Quantcast
Channel: Samvada
Viewing all 3435 articles
Browse latest View live

ಕನ್ನಡ ಸಾಹಿತ್ಯಗಳ ವಿಡಿಯೋ ಪರಿಚಯ ಮಾಡುತ್ತಿರುವ ‘ಸುಕೃತಿ’

$
0
0

ಕನ್ನಡ ಸಾಹಿತ್ಯಗಳ ವಿಡಿಯೋ ಪರಿಚಯ ಮಾಡುತ್ತಿರುವ ‘ಸುಕೃತಿ’

ಕನ್ನಡ ಕೃತಿಗಳ ತಿಳಿಯೋಣ – ಕನ್ನಡ ಕಂಪನು ಸವಿಯೋಣ

ಲಕ್ಷಾಂತರ ಪುಸ್ತಕಗಳಿವೆ , ನೂರಾರು ಪುಸ್ತಕಗಳು ಹೊಸದಾಗಿ ಪ್ರಕಾಶವಾಗುತ್ತ ಇರುತ್ತದೆ. ಪುಸ್ತಕ ಓದಬೇಕು ಎಂಬ ಹಂಬಲವಿದೆ ಆದರೆ ಇಷ್ಟೊಂದು ಪುಸ್ತಕ ರಾಶಿಯಲ್ಲಿ ಉತ್ತಮ ಪುಸ್ತಕ (ಸುಕೃತಿ ) ಯಾವುದು ಎಂಬುದೇ ಅನೇಕರ ಪ್ರಶ್ನೆ. ಎಲ್ಲಾ ಪುಸ್ತಕವನ್ನು ಒಮ್ಮೆ ತಿರುವು ಹಾಕಿ ನಿರ್ಣಯ ಮಾಡಲು ಸಮಯವೂ ಇಲ್ಲ ಅಸಾಧ್ಯವೇ ಸರಿ. ಈ ಸಮಸ್ಯೆಗೆ ಉತ್ತರ ರೂಪದಲ್ಲಿ ‘ಸುಕೃತಿ’ ಪ್ರಯತ್ನ ಮಾಡುತ್ತಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ‘ಸುಕೃತಿ’ಯು ವಿಶಿಷ್ಟವಾದ ರೀತಿಯಲ್ಲಿ ಸಾಹಿತ್ಯ ಪ್ರಸಾರವನ್ನು ಮಾಡುತ್ತಾ ಬಂದಿದೆ. ‘ಸುಕೃತಿ’ಯು ಪುಸ್ತಕ ಪರಿಚಯ ವಿಡಿಯೋಗಳ ಮೂಲಕ ಈಗಾಗಲೇ ಸಾವಿರಾರು ಜನರನ್ನು ಸಾಮಾಜಿಕ ಜಾಲತಣದಲ್ಲಿ ತಲುಪಿದೆ. ಒಂದು ಪುಸ್ತಕದ ಪರಿಚಯವನ್ನು ಕಡಿಮೆ ಸಮಯದಲ್ಲಿ ಸರಳವಾಗಿ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ( ಫೇಸ್ಬುಕ್ / ಯೂಟ್ಯೂಬ್ ) ಎಲ್ಲರಿಗೂ ಸಿಗುವಂತೆ ಮಾಡಿದ್ದಾರೆ ‘ಸುಕೃತಿ’ ತಂಡ.

‘ಸುಕೃತಿ’ಯು ಕನ್ನಡ ರಾಜ್ಯೋತ್ಸವ ನಿಮಿತ್ತ ನವೆಂಬರ್ ತಿಂಗಳಲ್ಲಿ ಪ್ರತಿನಿತ್ಯ ಕೆಲವು ಪುಸ್ತಕದ ಪರಿಚಯ ವಿಡಿಯೋಗಳನ್ನು ಹಾಕುತ್ತ ‘ಕನ್ನಡ ಸಾಹಿತ್ಯದ ತೇರ’ನ್ನು ಎಳೆಯುತ್ತಿದೆ.

ಕುಮಾರ ವ್ಯಾಸ, ಡಿ,ವಿ.ಜಿ, ಬೇಂದ್ರೆ, ಕುವೆಂಪು, ಕಾರಾಂತರ ಕೃತಿಗಳಿಂದ ಪ್ರಾರಂಭಿಸಿ ಈಗಿನ ಕೆ.ಎಸ್. ನಾರಾಯಣಾಚಾರ್ಯ , ಎಚೆಸ್ವಿ, ಶತಾವಧಾನಿ ಗಣೇಶ್ , ಎ.ಆರ್.ಮಣಿಕಾಂತ್ ರವೆರೆಗೆ ಹಲವಾರು ಕವಿ-ಲೇಖಕರ ಒಂದೆರಡು ಸಾಹಿತ್ಯವನ್ನು ಆರಿಸಿಕೊಂಡಿದ್ದಾರೆ. ಕನ್ನಡ ನಾಡಿನಲ್ಲಿ ಸುಪರಿಚಿತರಾದ ಮಾಳವಿಕಾ ಅವಿನಾಶ್, ಡಾ. ಶತಾವಧಾನಿ ಆರ್. ಗಣೇಶ್, ಡಾ.ಬಿ.ವಿ.ವಸಂತ ಕುಮಾರ್ (ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ) ಮುಂತಾದವರಿಂದ ಮೊದಲ್ಗೊಂಡು ಉದಯೋನ್ಮುಖ ಸಾಹಿತ್ಯ ಪ್ರೇಮಿಗಳೂ ಪುಸ್ತಕ ಪರಿಚಯ ಮಾಡಿಕೊಟ್ಟಿದ್ದಾರೆ.

ಕಳೆದ 17 ದಿನಗಳಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಪುಸ್ತಕಗಳ ಪರಿಚಯವನ್ನು ವಿಡಿಯೋ ಮೂಲಕ ಮಾಡಲಾಗಿದೆ. ಅದೇ ರೀತಿ ನವೆಂಬರ್ 30 ರವರೆಗೆ , ಪ್ರತಿನಿತ್ಯ ಕನ್ನಡದ ಅತ್ಯುತ್ತಮ ಪುಸ್ತಕಗಳ ಪರಿಚಯವನ್ನು ಮಾಡಿಕೊಳ್ಳಲು ನೀವೂ ‘ಸುಕೃತಿ’ ಫೇಸ್ಬುಕ್ ಪೇಜ್ ಅಥವಾ ಯೂಟ್ಯೂಬ್ ಚ್ಯಾನಲ್ ಭೇಟಿಕೊಡಬಹುದಾಗಿದೆ.
https://www.facebook.com/Sukruthi-Pustaka-Parichaya-100200858329401/

https://www.youtube.com/channel/UCnGmEgIenhA8R8vBK43jqKA

ಕನ್ನಡ ಕೃತಿಗಳ ತಿಳಿಯೋಣ – ಕನ್ನಡ ಕಂಪನು ಸವಿಯೋಣ.

The post ಕನ್ನಡ ಸಾಹಿತ್ಯಗಳ ವಿಡಿಯೋ ಪರಿಚಯ ಮಾಡುತ್ತಿರುವ ‘ಸುಕೃತಿ’ first appeared on Vishwa Samvada Kendra.


‘ಸಕ್ಷಮ’ಸಂಸ್ಥೆಯಿಂದ ಜಿಲ್ಲಾ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರ

$
0
0

ಸಕ್ಷಮ ಸಂಸ್ಥೆಯಿಂದ ಜಿಲ್ಲಾ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರ

ಸಕ್ಷಮ (ಸಮದೃಷ್ಟಿ ಕ್ಷಮತ ವಿಕಾಸ ಮತ್ತು ಅನುಸಂಧಾನ ಮಂಡಲ) ಕರ್ನಾಟಕ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಉಪನಿರ್ದೇಶಕರು (ಆಡಳಿತ ) ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು,ಚಿಕ್ಕಬಳ್ಳಾಪುರ ಇವರ ಸಹಯೋಗದೊಂದಿಗೆ ದಿನಾಂಕ 21 -11 -2020 ರ ಶನಿವಾರದಂದು ಜಿಲ್ಲಾ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಿಗಾಗಿ (ಬಿ .ಐ .ಇ .ಆರ್. ಟಿ ) ಸಮಗ್ರ ಶಿಕ್ಷಣ ಸಭಾಂಗಣ ಉಪನಿರ್ದೇಶಕರ ಕಚೇರಿ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾ ಉಪನಿರ್ದೇಶಕರಾದ ಶ್ರೀಯುತ ಎಸ್.ಜಿ.ನಾಗೇಶ್ ರವರ ಘನ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಗಳಾಗಿ ಸಕ್ಷಮ ಚಿಕ್ಕಬಳ್ಳಾಪುರ ಘಟಕದ ಪೋಷಕರು ಹಾಗೂ S. J. C ತಾಂತ್ರಿಕ ಮಹಾವಿದ್ಯಾಲಯ ಚಿಕ್ಕಬಳ್ಳಾಪುರದ ಪ್ರಾಂಶುಪಾಲರಾದ ಡಾ. ಕೆ. ಎಂ. ರವಿಕುಮಾರ್ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳಾದ ಶ್ರೀಮತಿ ಸುಕನ್ಯಾರವರ ಉಪಸ್ಥಿತಿಯಲ್ಲಿ ಬೆಳಗಿನ ಅವಧಿಯ ಕಾರ್ಯಗಾರವು ಪ್ರಾರಂಭವಾಯಿತು.

