದರು. ಅದಾಗಲೇ ಮಧ್ಯರಾತ್ರಿಯಾಗಿತ್ತು.

 ಅಂದು ಜನವರಿ 11, 1966 ಬೆಳಗಿನ ಜಾವ 1:20. ಶಾಸ್ತ್ರೀಜಿಯವರ ಅಧಿಕಾರಿಗಳು ತಂಗಿದ್ದ ಕೋಣೆಯ ಹೊರಗೆ ಅಸ್ಪಷ್ಟ ಆಕೃತಿಯೊಂದು ಚಲಿಸಿದಂತಾಯಿತು. ನಂತರ ಯಾರೋ ಬಾಗಿಲು ಬಡಿದಂತಾಯಿತು. ಅಧಿಕಾರಿಗಳು ಬಾಗಿಲು ತೆರೆದು ನೋಡಿದರೆ ರಾತ್ರಿ ಉಡುಪಿನಲ್ಲಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ತಮ್ಮ ರೂಮಿನಿಂದ ತೀರಾ ಕಷ್ಟಪಟ್ಟು ಒಂದೊಂದೇ ಹೆಜ್ಜೆಯನ್ನಿಟ್ಟುಕೊಂಡು ಅಲ್ಲಿ ಬಂದು ನಿಂತಿದ್ದರು. ಸಣ್ಣ ಧ್ವನಿಯಲ್ಲಿ ವೈದ್ಯರನ್ನು ಕರೆಯುತ್ತಿದ್ದರು. ಆ ದೃಶ್ಯವನ್ನು ನೋಡುತ್ತಿದ್ದಂತೆ ಅವರೆಲ್ಲರೂ ಗಾಬರಿಗೊಂಡರು. ಪ್ರಧಾನಿಗಳಿಗೆ ಏನೋ ತೊಂದರೆ ಆಗಿದೆ. ಅವರ ದೇಹಸ್ಥಿತಿ ಎಂದಿನಂತಿಲ್ಲ ಎನ್ನುವುದು ಅವರಿಗೆ ಖಚಿತವಾಯಿತು. ಶಾಸ್ತ್ರೀಜಿಯವರು ಆ ಸಮಯದಲ್ಲಿ ವಿಪರೀತ ಬೆವರುತ್ತಿದ್ದರು, ಕೆಮ್ಮುತ್ತಿದ್ದರು. ಬಹಳ ಕಷ್ಟಪಟ್ಟು ಅವರನ್ನು ಹಾಸಿಗೆಯ ಮೇಲೆ ಮಲಗಿಸಲಾಯಿತು. ಕ್ಷಣ ಕ್ಷಣಕ್ಕೂ ಪ್ರಧಾನಿ ಕೆಮ್ಮುತ್ತಾ ಏದುಸಿರು ಬಿಡಲಾರಂಭಿಸಿದರು. ಮುಖವನ್ನು ಹಿಂಡಿಕೊಳ್ಳುತ್ತಿದ್ದರು. ಒಂದೆರಡು ಕ್ಷಣಗಳ ನಂತರ ಎದೆಯನ್ನು ಹಿಡಿದುಕೊಳ್ಳುತ್ತಲೇ ಎದ್ದು ಕುಳಿತರು. ನಂತರ ಹಾಸಿಗೆಯಿಂದ ತುಸು ದೂರದಲ್ಲಿದ್ದ ನೀರಿನ ಫ್ಲಾಸ್ಕಿನತ್ತ ಬೊಟ್ಟು ಮಾಡಿ ಏನನ್ನೋ ಹೇಳಲು ಹೊರಟಿದ್ದರು. ಆದರೆ ಅವರಿಂದ ಅದನ್ನು ಹೇಳಲಾಗಲಿಲ್ಲ. ಕೂಡಲೆ ವೈದ್ಯರಾದ ಡಾ.ಛುಗ್ ಓಡೋಡಿ ಬಂದರು. ನಾಡಿ ಹಿಡಿದು ಪರೀಕ್ಷಿಸಿದರು. ಅಷ್ಟರಲ್ಲಾಗಲೇ ಶಾಸ್ತ್ರೀಜಿಯವರ ನಾಡಿ ಮಿಡಿತ ಕ್ಷೀಣಿಸುತ್ತಾ ಬಂದಿತ್ತು. ರಕ್ತದ ಒತ್ತಡ ತೀರಾ ಕಡಿಮೆಯಾಗಿತ್ತು. ಹೃದಯದ ಬಡಿತ ಸಣ್ಣಗೆ ಕೇಳಿಸುತ್ತಿತ್ತು.  ನೋಡು ನೋಡುತ್ತಿದ್ದಂತೆ ಮುಂದಿನ ಕೆಲವೇ ಕ್ಷಣಗಳಲ್ಲಿ ಶಾಸ್ತ್ರೀಜಿಯವರು ಪ್ರಜ್ಞೆ ತಪ್ಪಿದರು. ನಾಡಿ ಮಿಡಿತ ಸಂಪೂರ್ಣ ಕ್ಷೀಣಿಸಿತು. ಅದಾಗಲೇ ಶಾಸ್ತ್ರಿಜಿಯವರ ಪ್ರಾಣಪಕ್ಷಿ ಹಾರಿಹೋಗಿತ್ತು. 

ಶಾಸ್ತ್ರೀಜಿಯವರ ಬದುಕಿನ ಕೃತಿ ತಾಷ್ಕೆಂಟ್ ಡೈರಿ':
ಇತ್ತೀಚೆಗಷ್ಟೇ ಶಾಸ್ತ್ರೀಜಿಯವರ ಕುರಿತ ಅಪರೂಪದ ಕೃತಿಯೊಂದು ಬಿಡುಗಡೆಗೊಂಡಿದೆ.ತಾಷ್ಕೆಂಟ್ ಡೈರಿ’ ಹೆಸರಿನ ಈ ಕೃತಿಯಲ್ಲಿ ಶಾಸ್ತ್ರೀಜಿಯವರ ಸಾರ್ವಜನಿಕ ಬದುಕಿನ ಹತ್ತಾರು ಮನಕಲಕುವ ಘಟನೆಗಳಿವೆ. ಪ್ರಧಾನಮಂತ್ರಿಯಾಗಿ ಅವರು ದೇಶವನ್ನು ಮುನ್ನಡೆಸಿದ ವರ್ಣನೆಯಿದೆ. 1965ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಭಯಾನಕ ಯುದ್ಧದ ಕಥನವಿದೆ. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿ ತೆಗೆದುಕೊಂಡ ದಿಟ್ಟ ನಿರ್ಧಾರಗಳ ವಿವರಣೆ ಇದೆ. ಶಾಂತಿದೂತನಂತೆ ತಾಷ್ಕೆಂಟಿಗೆ ತೆರಳಿ ಹೆಣವಾಗಿ ಭಾರತಕ್ಕೆ ಮರಳಿದ ಕಣ್ಣೀರ ಕಥೆಯಿದೆ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದ ಪ್ರಧಾನಮಂತ್ರಿ ದೂರದ ದೇಶಕ್ಕೆ ಹೋದಾಗ ಅಲ್ಲಿ ಅವರಿಗೆ ಕನಿಷ್ಟ ಸೌಕರ್ಯಗಳಾಗಲಿ ಕನಿಷ್ಟ ಭದ್ರತೆಯನ್ನಾಗಲಿ ನೀಡದೆ ಬೇಜವಾಬ್ದಾರಿತನ ಮೆರೆದ ಭಾರತ ಸರ್ಕಾರ ಮತ್ತು ಅಲ್ಲಿನ ಮಂತ್ರಿಗಳ ಬಗ್ಗೆ ಆಕ್ರೋಶವಿದೆ. ಸ್ವಾರ್ಥ, ದುರಾಸೆ ಮತ್ತು ಅಧಿಕಾರ ದಾಹದಿಂದ ದೇಶದ ಹಿತಾಸಕ್ತಿಯನ್ನೆ ಬಲಿಕೊಟ್ಟ ನಮ್ಮ ನಾಯಕರ ಅಸಲಿ ಮುಖ ಅನಾವರಣಗೊಂಡಿದೆ. ಶಾಸ್ತ್ರೀಜಿಯರ ಸಾವಿನ ಸುತ್ತ ಹೆಣೆದುಕೊಂಡ ಅನುಮಾನದ ವಿಶ್ಲೇಷಣೆಯಿದೆ.
ಅದೇನೇ ಇರಲಿ ಶಾಸ್ತ್ರೀಜಿಯವರಿಗೆ ಇಂತಹ ಸಾವು ಬರಬಾರದಿತ್ತು. ಅವರು ಇನ್ನಷ್ಟು ವರ್ಷ ಬದುಕಿದ್ದರೆ ನಮ್ಮ ದೇಶದ ಕತೆಯೇ ಬೇರೆಯಾಗಿರುತ್ತಿತ್ತು. ಆದರೆ ಒಂದಂತೂ ಸತ್ಯ. ಶತ ಶತಮಾನಗಳು ಕಳೆದರೂ ಶಾಸ್ತ್ರೀಜಿಯವರ ನೆನಪು ಮಾತ್ರ ಭಾರತೀಯರ ಹೃದಯದಲ್ಲಿ ಸದಾ ಜೀವಂತವಾಗಿರುತ್ತದೆ.

ತಾಷ್ಕೆಂಟ್ ಡೈರಿ‘ ಲೇಖಕರು: ಎಸ್.ಉಮೇಶ್, ಮೈಸೂರು 9742281766

ನಿಜಕ್ಕೂ ಅಂದು ಏನಾಯಿತು?
ಇದಿಷ್ಟೂ ಸರ್ಕಾರಿ ಕಡತಗಳಲ್ಲಿ ಶಾಸ್ತ್ರೀಜಿಯವರ ಅಂತಿಮ ಕ್ಷಣಗಳ ಬಗ್ಗೆ ದಾಖಲಾಗಿರುವ ವಿವರಗಳು. ಆದರೆ ನಿಜಕ್ಕೂ ಅಂದು ರಾತ್ರಿ ಏನಾಯಿತು. ಶಾಸ್ತ್ರೀಜಿಯವರು ಹಾಗೆ ಹಠಾತ್ತನೆ ಕುಸಿದು ಬೀಳಲು ಕಾರಣವೇನು. ಉಹೂಂ! ಆ ಎಲ್ಲವೂ ನಿಗೂಢ. ಅಷ್ಟಕ್ಕೂ ಈ ಅಜಾತಶತ್ರು ಇನ್ನಷ್ಟು ವರ್ಷ ಬದುಕಿದ್ದಿದ್ದರೆ ದೇಶದ ಭವಿಷ್ಯವನ್ನೇ ಬದಲಿಸಿಬಿಡುತ್ತಿದ್ದರು. ಅಂತಹ ವ್ಯಕ್ತಿಯ ಸಾವಿನಿಂದ ಲಾಭವಾದದ್ದು ಯಾರಿಗೆ? ಅತ್ಯಂತ ಗಹನವಾದ ಈ ಪ್ರಶ್ನೆಗೆ ಈವರೆಗೆ ಯಾರಿಂದಲೂ ಉತ್ತರಿಸಲು ಸಾಧ್ಯವಾಗಿಲ್ಲ. ಆದರೆ ಈ ಬಗ್ಗೆ ಸಾಲು ಸಾಲು ಅನುಮಾನಗಳು ಮತ್ತು ಸಿದ್ದಾಂತಗಳು ಹುಟ್ಟಿಕೊಂಡಿವೆ. ಶಾಸ್ತ್ರೀಜಿಯವರ ಸಾವನ್ನು ಭಿನ್ನ ದೃಷ್ಟಿಕೋನಗಳಲ್ಲಿ ನೋಡಿದಾಗ ಅನೇಕರ ಮೇಲೆ ಅನುಮಾನ ಮೂಡುತ್ತದೆ. ಅಂತರಾಷ್ಟ್ರೀಯ ಕೈವಾಡವಿರುವ ಬಗ್ಗೆ ಶಂಕೆ ಮೂಡುತ್ತದೆ.
ಶಾಸ್ತ್ರೀಜಿಯವರು ತಾಷ್ಕೆಂಟಿಗೆ ಹೋದಾಗ ಸರಿಯಾದ ರಕ್ಷಣೆ ಇರಲಿಲ್ಲ, ಉಳಿದುಕೊಂಡಿದ್ದ ಕೋಣೆಯಲ್ಲಿ ಟೆಲಿಫೋನ್‍ಗಳು, ಬಝóರ್‍ಗಳು ಮತ್ತು ಟೆಲಿಪ್ರಿಂಟರ್‍ಗಳು ಇರಲಿಲ್ಲ, ಸರಿಯಾದ ವೈದ್ಯಕೀಯ ಸೇವೆ ಇರಲಿಲ್ಲ. ಅವರ ಭದ್ರತೆಯ ವಿಚಾರದಲ್ಲಿ ಸರ್ಕಾರ ರಾಜಿಮಾಡಿಕೊಂಡಿತ್ತು. ಇನ್ನು ರಷ್ಯಾದ ಬಾಣಸಿಗರು ಶಾಸ್ತ್ರೀಜಿಯವರಿಗೆ ವಿಷಹಾಕಿರಬಹುದು ಎಂಬ ಅನುಮಾನವಿತ್ತು. ಆದರೆ ಭಾರತ ಸರ್ಕಾರ ಆ ಬಗ್ಗೆ ತನಿಖೆಯನ್ನೇ ಮಾಡಲಿಲ್ಲ. ದೇಶದ ಪ್ರಧಾನಿಯೊಬ್ಬರು ಹೊರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದರೂ ಭಾರತ ಸರ್ಕಾರ ಮರಣೋತ್ತರ ಪರೀಕ್ಷೆಯನ್ನೂ ಮಾಡಲಿಲ್ಲ. ಅಷ್ಟೇ ಅಲ್ಲ ಶಾಸ್ತ್ರೀಜಿಯವರ ದೇಹ ಭಾರತಕ್ಕೆ ಬಂದಾಗ ಅದು ನೀಲಿಬಣ್ಣಕ್ಕೆ ತಿರುಗಿತ್ತು. ದೇಹದಲ್ಲಿ ಗಾಯದ ಗುರುತುಗಳಿತ್ತು. ಶಾಸ್ತ್ರೀಜಿಯವರ ನಿತ್ಯ ಬರೆಯುತ್ತಿದ್ದ ಕೆಂಪು ಡೈರಿ ಕಾಣೆಯಾಗಿತ್ತು. ಶಾಸ್ತ್ರೀಜಿಯವರ ಮರಣ ಪತ್ರದ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ತುಂಬ ಆಶ್ಚರ್ಯಕರ ವಿಚಾರವೆಂದರೆ ಸತ್ಯವನ್ನು ಹೊರಗೆಳೆಯುವ ಎಲ್ಲ ಅವಕಾಶಗಳನ್ನೂ ಆಗಿನ ಕೇಂದ್ರ ಸರ್ಕಾರ ಕೈಚೆಲ್ಲಿಬಿಟ್ಟಿತು. ರಾಜನಾರಾಯಣ್ ಸಮಿತಿ ನಡೆಸಿದ ತನಿಖೆಯ ವರದಿಯನ್ನೇ ಇಲ್ಲವಾಗಿಸಿಬಿಟ್ಟಿತು. ಶಾಸ್ತ್ರೀಜಿಯವರ ಸಾವಿನಲ್ಲಿ ಅಂತರಾಷ್ಟ್ರೀಯ ಪಿತೂರಿಯನ್ನು ತಳ್ಳಿಹಾಕುವಂತಿರಲಿಲ್ಲ. ಅಮೆರಿಕ ಮತ್ತು ರಷ್ಯಾದ ಕೈವಾಡವಿತ್ತು ಎಂದು ಅನೇಕರು ಆ ಕಾಲದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಪೂರಕವಾದ ಒಂದಷ್ಟು ದಾಖಲೆಗಳೂ ಸಾರ್ವಜನಿಕರ ಕೈಸೇರಿತ್ತು.
ಒಟ್ಟಾರೆ ಈ ಎಲ್ಲ ಸಂಗತಿಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ನಿರ್ಧರಿಸುವುದು ಯಾರಿಂದಲೂ ಸಾಧ್ಯವಾಗಿಲ್ಲ. ಹಾಗಾಗಿಯೇ ಶಾಸ್ತ್ರೀಜಿಯವರ ಸಾವು ಭಾರತೀಯ ಇತಿಹಾಸದಲ್ಲಿ ಇಂದಿಗೂ ನಿಗೂಢವಾಗಿಯೇ ಉಳಿದುಬಿಟ್ಟಿದೆ. ಶಾಸ್ತ್ರೀಜಿಯವರ ಆತ್ಮ ಕಳೆದ ಐದು ದಶಕಗಳಿಂದ ನ್ಯಾಯಕ್ಕಾಗಿ ಹಾತೊರೆಯುತ್ತಿದೆ. ಅವರು ಮರಣ ಹೊಂದಿದ ದಿನ ಧರಿಸಿದ್ದ ರಕ್ತ ಸಿಕ್ತ ಬಟ್ಟೆಗಳು ಈಗಲೂ ಅವರ ಮನೆಯಲ್ಲೇ ಇದೆ. ಪ್ರಧಾನಿಗಳು ಹೃದಯಾಘಾತದಿಂದ ಮೃತಪಟ್ಟಿದ್ದರೆ ಅವರ ಬಟ್ಟೆಗಳಲ್ಲೇಕೆ ರಕ್ತದ ಕಲೆಗಳಿವೆ ಎಂದು ಅವರ ಕುಟುಂಬ ಕೇಳುತ್ತಿದೆ. ಈ ಕ್ಷಣದವರೆಗೂ ಸರ್ಕಾರ ಶಾಸ್ತ್ರೀಜಿಯವರ ಮರಣ ಪತ್ರವನ್ನು ಅವರ ಕುಟುಂಬಕ್ಕೆ ತಲುಪಿಸಿಲ್ಲ. ಶಾಸ್ತ್ರೀಜಿಯವರ ಇಬ್ಬರು ಮಕ್ಕಳು ಎಂದಾದರೂ ಒಂದು ದಿನ ತಮ್ಮ ತಂದೆಯ ಸಾವಿನ ರಹಸ್ಯ ಬಹಿರಂಗಗೊಳ್ಳುತ್ತದೆ ಎಂಬ ಭರವಸೆಯಲ್ಲೇ ಇದ್ದಾರೆ. ತಮ್ಮ ತಂದೆಯ ಸಾವಿನ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಎಲ್ಲ ದಾಖಲೆಗಳನ್ನೂ ಬಹಿರಂಗಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಅದ್ಯಾವುದೂ ಈವರೆಗೆ ಸಾಧ್ಯವಾಗಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ನೇತಾಜಿಯವರ ಕುರಿತು ಬಿಡುಗಡೆ ಮಾಡಿದ ದಾಖಲೆಗಳಂತೆ ಶಾಸ್ತ್ರೀಜಿ ಸಾವಿನ ಕುರಿತ ಅಳಿದುಳಿದ ದಾಖಲೆಗಳನ್ನಾದರೂ ಬಿಡುಗಡೆ ಮಾಡಲಿ. ಆಗಲಾದರೂ ಭಾರತೀಯರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಒಂದಷ್ಟು ಅನುಮಾನಗಳು ದೂರವಾದೀತು.

ಲೇಖಕರು: ಎಸ್.ಉಮೇಶ್, ಮೈಸೂರು


ರಾಮರಾಜ್ಯದಲ್ಲಿ ಅಸ್ಪೃಶ್ಯತೆ ಸಲ್ಲದು : ಶ್ರೀ ಮ ವೆಂಕಟರಾಮು

$
0
0

ರಾಮರಾಜ್ಯದಲ್ಲಿ ಅಸ್ಪೃಶ್ಯತೆ ಸಲ್ಲದು :
ಲೇಖಕರು : ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ

ಭಾರತದ ಸ್ವಾತಂತ್ರ್ಯ ಆಂದೋಲನ ಕೇವಲ ಬ್ರಿಟಿಷರಿಂದ ಮುಕ್ತಿ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಭಾರತದ ಮಾನವೀಯ ವಿಕಾಸಕ್ಕೆ ಒತ್ತು ನೀಡಿತ್ತು. ಗಾಂಧೀಜಿಯವರ ಕನಸಿನಲ್ಲಿ ರಾಮರಾಜ್ಯವಿತ್ತು. ಅದಕ್ಕಾಗಿ ಇಡೀ ಭಾರತದ ಜನಮಾನಸವನ್ನು ಸಿದ್ಧಗೊಳಿಸಬೇಕಿತ್ತು. ಮರ್ಯಾದಾಪುರುಷೋತ್ತಮ ಶ್ರೀರಾಮ ಬೆಸ್ತರ ಮುಖಂಡನಾದ ಗುಹನಿಗೆ ಆಪ್ತನಾದವನು ಪಕ್ಷಿ ಪ್ರಮುಖನಾದ ಜಟಾಯುವಿಗೆ ಸಂಸ್ಕಾರ ಕರ್ಮವನ್ನು ಮಾಡಿದವನು, ಶಬರಿ ತಾನು ಕಚ್ಚಿ ನೋಡಿ ಸಿಹಿಯಾದ ಹಣ್ಣುಗಳನ್ನು ಆಯ್ದುಕೊಟ್ಟಾಗ ಆ ಹಣ್ಣುಗಳನ್ನು ತಿಂದವನು. ಕಪಿರಾಜನಾದ ಸುಗ್ರೀವನಲ್ಲಿ ಸ್ನೇಹವನ್ನು ಬೆಳೆಸಿದವನು, ರಕ್ಕಸರ ಅರಸನಾದ ವಿಭೀಷಣನೂ ರಾಮನಿಗೆ ಪ್ರೀತಿಪಾತ್ರನಾದವನು. ರಾಮನಿಗೆ ನಗರ ಗ್ರಾಮ ಅರಣ್ಯ ಎಲ್ಲೂ ಭೇದ ಕಾಣಲಿಲ್ಲ. ಬಡತನ ಸಿರಿತನಗಳು ಮಾನವೀಯ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ. ಹಾಗೇ ಮನುಷ್ಯರ ನಡುವೆ ಭೇದವಿಲ್ಲದ ಭಾರತವನ್ನು ನಿರ್ಮಿಸುವ ಹಂಬಲ ಗಾಂಧೀಜಿಯವರದಾಗಿತ್ತು.

Mahatma Gandhi

ನಮ್ಮ ದೇಶದಲ್ಲಿ ವ್ಯಾಪಕವಾಗಿ ಪ್ರಚಲಿತವಿದ್ದ ಅಸ್ಪೃಷ್ಯತೆ ಅತ್ಯಂತ ಅಮಾನವೀಯ ಮತ್ತು ಅನಿಷ್ಟದ ರೂಢಿ. ಅದನ್ನು ತೊಡೆದುಹಾಕಿದಲ್ಲದೇ ಮಾನವೀಯ ಭಾರತದ ನಿರ್ಮಾಣ ಸಾಧ್ಯವಿಲ್ಲ ಎಂಬ ದೃಢವಾದ ಚಿಂತನೆ ಗಾಂಧೀಜಿಯವರದ್ದು. ಒಂದು ಹಂತದಲ್ಲಿ ಸ್ವಾತಂತ್ರ್ಯಾಂದೋಲನಕ್ಕಿಂತ ಅಸ್ಪೃಷ್ಯತೆಯ ನಿವಾರಣೆ ಮುಖ್ಯ ಎಂದೆನಿಸಿತ್ತು ಮಹಾತ್ಮ ಅವರಿಗೆ. ಒಂದಿಷ್ಟು ಕಾಲ ರಾಜಕೀಯ ಚಟುವಟಿಕೆಗಳನ್ನು ಗೌಣವಾಗಿಸಿ ಉಪೇಕ್ಷಿತ ಬಂಧುಗಳಲ್ಲಿ ಆತ್ಮವಿಶ್ವಾಸ ತುಂಬುವ ಉಳಿದವರಲ್ಲಿರುವ ಶ್ರೇಷ್ಠತೆಯ ವ್ಯಸನವನ್ನು ಅಳಿಸುವ ಕಾರ್ಯದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು.

೧೯೩೩ರ ನವೆಂಬರ್‌ನಿಂದ ೧೯೩೪ರ ಆಗಸ್ಟ್ ತಿಂಗಳವರೆಗೆ ಆಸ್ಪೃಷ್ಯತೆಯ ನಿವಾರಣೆ ಜಾಗೃತಿಗಾಗಿಯೇ ಭಾರತ ಯಾತ್ರೆ ಕೈಗೊಂಡರು. ಹನ್ನೆರಡು ಸಾವಿರದ ಐನೂರು ಮೈಲಿಗಳ ಉದ್ದಕ್ಕೂ ಯಾತ್ರೆ ಮಾಡಿದರು. ಅವರ ಯಾತ್ರೆಯನ್ನು ಬಹುಮಟ್ಟಿಗೆ ಎಲ್ಲರೂ ಸ್ವಾಗತಿಸಿದರು. ಕೆಲವರು ಮನಸ್ಸು ಸಣ್ಣದಾಗಿಸಿಕೊಂಡರು. ಪುಣೆಯಲ್ಲಿ ಅವರ ಯಾತ್ರೆಯ ಮೇಲೆ ಬಾಂಬೊಂದನ್ನು ಎಸೆಯಲಾಯಿತು. ದೈವವಾಶಾತ್ ಮಾಹಾತ್ಮಾಜೀಯವರಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಆಗ ಗಾಂಧಿಜೀ ಹೇಳಿದರು, "ಮಾನವ ಜಗತ್ತಿಗೆ ಹೇಳಬೇಕಾದ ಸಮಾನತೆಯ ಸತ್ಯವನ್ನು ಉಚ್ಚ ಸ್ವರದಲ್ಲಿ ಹೇಳುವುದು ನನ್ನ ಆದ್ಯ ಕರ್ತವ್ಯ. ಇದಕ್ಕಾಗಿ ಜೀವ ತೆರಬೇಕಾಗಿ ಬಂದರೆ ಅದಕ್ಕೂ ಸಿದ್ಧನಿದ್ದೇನೆ."

ಭಾರತದಲ್ಲಿ ವರ್ಣಾಶ್ರಮ ಪದ್ಧತಿ ಜಾರಿಯಲ್ಲಿದ್ದರೂ ಅಸ್ಪೃಷ್ಯತೆ ಅಷ್ಟು ಹಿಂದಿನದಲ್ಲ. ಭಾರತೀಯ ಇತಿಹಾಸವನ್ನು ಗಮನಿಸಿದರೆ ಎಲ್ಲ ವರ್ಣದವರಿಗೂ ಶಿಕ್ಷಣ ಸಿಗುತ್ತಿತ್ತು. ಶೂದ್ರವರ್ಗದಿಂದ ಬಂದ ಅನೇಕರು ಆಳರಸರಾಗಿದ್ದರು ಎನ್ನುವುದು ತಿಳಿಯುತ್ತದೆ. ಮತಾಂಧರ ಆಕ್ರಮಣ, ಶ್ರೇಷ್ಟತೆಯ ಅತಿವ್ಯಸನಿಗಳಾದ ಪಾಶ್ಚಾತ್ಯ ಪ್ರಭುಗಳ ಆಡಳಿತದಲ್ಲಿ ಭಾರತದ ಸಂಪತ್ತಿನ ಸೂರೆ ಮುಂದುವರಿದಂತೆ ಅನೇಕ ರೀತಿಯ ಅನಿಷ್ಟಗಳು ತಲೆದೋರಿದವು. ನಾರಾಯಣ ಗುರುಗಳು, ವಿವೇಕಾನಂದರು, ಶ್ರದ್ಧಾನಂದರು ಇನ್ನೂ ಅನೇಕ ಸಂತರು ಇದರ ವಿರುದ್ಧ ದನಿಯೆತ್ತಿದರು. ಮಹಾತ್ಮಾ ಗಾಂಧೀಜಿಯವರು ಅದಕ್ಕೆ ರಾಜಕೀಯ ಇಚ್ಚಾಶಕ್ತಿಯನ್ನು ತುಂಬಿದರು, ನೈತಿಕ ಒತ್ತಡವನ್ನು ಹಾಕಿದರು. ಸ್ವತಂತ್ರ ಭಾರತದಲ್ಲಿ ಅಸ್ಪೃಷ್ಯತೆಯ ವಿರುದ್ಧ ಕಾನೂನು ಮಾಡಿದೆವು.

ಆದರೂ ನಮ್ಮ ಮನಸ್ಸಿನ ಸಣ್ಣತನ ಪೂರ್ಣ ಅಳಿದಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿಲ್ಲ. ಗಾಂಧೀಜಿಯವರಿನ ಕನಸಿನ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಮರ್ಯಾದೆಯುತ ಬದುಕು ಸಿಗಬೇಕು. ನಮ್ಮ ಬದುಕಿಗೊಂದು ಘನತೆ ಪ್ರಾಪ್ತವಾಗುವುದು ದೇವಸೃಷ್ಟಿಯ ಎಲ್ಲರನ್ನೂ ಗೌರವಿಸುವ ಭಾವ ಬೆಳೆದಾಗ. ಮನೆಯ ನಾಯಿ ಬೆಕ್ಕುಗಳನ್ನು ಮಡಿಲಲ್ಲಿಟ್ಟು ಮುದ್ದಿಸುವ ನಮಗೆ ಮನುಷ್ಯರು ಅಸ್ಪೃಷ್ಯರಾಗುವುದು ಅಕ್ಷಮ್ಯ ಅಪರಾಧ. ನಮ್ಮೆಲ್ಲ ಮಂದಿರಗಳು, ಕೆರೆಬಾವಿಗಳು, ಸಾರ್ವಜನಿಕ ಸ್ಥಳಗಳು ಎಲ್ಲ ಸಾರ್ವಜನಿಕರಿಗೂ ಮುಕ್ತವಾಗುವವರೆಗೂ ಇಡೀ ಹಿಂದೂ ಸಮಾಜ ಸಮಾನತೆಯನ್ನು ಆಚರಿಸುವವರೆಗೂ ಗಾಂಧೀಜಿಯವರ ಆತ್ಮಕ್ಕೆ ಮುಕ್ತಿ ಇಲ್ಲ, ನಮ್ಮ ಬದುಕಿಗೂ ಘನತೆ ಬರುವುದಿಲ್ಲ.

Ma Venkataramu, Pranth Sanghachalak, RSS Karnataka Dakshin

(ಲೇಖಕರು : ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ)

ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರ ‘ಹಿನ್ನೋಟ ಮುನ್ನೋಟ’ ಪುಸ್ತಕ ಲೋಕಾರ್ಪಣೆ

$
0
0

ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರ ‘ಹಿನ್ನೋಟ ಮುನ್ನೋಟ’ ಪುಸ್ತಕ ಲೋಕಾರ್ಪಣೆ


ಹುಬ್ಬಳ್ಳಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇವರುಗಳ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಡಿ ಶುಕ್ರವಾರ ಹುಬ್ಬಳ್ಳಿಯ ಆರ್‍ಎಸ್‍ಎಸ್ ನ ಕೇಶವಕುಂಜದಲ್ಲಿ ಹಮ್ಮಿಕೊಂಡಿದ್ದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣನವರಿಂದ ರಚಿತವಾದ ಸ್ವಾತಂತ್ರ ಹೋರಾಟ ‘ಹಿನ್ನೋಟ ಮುನ್ನೋಟ’ ಪುಸ್ತಕದ ಬಿಡುಗಡೆ ಸಮಾರಂಭ ನೆರವೇರಿತು.

ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರ ‘ಹಿನ್ನೋಟ ಮುನ್ನೋಟ’ ಪುಸ್ತಕ ಲೋಕಾರ್ಪಣೆ


ಜೆಎನ್‍ಯು ವಿಶ್ವವಿದ್ಯಾಲಯ ನವದೆಹಲಿಯ ಪ್ರಾಧ್ಯಾಪಕರಾದ ಡಾ. ವಿಶ್ವನಾಥ ಸ್ವತಂತ್ರ ಹೋರಾಟ ‘ಹಿನ್ನೋಟ ಮುನ್ನೋಟ’ ಪುಸ್ತಕದ ಪ್ರಮುಖ ಅಂಶಗಳ ಪರಿಚಯ ಮಾಡಿದರು. ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಅನೀಲಕುಮಾರ ಚೌಗಲಾ ಪುಸ್ತಕ ಬಿಡುಗಡೆ ಮಾಡಿ ಮುಂದುವರೆದು ಮಾತನಾಡಿ, ದೇಶಭಕ್ತಿ ಅನ್ನುವುದು ಪ್ರಕಟಿತವಾಗಬೇಕಾದರೆ ಜೀಜಾಬಾಯಿ ಶಿವಾಜಿಗೆ ಶಿಕ್ಷಣ ನೀಡಿದಂತೆ ಶಾಲೆಗಳಲ್ಲಿ ಮಕ್ಕಳಿಗೆ ದೇಶಭಕ್ತಿ ಪ್ರಕಟಿತವಾಗಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹಾಪುರುಷರ ವಿಷಯವಸ್ತು ಈಗಿನ ಮಕ್ಕಳ ಪಠ್ಯಕ್ರಮದಲ್ಲಿ ಬರುವಂತೆ ಸರ್ಕಾರ ಗಮನಹರಿಸಬೇಕು ಮತ್ತು ಸು. ರಾಮಣ್ಣರವರು 80ನೇ ವಯಸ್ಸಿನಲ್ಲಿ ಬರೆದ ಈ ಪುಸ್ತಕ ಹೊರತರುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎಂದು, ರಾಷ್ಟ್ರ ರಾಷ್ಟ್ರೀಯತೆ, ದೇಶಭಕ್ತಿ ಸ್ವಾತಂತ್ರದ ಕುರಿತು ಹಲವಾರು ವಿಚಾರ ತಿಳಿಸಿದರು.


ಆರೆಸ್ಸೆಸ್ ನ ಜೇಷ್ಠ ಪ್ರಚಾರಕ ಸು. ರಾಮಣ್ಣ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಪುಸ್ತಕ ರಚನೆಯ ಹಿನ್ನಲೆಯನ್ನು ವಿವರಿಸುತ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಅಗಣಿತ ಹೋರಾಟಗಾರರು ಜೀವ ತೆತ್ತಿರುವ ಬೆಲೆಯನ್ನ ತಿಳಿಯಬೇಕು ಎಂದು ಹೇಳಿದರು.


ಸ್ವಾತಂತ್ರ ಹೋರಾಟಗಾರರ ಜೀವನ ಪರಿಚಯವಾದಾಗ ಮಾತ್ರ ರಾಷ್ಟ್ರವನ್ನು ಉಳಿಸಿ ಬೆಳೆಸುವ ಗಂಭೀರತೆ ಮತ್ತು ಪ್ರೇರಣೆ ಹೊಸ ಪೀಳಿಗೆಗೆ ದೊರೆಯುತ್ತದೆ ಎಂದು ಹೇಳಿದರು. ನಾವೆಲ್ಲಾ ಹಕ್ಕುಗಳಿಗಾಗಿ ಹೋರಾಡುವವರಾಗಿದ್ದೇವೆಯೇ ಹೊರತು ಕರ್ತವ್ಯಗಳನ್ನು ಮರೆತಿದ್ದೇವೆ, ಕರ್ತವ್ಯ ಮತ್ತು ಧನ್ಯತೆ ನಮ್ಮ ಜೀವನದ ಅವಿಭಾಜ್ಯ ಅಂಗವಾದಾಗ ಮಾತ್ರ ರಾಷ್ಟ್ರ ಮುನ್ನಡೆಯಲು ಸಾಧ್ಯ ಎಂದು ಹೇಳಿದರು.
ಆರ್‍ಎಸ್‍ಎಸ್ ನ ಪ್ರಾಂತ ಪ್ರಚಾರಕ ಸುಧಾಕರ, ಆರ್‍ಎಸ್‍ಎಸ್ ನ ಸಹ ಪ್ರಾಂತ ಪ್ರಚಾರಕ ನರೇಂದ್ರ, ಗೋವರ್ಧನರಾವ್, ಶ್ರೀ ಸತೀಶ ಮುರೂರ, ಕೆಆರ್‍ಎಂಎಸ್‍ಎಸ್ ನ ರಾಜ್ಯಾಧ್ಯಕ್ಷರಾದ ಸಂದೀಪ ಬೂದಿಹಾಳ ಉಪಸ್ಥಿತರಿದ್ದರು.


ಪುಸ್ತಕ ಬಿಡುಗಡೆಯ ಆನ್‍ಲೈನ್ ಲೈವ್ ಕಾರ್ಯಕ್ರಮದಲ್ಲಿ ಎಬಿಆರ್‍ಎಸ್‍ಎಂ ನ ಸಂರಕ್ಷಕರಾದ ಕೃ. ನರಹರಿಯವರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ಶಿವಾನಂದ ಶಿಂಧನಕೆರಾ, ಎಚ್ ನಾಗಭೂಷಣ್ ರಾವ್, ಕೆ. ಬಾಲಕೃಷ್ಣ ಭಟ್, ಅರುಣ ಶಹಾಪೂರ, ಚಿದಾನಂದ ಪಾಟೀಲ, ಗಂಗಾಧಾರಾಚಾರಿ, ಶ್ರೀಮತಿ ಮಮತಾ ಡಿ.ಕೆ, ಶ್ರೀಮತಿ ಸೀತಾ ಲಕ್ಷ್ಮೀ ಅಮ್ಮನವರು ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪದಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯದಿಂದ ಎಲ್ಲಾ ಜಿಲ್ಲೆಗಳ ಶಿಕ್ಷಕ ಬಂಧುಗಳು ಪುಸ್ತಕ ಬಿಡುಗಡೆ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಕಾರ್ಯಕ್ರಮದಲ್ಲಿ ಶ್ರೀಮತಿ ಅನುಸೂಯಾ ಸಜ್ಜನಶೆಟ್ಟರ ಮತ್ತು ಶ್ರೀಮತಿ ಜ್ಯೋತಿ ಕದಮ ಸರಸ್ವತಿ ವಂದನೆ ಮಾಡಿದರು, ಶ್ರೀ ಸೋಮಶೇಖರ ಒಣರೊಟ್ಟಿ ದೇಶಭಕ್ತಿಗೀತೆ ಹೇಳಿದರು, ಶ್ರೀಧರ ಪಾಟೀಲ ಕುಲಕರ್ಣಿ ಸ್ವಾಗತ ಮತ್ತು ಪರಿಚಯ ಮಾಡಿದರು. ಶಿವಾನಂದ ನಾಗೂರ ವಂದಿಸಿದರು. ಡಾ. ರಾಜಕುಮಾರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

Political Intolerance and untouchability impairs greater Inclusion : Dr. Manmohan Vaidya, Sah Sarkaryavah, RSS

$
0
0

Political Intolerance and untouchability impairs greater Inclusion : Dr. Manmohan Vaidya, Sah Sarkaryavah, RSS

A bright star has disappeared from the political landscape of Bharat. The demise of former president Dr. Pranab Mukherjee is a huge loss for Bharatiya politics. Openly mingling with all, even with people having contrarian ideologies, while remaining true to one’s own ideology is a nearly extinct practice now. Discussing, debating and deliberating diverse thought processes was the norm in Bharatiya society. Indian National Congress of the pre-independence era was a palette of varied political hues that amalgamated to renew the vigour of the independence movement of our country. Communism-bred political intolerance and ideological untouchability is the new norm that became palpable in the recent past. Let alone the freedom of expression, the deadly combination of communist philosophy and terror deny even the right to exist to those who differ with their views, all over the world.

When late Pranab da consented to grace an RSS event he faced a huge backlash. Many forces schemed to prevent him from addressing a Sangh gathering. Petty politics of pitting his own daughter against her father through a public opposition was orchestrated. Pranab da was a sincere and seasoned statesman. At that stage of his political career, he had not set out to join the RSS by addressing its members. In fact, he was there to share his well-thought out political philosophy with swayamsevaks and other countrymen. His close allies and his well-wishers should’ve known better and trusted him as he was there to represent their ideology (read core Congress-ideology) for a brand new audience. Sadly, that didn’t happen,

RSS Sarasanghachalak Dr. Mohan Bhagwat and Former President of India Dr. Pranab Mukherjee

Sangh’s third Sarsangahchalak Shri Rajju Bhaiya ji who hailed from Prayagraj(U.P.) shared a long-standing, intimate bond with Lal Bahadur Shastri ji. Once during Shastri ji’s active years in Uttar Pradesh politics, a tea-gathering was organised for few dignitaries in the presence of the then Sarsanghachalak Shri Guruji. Rajju Bhaiya had also invited Shastri ji to that event, he, however, declined by citing fear of garnering bizarre speculations from party members if spotted there. Dismayed by this response Rajju Bhaiya asked, “Shastri ji who will ever doubt a leader of your stature?” Shastri ji answered, “Oh, you don’t understand politics.” Shri. Rajju Bhaiya ji told him “That is not the case with RSS. If one Swayamsevak sees me talking to you (a Congress leader) he will assume Rajju Bhaiya must be explaining Sangh to Shastri ji.”

This is natural. Leaders of an organisation deserve trust. In order to create a social atmosphere conducive for democracy, sincere efforts to comprehend the thoughts and perspectives of others while staying committed to one’s own belief system are essential.

The political arena of Bharat is progressively bulging with new politicians each day, but the number of politicians that engage in sincere nation-building politics is limited. Politics that deemed national interest paramount have been pushed at the back and instead politics based on parties, one community or caste, region and language, even one family have hogged the centre stage. The gospel of a single family possessing a rare leadership potion that mystically qualifies all its members, generation after generation, as national leaders have eluded me for a long time. These members on the other hand have all along carefully branded themselves as the ‘guardians of democracy’. But what is even extremely shocking is to have members of the oldest political party of the country come to be convinced of an inexperienced person’s leadership prowess to lead their organisation.

Pranab da was an icon of the league of politicians who prioritise the country’s welfare and this league is fast dwindling. This makes his demise at this turn in time doubly painful. I am told during his tenure as the finance minister he sought the counsel of adherents of diverse political ideologies with an intent to expand his knowledge about the neighbouring countries. This attitude is a prerequisite of a healthy democracy and a strong polity. Therefore Pranab da’s consent to attend the event of Sangh – an organisation that has been in existence since the pre-independence era, has embodied the values of nation-building through service, ever growing and multi-faceted in nature – exemplified his allegiance to the cause of national stewardship. It takes a certain degree of open-mindedness and strength of character to be able to grasp such intentions, which in my opinion is beyond many people’s capacity.

Shri K. M. Munshi, a cabinet minister in the Nehru-led government, painted a portrait of Sangh which is unimaginable for those who now do business in the name of politics. Such insights can only be developed by someone who is in the service of this nation and engages in nation-building politics. His ability to pierce reasons behind Sangh’s aversion from mainstream politics and its interference in matters of social welfare, despite being in midst of his active political career indicates the character and ability of the individual.He pens those interpretations in the book ‘Pilgrimage to Freedom’ –

“I attended a rally of the Rashtriya Swayamsevak Sangh which we, Congressmen, had looked upon as an ‘unseeable’ pariah. I was struck by the discipline, determination and the spirit of selflessness which characterises its members. It had no financial backing behind it and no leaders of all-India fame to give it a status, and yet it functioned efficiently on an emotional bond.


I met M. S. Golwalkar, the Guruji (second Sarsanghachalak) of the RSS. Whatever our differences in political aims and methods, I could not help admiring the dedicated life he lived, his great power of organisation and his skill in building up the RSS, at the same time resisting the temptation to throw it into the vortex of politics.” (Pilgrimage to Freedom, P.86 by K.M. Munshi)

A Marathi article commemorating Dr. Mukherjee claimed Pranab da distanced himself from the Congress party at the time when it needed him the most and shook hands with the RSS. The writer was hinting at his Sangh address. I feel pity for that writer who fails to see that Pranab da is inseparable from Congress and vice-versa. It was foul play on the party’s part to reprimand a noble statesman like him by cornering him for a tiny difference of opinion. It is this immature politics of Congress that has weakened it and if continued, will lead to decline.

Pranab da’s unrelenting critiques have misread his actions and misinterpreted his choices because the ideological heritage they have inherited has never seen the practice of decent, frank discussions with one’s opponents. Hunting elephants is commonplace for lion prides but the fox clan cannot even imagine doing that. This may well be understood through this fable-

Once upon a time unable to find prey a lion brings home a fox kit one day. Overcome by her maternal instinct the lioness refuses to eat the kit. Both the parents decide to raise him alongside their new-born cubs. Later, one day, the cubs and the kit while playing in the forest, run into an elephant. Following their natural instinct, the cubs leap up to disarm the elephant. However, the kit, intimidated by the size of the elephant, stops the cubs from doing so. While narrating this incident to their mother, the lioness, cubs poke fun at the kit. Taking the hint the lioness reveals his true identity to the fox kit and advises him to leave the place, for she fears once grown up the cubs would prove to be a threat to his life. She consoles him using the following words-

Shoorosi kritavidyosi darshaneeyosi putraka
Yasmin kule twamutpannah gajastatra na hanyate

शूरोसि कृतविद्योसि दर्शनीयोसि पुत्रक।
यस्मिन् कुले त्वमुत्पन्नो गजस्तत्र न हन्यते॥
Meaning: You are brave, intelligent, and handsome, my child! Just that the family you belong to, cannot kill an elephant.

No matter how many changes one goes through, there comes a time when their natural strengths and weaknesses come out! The time when the Congress must seriously rethink its values has come – whether to embrace the inclusiveness championed by Pranab da and Munshi ji or to remain shrouded in the communist dogma that promotes political untouchability.

The brand of political ethics practised by Dr. Rajendra Prasad, K. M. Munshi, Dr. Radhakrishnan, Shri Purushottam Das Tandon and Pranab da were integrative. The correct interpretation of their actions takes extraordinary curiosity and moral courage which is beyond the reach of those who engage in self-interest driven petty party-politics, communal politics, caste-based politics and dynastic politics. Instilling and emulating the values that Pranab da embodied among new generation of politicians will be the real tribute to his unmatched legacy. Pranab da is no more. Long live Pranab da. May the tribe grow and flourish

Dr. Manmohan Vaidya
Sah Sarkaryavaah
RSS

ರಾಜಕೀಯ ಅಸ್ಪೃಶ್ಯತೆಯನ್ನು ಮೀರಿದ ಒಳಗೊಳ್ಳುವಿಕೆಯನ್ನು ಅನುಸರಿಸಲು ಅಸಾಧ್ಯವೇ?

$
0
0

ರಾಜಕೀಯ ಅಸ್ಪೃಶ್ಯತೆಯನ್ನು ಮೀರಿದ ಒಳಗೊಳ್ಳುವಿಕೆಯನ್ನು ಅನುಸರಿಸಲು ಅಸಾಧ್ಯವೇ?
ಲೇಖಕರು: ಡಾ.ಮನಮೋಹನ್ ವೈದ್ಯ, ಸಹಸರಕಾರ್ಯವಾಹ, ಆರೆಸ್ಸೆಸ್.
ಅಕ್ಟೊಬರ್ ೪ ರ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ

ಭಾರತದ ರಾಜಕೀಯ ಭೂಪಟದಿಂದ ಪ್ರಖರವಾದ ತಾರೆಯೊಂದು ಕಣ್ಮರೆಯಾಗಿದೆ. ಮಾಜಿ ರಾಷ್ಟ್ರಪತಿ ಡಾ.ಪ್ರಣಬ್ ಮುಖರ್ಜಿ ಅವರನ್ನು ಕಳೆದುಕೊಂಡಿರುವ ಭಾರತೀಯ ರಾಜಕೀಯ ರಂಗ ತುಂಬ  ಬಡವಾಗಿದೆ. ತಮ್ಮ ಸೈದ್ಧಾಂತಿಕ ನಿಲುವಿಗೆ ಬದ್ಧರಾಗಿದ್ದು ಬಹಿರಂಗವಾಗಿ ವಿರೋಧಿ ತತ್ವ ಸಿದ್ಧಾಂತ ಪ್ರತಿಪಾದಿಸುವವರ ಜೊತೆ ಮುಕ್ತವಾದ ಒಡನಾಟ ಇಟ್ಟುಕೊಳ್ಳುವುದು ಈಗೆಲ್ಲಾ ನಶಿಸಿಹೋಗಿರುವ ಪದ್ಧತಿಯಾಗಿದೆ. ಹಿಂದೆಲ್ಲಾ ವಿವಿಧ ವಿಚಾರಗಳನ್ನು ಚರ್ಚಿಸುವುದು, ಪರಿಶೀಲಿಸುವುದು ಮತ್ತು ವಿಮರ್ಶಿಸಿವುದು ಭಾರತೀಯ ಸಮಾಜದ ಸಾಂಪ್ರದಾಯಿಕ ವೈಶಿಷ್ಟ್ಯವಾಗಿತ್ತು. ಸ್ವಾತಂತ್ರ್ಯ ಪೂರ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಗೆ ಹೊಸ ಚೈತನ್ಯವನ್ನು ನವೀಕರಿಸಲು ಸಂಯೋಜಿಸಲ್ಪಟ್ಟ ವೈವಿಧ್ಯಮಯ ರಾಜಕೀಯ ವರ್ಣಫಲಕವಾಗಿತ್ತು. ಇತ್ತಿಚಿನ ದಿನಗಳಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಬೆಳೆಸಿದ ರಾಜಕೀಯ ಅಸಹಿಷ್ಣುತೆ ಮತ್ತು ಸೈದ್ಧಾಂತಿಕ ಅಸ್ಪೃಶ್ಯತೆಯು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಪಕ್ಕಕ್ಕಿರಲಿ, ಕಮ್ಯುನಿಸ್ಟ್ ತತ್ವಶಾಸ್ತ್ರ ಮತ್ತು ಭಯೋತ್ಪಾದನೆಯ ವಿನಾಶಕ ಸಂಯೋಜನೆ ಪ್ರಪಂಚದಾದ್ಯಂತ ತಮ್ಮ ಅಭಿಪ್ರಾಯಗಳೊಂದಿಗೆ ಭಿನ್ನವಾಗಿರುವವರ ಅಸ್ತಿತ್ವದ ಹಕ್ಕನ್ನು ಸಹ ನಿರಾಕರಿಸುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.

ದಿವಂಗತ ಪ್ರಣಬ್ ದಾ ಆರೆಸ್ಸೆಸ್ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಒಪ್ಪಿಗೆ ನೀಡಿದ್ದು ಭಾರಿ ವಿವಾದಕ್ಕೆ ಗ್ರಾಸವಾಗಿತ್ತು. ಸಂಘದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡದಂತೆ ತಡೆಯಲು ಪ್ರಬಲ ಪಡೆಗಳು ಹಾತೋರೆದು ಯೋಜಿಸಿದವು. ಸಾರ್ವಜನಿಕ ವಿರೋಧದ ಮೂಲಕ ಸ್ವಂತ ಮಗಳನ್ನೆ ತಂದೆಯ ವಿರುದ್ಧ ಎತ್ತಿಕಟ್ಟಿ ಸಣ್ಣತನದ ರಾಜಕೀಯ ಷಡ್ಯಂತ್ರವನ್ನು ಆ ಪಡೆಗಳು ಸೃಷ್ಟಿಸಿದ್ದವು. ಪ್ರಣಬ್ ದಾ ಒಬ್ಬ ಪ್ರಾಮಾಣಿಕ ಮತ್ತು ಅನುಭವಿ ರಾಜಕೀಯ ಮುತ್ಸದ್ಧಿ. ರಾಜಕೀಯ ಜೀವನದ ಆ ಹಂತದಲ್ಲಿದ್ದ ಅವರಿಗೆ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುವುದನ್ನು ಬಿಟ್ಟು ಆರೆಸ್ಸೆಸ್ ಸೇರ್ಪಡೆಗೊಳ್ಳವ ಇರಾದೆಯಿರಲಿಲ್ಲ. ವಾಸ್ತವದಲ್ಲಿ ತಮ್ಮಲ್ಲಿದ್ದ ಅಗಾಧ ರಾಜಕೀಯ ತತ್ವಶಾಸ್ತ್ರವನ್ನು ಸ್ವಯಂಸೇವಕರು ಮತ್ತು ಇತರ ದೇಶವಾಸಿಗಳೊಂದಿಗೆ ಹಂಚಿಕೊಳ್ಳಲು ಅಲ್ಲಿದ್ದರು. ಪ್ರಣಬ್ ದಾ ಅವರ ಆಪ್ತರು ಮತ್ತು ಹಿತೈಷಿಗಳು, ತಮ್ಮಲ್ಲಿದ್ದ ಕಾಂಗ್ರೆಸ್ ಸಿದ್ಧಾಂತವನ್ನು ಹೊಸ ಪ್ರೇಕ್ಷಕರ ಮುಂದೆ ಪ್ರತಿಪಾದಿಸಲು ಅಲ್ಲಿದ್ದರು ಎಂಬುದನ್ನು ತಿಳಿಯಲಿಲ್ಲವೆನ್ನುವುದೇ ದುರದೃಷ್ಟಕರ ಸಂಗತಿ.

RSS Sarasanghachalak Dr. Mohan Bhagwat and Former President of India Dr. Pranab Mukherjee

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಿಂದ ಬಂದ ಸಂಘದ ಮೂರನೆಯ ಸರಸಂಘಚಾಲಕರಾದ ಶ್ರೀ ರಜ್ಜು ಭಯ್ಯಾ ಜೀ ಯವರು ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರೊಂದಿಗೆ ದೀರ್ಘಕಾಲದ, ನಿಕಟ ಸಂಬಂಧವನ್ನು ಹಂಚಿಕೊಂಡಿದ್ದರು. ಉತ್ತರಪ್ರದೇಶ ರಾಜಕೀಯದಲ್ಲಿ ಶಾಸ್ತ್ರೀ ಜೀ ಸಕ್ರಿಯರಾಗಿದ್ದ ವರ್ಷಗಳಲ್ಲಿ, ಅಂದಿನ ಸರಸಂಘಚಾಲಕರಾದ ಶ್ರೀ ಗುರೂಜಿಯ ಸಮ್ಮುಖದಲ್ಲಿ ಕೆಲವು ಗಣ್ಯರಿಗೆ ಚಹಾ ಕೂಟವನ್ನು ಆಯೋಜಿಸಲಾಗಿತ್ತು. ರಜ್ಜು ಭೈಯಾ ಜೀ ಅವರು ಶಾಸ್ತ್ರಿ ಜೀ ಅವರನ್ನು ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು, ಆದರೆ ಆ ಕೂಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಗುರುತಿಸಲ್ಪಟ್ಟರೆ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ವಿನಾಕಾರಣ ಊಹಾಪೋಹಗಳನ್ನು ಎದುರಿಸುವ ಭಯದಿಂದ ಕೂಟದಲ್ಲಿ ಭಾಗವಹಿಸುವುದಕ್ಕೆ ಶಾಸ್ತ್ರೀ ಜೀ ನಿರಾಕರಿಸಿದರು. ಶಾಸ್ತ್ರೀ ಜೀಯವರ ಈ ಪ್ರತಿಕ್ರಿಯೆಯಿಂದ ನಿರಾಶೆಗೊಂಡ ರಜ್ಜು ಭಯ್ಯಾ ಜೀ, “ಶಾಸ್ತ್ರೀ ಜೀ ನಿಮ್ಮ ಸ್ಥಾನಮಾನದ ನಾಯಕನನ್ನು ಯಾರು ಅನುಮಾನಿಸುತ್ತಾರೆ?” ಎಂದು ಕೇಳಿದರು. “ಓಹ್, ನಿಮಗೆ ರಾಜಕೀಯ ಅರ್ಥವಾಗುತ್ತಿಲ್ಲ” ಎಂದು ಶಾಸ್ತ್ರೀ ಜೀ ಉತ್ತರಿಸಿದ್ದರಂತೆ. ಶ್ರೀ ರಜ್ಜು ಭಯ್ಯಾ ಜೀಯವರು “ಆರ್‌.ಎಸ್‌.ಎಸ್‌ ನ ವಿಷಯ ಹಾಗಲ್ಲ, ಒಬ್ಬ ಸ್ವಯಂಸೇವಕ ನಾನು ನಿಮ್ಮೊಂದಿಗೆ (ಕಾಂಗ್ರೆಸ್ ಮುಖಂಡ) ಮಾತನಾಡುತ್ತಿರುವುದನ್ನು ನೋಡಿದರೆ ರಜ್ಜು ಭೈಯಾ ಅವರು ಸಂಘದ ಬಗ್ಗೆ ಶಾಸ್ತ್ರೀ ಜೀಯವರಿಗೆ ವಿವರಿಸುತ್ತಿರಬೇಕು ಎಂದು ಭಾವಿಸುತ್ತಾರೆ. ” ಎಂದು ಹೇಳಿದ್ದರಂತೆ.

ಇದು ಸಹಜ. ಸಂಸ್ಥೆಯ ನಾಯಕರು ವಿಶ್ವಾಸಕ್ಕೆ ಅರ್ಹರು. ಪ್ರಜಾಪ್ರಭುತ್ವಕ್ಕೆ ಅನುಕೂಲಕರವಾದ ಸಾಮಾಜಿಕ ವಾತಾವರಣವನ್ನು ಸೃಷ್ಟಿಸಲು, ಒಬ್ಬರ ಸ್ವಂತ ನಂಬಿಕೆ ವ್ಯವಸ್ಥೆಗೆ ಬದ್ಧರಾಗಿರುವಾಗ ಇತರರ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಗ್ರಹಿಸುವ ಪ್ರಾಮಾಣಿಕ ಪ್ರಯತ್ನಗಳು ಅತ್ಯಗತ್ಯ.

ಭಾರತದ ರಾಜಕೀಯ ರಂಗವು ಪ್ರತಿದಿನ ಹೊಸ ರಾಜಕಾರಣಿಗಳೊಂದಿಗೆ ಹಂತಹಂತವಾಗಿ ಬೆಳೆಯುತ್ತಿದೆ, ಆದರೆ ಪ್ರಾಮಾಣಿಕ ರಾಷ್ಟ್ರ ನಿರ್ಮಾಣದ ರಾಜಕೀಯದಲ್ಲಿ ತೊಡಗಿರುವ ರಾಜಕಾರಣಿಗಳ ಸಂಖ್ಯೆಮಾತ್ರ ಕಡಿಮೆಯಾಗುತ್ತಿವೆ. ರಾಷ್ಟ್ರೀಯ ಹಿತಾಸಕ್ತಿ ಪರಮೋಚ್ಛ  ಎಂದು ಪರಿಗಣಿಸದೆ ರಾಜಕೀಯವನ್ನು, ಪಕ್ಷಗಳು ಒಂದು ಸಮುದಾಯ ಅಥವಾ ಜಾತಿ, ಪ್ರದೇಶ ಮತ್ತು ಭಾಷೆಯ ಆಧಾರದಲ್ಲಿ ಬಳಸಿಕೊಳ್ಳುತ್ತಿವೆ; ಒಂದು ಕುಟುಂಬವು ರಾಜಕೀಯ ಕೇಂದ್ರ ಬಿಂದುವಾಗಿರುವುದು ಉಂಟು. ರಾಷ್ಟ್ರ ಮುನ್ನಡೆಸುವ ನಾಯಕತ್ವದ ಒಂದು ಕುಟುಂಬಕ್ಕೆ ಸೀಮಿತ, ತಾವು ಸ್ವೀಕಾರಾರ್ಹರು, ಆದ್ದರಿಂದ ಒಂದರ ನಂತರ ಮತ್ತೊಂದು ತಮ್ಮದೇ ಆದ ಪೀಳಿಗೆಯ ಸದಸ್ಯರು ನಾಯಕ್ವಕ್ಕೆ ಸಮರ್ಥರು ಎಂದು ಭಾವಿಸಿರುವುದು ಧೀರ್ಘಕಾಲದಿಂದ ನನ್ನನ್ನು ಬಾಧಿಸಿದೆ. ಮತ್ತೊಂದೆಡೆ ಈ ಸದಸ್ಯರು ತಮ್ಮನ್ನು ತಾವೇ ‘ಪ್ರಜಾಪ್ರಭುತ್ವದ ರಕ್ಷಕರು’ ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಸದಸ್ಯರು ತಮ್ಮ ಸಂಘಟನೆಯನ್ನು ಮುನ್ನಡೆಸಲು ಅನುಭವಹೀನ ವ್ಯಕ್ತಿಯ ನಾಯಕತ್ವದ ಪರಿಣಿತಿಯಲ್ಲಿ ನಂಬಿಕೆ ಇಟ್ಟಂತಿದೆ.

ಪ್ರಣಬ್ ದಾ ದೇಶದ ಕಲ್ಯಾಣಕ್ಕೆ ಆದ್ಯತೆ ನೀಡುವ ರಾಜಕಾರಣಿಗಳ ತಂಡದ ಮುಂಚೂಣಿಯಲ್ಲಿದ್ದರು. ಆದರೆ ಈ ತಂಡ ವೇಗವಾಗಿ ಇಂದು ಕ್ಷೀಣಿಸುತ್ತಿದೆ. ಈ ಸಮಯದಲ್ಲಿ ಅವರ ಅನುಪಸ್ಥಿತಿ ದುಪ್ಪಟ್ಟು ನೋವಿಗೆ ಎಲ್ಲರನ್ನು ನೂಕಿದೆ. ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ನೆರೆಯ ರಾಷ್ಟ್ರಗಳ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸುವ ಉದ್ದೇಶದಿಂದ ವಿವಿಧ ರಾಜಕೀಯ ಸಿದ್ಧಾಂತಗಳ ಅನುಯಾಯಿಗಳ ಸಲಹೆಯನ್ನು ಕೋರಿದರು. ಈ ನಿಲುವು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ ಮತ್ತು ಬಲವಾದ ಸಮಾಜ ವ್ಯವಸ್ಥೆಗೆ ಪೂರಕ. ಆದ್ದರಿಂದ, ಪ್ರಣಬ್ ದಾ ಸಂಘದ ಕಾರ್ಯಕ್ರಮಕ್ಕೆ ಹಾಜರಾಗಲು ಒಪ್ಪಿಗೆ ನೀಡಿದ್ದು – ಸಂಘವು ಸ್ವಾತಂತ್ರ್ಯಪೂರ್ವದಿಂದಲೂ  ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಮೌಲ್ಯಗಳನ್ನು ಸಾಕಾರಗೊಳಿಸುತ್ತಿದೆ, ಮತ್ತಷ್ಟೂ ಬೆಳೆಯುತ್ತಿದೆ ಮತ್ತು ಬಹುಮುಖಿಯಾಗಿದೆ ಎಂಬ ಕಾರಣಗಳಿಂದಲೇ. ಇಂತಹ ಉದ್ದೇಶಗಳನ್ನು ಗ್ರಹಿಸಲು ಒಂದು ನಿರ್ದಿಷ್ಟ ಮಟ್ಟದ ಮುಕ್ತ ಮನಸ್ಸು ಮತ್ತು ಗಟ್ಟಿ ಸ್ವಭಾವ ಅಗತ್ಯ. ಈ ವಿಷಯ ನನ್ನ ಅಭಿಪ್ರಾಯದಲ್ಲಿ ಅನೇಕ ಜನರ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುವುದು.

ನೆಹರೂ ನೇತೃತ್ವದ ಸರ್ಕಾರದ ಸಂಪುಟ ಸಚಿವರಾಗಿದ್ದ ಶ್ರೀ ಕೆ. ಎಂ. ಮುನ್ಷಿಯವರು ಸಂಘದ ಕಾರ್ಯವೈಖರಿಯ ಸರಿಯಾದ ಚಿತ್ರಣವನ್ನೇ  ಬಿಡಿಸಿದ್ದರು, ಆದರೆ ರಾಜಕೀಯದ ಹೆಸರಿನಲ್ಲಿ ವ್ಯಾಪಾರ ಮಾಡುವ ಮಂದಿಗೆ ಇದನ್ನು ಊಹಿಸಲು ಅಸಾಧ್ಯ ಮತ್ತು ಸಹಿಸಲು ಆಗದು. ಈ ಸೂಕ್ಷ್ಮದೃಷ್ಟಿ ರಾಷ್ಟ್ರಸೇವೆ ಮತ್ತು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತೊಡಗಿರುವವರಿಗೆ ಮಾತ್ರ ಅನುಭವಕ್ಕೆ ಬರಲು ಸಾಧ್ಯ. ಮುಖ್ಯವಾಹಿನಿಯ ರಾಜಕಾರಣದಿಂದ ಸಂಘ ದೂರುವಿರುವುದು ಮತ್ತು ಸಾಮಾಜಿಕ ಕಲ್ಯಾಣ ವಿಷಯಗಳಲ್ಲಿ ಸಂಘದ ತೊಡಗಿಸಿಕೊಂಡಿರುವುದನ್ನು ತಮ್ಮ ಸಕ್ರಿಯ ರಾಜಕೀಯ ಜೀವನದ ಮಧ್ಯೆ ಅರಿತಿದ್ದುದು  ಅವರ ವ್ಯಕ್ತಿತ್ವ ಮತ್ತು ಸಾಮರ್ಥ್ಯವನ್ನು ಸೂಚಿಸುತ್ತದೆ. ಇದರ ಬಗೆಗಿನ ತಮ್ಮ ವ್ಯಾಖ್ಯಾನಗಳನ್ನು ‘Pilgrimage to Freedom’ ಪುಸ್ತಕದಲ್ಲಿ ದಾಖಲಿಸಿದ್ದಾರೆ:

“ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೂಟವೊಂದರಲಿ ಭಾಗವಹಿಸಿದ್ದೆ, ಕಾಂಗ್ರೆಸ್ಸಿಗರಾದ ನಾವು ಇದನ್ನು ನೋಡಲೇ ಬಾರದ ಬಹಿಷ್ಕೃತ ಕೂಟವೆಂದು ಭಾವಿಸಿದ್ದೆವು. ಸಂಘದ ಸದಸ್ಯರ ಶಿಸ್ತು, ದೃಢತೆ  ಮತ್ತು ನಿಸ್ವಾರ್ಥತೆಯನ್ನು ಕಂಡು ಅವಕ್ಕಾಗಿ ಹೋಗಿದ್ದೆ. ಸಂಘದ ಹಿಂದೆ ಯಾವುದೇ ಆರ್ಥಿಕ ಬೆಂಬಲವಿರಲಿಲ್ಲ ಮತ್ತು ಅದಕ್ಕೆ ಸ್ಥಾನಮಾನ ನೀಡಲು ಅಖಿಲ ಭಾರತ ಖ್ಯಾತಿಯ ನಾಯಕರು ಇರಲಿಲ್ಲ, ಆದರೆ ಅದು ಭಾವನಾತ್ಮಕ ಬಂಧದ ಮೇಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿತ್ತು.”

“ಆರೆಸ್ಸೆಸ್ ನ ಗುರೂಜಿ (ಎರಡನೇ ಸರಸಂಘಚಾಲಕರು) ಎಂ.ಎಸ್. ಗೋಳ್ವಾಲ್ಕರ್ ಅವರನ್ನು ಭೇಟಿಯಾದೆ. ರಾಜಕೀಯ ಉದ್ದೇಶಗಳು ಮತ್ತು ವಿಧಾನಗಳಲ್ಲಿನ ನಮ್ಮ ವ್ಯತ್ಯಾಸಗಳು ಏನೇ ಇರಲಿ, ಅವರು ಬದುಕಿದ್ದ ಸಮರ್ಪಿತ ಜೀವನ, ಅವರ ಸಂಘಟನೆಯ ದೊಡ್ಡ ಶಕ್ತಿ ಮತ್ತು ಆರೆಸ್ಸೆಸ್ ಅನ್ನು ನಿರ್ಮಿಸುವಲ್ಲಿ ಅವರ ಕೌಶಲ್ಯವನ್ನು ಬಹಳವಾಗಿ ಮೆಚ್ಚಿದ್ದೆ. ಸಂಘವನ್ನು ರಾಜಕೀಯದ ಸುಳಿಯಲ್ಲಿ ಎಸೆಯುವ ಆಮಿಷಕ್ಕೆ ನನ್ನ ವಿರೋಧವಿತ್ತು. ” (Pilgrimage to Freedom, ಕೆ.ಎಂ. ಮುನ್ಷಿ ಪುಟ.86)

ಡಾ. ಮುಖರ್ಜಿ ಅವರ ಸ್ಮರಣಾರ್ಥ ಮರಾಠಿ ಲೇಖನವೊಂದರಲ್ಲಿ ಪ್ರಣಬ್ ದಾ ಅವರು ಕಾಂಗ್ರೆಸ್ ಪಕ್ಷಕ್ಕೆ ಅವರ ಅಗತ್ಯವಿದ್ದಾಗ ಅದರಿಂದ ದೂರವಾಗಿದ್ದರು ಮತ್ತು ಆರೆಸ್ಸೆಸ್ ಜೊತೆಗೆ ಹಸ್ತಲಾಘವ ಮಾಡಿದರು ಎಂದು ಬರೆದಿದ್ದರು. ಪ್ರಣಬ್ ದಾ ಮತ್ತು ಕಾಂಗ್ರೆಸ್ ಬೇರ್ಪಡಿಸಲಾಗದ ಸಂಬಂಧವೆಂದು ಅರಿಯದ ಬರಹಗಾರನ ಬಗ್ಗೆ ನನ್ನಲ್ಲಿ ಕನಿಕರವಿದೆ. ಅವರಂತಹ ಉದಾತ್ತ ರಾಜಕಾರಣಿಯನ್ನು ಒಂದು ಸಣ್ಣ ಭಿನ್ನಾಭಿಪ್ರಾಯಕ್ಕಾಗಿ ಮೂಲೆಗುಂಪಾಗಿಸುವ ಮೂಲಕ ಪಕ್ಷ ಖಂಡಿಸಿದ್ದುದು ವಂಚನೆಯಲ್ಲದೆ ಮತ್ತೇನು? ಕಾಂಗ್ರೆಸ್ಸಿನ ಈ ಅಪಕ್ವ ರಾಜಕಾರಣವೇ ಅದನ್ನು ದುರ್ಬಲಗೊಳಿಸಿದೆ ಮತ್ತು ಮುಂದುವರಿದರೆ ಅದು ಪಕ್ಷದ ಅವನತಿಗೆ ಕಾರಣವಾಗುತ್ತದೆ.