DYPC ಶ್ರೀಮತಿ ಸುಕನ್ಯಾ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಮಾತನಾಡುತ್ತಾ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಯಲ್ಲಿ ಬಿ. ಐ. ಇ. ಆರ್.ಟಿ ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ .ಆದಕಾರಣ ಪ್ರಮುಖವಾಗಿ ಫಿಜಿಯೋಥೆರಪಿ ಬಗ್ಗೆ ಪ್ರಾಯೋಗಿಕ ತರಬೇತಿ ನೀಡುವ ಸಲುವಾಗಿ ಹಾಗೂ ವಿವಿಧ ನ್ಯೂನ್ಯತೆಗಳ ಬಗ್ಗೆ (ಬುದ್ದಿ ನ್ಯೂನತೆ, ವಾಕ್ ಶ್ರವಣ ನ್ಯೂನತೆ) ಸಂಪನ್ಮೂಲ ವ್ಯಕ್ತಿಗಳಿಂದ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ವಿಶೇಷ ಚೇತನ ವ್ಯಕ್ತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸೇವೆಸಲ್ಲಿಸುತ್ತಿರುವ ರಾಷ್ಟ್ರೀಯ ಸಂಘಟನೆಯಾದ ಸಕ್ಷಮ ಕರ್ನಾಟಕದ ಸಹಯೋಗದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಹಾಗೆಯೇ ಸಕ್ಷಮ ಕರ್ನಾಟಕದ ಕಾರ್ಯದರ್ಶಿಗಳಾದ ಶ್ರೀಯುತ ಡಾ. ಹರಿಕೃಷ್ಣ ರೈ ರವರು ವೆಬಿನಾರ್ ಮೂಲಕ ಸಕ್ಷಮದ ಕಿರುಪರಿಚಯ ಹಾಗೂ ಸಕ್ಷಮ ನಡೆಸುತ್ತಿರುವ ‌ವಿವಿದ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತ ಕಳೆದ 10 ವರ್ಷಗಳಿಂದ ಕರ್ನಾಟಕ ರಾಜ್ಯಾದ್ಯಂತ ವಿಶೇಷ ಚೇತನ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಕ್ಷಮ ಹಲವಾರು ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಿದೆ, ವಿಶೇಷ ಚೇತನರಿಗೆ ಅವಕಾಶ ಹಾಗೂ ಪ್ರೋತ್ಸಾಹ ನೀಡಿದಾಗ ಅವರು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗುತ್ತದೆ ,ಈ ನಿಟ್ಟಿನಲ್ಲಿ ಸಕ್ಷಮ‌‌ ದಿವ್ಯಾಂಗರ ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ‌ ಹಾಗು ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ S. J. C ತಾಂತ್ರಿಕ ಮಹಾವಿದ್ಯಾಲಯದ ಚಿಕ್ಕಬಳ್ಳಾಪುರದ ಪ್ರಾಂಶುಪಾಲರು ಹಾಗೂ ಸಕ್ಷಮ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಪೋಷಕರಾದ ಡಾಕ್ಟರ್ ಕೆ. ಎಂ. ರವಿಕುಮಾರ್ ರವರು ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ,ಸಕ್ಷಮ ದ ಸೇವಾ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಾ ಸ್ವಸ್ಥ ಸಮಾಜ ನಿರ್ಮಾಣ ಹಾಗೂ ರಾಷ್ಟ್ರದ ಏಳಿಗೆಯಲ್ಲಿ ವಿಶೇಷ ಚೇತನ ವ್ಯಕ್ತಿಗಳ ಪಾತ್ರವು ಸಹ ಅತ್ಯಂತ ಮಹತ್ವದ್ದಾಗಿರುತ್ತದೆ. ಸಕ್ಷಮವು 21 ವಿಧದ ನ್ಯೂನ್ಯತೆಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಸೇವಾಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು .ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಮನ್ವಯ ಶಿಕ್ಷಣಕ್ಕೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ. N. E. P ಯಲ್ಲಿನ ಸಮನ್ವಯ ಶಿಕ್ಷಣದ ಆಶೋತ್ತರಗಳನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಉಪನಿರ್ದೇಶಕರಾದ ಶ್ರೀಯುತ ಎಸ್. ಜಿ. ನಾಗೇಶ್ ರವರು ಮಾತನಾಡುತ್ತಾ ವಿಶೇಷ ಚೇತನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರವು ಬಿ. ಐ. ಇ. ಆರ್. ಟಿ. ಗಳ ನೇಮಕಾತಿ ಮಾಡಿರುವ ಹಿನ್ನೆಲೆಯ ಸದುದ್ದೇಶದ ಬಗ್ಗೆ ಮನವರಿಕೆ ಮಾಡಿಕೊಟ್ಟರು ವಿಶೇಷಚೇತನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿರುವ ಹಲವಾರು ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಬಿ.ಐ.ಇ.ಆರ್ .ಟಿ ಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ .ವೃತ್ತಿಯೊಂದಿಗೆ ಸೇವೆಯನ್ನು ಮಾಡುವ ವಿಶೇಷವಾದ ಅವಕಾಶ ಹಾಗೂ ಸೌಭಾಗ್ಯ
ಬಿ ಇ ಆರ್ ಟಿ ಗಳಿಗೆ ಲಭಿಸಿದೆ ಆದಕಾರಣ ಸಮನ್ವಯ ಶಿಕ್ಷಣದ ಬಗ್ಗೆ ಬಿ ಐ ಇ ಆರ್ ಟಿ ಗಳು ಹೆಚ್ಚಿನ ಪ್ರಾಯೋಗಿಕ ಜ್ಞಾನವನ್ನು ಪಡೆಯುವ ಸಲುವಾಗಿ ಆಯೋಜಿಸಲಾಗಿರುವ ಸಕ್ಷಮದ ಕಾರ್ಯಾಗಾರದ ಸದುದ್ದೇಶ ವನ್ನು ಫಲಪ್ರದ ಗೊಳಿಸು ನಿಟ್ಟಿನಲ್ಲಿ ಜ್ಞಾನವನ್ನು ಪಡೆದು ಅದನ್ನು ಕಾರ್ಯರೂಪದಲ್ಲಿ ತರುವಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು .

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಫಿಜಿಯೋಥೆರಪಿಸ್ಟ್ ಡಾ. ಕಿರಣ್ ಎಸ್ ಮೂರ್ತಿಯವರು, ಇಲಾಖೆಯ ವಿಷಯ ಪರಿವೀಕ್ಷಕರು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಪ್ರಾರ್ಥನೆಯನ್ನು ಬಿ.ಐ.ಇ.ಆರ್ .ಟಿ ರಾಜಪ್ಪ ರವರು ಮಾಡಿದರು ,

ಫಿಜಿಯೋ ಥೆರಪಿಸ್ಟ್ ಹಾಗೂ ಸಕ್ಷಮ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರೂ ಆದ ಡಾ. ಕಿರಣ್ ಎಸ್ ಮೂರ್ತಿಯವರು ವಿಶೇಷ ಚೇತನ ಮಕ್ಕಳಿಗೆ ಫಿಜಿಯೋಥೆರಪಿ ಚಿಕಿತ್ಸೆಯನ್ನು ಹೇಗೆ ನೀಡಬೇಕು ಎಂಬುದರ ಪ್ರಾಯೋಗಿಕ ತರಬೇತಿ ಬೆಳಗ್ಗಿನ ಅವದಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೀಡಿದರು. A. P. C. O ಶ್ರೀಯುತ ಸುಭಾಷ್ ಚಂದ್ರಬೋಸ್ ರವರು ಕಾರ್ಯಾಗಾರಕ್ಕೆ ಎಲ್ಲರನ್ನು ಸ್ವಾಗತಿಸಿದರು ,ಬಿ.ಐ.ಇ.ಆರ್ .ಟಿ. ಕೃಷ್ಣಪ್ಪರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಮಧ್ಯಾಹ್ನದ ನಂತರದ ಅವಧಿಯ ಕಾರ್ಯಗಾರವನ್ನು ವೆಬಿನಾರ್ ಮೂಲಕ ಸಕ್ಷಮ‌ ಕರ್ನಾಟಕದ ಕಾರ್ಯದರ್ಶಿಗಳಾದ ಡಾ .ಹರಿಕೃಷ್ಣ ರೈ ಯವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು . ಕಾರ್ಯಕಾರಣಿ ಸದಸ್ಯೆ ಹಾಗೂ ಸೇವ ಇನ್ ಅಕ್ಷನ್ ಸಂಸ್ಥೆಯ ಉಪ ನಿರ್ದೇಶಕರು ಆದ ಶ್ರೀಮತಿ ವರದ ಹೆಗಡೆಯವರು ಬುದ್ಧಿ ನ್ಯೂನತೆಗೆ ಸಂಬಂಧಿಸಿದಂತೆ ಯಶೋಗಾಥೆಯ ಬುದ್ದಿನ್ಯೂನತೆ ಮಗುವನ್ನು ಉದಾಹರಿಸಿ ಹೇಗೆ ಹಂತಹಂತವಾಗಿ ಮಗುವನ್ನು ಸಮಾಜದ ಮುಖ್ಯವಾಹಿನಿಗೆ ತರಲಾಯಿತು ಎಂಬುದನ್ನು ವಿವರಿಸಿದರು .ಈ ಮಕ್ಕಳಿಗೆ ದೈನಂದಿನ ಜೀವನದ ಕೌಶಲ್ಯಗಳ ಕಲಿಕೆಯನ್ನುಕಲಿಸಿ ಸ್ವಾವಲಂಬಿಯಾಗಿ ಬದುಕಲು ಹೇಗೆ ಕಲಿಸಬೇಕು ಎಂಬುದನ್ನುಉದಾಹರಣೆ ಯೊಂದಿಗೆ ವಿವರಿಸಿದರು.

ತದನಂತರ ಹೆಲನ್ ಕೆಲರ್ ವಿದ್ಯಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಕ್ಷಮದ ಕಾರ್ಯಕಾರಣಿ ಸದಸ್ಯೆಯಾದ ಶ್ರೀಮತಿ ಗಾಯತ್ರಿ ಯವರು ವಾಕ್ ಶ್ರವಣ ನ್ಯೂನತೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಾ ವೈಯಕ್ತಿಕವಾಗಿ ತಮ್ಮ ಮಗನನ್ನು ಉದಾಹರಿಸಿ ಹೇಗೆ ವಾಕ್ ಶ್ರವಣ ಸಮಸ್ಯೆ ಇರುವ ತಮ್ಮ ಮಗುವಿಗೆ ಹೇಗೆ ಶಿಕ್ಷಣ ಮತ್ತು ಚಿಕಿತ್ಸೆಯನ್ನು ನೀಡಿ ಇಂದು ಇಂಜಿನಿಯರಿಂಗ್ ಪದವಿ ಪಡೆದು ಸಾಮಾನ್ಯ ವಿದ್ಯಾರ್ಥಿಗಳಿಗೆ ಬೋಧಿಸುವ ಸಾಮರ್ಥ್ಯ ಗಳಿಸಿದ್ದಾನೆ ಎಂಬ ಯಶೋಗಾಥೆಯನ್ನು ವಿವರಿಸುತ್ತ ವಾಕ್-ಶ್ರವಣ ವಿಕಲತೆಯ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳಿಗೆ ಹಲವು ಪರಿಹಾರ ಮಾರ್ಗೋಪಾಯಗಳನ್ನು ಸರಳವಾಗಿ ಹಾಗೂ ಮನಮುಟ್ಟುವಂತೆ ತಿಳಿಸಿದರು.

ಅಂತಿಮವಾಗಿ ಸಂವಾದ ಕಾರ್ಯಕ್ರಮದಲ್ಲಿ ಶ್ರೀಮತಿ ವರದ ಹೆಗಡೆ ಮತ್ತು ಶ್ರೀಮತಿ ಗಾಯತ್ರಿ ರವೀಶ್ ಅವರ ಜೊತೆಗೆ ಸಕ್ಷಮ ದ ಕಾರ್ಯಕಾರಿಣಿ ಸದಸ್ಯರಾದ ಶ್ರೀಯುತ ಸುಧೀಂದ್ರ ರವರು ಅವರು ದೃಷ್ಟಿ ನ್ಯೂನತೆವುಳ್ಳ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಾಗೂ ಸಂದೇಶ್ ಅವರು ದೈಹಿಕ ವಿಕಲತೆಯ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಿ.ಐ.ಇ.ಆರ್ .ಟಿ. ರವರು ಕೇಳಿದ ಎಲ್ಲಾ ಸಮಸ್ಯೆಗಳು ಹಾಗೂ ಪ್ರಶ್ನೆಗಳಿಗೆ ಸೂಕ್ತವಾದ ಪರಿಹಾರ ಮಾರ್ಗವನ್ನು ಹಾಗೂ ಸೂಕ್ತ ಮಾರ್ಗದರ್ಶನಗಳನ್ನು ನೀಡಿ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಕಾರ್ಯಕ್ರಮದ ಸಮರೋಪದ ಅವದಿಯಲ್ಲಿ, ಸಕ್ಷಮ‌ ಕರ್ನಾಟಕದ ಕಾರ್ಯದರ್ಶಿಗಳಾದ ಡಾ .ಹರಿಕೃಷ್ಣ ರೈ ಯವರು ಸಕ್ಷಮದ ರಾಷ್ಟ್ರೀಯ ಯೋಜನೆಯಾದ ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ ( ಕಾಂಬಾ)ದ ಬಗ್ಗೆ ಮಾಹಿತಿ ನೀಡಿ, ಸರಳ ನೇತ್ರದಾನ ಜಾಗೃತಿ ಕಾರ್ಯಕ್ರಮ ನಡೆಸಿ ಕೊಟ್ಟರು. DYPC ಶ್ರೀಮತಿ ಸುಕನ್ಯಾ ರವರು ಸಕ್ಷಮ ಕಾರ್ಯಗಾರದ ವಿಸ್ತೃತ ಅನುಭವಗಳನ್ನು ಹಂಚಿಕೊಂಡು ವಂದನಾರ್ಪಣೆಯೊಂದಿಗೆ ಕಾರ್ಯಗಾರ ಕೊನೆಗೊಳಿಸಿದರು.

The post 'ಸಕ್ಷಮ' ಸಂಸ್ಥೆಯಿಂದ ಜಿಲ್ಲಾ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರ first appeared on Vishwa Samvada Kendra.

ರಾಷ್ಟ್ರೋತ್ಥಾನ ಪರಿಷತ್ ನ ತಪಸ್ / ಸಾಧನಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

$
0
0

ರಾಷ್ಟ್ರೋತ್ಥಾನ ಪರಿಷತ್ ಒಂದು ಸಾಮಾಜಿಕ ಸೇವಾಸಂಸ್ಥೆಯಾಗಿದ್ದು, ಕಳೆದ 50 ವರ್ಷಗಳಿಂದ ಸೇವೆ, ಶಿಕ್ಷಣ, ಜಾಗೃತಿ – ಕ್ಷೇತ್ರಗಳ ಮೂಲಕ ಸಮಾಜದಲ್ಲಿ ಗುರುತರವಾದ ಕಾರ್ಯಗಳನ್ನು ಮಾಡುತ್ತಿದೆ. “ಜಾಗರಣ”ದ ಮೂಲಕ ಸೇವಾಬಸ್ತಿ (ಸ್ಲಂ)ಗಳಲ್ಲಿನ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ, ಸಂಸ್ಕಾರಗಳನ್ನು ಕೊಡುವುದರ ಮೂಲಕ ಅಲ್ಲಿನ ಜನರ ಜೀವನ ಉತ್ತಮವಾಗುವಂತೆ ಮಾಡಿದೆ. ರಾಷ್ಟ್ರೋತ್ಥಾನ ರಕ್ತನಿಧಿ ಕರ್ನಾಟಕ ರಾಜ್ಯಸರ್ಕಾರದಿಂದ “ಉತ್ತಮ ರಕ್ತನಿಧಿ” ಎಂಬ ಹೆಗ್ಗಳಿಕೆ ಪಡೆದು ಲಕ್ಷಾಂತರ ರೋಗಿಗಳಿಗೆ ರಕ್ತವನ್ನು ಸರಬರಾಜು ಮಾಡುತ್ತಿದೆ. ಅಲ್ಲದೆ ತಲೆಸ್ಸೀಮೀಯದಿಂದ ಬಳಲುತ್ತಿರುವವರಿಗೆ ಉಚಿತವಾಗಿ ರಕ್ತಪೂರಣ ಹಾಗೂ ಚಿಕಿತ್ಸೆಯನ್ನು ನೀಡುತ್ತಿದೆ. ಅವಕಾಶ ವಂಚಿತ ಮಕ್ಕಳಿಗೆ ನಂದಗೋಕುಲದ ಮೂಲಕ ಅವರಿಗೆ ವಸತಿಸಹಿತ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದೆ.

Rashtrotthana Parishat


ತಪಸ್ / ಸಾಧನಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ತಪಸ್ ಯೋಜನೆ (ಗಂಡು ಮಕ್ಕಳಿಗೆ)- ಆರ್ಥಿಕವಾಗಿ ಹಿಂದುಳಿದಿರುವ, ಪ್ರತಿಭಾವಂತ ಗಂಡು ಮಕ್ಕಳಿಗೆ ಪಿ.ಯು. ಶಿಕ್ಷಣ ಹಾಗೂ IIT-JEE ಪ್ರವೇಶಕ್ಕೆ ವಿಶೇಷ ತರಬೇತಿ ನೀಡಲಾಗುವುದು. ಊಟ, ವಸತಿ, ಶಿಕ್ಷಣ ಸಂಪೂರ್ಣ ಉಚಿತವಾಗಿರುತ್ತದೆ.

ಸಾಧನಾ ಯೋಜನೆ (ಹೆಣ್ಣು ಮಕ್ಕಳಿಗೆ) ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ
ಬಾಲಕಿಯರಿಗೆ ಪಿ.ಯು.ಜೊತೆಗೆ KVPY,NEET, CET, JEE ಗೆ ವಿಶೇಷ ತರಬೇತಿ- ಸಂಪೂರ್ಣ ಉಚಿತ.

ಅರ್ಹತೆಗಳು:
1. ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. 9ನೇ ತರಗತಿಯಲ್ಲಿ ಶೇ.80 ಅಂಕ ಗಳಿಸಿರಬೇಕು.
2. ಕುಟುಂಬದ ವಾರ್ಷಿಕ ಆದಾಯ ರೂ. 2.0 ಲಕ್ಷಕ್ಕೂ ಮೀರಿರಬಾರದು.
3. ಆಯ್ಕೆಯಾದ ವಿದ್ಯಾರ್ಥಿಗಳು ಪಿ.ಯು. ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಂದುವರಿಸಲು ಸಿದ್ಧರಿರಬೇಕು.
4. ಮುಂಬರುವ ಹತ್ತನೇ ತರಗತಿ ಪರೀಕ್ಷೆಯಲ್ಲೂ ಶೇ.90 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಬೇಕು.