ಪ್ರಣಬ್ ದಾ ಅವರ ಅವಿರತ ಟೀಕಾಕಾರರು ಅವರ ಕಾರ್ಯಗಳನ್ನು ತಪ್ಪಾಗಿ ಎಣಿಸಿದ್ದಾರೆ ಮತ್ತು ಅವರ ಆಯ್ಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಏಕೆಂದರೆ ಅವರ ಟೀಕಾಕಾರರು ಪಾರಂಪರ್ಯವಾಗಿ ಪಡೆದ ಸೈದ್ಧಾಂತಿಕ ನೀತಿ ಮತ್ತು ತತ್ವಗಳು ಒಬ್ಬರ ವಿರೋಧಿಗಳೊಂದಿಗೆ ಯೋಗ್ಯವಾದ, ಸ್ಪಷ್ಟವಾದ ಚರ್ಚೆಗಳನ್ನು ಕಂಡು ಕೇಳಿಲ್ಲ ಮತ್ತು ಮಾಡಿಯೂ ಇಲ್ಲ. ಆನೆಗಳನ್ನು ಬೇಟೆಯಾಡುವುದು ಸಿಂಹ ಗುಂಪಿಗೆ ಸಾಮಾನ್ಯವಾದ ಸಂಗತಿ ಆದರೆ ನರಿಯ ಕುಲವು ಅದನ್ನು ಮಾಡುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

ಈ ನೀತಿಕಥೆಯ ಮೂಲಕ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು:

ಬೇಟೆಯಾಡಲು ಹೋದ ಸಿಂಹವೊಂದು ಆ ದಿನ ತನ್ನ ಗುಹೆಗೆ ನರಿಯೊಂದರ ಮರಿಯನ್ನು ಹಿಡಿದು ತರುತ್ತದೆ. ಮಾತೃಪ್ರವೃತ್ತಿಯಿಂದ ಹೊರಬರದೆ ಸಿಂಹಿಣಿಯು ನರಿಮರಿಯನ್ನು ಕೊಂದು ತಿನ್ನಲು ನಿರಾಕರಿಸುತ್ತದೆ. ಸಿಂಹ ಮತ್ತು ಸಿಂಹಿಣಿ ಇಬ್ಬರೂ ಮುಂದೆ ತಮಗೆ ಹೊಸದಾಗಿ ಹುಟ್ಟಿದ ಸಿಂಹದ ಮರಿಗಳ ಜೊತೆಗೆ ನರಿಮರಿಯನ್ನು ಬೆಳೆಸಲು ನಿರ್ಧರಿಸುತ್ತವೆ. ಹೀಗಿರಲು, ಒಂದು ದಿನ, ಸಿಂಹದ ಮರಿಗಳು ಮತ್ತು ನರಿಮರಿ ಕಾಡಿನಲ್ಲಿ ಆಡುತ್ತಿರುವಾಗ, ಆನೆಯ ಗುಂಪಿನೊಳಗೆ ಓಡುತ್ತವೆ. ಸಿಂಹಗಳ ಸಹಜ ಪ್ರವೃತ್ತಿಯಂತೆ ಆನೆಯನ್ನು ನಿಶ್ಕ್ರಿಯಗೊಳಿಸಲು ಜಿಗಿಯುತ್ತವೆ. ಆದರೆ ಆನೆಯ ಗಾತ್ರದಿಂದ ಭಯಭೀತವಾದ ನರಿಮರಿ, ಸಿಂಹಗಳು ಹಾಗೆ ಮಾಡುವುದನ್ನು ತಡೆಯುತ್ತದೆ ಮತ್ತು ಗುಹೆಗೆ ವಾಪಸ್ಸಾಗುತ್ತವೆ. ಈ ಘಟನೆಯನ್ನು ಸಿಂಹಿಣಿಗೆ ಸಿಂಹದ ಮರಿಗಳು ವಿವರಿಸಿ ನರಿಮರಿಯ ಬಗ್ಗೆ ಹಾಸ್ಯಮಾಡುತ್ತವೆ. ಕಡೆಗೆ ಸಿಂಹಿಣಿ ತನ್ನ ಮತ್ತು ಸಿಂಹದ ಮರಿಗಳ ನಿಜವಾದ ಗುರುತನ್ನು ನರಿಮರಿಗೆ ತಿಳಿಸುತ್ತದೆ ಮತ್ತು ತಮ್ಮ ಗುಹೆಯನ್ನು ತೊರೆಯುವಂತೆ ನರಿಮರಿಗೆ ಸಲಹೆ ನೀಡುತ್ತದೆ, ಏಕೆಂದರೆ ಮುಂದೊಮ್ಮೆ ಸಿಂಹದ ಮರಿಗಳು ಬೆಳೆದು ನರಿಮರಿಯ ಜೀವಕ್ಕೆ ಅಪಾಯ ಒದಗಬಹುದು ಎಂದು. ಸಿಂಹಿಣಿ ಕೆಳಗಿನ ಸಂಸ್ಕೃತ ಉಕ್ತಿಯೊಂದನ್ನು ಹೇಳಿ ನರಿಮರಿಯನ್ನು ಸಮಾಧಾನಪಡಿಸುತ್ತದೆ:

ಶೂರೋಸಿ ಕೃತವಿದ್ಯೋಸಿ ದರ್ಶನೀಯೋಶಿ ಪುತ್ರಕಃ ।

ಯಸ್ಮಿನ್ ಕುಲೆ ತ್ವಮುತ್ಪನ್ನೋ ಗಜಸ್ತತ್ರ ನ ಹನ್ಯತೆ ।।

ಅರ್ಥ: ನೀನೇನೋ ಧೈರ್ಯಶಾಲಿ, ಬುದ್ಧಿವಂತ ಮತ್ತು ಸುಂದರವಾದ, ನನ್ನ ಮಗು! ಆದರೆ ನೀನು ಸೇರಿದ ಕುಟುಂಬದಿಂದ ಆನೆಯನ್ನು ಕೊಲ್ಲಲು ಸಾಧ್ಯವಿಲ್ಲ.

ಎಷ್ಟೇ ಬದಲಾವಣೆಗಳನ್ನು ಮಾಡಿಕೊಂಡರೂ, ನೈಸರ್ಗಿಕ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಹೊರಬರಲು ಸಮಯ ತೆಗೆದುಕೊಳ್ಳುತ್ತದೆ! ಕಾಂಗ್ರೆಸ್ ತನ್ನ ಮೌಲ್ಯಗಳನ್ನು ಗಂಭೀರವಾಗಿ ಪುನರ್ವಿಮರ್ಶಿಸುವ ಸಮಯ ಬಂದಿದೆ, ಪ್ರಣಬ್ ದಾ ಮತ್ತು ಮುನ್ಷಿ ಜಿ ಅವರು ಕಂಡುಕೊಂಡ ಒಳಗೊಳ್ಳುವಿಕೆಯನ್ನು ಸ್ವೀಕರಿಸಬೇಕೆ ಅಥವಾ ರಾಜಕೀಯ ಅಸ್ಪೃಶ್ಯತೆಯನ್ನು ಉತ್ತೇಜಿಸುವ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ಮುಚ್ಚಿಹೋಗಬೇಕೇ

ಎಂಬುದನ್ನು ಅರಿತುಕೊಳ್ಳಬೇಕಿದೆ.

ಡಾ.ರಾಜೇಂದ್ರ ಪ್ರಸಾದ್, ಕೆ.ಎಂ. ಮುನ್ಷಿ, ಡಾ. ರಾಧಾಕೃಷ್ಣನ್, ಶ್ರೀ ಪುರುಷೋತ್ತಮ್ ದಾಸ್ ಟಂಡನ್ ಮತ್ತು ಪ್ರಣಬ್ ದಾ ಅವರು ಅನುಸರಿಸುತ್ತಿದ್ದ ರಾಜಕೀಯ ನೀತಿ ಸಮಗ್ರವಾಗಿತ್ತು. ಅವರ ಕಾರ್ಯಗಳ ಸರಿಯಾದ ವ್ಯಾಖ್ಯಾನವು ಅಸಾಧಾರಣ ಕುತೂಹಲ ಮತ್ತು ನೈತಿಕ ಧೈರ್ಯವನ್ನು ತಂದುಕೊಡುತ್ತದೆ, ಇದು ಸ್ವ-ಹಿತಾಸಕ್ತಿ ಚಾಲಿತ ಸಣ್ಣ ಪಕ್ಷ-ರಾಜಕೀಯ, ಕೋಮು ರಾಜಕೀಯ, ಜಾತಿ ಆಧಾರಿತ ರಾಜಕೀಯ ಮತ್ತು ರಾಜವಂಶದ ರಾಜಕೀಯದಲ್ಲಿ ತೊಡಗಿಸಿಕೊಳ್ಳುವವರಿಗೆ ತಲುಪಲು ಸಾಧ್ಯವಿಲ್ಲ. ಹೊಸ ತಲೆಮಾರಿನ ರಾಜಕಾರಣಿಗಳಲ್ಲಿ ಪ್ರಣಬ್ ದಾ ರವರ ಮೂರ್ತಿವೆತ್ತ ಮೌಲ್ಯಗಳನ್ನು ಹುಟ್ಟುಹಾಕುವುದು ಮತ್ತು ಅನುಕರಿಸುವುದು ಸರಿಸಾಟಿಯಿಲ್ಲದ ಅವರ ಪರಂಪರೆಗೆ ನಿಜವಾದ ಗೌರವ ಸಂದಿದೆ. ಪ್ರಣಬ್ ದಾ ಈಗಿಲ್ಲ ಆದರೆ ದೀರ್ಘಕಾಲ ಬೆಳೆಯಬೇಕು ಮತ್ತು ಬದುಕಬೇಕು ಪ್ರಣಬ್ ದಾ ರವರ ಪರಂಪರೆ.

ಡಾ.ಮನಮೋಹನ್ ವೈದ್ಯ, ಸಹಸರಕಾರ್ಯವಾಹ,
ರಾಷ್ಟ್ರೀಯ ಸ್ವಯಂಸೇವಕ ಸಂಘ

ರಾಷ್ಟ್ರೋತ್ಥಾನ ಪರಿಷತ್ತಿನ ‘ತಪಸ್’ಯೋಜನೆಯ 14 ವಿದ್ಯಾರ್ಥಿಗಳು ಐಐಟಿ ಪ್ರವೇಶಾವಕಾಶ

$
0
0

ರಾಷ್ಟ್ರೋತ್ಥಾನ ಪರಿಷತ್ತಿನ ‘ತಪಸ್’ ಯೋಜನೆಯ 14 ವಿದ್ಯಾರ್ಥಿಗಳು ಐಐಟಿ ಪ್ರವೇಶಾವಕಾಶ ಪಡೆದಿದ್ದಾರೆ.

ರಾಷ್ಟ್ರೋತ್ಥಾನ ಪರಿಷತ್ ಸಂಚಾಲಿತ ತಪಸ್‍ನ 14 ವಿದ್ಯಾರ್ಥಿಗಳು ಇತ್ತೀಚೆಗೆ ಪ್ರಕಟಗೊಂಡ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಐಟಿಗೆ ಪ್ರವೇಶಾವಕಾಶ ಪಡೆದಿದ್ದಾರೆ.

Rashtrotthana Parishat


ಆರ್ಥಿಕವಾಗಿ ಅತಿ ಹಿಂದುಳಿದ ಪರಿವಾರಗಳಿಂದ, ಸೆಕ್ಯುರಿಟಿ, ಹೌಸ್ ಕೀಪಿಂಗ್, ಗಾರ್ಮೆಂಟ್ಸ್, ರೈತ ಕೂಲಿಕಾರರು, ಸಂಚಾರಿ ವ್ಯಾಪಾರಿಗಳು ಇಂತಹ ಕುಟುಂಬಗಳಿಂದ ಬಂದಂತಹ ಮಕ್ಕಳ ಸಾಧನೆ ಪ್ರೇರಣೆ ನೀಡುವಂತಹುದು. ಅವಕಾಶ ವಂಚಿತ ಇಂತಹ ಮಕ್ಕಳಿಗಾಗಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೇಸ್ ಸಂಸ್ಥೆಗಳು ಉಚಿತವಾಗಿ ಶಿಕ್ಷಣ, ವಸತಿ, ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಿ, ಐಐಟಿ-ಎನ್‍ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಶ್ರಮಿಸುತ್ತಿದೆ.


ಈ ವರ್ಷ ಒಟ್ಟು 32 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಅಡ್ವಾನ್ಸ್ ಪರೀಕ್ಷೆ ಬರೆದ 32 ಮಕ್ಕಳಲ್ಲಿ 14 ಮಕ್ಕಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.


ಸೆಕ್ಯುರಿಟಿ ಗಾರ್ಡ್ ಅವರ ಮಗನಾದ ಪೃಥ್ವಿರಾಜ್ ಎಸ್‍ಟಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 70ನೇ ರ್ಯಾಂಕ್ ಪಡೆದಿದ್ದಾರೆ. ತಂದೆಯನ್ನು ಕಳೆದುಕೊಂಡು, ತಾಯಿ ಮನೆಗೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದ ನವೀನ್ ಗೌಡ ಅವರು ಒಬಿಸಿ ವಿಭಾಗದಲ್ಲಿ 745 ರ್ಯಾಂಕ್, ತಪಟೂರಿನಲ್ಲಿ ಬಳೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದಿಂದ ಬಂದ ಸಾತ್ವಿಕ್ ಇಎಡಬ್ಲ್ಯುಎಸ್ ವಿಭಾಗದಲ್ಲಿ 875ನೇ ರ್ಯಾಂಕ್, ಬೆಳಗಾವಿಯ ರೈತ ಕುಟುಂಬದ ಸಂಗ್ರಾಮ್ ಸಿಂಗ್ ಪಾಟೀಲ್ 1015 ರ್ಯಾಂಕ್, ಬಸ್ ಕಂಡೆಕ್ಟರ್ ಮಗನಾದ ಭವನ್ 1502 ರ್ಯಾಂಕ್, ಕಾಯಿಮಂಡಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ರಾಹುಲ್ ಟಿ.ಜಿ 1842 ರ್ಯಾಂಕ್, ಎಸ್.ಸಿ. ವಿಭಾಗದಲ್ಲಿ ನೀಲಕಂಠ ಚವ್ಹಾಣ್ 1217ನೇ ರ್ಯಾಂಕ್ ಪಡೆದಿದ್ದಾರೆ.
ರಾಜ್ಯದ ಸಾಮಾಜಿಕವಾಗಿ ಆರ್ಥಿಕವಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಹಾಗೂ ಐಐಟಿ ಪ್ರವೇಶಕ್ಕೆ ಅಗತ್ಯ ತರಬೇತಿ ನೀಡುವ ಸಲುವಾಗಿ ರಾಷ್ಟ್ರೋತ್ಥಾನ ಪರಿಷತ್ ತಪಸ್ ಯೋಜನೆಯನ್ನು 2012ರಲ್ಲಿ ಆರಂಬಿಸಿತು. ಈವರೆಗೆ 7 ತಂಡಗಳ ವಿದ್ಯಾರ್ಥಿಗಳು ತಪಸ್ ನಿಂದ ಹೊರಬಂದಿದ್ದು 284 ಮಂದಿ ಬಡ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.
ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 14 ವಿದ್ಯಾರ್ಥಿಗಳ ವಿವರ

1.ಪೃಥ್ವಿರಾಜ್
ಮೂಲತಃ ಚಿಕ್ಕಬಳ್ಳಾಪುರ, ತಂದೆ – ಸೆಕ್ಯುರಿಟಿ, ತಾಯಿ – ಗಾಮೆಂಟ್ಸ್ ಕೆಲಸ
PU – 93%, CET – 1075 Rank,
JEE Main – ST – 66; JEE Advance – ST – 70

2.ನವೀನ್‍ಗೌಡ
ಬೆಂಗಳೂರು, ತಂದೆ – ನಿಧನರಾಗಿದ್ದಾರೆ, ತಾಯಿ – ಹೌಸ್ ಕೀಪಿಂಗ್
PU – 96%,CET – 442
JEE Main – OBC – 4308 JEE Advance-OBC– 745

3.ಸಾತ್ವಿಕ್
ತಿಪಟೂರು – ತಂದೆ : ಬಳೆ ವ್ಯಾಪಾರಿ, ತಾಯಿ – ಗೃಹಿಣಿ
PU – 94 % CET – 613
JEE Main – EWS – 2587 JEE Advance-EWS – 875

4.ಭವನ್
ಮೂಲತಃ ಬಿಜಾಪುರ, ತಂದೆ: ಪ್ರೈವೇಟ್ ಬಸ್ ಕಂಡಕ್ಟರ್, ತಾಯಿ : ಟೈಲರ್
PU – 94% CET – 2793
JEE Main – EWS – 4768 JEE Advance-EWS – 1502

5.ಸಂಗ್ರಾಮ್ ಸಿಂಗ್ ಪಾಟೀಲ್
ಮೂಲತಃ ನಿಪ್ಪಾಣಿ ತಾ|| ಬೆಳಗಾವಿ, ತಂದೆ – ತಾಯಿ : ರೈತರು
PU – 95% CET – 675
JEE Main – EWS – 1840 JEE Advance-EWS– 1015

6.ರಾಹುಲ್ – ತಿಪಟೂರು, ತಂದೆ : ಕಾಯಿಮಂಡಿ ಉದ್ಯೋಗಿ – ತಾಯಿ – ಗೃಹಿಣಿ
PU – 95% CET – 1328
JEE Main – EWS – 6923 JEE Advance-EWS – 1842

7.ಆದಿತ್ಯ ರಾಮ ಹೆಗ್ಡೆ
ಮೂಲತಃ ಉತ್ತರ ಕನ್ನಡ – ಯಲ್ಲಾಪುರ, ತಂದೆ- ತಾಯಿ- ಕೃಷಿ
PU – 95% CET – 719
JEE Main – EWS – 1246 JEE Advance-EWS – 2375

8.ಉಲ್ಲಾಸ್
ಮೂಲತಃ ಅರಸೀಕೆರೆ ತಾ|| ಹಾಸನ, ತಂದೆ-ತಾಯಿ – ಕೃಷಿ
PU – 95% CET – 391
JEE Main – EWS – 918 JEE Advance-EWS – 2468

9.ಚೇತನ್‍ಕುಮಾರ್ ಕೆ
ಬೆಂಗಳೂರು, ತಂದೆ – ನಿರುದ್ಯೋಗಿ, ತಾಯಿ – ಗಾರ್ಮೆಂಟ್ಸ್
PU – 94% CET – 1696
JEE Main – EWS – 5306 JEE Advance-EWS – 2664

10.ಆಶಿಸ್ ಅರಕುಣಿ
ಬೈಲಹೊಂಗಲ ತಾ|| ಬೆಳಗಾವಿ, ತಂದೆ-ತಾಯಿ – ಕೃಷಿ
PU – 94% CET – 717
JEE Main – EWS – 2436 JEE Advance-EWS– 3649

11.ವಿವೇಕ್
ತುಮಕೂರು. ತಂದೆ : ಸೆಕ್ಯುರಿಟಿ, ತಾಯಿ – ಗಾರ್ಮೆಂಟ್ಸ್
PU – 95% CET – 1502
JEE Main – OBC – 4241 JEE Advance-OBC – 7586

12.ನೀಲಕಂಠ ಚವ್ಹಾಣ (SC)
ಬೀಳಗಿ ತಾ|| ಬಾಗಲಕೋಟೆ, ತಂದೆ – ತಾಯಿ : ಕೂಲಿ
PU – 82% CET – 20276
JEE Main – SC – 4996 JEE Advance-SC – 1217

13.ಶಶಾಂಕ್
ಬೆಂಗಳೂರು – ತಂದೆ : ಇಲ್ಲ, ತಾಯಿ : ಹೋಂಗಾರ್ಡ್
PU – 93% CET – 1004
JEE Main – OBC – 11572 JEE Advance-OBC – 9142

  1. ಬಾಳಪ್ಪ ಭಜಂತ್ರಿ (Sಅ) – ಬಾದಾಮಿ ತಾ|| ಬಾಗಲಕೋಟೆ, ತಂದೆ ; ತಾಯಿ – ಕೃಷಿ
    PU – 89% CET– 12913
    JEE Main – SC – 3655JEE Advance-SC – 2659

ಗಾಂಧೀಜಿ ಮತ್ತು ಗೋಮಾತೆ : ಮ ವೆಂಕಟರಾಮು ಲೇಖನ

$
0
0

ಗಾಂಧೀಜಿ ಮತ್ತು ಗೋಮಾತೆ

ಲೇಖಕರು : ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ



ಭಾರತದ ಮಾನಬಿಂದುಗಳಲ್ಲಿ ಗೋವೂ ಒಂದು. ಈ ಭೂಮಿಯಲ್ಲಿ ಗೋಸಂರಕ್ಷಣೆಗಾಗಿ ಜೀವವನ್ನೇ ತೆತ್ತ ಮಹಾತ್ಮರ ವಿವರ ಪುರಾಣ ಇತಿಹಾಸಗಳಲ್ಲೆಲ್ಲ ಬರುತ್ತದೆ. ಈ ಪ್ರಪಂಚದಲ್ಲಿ ಚರಾಚರಗಳಲ್ಲೆಲ್ಲ ದೇವರನ್ನು ಕಂಡ ಭೂಮಿ ಭಾರತ. ಗೋವಿನಲ್ಲಿ ಎಲ್ಲ ದೇವತೆಗಳೂ ವಾಸ ಮಾಡುತ್ತಾರೆ ಎನ್ನುವ ಶ್ರದ್ಧೆ ನಮ್ಮದು. ಗಾಂಧೀಜಿಯವರಲ್ಲಿಯೂ ಈ ಭಾವ ಈ ಶ್ರದ್ಧೆ ಉಚ್ಚಕೋಟಿಯದ್ದಾಗಿತ್ತು. ಗೋತಳಿಯ ಸಂರಕ್ಷಣೆ ಗೋಸೇವೆಯ ಮಖ್ಯವಾದ ವಿಷಯ ಎಂದು ಮಹಾತ್ಮಾ ಗಾಂಧಿ ಹೇಳುತ್ತಿದ್ದರು. ’ಹಣದ ಮಾನದಲ್ಲಿ ಮಾತ್ರ ನೋಡುವವರಿಗೆ ಹಾಲು ನೀಡುವ ಆಕಳನ್ನು ಬಿಟ್ಟು ಉಳಿದೆಲ್ಲ ಹಸುಗಳನ್ನು ಕಸಾಯಿಖಾನೆಗೆ ದಬ್ಬಿಬಿಡಬಹುದು ಅನಿಸುವುದು ಸಹಜ. ಇಂತಹ ಆರ್ಥಿಕತೆಗೆ ಆತ್ಮವೇ ಇರುವುದಿಲ್ಲ, ಮತ್ತು ಇಂತಹ ಕರುಣೆರಹಿತ ಅರ್ಥನೀತಿಗೆ ಭಾರತದಲ್ಲಿ ಅವಕಾಶವಿಲ್ಲ’ ಎಂದಿದ್ದರು.


ಗೋರಕ್ಷಣೆ ಗೋಸೇವೆ ಕುರಿತ ಗಾಂಧೀಜಿಯವರ ಚಿಂತನೆ ತುಂಬಾ ಆಳವಾದದ್ದು. ಭಾರತದ ಕೃಷಿ, ಆರ್ಥಿಕತೆ, ಪರಂಪರೆಯ ಶ್ರದ್ಧೆ ಮತ್ತು ಸಹಜ ಮಾನವೀಯತೆಯನ್ನು ಆಧರಿಸಿದ್ದು ಗೋಪಾಲನೆ. ಈ ಕುರಿತು ೧೯೨೧ ಅಕ್ಟೋಬರ್ ೬ರಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಅವರು ಬರೆದ ವಾಕ್ಯಗಳು ಕಾವ್ಯವೇ ಆಗಿವೆ. ಅಲ್ಲಿ ಅವರು ಬರೆಯುತ್ತಾರೆ ’ಹಸುವೆಂದರೆ ಕರುಣೆಯ ಕಾವ್ಯ. ಈ ಸಭ್ಯ ಪಶುವಿನ ಸಂಪರ್ಕದಲ್ಲಿ ಬಂದವರಿಗೆ ಕರುಣೆ ಅನುಭವಕ್ಕೆ ಬರುತ್ತದೆ. ಗೋಸಂರಕ್ಷಣೆಯೆಂದರೆ ದೇವಸೃಷ್ಟಿಯ ಮೂಕಲೋಕದ ರಕ್ಷಣೆಯಂತೆ. ನಮ್ಮ ಪ್ರಾಚೀನ ಋಷಿಪರಂಪರೆ ಗೋಪಾಲನೆಯೊಂದಿಗೆ ಆರಂಭವಾಯಿತು. ಮಾತಿಲ್ಲದ ಜೀವಗಳು ರಕ್ಷಣೆಗಾಗಿ ಮನುಷ್ಯನನ್ನು ಕೇಳುವಂತಿದೆ ಈ ಪರಂಪರೆ.’

Mahatma Gandhi


೧೯೨೪ ಜೂನ್ ೨೬ರಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆದ ಸಾಲುಗಳು ಹೀಗಿವೆ. ’ಮನುಷ್ಯೇತರ ಜೀವಿಗಳಲ್ಲಿ ಅತ್ಯಂತ ಪವಿತ್ರವಾದುವೆಂದರೆ ಗೋವುಗಳು. ಎಲ್ಲ ಮೂಕಪ್ರಾಣಿಗಳ ಪರವಾಗಿ ಅವು ನಮ್ಮಲ್ಲಿ ನ್ಯಾಯಕ್ಕಾಗಿ ಮೊರೆಯಿಡುತ್ತಿವೆ. ಮೊದಲನೆಯದಾಗಿ ಬದುಕುವ ಅವಕಾಶಕ್ಕಾಗಿ ಅವಳು ಅವಳ ಕಣ್ಣುಗಳ ಮೂಲಕ ಮಾತಾಡುತ್ತಿದ್ದಾಳೆ. ನಮ್ಮನ್ನು ಕೆಟ್ಟದಾಗಿ ಬಳಸಿಕೊಳ್ಳುವುದಕ್ಕಾಗಿ, ಕೊಲ್ಲುವುದಕ್ಕಾಗಿ, ನಮ್ಮ ಮಾಂಸವನ್ನು ತಿನ್ನಲಿಕ್ಕಾಗಿ ನಿಮ್ಮನ್ನು ನೇಮಿಸಿಲ್ಲ. ನಮ್ಮನ್ನು ಸ್ನೇಹದಿಂದ ರಕ್ಷಿಸುವುದಕ್ಕಾಗಿ ನೀವಿದ್ದೀರಿ ಎಂದು ಹೇಳುತ್ತಿದ್ದಾಳೆ.’ ಗಾಂಧೀಜಿ ಮತ್ತೆ ಹೇಳುತ್ತಾರೆ ’ನಾನು ಗೋವನ್ನು ಪೂಜಿಸುತ್ತೇನೆ ಮತ್ತು ಇಡೀ ಜಗತ್ತನ್ನು ಎದುರುಹಾಕಿಕೊಂಡರೂ ಸರಿಯೇ ಗೋವಿನ ರಕ್ಷಣೆಗೆ ನಿಲ್ಲುತ್ತೇನೆ.’


ಗಾಂಧೀಜಿಯವರ ಗೋಭಕ್ತಿ ವಿಶೇಷವಾದುದು. ಸಸ್ಯಾಹಾರ ಶಾಖಾಹಾರದ ಬಗ್ಗೆ ಅವರಿಗಿದ್ದ ಒಲವಿನಿಂದಾಗಿ ಗೋಪಾಲನೆ ಹೈನುಗಾರಿಕೆಯ ಕುರಿತು ಗಾಂಧೀಜಿಯವರಿಗೆ ವಿಶೇಷ ಕಾಳಜಿಯಿತ್ತು. ೧೯೪೦ರ ಸೆಪ್ಟೆಂಬರ್ ೧೫ರಂದು ಬರೆದ ಲೇಖನದಲ್ಲಿ ಅವರು ಹೇಳುತ್ತಾರೆ ’ನಮಗೆ ಜನ್ಮನೀಡಿದ ತಾಯಿಗಿಂತ ಗೋಮಾತೆ ಹೆಚ್ಚಿನವಳೆಂದು ನನ್ನ ಭಾವನೆ. ಹುಟ್ಟಿದಾಗ ಒಂದು ವರ್ಷ ಹಾಲುಣಿಸಿದ ತಾಯಿ ವೃದ್ಧಾಪ್ಯದಲ್ಲಿ ಮಗ ನನ್ನ ಸೇವೆ ಮಾಡಲಿ ಎಂದು ನಿರೀಕ್ಷಿಸುತ್ತಾಳೆ. ಆದರೆ ಗೋಮಾತೆ ಹುಲ್ಲು ಹಿಂಡಿಗಳಿಗಿಂತ ಹೆಚ್ಚಿನದನ್ನು ನಿರೀಕ್ಷಿಸದೇ ಜೀವನಪರ್ಯಂತ ಹಾಲು ನೀಡುತ್ತಾಳೆ. ಗೋಮಾತೆ ಅನಾರೋಗ್ಯಕ್ಕೆ ತುತ್ತಾಗುವುದೂ ಅಪರೂಪ, ಸತ್ತಮೇಲೂ ಹಸು ಉಪಯುಕ್ತ. ಅದರ ಪ್ರತಿ ಅಂಗವೂ ಮಾನವಲೋಕಕ್ಕೆ ಉಪಕಾರಿಯಾಗುತ್ತದೆ. ನಾನು ಹೀಗೆ ಹೇಳುತ್ತಿರುವುದು ಜನ್ಮನೀಡಿದ ತಾಯಿಯ ಗೌರವವನ್ನು ಕಡಿಮೆ ಮಾಡುವುದಕ್ಕಲ್ಲ.

ಗೋಮಾತೆಯ ವಿಶೇಷವನ್ನು ಎತ್ತಿ ಹೇಳುವುದಕ್ಕೆ, ಗೋಪೂಜೆಯ ಮಹತ್ವವನ್ನು ತಿಳಿಸುವುದಕ್ಕೆ. ಭಾರತೀಯರಿಗೆ ಗೋಸಂಪತ್ತಿನ ರಕ್ಷಣೆ ಕರ್ತವ್ಯವೇ ಆಗಿದೆ. ಮಾನವ ವಿಕಾಸದಲ್ಲಿ ಗೋಸೇವೆ ಅತಿ ಮುಖ್ಯ ಭಾಗ ಎಂದು ನನ್ನ ಭಾವನೆ. ಗೋಸೇವೆಯಿಂದಾಗಿ ಮಾನವ ಲೋಕಕ್ಕೆ ಮೂಕಸೃಷ್ಟಿಯೊಡನೆ ಅನುಸಂಧಾನ ಒದಗುತ್ತದೆ. ಮಾನವನ ಅತ್ಯುತ್ತಮ ಸಂಗಾತಿ ಗೋವುಗಳು. ನಮ್ಮ ಕೃಷಿಯನ್ನು ಸಾಧ್ಯವಾಗಿಸಿದವಳು ಈ ಗೋಮಾತೆ’ ಹೀಗೆ ಹೇಳುವ ಗಾಂಧೀಜಿಯವರು ಸನಾತನ ಭಾರತದ ಸಮರ್ಥ ಪ್ರತಿನಿಧಿಯೇ ಆಗಿದ್ದರು.

ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ

ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ರಾಷ್ಟ್ರೋತ್ಥಾನ ಪರಿಷತ್ ಸಾರ್ವಜನಿಕರಲ್ಲಿ ಮನವಿ

$
0
0

ಈ ಬಾರಿಯ ದೀಪಾವಳಿಯನ್ನು ಚೀನಾ ವಸ್ತುಗಳ ಬಳಕೆಯನ್ನು ಬಿಟ್ಟು, ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ರಾಷ್ಟ್ರೋತ್ಥಾನ ಪರಿಷತ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Rashtrotthana Parishat


ರಾಷ್ಟ್ರೀಯ ಕಾಮಧೇನು ಆಯೋಗವು ದೇಶಾದ್ಯಂತ ಸೆಗಣೆಯಿಂದ (ಗೋಮಯ) ತಯಾರಿಸಿದ ಹಣತೆಯ ಮೂಲಕ ದೀಪಾವಳಿ ಆಚರಿಸುವ ‘ಕಾಮಧೇನು ದೀಪಾವಳಿ’ ಎಂಬ ಬೃಹತ್ ಆಂದೋಲನ ಹಮ್ಮಿಕೊಂಡಿದೆ. ಈ ಅಭಿಯಾನದೊಂದಿಗೆ ರಾಷ್ಟ್ರೋತ್ಥಾನ ಪರಿಷತ್ ಕೈ ಜೋಡಿಸಿದೆ.


ರಾಷ್ಟ್ರೋತ್ಥಾನ ಪರಿಷತ್ ದೇಸೀ ಗೋ ತಳಿಗಳ ರಕ್ಷಣೆಗಾಗಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯದ ಸಮೀಪ ಗೋಶಾಲೆಯನ್ನು ನಡೆಸುತ್ತಿದೆ. ಇಲ್ಲಿ 12 ಭಾರತೀಯ ತಳಿಗಳ 500ಕ್ಕೂ ಅಧಿಕ ಗೋವನ್ನು ಸಂರಕ್ಷಿಸಲಾಗಿದೆ. ಈ ಗೋವಿನ ಸೆಗಣಿಯನ್ನು ಬಳಸಿಕೊಂಡು 20,000ಕ್ಕೂ ಅಧಿಕ ದೀಪಗಳನ್ನು ತಯಾರಿಸಿ ಸಾರ್ವಜನಿಕರಿಗೆ ನೀಡಲಾಗುವುದು. ಈ ಮೂಲಕ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ನಿರ್ಮಿಸಲು ನಾವೆಲ್ಲರೂ ಜೋಡಿಕೊಳ್ಳಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸುತ್ತಿದ್ದೇವೆ.

ಎಂದು ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಕಾಮಧೇನು ಆಯೋಗವು ದೇಶಾದ್ಯಂತ 33 ಕೋಟಿ ದೀಪಗಳನ್ನು ತಯಾರಿಸುವ ಗುರಿ ಹೊಂದಿದೆ. ಶ್ರೀರಾಮಚಂದ್ರನ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ಈ ಬಾರಿಯ ದೀಪಾವಳಿಯಂದು ಸಗಣಿಯಿಂದ ತಯಾರಿಸಿದ 3 ಲಕ್ಷ ದೀಪಗಳನ್ನು ಹಚ್ಚಲು ಹಾಗೂ ವಾರಾಣಾಸಿಯಲ್ಲಿ 1ಲಕ್ಷ ದೀಪಗಳನ್ನು ಹಚ್ಚಲು ಕಾಮಧೇನು ಆಯೋಗ ನಿರ್ಧರಿಸಿದೆ. ಇದೇ ರೀತಿ ನಮ್ಮ ಮನೆಗಳಲ್ಲಿಯೂ ಸ್ಥಳೀಯ ದೇವಾಲಯಗಳಲ್ಲಿಯೂ ಸೆಗಣಿಯಿಂದ ದೀಪಗಳನ್ನು ತಯಾರಿಸಿ ದೀಪಾವಳಿಯ ಬೆಳಕಿನ ಹಬ್ಬ ಆಚರಿಸೋಣ.
ರಾಜ್ಯದ ವಿವಿಧ ಗೋಶಾಲೆಗಳು, ಸ್ವಯಂಸೇವಾ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಸಗಣಿಯಿಂದ ದೀಪ ತಯಾರಿಸಿ ಜನರಿಗೆ ನೀಡುವ ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಬೇಕಾಗಿ ರಾಷ್ಟ್ರೋತ್ಥಾನ ಪರಿಷತ್ ಮನವಿ ಮಾಡಿದೆ.


ಕೊರೋನಾ ಹರಡುವುದನ್ನು ತಡೆಗಟ್ಟುವುರಲ್ಲಿಯೂ ಗೋ ಉತ್ಪನ್ನಗಳು ಪರಿಣಾಮಕಾರಿಯಾಗುತ್ತವೆ ಎನ್ನುವುದು ಈಗಾಗಲೇ ಸಿದ್ದವಾಗಿದೆ. ಈ ಬಾರಿಯ ದೀಪಾವಳಿಯನ್ನು ಸಗಣಿ ಹಾಗೂ ಪಂಚಗವ್ಯವನ್ನು ವ್ಯಾಪಕವಾಗಿ ಬಳಸುವ ಮೂಲಕ ಸ್ವಚ್ಛ ಮತ್ತು ಆರೋಗ್ಯಪೂರ್ಣ, ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಹಾಗೂ ಈ ಬಾರಿಯ ದೀಪಾವಳಿಗೆ ಚೀನಾ ವಸ್ತುಗಳನ್ನು ಬಳಸದೇ ದೇಸೀ ಉತ್ಪನ್ನಗಳನ್ನು ಬಳಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ನಿರ್ಮಿಸಲು ನಾವೆಲ್ಲ ಕೈಜೋಡಿಸಬೇಕಾಗಿ ರಾಷ್ಟ್ರೋತ್ಥಾನ ಪರಿಷತ್ ಈ ಮೂಲಕ ಮನವಿ ಮಾಡಿದೆ.


ಆರೆಸ್ಸೆಸ್: ರಾಷ್ಟ್ರಸೇವೆಯಲ್ಲಿ ತೊಂಬತ್ತೈದು ವರ್ಷ

$
0
0

ಆರೆಸ್ಸೆಸ್: ರಾಷ್ಟ್ರಸೇವೆಯಲ್ಲಿ ತೊಂಬತ್ತೈದು ವರ್ಷ

ಲೇಖನ: ನಾ. ತಿಪ್ಪೇಸ್ವಾಮಿ, ಕ್ಷೇತ್ರ ಕಾರ್ಯವಾಹ, ದಕ್ಷಿಣ ಮಧ್ಯ ಕ್ಷೇತ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ.
(೨೪ ಅಕ್ಟೊಬರ್ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ)

ಆರೆಸ್ಸೆಸ್ ಅಥವಾ ಚಿಕ್ಕದಾಗಿ ‘ಸಂಘ’ ಎಂಬುದು ನಮ್ಮ ದೇಶದಲ್ಲಿ ಚಿರಪರಿಚಿತವಾದ ಹೆಸರು. 1925ರ ವಿಜಯದಶಮಿಯಂದು ನಾಗಪುರದಲ್ಲಿ ಡಾಕ್ಟರ್ ಕೇಶವ ಬಲಿರಾಂ ಹೆಡಗೇವಾರರು ಹತ್ತಾರು ಬಾಲಕರನ್ನು ಸೇರಿಸಿಕೊಂಡು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಸಾವಿರಾರು ಶಾಖೆಗಳುಳ್ಳ ವಟವೃಕ್ಷವಾಗಿ ಬೆಳೆದಿದೆ. ಭಿನ್ನಭಿನ್ನ ಆಯಾಮಗಳಲ್ಲಿ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಂದು ಸಂಘವನ್ನು ವಿರೋಧಿಸುವವರೂ ಸಹ ಸಂಘದ ಸ್ವಯಂಸೇವಕರ ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಮೆಚ್ಚಿಕೊಳ್ಳುತ್ತಾರೆ.
ಸ್ವತಃ ಕ್ರಾಂತಿಕಾರಿಯಾಗಿದ್ದು, ಬಳಿಕ ಕಾಂಗ್ರೆಸ್ಸಿನಲ್ಲಿಯೂ ಸಕ್ರಿಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಡಾಕ್ಟರ್ ಹೆಡಗೇವಾರ್ ಅವರ ಮನಸ್ಸಿನಲ್ಲಿ ಮೂಡಿದ್ದು ಭಾರತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದು ಏಕೆ? ಎನ್ನುವ ಮೂಲ ಪ್ರಶ್ನೆ. ನಮ್ಮನ್ನು ನಾವು ಮರೆತಿದ್ದೇ ಅವನತಿಗೆ ಕಾರಣ ಎಂದು ಮನಗಂಡ ಡಾಕ್ಟರ್ ಹೆಡಗೇವಾರ್ ಅವರು ಸಮಸ್ಯೆಯ ಮೂಲದಲ್ಲೇ ಪರಿಹಾರ ಕಂಡುಕೊಳ್ಳಲು ಮುುಂದಾದರು. ಮೊಗಲರ ಆಳ್ವಿಕೆಯ ವಿರುದ್ಧ ಸಿಡಿದೆದ್ದು ಹಿಂದವೀ ಸ್ವರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿಯ ಸಾಹಸ ಅವರಿಗೆ ಪ್ರೇರಣೆಯಾಯಿತು. ಸಾವಿರಾರು ವರ್ಷಗಳ ಕಾಲ ನಮ್ಮ ತಾಯ್ನೆಲದ ಮೇಲೆ ಆಕ್ರಮಣಗಳಾದರೂ ಸದಾ ಆಕ್ರಮಕರ ವಿರುದ್ಧ ಹೋರಾಡಿದ ಕ್ಷಾತ್ರಪರಂಪರೆಯ ಇತಿಹಾಸವು ಹಿಂದೂ ಸಮಾಜ ಮತ್ತೆ ಮೈಕೊಡವಿ ಮೇಲೇಳಬಹುದೆಂಬ ವಿಶ್ವಾಸ ಮೂಡಿಸಿತು. ಈ ಹಿನ್ನೆಲೆಯಲ್ಲಿ ಸಂಘಕಾರ್ಯವನ್ನು ಆರಂಭಿಸಿದ ಡಾಕ್ಟರ್ ಹೆಡಗೇವಾರರು ಆಯ್ದುಕೊಂಡ ಮಾರ್ಗ ಸಂಘಟನೆ, ವ್ಯಕ್ತಿನಿರ್ಮಾಣ ಹಾಗೂ ಅದರ ಮೂಲಕ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಸಮಾಜ ನಿರ್ಮಾಣ.


1940ರಲ್ಲಿ ಡಾಕ್ಟರ್‍ಜೀ ಸ್ವರ್ಗಸ್ಥರಾಗುವ ಕಾಲಕ್ಕೇ ಸಂಘ ದೇಶದಾದ್ಯಂತ ತಲುಪಿತ್ತು. ಆ ವರ್ಷದ ಸಂಘದ ಶಿಬಿರದಲ್ಲಿ ಪಾಲ್ಗೊಂಡಿದ್ದ ದೇಶದ ಎಲ್ಲ ಭಾಗಗಳಿಂದ ಬಂದಿದ್ದ ಸ್ವಯಂಸೇವಕರನ್ನು ಉದ್ದೇಶಿಸಿ ಕೊನೆಯ ಬಾರಿಗೆ ಮಾತನಾಡುತ್ತಾ, ಡಾಕ್ಟರ್‍ಜೀ ‘ನನ್ನ ಕಣ್ ಮುಂದೆ ಒಂದು ಪುಟ್ಟ ಭಾರತವನ್ನು ಇಂದು ಕಾಣುತ್ತಿದ್ದೇನೆ’ ಎಂದು ಸಂತಸದಿಂದ ಉದ್ಗರಿಸಿದ್ದರು. ಸಂಘ ಸ್ಥಾಪನೆಯಾಗಿ 95 ವರ್ಷಗಳು ಕಳೆದಿವೆ. ಇಂದಿನ ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ, ಸಂಘದ ಸ್ವಯಂಸೇವಕರು ರಾಷ್ಟ್ರಜೀವನದ ಪ್ರತಿಯೊಂದು ರಂಗವನ್ನೂ ತಲುಪಿರುವುದು ನಮಗೆ ಗೋಚರವಾಗುತ್ತದೆ. ಹೊರದೇಶಗಳಿಗೆ ವಲಸೆ ಹೋದ ಸ್ವಯಂಸೇವಕರೂ ತಮ್ಮೊಡನೆ ಸಂಘವನ್ನೂ ಕೊಂಡೊಯ್ದು, ಸಂಘಕಾರ್ಯದ ಕಂಪನ್ನು ಎಲ್ಲೆಡೆ ಹರಡಿಸಿದ್ದಾರೆ.

Dr Keshav Baliram Hedgewar, RSS Founder

ಸವಾಲುಗಳನ್ನೆದುರಿಸಿ ಬೆಳೆದ ಆರೆಸ್ಸೆಸ್
1947ರ ದೇಶವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಈಗಿನ ಪಾಕಿಸ್ತಾನದ ಪ್ರದೇಶದಲ್ಲಿ ಮತ್ತು ಮುಸ್ಲಿಂ ಬಾಹುಳ್ಯವುಳ್ಳ ಭಾರತದ ಅನೇಕ ಕಡೆಗಳಲ್ಲಿ ಹಿಂದುಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತವರು ಸಂಘದ ಸ್ವಯಂಸೇವಕರು. ‘ಕೊನೆಯ ಹಿಂದು ಸುರಕ್ಷಿತವಾಗಿ ಭಾರತಕ್ಕೆ ಬರುವವರೆಗೆ ಅವರ ರಕ್ಷಣೆ ನಮ್ಮ ಹೊಣೆ’ ಎಂಬ ಸಂಘದ ಸೂಚನೆಯನ್ನು ಅಕ್ಷರಶಃ ಪಾಲಿಸಿದ ನೂರಾರು ಸ್ವಯಂಸೇವಕರು ಸ್ವತಃ ಭಾರತಕ್ಕೆ ಬರಲೇ ಇಲ್ಲ, ಅವರ ಶವ ಮಾತ್ರ ರೈಲಿನಲ್ಲಿ ಬಂತು!


ಗಾಂಧಿ ಹತ್ಯೆಯ ಮಿಥ್ಯಾರೋಪವನ್ನು ಹೊರಿಸಿ ಸಂಘವನ್ನು ನಿಷೇಧಿಸಿದ ಕಾಂಗ್ರೆಸ್, ಅದೇ ಅವಕಾಶವನ್ನು ಬಳಸಿಕೊಂಡು ಸಂಘವನ್ನು ದಮನಿಸುವ ಪ್ರಯತ್ನ ಮಾಡಿತು. ಆದರೂ, ಸಂಘದ ಸ್ವಯಂಸೇವಕರು ಯಾರ ಮೇಲೂ ಪ್ರತೀಕಾರವನ್ನು ತೆಗೆದುಕೊಳ್ಳಲಿಲ್ಲ. ಸ್ವಯಂಸೇವಕರ ಮನೆ, ಅಂಗಡಿಗಳಿಗೆ ಬೆಂಕಿಯಿಟ್ಟರೂ, ಕೊಲೆಗಳು ನಡೆದರೂ ಅಂದಿನ ಸರಸಂಘಚಾಲಕರಾದ ಗುರೂಜಿ ಗೋಳ್ವಲ್ಕರ್ ಅವರು ಹೇಳಿದ್ದು, ‘ಹಲ್ಲು ನಾಲಿಗೆಯನ್ನು ಕಚ್ಚಿತೆಂದು, ಹಲ್ಲನ್ನು ಮುರಿಯಬಾರದು. ಎರಡೂ, ನಮ್ಮದೇ ದೇಹದ ಅಂಗಗಳು’ ಎಂದು. ಆರೋಪ ಸುಳ್ಳೆಂದು ನ್ಯಾಯಾಲಯದಲ್ಲಿ ಸಾಬೀತಾಗಿ, ಸಂಘದ ಮೇಲಿನ ನಿಷೇಧವನ್ನು ಹಿಂತೆಗೆದಿದ್ದು ಈಗ ಇತಿಹಾಸ. 1975ರ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆರೆಸ್ಸೆಸ್. ಇಂದಿರಾ ಗಾಂಧಿಯವರ ಕಾಂಗ್ರೆಸ್ ಸರ್ಕಾರ ಸಂಘವನ್ನು ನಿಷೇಧಿಸಿದರೂ ಭೂಗತರಾಗಿದ್ದುಕೊಂಡೇ ಹೋರಾಟ ಮಾಡಿದವರು ಸಂಘದ ಸ್ವಯಂಸೇವಕರು.


ಐವತ್ತು ವರ್ಷಗಳ ಹಿಂದೆ (1969) ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆದ ಸಂತ ಸಮ್ಮೇಳನದ ವೇದಿಕೆಯಲ್ಲಿ ಒಂದುಗೂಡಿದ ಅನೇಕ ಮಠಾಧಿಪತಿಗಳು ಮತ್ತು ಸಂತರು ‘ಹಿಂದವಃ ಸೋದರಾಃ ಸರ್ವೇ, ನ ಹಿಂದು ಪತಿತೋ ಭವೇತ್’ ಎಂದು ಘೋಷಿಸಿ ಜಾತಿಭೇದ, ಅಸ್ಪøಶ್ಯತೆ ಮೊದಲಾದ ಆಚರಣೆಗಳಿಗೆ ಹಿಂದು ಧರ್ಮದಲ್ಲಿ ಯಾವುದೇ ಮಾನ್ಯತೆಯಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದರು. ಅದುವರೆಗೆ ಎಲ್ಲ ಜಾತಿಗಳ ಮಠಾಧಿಪತಿಗಳು ಒಂದೇ ವೇದಿಕೆಗೆ ಬರುವುದು ಅಸಾಧ್ಯವೆಂದೇ ಚಾಲ್ತಿಯಲ್ಲಿದ್ದ ಮಾತಾಗಿತ್ತು. ಆದರೆ, ವಿಹಿಂಪ ಮತ್ತು ಸಂಘ ಅದನ್ನು ಮಾಡಿ ತೋರಿಸಿದವು.
ಸೇವೆ, ವೈಚಾರಿಕ ಕ್ಷೇತ್ರದಲ್ಲಿ ಸಂಘ ಕೇವಲ ಒಂದು ಶಾಖೆಯಿಂದ ಪ್ರಾರಂಭವಾದ ಸಂಘ, ಇಂದು ಶಾಖೆ ಮಾತ್ರ ನಡೆಸುತ್ತಿಲ್ಲ. ಒಂದೂವರೆ ಲಕ್ಷಕ್ಕೂ ಅಧಿಕ ಸೇವಾಕಾರ್ಯಗಳು ದೇಶಾದ್ಯಂತ ನಡೆಯುತ್ತಿವೆ. ಪ್ರವಾಹ, ಭೂಕಂಪ, ಬರಗಾಲ, ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಸಮಾಜದ ಸಹಾಯಕ್ಕೆ ತಕ್ಷಣ ಧಾವಿಸುವುದು ಸಂಘದ ಸ್ವಭಾವವೇ ಆಗಿದೆ. ಸಂಘದಿಂದ ಪ್ರೇರಣೆ ಪಡೆದ ವಿದ್ಯಾಭಾರತಿ, ವನವಾಸಿ ಕಲ್ಯಾಣ, ವಿಹಿಂಪ, ಮಜ್ದೂರ್ ಸಂಘ, ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್, ಎಬಿವಿಪಿ, ಸಂಸ್ಕಾರ ಭಾರತಿ, ಸಂಸ್ಕøತ ಭಾರತಿ ಮೊದಲಾದ ಅನೇಕ ಸಂಘಟನೆಗಳು ರಾಷ್ಟ್ರೀಯ ವಿಚಾರದ ಆಧಾರದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಘಟನೆ, ಪರಿವರ್ತನೆಯ ಕೆಲಸ ಮಾಡುತ್ತಿವೆ. ಗ್ರಾಮ ವಿಕಾಸ, ಜಲ-ಪರಿಸರ ಸಂರಕ್ಷಣೆ, ಗೋಸೇವೆಯಂತಹ ಕೆಲಸಗಳಲ್ಲೂ ಸಾವಿರಾರು ಸ್ವಯಂಸೇವಕರು ತೊಡಗಿಸಿಕೊಂದು ಯಶಸ್ವಿ ಮಾದರಿಗಳನ್ನು ಕಟ್ಟಿಕೊಡುತ್ತಿದ್ದಾರೆ.


‘ದೇಶ ಮೊದಲು’ ಎಂಬುದು ಪ್ರತಿಯೊಬ್ಬ ಪ್ರಜೆಯ ವಿಚಾರವಾದಾಗ, ಯಾವುದೇ ದೇಶ ಸಹಜವಾಗಿಯೇ ಉನ್ನತಿಯತ್ತ ಸಾಗುತ್ತದೆ. ಅಂತಹ ವೈಚಾರಿಕ ಜಾಗೃತಿಯಲ್ಲೂ ಸಂಘ ಮುಂಚೂಣಿಯಲ್ಲಿದೆ. ಮಕ್ಕಳಿಗಾಗಿ ಮಹಾಪುರುಷರ, ಕ್ರಾಂತಿಕಾರಿಗಳ ಕತೆ ಹೇಳುವ ಭಾರತ-ಭಾರತಿ ಸರಣಿಯಿಂದ ಹಿಡಿದು, ಭಾರತದ ನೈಜ ಇತಿಹಾಸ ತಿಳಿಸುವ ಸೀತಾರಾಮ್ ಗೋಯಲ್, ರಾಮ್ ಸ್ವರೂಪ್‍ರವರಂತಹ ಖ್ಯಾತ ಲೇಖಕರ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡದಲ್ಲಿ ಪ್ರಕಟಿಸಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಂತಹ ಸಂಘಟನೆಗಳು ಸಾಹಿತ್ಯಾಸಕ್ತರಿಗೆ ತರಬೇತಿ ನೀಡುವ, ಭವಿಷ್ಯದ ಲೇಖಕರನ್ನು ತಯಾರು ಮಾಡುವ ಕೆಲಸದಲ್ಲಿ ನಿರತವಾಗಿವೆ. ನಮ್ಮ ದೇಶದ ಶಿಕ್ಷಣ ಭಾರತೀಯ ಚಿಂತನೆಯ ಆಧಾರದಲ್ಲಿರಬೇಕು ಎಂಬುದು ಎಲ್ಲರೂ ಒಪ್ಪುವ ವಿಷಯ. ಮೆಕಾಲೆ ಶಿಕ್ಷಣಕ್ಕೆ ಪರ್ಯಾಯ ಮಾದರಿಗಳೇನು ಎಂಬ ಬಗ್ಗೆ ಸಂಶೋಧನೆ ಮತ್ತು ಪ್ರಯೋಗ ನಡೆಸುತ್ತಿದೆ ಭಾರತೀಯ ಶಿಕ್ಷಣ ಮಂಡಲ. ಗುರುಕುಲ ಪದ್ಧತಿಯಲ್ಲಿ ವೇದ, ಸಂಸ್ಕøತಗಳ ಜೊತೆಗೇ ಆಧುನಿಕ ಶಿಕ್ಷಣವನ್ನೂ ನೀಡುವ ಪ್ರಯೋಗ ಕರ್ನಾಟಕದಲ್ಲಿ 25 ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ.

Manjeshwar, RSS Patha Sanchalan


ಎಡಬಲಗಳ ಚರ್ಚೆಯಲ್ಲಿ ತೊಡಗಿರುವವರು ಏನೇ ವಾದಿಸಿದರೂ, ಹಿಂದು ಚಿಂತನೆಯ ಆಧಾರದ ಮೇಲೆ ವಿಕಾಸಗೊಂಡ ಸಂಘಕಾರ್ಯವು ರಾಷ್ಟ್ರದ ಪುನರ್ನಿಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಸ್ವಯಂಸೇವಕನಿಗೆ ರಾಷ್ಟ್ರಹಿತವೇ ಸರ್ವೋಚ್ಚ. ಸಂಕಷ್ಟದ ಕಾಲದಲ್ಲಿ ಸಮಾಜದ ನೆರವಿಗೆ ಧಾವಿಸಲು ಆತ ಎಂದಿಗೂ ಸಿದ್ಧ. ಅದಕ್ಕೆ ಯಾರ ಅಪ್ಪಣೆಗೂ, ಅನುಮತಿಗೂ ಕಾಯುವವನಲ್ಲ ಆತ. ಎಷ್ಟೇ ವಿರೋಧ, ಅಡೆತಡೆಗಳು ಎದುರಾದರೂ ತನ್ನ ಮಾತೃಭೂಮಿಯನ್ನು ಪರಮವೈಭವದೆಡೆಗೆ ಕೊಂಡೊಯ್ಯಬೇಕೆಂಬ ಸಂಕಲ್ಪದಿಂದ ಹಿಮ್ಮೆಟ್ಟುವ ಯೋಚನೆಯೇ ಆತನಲ್ಲಿ ಹುಟ್ಟುವುದಿಲ್ಲ. ಇಂತಹ ವೀರವ್ರತಿಗಳ ಸಂತಾನ ಹೆಚ್ಚಲಿ. ಈ ವಿಜಯದಶಮಿಯು ಸಜ್ಜನಶಕ್ತಿಗೆ ವಿಜಯವನ್ನು ತಂದುಕೊಡಲಿ. ಎಲ್ಲರಿಗೂ ಒಳಿತಾಗಲಿ.

ನಾ. ತಿಪ್ಪೇಸ್ವಾಮಿ
ಕ್ಷೇತ್ರ ಕಾರ್ಯವಾಹ, ದಕ್ಷಿಣ ಮಧ್ಯ ಕ್ಷೇತ್ರ
ರಾಷ್ಟ್ರೀಯ ಸ್ವಯಂಸೇವಕ ಸಂಘ

ಬೆಂಗಳೂರು ಮಳೆಯಲ್ಲಿ ಆರೆಸ್ಸೆಸ್ ಸೇವಾಕಾರ್ಯ

$
0
0

ನಿನ್ನೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೊಸಕೆರೆಹಳ್ಳಿ ಮತ್ತು ಇಟ್ಟಮಡು ಸುತ್ತಮುತ್ತಲಿನ ಜನವಸತಿ ಪ್ರದೇಶಗಳು ಜಲಾವೃತವಾಗಿ, ಜನರು ಸಂಕಷ್ಟಕೊಳಗಾಗಿದ್ದರು. ಹಾನಿಗೊಳಗಾದ ಜನವಸತಿ ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಲ್ಲಿನ ಜನರ ರಕ್ಷಣೆ ಮಾಡಿದರು. ರಾತ್ರಿ ಮನೆಗಳು ಜಲಾವೃತವಾದ್ದರಿಂದ ಆಹಾರ ಪದಾರ್ಥಗಳ ಕೊರತೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಆರೆಸ್ಸೆಸ್ ಕಾರ್ಯಕರ್ತರು ಆಹಾರ ಮತ್ತು ಶಿಶುಗಳಿಗೆ ಹಾಲು ವಿತರಣೆ ಮಾಡಿದರು. ಇಂದು ಬೆಳಗ್ಗೆಯೂ ಉಪಾಹಾರದ ಸಂತ್ರಸ್ತ ಕುಟುಂಬಗಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಯಿತು.

50 ಸ್ವಯಂಸೇವಕರು ಭಾಗವಹಿಸಿದ ಈ ಸೇವಾಕಾರ್ಯದಲ್ಲಿ ಸುಮಾರು 1500 ರಷ್ಟು ಆಹಾರದ ಪೊಟ್ಟಣಗಳನ್ನು ಮತ್ತು 200 ಲೀಟರ್ ಗಳಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಪ್ರವಾಹದ ನೀರಿನಿಂದ ಮಲಿನವಾಗಿದ್ದ ಸುಮಾರು 50 ಮನೆಗಳನ್ನು ಸ್ವಚ್ಛ ಮಾಡಲಾಯಿತು.

ಸ್ವಾಭಿಮಾನಿ, ಸಂಘಟಿತ ಸಮಾಜಕ್ಕಾಗಿ ಆರೆಸ್ಸೆಸ್

$
0
0

ಸ್ವಾಭಿಮಾನಿ, ಸಂಘಟಿತ ಸಮಾಜಕ್ಕಾಗಿ ಆರೆಸ್ಸೆಸ್

ಲೇಖಕರು: ಎಸ್. ಎಸ್. ನರೇಂದ್ರ ಕುಮಾರ್
(ಅಕ್ಟೊಬರ್ ೨೫ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ನವರಾತ್ರಿ ಮಹೋತ್ಸವ ಹಿಂದುಗಳಿಗೆ ಬಹಳ ಪ್ರಮುಖ ಹಬ್ಬ. ಸಂಭ್ರಮದ ಉತ್ಸವ. ಒಂಬತ್ತು ದಿನಗಳ ಕಾಲ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸಿ, ಹತ್ತನೆಯ ದಿನವಾದ ವಿಜಯದಶಮಿಯಂದು ವಿಜಯವನ್ನು ಆರಾಧಿಸುವ ಹಬ್ಬವದು. ದಶಪ್ರಹರಣಧಾರಿಣಿಯಾದ ದುರ್ಗೆಯು ನಾನಾ ಆಯುಧಗಳನ್ನು ಹಿಡಿದು ಶತ್ರುಗಳನ್ನು ಸಂಹರಿಸಿ ಧರ್ಮದ ಸಂಸ್ಥಾಪನೆ ಮಾಡುತ್ತಾಳೆ. ಅಧರ್ಮದ ವಿರುದ್ಧ ಧರ್ಮದ ವಿಜಯ ಎನ್ನುವ ಸಂದೇಶವನ್ನು ನವರಾತ್ರಿ ಮತ್ತು ವಿಜಯದಶಮಿಗಳು ನೀಡುತ್ತವೆ.

ವಿಜಯದ ಸಂಕೇತವಾದ ವಿಜಯದಶಮಿ ಪರ್ವ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಯಿತು. 1925 ರಲ್ಲಿ ಪ್ರಾರಂಭವಾದ ಸಂಘಕ್ಕೆ ಇನ್ನೈದು ವರ್ಷ ಕಳೆದರೆ, ನೂರು ತುಂಬುತ್ತದೆ. ಒಂದು ಸಾವಿರ ವರ್ಷಗಳ ಆಕ್ರಮಕರ ಆಳ್ವಿಕೆ, ಅವರ ವಿರುದ್ಧದ ಸತತ ಸಂಘರ್ಷದ ಸಮಯದಲ್ಲಿ ಕಾರಣಾಂತರಗಳಿಂದ ಹಿಂದು ಸಮಾಜ ತನ್ನ ಅಸ್ಮಿತೆಯನ್ನೇ ಮರೆತಿದ್ದ ಕಾಲವದು. ಹಿಂದುಗಳು ಒಟ್ಟಾಗಲಾರರು, ಕೇವಲ ಅವರನ್ನು ನಂಬಿಕೊಂಡು ಸ್ವಾತಂತ್ರ್ಯ ಗಳಿಸುವುದು ಅಸಾಧ್ಯ ಎಂಬ ನಿಶ್ಕರ್ಷೆಗೆ ಬಂದಿದ್ದರು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ನಾಯಕರು. ಅಂತೆಯೇ, “ಹೇಡಿಗಳಂತಿದ್ದ ಹಿಂದುಗಳೊಡನೆ ಗೂಂಡಾಗಳಂತಿದ್ದ ಮುಸಲ್ಮಾನರನ್ನು ಸೇರಿಸಿದರೆ ಸ್ವಾತಂತ್ರ್ಯ ಗಳಿಸಬಹುದು” ಎಂಬ ನಂಬಿಕೆಯಿಂದ ಮುಸಲ್ಮಾನರ ಓಲೈಕೆಗೂ ಕೈಹಾಕಿದರು. ಮುಸಲ್ಮಾನರ ಬೇಡಿಕೆಗಳನ್ನೆಲ್ಲಾ ಪೂರೈಸುತ್ತಾ ಹೋದರು. ಕಡೆಗೊಂದು ದಿನ ಮುಸಲ್ಮಾನರಿಗೊಂದು ದೇಶವನ್ನು ನೀಡುವುದಕ್ಕಾಗಿ ಮಾತೃಭೂಮಿಯನ್ನೇ ತುಂಡರಿಸಿದರು.

ಈ ರೀತಿ, ಹಿಂದುಸಮಾಜದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದ ರಾಜಕೀಯ ನಾಯಕರಿದ್ದ ಕಾಲದಲ್ಲಿ, ಹಿಂದುವೆಂದು ಕರೆಸಿಕೊಳ್ಳುವುದು ಅಪಮಾನ ಎಂದು ಬುದ್ಧಿವಂತರು ತಿಳಿಯುತ್ತಿದ್ದ ಕಾಲದಲ್ಲಿ, ಹಿಂದು ಸಮಾಜವನ್ನು ಸಂಘಟಿಸುವ ಸಾಹಸಕ್ಕೆ ಕೈಹಾಕಿದವರು ಡಾಕ್ಟರ್ ಕೇಶವ ಬಲಿರಾಂ ಹೆಡಗೇವಾರ್. ಹೆಸರು, ಕಛೇರಿ, ಜಾಹೀರಾತು, ಸದಸ್ಯರು, ನೋಂದಣಿ, ಇತ್ಯಾದಿಗಳಾವುದೂ ಇಲ್ಲದೆ, ಕೇವಲ ನಾಲ್ಕಾರು ಬಾಲಕರನ್ನು ಕಟ್ಟಿಕೊಂಡು “ಹಿಂದುರಾಷ್ಟ್ರದ ಪರಮವೈಭವದ ಗುರಿ”ಯನ್ನು ಹೊತ್ತುಕೊಂಡು ಅವರು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಂದು ಹೆಚ್ಚಿನವರ ಅಪಹಾಸ್ಯಕ್ಕೆ ಗುರಿಯಾಯಿತು. ಹಿಂದುರಾಷ್ಟ್ರದ ಸಂಘಟನೆ ಮಾಡುವೆ ಎಂದು ಹೇಳಿಕೊಂಡು ಮೈದಾನದಲ್ಲಿ ಬಾಲಕರೊಡನೆ ಆಟವಾಡುತ್ತಿದ್ದ ಹೆಡಗೇವಾರರನ್ನು “ಗವಾರೋಂ ಕಾ ಹೆಡ್” (ಹುಚ್ಚರ ಮುಖ್ಯಸ್ಥ) ಎಂದು ಪರಿಹಾಸ್ಯ ಮಾಡಿದರು ಜನ. ಕಣ್ಮುಂದೆ ಅತ್ಯುನ್ನತ ಗುರಿಯನ್ನು ಹೊತ್ತು ಕಾರ್ಯ ಪ್ರಾರಂಭಿಸಿದ್ದ ಡಾಕ್ಟರ್ ಹೆಡಗೇವಾರರಿಗೆ ತಾವು ಹೊರಟಿದ್ದ ದಾರಿಯು ಸ್ಪಷ್ಟವಾಗಿ ತಿಳಿದಿತ್ತು. ಸಂಘವು ದೇಶದ ಎಲ್ಲ ಗ್ರಾಮಗಳಿಗೂ ತಲುಪಿ, ಎಲ್ಲ ಹಿಂದುಗಳನ್ನೂ ಸಂಘಟಿಸಲಿದೆ ಎಂಬ ಭವಿಷ್ಯದ ದೃಶ್ಯವನ್ನು ಅಂದೇ ಕಂಡಿದ್ದ ಹೆಡಗೇವಾರರು, ದೇಶದ ಎಲ್ಲರನ್ನೂ ಜೋಡಿಸುವ ಶಕ್ತಿಯಿರುವ, ವರ್ತಮಾನ ಭಾರತವನ್ನು ಪುರಾತನ ಸಂಸ್ಕೃತಿ-ಪರಂಪರೆಗಳೊಡನೆ ಬೆಸೆಯುವ ಸಾಮಥ್ರ್ಯವಿರುವ ಸಂಸ್ಕೃತ ಭಾಷೆಯಲ್ಲಿ ಸಂಘದ ಪ್ರಾರ್ಥನೆಯನ್ನು ರಚಿಸಿದರು. ಈ ರೀತಿ ಅವರು ಇಟ್ಟ ಪ್ರತಿಯೊಂದು ಹೆಜ್ಜೆಯೂ ದೃಢವಾಗಿತ್ತು, ಸಂಘಕಾರ್ಯವು ಶತಮಾನಗಳ ಕಾಲ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲೇ ಇತ್ತು.

Dr Keshav Baliram Hedgewar, RSS Founder

1925 ರಲ್ಲಿ ಬೀಜರೂಪದಲ್ಲಿ ಪ್ರಾರಂಭವಾದ ಸಂಘಕಾರ್ಯ ಇಂದು ವಿಶಾಲವೃಕ್ಷವಾಗಿದೆ. ದೇಶಾದ್ಯಂತ ಮಾತ್ರವಲ್ಲ ವಿಶ್ವಾದ್ಯಂತ ಪಸರಿಸಿದೆ. ಅದು ದೇಶದ ಎಲ್ಲ ಪ್ರದೇಶಗಳನ್ನೂ ಮುಟ್ಟಿರುವುದು ಮಾತ್ರವಲ್ಲ, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ಮಾಡುತ್ತಿದೆ. ಮತ್ತು ತಾನು ಕೆಲಸ ಮಾಡುತ್ತಿರುವ ಪ್ರತಿಯೊಂದು ಕ್ಷೇತ್ರದಲ್ಲೂ ಅದೇ ಅದ್ವಿತೀಯ ಸಂಘಟನೆಯೂ ಆಗಿದೆ. ಇಂದು ಸಂಘ ಸ್ಪರ್ಶಿಸದ ಕ್ಷೇತ್ರವೇ ಇಲ್ಲವೆಂದು ಹೇಳಿದರೆ ಉತ್ಪ್ರೇಕ್ಷೆ ಎನಿಸದು. ಇಂದು 39,000 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ 63,500 ಆರೆಸ್ಸೆಸ್ಸಿನ ಶಾಖೆಗಳು ನಿತ್ಯವೂ ನಡೆಯುತ್ತಿವೆ. 25,000 ಸ್ಥಳಗಳಲ್ಲಿ ವಾರಕ್ಕೊಮ್ಮೆ ಸೇರುವ ಮಿಲನ್ಗಳು ಮತ್ತು 28,500 ಸ್ಥಳಗಳಲ್ಲಿ ತಿಂಗಳಿಗೊಮ್ಮೆ ಸೇರುವ ಸಂಘಮಂಡಲಿಗಳು ನಡೆಯುತ್ತಿವೆ. ಇಲ್ಲಿ ಸಕ್ರಿಯವಾಗಿ ಭಾಗವಹಿಸುವವರ ಸಂಖ್ಯೆ ಹಲವು ಲಕ್ಷಗಳು. ಇದಕ್ಕಿಂತ ಹಲವು ಪಟ್ಟು ಹೆಚ್ಚಿನ ಸಂಖ್ಯೆಯ ಸ್ವಯಂಸೇವಕರು ಉತ್ಸವಗಳಲ್ಲಿ ಮತ್ತು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಪ್ರತಿವರ್ಷವೂ ಆರೆಸ್ಸೆಸ್ ನಡೆಸುವ ಪ್ರಶಿಕ್ಷಣ ಶಿಬಿರಗಳಲ್ಲಿ ಹತ್ತಾರು ಸಹಸ್ರ ಯುವಕರು ತರಬೇತಿ ಪಡೆದು ಕಾರ್ಯಕರ್ತರಾಗುತ್ತಿದ್ದಾರೆ. ಆರೆಸ್ಸೆಸ್ ವಿವಿಧ ಪ್ರಾಂತಗಳಲ್ಲಿ ನಡೆಸಿರುವ ಸಮಾವೇಶಗಳಲ್ಲಿ ಲಕ್ಷಾಂತರ ಜನ ಸ್ಥಳೀಯರು ಭಾಗವಹಿಸಿದ್ದಾರೆ. ಇವರಾರೂ ಹಣವನ್ನೋ ಅಥವಾ ಮತ್ಯಾವುದೋ ಆಮಿಷವನ್ನು ನೀಡಿ ಕರೆತರುವ ಬಾಡಿಗೆ ಜನರಲ್ಲ. ಅವರೆಲ್ಲರೂ ಸ್ವಂತದ ಹಣ ಖರ್ಚು ಮಾಡಿಕೊಂಡು, ಸಮಾವೇಶದ ಶುಲ್ಕವನ್ನು ನೀಡಿ, ಗಣವೇಶವನ್ನು ಕೊಂಡು, ಸ್ವಂತದ ಕೆಲಸ ಕಾರ್ಯಗಳಿಗೆ ರಜೆ ಹಾಕಿ ಬಂದು ಭಾಗವಹಿಸುವ ದೇಶಭಕ್ತ ಯುವಕರು.