ಆಯ್ಕೆ ವಿಧಾನ:
1. ಅರ್ಜಿಗಳನ್ನು ಆನ್‍ಲೈನ್‍ನಲ್ಲೇ ಸಲ್ಲಿಸಬೇಕು. www.tapassadhana.org ನಲ್ಲಿ ಅರ್ಜಿ
ಸಲ್ಲಿಸಿದ ತಕ್ಷಣ ಪರೀಕ್ಷಾ ಪ್ರವೇಶ ಪತ್ರ ದೊರೆಯುವುದು. ಅದನ್ನು ಮರೆಯದೇ ಪರೀಕ್ಷೆಗೆ ಬರುವಾಗ ತರಬೇಕು.
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 10. ಪರೀಕ್ಷಾ ದಿನಾಂಕ: 2021 ಜನವರಿ
31 ರಂದು ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರ ಮತ್ತು ಕೆಲವು ಪಟ್ಟಣಗಳಲ್ಲಿ ನಡೆಯಲಿದೆ.
3. ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಜನವರಿ 15 ರೊಳಗೆ ವೆಬ್‍ನಲ್ಲಿ ಪ್ರಕಟಿಸಲಾಗುವುದು.
4. ವಿದ್ಯಾರ್ಥಿಯ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.tapassadhana.org
9481201144 / 9448284615 / 9844602529

The post ರಾಷ್ಟ್ರೋತ್ಥಾನ ಪರಿಷತ್ ನ ತಪಸ್ / ಸಾಧನಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ first appeared on Vishwa Samvada Kendra.

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಂದ ಮತಾಂತರಕ್ಕೆ ಕುಮ್ಮಕ್ಕು: ಸಾರ್ವಜನಿಕರಿಂದ ತೀವ್ರ ಆಕ್ರೋಶ

$
0
0

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಂದ ಮತಾಂತರಕ್ಕೆ ಕುಮ್ಮಕ್ಕು: ಸಾರ್ವಜನಿಕರಿಂದ ತೀವ್ರ ಆಕ್ರೋಶ


23-11-2020, ಚಾಮರಾಜನಗರ: ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮತಾಂತರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ವಿಷಯ ಜಿಲ್ಲೆಯ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕೇವಲ ಪರೋಕ್ಷವಾಗಿ ಅಷ್ಟೇ ಅಲ್ಲದೆ ನೇರವಾಗಿಯೂ ಮತಾಂತರಿ ಕ್ರೈಸ್ತರೊಂದಿಗೆ ಶಾಮೀಲಾಗಿದ್ದಾರೆ ಎನ್ನುವ ಗಂಭೀರ ಆರೋಪವೂ ಕೇಳಿಬರುತ್ತಿದ್ದು, ಅವರ ಪತ್ನಿ ಕ್ರೈಸ್ತ ಮತೀಯರಾಗಿರುವುದೇ ಅದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.

ಈ ಹಿಂದೆ ಅವರು ಜವಳಿ ಇಲಾಖೆಯಲ್ಲಿದ್ದಾಗ ಮತ್ತು ಮೈಸೂರು ಜಿಲ್ಲೆಯ ಅಸಿಸ್ಟೆಂಟ್ ರೀಜನಲ್ ಕಮಿಷನರ್ ಆಗಿದ್ದಾಗಲೂ ಕ್ರೈಸ್ತ ಮತಾಂತರಿಗಳ ಕೆಲಸಕ್ಕೆ ಸಹಕರಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು ಕ್ರೈಸ್ತ ಮತ ವಿಸ್ತರಣೆಗೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಚಾಮರಾಜನಗರ ಜಿಲ್ಲೆಯ ತಾಲ್ಲೂಕಿಗಳಿಗೆ ಆಹಾರ ಕಿಟ್ ಹಾಗೂ ಔಷಧ ವಿತರಣೆಯಂತಹ ಸೇವಾ ಕಾರ್ಯಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅನುಮತಿ ಕೋರಿದ್ದಾಗ ಅದಕ್ಕೆ ಅನುಮತಿ ಕೊಡಲು ನಿರಾಕರಿಸಿ “ನೀವು ಸಂಗ್ರಹಿಸಿರುವ ಸಾಮಗ್ರಿಗಳನ್ನು ನಮಗೇ ನೀಡಿ” ಎಂದು ಹೇಳಿದ್ದ ಅವರು, ಹನೂರಿನ ಹೋಲಿಕ್ರಾಸ್ ಸಂಸ್ಥೆಗೆ ಯಾವುದೇ ಷರತ್ತೂ ಇಲ್ಲದೆ ಪಾಸ್ ಗಳನ್ನು ನೀಡಿದ್ದರು ಮತ್ತು ತಮ್ಮ ಅಧಿಕಾರ ಬಳಸಿಕೊಂಡು ಸಾರ್ವಜನಿಕರಿಂದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಕ್ರೈಸ್ತರ ಮೂಲಕ ವಿತರಣೆ ಮಾಡಿಸಿದ್ದರು. ಈ ಪ್ರಕರಣವು ಮತಾಂತರಿ ಮಿಷನರಿಗಳು ಅವರನ್ನು ತಮ್ಮ ಪರವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಲಾಕ್ ಡೌನ್ ಸಮಯದಲ್ಲಿ ಕ್ರೈಸ್ತ ಪಾದ್ರಿಗಳಿಗೆ ಮಾತ್ರ ಸುಲಭವಾಗಿ ಜಿಲ್ಲೆಯೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ದಾಸ್ ಎಂಬ ಅಧಿಕಾರಿಯು ದಿವ್ಯಾಂಗರ ಇಲಾಖೆಯಲ್ಲಿರುವ ಚಾಲಕ ಹಾಗು ನಾಲ್ಕನೇ ದರ್ಜೆಯ ಮೂವರು ನೌಕರರನ್ನು ಕ್ರೈಸ್ತ ಮತಕ್ಕೆ ಮತಾಂತರಿಸಿದ್ದು ಮುಂತಾದ ವಿಷಯಗಳೆಲ್ಲದರಲ್ಲೂ ಜಿಲ್ಲಾಧಿಕಾರಿಗಳ ಕೈವಾಡವಿದೆ ಎನ್ನುವ ಕೂಗೂ ಕೇಳಿಬರುತ್ತಿದೆ.

ಇಷ್ಟೇ ಅಲ್ಲದೆ ಹಿಂದೂ ದೇವಸ್ಥಾನಗಳಿಗೆ ಕ್ರೈಸ್ತರನ್ನು ನೇಮಿಸುವ ಯತ್ನವೂ ಅವರಿಂದ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಕಿಚ್ಚುಗತ್ತಿ ಮಾರಮ್ಮ ದೇವಾಲಯದ ಆಡಳಿತ ಮಂಡಳಿಗೆ ಸ್ಥಳೀಯ ಕ್ರೈಸ್ತ ಪಾದ್ರಿಗಳ ನೇಮಕ ಮತ್ತು ಅಲ್ಲಿನ ಸಮಸ್ಯೆಗಳ ಪರಿಹಾರ ಸಭೆಗಳಲ್ಲಿ ಕ್ರೈಸ್ತ ಪಾದ್ರಿಗಳ ಕಡ್ಡಾಯ ಉಪಸ್ಥಿತಿಗೆ ಆದೇಶವಿತ್ತಿರುವುದು ಆ ಆರೋಪಗಳನ್ನು ಪುಷ್ಟೀಕರಿಸುವಂತಿವೆ. ಹಿಂದೂ ದೇವಾಲಯಗಳ ಸಭೆಗಳಲ್ಲಿ ಪಾದ್ರಿಗಳಿಗೇನು ಕೆಲಸ ಎಂದು ಸ್ಥಳೀಯರು ಇದೀಗ ಧ್ವನಿ ಎತ್ತುತ್ತಿದ್ದಾರೆ.

ಇಷ್ಟೇ ಅಲ್ಲದೆ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ,ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಮತ್ತು ಮುಜರಾಯಿ ಇಲಾಖೆಯಡಿ ಬರುವ ಇನ್ನಿತರ ಎ ಮತ್ತು ಬಿ ದರ್ಜೆಯ ದೇವಾಲಯಗಳ ಕಾವಲಿಗೆ ಕ್ರೈಸ್ತ ಮತೀಯ ಮಾಜಿ ಸೈನಿಕರುಗಳಿಂದಲೇ ಅರ್ಜಿ ಸ್ವೀಕರಿಸಿ ಹಿಂದೂ ದೇವಾಲಯಗಳ ಕಾವಲಿಗೆ ಕ್ರಿಶ್ಚಿಯನ್ನರನ್ನೇ ತುಂಬುವ ತೆರೆಮರೆಯ ಕಸರತ್ತು ಕೂಡಾ ನಡೆಯುತ್ತಿರುವುದು ಜಿಲ್ಲೆಯ ಜನರ ಗಮನಕ್ಕೆ ಬಂದಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಇತ್ತೀಚಿಗೆ ವನವಾಸಿ ಕಲ್ಯಾಣ ಸಂಸ್ಥೆಯು “ಮತಾಂತರಿ ವನವಾಸಿಗಳಿಗೆ ನೀಡಲಾಗುತ್ತಿರುವ ಮೀಸಲಾತಿ ಸೌಲಭ್ಯವನ್ನು ಸ್ಥಗಿತಗೊಳಿಸಿ” ಎನ್ನುವ ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ತೆರಳಿದ್ದ ವನವಾಸಿ ಕಾರ್ಯಕರ್ತರ ಫೋಟೋ ತೆಗೆದುಕೊಂಡರೆ ಎಲ್ಲರ ಮೊಬೈಲ್ ಗಳಿಂದ ಆ ಫೋಟೋಗಳನ್ನು ಅಳಿಸಿ ಹಾಕಿಸಿದ್ದಲ್ಲದೆ ತಮ್ಮ ತೀವ್ರ ಕೋಪವನ್ನು ವ್ಯಕ್ತಪಡಿಸುವ ಮೂಲಕ ವನವಾಸಿಗಳ ಮತಾಂತರಕ್ಕೆ ತಮ್ಮ ಬೆಂಬಲವನ್ನು ಬಹಿರಂಗವಾಗಿಯೇ ಅವರು ತೋರ್ಪಡಿಸಿಕೊಂಡಿದ್ದರು.