ಇದೀಗ ದೇಶವು ಕರೋನಾ ಮಾರಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ದೇಶಾದ್ಯಂತ ಸಂಘದ ಸ್ವಯಂಸೇವಕರು ಲಕ್ಷಾಂತರ ಜನರಿಗೆ ಆಹಾರ-ಔಷಧಗಳನ್ನು ತಲುಪಿಸಿದ್ದಾರೆ. ಕರೋನಾ ಮಾರಿಗೆ ಬಲಿಯಾದವರ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರೇ ಹಿಂದೇಟು ಹಾಕುತ್ತಿರುವಾಗ, ಸಂಘದ ಸ್ವಯಂಸೇವಕರು ಮುಂದೆ ನಿಂತು ನೆರವೇರಿಸಿದ್ದಾರೆ. ಇದಾವುದೂ ಪ್ರಚಾರಕ್ಕಾಗಿ ಅಥವಾ ಯಾರನ್ನೋ ಒಲಿಸಿಕೊಳ್ಳುವುದಕ್ಕಾಗಿ ಮಾಡಿದ್ದಲ್ಲ. ನೈಜ ರಾಷ್ಟ್ರಭಕ್ತಿಯಿಂದ, ನಿಃಸ್ವಾರ್ಥ ಸೇವಾ ಮನೋಭಾವನೆಯಿಂದ ಮಾಡಿರುವಂತಹುದು. ಆರೆಸ್ಸೆಸ್ ಪ್ರೇರಣೆಯಿಂದ ಆರೆಸ್ಸೆಸ್ ಸ್ವಯಂಸೇವಕರು ಪ್ರಾರಂಭಿಸಿರುವ ಸಮಾಜಮುಖೀ ಸಂಸ್ಥೆಗಳು ನೂರಾರು. ಕಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ 1955ರಲ್ಲಿ ಪ್ರಾರಂಭವಾದ ಭಾರತೀಯ ಮಜ್ದೂರ್ ಸಂಘವು, ಒಂದು ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿದ್ದು, ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ. ಹಿಂದು ಧರ್ಮದ ರಕ್ಷಣೆಯ ಉದ್ದೇಶದಿಂದ 1964ರಲ್ಲಿ ಪ್ರಾರಂಭವಾದ ವಿಶ್ವ ಹಿಂದು ಪರಿಷದ್ ಹತ್ತಿರ ಹತ್ತಿರ ಒಂದು ಕೋಟಿ ಸದಸ್ಯರನ್ನು ಹೊಂದಿದೆ. ಕೇವಲ ಧಾರ್ಮಿಕ ಕಾರ್ಯವಷ್ಟೇ ಅಲ್ಲದೆ ಆರೋಗ್ಯ, ಶಿಕ್ಷಣ, ಇತ್ಯಾದಿ ಕ್ಷೇತ್ರಗಳಲ್ಲೂ ಅದು ಕಾರ್ಯ ಮಾಡುತ್ತಿದ್ದು, 1,00,000 ದಷ್ಟು ಸೇವಾ ಪ್ರಕಲ್ಪಗಳನ್ನು ನಡೆಸುತ್ತಿದೆ. ಅಯೋಧ್ಯೆಯ ರಾಮಜನ್ಮಸ್ಥಾನದಲ್ಲಿ ರಾಮಮಂದಿರ ಪುನರ್ನಿರ್ಮಾಣದ ಆಂದೋಳನದ ನೇತೃತ್ವವನ್ನು ವಹಿಸಿದ್ದೂ ವಿಶ್ವ ಹಿಂದು ಪರಿಷದ್. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿ, ಅವರೂ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸುವಂತೆ ಮಾಡುವ ಉದ್ದೇಶದಿಂದ 1949ರಲ್ಲಿ ಪ್ರಾರಂಭವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಇಂದು ದೇಶದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಅದು ದೇಶದ ಎಲ್ಲ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಸಕ್ರಿಯವಾಗಿದೆ ಮತ್ತು ಅಲ್ಲಿ ನಡೆಯುವ ಚುನಾವಣೆಗಳಲ್ಲಿ ಬಹುಮತದಿಂದ ಗೆದ್ದು ಬರುತ್ತಿದೆ. ಸಮಾಜದ ಮುಖ್ಯಪ್ರವಾಹದಿಂದ ದೂರವಾಗಿ, ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿರುವ ಕೋಟ್ಯಂತರ ವನವಾಸಿಗಳ ಮಧ್ಯೆ ಕೆಲಸ ಮಾಡುತ್ತಿರುವ ವನವಾಸಿ ಕಲ್ಯಾಣ ಆಶ್ರಮವು ಕೆಲಸ ಆರಂಭಿಸಿದ್ದು 1952 ರಲ್ಲಿ ಮಧ್ಯಪ್ರದೇಶದ ಜಶ್ಪುರದಲ್ಲಿ. ಅದೀಗ ದೇಶದ 447 ಜಿಲ್ಲೆಗಳಲ್ಲಿನ 52,323 ಗ್ರಾಮಗಳಲ್ಲಿ ಕಾರ್ಯ ಮಾಡುತ್ತಿದ್ದು 20,266 ಸೇವಾ ಪ್ರಕಲ್ಪಗಳನ್ನು ನಡೆಸುತ್ತಿದೆ. 926 ಜನ ಪೂರ್ಣಾವಧಿ ಕಾರ್ಯಕರ್ತರು ಸ್ವಂತದ ಎಲ್ಲವನ್ನೂ ತ್ಯಾಗಮಾಡಿ ವನವಾಸಿಗಳ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ. ಈ ರೀತಿಯ ಹಲವಾರು ಸಂಘಟನೆಗಳು ಆರೆಸ್ಸೆಸ್ ಪ್ರೇರಣೆಯಿಂದ ನಡೆಯುತ್ತಿದ್ದು, ಆಯಾ ಕ್ಷೇತ್ರಗಳಲ್ಲಿ ಜನಜಾಗೃತಿಯ ಕಾರ್ಯ ಮಾಡುತ್ತಿವೆ. ಆರೆಸ್ಸೆಸ್ ನೇತೃತ್ವದಲ್ಲಿ 1,50,000 ಸೇವಾ ಚಟುವಟಿಕೆಗಳು ನಡೆಯುತ್ತಿವೆ.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಸಂಘರ್ಷ ನಡೆಯಿತು. ಇನ್ನು ಕೆಲವೇ ದಿನಗಳಲ್ಲಿ ಅಲ್ಲೊಂದು ಭವ್ಯ ಮಂದಿರ ತಲೆಎತ್ತಿ ನಿಲ್ಲಲಿದೆ. ಈ ಗೆಲುವು ಸಾಧ್ಯವಾಗಿದ್ದು ಸಾಧುಸಂತರ ಮತ್ತು ಹಿಂದುಸಮಾಜದ ದೃಢಸಂಕಲ್ಪಕ್ಕೆ ಸಂಘ ಮತ್ತು ವಿಹಿಂಪಗಳು ಬೆಂಬಲವಾಗಿ ನಿಂತು, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದಲೇ ಎಂದು ಬೇರೆ ಹೇಳಬೇಕಾಗಿಲ್ಲ. ಆರೆಸ್ಸೆಸ್ ದೇಶಕ್ಕೆ ಇಬ್ಬರು ಪ್ರಧಾನಮಂತ್ರಿಗಳನ್ನು ನೀಡಿದೆ. ಅವರಿಬ್ಬರೂ ಸ್ವಾತಂತ್ರ್ಯೋತ್ತರ ಭಾರತದ ಅತ್ಯಂತ ಜನಪ್ರಿಯ ಪ್ರಧಾನಿಗಳೆಂದು ಸುಪ್ರಸಿದ್ಧರಾಗಿದ್ದಾರೆ. ಇಂದಿನ ನಮ್ಮ ರಾಷ್ಟ್ರಪತಿಗಳೂ ಆರೆಸ್ಸೆಸ್ ಸ್ವಯಂಸೇವಕರೇ. ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ಅನೇಕ ಮಂತ್ರಿಗಳು ಆರೆಸ್ಸೆಸ್ ಸ್ವಯಂಸೇವಕರು.

ಸಂಘದ ಕಾರ್ಯ ಇಂದು ಎಲ್ಲೆಡೆ ತಲುಪುತ್ತಿದೆ, ಎಲ್ಲರನ್ನೂ ತಲುಪುತ್ತಿದೆ. ಗ್ರಾಮ-ನಗರಗಳ, ಎಲ್ಲ ಮತ, ಜಾತಿ, ಪಂಥ, ಭಾಷೆ, ಪ್ರಾಂತಗಳಿಗೆ ಸೇರಿದ ಜನರು ಆರೆಸ್ಸೆಸ್‍ನಲ್ಲಿದ್ದಾರೆ. ಎಲ್ಲ ಅಂತರ, ಭೇದಗಳನ್ನು ಮೀರಿದ ‘ನಾವೆಲ್ಲ ಹಿಂದು’ ಎಂಬ ಭಾವದಿಂದಾಗಿ ಉಚ್ಚ-ನೀಚ ಭಾವವಾಗಲೀ, ಅಸ್ಪೃಷ್ಯತೆಯಂತಹ ಕುರೂಢಿಗಳಾಗಲೀ ಸಂಘದಲ್ಲಿ ಕಾಣಬರುವುದಿಲ್ಲ. ಜಾತಿ-ಜಾತಿಗಳ ಹೆಸರಿನಲ್ಲಿ, ಪ್ರಾಂತ-ಭಾಷೆಗಳ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಛಿದ್ರವಿಚ್ಛಿದ್ರವಾಗಿದ್ದ ಹಿಂದುಸಮಾಜದಲ್ಲಿ ಈಗ ನಾವೆಲ್ಲ ಹಿಂದುಗಳು ಎಂಬ ಅಭಿಮಾನ ಮೂಡುತ್ತಿರುವುದರಲ್ಲಿ ಸಂಘದ ಯೋಗದಾನವಿದೆ. ಹಿಂದು ಎಂದರೆ ಹೇಡಿ, ದುರ್ಬಲ. ಆತನ ಕೈಯ್ಯಲ್ಲಿ ಏನೂ ಸಾಧ್ಯವಿಲ್ಲ. ಹಿಂದುಗಳನ್ನು ಸಂಘಟನೆ ಮಾಡುವುದು ಅಸಾಧ್ಯ ಇತ್ಯಾದಿ ಮೂದಲಿಸುತ್ತಿದ ಕಾಲ ದೂರವಾಗಿದೆ. ಹಿಂದು ಸಂಘಟಿತನಾಗಬಲ್ಲ ಎಂಬುದು ಇಂದು ಸಿದ್ಧವಾಗಿದೆ. ದೇಶ-ಧರ್ಮಗಳಿಗೆ ಅಪಮಾನವಾದರೆ ಸಂಘಟಿತ ಹಿಂದುಸಮಾಜ ಸಹಿಸದು ಎನ್ನುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಭಾರತ ಇಡೀ ವಿಶ್ವಕ್ಕೆ ನೇತೃತ್ವ ನೀಡುವ ದಿನಗಳು ಬಹುದೂರವಿಲ್ಲ ಎಂದು ದೇಶವಾಸಿಗಳಿಗೆ ಅನ್ನಿಸುತ್ತಿರುವುದು ನಮ್ಮ ಸಮಾಜದಲ್ಲಿ ಮೂಡುತ್ತಿರುವ ಆತ್ಮವಿಶ್ವಾಸ, ಸ್ವಾಭಿಮಾನಗಳ ಸಂಕೇತ.

ಎಸ್. ಎಸ್. ನರೇಂದ್ರ ಕುಮಾರ್
ಲೇಖಕರು ಹಾಗೂ ‘ಆರೆಸ್ಸೆಸ್ 360’ ಪುಸ್ತಕದ ಅನುವಾದಕರು

Full text of Vijayadashami speech of 2020 by RSS Sarsanghachalak Dr. Mohan Bhagwat

$
0
0

Address by Param Poojaniya Sarsanghchalak Dr. Shri Mohan ji Bhagwat on the occasion of Sri Vijayadashami Utsav 2020

(Sunday, October 25, 2020)

English translation of the original Hindi Speech

We are all aware that this Vijayadashami the celebrations are restrained in terms of numbers. We are also aware of the cause. To prevent community spread of Corona virus social gatherings are restricted.

Since March the talk about Corona pandemic has shadowed all other talk about developments across the world. Many noteworthy incidents took place between the last Vijayadashami and now. With due observance of parliamentary procedure Article 370 was abrogated well before the Vijayadashami 2019. After Diwali, on November 9, 2019, the Hon. Supreme Court passed an unambiguous, verdict in the Ram Janmabhoomi case, thereby making a historical judgment. The exemplary patience and understanding of Bharatiya people regarding this judgment became evident in the restraint along with piety and festive fervour displayed on August 5 in Ayodhya at the bhoomipujan and shilanyas samaroh of  the  soon-to-be constructed Ram Mandir there. The Citizenship Amendment Act was lawfully passed in the Parliament as per the due constitutional process. This law envisaged expediting the process of granting citizenship to our brothers and sisters who face discrimination and persecution in some of the neighbouring countries and are displaced to seek refuge in our country. These countries have a history of religious persecution against minorities. This amendment in the Citizenship Act does not oppose any particular religious community. The constitutional provisions for granting citizenship to foreigners who come to Bharat continue to be the same. But those who wanted to oppose this new law misled our Muslim brothers by propagating a false notion that it was aimed at restricting the Muslim population. Opportunists took advantage of this delicate situation by unleashing organised violence and causing social unrest in the name of protests. As a consequence, a tense atmosphere was created in the country that put our communal harmony at stake. Even before something could be thought out and done to resolve the situation the Corona pandemic crept in and gradually took hold. In the background, the efforts by rioters and opportunists to reignite the conflict still continue. It is not making a mark on the collective consciousness or garnering headlines in publications other than the ones  that fuel such activities because of the overwhelming discussions of Corona in the media.

The scenario is common throughout the world. In comparison to many countries, Bharat stood strong in the face of adversity and dealt with the calamity effectively. There are some reasons why we escaped Corona debilitation that few countries could not. Our governing and administrative agencies promptly sprung up in action. They cautioned citizens, created emergency task forces and efficiently implemented control measures. The media monotonously aired news on just this issue. While this exercise created anatmosphere of disproportionate fear among the common man it also compelled the society to exercise caution and restrain by obeying rules. Government officials, medical practitioners practising different forms of medicine, police officers, municipality workers and cleaners displayed an extraordinary sense of responsibility by dedicatedly serving the infected patients. Maintaining social distance with their own family members, these warriors, risking their lives, embraced the death-scare posed by the virus and bravely stood at the frontline in this war round the clock. Citizens of the country too mobilised private resources and left no stone unturned in offering all possible help their fellow beings needed. While even in these testing times, the tendency to exploit the drawback of the needy to one’s own advantage surfaced here and there, the larger picture was that of sensitivity, cooperation and mutual trust between governmental administrative agencies and society. The women-folk also propelled in action with self-motivation. Those who were displaced owing to the pandemic or the ones who lost jobs and faced misfortune and hunger faced difficulties while remaining patient and tolerant all along. In fact, many anecdotes of people ignoring their own troubles and stepping up to help others came to the fore. Ferrying the state migrants back to their homelands, arranging for food and resting spots on the way, delivering food and medicines  at  the  doorstep  of  the  sick  or needy, great efforts were jointly made by the entire society to cater to such critical needs. By setting the example of unity and sensitivity, our society displayed a larger set of service activities in response to the quantum of the Herculean problem. Many of our traditional habits pertaining to cleanliness and hygiene, healthy lifestyle and strengthening immunity with the science of Ayurveda also proved to be useful in this period.

Homogeneity and unity of the society, deep compassion and cooperation during difficult times- all aspects that make up for what is called the social capital were experienced during this time, reflecting our centuries-old cultural ethos. For many, the kind of patience, collectivism and self-confidence experienced was a first since Independence. I respectfully bow to all the volunteers who are known and unknown, those who are alive and who laid their lives for service, medical practitioners, municipality workers and all other agents of service from different sections of the society. They are all admirable. Our sincere homage in the holy remembrance of all those who sacrificed their lives.

To emerge from the current scenario a different kind of Sewa initiative is required. Restarting educational institutions, compensating teachers, resending students to their schools and colleges while paying a fee for the same, these tasks are arduous. Schools that stopped receiving funds cannot afford to pay their teachers. Guardians who lost their jobs or shut businesses are in a fix as they do not have funds for their ward’s fee. We will have to devise service assistance to ensure the opening of schools, paying teachers’ salaries and students’ education. Displacement left many unemployed. Failing to find alternate sources of employment they are compelled to explore other sectors. Getting employment in a new sector mandates  prior training. These are the problems facing the displaced today. Finding a replacement for the migrant workers to complete the pending tasks that were abandoned halfway is becoming a challenge too. Therefore creating employment opportunities and providing training to the unskilled is essential. In cases where families are facing such deprivation, stress creeps up in the households. To prevent negative dispositions like crime, depression and suicide there is an extensive need of counselling and support services at this time.

Since March Sangh swayamsevaks are working to fill the gaps wherever needed in this difficult backdrop. They will also make wholehearted contributions in the new Sewa initiatives enumerated above. I am hopeful that other members of the society will also decipher the need for persistent long-term efforts and make needful contributions.

The world does not have a complete understanding of the virus. It is a transmutable pathogen that is rapidly communicable, but its virulence is low – this much we have come to understand. Therefore, safeguarding oneself from this pathogen for a longer time is essential. At the same time, while working to find the remedy to the social and economic challenges posed by it on our fellow beings will be the long-term focus. While we must not let fear cripple us, we need to proceed cautiously and strategically. With the social life nearing normalcy, complying with the rules and motivating others to do the same is our moral responsibility.

Many other facets of our society became apparent during the battle against this pandemic. A shift in favour of introspective thinking is trending across the world. The phrase “new-normal” often comes up in conversations. The corona pandemic has brought lives to a total and complete standstill, forcing curtailment of several activities that man went about mechanically earlier. An evaluation of the merits of those activities made it apparent that the superficial practices that had invaded human life were unnecessary, while the essential ones comprised the heart of life in these times. Some activities though watered down did not fully fade. Within one week of lockdown, we noticed a marked difference in the quality of the air we breathe. Water bodies like rivers, springs and ponds cleared up and clean waters began flowing out. Bird songs tinkled human memory again as the birds and other creatures were audible in neighbourhood parks and open urban spaces. In the rush towards amassing wealth and consuming more, we alienated ourselves from certain basic life functions which during this time of need fell back on our plate and added meaning and joy to life. We have become mindful of the value of some virtues. The corona pandemic has bestowed the wisdom to differentiate regular from irregular and eternal from temporary upon all of humanity. With many families actively deliberating sustainable lifestyles compatible with the time and space and the ways to transition into those, people have become acutely aware of the merit of cultural ethos. Humans have once again realised the importance of family systems and the need for harmonious coexistence with nature.

Whether these realisations are merely side effects of the pandemic breakout or has humanity actually shifted its stance in these matters, will be answered in time. However, one thing is clear that this calamity has played the role of that magnet which has attracted all human consciousness to the vital life values.

Until recently the philosophy of integrating the world on the basis of the market forces dominated human imagination but with the latest turn of events, the idea of safeguarding life and exercising international cooperation by promoting unique strengths and assets of each country is an idea that has started to take shape in the global mind. The philosophy of ‘Swadeshi’ has trumped once again. It is time to redefine these adages in view of the current Bhartiya context and to rebuild paths that will lead us back to our time- tested values and traditions.

China’s role in the breakout of this pandemic may be disputable but its misuse of their riches by unleashing terror on the borders of Bharat and boisterous efforts to invade our territories are well-known to the whole world. Bharatiya defence forces, government and the people remained unfazed and responded sharply to this attack. This example of a strong resolution, exercising self-respect and bravery has stunned China. Going further we must be watchful and remain firm. Even in the past, the world has time and again witnessed China’s expansionist attitude. Rising above China economically, strategically, in securing cooperative ties with our neighbours and at international relations is the only way to neutralise those demonic aspirations. The policies proposed by our leaders seem to be charting those very horizons. Sri Lanka, Bangladesh, Nepal and Myanmar (Bhramadesh)- such neighbouring countries have shared a friendly bond with us and are more or less aligned over issues of values and ethical code with us. We must now pace up our efforts to secure cooperative bonds with these countries. The impediments in this journey like the differences of opinions, conflicted issues and old grouses must be settled sooner than later.

We intend to be friendly with all. This is our nature. But mistaking our benevolence for weakness and attempts to disintegrate or weaken us by sheer brute force is unacceptable. Our reckless detractors should know this by now. The indestructible patriots of Bharat Mata and their formidable valour, leaders with a sense of self-respect and the indomitable ethical-patience of the citizens should have sent a loud and clear message to China. This must compel it to reform its attitude but if push comes to shove we will not fall short of alertness, firmness and readiness, this resolve is clear among our countrymen.

External threats to the country’s safety and sovereignty is not the only call for our vigilance. A  careful analysis of many of last year’s internal events also demand alertness, understanding and harmony in the society and preparedness of governmental agencies and national leadership. Push and pull for power on the part of those out of it is intrinsic to the democratic political process, however, exercising discretion to see political competition for what it is and not as a bloody battle between enemies is pivotal. Healthy competition is always welcome, but the competition that morphs into hatred, bitterness and animosity that weakens the social fabric is unwarranted. Forces that see opportunity in rifts among competitors, that wish to weaken and fragment Bharat, that have long projected our diversity as differences and insinuated people into unfortunate scrimmages over old disagreements resulting in formidable struggles are very much prevalent in the world and active in Bharat. They should not be given that opportunity by us. The government agencies should seek cooperation of people to immediately nab and severely punish the culprits if incidents of crime and violence continue to occur in the society despite measures to curtail those and attempts of total restrain on criminal and violent tendencies. We must see to it that our actions do not create any opportunities for them. To ensure this, our reactions to government decisions or expressions of discontent must heed national integrity. We should be sensitive towards people of all religions, regions, castes and linguistic backgrounds and conduct ourselves within constitutionally warranted limits. Unfortunately, those misaligned with or opposed to our socio-cultural values have, while professing to be the champions of democracy, constitution and secularism, continued to fool and confuse the people of our country. In his August 29, 1949 address to the Constituent Assembly, Revered Dr. Bhimrao Ambedkar used the phrase “grammar of anarchy” to describe the actions of such elements. We have to learn to identify such disguised elements and defuse their

conspiracies by alarming and alerting our brothers and sisters so that they can not be shepherded away by such predators.

To avoid this type of confusion about the Sangh, realising Sangh’s preference for a specific vocabulary and how it interprets certain popular terms is crucial. Hindutva is one such term. Its meaning has been distorted by appending a ritualistic connotation to it. Sangh does not use it to refer to this misconception. To us, it is the word expressing our identity along with the continuity of its spirituality based traditions and its entire wealth of value system in the land of Bharat. Therefore Sangh believes that it is the word applicable to all the 1.3 billion people who call themselves the sons and daughters of Bharatvarsh, whose everyday life is a striving toward an alignment with its moral and ethical code and who are proud of the heritage of their ancestors who successfully traversed the same spiritual landscape since time immemorial. Being oblivious to the true meaning of this term weakens the thread that integrates us with this country and society. It is for this reason that this term is the first target of castigation by those who instigate intergroup conflicts, who are bent on splitting our country and society. They by presenting as separate, our diversities which are traditionally accepted, respected and are a part of larger scope of Hindu philosophy in reality, try to convert them into a source of alienation or separatism. ‘Hindu’ is not the name of some sect or denomination, it is not a provincial conceptualisation, it is neither a single caste’s lineage nor the privilege of the speakers of a  specific  language.  It  is  that  psychological  common  denominator  whose  vast courtyard cradled human civilisation, that which honours and encompasses innumerable distinct identities. There may be some who have an objection in accepting this term. We do not object their using other words  if the content in their mind is the same. However, in the interest of the country’s integrity and security Sangh has over the years humbly assimilated the colloquial and the global interpretations of the term Hindu. When Sangh says Hindusthan is Hindu Rashtra it does not have any political or power centered concept in its mind. Hindutva is the essence of this Rashtra’s Swa’(self-hood). We are plainly acknowledging the selfhood of the country as Hindu because all our socio-cultural practices are directed by its principles with their spirit percolating in the personal, familial, professional and social life of each one of us. Circumambulating the emotional ambit of this view of life does not require giving up one’s faith, language, land or any other identity marker. It only mandates an abandonment of the quest for supremacy. One has only to be alert and keep away from the selfish and hateful forces who confuse and instigate people by showing them false dreams of supremacy, encourage radicalism and foster separatism.

The deplorable attempts to disintegrate the unity that has perpetually remained an inextricable part of the diversity of Bharat by making false promises and by creating hate amongst scheduled-castes, scheduled- tribes and the so called minorities of our country are underway. Members of this conspiratorial gang  instigate and promote slogans like “Bharat tere tukde honge” (Bharat will be disintegrated). An unusual blend of political interest, separatist and fundamentalist tendencies, a hatred of Bharat and a quest for global domination is working to dampen Bharatiya unity. We will have to patiently proceed with a deep understanding of the matter. While remaining free from the influence of these forces we must focus on integrating our society through peaceful means, in obeisance of our constitution. If we exercise self-control, remain balanced and keep each other’s best interest in mind then an environment of mutual trust can prevail which will aid in the resolution of old conflicts; while the mistrust that stems from contradictory behaviours

would make the solutions seem unattainable and problems unfathomable. Reactionary and fearful stance and unreasonable opposition lead to uncontrolled violence and the gulf separating the people widens.

To be able to increase the atmosphere of faith in each other and friendliness, restraint and patience we all need to accept and embrace the truth of our larger and shared identity. Our actions cannot waver in time following a political cost-benefit calibration. Bharatiya cannot be extricated from Bharat. All attempts at doing this have always failed, we have many testaments before us to prove so. It is the time to realise that our instinct for emancipation is nudging us all to integrate with a single sentiment. Acknowledgement of the fact that the emotional spirit of Bharat, its acceptance for and support to multiple belief systems and faiths, is a byproduct of the Hindu culture, traditions and Hindu practice of not just tolerance but acceptance and respect of all, is the need of the hour.

The word ‘Hindu,’ features in almost every statement of Sangh, yet it is being discussed here because several related terms have gained popularity in the recent past. ‘Swadeshi’ is one such word which is oft- discussed nowadays. The ‘Swa’ or ‘self’ here refers to the same Hindutva. That very eternal philosophy underlying our tolerant and accepting nature which was hailed by Swami Vivekananda on the land of America referring to all people as brothers and sisters, meaning parts of a single unit or family. Poet laureate, Shri Rabindra Nath Thakur also clearly emphasised a philosophical foundation for the Bharatiya revival based on this very concept in his essay ‘Swadeshi Samaj.’ Shri Aurobindo proclaimed it in his Uttarpara address. The introspections and contemplations conducted by our society after 1857 and the experiences of the exercises conducted by several national bodies are encased in the Preamble to our Constitution which embodies the same spirit of Bharat. That spirit or ‘swa’ should be the compass directing our intellectual brainstorming and plans of action. It should be the light that illuminates the directions, aspirations and expectations of our country’s collective consciousness. The results of our efforts in the physical plane and their consequences should be in accordance with this principle. Then and only then will Bharat qualify as self – reliant. Places for production, the workforce that is involved in the production process, economic benefits emanating from sales of the production and the rights of production must be in our national control. But this alone does not qualify as Swadeshi methodology. Shri Vinoba Bhave ji identified a combination of self-reliance and non-violence as Swadeshi. Late Shri Dattopant Thengadi ji claimed Swadeshi cuts beyond goods and services and stands for attaining a position of international cooperation by achieving national self- reliance, sovereignty and parity. So to achieve financial independence in the future and attain a position of international cooperation we are open to foreign investors and give relaxations to companies offering newer technologies, provided they engage on our terms and mutually agreeable conditions. But such a decision has to be based on mutual consensus.

In self-reliance, dependence on self is intended. Our vision decides our destination and our path. Even we attain a prime position by following the same wasteful exertions that the rest of the world is after, that will certainly be a courageous  victory.  But it will be in the absence  of the spirit and participation of  the ‘Swa’(Self). For instance, while designing our agricultural policy we should empower our farmer to control his seed banks, create manure, fertilisers and pesticides on his own or procure these from areas neighbouring his village. He should be educated about the art of storing and processing his produce and have

access to such facilities. We have a deep, extensive and ancient history of agriculture. Therefore the newer policies should aim to make our farmer aware of modern agricultural science and also enable him to blend that knowledge with time-tested, contextually relevant traditional knowledge. The policies should be such that a farmer should be able to use these research findings and sell his produce without getting trapped, either in the profit aimed interpretations of those findings or sponsored research by the corporate sector or under the pressure of the market forces and middlemen, only then such a policy will be compatible with the Bharatiya view and be a truly Swadeshi agrarian policy. It is likely that incorporating these changes immediately within the present agrarian and economic system might not be possible. In that case, the  policies should focus on creating a conducive environment to translate the suggested changes into reality.

Some positive steps in the direction of assimilating this ‘swa’ in our economic, agriculture, labour, manufacturing and education policy have been taken. A new education policy formed on the basis of extensive deliberations and dialogue has been declared and launched. Along with the entire educational  field, the Sangh has also welcomed it. “Vocal for local” is a great start in the exploration of the possibilities of Swadeshi. But, for these initiatives to be successfully implemented the process will have to be watched and monitored keenly to the finish. Therefore given these wide-ranging perspectives we will have to imbibe this spirit of ‘swa’ or self, only then we can move forward in the right direction.

Our Bharatiya thought does not endorse struggle as an essential ingredient of progress. Struggle is considered as a last resort for the elimination of injustice. The conceptualisation of progress here is based on cooperation and coordination. Therefore, the spirit of oneness is critical to actualising self-reliance in various aspects of life. Self-reliance then essentially implies overall well-being and upliftment of the whole nation through coordinated efforts and cooperation with each other, akin to interdependent organs of one body. A policy-making process where all concerned people and parties discuss and deliberate extensively and draw consentient conclusions fosters the spirit of oneness and trust among all. Open dialogue with all, drawing consensus through discussion, ensuring cooperation and resultant trust – this is the prescribed method for securing credibility and eminence among one’s family and community.

समानो मन्त्रः सममम ः समानी समानं मनः सहमित्तमेषाम् |

समानं मन्त्रममिमन्त्रये वः समानेन वो हमवषा जहोमम ||

Samaano mantrah samitih samanee Samaanam manah sahachittameshaam Samaanam mantramabhimantraye vah Sameenena vo havisha juhomi

( Let our speech be one; united our voices. May our minds be in union with the thoughts of the Wise. Sharing a common purpose; we worship as one.)

Fortunately, we can rely on and expect from the prevailing political leadership to engender the feeling of oneness and trust with regards to matters small and big among all the people. An administrative system connecting the society with the government has to be more sensitive and transparent to facilitate and accomplish this task in a better fashion. Prompt implementation of mutually agreed policies does not require massive changes and boosts the environment of cooperation and coordination. Remaining alert and

exercising total control over the implementation of proposed policies till the end-point is significant. Besides policy-formation promptness and transparency at execution also optimise policy rewards.

The need to decentralise agriculture and manufacturing sectors by supporting small and medium scale enterprises, creating employment opportunities, aiding the self-employed, initiating eco-friendly businesses and self-sufficient production units aiming to bolster the economic progress has drawn the attention of many intellectuals alongside the policy-makers of the country in this time of Corona. Those employed in these sectors from small-time and seasoned entrepreneurs to farmers are all eager to taste entrepreneurial success for our nation. The government will need to provide extra cover for them so they can attain world-class standards that will allow them to stand a competitive chance alongside other economic giants of the world. Along with the allocation of funds, its actual disbursement on the ground has to be ensured so that they can restart again after six months of the corona crisis.

With a progress-oriented mindset, the developmental path of the country whose destination complies with the culture and aspirations of our people will have to be delineated. After establishing consensus with a positive contribution from all views we must freeze the execution plans in letter and spirit. If it is ensured that the rewards of the developmental achievements percolate down to the most disadvantaged; if exploitation and extortion by middlemen and touts are eliminated; the producers and manufacturers have direct interface with the markets and the developmental schemes, only then our dreams can come true, otherwise dangers that cause failure are lurking around.

While all the suggestions made above are highly significant the collective resolve of a society is the preceptor and the foundation of the nation’s development. The consciousness that has prevailed in the aftermath of corona, viz, realisation of the true meaning of ‘self,’ spirit of oneness with all the people, the importance of cultural values and environmental awareness plus the need for remedial actions to restore its balance should not be disregarded by our society. We must not drop the momentum, lose sight of these indispensable values and fall back in a pattern of insensitive behaviour. Gradual and consistent practice of right conduct and responsible behaviours of an entire society alone can bring rewards. Starting with small incremental changes, conducting regular awareness initiatives can cause this behavioural shift. Each family can be a part of this movement. Once a week all family members can get together to jointly do some prayer and have homemade food followed by two to three hours of informal discussion. The above-mentioned subjects can be deliberated in those discussions as actionable items and small family level resolutions can be taken, which can further be reviewed in the next week’s discussion. The act of discussion in the family is paramount, newness or oldness of the subject/object notwithstanding, the outcomes of an investigation alone decide the usefulness and relevance of the issue. Our scriptures describe this method as-

सन्तः परीक्ष्यान्यतरद् भजन्ते मढः परप्रत्ययनेय बद्ु धः |

Santah pareekshyanyatarad bhajaate mudhah parapratyaneya buddhih

If we examine the subject matter holistically in the informal family setting, exercise discretion as to the relevance of the issue and by choice accept or reject a view, then the resulting behavioural changes will more likely be permanent.

In the beginning, matters of common concern like domestic arrangements, design of the dwellings, our family culture, long-standing customs and traditions can be discussed. Owing to everyone’s familiarity with environmental concerns, ways for total boycott of plastic, water conservation, increasing green cover by planting saplings of flowering plants, fruit trees and vegetables in our courtyards and terraces can be discussed and actionable plans jointly created. According to the time available and the needs, all of us spend money over personal and familial requirements every day. We can contemplate what amount of money and time we spend for our society on a day-to-day basis and how to go about doing it? Do we have friendly associations with people and families that belong to different castes and regions and speak varied languages? Have we mingled deeply- sharing meals and visiting homes of those acquaintances? To promote societal harmony these are vital discussion topics. Emphasis can be laid upon participation of our family in actual programs and initiatives, e.g. our family can contribute in Blood Donation, Eye Donation or help create awareness about its importance.

Through these minute undertakings, harmony, uprightness, patience, discipline and values-driven personal conduct can be cultivated. Consequently, our collective behaviour while in keeping with the civic discipline becomes that which augments mutual cooperation and harmony. If we work to raise the general level of consciousness of a common man and nurture his intrinsic spirit of oneness with Hindutva as the guiding force, if we make individual efforts for developmental progress with a deeper understanding of the structure of our country and acknowledge our interdependence to cooperate with other members of the society, if we have confidence in our collective strength to achieve any dream and set developmental goals rooted in our values then in the near future Bharatvarsh will emerge as the torchbearer for the rest of the world and come to be known as the Bharatvarsh that showed the path of peaceful and congenial progress to humanity- freedom and equality in the true sense of the word.