ಜಿಲ್ಲಾಧಿಕಾರಿಗಳ ಈ ನಡೆಗಳನ್ನು ವಿರೋಧಿಸಿ,ಕ್ರಿಶ್ಚಿಯನ್ ಮಿಷನರಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವುದನ್ನು ಖಂಡಿಸಿ ಮತಾಂತರ ವಿರೋಧಿ ಹೋರಾಟ ಸಮಿತಿಯು ನಗರದ ಮಾರಿಗುಡಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆ ನಡೆಸಿ ತನ್ನ ಪ್ರತಿಭಟನೆಯನ್ನು ದಾಖಲಿಸಲಿದೆ.ಜಿಲ್ಲಾಧಿಕಾರಿಗಳು ತಮ್ಮ ಮತಾಂತರಿ ನಿಲುವನ್ನು ಕೈಬಿಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿಯೂ ಸಮಿತಿಯು ಎಚ್ಚರಿಸಿದೆ.

ವರದಿ : ಮೈಸೂರು ತಂಡ

The post ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಂದ ಮತಾಂತರಕ್ಕೆ ಕುಮ್ಮಕ್ಕು: ಸಾರ್ವಜನಿಕರಿಂದ ತೀವ್ರ ಆಕ್ರೋಶ first appeared on Vishwa Samvada Kendra.

Jayanagar MLA fears questions and blocks Karnataka’s RSS Media in charge

$
0
0

A tweet from RSS Pracharak and Media wing in-charge of RSS Karnataka Dakshina Pranth Sri Pradeep Mysuru which only posed a question to Bengaluru’s Jayanagar MLA Sowmya Reddy of Congress has resulted in possibly what is called  “intolerance”. As a result of which, Pradeep is now blocked by the MLA.

The story unfolds this way. A line from Kannada poem authored by the first Jnanapith Award winner Dr. K V Puttappa (Kuvempu) goes “Barisu Kannada Dimdimava, Oh Karnataka Hrudaya Shiva”

Barisu Kannada Dimdimava O Karnataka Hrudaya Yesu

The state festival Kannada Rajyotsava is celebrated throughout the month of November and ‘Om Kannada Mariyammana Karunada Sangha’ based out of Jayanagar, Bengaluru used the line from the poet laureate’s ode in their poster by changing Shiva to Yesu. The poster carried the photo of Jayanagar’s MLA Miss Sowmya Reddy. Ms.Reddy, daughter of Ex minister Ramalinga Reddy, has been known for her “secularism” façade. She had posted a recent photo during Navaratri by having Jesus Christ and Mosque photo along side Bhagawan Ganesh’s picture. She was offering an arati to the photos.

While the need for a bringing in Yesu (Jesus Christ) in the poster by deforming the poem was an attempt to tarnish the image of the poet and the emotion associated, the social media started questioning Ms. Reddy over the poster. Soumya Reddy tweeted after these questioning went viral on social media. Soumya Reddy evading the questions posed to her, and eventually posted a clarification on Twitter.

Sri Pradeep Mysuru who is full time RSS worker(Pracharak) and also holds the responsibility of media in RSS for Karnataka Dakshina Pranth also asked Soumya on Twitter “You have provided a clarification but not yet answered the questions which are in the open world. You were asked to write an essay on the cow,instead you have written an essay about the pole to which it was tied to!”

Pradeep Mysuru did receive an answer to his tweet and it was through blocking of him on Twitter by the MLA.

While one could argue that blocking on Twitter is a personal choice the moot points to be considered here are as below:

1. There was no derogatory content posted by Pradeep

2. Tweet by Pradeep to Soumya  was a natural mood of the Twitterati

People’s representatives have a role to play by serving the people. On social media their responsibility is higher in answering and entering healthy debates. Evading from questions is highly unacceptable from people’s representatives. Congress has been notorious in stifling voices (not just from the days of Emergency of 1975 but from way earlier). The voices were restrained by the Congress Government under Siddaramaiah rule as well as the coalition government led by H D Kumaraswamy and Congress.

The blocking of people on social media is more of a hit and run from debate lacking the courage to face tough questions. It also is a display of controlling the opinions which are against their thought process and a digital form of stifling voices. While the demand is not to have Pradeep unblocked, but MLA Soumya Reddy and many like her could get strong intellectually and enter debates more freely.

Was it RSS in the bio of Pradeep Mysuru itself lead to the “intolerance”? The answer to the above if goes in affirmation is much more dangerous.


Post being blocked, Pradeep Mysuru tweeted, It has been proved that paying heed to opinions, answering without scooting and blocking are beyond the capabilities of Congress’ Soumya Reddy. What more can one expect from the party (Congress) under Siddaramaiah who had imposed on the people of Karnataka, the Jayanti of  Tipu Sultan the Kannada antagonist.

The post Jayanagar MLA fears questions and blocks Karnataka's RSS Media in charge first appeared on Vishwa Samvada Kendra.

Public outrage against Chamarajanagar DC Dr M R Ravi for his support to religious conversion

$
0
0

Public outrage against Chamarajanagar DC Dr M R Ravi: Is he covertly supporting religious conversion?

Dr. MR Ravi, DC Chamarajanagar

The indirect support given by Dr M R Ravi Chamarajanagar DC for religious conversion has been a matter of extreme outrage for the public of the district and various different organisations. It is charged that he is involved in such activities both indirectly and actively. This is attributed to the fact that his wife happens to be a Christian.

It is said that while he was in Textiles department and Assistant Regional commissioner of Mysore district he supported the activities of the Christian Missionaries for conversion and extension of Christianity for which he misused his official power.

During Corona lockdown situation, he refused permission to the RSS for social services such as distribution of food kits and medicines to the public, instead he asked them to handover the material to him/his department. On the other hand he has granted passes to the Holy Cross organisation, unconditionally. And also misusing his power he collected food items on the public and got it distributed through Christians. This incident is a clear indication of Christian missionaries using him for their purposes.

During the lockdown, only Christian priest were given clear passage into the district and it is also said that Das an official in the district office, a driver in Divyanga department and four group D employees have been converted,in which DC is involved.

In addition to this,he is accused of making efforts to designate Christians into Hindu temples, such as appointing Christian Priests in the administrative board of Kicchugatti Maramma temple and making their presence mandatory in the problem solving meetings. This has further raised the suspicion and the localites have been questioning the relevance of the presence of the priests in the affairs of the temple.

Apart from this it is found that applications are received only from Christian ex servicemen to be appointed as security guards for the the Malai Mahadeshwara temple, Kicchugatti Maramma temple and other A and B class temples governed by the muzrai department and thus appointing only Christians in the Hindu temples.This has further infuriated general public.

Recently when the Vanavasi welfare organisation when to meet the DC with the petition against the reservation facility given to the converted vanavasis, he expressed violent anger by deleting the snaps of the activists from the mobile phone, thus supported the conversion of vanavasis.

Anti conversion(fighting) committee has resisted and expressed its objections and anger against the DC who appears to be playing into the hands of the Christian missionaries,by taking out a procession from Maari gudi in the town to DC’s office. It has also warned to intensify it’s fight, if the DC does not stop his conversion stand.

The post Public outrage against Chamarajanagar DC Dr M R Ravi for his support to religious conversion first appeared on Vishwa Samvada Kendra.

Pradeep Mysuru unblocked by Congress MLA. But questions remain unanswered!!

$
0
0

In a sudden development post the story of RSS Media Incharge for Karnataka South Pradeep Mysuru being blocked on Twitter by Jayanagar MLA Soumya Reddy of the Congress was broken by VSK Karnataka (Read it here), Congress MLA has unblocked the former a few hours ago.

While VSK in its report had not demanded Pradeep be unblocked and only urged people representatives to be open for debate, the unblocking seems to be in way of answering the public who persistently questioned the Congress MLA for blocking Pradeep. Twitterati questioned the stance of the MLA post VSK reporting it. The VSK team spoke to Pradeep Mysuru, the RSS Pracharak and asked for his first response after being unblocked.

Pradeep Mysuru guffawed and said the questions which were posed to Soumya Reddy in the first place remained unanswered. He listed down a few:

  • Kannada Rajyotsava being a cultural event would have Bhuvaneshwari Mata’s photo. The same is being sidelined to portray Christianity, Mary, Infant Jesus and Jesus Christ.
  • Kannada Rajyotsava was never celebrated so far by groups as a religious event but the organisation’s (Om Kannada Mariyammana Karunada Sangha) attempt is clearly towards pushing Christian conversions vehemently.
  • Rao Bahadur Deshpande who coined Sirigannadam Gelge and Sirigannadam Balge (Roughly translates to Richness of Kannada Triumphs and lives on) later popularized by B M Srikantaiah, Kuvempu is coupled with Jai Yesu and Jai Christa slogans.
  • Though there is a Jai Karnataka Mate in the poster, the attempt to couple it with Jai Devamate Maria is also an attempt to woo and drive conversions.
  • Lastly “Barisu Kannada Dindimava O Karnataka Hrudaya Shiva”  is deformed into ‘Hrudaya Yesu’, which also implies conversion and an attempt to disrespect Poet Laureate Dr. K V Puttappa.

“Congress MLA Soumya Reddy’s clarification note stood more as a justification of such attempts let alone answering the questions posed in social domain and she seems to be supporting such cheap Christian conversions”, Pradeep opined in the call.

Pradeep further questioned if MLA Soumya Reddy had asked for the editing of the poster (according to her clarification), why are the posters of the edits not available in public domain till now? Has Soumya Reddy attended the event with all such cheap tactics in mind or is she oblivious of such immoral and unscrupulous things?

There has been a concerted effort of the missionaries to popularize Christianity and Samvada media has exposed quite a few instances which have happened in the State. Few years ago, the Christian conversion virus would break out during occasions like Christmas, but off late it has become a  perennial affair. Such kinds of cultural invasions are cheap tricks to woo and to eventually convert people to Christianity.

As Pradeep points out, Soumya Reddy needs to come clean on whether she had attended the “Christian” Rajyotsava, and why the poster she had requested to be edited is still not available in public domain? She also has to answer if she does support such unprincipled practices.

The post Pradeep Mysuru unblocked by Congress MLA. But questions remain unanswered!! first appeared on Vishwa Samvada Kendra.

ಟ್ವಿಟರ್ ನಲ್ಲಿ ಬ್ಲಾಕ್, ಅನ್ ಬ್ಲಾಕ್ ಆಟ. ಮೂಲ ಪ್ರಶ್ನೆಗಳಿಗೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ನಿರುತ್ತರ

$
0
0

ಪ್ರಶ್ನೆಗಳಿಗೆ ಹೆದರಿ ಆರ್ ಎಸ್ ಎಸ್ ಮಾಧ್ಯಮ ಮುಖ್ಯಸ್ಥರನ್ನು  ಟ್ವಿಟರ್ನಲ್ಲಿ ಬ್ಲಾಕ್ ಮಾಡಿದ ಜಯನಗರ ಶಾಸಕಿ

ಆರೆಸ್ಸೆಸ್ಸಿನ ಪ್ರಚಾರಕರು ಹಾಗೂ ಕರ್ನಾಟಕ ದಕ್ಷಿಣ ಪ್ರಾಂತದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮುಖ್ಯಸ್ಥರು ಆದ ಶ್ರೀ ಪ್ರದೀಪ್ ಮೈಸೂರು ಅವರ ಒಂದು ಪ್ರಶ್ನೆಗೆ ಉತ್ತರಿಸಲಾಗದೆ ಅವರನ್ನು ಟ್ವಿಟರ್ನಲ್ಲಿ ಬ್ಲಾಕ್ ಮಾಡುವ ಮೂಲಕ ಬೆಂಗಳೂರಿನ ಜಯನಗರ ಶಾಸಕಿಯಾದ, ಕಾಂಗ್ರೆಸ್ ಪಕ್ಷದ ಸೌಮ್ಯ ರೆಡ್ಡಿ ಅವರು ಅಸಹಿಷ್ಣುತೆಯನ್ನು ಪ್ರದರ್ಶಿಸಿದ್ದಾರೆ.

ನಡೆದ ಘಟನಾವಳಿಗಳು ಈ ರೀತಿ ಇವೆ. ಕನ್ನಡದ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಆದ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಒಂದು ಸುಪ್ರಸಿದ್ಧ ಪದ್ಯ ಹಾಗೂ ಕನ್ನಡಿಗರ ಹೃದಯಸ್ಪರ್ಶಿ ಸಾಲುಗಳಾದ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ..“  ಇದನ್ನು ಕೇಳಿದ ಕೂಡಲೇ ಕನ್ನಡಿಗರ ಮನಸು ಪುಳಕಿತಗೊಳ್ಳುತ್ತದೆ. ಇದು ಕೇವಲ ಅಕ್ಷರಗಳ ಸಾಲಲ್ಲ ಇದು ಕನ್ನಡಿಗರ ನಾಡಿಮಿಡಿತ.

ನವೆಂಬರ್ ತಿಂಗಳು ಪೂರ್ತಿ  ಈ ಹಾಡನ್ನು ಎಲ್ಲೆಲ್ಲೂ ಮೊಳಗಿಸುತ್ತಾ  ಇಡೀ ಕರ್ನಾಟಕ ರಾಜ್ಯವೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಜಯನಗರ ಮೂಲದ ‘ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘ’ ಈ ಪ್ರಸಿದ್ಧ ಸಾಲುಗಳನ್ನು ಅಪಬ್ರಂಶ ಮಾಡಿ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಯೇಸು” ಎಂದು ತಮ್ಮ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯ ಪೋಸ್ಟರ್ನಲ್ಲಿ ಹಾಕಿಕೊಂಡಿದ್ದಾರೆ. ಆ ಪೋಸ್ಟರ್ ನ ಮಧ್ಯಭಾಗದಲ್ಲಿ ಸೌಮ್ಯ ರೆಡ್ಡಿಯವರ ಚಿತ್ರವೂ ಇತ್ತು. ಸೌಮ್ಯ ರೆಡ್ಡಿ ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳಾದ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸೆಕ್ಯುಲರಿಸಂ ಮುಖವಾಡವನ್ನು ತೋರಿಸುವುದಕ್ಕಾಗಿ ನವರಾತ್ರಿ ಸಮಯದಲ್ಲಿ ಗಣೇಶ, ಏಸುಕ್ರಿಸ್ತ ಮತ್ತು ಮಸೀದಿಯ ಭಾವಚಿತ್ರಕ್ಕೆ ಆರತಿಯನ್ನು ಮಾಡುತ್ತಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಕವಿತೆಯನ್ನು ವಿರೂಪಗೊಳಿಸಿ ಪೋಸ್ಟರ್‌ನಲ್ಲಿ ಯೇಸುವನ್ನು ತರುವ ಮೂಲಕ ಕವಿಯ ಚಿತ್ರಣವನ್ನು ಮತ್ತು ಅದಕ್ಕೆ ಸಂಬಂಧಿಸಿದ ಭಾವನೆಯನ್ನು ಕೆಡಿಸುವ ಪ್ರಯತ್ನ ಇದಾಗಿದೆ. ಇದನ್ನು ಪ್ರಶ್ನಿಸಿ ಬಹಳಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಸೌಮ್ಯ ರೆಡ್ಡಿ  ರವರ ಮುಖಕ್ಕೆ  ಛೀಮಾರಿ ಹಾಕಿ ಪ್ರಶ್ನಿಸಿದಾಗ, ಸ್ಪಷ್ಟೀಕರಣ ನೀಡಲು ಪ್ರಾರಂಭಿಸಿದರು.  ಆರ್‌ಎಸ್‌ಎಸ್ ನ ಪೂರ್ಣಾವಧಿ ಕಾರ್ಯಕರ್ತರಾದ (ಪ್ರಚಾರಕ್) ಮತ್ತು  ಆರ್‌ಎಸ್‌ಎಸ್‌ನಲ್ಲಿ  ಕರ್ನಾಟಕ ದಕ್ಷಿಣ ಪ್ರಾಂತದ  ಮಾಧ್ಯಮದ ಜವಾಬ್ದಾರಿಯನ್ನು ಹೊಂದಿರುವ ಶ್ರೀ ಪ್ರದೀಪ್ ಮೈಸೂರು ಸಹ ಸೌಮ್ಯ ಅವರನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದರು. “ನಮಸ್ಕಾರ ಬೆಳಗ್ಗಿನಿಂದ ಜನ ನಿಮ್ಮನ್ನು ಕೇಳುತ್ತಿರುವುದೇ ಬೇರೆಯ ಪ್ರಶ್ನೆ. ನೀವದಕ್ಕೆ ಉತ್ತರಿಸಿಲ್ಲ. ಹಸುವಿನ ಬಗ್ಗೆ ಪ್ರಬಂಧ ಬರೆಯಲು ಕೇಳಿದರೆ ನೀವು ಹಸುವನ್ನು ಕಟ್ಟಿದ ಕಂಬದ ಬಗ್ಗೆ ಬರೆದಿದ್ದೀರಿ.“ ಎಂದು ಪ್ರದೀಪ್ ಮೈಸೂರ್ ಅವರು ಬರೆದಿದ್ದರು. ಆದರೆ ಸೌಮ್ಯ ರೆಡ್ಡಿ ಅವರು ಕೊಟ್ಟ ಉತ್ತರವೇ ಬೇರೆ. ಅದು ಅಸಹಿಷ್ಣುತೆಯ ಉತ್ತರ. ಪ್ರದೀಪ್ ಮೈಸೂರು ಅವರನ್ನು ಬ್ಲಾಕ್ ಮಾಡಿಬಿಟ್ಟರು. 