Behavioural conduct of such individuals and families will create an overall atmosphere of fraternity, meaningful action and lawful order in the whole country. Rashtriya Swayamsevak Sangh has been working to effect these changes directly in the society since 1925. Such an organised state is the natural state of a healthy society. Such an organised society is the precondition for the resurrection of this country that has become independent after the centuries-long darkness of invasions. Many great personalities have worked to build such a society. After independence, with this very goal in mind, our constitution was crafted in age- relevant codes of desired conduct and passed on to us. Sangh work only will ensure inculcating a clear vision to realise the objectives of our constitution, and the conduct of mutual harmony, the spirit of oneness and the sentiment of national interest are paramount. Swayamsevaks are sincerely, selflessly and dedicatedly involved in realising this goal. With an invitation that you all to be their fellow-workers in this campaign for upstart reconstruction, I end my address here.

ಆರೆಸ್ಸೆಸ್ ನ ಪರಮಪೂಜನೀಯ ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರ ವಿಜಯದಶಮಿ ಉತ್ಸವ ೨೦೨೦ ರ ಹಿಂದಿ ಭಾಷಣದ ಕನ್ನಡಾನುವಾದ

$
0
0

ಆರೆಸ್ಸೆಸ್ ನ ಪರಮಪೂಜನೀಯ ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರ ವಿಜಯದಶಮಿ ಉತ್ಸವ ೨೦೨೦ ರ ಹಿಂದಿ ಭಾಷಣದ ಕನ್ನಡಾನುವಾದ

ಭಾನುವಾರ, ಅಕ್ಟೊಬರ್ ೨೫ ೨೦೨೦

ಈ ವರ್ಷದ ವಿಜಯದಶಮಿಯ ಸಂದರ್ಭ ನಮಗೆಲ್ಲರಿಗೂ ತಿಳಿದಿರುವಂತೆ ಸಂಭ್ರಮದ ಸಂಖ್ಯೆಯ ದೃಷ್ಟಿಯಿಂದ ಕಡಿಮೆಯಾಗಿದೆ. ಅದಕ್ಕೆ ಕಾರಣವೇನೆಂಬುದನ್ನೂ ನಾವು ಅರಿತಿದ್ದೇವೆ, ಕೊರೋನಾ ವೈರಾಣುವಿನ ಸಾಮೂಹಿಕ ಹರಡುವಿಕೆಯನ್ನು ತಡೆಯಲೋಸುಗ ಸಾಮಾಜಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.

ಈ ವರ್ಷದ ಮಾರ್ಚಿ ತಿಂಗಳಿನಿಂದ ಕೊರೋನಾ ಸಾಂಕ್ರಾಮಿಕದ ಚರ್ಚೆ ವಿಶ್ವದೆಲ್ಲೆಡೆಯ ವಿದ್ಯಮಾನಗಳನ್ನು ಬದಿಗೊತ್ತಿದೆ. ಕಳೆದ ವರ್ಷದ ವಿಜಯದಶಮಿಯಿಂದ ಈ ವರ್ಷದ ವರೆಗೆ ಹಲವು ಗಮನಾರ್ಹ ಸಂಗತಿಗಳು ಘಟಿಸಿವೆ. ೨೦೧೯ರ ವಿಜಯದಶಮಿಗೆ ಮುನ್ನವೇ ವಿಧಿ ೩೭೦ರ ರದ್ದತಿ ಸಾಂವಿಧಾನಿಕ ರೀತಿಯಲ್ಲಿ ನಡೆಯಿತು. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ದೀಪಾವಳಿಯ ಪರ್ವದ ನಂತರ ೯ನೇ ನವೆಂಬರ್ ೨೦೧೯ರಂದು ರಾಮ ಜನ್ಮಭೂಮಿ ವಿವಾದದ ಕುರಿತಾಗಿ ಸ್ಪಷ್ಟವಾದ ಹಾಗೂ ಐತಿಹಾಸಿಕ ತೀರ್ಪುನ್ನು ನೀಡಿತು. ನ್ಯಾಯಾಲಯದ ತೀರ್ಪಿಗಾಗಿ ಭಾರತೀಯರು ಸಂಯಮದಿಂದ ಕಾದು ಆಗಸ್ಟ್ ೫ರಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣಕ್ಕಾಗಿ ಭೂಮಿಪೂಜೆ, ಶಿಲಾನ್ಯಾಸದ ಸಮಾರಂಭವನ್ನು ಭಕ್ತಿ ಹಾಗೂ ಹಬ್ಬದ ಸಡಗರದೊಂದಿಗೆ ಸಂಭ್ರಮಿಸಿದ್ದು ಗೋಚರವಾಯಿತು. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಯನ್ನು ನ್ಯಾಯಯುತವಾಗಿ ಜಾರಿಗೆ ತರಲಾಯಿತು. ನಮ್ಮ ನೆರೆಯ ದೇಶಗಳಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ನೀಡಲಾಗುವ ಕಿರುಕುಳ, ಉಪದ್ರವಗಳಿಗೆ ಹೆದರಿ ನಮ್ಮ ದೇಶಕ್ಕೆ ವಲಸೆ ಬಂದು ಇಲ್ಲಿ ಆಶ್ರಯ ಪಡೆಯುವವರಿಗೆ ಪೌರತ್ವ ನೀಡುವ ಕಾರ್ಯಕ್ಕೆ ಈ ಕಾಯಿದೆಯಿಂದ ಸಾಧ್ಯವಾಯಿತು. ಈ ನೆರೆಯ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವುದು ತಿಳಿದಿರುವ ವಿಷಯವೇ. ಪೌರತ್ವ ಕಾಯಿದೆಗೆ ಮಾಡಿರುವ ಈ ತಿದ್ದುಪಡಿ ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ವಿದೇಶಿಗರಿಗೆ ನಮ್ಮ ಸಂವಿಧಾನದ ಅಡಿಯಲ್ಲಿ ನೀಡಲಾಗುವ ಪೌರತ್ವದಲ್ಲಿ ಯಾವುದೇ ಬದಲಾವಣೆಯನ್ನು ಈ ತಿದ್ದುಪಡಿಯಿಂದ ಮಾಡಲಾಗಿಲ್ಲ. ಆದರೆ ಈ ಹೊಸ ಕಾನೂನನ್ನು ವಿರೋಧಿಸುವವರು ನಮ್ಮ ಮುಸಲ್ಮಾನ ಬ್ರಾತೃಗಳಲ್ಲಿ ವಿಷ ಬಿತ್ತುವ ಯೋಜನೆ ರೂಪಿಸಿ, ಮುಸಲ್ಮಾನ ಜನಸಂಖ್ಯೆಯನ್ನು ನಿಯಂತ್ರಿಸಲು ಈ ಕಾನೂನನ್ನು ರಚಿಸಲಾಗಿದೆ ಎಂಬ ಮಿಥ್ಯವನ್ನು ಸಾರಿದರು. ಪ್ರತಿಭಟನೆಯ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಕಾರ್ಯದಲ್ಲಿ ಅವಕಾಶವಾದಿಗಳು ಈ ಸೂಕ್ಷ್ಮ ಪರಿಸ್ಥಿತಿಯನ್ನು ಬಳಸಿಕೊಂಡರು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೂ ಅಪಾಯವುಂಟಾಯಿತು. ಈ ಸಮಸ್ಯೆಯ ಮೂಲವನ್ನು ಹುಡುಕಿ ಬಗೆಹರಿಸುವ ಮುನ್ನವೇ ಕೊರೋನಾ ಮಹಾಮಾರಿ ಒಳನುಸುಳಿ ಸಮಸ್ತ ನಿಯಂತ್ರಣ ತೆಗೆದುಕೊಂಡಿತು. ದಂಗೆಕೋರರು, ಅವಕಾಶವಾದಿಗಳು ಸಂಘರ್ಷದ ಕಿಚ್ಚನ್ನು ಹೊತ್ತಿಸಬೇಕೆಂದು ಹವಣಿಸುತ್ತಿದ್ದಾರೆ. ಸಾಮೂಹಿಕ ಪ್ರಜ್ಞೆಯಿಂದಾಗಿಯೋ ಅಥವಾ ಮಾಧ್ಯಮಗಳಲ್ಲಿ ಕರೋನಾದ ಅತಿಯಾದ ಚರ್ಚೆಗಳಿಂದಾಗಿ ಇಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ.

ವಿಶ್ವದೆಲ್ಲೆಡೆ ಒಂದೇ ರೀತಿಯ ಸನ್ನಿವೇಶವಿದೆ. ಭಾರತ ಉಳಿದ ದೇಶಗಳ ತುಲನೆಯಲ್ಲಿ ಕೊರೋನಾ ವಿಪತ್ತನ್ನು ಧೈರ್ಯವಾಗಿ ಎದುರಿಸಿ ಸಮರ್ಥವಾಗಿ ಮುನ್ನುಗ್ಗುತ್ತಿದೆ. ಕೊರೋನಾವನ್ನು ನಾವು ದುರ್ಬಲಗೊಳಿಸಿದ್ದುದರ ಹಿಂದೆ ಹಾಗೂ ಇತರ ದೇಶಗಳು ಆ ಸಾಧನೆ ಮಾಡದ ಹಿಂದೆ ಹಲವು ಕಾರಣಗಳಿವೆ. ನಮ್ಮ ಸರ್ಕಾರಿ, ಆಡಳಿತ ವರ್ಗಗಳು ಪ್ರಾಮಾಣಿಕ ಪ್ರಯತ್ನವನ್ನು ಮುಂದಿಟ್ಟು ಕಾರ್ಯ ನಿರ್ವಹಿಸಿದವು. ನಾಗರಿಕರನ್ನು ಎಚ್ಚರಿಸುತ್ತಾ, ತುರ್ತು ನಿಗಾ ಘಟಕಗಳನ್ನು ರಚಿಸುತ್ತಾ ಸಮರ್ಥವಾಗಿ ಕೊರೋನಾ ನಿಯಂತ್ರಿಸುವ ಕಾರ್ಯವನ್ನು ನಿರ್ವಹಿಸಿದರು. ಮಾಧ್ಯಮದವರು ಈ ಸುದ್ದಿಯನ್ನು ಸದಾ ಬಿತ್ತರಿಸುತ್ತಿದ್ದರು. ಜನಸಾಮಾನ್ಯರಿಗೆ ಇದರಿಂದಾಗಿ ಅಪಾರವಾದ ಭಯದ ವಾತಾವರಣ ಉಂಟಾಯಿತಾದರೂ ಸಮಾಜದ ನಿಯಮಗಳನ್ನು ಪಾಲಿಸುತ್ತಾ, ಸಂಯಮವನ್ನು ಕಾಪಾಡುತ್ತಾ, ಜಾಗರೂಕರಾಗತೊಡಗಿದರು. ಸರ್ಕಾರಿ ಸೇವೆಯಲ್ಲಿನ ಅಧಿಕಾರಿಗಳು, ಯಾವುದೇ ವೈದ್ಯಕೀಯ ಕ್ರಮವನ್ನು ಪಾಲಿಸುವ ವೈದ್ಯರು, ಆರಕ್ಷಕ ದಳದವರು, ಸ್ವಚ್ಛತಾಕರ್ಮಿಗಳು ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ಪಾಲಿಸಿ ರೋಗಿಗಳ ಸೇವೆಯಲ್ಲಿ ತೊಡಗಿದರು. ಸಾಮಾಜಿಕ ಅಂತರವನ್ನು ತಮ್ಮ ಕುಟುಂಬದವರೊಂದಿಗೂ ಪಾಲಿಸುತ್ತಾ, ಕೊರೋನಾ ಯೋಧರು ತಮ್ಮ ಜೀವವನ್ನು ಒತ್ತೆ ಇಟ್ಟು, ವೈರಾಣು ಒಡ್ಡುವ ಜೀವ ಭಯವನ್ನು ಎದುರಿಸಿ, ಧೈರ್ಯವಾಗಿ ನಿಂತು ದಿನವಿಡೀ ಕಾರ್ಯ ನಿರ್ವಹಿಸಿದರು. ದೇಶದ ನಾಗರಿಕರು ತಮ್ಮ ಕೈಲಾದ ಸಹಾಯವನ್ನು ನೀಡಿದರು. ಸಮಾಜದಲ್ಲಿನ ತಮ್ಮ ಬಂಧುಗಳಿಗೆ ನೆರವಾಗಿ ನಿಂತರು. ಇಂತಹ ಕಠಿಣ ಸಮಯದಲ್ಲಿ ತಮ್ಮ ಅವಕಾಶಕ್ಕಾಗಿ ದುರ್ಬಲರನ್ನು ಶೋಷಿಸುವ ಘಟನೆಗಳು ಅಲ್ಲಲ್ಲಿ ನಡೆದವಾದರೂ, ಸರ್ಕಾರಿ ಆಡಳಿತಾತ್ಮಕ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳ ನಡುವಿನ ಭಾವಾತಿರೇಕತೆ, ಸಹಕಾರ ಮತ್ತು ಪರಸ್ಪರ ನಂಬಿಕೆಗಳು ಎದ್ದುತೋರುತ್ತಿದ್ದವು. ದೇಶದ ಮಾತೆಯರು ಸ್ವ-ಪ್ರೇರಣೆಯಿಂದ ಸಮಾಜದ ಕಾರ್ಯದಲ್ಲಿ ಧುಮುಕಿದರು. ಮಹಾಮಾರಿಯಿಂದಾಗಿ ಹಸಿವಿನಿಂದ ಬಳಲುತ್ತಿದ್ದವರು, ಕೆಲಸ ಕಳೆದುಕೊಂಡವರು, ಸ್ಥಳಾಂತರಗೊಂಡವರು ತಾಳ್ಮೆ ಸಹಿಷ್ಣುತೆಯನ್ನು ಮೆರೆದರು. ತಮ್ಮ ಸಮಸ್ಯೆಗಳನ್ನು ಬದಿಗೊತ್ತಿ, ಇತರರ ಸಮಸ್ಯೆಯನ್ನು ಬಗೆಹರಿಸುವವರು ಮುನ್ನೆಲೆಗೆ ಬಂದ ಎಷ್ಟೋ ನಿದರ್ಶನಗಳಿವೆ. ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸುವುದು, ಅವರಿಗೆ ಆಹಾರ ವ್ಯವಸ್ಥೆ, ತಂಗಲು ವ್ಯವಸ್ಥೆ, ಆಹಾರ- ಔಷಧದ ಅವಶ್ಯಕತೆ ಇದ್ದವರಿಗೆ ಅದನ್ನು ಪೂರೈಸುವುದು ಸಾಗಿತು. ಏಕತೆ ಹಾಗೂ ಭಾವಾತಿರೇಕತೆಯ ಸಮರ್ಥ ಉದಾಹರಣೆಗಳನ್ನು ಇಂತಹ ಸೇವಾ ಕಾರ್ಯಗಳಲ್ಲಿ, ಸಮಾಜದ ಅತಿ ದೊಡ್ಡ ವಿಪತ್ತನ್ನು ಎದುರಿಸಲು ಎಲ್ಲರೂ ಮುಂದಾದರು. ಈ ಅವಧಿಯಲ್ಲಿ ನಮ್ಮ ಪಾರಂಪರಿಕ ಅಭ್ಯಾಸಗಳಾದ ಸ್ವಚ್ಛತೆ, ನೈರ್ಮಲ್ಯ, ಆರೋಗ್ಯಕರ ಜೀವನಶೈಲಿ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಆಯುರ್ವೇದ ವಿಜ್ಞಾನದ ಬಳಕೆ ಉಪಯುಕ್ತವೆಂದು ಸಾಬೀತಾದವು.

ಸಮಾಜದ ಏಕರೂಪತೆ ಮತ್ತು ಏಕತೆ, ಕಷ್ಟದ ಸಮಯದಲ್ಲಿ ಸಹಾನುಭೂತಿ ಮತ್ತು ಸಹಕಾರ; “ಸಾಮಾಜಿಕ ಬಂಡವಾಳ” ಎಂದು ಕರೆಯಲ್ಪಡುವ ಈ ಎಲ್ಲ ಅಂಶಗಳನ್ನು ಈ ಸಮಯದಲ್ಲಿ ಅನುಭವಿಸಿದಂತಾಗಿದೆ. ಇದು ನಮ್ಮ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ನೀತಿಯನ್ನು ಪ್ರತಿಬಿಂಬಿಸುತ್ತದೆ. ಅನೇಕರಿಗೆ, ಒಂದು ರೀತಿಯ ತಾಳ್ಮೆ, ಸಾಮೂಹಿಕತೆ ಮತ್ತು ಆತ್ಮವಿಶ್ವಾಸಗಳ ಅನುಭವ ಸ್ವಾತಂತ್ರ್ಯಾನಂತರದಲ್ಲಿ ಮೊದಲನೆಯದು. ಪರಿಚಿತ, ಅಪರಿಚಿತ ಸ್ವಯಂಸೇವಕರು, ಜೀವಂತವಾಗಿರುವವರು ಮತ್ತು ಸೇವೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದವರು, ವೈದ್ಯರು, ಸ್ವಚ್ಛತಾಕರ್ಮಿಗಳು ಮತ್ತು ಸಮಾಜದ ವಿವಿಧ ವರ್ಗದ ಎಲ್ಲರಿಗೂ ನಾನು ಗೌರವಯುತವಾಗಿ ನಮಸ್ಕರಿಸುತ್ತೇನೆ. ಅವರೆಲ್ಲರೂ ಶ್ಲಾಘನೆಗೆ ಪಾತ್ರರು. ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನಮ್ಮ ಪ್ರಾಮಾಣಿಕ ಗೌರವ ಸಲ್ಲಿಸೋಣ.

ಪ್ರಸ್ತುತ ಸನ್ನಿವೇಶದಿಂದ ಹೊರಬರಲು ವಿಭಿನ್ನ ರೀತಿಯ ಸೇವಾ ಉಪಕ್ರಮಗಳ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವುದು, ಶಿಕ್ಷಕರಿಗೆ ಸೂಕ್ತ ಪರಿಹಾರ ನೀಡುವುದು, ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಕಾಲೇಜುಗಳಿಗೆ ಶುಲ್ಕವನ್ನು ಪಾವತಿಸಿ, ಕಳುಹಿಸುವುದು – ಈ ಕಾರ್ಯಗಳು ಪ್ರಯಾಸಕರವಾಗಿರುತ್ತವೆ. ಆದಾಯವೇ ನಿಂತುಹೋದ ಶಾಲೆಗಳಿಗೆ ತಮ್ಮ ಶಿಕ್ಷಕರಿಗೆ ಸಂಬಳ ಪಾವತಿಸಲು ಸಾಧ್ಯವಾಗುತ್ತಿಲ್ಲ. ಉದ್ಯೋಗ ಕಳೆದುಕೊಂಡ ಅಥವಾ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸಿದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಒದಗಿಸುವುದು ಕಷ್ಟ. ಶಾಲೆಗಳ ಪ್ರಾರಂಭ, ಶಿಕ್ಷಕರ ಸಂಬಳ ಮತ್ತು ವಿದ್ಯಾರ್ಥಿಗಳ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಾವು ಸೇವಾ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಸ್ಥಳಾಂತರಗೊಂಡವರು ನಿರುದ್ಯೋಗಿಗಳಾಗಿದ್ದಾರೆ. ಪರ್ಯಾಯ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ. ನೂತನ ವಲಯದಲ್ಲಿ ಉದ್ಯೋಗ ಪಡೆಯುವುದು ಪೂರ್ವ ತರಬೇತಿಯನ್ನು ಕಡ್ಡಾಯಗೊಳಿಸುತ್ತದೆ. ಇಂದು ಸ್ಥಳಾಂತರಗೊಂಡವರು ಎದುರಿಸುತ್ತಿರುವ ಸಮಸ್ಯೆಗಳು ಇವು. ವಲಸೆ ಕಾರ್ಮಿಕರ ಸ್ಥಳಾಂತರದಿಂದಾಗಿ ಅಪೂರ್ಣವಾಗಿ ಉಳಿದ ಕಾರ್ಯವನ್ನು ಪೂರ್ಣಗೊಳಿಸಲು ಬದಲಿ ನೌಕರರನ್ನು ಹುಡುಕುವುದೂ ಒಂದು ಸವಾಲಾಗಿ ಪರಿಣಮಿಸುತ್ತಿದೆ. ಆದ್ದರಿಂದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಕೌಶಲ್ಯರಹಿತರಿಗೆ ತರಬೇತಿ ನೀಡುವುದು ಅತ್ಯಗತ್ಯ. ಕುಟುಂಬಗಳು ಅಂತಹ ಅಭಾವವನ್ನು ಎದುರಿಸುತ್ತಿರುವ ಸಂದರ್ಭಗಳಲ್ಲಿ, ಮನೆಗಳಲ್ಲಿ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಅಪರಾಧ, ಖಿನ್ನತೆ ಮತ್ತು ಆತ್ಮಹತ್ಯೆಯಂತಹ ನಕಾರಾತ್ಮಕ ನಿಲುವುಗಳನ್ನು ತಡೆಯಲು ಈ ಸಮಯದಲ್ಲಿ ವ್ಯಾಪಕವಾದ ಸಮಾಲೋಚನೆ ಮತ್ತು ಬೆಂಬಲ ಸೇವೆಗಳ ಅವಶ್ಯಕತೆಯಿದೆ.

ಮಾರ್ಚಿ ತಿಂಗಳಿಂದ ಸಂಘದ ಸ್ವಯಂಸೇವಕರು, ಈ ಕಷ್ಟದ ಸಂದರ್ಭದಲ್ಲಿ ಅಗತ್ಯವಿರುವ ಕಡೆಗಳಲ್ಲಿ ತಮ್ಮ ಯೋಗದಾನ ನೀಡುತ್ತಿದ್ದಾರೆ. ಮೇಲೆ ವಿವರಿಸಿದ ಹೊಸ ಸೇವಾ ಉಪಕ್ರಮಗಳಲ್ಲಿ ಅವರು ಪೂರ್ಣ ಹೃದಯದಿಂದ ತಮ್ಮ ಕೊಡುಗೆಗಳನ್ನು ಸಹ ನೀಡುತ್ತಾರೆ. ಸಮಾಜದ ಇತರ ಸದಸ್ಯರು ಈ ನಿರಂತರ ದೀರ್ಘಕಾಲೀನ ಪ್ರಯತ್ನಗಳ ಅಗತ್ಯವನ್ನು ಅರ್ಥಮಾಡಿಕೊಂಡು ತಮ್ಮ ಕೊಡುಗೆಗಳನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ.

ಜಗತ್ತಿಗೆ ವೈರಸ್ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದಾಗಿದೆ. ಇದು ಟ್ರಾನ್ಸ್‌ಮ್ಯೂಟಬಲ್ ರೋಗಕಾರಕವಾಗಿದ್ದು, ವೇಗವಾಗಿ ಸಂವಹನಗೊಳ್ಳುತ್ತದೆ; ಆದರೆ ಅದರ ಉಗ್ರತೆ ಕಡಿಮೆಯಾಗುತ್ತಿದೆ – ಇಷ್ಟನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ಈ ರೋಗಕಾರಕದಿಂದ ಹೆಚ್ಚು ಸಮಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದೇ ಸಮಯದಲ್ಲಿ, ಸಹಜೀವಿಗಳ ಮೇಲೆ ಅದು ನಡೆಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ದಾಳಿಗೆ ಪರಿಹಾರವನ್ನು ಕಂಡುಹಿಡಿಯುವ ಬಗ್ಗೆ ದೀರ್ಘಕಾಲೀನ ಗಮನವನ್ನು ಹರಿಸಬೇಕಿದೆ. ಭಯವು ನಮ್ಮನ್ನು ದುರ್ಬಲಗೊಳಿಸಲು ಬಿಡಬಾರದು, ನಾವು ಎಚ್ಚರಿಕೆಯಿಂದ ಮತ್ತು ಕಾರ್ಯತಂತ್ರ ರೂಪಿಸಿ ಮುಂದುವರೆಯಬೇಕಾಗಿದೆ. ಸಾಮಾಜಿಕ ಜೀವನವು ಸಾಮಾನ್ಯ ಸ್ಥಿತಿಗೆ ತಲುಪುವುದರೊಂದಿಗೆ, ಸಾಮಾಜಿಕ ನಿಯಮಗಳನ್ನು ಪಾಲಿಸುವುದು ಮತ್ತು ಇತರರನ್ನು ನಿಯಮಗಳಿಗೆ ಬದ್ಧರನ್ನಾಗಿಸಲು ಪ್ರೇರೇಪಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ.

ಈ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ನಮ್ಮ ಸಮಾಜದ ಇತರ ಹಲವು ಅಂಶಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು. ಪ್ರಪಂಚದಾದ್ಯಂತ ಆತ್ಮಾವಲೋಕನದ ಪರವಾದ ಬದಲಾವಣೆಯ ಪ್ರವೃತ್ತಿ ಆರಂಭಗೊಂಡಿದೆ. “ನ್ಯೂ-ನಾರ್ಮಲ್” ಎಂಬ ನುಡಿಗಟ್ಟು ಹೆಚ್ಚಾಗಿ ಸಂಭಾಷಣೆಗಳಲ್ಲಿ ಬರುತ್ತದೆ. ಕರೋನಾ ಸಾಂಕ್ರಾಮಿಕವು ಜೀವನವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ, ಮನುಷ್ಯನು ಯಾಂತ್ರಿಕವಾಗಿ ನಡೆಸುತ್ತಿದ್ದ ಚಟುವಟಿಕೆ, ಜೀವನಶೈಲಿಯನ್ನು ಮೊಟಕುಗೊಳಿಸುವಂತೆ ಒತ್ತಾಯಿಸಿದೆ. ಆ ಚಟುವಟಿಕೆಗಳ ಯೋಗ್ಯತೆಯ ಮೌಲ್ಯಮಾಪನವು ಮಾನವ ಜೀವನದ ಮೇಲೆ ಆಕ್ರಮಣ ಮಾಡಿದ ಮೇಲ್ನೋಟದ ಆಚರಣೆಗಳು ಅನಗತ್ಯವೆಂದು ಸ್ಪಷ್ಟವಾಯಿತು. ಅಗತ್ಯವಾದವುಗಳು ಮಾತ್ರ ಅವನ ಜೀವನಕ್ಕೆ ಹತ್ತಿರವಾಗತೊಡಗಿವೆ. ಇನ್ನು ಕೆಲವು ಚಟುವಟಿಕೆಗಳು ಸಂಪೂರ್ಣವಾಗಿ ಮಸುಕಾಗಲಿಲ್ಲವಾದರೂ ಕಡಿಮೆಯಾಗಿವೆ. ಲಾಕ್‌ಡೌನ್ ಮಾಡಿದ ಒಂದು ವಾರದೊಳಗೆ, ನಾವು ಉಸಿರಾಡುವ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ವ್ಯತ್ಯಾಸವನ್ನು ನಾವು ಗಮನಿಸಿದ್ದೇವೆ. ನದಿ, ಝರಿ ಮತ್ತು ಕೊಳಗಳಂತಹ ಜಲಮೂಲಗಳು ಶುದ್ಧ ನೀರನ್ನು ಒಯ್ಯಲಾರಂಭಿಸಿದವು. ನೆರೆಯ ಉದ್ಯಾನವನಗಳು ಮತ್ತು ನಗರ ಪ್ರದೇಶಗಳಲ್ಲಿ ಪಕ್ಷಿಗಳು ಮತ್ತು ಇತರ ಜೀವಿಗಳ ಇನಿ ದನಿ ಮಾನವರಿಗೆ ಸ್ಮರಣೆಯಾಗತೊಡಗಿದವು. ಸಂಪತ್ತನ್ನು ಒಟ್ಟುಗೂಡಿಸುವ ಮತ್ತು ಉಪಭೋಗದ ಭರಾಟೆಯಲ್ಲಿ, ನಾವು ಕೆಲವು ಮೂಲಭೂತ ಜೀವನ ಕಾರ್ಯಗಳಿಂದ ನಮ್ಮನ್ನು ನಾವು ದೂರ ಉಳಿಸಿಕೊಂಡಿದ್ದೆವು. ಅವು ನಮ್ಮ ಜೀವದಲ್ಲಿ ಮತ್ತೆ ಬಂದು ಅರ್ಥ , ಸಂತೋಷವನ್ನು ಸೇರಿಸಿವೆ. ಕೆಲವು ಸದ್ಗುಣಗಳ ಮೌಲ್ಯವನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಕರೋನಾ ಸಾಂಕ್ರಾಮಿಕವು ನಿಯಮಿತ-ಅನಿಯಮಿತ ಮತ್ತು ಶಾಶ್ವತ-ತಾತ್ಕಾಲಿಕಗಳ  ಪ್ರತ್ಯೇಕಿಸುವ ಬುದ್ಧಿವಂತಿಕೆಯನ್ನು ಮನುಷ್ಯರಿಗೆ ನೀಡಿದೆ. ಅನೇಕ ಕುಟುಂಬಗಳಲ್ಲಿ ಪರಿವರ್ತನೆಯ ಮಾರ್ಗಗಳೊಂದಿಗೆ ಹೊಂದಿಕೆಯಾಗುವ ಸುಸ್ಥಿರ ಜೀವನಶೈಲಿಯನ್ನು ಸಕ್ರಿಯವಾಗಿ ಚರ್ಚಿಸುತ್ತಿರುವುದರಿಂದ, ಸಾಂಸ್ಕೃತಿಕ ನೀತಿಯ ಅರ್ಹತೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದಾರೆ. ಕುಟುಂಬ ವ್ಯವಸ್ಥೆಗಳ ಮಹತ್ವ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆಯ ಅಗತ್ಯವನ್ನು ಮಾನವರು ಮತ್ತೊಮ್ಮೆ ಅರಿತುಕೊಂಡಿದ್ದಾರೆ.

ಈ ಸಾಕ್ಷಾತ್ಕಾರಗಳು ಕೇವಲ ಸಾಂಕ್ರಾಮಿಕದ ಅಡ್ಡಪರಿಣಾಮವೊ ಅಥವಾ ಮಾನವೀಯತೆ ಈ ವಿಷಯಗಳಲ್ಲಿ ತನ್ನ ನಿಲುವನ್ನು ಬದಲಿಸಿದೆಯೋ ಎಂಬುದನ್ನು ಸಮಯ ಉತ್ತರಿಸುತ್ತದೆ. ಇರಲಿ, ಸಾಂಕ್ರಾಮಿಕದ ಈ ವಿಪತ್ತು ಒಂದು ವಿಷಯವನ್ನು ಸ್ಪಷ್ಟಪಡಿಸಿ, ಆಯಸ್ಕಾಂತದ ಪಾತ್ರವಹಿಸಿ ಮಾನವ ಪ್ರಜ್ಞೆಯನ್ನು ಪ್ರಮುಖ ಜೀವನ ಮೌಲ್ಯಗಳಿಗೆ ಆಕರ್ಷಿಸಿದೆ ಎಂಬುದು ನಿರ್ವಿವಾದಾತೀತ.

ಇತ್ತೀಚಿನವರೆಗೂ ವ್ಯಾಪಾರಿ ಶಕ್ತಿಗಳ ಆಧಾರದ ಮೇಲೆ ಜಗತ್ತನ್ನು ಸಂಯೋಜಿಸುವ ತತ್ತ್ವಶಾಸ್ತ್ರವು ಮಾನವನ ಕಲ್ಪನೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಇತ್ತೀಚಿನ ಘಟನೆಗಳೊಂದಿಗೆ, ಪ್ರತಿ ದೇಶದ ವಿಶಿಷ್ಟ ಸಾಮರ್ಥ್ಯ ಮತ್ತು ಸ್ವತ್ತುಗಳನ್ನು ಉತ್ತೇಜಿಸುವ ಮೂಲಕ ಜೀವನವನ್ನು ಕಾಪಾಡುವ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಚಲಾಯಿಸುವ ಕಲ್ಪನೆಯು ಪ್ರಾರಂಭವಾಗಿದೆ. ‘ಸ್ವದೇಶಿ’ ಸಿದ್ಧಾಂತವು ಮತ್ತೊಮ್ಮೆ ಪ್ರಕಾಶಿಸುತ್ತಿದೆ. ಪ್ರಸ್ತುತ ಭಾರತೀಯ ಸನ್ನಿವೇಶದ ದೃಷ್ಟಿಯಿಂದ ಈ ಸಿದ್ಧಾಂತವು ಪುನರ್ ವ್ಯಾಖ್ಯಾನಿಸಲು ಮತ್ತು ನಮ್ಮ ಪೂರ್ವ ಮೌಲ್ಯ, ಸಂಪ್ರದಾಯಗಳಿಗೆ ನಮ್ಮನ್ನು ಕರೆದೊಯ್ಯುವ ಮಾರ್ಗಗಳನ್ನು ಪುನರ್ನಿರ್ಮಿಸುವ ಸಮಯ ಇದಾಗಿದೆ.

ಈ ಸಾಂಕ್ರಾಮಿಕ ರೋಗದ ಹರಡುವಿಕೆಯಲ್ಲಿ ಚೀನಾ ದೇಶದ ಪಾತ್ರದ ಬಗ್ಗೆ ಚರ್ಚೆಗಳು ಇವೆಯಾದರೂ ಭಾರತದ ಗಡಿಗಳಲ್ಲಿ ಭಯೋತ್ಪಾದನೆಯನ್ನು ಬಿಚ್ಚಿಡುವ ಮೂಲಕ ಮತ್ತು ನಮ್ಮ ಪ್ರದೇಶದ ಮೇಲೆ ಆಕ್ರಮಣ ಮಾಡುವ ಉತ್ಸಾಹಭರಿತ ಪ್ರಯತ್ನಗಳ ಮೂಲಕ ಅವರ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುವುದು ಇಡೀ ಜಗತ್ತಿಗೆ ಚಿರಪರಿಚಿತವಾಗಿದೆ. ಭಾರತೀಯ ರಕ್ಷಣಾ ಪಡೆಗಳು, ಸರ್ಕಾರ ಮತ್ತು ಜನರು ಈ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. ಬಲವಾದ ನಿರ್ಣಯದ ಈ ಉದಾಹರಣೆ, ಸ್ವಾಭಿಮಾನ ಮತ್ತು ಧೈರ್ಯವನ್ನು ಚಲಾಯಿಸುವುದು ಚೀನಾವನ್ನು ದಿಗ್ಭ್ರಮೆಗೊಳಿಸಿದೆ. ನಾವು ಜಾಗರೂಕರಾಗಿರಬೇಕು ಮತ್ತು ದೃಢವಾಗಿರಬೇಕು. ಹಿಂದಿನಿಂದಲೂ ಸಹ, ಚೀನಾ ವಿಸ್ತರಣಾವಾದಿ ಮನೋಭಾವವನ್ನು ಮೈಗೂಡಿಸಿಕೊಂಡಿತ್ತು. ನಮ್ಮ ನೆರೆಹೊರೆಯವರೊಂದಿಗೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸಹಕಾರಿ ಸಂಬಂಧಗಳನ್ನು ಭದ್ರಪಡಿಸುವಲ್ಲಿ, ಆರ್ಥಿಕವಾಗಿ, ಕಾರ್ಯತಂತ್ರ ರೂಪಿಸಿ ಚೀನಾಕ್ಕಿಂತ ಮೇಲೇರುವುದು ಹಾಗೂ ಅವರ ರಾಕ್ಷಸೀ ಆಕಾಂಕ್ಷೆಗಳನ್ನು ತಟಸ್ಥಗೊಳಿಸುವುದೇ ಏಕೈಕ ಮಾರ್ಗವಾಗಿದೆ. ನಮ್ಮ ನಾಯಕರು ಪ್ರಸ್ತಾಪಿಸಿದ ನೀತಿಗಳು ಆ ಪರಿಧಿಯನ್ನು ಗುರುತಿಸುತ್ತಿವೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ (ಬ್ರಹ್ಮದೇಶ) – ಹೆಚ್ಚಿನ ನೆರೆಯ ರಾಷ್ಟ್ರಗಳು ನಮ್ಮೊಂದಿಗೆ ಸ್ನೇಹ ಸಂಬಂಧವನ್ನು ಹಂಚಿಕೊಂಡಿವೆ ಮತ್ತು ನಮ್ಮೊಂದಿಗೆ ಮೌಲ್ಯಗಳು ಮತ್ತು ನೈತಿಕ ಸಂಹಿತೆಯ ವಿಷಯಗಳ ಬಗ್ಗೆ ಹೆಚ್ಚು ಕಡಿಮೆ ಹೊಂದಾಣಿಕೆ ಮಾಡಿಕೊಂಡಿವೆ. ಈ ದೇಶಗಳೊಂದಿಗೆ ನಮ್ಮ ಬಂಧುತ್ವವನ್ನು ವೃದ್ಧಿಗೊಳಿಸುವ ನಮ್ಮ ಪ್ರಯತ್ನಗಳನ್ನು ನಾವು ಈಗ ವೇಗಗೊಳಿಸಬೇಕು. ಅಭಿಪ್ರಾಯಗಳ ಭಿನ್ನಾಭಿಪ್ರಾಯಗಳು, ಸಂಘರ್ಷದ ಸಮಸ್ಯೆಗಳು ಮತ್ತು ಹಳೆಯ ವೈಮನಸ್ಸುಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಬೇಕು.