ಜನಪ್ರತಿನಿಧಿಯ ಸ್ಥಾನದಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಯಮ ತೋರಿಸುತ್ತಾ,  ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾದದ್ದು ಕರ್ತವ್ಯವೇ ಹೊರತು ಪಲಾಯನ ಮಾಡುವುದು ಸ್ವಾಗತಾರ್ಹವಲ್ಲ.  ಪ್ರಶ್ನೆಗಳನ್ನು ಕೇಳುವವರನ್ನು ಬ್ಲಾಕ್ ಮಾಡುವುದು ಬಾಯಿ ಮುಚ್ಚಿಸುವುದು ಕಾಂಗ್ರೆಸ್ಸಿಗೆ ಹೊಸದೇನಲ್ಲ.  ತಮ್ಮನ್ನು ಪ್ರಶ್ನಿಸುವ ಧ್ವನಿಗಳನ್ನು ನಿಗ್ರಹಿಸುವಲ್ಲಿ ಕಾಂಗ್ರೆಸ್ ಕುಖ್ಯಾತಿ ಪಡೆದಿದೆ (1975 ರ ತುರ್ತು ಪರಿಸ್ಥಿತಿ ಮಾತ್ರವಲ್ಲದೆ ಮೊದಲಿನಿಂದಲೂ). ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಎಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಈ ಧ್ವನಿಗಳನ್ನು ತಡೆಹಿಡಿದಿದೆ. 


ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಬ್ಲಾಕ್ ಮಾಡುವುದು, ಕಠಿಣ ಪ್ರಶ್ನೆಗಳನ್ನು ಎದುರಿಸುವ ಧೈರ್ಯವನ್ನು ಹೊಂದದೆ ಚರ್ಚೆಯಿಂದ ಪಲಾಯನ ಮಾಡುವುದು,  ಇದು ಅವರ ಆಲೋಚನಾ ಪ್ರಕ್ರಿಯೆಗೆ  ಹಾಗೂ ಅಭಿಪ್ರಾಯಗಳನ್ನು ನಿಯಂತ್ರಿಸುವ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗಿದೆ.

ಪ್ರದೀಪ್ ಮೈಸೂರು ಪ್ರೊಫೈಲ್ನಲ್ಲಿ ಆರೆಸ್ಸೆಸ್ ಅಂತ ಇದ್ದದ್ದೆ ಅಸಹಿಷ್ಣುತೆಯ ಕಾರಣವಾಯಿತೇ? ಬ್ಲಾಕ್ ಮಾಡಿದ ನಂತರ ಪ್ರದೀಪ್ ಈ ರೀತಿ ಟ್ವೀಟ್ ಮಾಡಿದ್ದಾರೆ
“ ಅಭಿಪ್ರಾಯಗಳನ್ನು ಆಲಿಸುವುದು, ಪ್ರಶ್ನೆಗಳು ಎದುರಾದಾಗ ಪಲಾಯನ ಮಾಡದೆ, ಬ್ಲಾಕ್ ಮಾಡದೆ ಉತ್ತರಿಸುವುದು, @INCKarnataka @Sowmyareddyr ಯ ಸಾಮರ್ಥ್ಯಕ್ಕೆ ಮೀರಿದ್ದು ಎಂಬುದು ಸಾಬೀತಾಗಿದೆ. ಕನ್ನಡ ವಿರೋಧಿ ಟಿಪ್ಪು ಜಯಂತಿಯನ್ನು ಕನ್ನಡಿಗರ ಮೇಲೆ ಹೇರಿದ @siddaramaiah ಅವರ ಪಕ್ಷದಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲಾಗದು.”
ಪ್ರದೀಪ್ ಅವರನ್ನು ಅನ್-ಬ್ಲಾಕ್ ಮಾಡಬೇಕೆಂಬುದು ಬೇಡಿಕೆಯಲ್ಲ, ಆದರೆ ಶಾಸಕಿ ಸೌಮ್ಯಾ ರೆಡ್ಡಿ ಮತ್ತು ಅವರಂತಹ ಅನೇಕರು ಬೌದ್ಧಿಕ ಪ್ರಭುತ್ವವನ್ನು ಪಡೆದುಕೊಳ್ಳಬೇಕು ಮತ್ತು ಚರ್ಚೆಗಳಲ್ಲಿ ಹೆಚ್ಚು ಮುಕ್ತವಾಗಿ ಭಾಗವಹಿಸಬೇಕು. 
ವಿಶ್ವ ಸಂವಾದ ಕೇಂದ್ರ  ಈ ಬೆಳವಣಿಗೆಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಹಠಾತ್ತನೆ ಪ್ರದೀಪ್ ಮೈಸೂರು ಅವರನ್ನು ಟ್ವಿಟ್ಟರ್ ನಲ್ಲಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು  ಕೆಲವೇ ಗಂಟೆಗಳ ಮೊದಲು ಅನ್-ಬ್ಲಾಕ್ ಮಾಡಿದ್ದಾರೆ. 
ವಿ ಎಸ್ ಕೆ  ತನ್ನ ವರದಿಯಲ್ಲಿ ಪ್ರದೀಪ್ ಮೈಸೂರು ಅವರನ್ನು  ಅನ್-ಬ್ಲಾಕ್  ಮಾಡಬೇಕೆಂಬ ಬೇಡಿಕೆಯನ್ನು ಇಡಲಿಲ್ಲ, ಬದಲಿಗೆ ಜನಪ್ರತಿನಿಧಿಗಳು ಚರ್ಚೆಗೆ ಮುಕ್ತರಾಗಬೇಕೆಂದು ಮಾತ್ರ ಒತ್ತಾಯಿಸಿತ್ತು. ಶಾಸಕಿ ಸೌಮ್ಯ ರೆಡ್ಡಿ ಅವರು ಪ್ರದೀಪ ರನ್ನು ಬ್ಲಾಕ್ ಮಾಡಿದ ನಡೆಯನ್ನು ಅನೇಕ ಜನ ಪ್ರಶ್ನಿಸಿದ ಕಾರಣ, ಅದಕ್ಕೆ ಉತ್ತರವೆಂಬಂತೆ ಪ್ರದೀಪ್ ರನ್ನು ಅನ್-ಬ್ಲಾಕ್ ಮಾಡಲಾಗಿದೆ.  ಅನ್ ಬ್ಲಾಕ್ ನಂತರ ವಿ ಎಸ್ ಕೆ ತಂಡ ಪ್ರದೀಪ್ ರನ್ನು ಮಾತನಾಡಿಸಿದಾಗ, ಈ ಕೆಳಕಂಡ ಪ್ರಶ್ನೆಗಳಿಗೆ ಸೌಮ್ಯ ರೆಡ್ಡಿ ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಹೇಳಿದರು. 
1.         ಕನ್ನಡ ರಾಜ್ಯೋತ್ಸವವು ಸಾಂಸ್ಕೃತಿಕ ಕಾರ್ಯಕ್ರಮವಾಗಿರುವುದರಿಂದ ತಾಯಿ ಭುವನೇಶ್ವರಿ ಫೋಟೋ ಇರಬೇಕಿತ್ತು ಆದರೆ ಕ್ರಿಶ್ಚಿಯನ್ ಧರ್ಮ, ಮೇರಿ ಮತ್ತು ಶಿಶು ಜೀಸಸ್ ಇರಿಸಿ, ಭುವನೇಶ್ವರಿಯನ್ನು  ಕಡೆಗಣಿಸಲಾಗಿದೆ.
2.        ಕನ್ನಡ ರಾಜ್ಯೋತ್ಸವವನ್ನು ಇದುವರೆಗೆ ಧಾರ್ಮಿಕ ಕಾರ್ಯಕ್ರಮವಾಗಿ ಆಚರಿಸಲಾಗಿಲ್ಲ ಆದರೆ ಕ್ರಿಶ್ಚಿಯನ್ ಮತಾಂತರಗಳನ್ನು ತೀವ್ರವಾಗಿ ಪ್ರೋತ್ಸಾಹಿಸುವ ಕಡೆಗೆ ಸಂಘಟನೆಯ ಪ್ರಯತ್ನ ಸ್ಪಷ್ಟವಾಗಿದೆ.
3.        ರಾವ್ ಬಹದ್ದೂರ್ ದೇಶಪಾಂಡೆ ಕೊಟ್ಟ  “ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ “ ಘೋಷವಾಕ್ಯವನ್ನು  ವಿಕೃತಗೊಳಿಸಿ ಜೈ ಏಸು ಜೈ ಕ್ರಿಸ್ತ ಸೇರಿಸಿರುವುದು ಎಷ್ಟು ಸರಿ ? 
4.       ಕೊನೆಯದಾಗಿ “ಬಾರಿಸು ಕನ್ನಡ ಡಿಂಡಿಮವಾ ಓ ಕರ್ನಾಟಕ ಹೃದಯ ಶಿವ” ಅನ್ನು “ಹೃದಯ ಯೇಸು” ಎಂದು ವಿರೂಪಗೊಳಿಸಲಾಗಿದೆ.  ಮತಾಂತರ ಮತ್ತು ಕವಿ ಡಾ. ಕೆ ವಿ ಪುಟ್ಟಪ್ಪ ಅವರನ್ನು ಅಗೌರವಗೊಳಿಸುವ ಪ್ರಯತ್ನವನ್ನೂ ಸೂಚಿಸುತ್ತದೆ. ಇದಕ್ಕೆ ಸೌಮ್ಯ ರೆಡ್ಡಿ ಅವರ ಒಪ್ಪಿಗೆ ಇತ್ತೇ ?
5.        ಕಾರ್ಯಕ್ರಮದ ಆಯೋಜಕರನ್ನು ಪೋಸ್ಟರ್ ತಿದ್ದುಪಡಿ ಮಾಡಲು ಸೌಮ್ಯ ರೆಡ್ಡಿ ಹೇಳಿದ್ದರೆ? ಪರಿಷ್ಕೃತ ಪೋಸ್ಟರ್ ಹೊರಗೆ ಏಕೆ ಬಂದಿಲ್ಲ? ಸೌಮ್ಯಾ ರೆಡ್ಡಿ ಈ ಎಲ್ಲ ಅಗ್ಗದ ತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ?
ಕ್ರಿಶ್ಚಿಯನ್ ಧರ್ಮವನ್ನು ಜನಪ್ರಿಯಗೊಳಿಸಲು ಮಿಷನರಿಗಳ ಒಗ್ಗಟ್ಟಿನ ಪ್ರಯತ್ನ ನಡೆದಿದೆ. ಕಾಲಕಾಲಕ್ಕೆ ವಿ ಎಸ್ ಕೆ ಮತಾಂತರದ ಕುತಂತ್ರಗಳನ್ನು ಬಹಿರಂಗಪಡಿಸುತ್ತ ಬಂದಿದೆ. ಕ್ರಿಸ್ಮಸ್ ಸಮಯಕ್ಕೆ ಹೆಚ್ಚಾಗುತ್ತಿದ್ದ ಮಿಷನರಿಗಳ ಚಟುವಟಿಕೆಗಳು ಈಗ ವರ್ಷಪೂರ್ತಿ ನಿರರ್ಗಳವಾಗಿ ನಡೆಯುತ್ತಿವೆ. ಈ ರೀತಿಯ ಸಾಂಸ್ಕೃತಿಕ ಆಕ್ರಮಣಗಳು ಜನರನ್ನು ಸೆಳೆಯಲು ಮತ್ತು ಅಂತಿಮವಾಗಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಅಗ್ಗದ ತಂತ್ರಗಳಾಗಿವೆ.