ನಾವು ಎಲ್ಲರೊಂದಿಗೂ ಸ್ನೇಹದಿಂದಿರಲು ಉದ್ದೇಶಿಸಿಸುತ್ತೇವೆ. ಇದು ನಮ್ಮ ಸ್ವಭಾವ. ಆದರೆ ಅದನ್ನು ದೌರ್ಬಲ್ಯವೆಂದು ಪರಿಗಣಿಸಿ ವಿವೇಚನಾರಹಿತ ಶಕ್ತಿಯಿಂದ ನಮ್ಮನ್ನು ವಿಘಟಿಸುವ ಅಥವಾ ದುರ್ಬಲಗೊಳಿಸುವ ಪ್ರಯತ್ನಗಳು ಸ್ವೀಕಾರಾರ್ಹವಲ್ಲ. ನಮ್ಮ ವಿರೋಧಿಗಳು ಇದನ್ನು ಈಗ ತಿಳಿದುಕೊಳ್ಳಬೇಕು. ಭಾರತ ಮಾತೆಯ ಅವಿನಾಶಿ ದೇಶಭಕ್ತರು ಮತ್ತು ಅವರ ಅಸಾಧಾರಣ ಶೌರ್ಯ, ಸ್ವಾಭಿಮಾನದ ಪ್ರಜ್ಞೆ ಮತ್ತು ನಮ್ಮ ನಾಗರಿಕರ ಅದಮ್ಯ ನೈತಿಕತೆ, ತಾಳ್ಮೆ ಹೊಂದಿದ ನಾಯಕರ ಗುಣ ಚೀನಾಕ್ಕೆ ಬಲವಾದ ಹಾಗೂ ಸ್ಪಷ್ಟವಾದ ಸಂದೇಶವನ್ನು ಕಳುಹಿಸಿರುತ್ತದೆ. ಇದು ತನ್ನ ಮನೋಭಾವವನ್ನು ಸುಧಾರಿಸಿಕೊಳ್ಳಲು ಎಚ್ಚರಿಕೆಯ ಘಂಟೆ. ನಾವು ಜಾಗರೂಕರಾಗಿ, ದೃಢತೆ ಮತ್ತು ಸನ್ನದ್ಧತೆಯಿಂದ ಮುನ್ನುಗ್ಗುತ್ತೇವೆ ಎಂಬ ಸಂಕಲ್ಪವು ನಮ್ಮ ದೇಶವಾಸಿಗಳಲ್ಲಿ ಸ್ಪಷ್ಟವಾಗಿದೆ.

ದೇಶದ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ಬಾಹ್ಯ ಬೆದರಿಕೆಗಳ ಬಗ್ಗೆ ನಮ್ಮ ಜಾಗರೂಕತೆಯಷ್ಟೇ ಸಾಲದು. ಕಳೆದ ವರ್ಷದ ಅನೇಕ ಆಂತರಿಕ ಘಟನೆಗಳ ವಿಶ್ಲೇಷಣೆ ಮತ್ತು ರಾಷ್ಟ್ರೀಯ ನಾಯಕತ್ವದ ಸಿದ್ಧತೆಯ ಬಗ್ಗೆಯೂ ಗಮನವಿರಿಸಬೇಕು. ಸರಕಾರದಿಂದ ಹೊರಗುಳಿದವರ ಅಧಿಕಾರದ ಹಪಾಹಪಿ, ರಾಜಕೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿರುತ್ತದೆ. ಆರೋಗ್ಯಕರ ಸ್ಪರ್ಧೆಯು ಎಂದಿಗೂ ಸ್ವಾಗತಾರ್ಹ. ಆದರೆ ದ್ವೇಷ, ಕಹಿಯಿಂದ ಸಾಮಾಜಿಕ ಸ್ವಾಸ್ಥ್ಯವನ್ನು ದುರ್ಬಲಗೊಳಿಸುವ ಸ್ಪರ್ಧೆಯು ಅನಗತ್ಯವಾಗಿರುತ್ತದೆ. ಪ್ರತಿಸ್ಪರ್ಧಿಗಳ ನಡುವಿನ ಬಿರುಕುಗಳಲ್ಲಿ ಅವಕಾಶವನ್ನು ನೋಡುವ ಪಕ್ಷಗಳು, ಭಾರತವನ್ನು ದುರ್ಬಲಗೊಳಿಸಲು ಮತ್ತು ಛಿದ್ರಗೊಳಿಸಲು ಬಯಸುತ್ತಿರುತ್ತವೆ. ದೀರ್ಘಕಾಲದಿಂದಲೂ, ನಮ್ಮಲ್ಲಿನ ವೈವಿಧ್ಯತೆಯನ್ನು ಭಿನ್ನಾಭಿಪ್ರಾಯಗಳೆಂದು ಬಿಂಬಿಸುತ್ತಾ ಜನರನ್ನು ಪ್ರಚೋದನೆಗೆ ಎಡೆಮಾಡಿವೆ. ಇದರ ಪರಿಣಾಮವಾಗಿ ಭೀಕರ ಹೋರಾಟಗಳು ಭಾರತದಲ್ಲಿ ಸಕ್ರಿಯವಾಗಿವೆ. ನಮ್ಮಿಂದ ಈ ಅವಕಾಶ ಅವರಿಗೆ ಸಲ್ಲದು. ಅಪರಾಧ ಮತ್ತು ಹಿಂಸಾಚಾರದ ಘಟನೆಗಳನ್ನು ಕಡಿತಗೊಳಿಸುವ ಕ್ರಮಗಳು ಮತ್ತು ಅಪರಾಧ ಮತ್ತು ಹಿಂಸಾತ್ಮಕ ಪ್ರವೃತ್ತಿಗಳ ಮೇಲೆ ಸಂಪೂರ್ಣ ನಿಗ್ರಹದ ಪ್ರಯತ್ನಗಳ ಹೊರತಾಗಿಯೂ ಸಮಾಜದಲ್ಲಿ ಅಪರಾಧ ಮತ್ತು ಹಿಂಸಾಚಾರದ ಘಟನೆಗಳು ಮುಂದುವರಿದರೆ ಅಪರಾಧಿಗಳನ್ನು ತಕ್ಷಣ ಬಂಧಿಸಲು ಮತ್ತು ಕಠಿಣ ಶಿಕ್ಷೆ ವಿಧಿಸಲು ಸರ್ಕಾರಿ ಸಂಸ್ಥೆಗಳು ನಾಗರಿಕರ ಸಹಕಾರವನ್ನು ಪಡೆಯಬೇಕು. ನಮ್ಮ ಕಾರ್ಯ ಚಟುವಟಿಕೆ, ವರ್ತನೆಗಳು ಇಂತಹ ಗುಂಪುಗಳಿಗೆ ಯಾವುದೇ ಅವಕಾಶಗಳನ್ನು ಸೃಷ್ಟಿಸುವುದಿಲ್ಲ ಎಂದು ನಾವು ನೋಡಿಕೊಳ್ಳಬೇಕಿದೆ. ಇದನ್ನು ಖಚಿತಪಡಿಸಿಕೊಳ್ಳಲು, ಸರ್ಕಾರದ ನಿರ್ಧಾರಗಳಿಗೆ ಅಥವಾ ಅಸಮಾಧಾನದ ಅಭಿವ್ಯಕ್ತಿಗಳಿಗೆ ನಮ್ಮ ಪ್ರತಿಕ್ರಿಯೆಗಳು ರಾಷ್ಟ್ರೀಯ ಏಕತೆಯನ್ನು ಗಮನದಲ್ಲಿಟ್ಟುಕೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಾವು ಎಲ್ಲಾ ಧರ್ಮಗಳು, ಪ್ರದೇಶಗಳು, ಜಾತಿಗಳು ಮತ್ತು ಭಾಷಾ ಹಿನ್ನೆಲೆಯ ಜನರ ಬಗ್ಗೆಯೂ ಗೌರವ ಆದರ, ಸೂಕ್ಷ್ಮತೆಯ ಜೊತೆಗೆ, ಅವರೆಲ್ಲರೊಂದಿಗೆ ಸಾಂವಿಧಾನಿಕ ಮಿತಿಯಲ್ಲಿ ನಡೆದುಕೊಳ್ಳಬೇಕು. ದುರದೃಷ್ಟವಶಾತ್, ನಮ್ಮ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಅರಿಯದ ಅಥವಾ ತಪ್ಪಾಗಿ ಅರ್ಥೈಸಿಕೊಂಡವರು ತಮ್ಮನ್ನು ತಾವು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯತೀತತೆಯ ಠೇಕೆದಾರರು ಎಂದು ಹೇಳಿಕೊಳ್ಳುತ್ತಲೇ ನಮ್ಮ ದೇಶದ ಜನರನ್ನು ಮರುಳು ಮಾಡಿ ಗೊಂದಲಕ್ಕೀಡು ಮಾಡುತ್ತಿದ್ದಾರೆ. ಆಗಸ್ಟ್ 29, 1949 ರಲ್ಲಿ ಸಂವಿಧಾನ ಸಭೆಯ ಭಾಷಣದಲ್ಲಿ, ಪೂಜ್ಯ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅಂತಹ ಅಂಶಗಳ ಕ್ರಿಯೆಗಳನ್ನು ವಿವರಿಸಲು “ಅರಾಜಕತೆಯ ವ್ಯಾಕರಣ” (grammar of anarchy) ಎಂಬ ಪದವನ್ನು ಬಳಸಿದ್ದಾರೆ. ಅಂತಹ ಛದ್ಮವೇಷದ ವ್ಯಕ್ತಿ, ವ್ಯಕ್ತಿತ್ವಗಳನ್ನು ಗುರುತಿಸಿ ಮತ್ತು ಅವುಗಳ ಪ್ರಭಾವವನ್ನು ತಗ್ಗಿಸಿ ನಮ್ಮ ಸಹೋದರ ಸಹೋದರಿಯರನ್ನು ರಕ್ಷಿಸುವ ಅಗತ್ಯ ಇಂದು ನಮ್ಮ ಮುಂದಿದೆ.

ಸಂಘದ ಬಗ್ಗೆ ಈ ರೀತಿಯ ಗೊಂದಲವನ್ನು ತಪ್ಪಿಸಲು, ಒಂದು ನಿರ್ದಿಷ್ಟ ಶಬ್ದಕೋಶಕ್ಕೆ ಸಂಘದ ಆದ್ಯತೆಯನ್ನು ಅರಿತುಕೊಳ್ಳುವುದು ಮತ್ತು ಕೆಲವು ಜನಪ್ರಿಯ ಪದಗಳನ್ನು ಅದು ಹೇಗೆ ಅರ್ಥೈಸುತ್ತದೆ ಎಂಬುದು ತಿಳಿದುಕೊಳ್ಳುವುದು ನಿರ್ಣಾಯಕವಾಗುತ್ತದೆ. 'ಹಿಂದುತ್ವ' ಎಂಬುದು ಅಂತಹ ಒಂದು ಪದವಾಗಿದೆ. ಇದಕ್ಕೆ ಒಂದು ಧಾರ್ಮಿಕ ಅರ್ಥವನ್ನು ಸೇರಿಸುವ ಮೂಲಕ ಅದರ ಅರ್ಥವನ್ನು ವಿರೂಪಗೊಳಿಸಲಾಗಿದೆ. ಈ ತಪ್ಪು ಕಲ್ಪನೆಯನ್ನು ಉಲ್ಲೇಖಿಸಲು ಸಂಘ ಹಿಂದುತ್ವವನ್ನು ಬಳಸುವುದಿಲ್ಲ. ಇದು ನಮ್ಮ ಅಸ್ಮಿತೆಯನ್ನು ವ್ಯಕ್ತಪಡಿಸುವ ಪದವಾಗಿದ್ದು, ಅದರ ಆಧ್ಯಾತ್ಮಿಕತೆ ಆಧಾರಿತ ಸಂಪ್ರದಾಯಗಳ ನಿರಂತರತೆ ಮತ್ತು ಭಾರತ ಭೂಮಿಯಲ್ಲಿನ ಮೌಲ್ಯ ವ್ಯವಸ್ಥೆಯ ಸಂಪೂರ್ಣ ಸಂಪತ್ತು ಎಂದು ನಾವು ನಂಬಿದ್ದೇವೆ. ಆದ್ದರಿಂದ ತಾವು ಭರತವರ್ಷದ ಪುತ್ರ ಪುತ್ರಿಯರು ಎಂದು ಕರೆದುಕೊಳ್ಳುವ ಎಲ್ಲಾ ೧೩೦ ಕೋಟಿ ಜನರಿಗೆ ಇದು ಅನ್ವಯಿಸುತ್ತದೆ ಎಂದು ಸಂಘ ನಂಬುತ್ತದೆ. ಅಲ್ಲದೆ, ಅವರ ದೈನಂದಿನ ಜೀವನದಲ್ಲಿ ಸನಾತನ ನೈತಿಕತೆಯನ್ನು ಒಗ್ಗೂಡಿಸಿಕೊಂಡು, ಅವರ ಪೂರ್ವಜರ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೋ ಅವರಿಗೂ ಹಿಂದುತ್ವ ಅನ್ವಯವಾಗುತ್ತದೆ. ಈ ಪದದ ಸರಿಯಾದ ಅರ್ಥವನ್ನು ಮರೆತುಬಿಡುವುದು ಈ ದೇಶ ಮತ್ತು ಸಮಾಜದೊಂದಿಗೆ ನಮ್ಮನ್ನು ಸಂಯೋಜಿಸುವ ಎಳೆಯನ್ನೇ ದುರ್ಬಲಗೊಳಿಸುತ್ತದೆ. ಈ ಕಾರಣಕ್ಕಾಗಿಯೇ ಈ ಪದವನ್ನು ಅಂತರ-ಗುಂಪು ಸಂಘರ್ಷಗಳನ್ನು ಪ್ರಚೋದಿಸುವವರು, ನಮ್ಮ ದೇಶ ಮತ್ತು ಸಮಾಜವನ್ನು ವಿಭಜಿಸಲು ಮುಂದಾಗಿರುವವರ ಮೊದಲ ಗುರಿಯಾಗಿದೆ. ಅವರು ತಮ್ಮನ್ನು ಪ್ರತ್ಯೇಕವಾಗಿ ಪ್ರಸ್ತುತಪಡಿಸಿಕೊಳ್ಳುವ ಮೂಲಕ, ಸಾಂಪ್ರದಾಯಿಕವಾಗಿ ಅಂಗೀಕರಿಸಲ್ಪಟ್ಟ, ಗೌರವಿಸಲ್ಪಟ್ಟ ಮತ್ತು ವಾಸ್ತವದಲ್ಲಿ ಹಿಂದೂ ತತ್ತ್ವಶಾಸ್ತ್ರದ ಬಹು ದೊಡ್ಡ ವ್ಯಾಪ್ತಿಯ ಭಾಗವಾಗಿರುವ ನಮ್ಮ ವೈವಿಧ್ಯತೆಗಳನ್ನು ಪರಕೀಯತೆ ಅಥವಾ ಪ್ರತ್ಯೇಕತಾವಾದದ ಮೂಲವಾಗಿ ಪರಿವರ್ತಿಸಲು ಪ್ರಯತ್ನಿಸುತ್ತವೆ. ‘ಹಿಂದೂ’ ಎನ್ನುವುದು ಕೆಲವು ಪಂಥ ಅಥವಾ ಪಂಗಡದ ಹೆಸರಲ್ಲ, ಇದು ಪ್ರಾಂತೀಯ ಪರಿಕಲ್ಪನೆಯಲ್ಲ, ಇದು ಒಂದೇ ಜಾತಿಯ ವಂಶಾವಳಿಯಲ್ಲ ಅಥವಾ ನಿರ್ದಿಷ್ಟ ಭಾಷೆಯನ್ನು ಮಾತನಾಡುವವರ ಸವಲತ್ತು ಅಲ್ಲ. ಹಿಂದುತ್ವವು ತನ್ನ ವಿಶಾಲವಾದ ಪ್ರಾಂಗಣದಲ್ಲಿ ಮಾನವ ನಾಗರಿಕತೆಗೆ ತನ್ನ ತೊಟ್ಟಿಲಲ್ಲಿ ಜನ್ಮ ನೀಡಿ ಬೆಳೆಸಿದ ಆ ಸಾಮಾನ್ಯ ಉಪಾಧಿ. ಹಿಂದುತ್ವವು ಅಸಂಖ್ಯಾತ ವಿಭಿನ್ನ ಅಸ್ಮಿತೆಗಳನ್ನು ಗೌರವಿಸುವಂಥದ್ದು. ಈ ಪದವನ್ನು ಸ್ವೀಕರಿಸುವಲ್ಲಿ ಆಕ್ಷೇಪಣೆ ಹೊಂದಿರುವ ಕೆಲವರು ಇರಬಹುದು. ಅವರ ಮನಸ್ಸಿನಲ್ಲಿರುವ ವಿಷಯ ಒಂದೇ ಆಗಿದ್ದರೆ ಅವರು ಬೇರೆ ಪದಗಳನ್ನು ಬಳಸುವುದನ್ನು ನಾವು ಆಕ್ಷೇಪಿಸುವುದಿಲ್ಲ. ಆದಾಗ್ಯೂ, ದೇಶದ ಸಮಗ್ರತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸಂಘವು ಹಿಂದೂ ಪದದ ಆಡುಮಾತಿನ ಮತ್ತು ಜಾಗತಿಕ ವ್ಯಾಖ್ಯಾನಗಳನ್ನು ವಿನಮ್ರವಾಗಿ ಒಟ್ಟುಗೂಡಿಸಿದೆ. ಸಂಘವು ‘ಹಿಂದೂಸ್ಥಾನವು ಹಿಂದೂ ರಾಷ್ಟ್ರ’ ಎಂದು ಹೇಳಿದಾಗ ಅದರ ಮನಸ್ಸಿನಲ್ಲಿ ಯಾವುದೇ ರಾಜಕೀಯ ಅಥವಾ ಅಧಿಕಾರ ಕೇಂದ್ರಿತ ಪರಿಕಲ್ಪನೆ ಇಟ್ಟುಕೊಂಡಿರುವುದಿಲ್ಲ. ಈ ರಾಷ್ಟ್ರದ ‘ಸ್ವ’ (ಸ್ವತ್ವ)ದ ಸಾರಾಂಶವೇ ಹಿಂದುತ್ವ. ನಾವು ದೇಶದ ಸ್ವಾಭಿಮಾನವನ್ನು ಹಿಂದೂ ಎಂದು ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಿದ್ದೇವೆ ಏಕೆಂದರೆ ನಮ್ಮ ಎಲ್ಲ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು ಅದರ ತತ್ವಗಳಿಂದ ನಿರ್ದೇಶಿಸಲ್ಪಟ್ಟಿವೆ, ಅವುಗಳಲ್ಲಿ ಪ್ರತಿಯೊಬ್ಬರ ವೈಯಕ್ತಿಕ, ಕೌಟುಂಬಿಕ, ವೃತ್ತಿಪರ ಮತ್ತು ಸಾಮಾಜಿಕ ಜೀವನದಲ್ಲಿ ಅವರ ಚೈತನ್ಯವು ಹುದುಗಿದೆ. ಜೀವನದ ಈ ದೃಷ್ಟಿಕೋನದ ಭಾವನಾತ್ಮಕ ಮಹತ್ವಾಕಾಂಕ್ಷೆಯನ್ನು ಸುತ್ತುವರಿಯಲು ಒಬ್ಬರ ನಂಬಿಕೆ, ಭಾಷೆ, ಭೂಮಿ ಅಥವಾ ಇನ್ನಾವುದೇ ಅಸ್ಮಿತೆಯನ್ನು ಗುರುತಿಸುವ ಅಗತ್ಯವಿಲ್ಲ. ಇದು ಪ್ರಾಬಲ್ಯದ ಅನ್ವೇಷಣೆಯನ್ನು ತ್ಯಜಿಸುವುದನ್ನು ಮಾತ್ರ ಆದೇಶಿಸುತ್ತದೆ. ಒಬ್ಬರು ಜಾಗರೂಕರಾಗಿರಬೇಕು ಮತ್ತು ಪ್ರಾಬಲ್ಯದ ಸುಳ್ಳು ಕನಸುಗಳನ್ನು ತೋರಿಸುವುದರ ಮೂಲಕ ಜನರನ್ನು ಗೊಂದಲಕ್ಕೀಡುಮಾಡುವ ಮತ್ತು ಪ್ರಚೋದಿಸುವ ಸ್ವಾರ್ಥಿ ಮತ್ತು ದ್ವೇಷಪೂರಿತ ಶಕ್ತಿಗಳಿಂದ ದೂರವಿರಬೇಕು, ಆಮೂಲಾಗ್ರತೆಯನ್ನು ಪ್ರೋತ್ಸಾಹಿಸಬೇಕು ಮತ್ತು ಪ್ರತ್ಯೇಕತಾವಾದವನ್ನು ಬೆಳೆಸಕೂಡದು.

ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತ್ತು ಪರಿಶಿಷ್ಟ-ಜಾತಿ, ಪರಿಶಿಷ್ಟ-ಬುಡಕಟ್ಟು ಮತ್ತು ನಮ್ಮ ದೇಶದ ಅಲ್ಪಸಂಖ್ಯಾತರಲ್ಲಿ ದ್ವೇಷವನ್ನು ಉಂಟುಮಾಡುವ ಮೂಲಕ ಭಾರತದ ವೈವಿಧ್ಯತೆಯಲ್ಲಿನ ಏಕತೆಯನ್ನು ವಿಭಜಿಸುವ ಶೋಚನೀಯ ಪ್ರಯತ್ನಗಳು ನಡೆಯುತ್ತಿವೆ. ಈ ಪಿತೂರಿ ತಂಡದ ಸದಸ್ಯರು “ಭಾರತ್ ತೇರೆ ತುಕ್ಡೆ ಹೊಂಗೆ” (ಭಾರತವನ್ನು ತುಂಡರಿಸುತ್ತೇವೆ ) ಎಂಬ ಘೋಷಣೆಗಳನ್ನು ಪ್ರಚೋದಿಸಿ ಉತ್ತೇಜಿಸುತ್ತಿದ್ದಾರೆ. ರಾಜಕೀಯ ಆಸಕ್ತಿ, ಪ್ರತ್ಯೇಕತಾವಾದಿ ಮತ್ತು ಮೂಲಭೂತವಾದಿ ಪ್ರವೃತ್ತಿಗಳು, ಭಾರತ ಮೇಲಿನ ದ್ವೇಷ ಮತ್ತು ಜಾಗತಿಕ ಪ್ರಾಬಲ್ಯದ ಅನ್ವೇಷಣೆಯ ಅಸಾಮಾನ್ಯ ಸಮ್ಮಿಶ್ರಣ ಭಾರತೀಯ ಏಕತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿವೆ. ಈ ವಿಷಯದ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ನಾವು ತಾಳ್ಮೆಯಿಂದ ಮುಂದುವರಿಯಬೇಕಾಗುತ್ತದೆ. ಈ ಶಕ್ತಿಗಳ ಪ್ರಭಾವದಿಂದ ದೂರ ಉಳಿಯುವ ಜೊತೆಗೆ, ನಮ್ಮ ಸಂವಿಧಾನದ ಬಗ್ಗೆ ಭಕ್ತಿ ಬೆಳೆಸಿಕೊಂಡು ಸಮಾಜವನ್ನು ಶಾಂತಿಯುತ ವಿಧಾನಗಳ ಮೂಲಕ ಸಂಘಟಿಸುವತ್ತ ಗಮನ ಹರಿಸಬೇಕು. ನಾವು ಸ್ವಯಂ ನಿಯಂತ್ರಣವನ್ನು ನಿರ್ವಹಿಸಿದರೆ, ಪರಸ್ಪರರ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡರೆ ಪರಸ್ಪರ ನಂಬಿಕೆಯ ವಾತಾವರಣವು ಮೇಲುಗೈ ಸಾಧಿಸಬಹುದು. ಇದು ಹಳೆಯ ಸಂಘರ್ಷಗಳ ಪರಿಹಾರಕ್ಕೆ ಸಹಾಯ ಮಾಡುತ್ತದೆ; ವಿರೋಧಾಭಾಸದ ವರ್ತನೆಗಳಿಂದ ಉಂಟಾಗುವ ಅಪನಂಬಿಕೆ ಪರಿಹಾರಗಳನ್ನು ಸಾಧಿಸಲಾಗದ ಮತ್ತು ಸಮಸ್ಯೆಗಳನ್ನು ಅಗ್ರಾಹ್ಯವೆಂದು ತೋರಿಸುತ್ತದೆ. ಪ್ರತಿಗಾಮಿ ಮತ್ತು ಭಯಭೀತ ನಿಲುವು ಮತ್ತು ಅವಿವೇಕದ ವಿರೋಧವು ಅನಿಯಂತ್ರಿತ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಮತ್ತು ಜನರನ್ನು ಬೇರ್ಪಡಿಸುವ ಕಂದಕ ವಿಸ್ತರಿಸುತ್ತದೆ.

ಒಬ್ಬರನ್ನೊಬ್ಬರು ನಂಬುವ ವಾತಾವರಣವನ್ನು ಹೆಚ್ಚಿಸಲು ಸ್ನೇಹಪರತೆ, ಸಂಯಮ ಮತ್ತು ತಾಳ್ಮೆ ನಮ್ಮ ಅತಿ ದೊಡ್ಡ ಅಸ್ಮಿತೆ. ಈ ಸತ್ಯವನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಮತ್ತು ಸ್ವೀಕರಿಸಬೇಕು. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಗೂ ಅದು ಸೃಷ್ಟಿಸುವ ಹೊಂದಾಣಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಭಾರತೀಯರನ್ನು ಭಾರತದಿಂದಲೇ ಹೊರಹಾಕಲಾಗುವುದಿಲ್ಲ. ಇದನ್ನು ಮಾಡುವ ಎಲ್ಲಾ ಪ್ರಯತ್ನಗಳು ಹಿಂದೆಯೂ ವಿಫಲವಾಗಿವೆ, ಅದನ್ನು ಸಾಬೀತುಪಡಿಸಲು ನಮ್ಮ ಮುಂದೆ ಅನೇಕ ಸಾಕ್ಷ್ಯಗಳಿವೆ. ಬಹು ನಂಬಿಕೆ ವ್ಯವಸ್ಥೆಗಳು ಮತ್ತು ಬಹು ನಂಬಿಕೆಗಳ ಸ್ವೀಕಾರ ಹಿಂದೂ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಹಲವು ಸಂಪ್ರದಾಯಗಳ ಬಗ್ಗೆ ಸಹಿಷ್ಣುತೆ ಮಾತ್ರವಲ್ಲದೆ, ಅವನ್ನು ಸ್ವೀಕರಿಸಿ, ಎಲ್ಲಕ್ಕೂ ಗೌರವ ಸೂಚಿಸುವುದನ್ನು ಭಾರತದ ಭಾವನಾತ್ಮಕ ಮನೋಭಾವ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಸಂಘದ ಪ್ರತಿಯೊಂದು ಮಾತಿನಲ್ಲೂ ‘ಹಿಂದೂ’ ಎಂಬ ಪದವಿದೆ, ಅಲ್ಲದೆ ಹಲವಾರು ತತ್ಸಂಬಂಧಿತ ಪದಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನುಗಳಿಸಿವೆ. ‘ಸ್ವದೇಶಿ’ ಎಂಬುದು ಅಂತಹ ಒಂದು ಪದವಾಗಿದ್ದು, ಈ ದಿನಗಳಲ್ಲಿ ಇದನ್ನು ಹೆಚ್ಚಾಗಿ ಚರ್ಚಿಸಲಾಗಿದೆ. ಇಲ್ಲಿರುವ ‘ಸ್ವ’ ಅಥವಾ ‘ಸ್ವಯಂ’ ಅದೇ ಹಿಂದುತ್ವವನ್ನು ಸೂಚಿಸುತ್ತದೆ. ಅಮೆರಿಕದ ಭೂಮಿಯಲ್ಲಿ ಸ್ವಾಮಿ ವಿವೇಕಾನಂದರು ಪ್ರಶಂಸಿಸಿದ ನಮ್ಮ ಸಹಿಷ್ಣು ಮತ್ತು ಸ್ವೀಕಾರಾರ್ಹ ಸ್ವಭಾವಕ್ಕೆ ಆಧಾರವಾಗಿರುವ ಆ ಶಾಶ್ವತ ತತ್ವಶಾಸ್ತ್ರವು ಎಲ್ಲ ಜನರನ್ನು ಸಹೋದರರು ಮತ್ತು ಸಹೋದರಿಯರು ಎಂದು ಉಲ್ಲೇಖಿಸುತ್ತದೆ, ಅಂದರೆ ಒಂದೇ ಘಟಕ ಅಥವಾ ಕುಟುಂಬದ ಭಾಗಗಳು. ಕವಿ, ಶ್ರೀ ರವೀಂದ್ರ ನಾಥ್ ಠಾಕೂರ್ ಅವರು ಭಾರತದ ಪುನರುಜ್ಜೀವನಕ್ಕೆ ಒಂದು ತಾತ್ವಿಕ ಅಡಿಪಾಯವನ್ನು ತಮ್ಮ ‘ಸ್ವದೇಶಿ ಸಮಾಜ’ ಎಂಬ ಪ್ರಬಂಧದಲ್ಲಿ ಸ್ಪಷ್ಟವಾಗಿ ಒತ್ತಿ ಹೇಳಿದರು. ಶ್ರೀ ಯೋಗಿ ಅರವಿಂದರು ಇದನ್ನು ತಮ್ಮ ಉತ್ತರಪಾರಾದ ಭಾಷಣದಲ್ಲಿ ಘೋಷಿಸಿದರು. 1857 ರ ನಂತರ ನಮ್ಮ ಸಮಾಜವು ನಡೆಸಿದ ಆತ್ಮಾವಲೋಕನ ಮತ್ತು ಆಲೋಚನೆಗಳು ಮತ್ತು ಹಲವಾರು ರಾಷ್ಟ್ರೀಯ ಸಂಸ್ಥೆಗಳು ನಡೆಸಿದ ಕಸರತ್ತುಗಳ ಅನುಭವಗಳು ನಮ್ಮ ಸಂವಿಧಾನದ ಮುನ್ನುಡಿಯಲ್ಲಿ ಲಗತ್ತಿಸಲಾಗಿದೆ, ಅದು ಭಾರತದ ಅದೇ ಮನೋಭಾವವನ್ನು ಒಳಗೊಂಡಿದೆ. ಈ ‘ಸ್ವ’ ಎಂಬ ಚೇತನ ನಮ್ಮ ಬೌದ್ಧಿಕ ಕ್ರಿಯೆಯ ಯೋಜನೆಗಳನ್ನು ನಿರ್ದೇಶಿಸುವ ದಿಕ್ಸೂಚಿಯಾಗಿರಬೇಕು. ಇದು ನಮ್ಮ ದೇಶದ ಸಾಮೂಹಿಕ ಪ್ರಜ್ಞೆಯ ನಿರ್ದೇಶನಗಳು, ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಬೆಳಗಿಸುವ ಬೆಳಕಾಗಿರಬೇಕು. ಭೌತಿಕ ಸಮತಲದಲ್ಲಿ ನಮ್ಮ ಪ್ರಯತ್ನಗಳ ಫಲಿತಾಂಶಗಳು ಮತ್ತು ಅವುಗಳ ಪರಿಣಾಮಗಳು ಈ ತತ್ವಕ್ಕೆ ಅನುಗುಣವಾಗಿರಬೇಕು. ಆಗ ಮಾತ್ರ ಭಾರತ ಸ್ವಾವಲಂಬಿಯಾಗಿ ಅರ್ಹತೆ ಪಡೆಯುತ್ತದೆ. ಉತ್ಪಾದನೆಗೆ ಸ್ಥಳಗಳು, ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿರುವ ಕಾರ್ಯಪಡೆ, ಉತ್ಪಾದನೆಯ ಮಾರಾಟದಿಂದ ಹೊರಹೊಮ್ಮುವ ಆರ್ಥಿಕ ಲಾಭಗಳು ಮತ್ತು ಉತ್ಪಾದನೆಯ ಹಕ್ಕುಗಳು ನಮ್ಮ ರಾಷ್ಟ್ರೀಯ ನಿಯಂತ್ರಣದಲ್ಲಿರಬೇಕು. ಆದರೆ ಇದು ಕೇವಲ ಸ್ವದೇಶಿ ವಿಧಾನವಾಗಿ ಅರ್ಹತೆ ಪಡೆಯುವುದಿಲ್ಲ. ಶ್ರೀ ವಿನೋಬಾ ಭಾವೆ ಜಿ ಅವರು ಸ್ವಾವಲಂಬನೆ ಮತ್ತು ಅಹಿಂಸೆಯ ಸಂಯೋಜನೆಯನ್ನು ಸ್ವದೇಶಿ ಎಂದು ಗುರುತಿಸಿದ್ದಾರೆ. ದಿವಂಗತ ಶ್ರೀ ದತ್ತೋಪಂತ್ ಠೇಂಗಡಿ ಜಿ ಅವರು ಸರಕು ಮತ್ತು ಸೇವೆಗಳನ್ನು ಮೀರಿ ರಾಷ್ಟ್ರೀಯ ಸ್ವಾವಲಂಬನೆ, ಸಾರ್ವಭೌಮತ್ವ ಮತ್ತು ಸಮಾನತೆಯನ್ನು ಸಾಧಿಸುವ ಮೂಲಕ ಅಂತರರಾಷ್ಟ್ರೀಯ ಸಹಕಾರದ ಸ್ಥಾನವನ್ನು ‘ಸ್ವದೇಶೀ’ ಗಳಿಸಬಹುದು ಎಂದು ಹೇಳಿದ್ದಾರೆ. ಆದ್ದರಿಂದ ಭವಿಷ್ಯದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಮತ್ತು ಅಂತಾರಾಷ್ಟ್ರೀಯ ಸಹಕಾರದ ಸ್ಥಾನವನ್ನು ಪಡೆಯಲು ನಾವು ವಿದೇಶಿ ಹೂಡಿಕೆದಾರರಿಗೆ ಮುಕ್ತರಾಗಿದ್ದೇವೆ ಮತ್ತು ಹೊಸ ತಂತ್ರಜ್ಞಾನಗಳನ್ನು ನೀಡುವ ಕಂಪನಿಗಳಿಗೆ ಅವಕಾಶ ನೀಡುತ್ತೇವೆ, ಆದರೆ ಅವರು ನಮ್ಮ ನಿಯಮಗಳು ಮತ್ತು ಪರಸ್ಪರ ಒಪ್ಪುವ ಪರಿಸ್ಥಿತಿಗಳಲ್ಲಿ ತೊಡಗಿಸಿಕೊಳ್ಳಬೇಕು. ಜೊತೆಗೆ ಅಂತಹ ನಿರ್ಧಾರವು ಪರಸ್ಪರ ಒಮ್ಮತವನ್ನು ಆಧರಿಸಿರಬೇಕು.

ಸ್ವಾವಲಂಬನೆಯಲ್ಲಿ, “ಸ್ವಯಂ” ಎಂಬುದು ಮುಖ್ಯ ಹಾಗೂ ಅದನ್ನೇ ಉದ್ದೇಶಿಸಲಾಗಿದೆ. ನಮ್ಮ ದೃಷ್ಟಿ ನಮ್ಮ ಗಮ್ಯಸ್ಥಾನ ಮತ್ತು ನಮ್ಮ ಮಾರ್ಗವನ್ನು ನಿರ್ಧರಿಸುತ್ತದೆ. ಪ್ರಪಂಚದ ಉಳಿದ ಭಾಗಗಳ ನಂತರದ ಅದೇ ವ್ಯರ್ಥ ಶ್ರಮವನ್ನು ಅನುಸರಿಸುವ ಮೂಲಕ ನಾವು ಪ್ರಧಾನ ಸ್ಥಾನವನ್ನು ಪಡೆಯುತ್ತೇವೆ, ಅದು ಖಂಡಿತವಾಗಿಯೂ ಧೈರ್ಯಶಾಲಿ ವಿಜಯವಾಗಿರುತ್ತದೆ. ಆದರೆ ಅದು ‘ಸ್ವ’ (ಸ್ವಯಂ) ನ ಚೈತನ್ಯ ಮತ್ತು ಭಾಗವಹಿಸುವಿಕೆಯಲ್ಲಿರುತ್ತದೆ. ಉದಾಹರಣೆಗೆ, ನಮ್ಮ ಕೃಷಿ ನೀತಿಯನ್ನು ವಿನ್ಯಾಸಗೊಳಿಸುವಾಗ ನಾವು ನಮ್ಮ ರೈತನಿಗೆ ಬಿತ್ತಲು, ಬೀಜ ದೊರಕಿಸುವುದು, ಗೊಬ್ಬರ, ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸ್ವಂತವಾಗಿ ರಚಿಸಲು ಅಥವಾ ಅವನ ಹಳ್ಳಿಯ ನೆರೆಹೊರೆಯ ಪ್ರದೇಶಗಳಿಂದ ಸಂಗ್ರಹಿಸಲು ಸದೃಢಗೊಳಿಸಬೇಕು. ತನ್ನ ಉತ್ಪನ್ನಗಳನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಕಲೆಯ ಬಗ್ಗೆ ಅವನಿಗೆ ಶಿಕ್ಷಣ ನೀಡಬೇಕು ಮತ್ತು ಅಂತಹ ಸೌಲಭ್ಯಗಳಿಗೆ ಪ್ರವೇಶ ಹೊಂದುವಂತೆ ಮಾಡಬೇಕು. ನಮ್ಮಲ್ಲಿ ಕೃಷಿಯ ಬಗ್ಗೆ ಆಳವಾದ, ವಿಸ್ತಾರವಾದ ಮತ್ತು ಪ್ರಾಚೀನ ಇತಿಹಾಸವಿದೆ. ಆದ್ದರಿಂದ ಹೊಸ ನೀತಿಗಳು ನಮ್ಮ ರೈತನಿಗೆ ಆಧುನಿಕ ಕೃಷಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿರಬೇಕು ಮತ್ತು ಆ ಜ್ಞಾನವನ್ನು ಸಮಯ-ಪರೀಕ್ಷಿತ, ಸಂದರ್ಭೋಚಿತವಾಗಿ ಸಂಬಂಧಿಸಿದ ಸಾಂಪ್ರದಾಯಿಕ ಜ್ಞಾನದೊಂದಿಗೆ ಬೆರೆಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. ನೀತಿಗಳು ಹೇಗಿರಬೇಕೆಂದರೆ, ಒಬ್ಬ ರೈತನು ಈ ಸಂಶೋಧನಾ ಆವಿಷ್ಕಾರಗಳನ್ನು ಬಳಸಿಕೊಂಡು ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿಕೋಳ್ಳಲು ಸಹಾಯವಾಗುವಷ್ಟು. ಆ ಸಂಶೋಧನೆಗಳ ಲಾಭದ ವ್ಯಾಖ್ಯಾನಗಳಲ್ಲಿ ಅಥವಾ ಕಾರ್ಪೊರೇಟ್ ವಲಯದ ಪ್ರಾಯೋಜಿತ ಸಂಶೋಧನೆಯಲ್ಲಿ ಅಥವಾ ಮಾರುಕಟ್ಟೆ ಶಕ್ತಿಗಳು ಮತ್ತು ಮಧ್ಯವರ್ತಿಗಳ ಒತ್ತಡದಲ್ಲಿ ರೈತ ಸಿಕ್ಕಿಹಾಕಿಕೊಳ್ಳಬಾರದು. ಆಗ ಮಾತ್ರ ಅಂತಹ ನೀತಿಯು ಭಾರತೀಯ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಮತ್ತು ನಿಜವಾದ ಸ್ವದೇಶಿ ಕೃಷಿ ನೀತಿಯಾಗಿರುತ್ತದೆ. ಪ್ರಸ್ತುತ ಕೃಷಿ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಈ ಬದಲಾವಣೆಗಳನ್ನು ತಕ್ಷಣ ಸೇರಿಸಿಕೊಳ್ಳುವುದು ಸಾಧ್ಯವಾಗದಿರಬಹುದು. ಅಂತಹ ಸಂದರ್ಭದಲ್ಲಿ, ನೀತಿಗಳು ಸೂಚಿಸಿದ ಬದಲಾವಣೆಗಳನ್ನು ವಾಸ್ತವಕ್ಕೆ ಸರಿಹೊಂದುವ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು.

ನಮ್ಮ ಆರ್ಥಿಕ, ಕೃಷಿ, ಕಾರ್ಮಿಕ, ಉತ್ಪಾದನೆ ಮತ್ತು ಶಿಕ್ಷಣ ನೀತಿಯಲ್ಲಿ ಈ ‘ಸ್ವ’ ಅನ್ನು ಒಟ್ಟುಗೂಡಿಸುವ ದಿಕ್ಕಿನಲ್ಲಿ ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವ್ಯಾಪಕವಾದ ಚರ್ಚೆಗಳು ಮತ್ತು ಸಂವಾದದ ಆಧಾರದ ಮೇಲೆ ರೂಪುಗೊಂಡ ಹೊಸ ಶಿಕ್ಷಣ ನೀತಿಯನ್ನು ಘೋಷಿಸಲಾಗಿದೆ. ಇಡೀ ಶೈಕ್ಷಣಿಕ ಕ್ಷೇತ್ರದ ಜೊತೆಗೆ ಸಂಘ ಕೂಡ ಇದನ್ನು ಸ್ವಾಗತಿಸಿದೆ. ಸ್ವದೇಶಿಯ ಸಾಧ್ಯತೆಗಳ ಪರಿಶೋಧನೆಯಲ್ಲಿ “ವೋಕಲ್ ಫಾರ್ ಲೋಕಲ್” ಒಂದು ಉತ್ತಮ ಬೆಳವಣಿಗೆ. ಆದರೆ, ಈ ಉಪಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಪ್ರಕ್ರಿಯೆಯನ್ನು ವೀಕ್ಷಿಸಬೇಕು ಮತ್ತು ಮುಕ್ತಾಯದವರೆಗೆ ತೀವ್ರವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಆದ್ದರಿಂದ ಈ ವಿಶಾಲ ದೃಷ್ಟಿಕೋನಗಳನ್ನು ಗಮನಿಸಿದರೆ ನಾವು ಈ ‘ಸ್ವ’ ಅಥವಾ ಸ್ವಯಂ ಮನೋಭಾವವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಆಗ ಮಾತ್ರ ನಾವು ಸರಿಯಾದ ದಿಕ್ಕಿನಲ್ಲಿ ಮುಂದುವರಿಯಬಹುದಾಗಿದೆ.

ನಮ್ಮ ಭಾರತೀಯ ಚಿಂತನೆಯು ಹೋರಾಟವನ್ನು ಪ್ರಗತಿಯ ಅಂಶವಾಗಿ ಅನುಮೋದಿಸುವುದಿಲ್ಲ. ಅನ್ಯಾಯವನ್ನು ತೊಡೆದುಹಾಕಲು ಹೋರಾಟವನ್ನು ಕೊನೆಯ ಉಪಾಯವೆಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಪ್ರಗತಿಯ ಪರಿಕಲ್ಪನೆ ಸಹಕಾರ ಮತ್ತು ಸಮನ್ವಯವನ್ನು ಆಧರಿಸಿದೆ. ಆದ್ದರಿಂದ, ಜೀವನದ ವಿವಿಧ ಆಯಾಮಗಳಲ್ಲಿ ಸ್ವಾವಲಂಬನೆಯನ್ನು ಸಾಕಾರಗೊಳಿಸಲು ಏಕತೆಯ ಮನೋಭಾವವು ನಿರ್ಣಾಯಕವಾಗಿದೆ. ಒಂದು ದೇಹದ ಪರಸ್ಪರ ಅಂಗಗಳು ಸಮತೋನದಲ್ಲಿ ಇರುವಂತೆ, ಸ್ವಾವಲಂಬನೆ ಮೂಲಭೂತವಾಗಿ ಸಂಘಟಿತ ಪ್ರಯತ್ನಗಳು ಮತ್ತು ಪರಸ್ಪರ ಸಹಕಾರದ ಮೂಲಕ ಇಡೀ ರಾಷ್ಟ್ರದ ಒಟ್ಟಾರೆ ಯೋಗಕ್ಷೇಮ ಮತ್ತು ಉನ್ನತಿಯನ್ನು ಸೂಚಿಸುತ್ತದೆ. ಎಲ್ಲಾ ಸಂಬಂಧಿತ ಜನರು ಮತ್ತು ಪಕ್ಷಗಳು ವ್ಯಾಪಕವಾಗಿ ಚರ್ಚಿಸುವ ಮತ್ತು ಉದ್ದೇಶಪೂರ್ವಕವಾಗಿ ಮತ್ತು ಸಮ್ಮತವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ನೀತಿ-ರೂಪಿಸುವ ಪ್ರಕ್ರಿಯೆ ಎಲ್ಲರ ನಡುವೆ ಏಕತೆ ಮತ್ತು ನಂಬಿಕೆಯ ಮನೋಭಾವವನ್ನು ಬೆಳೆಸುತ್ತದೆ. ಎಲ್ಲರೊಂದಿಗೆ ಮುಕ್ತ ಸಂವಾದ, ಚರ್ಚೆಯ ಮೂಲಕ ಒಮ್ಮತವನ್ನು ಸೆಳೆಯುವುದು, ಸಹಕಾರ ಮತ್ತು ಫಲಿತಾಂಶದ ವಿಶ್ವಾಸವನ್ನು ಖಾತರಿಪಡಿಸುವುದು – ಒಬ್ಬರ ಕುಟುಂಬ ಮತ್ತು ಸಮುದಾಯದಲ್ಲಿ ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯನ್ನು ಭದ್ರಪಡಿಸುವ ನಿಗದಿತ ವಿಧಾನ ಇದು.

ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹಚಿತ್ತಮೇಷಾಮ್ ।

ಸಮಾನಂ ಮಂತ್ರಮಭಿಮಂತ್ರಯೇ ವಃ ಸಮಾನೇನ ವೊ ಹವಿಷಾ ಜುಹೋಮಿ ।।

ನಮ್ಮೆಲ್ಲರ ಭಾಷೆ ಒಂದೇ ರೀತಿಯದಾಗಿರಲಿ. ನಮ್ಮ ದನಿ ಒಂದೇ ಸಮನಾಗಿರಲಿ. ನಮ್ಮ ಮನಸ್ಸುಗಳ ಯೋಚನೆಗಳು ಸಮವಾಗಿರಲಿ. ಅದು ಸಾಗುವ ದಾರಿಯೂ, ಉದ್ದೇಶವೂ ಸಮಾನವಾಗಿರಲಿ.

ಅದೃಷ್ಟವಶಾತ್, ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಏಕತೆ ಮತ್ತು ನಂಬಿಕೆಯ ಭಾವನೆಯನ್ನು ಹೆಚ್ಚಿಸಲು ಪ್ರಸ್ತುತ ರಾಜಕೀಯ ನಾಯಕತ್ವದಿಂದ ಅವಲಂಬಿಸಬಹುದು ಮತ್ತು ನಿರೀಕ್ಷಿಸಬಹುದು. ಸಮಾಜವನ್ನು ಸರ್ಕಾರದೊಂದಿಗೆ ಸಂಪರ್ಕಿಸುವ ಆಡಳಿತ ವ್ಯವಸ್ಥೆಯು ಈ ಕಾರ್ಯವನ್ನು ಉತ್ತಮ ಶೈಲಿಯಲ್ಲಿ ಸುಗಮಗೊಳಿಸಲು ಮತ್ತು ಸಾಧಿಸಲು ಹೆಚ್ಚು ಸೂಕ್ಷ್ಮ ಮತ್ತು ಪಾರದರ್ಶಕವಾಗಿರಬೇಕು. ಪರಸ್ಪರ ಒಪ್ಪಿದ ನೀತಿಗಳ ತ್ವರಿತ ಅನುಷ್ಠಾನಕ್ಕೆ ಭಾರಿ ಬದಲಾವಣೆಗಳ ಅಗತ್ಯವಿಲ್ಲ ಮತ್ತು ಸಹಕಾರ-ಸಮನ್ವಯದ ವಾತಾವರಣವನ್ನು ಹೆಚ್ಚಿಸುತ್ತದೆ. ಉಳಿದ ಎಚ್ಚರಿಕೆ ಮತ್ತು ಅಂತಿಮ ಹಂತದವರೆಗೆ ಪ್ರಸ್ತಾವಿತ ನೀತಿಗಳ ಅನುಷ್ಠಾನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವುದು ಗಮನಾರ್ಹವಾಗಿದೆ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಬೆಂಬಲಿಸುವ ಮೂಲಕ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಸ್ವಾವಲಂಬಿ ಉದ್ಯೋಗಿಗಳಿಗೆ ಸಹಾಯ ಮಾಡುವ ಮೂಲಕ, ಪರಿಸರ ಸ್ನೇಹಿ ವ್ಯವಹಾರಗಳನ್ನು ಪ್ರಾರಂಭಿಸುವ ಮೂಲಕ ಮತ್ತು ಆರ್ಥಿಕ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸ್ವಾವಲಂಬಿ ಉತ್ಪಾದನಾ ಘಟಕಗಳ ಮೂಲಕ ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳನ್ನು ವಿಕೇಂದ್ರೀಕರಿಸುವ ಅಗತ್ಯವಿದೆ. ನೂತನ, ಅನುಭವಿ ಉದ್ಯಮಿಗಳಿಂದ ಹಿಡಿದು ರೈತರವರೆಗೆ ಈ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವವರೆಲ್ಲರೂ ನಮ್ಮ ರಾಷ್ಟ್ರದ ಉದ್ಯಮಶೀಲತೆಯ ಯಶಸ್ಸನ್ನು ಸವಿಯಲು ಉತ್ಸುಕರಾಗಿದ್ದಾರೆ. ಸರ್ಕಾರವು ಅವರಿಗೆ ಹೆಚ್ಚುವರಿ ಯೋಜನೆಗಳನ್ನು ಒದಗಿಸುವ ಅಗತ್ಯವಿರುತ್ತದೆ. ಅದರಿಂದ ಅವರು ವಿಶ್ವದರ್ಜೆಯ ಮಾನದಂಡಗಳನ್ನು ಸಾಧಿಸಬಹುದು, ಅದು ವಿಶ್ವದ ಇತರ ಆರ್ಥಿಕ ದೈತ್ಯರೊಂದಿಗೆ ಸ್ಪರ್ಧಾತ್ಮಕ ಅವಕಾಶವನ್ನು ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಸರ್ಕಾರದ ಧನ ಸಹಾಯದ ಜೊತೆ ಕರೋನಾ ಬಿಕ್ಕಟ್ಟಿನ ಆರು ತಿಂಗಳ ನಂತರ ಮತ್ತೆ ತಮ್ಮ ಉದ್ಯಮ ಪುನಾರಂಭಿಸಲು ಸೂಕ್ತ ಕ್ರಮಗಳನ್ನು ಅವರಿಗಾಗಿ ಕೈಗೊಳ್ಳಬೇಕಿದೆ.

ಪ್ರಗತಿ-ಆಧಾರಿತ ಮನಸ್ಥಿತಿಯೊಂದಿಗೆ, ನಮ್ಮ ಜನರ ಸಂಸ್ಕೃತಿ ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ದೇಶದ ಅಭಿವೃದ್ಧಿ ಮಾರ್ಗವನ್ನು ವಿವರಿಸಬೇಕಾಗಿದೆ. ಎಲ್ಲಾ ದೃಷ್ಟಿಕೋನಗಳಿಂದ ಸಕಾರಾತ್ಮಕ ಕೊಡುಗೆಯೊಂದಿಗೆ ಒಮ್ಮತವನ್ನು ಸ್ಥಾಪಿಸಿದ ನಂತರ ನಾವು ಯೋಜನೆಗಳನ್ನು ಕೈಗೊಳ್ಳಬೇಕು. ಅಭಿವೃದ್ಧಿಯ ಸಾಧನೆಗಳ ಪ್ರತಿಫಲವು ಅತ್ಯಂತ ಹಿಂದುಳಿದವರಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು. ಮಧ್ಯವರ್ತಿಗಳ ಶೋಷಣೆ ಮತ್ತು ಸುಲಿಗೆಗಳನ್ನು ತೆಗೆದುಹಾಕಬೇಕು. ಉತ್ಪಾದನಾ ತಯಾರಕರು ಮಾರುಕಟ್ಟೆಗಳು ಮತ್ತು ಅಭಿವೃದ್ಧಿ ಯೋಜನೆಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದರೆ ಮಾತ್ರ ನಮ್ಮ ಕನಸುಗಳು ನನಸಾಗಬಹುದು, ಇಲ್ಲದಿದ್ದರೆ ವೈಫಲ್ಯಕ್ಕೆ ಕಾರಣವಾಗುವ ಅಪಾಯಗಳು ಹೆಚ್ಚಿವೆ.

ಮೇಲೆ ಮಾಡಿದ ಎಲ್ಲಾ ಸಲಹೆಗಳು ಬಹಳ ಮಹತ್ವದ್ದಾಗಿದ್ದರೂ, ಸಮಾಜದ ಸಾಮೂಹಿಕ ಸಂಕಲ್ಪವು ರಾಷ್ಟ್ರದ ಅಭಿವೃದ್ಧಿಯ ಅಡಿಪಾಯವಾಗಿದೆ. ಕರೋನದ ನಂತರ ಚಾಲ್ತಿಯಲ್ಲಿರುವ ಪ್ರಜ್ಞೆ, ಅಂದರೆ, ‘ಸ್ವಯಂ,’ ಏಕತೆಯ ಮನೋಭಾವ, ಜನರನ್ನು ಒಗ್ಗೂಡಿಸುವ ಮನೋಭಾವ, ಸಾಂಸ್ಕೃತಿಕ ಮೌಲ್ಯಗಳ ಮಹತ್ವ ಮತ್ತು ಪರಿಸರ ಜಾಗೃತಿ ಮತ್ತು ಅದರ ಸಮತೋಲನವನ್ನು ಪುನಃಸ್ಥಾಪಿಸಲು ಪರಿಹಾರ ಕ್ರಮಗಳ ಅಗತ್ಯತೆ ಇವುಗಳು ನಂತರದ ದಿನಗಳಲ್ಲಿ ಸಮಾಜದಿಂದ ಕಡೆಗಣಿಸಲ್ಪಡಬಾರದು. ನಾವು ಮೌಲ್ಯಗಳ ದೃಷ್ಟಿ ಕಳೆದುಕೊಳ್ಳಬಾರದು.

ಸಮಾಜದ ಜವಾಬ್ದಾರಿಯುತ ಅಭ್ಯಾಸಗಳು ಮತ್ತು ಸರಿಯಾದ ನಡವಳಿಕೆಯ ಆಚರಣೆಯಿಂದಷ್ಟೇ ಸೂಕ್ತ ಪ್ರತಿಫಲ ಸಾಧ್ಯ. ಸಣ್ಣ ಬದಲಾವಣೆಗಳಿಂದ ಪ್ರಾರಂಭಿಸಿ, ನಿಯಮಿತವಾಗಿ ಜಾಗೃತಿ ಮೂಡಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ನಡವಳಿಕೆಯ ಬದಲಾವಣೆಗೆ ಕಾರಣವಾಗಬಹುದು. ಪ್ರತಿಯೊಂದು ಕುಟುಂಬವು ಈ ಪ್ರಯೋಗದ ಒಂದು ಭಾಗವಾಗಬಹುದು. ವಾರಕ್ಕೊಮ್ಮೆ ಎಲ್ಲಾ ಕುಟುಂಬದ ಸದಸ್ಯರು ಜಂಟಿಯಾಗಿ ಕೆಲವು ಪ್ರಾರ್ಥನೆ ಮಾಡಲು ಮತ್ತು ಮನೆಯಲ್ಲಿ ಒಟ್ಟಾಗಿ ಕುಳಿತು ಆಹಾರವನ್ನು ಸೇವಿಸಬಹುದು ಮತ್ತು ನಂತರ ಎರಡು ಮೂರು ಗಂಟೆಗಳ ಅನೌಪಚಾರಿಕ ಚರ್ಚೆಯನ್ನು ಮಾಡಬಹುದು. ಆ ಚರ್ಚೆಗಳಲ್ಲಿ ಮೇಲೆ ತಿಳಿಸಲಾದ ವಿಷಯಗಳನ್ನು ಚರ್ಚಿಸಬಹುದು, ಏಕೆಂದರೆ ಕ್ರಿಯಾತ್ಮಕ ವಸ್ತುಗಳು ಮತ್ತು ಸಣ್ಣ ಕುಟುಂಬ ಮಟ್ಟದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು, ಇದನ್ನು ಮುಂದಿನ ವಾರದ ಚರ್ಚೆಯಲ್ಲಿ ಪರಿಶೀಲಿಸಬಹುದು. ಕುಟುಂಬಗಳಲ್ಲಿ ಚರ್ಚೆ, ಮಾತುಕತೆಯ ಪಾತ್ರ ಹೆಚ್ಚಿದೆ. ನಮ್ಮ ಶಾಸ್ತ್ರಗಳಲ್ಲಿ ಈ ವಿಧಾನವನ್ನು ಹೀಗೆ ವಿವರಿಸಲಾಗಿದೆ.

ಸಂತಃ ಪರೀಕ್ಶ್ಯಾನ್ಯಾತರದ್ ಭಜಂತೇ ಮೂಢಃ ಪರಪ್ರತ್ಯಯನೆಯ ಬುದ್ಧಿಃ

ಕುಟುಂಬ ವ್ಯವಸ್ಥೆಯಲ್ಲಿ ನಾವು ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿದರೆ, ಸಮಸ್ಯೆಯ ಪ್ರಸ್ತುತತೆಗೆ ಸಂಬಂಧಿಸಿದಂತೆ ವಿವೇಚನೆಯನ್ನು ಬಳಸಿ ನಡೆದುಕೊಂಡರೆ, ಸರಿಯಾದ ಆಯ್ಕೆ ಮಾಡಿ ಒಂದು ದೃಷ್ಟಿಕೋನವನ್ನು ಸ್ವೀಕರಿಸಿ ಅಥವಾ ತಿರಸ್ಕರಿಸಿದರೆ, ಅದರ ಪರಿಣಾಮವಾಗಿ ಉಂಟಾಗುವ ವರ್ತನೆಯ ಬದಲಾವಣೆಗಳು ಶಾಶ್ವತವಾಗಿರುತ್ತದೆ.

ಆರಂಭಿಕ ಚರ್ಚೆಗಳಲ್ಲಿ, ದೇಶೀಯ ವ್ಯವಸ್ಥೆಗಳು, ವಾಸಸ್ಥಳದ ವಿನ್ಯಾಸ, ನಮ್ಮ ಕುಟುಂಬದ ಸಂಸ್ಕೃತಿ, ದೀರ್ಘಕಾಲದ ಪದ್ಧತಿಗಳು ಮತ್ತು ಸಂಪ್ರದಾಯಗಳಂತಹ ಸಾಮಾನ್ಯ ಕಾಳಜಿಯ ವಿಷಯಗಳನ್ನು ಚರ್ಚಿಸಬಹುದು. ಪರಿಸರ ಕಾಳಜಿಗಳ ಬಗ್ಗೆ ಪ್ರತಿಯೊಬ್ಬರ ಪರಿಚಿತತೆಯ ಕಾರಣದಿಂದಾಗಿ, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಮಾರ್ಗಗಳು, ನೀರಿನ ಸಂರಕ್ಷಣೆ, ಹೂವಿನ ಗಿಡಗಳ ಸಸಿಗಳನ್ನು ನೆಡುವುದರ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸುವ ಬಗೆ, ಹಣ್ಣಿನ ಮರಗಳು ಮತ್ತು ತರಕಾರಿಗಳನ್ನು ನಮ್ಮ ಅಂಗಳ ಮತ್ತು ಟೆರೇಸ್‌ಗಳಲ್ಲಿ ಬೆಳೆಸುವ ಬಗ್ಗೆ ಚರ್ಚಿಸಬಹುದು ಮತ್ತು ಕ್ರಿಯಾಶೀಲ ಯೋಜನೆಗಳನ್ನು ಜಂಟಿಯಾಗಿ ರಚಿಸಬಹುದು. ಲಭ್ಯವಿರುವ ಸಮಯ ಮತ್ತು ಅಗತ್ಯಗಳಿಗೆ ಅನುಗುಣವಾಗಿ, ನಾವೆಲ್ಲರೂ ಪ್ರತಿದಿನ ವೈಯಕ್ತಿಕ ಮತ್ತು ಕೌಟುಂಬಿಕ ಅಗತ್ಯತೆಗಳಿಗಾಗಿ ಹಣವನ್ನು ಖರ್ಚು ಮಾಡುತ್ತೇವೆ. ನಾವು ದಿನನಿತ್ಯದ ಆಧಾರದ ಮೇಲೆ ನಮ್ಮ ಸಮಾಜಕ್ಕಾಗಿ ಎಷ್ಟು ಹಣವನ್ನು ಮತ್ತು ಸಮಯವನ್ನು ಅರ್ಪಿಸುತ್ತಿದ್ದೇವೆ ಮತ್ತು ಅದನ್ನು ಹೇಗೆ ಮಾಡಬೇಕೆಂಬುದನ್ನು ನಾವು ನಮ್ಮ ಚರ್ಚೆಯಲ್ಲಿ ಆಲೋಚಿಸಬಹುದು. ನಾವು ವಿವಿಧ ಜಾತಿ ಮತ್ತು ಪ್ರದೇಶಗಳಿಗೆ ಸೇರಿದ ಮತ್ತು ವೈವಿಧ್ಯಮಯ ಭಾಷೆಗಳನ್ನು ಮಾತನಾಡುವ ಜನರು ಮತ್ತು ಕುಟುಂಬಗಳೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದೇವಾ? ನಾವು ಆಳವಾಗಿ ಬೆರೆತಿದ್ದೇವೆ ಎನ್ನಲಾದ ಮನೆಗಳಿಗೆ ಆ ಪರಿಚಯಸ್ಥರ ಮನೆಗಳಿಗೆ ಭೇಟಿ ನೀಡಿದ್ದೇವೆಯೇ? ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಇವು ಪ್ರಮುಖ ಚರ್ಚಾ ವಿಷಯಗಳಾಗಿವೆ. ನಿಜವಾದ ಕಾರ್ಯಕ್ರಮಗಳು ಮತ್ತು ಉಪಕ್ರಮಗಳಲ್ಲಿ ನಮ್ಮ ಕುಟುಂಬದ ಭಾಗವಹಿಸುವಿಕೆಗೆ ಒತ್ತು ನೀಡಬಹುದು, ಉದಾ. ನಮ್ಮ ಕುಟುಂಬವು ರಕ್ತದಾನ, ನೇತ್ರದಾನದಲ್ಲಿ ಕೊಡುಗೆ ನೀಡಬಹುದು ಅಥವಾ ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಬಹುದು.

ಈ ಸಣ್ಣ ಕಾರ್ಯಗಳ ಮೂಲಕ, ಸಾಮರಸ್ಯ, ನೇರ ನಡತೆ, ತಾಳ್ಮೆ, ಶಿಸ್ತು ಮತ್ತು ಮೌಲ್ಯಗಳಿಂದ ಪ್ರೇರಿತವಾದ ವೈಯಕ್ತಿಕ ನಡವಳಿಕೆಯನ್ನು ಬೆಳೆಸಿಕೊಳ್ಳಬಹುದು. ಇದರ ಪರಿಣಾಮವಾಗಿ, ನಾಗರಿಕ ಶಿಸ್ತಿಗೆ ಅನುಗುಣವಾಗಿ ನಮ್ಮ ಸಾಮೂಹಿಕ ನಡವಳಿಕೆಯು ಪರಸ್ಪರ ಸಹಕಾರ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ. ಸಾಮಾನ್ಯ ಮನುಷ್ಯನ ಸಾಮಾನ್ಯ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಮಾರ್ಗದರ್ಶಿ ಶಕ್ತಿಯಾಗಿ ಹಿಂದುತ್ವದೊಂದಿಗಿನ ಅವನ ಏಕತೆಯ ಮನೋಭಾವವನ್ನು ಪೋಷಿಸಲು ನಾವು ಕೆಲಸ ಮಾಡಿದರೆ, ನಮ್ಮ ದೇಶದ ರಚನೆಯ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ಅಭಿವೃದ್ಧಿ ಪ್ರಗತಿಗೆ ನಾವು ವೈಯಕ್ತಿಕ ಪ್ರಯತ್ನಗಳನ್ನು ಮಾಡಿದರೆ ಮತ್ತು ನಮ್ಮ ಪರಸ್ಪರ ಅವಲಂಬನೆಯನ್ನು ಅಂಗೀಕರಿಸಿದರೆ ಸಮಾಜದ ಇತರ ಸದಸ್ಯರೊಂದಿಗೆ ಸಹಕರಿಸಲು, ಯಾವುದೇ ಕನಸನ್ನು ಸಾಧಿಸಲು ಮತ್ತು ನಮ್ಮ ಮೌಲ್ಯಗಳಲ್ಲಿ ಬೇರೂರಿರುವ ಅಭಿವೃದ್ಧಿ ಗುರಿಗಳನ್ನು ಹೊಂದಿಸಲು ನಮ್ಮ ಸಾಮೂಹಿಕ ಶಕ್ತಿಯ ಬಗ್ಗೆ ನಮಗೆ ವಿಶ್ವಾಸವಿದ್ದರೆ, ಮುಂದಿನ ದಿನಗಳಲ್ಲಿ ಭಾರತವರ್ಸ್ಗ ಪ್ರಪಂಚದ ಉಳಿದ ಭಾಗಗಳಿಗೆ ದಿಕ್ಸೂಚಿಯಾಗಿ ಹೊರಹೊಮ್ಮುತ್ತದೆ. ಇಂತಹ ವರ್ತನೆಯನ್ನು ಅನುಸರಿಸುವ ವಕ್ತಿಗಳು ಹಾಗೂ ಕುಟುಂಬಗಳು ಇಡೀ ದೇಶದಲ್ಲಿ ಭ್ರಾತೃತ್ವ, ಅರ್ಥಪೂರ್ಣ ಕ್ರಮ ಮತ್ತು ಕಾನೂನುಬದ್ಧ ಕ್ರಮಗಳ ಒಟ್ಟಾರೆ ವಾತಾವರಣವನ್ನು ಸೃಷ್ಟಿಸುತ್ತಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು 1925 ರಿಂದ ಈ ಬದಲಾವಣೆಗಳನ್ನು ನೇರವಾಗಿ ಸಮಾಜದಲ್ಲಿ ಪರಿಣಾಮ ಬೀರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂಘಟಿತ ರಾಷ್ಟ್ರವು ಆರೋಗ್ಯಕರ ಸಮಾಜದ ಸ್ವಾಭಾವಿಕ ಸ್ಥಿತಿ. ಶತಮಾನಗಳ ಆಕ್ರಮಣಗಳ ಕತ್ತಲೆಯ ನಂತರ ಸ್ವತಂತ್ರವಾಗಿರುವ ಈ ದೇಶದ ಪುನರುತ್ಥಾನಕ್ಕೆ ಅಂತಹ ಸಂಘಟಿತ ಸಮಾಜವು ಅಗತ್ಯವಾಗಿದೆ. ಅಂತಹ ಸಮಾಜವನ್ನು ನಿರ್ಮಿಸಲು ಅನೇಕ ಮಹಾನ್ ವ್ಯಕ್ತಿಗಳು ಕೆಲಸ ಮಾಡಿದ್ದಾರೆ. ಸ್ವಾತಂತ್ರ್ಯದ ನಂತರ, ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸಂವಿಧಾನವನ್ನು ವಯಸ್ಸು-ಸಂಬಂಧಿತ ಅಪೇಕ್ಷಿತ ನಡವಳಿಕೆಯ ಸಂಕೇತಗಳಲ್ಲಿ ರಚಿಸಲಾಗಿದೆ ಮತ್ತು ನಮಗೆ ಹಸ್ತಾಂತರಿಸಲಾಯಿತು. ಸಂಘ ಕಾರ್ಯವು ನಮ್ಮ ಸಂವಿಧಾನದ ಉದ್ದೇಶಗಳನ್ನು ಸಾಕಾರಗೊಳಿಸಲು ಸ್ಪಷ್ಟ ದೃಷ್ಟಿಯನ್ನು ಹುಟ್ಟುಹಾಕುವುದನ್ನು ಖಚಿತಪಡಿಸುತ್ತದೆ ಮತ್ತು ಪರಸ್ಪರ ಸಾಮರಸ್ಯದ ನಡವಳಿಕೆ, ಏಕತೆಯ ಮನೋಭಾವ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮನೋಭಾವವು ಅತ್ಯುನ್ನತವಾಗಿದೆ. ಈ ಗುರಿಯನ್ನು ಸಾಧಿಸುವಲ್ಲಿ ಸ್ವಯಂಸೇವಕರು ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಮತ್ತು ಸಮರ್ಪಕವಾಗಿ ತೊಡಗಿಸಿಕೊಂಡಿದ್ದಾರೆ. ಈ ಪುನರ್ನಿರ್ಮಾಣದ ಅಭಿಯಾನದಲ್ಲಿ ನೀವೆಲ್ಲರೂ ಕೈಜೋಡಿಸಿ ಎಂದು ಆಹ್ವಾನಿಸುತ್ತೇನೆ. ಇಲ್ಲಿಗೆ ನನ್ನ ಮಾತಿಗೆ ವಿರಾಮ ನೀಡುತ್ತೇನೆ.

Viewing all 3435 articles
Browse latest View live


<script src="https://jsc.adskeeper.com/r/s/rssing.com.1596347.js" async> </script>