ಪ್ರದೀಪ್ ಗಮನಿಸಿದಂತೆ ಸೌಮ್ಯಾ ರೆಡ್ಡಿ ಅವರು “ಕ್ರಿಶ್ಚಿಯನ್” ರಾಜ್ಯೋತ್ಸವಕ್ಕೆ ಹಾಜರಾಗಿದ್ದಾರೆಯೇ ಮತ್ತು ಅವರು ಕೋರಿರುವ ಪರಿಷ್ಕೃತ ಪೋಸ್ಟರ್ ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲ ಮತ್ತು ಅಂತಹ ನೀತಿಬಾಹಿರ ಅಭ್ಯಾಸಗಳನ್ನು ಸೌಮ್ಯಾ ರೆಡ್ಡಿ ಅವರು ಬೆಂಬಲಿಸುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಬೇಕು.

The post ಟ್ವಿಟರ್ ನಲ್ಲಿ ಬ್ಲಾಕ್, ಅನ್ ಬ್ಲಾಕ್ ಆಟ. ಮೂಲ ಪ್ರಶ್ನೆಗಳಿಗೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ನಿರುತ್ತರ first appeared on Vishwa Samvada Kendra.


ನಿವಾರ್ ಭೀಕರ ಚಂಡಮಾರುತದಲ್ಲಿ ಆರೆಸ್ಸೆಸ್ ಸೇವಾಕಾರ್ಯ

$
0
0

ನಿವಾರ್ ಚಂಡಮಾರುತದಿಂದ ಉಂಟಾದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಚೆನ್ನೈ, ಕಾಂಚೀಪುರಂ, ಚಂಗಲಪಟ್ಟು, ಕಡಲೂರು, ಪನ್ರುಟ್ಟಿ, ಪಳವೆರ್ಕಾಡು, ಪೆರಂಬೂರ್, ಮಧುರಂತಕಂ, ಅರಕೊನ್ನಂ, ಪುದುಚೇರಿ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ.

ತಗ್ಗು ಪ್ರದೇಶಗಳಲ್ಲಿದ್ದ ಸಾವಿರಾರು ಜನರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ವಿವಿಧ ಸರ್ಕಾರಿ ನಿರ್ಮಿತ ವಸತಿಗಳಲ್ಲಿ ಆಶ್ರಯಪಡೆದಿದ್ದಾರೆ.

ಸೇವಾಭಾರತಿ ತಮಿಳುನಾಡು ಸರ್ಕಾರಿ ಆಡಳಿತದ ಸಮನ್ವಯದೊಂದಿಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆಹಾರ, ನೀರಿನ ಬಾಟಲಿಗಳು, ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಲು, ಗಾಳಿ, ಮಳೆಗೆ ರಸ್ತೆಯಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸದಲ್ಲಿ ಸೇವಾ ಭಾರತಿ ಕಾರ್ಯಕರ್ತರು ತೊಡಗಿದ್ದಾರೆ. ಕೋರಟ್ಟುರಿನಲ್ಲಿ ಅಗ್ನಿ ಶಾಮಕ ದಳದವರೊಂದಿಗೆ ಸಂಘದ ಕಾರ್ಯಕರ್ತರು ಸೇವಾ ಕಾರ್ಯ ನಡೆಸುತ್ತಿದ್ದಾರೆ.

ನಿವಾರ್ ಚಂಡಮಾರುತವು ಪುದುಚೇರಿ ಬಳಿ 25 ರಂದು ರಾತ್ರಿ 11.30 ರ ಸುಮಾರಿಗೆ ದಡ ದಾಟಿತು. ಆರ್‌ಎಸ್‌ಎಸ್ ಸೇವಾಭಾರತಿ ಸ್ವಯಂಸೇವಕರು ತಕ್ಷಣವೇ ಸಂತ್ರಸ್ತರಿಗೆ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಚಂಡಮಾರುತದ ಅವಧಿಯಲ್ಲಿ, ಚೆನ್ನೈ ಬಳಿಯ ಚೆಂಬರಂಬಕ್ಕಂ ಕೆರೆಯನ್ನು ತೆರೆಯಲಾಯಿತು, ತಗ್ಗು ಪ್ರದೇಶಗಳಲ್ಲಿ ನೀರು-ನುಗ್ಗಿತು. ತಾಂಬರಂ ಪ್ರದೇಶದ ಕ್ರೊಂಪೇಟ್‌ನಲ್ಲಿನ ಸ್ವಯಂ ಸೇವಕರು ಪೀಡಿತ ಜನರಿಗೆ ತಕ್ಷಣ ಆಹಾರವನ್ನು ತಯಾರಿಸಲು ತಮ್ಮ ಸೇವೆಯನ್ನು ಪ್ರಾರಂಭಿಸಿದರು ಮತ್ತು ಸುಮಾರು 1000 ಜನರಿಗೆ ಸೇವೆ ಸಲ್ಲಿಸಿದರು.

ಕಡಲೂರಿನಲ್ಲಿ, ಸೇವಾಭಾರತಿ ಸ್ವಯಂಸೇವಕರು ನಿವಾರ್ ಚಂಡಮಾರುತದಿಂದ ಪೀಡಿತ ಸುಮಾರು 2000 ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದರು.

ಕಾಂಚೀಪುರಂನ ಇರುಲಾರ್ ಸಮುದಾಯದ 300 ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಸೇವಾಭಾರತಿ ಸ್ವಯಂಸೇವಕರು ಚಂಡಮಾರುತದಿಂದ ಉಂಟಾದ ಹಾನಿಯಿಂದ ಜನರನ್ನು ರಕ್ಷಿಸಲು ನಿರತರಾಗಿದ್ದಾರೆ.

ಅರಕೋಣಂ ಕಂದಾದ ರಾಣಿಪೇಟೆಯಲ್ಲಿ ಸುಮಾರು 200 ಜನರನ್ನು ಮೂರು ಶಿಬಿರ ಆಶ್ರಯಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದು, ಅವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ.

ಚೆನ್ನೈನ ತಿರುವಳ್ಳಿಕೆಣಿಯಲ್ಲಿ, ಸ್ವಯಂಸೇವಕರು ರಸ್ತೆಗಳಲ್ಲಿ ಬಿದ್ದ ಮರಗಳನ್ನು ಕತ್ತರಿಸಿ ತೆಗೆಯುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.

The post ನಿವಾರ್ ಭೀಕರ ಚಂಡಮಾರುತದಲ್ಲಿ ಆರೆಸ್ಸೆಸ್ ಸೇವಾಕಾರ್ಯ first appeared on Vishwa Samvada Kendra.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ಈ ವರ್ಷ, ವಿಶ್ವ ಸಂವಾದ ಕೇಂದ್ರ, ಕರ್ನಾಟಕ  ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ ನಡೆಸಿತು. ಆನ್ಲೈನ್ ನಲ್ಲಿ ಕೇಳಲಾದ ಪ್ರಶ್ನೆಗಳಿಗೆ, ಆಯ್ಕೆಗಳನ್ನು ಮತಗಳ ಮೂಲಕ ದಾಖಲಿಸಬಹುದಾಗಿತ್ತು. ದಿನಕ್ಕೆ ಎರಡರಂತೆ  ಒಟ್ಟು ೧೨ ಪ್ರಶ್ನೆಗಳನ್ನು ನಮ್ಮ ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸಾಪ್ ಸ್ನೇಹಿತರೊಂದಿಗೆ ಹಂಚಿಕೊಳ್ಳಲಾಗಿತ್ತು. ಪ್ರತಿ ಪ್ರಶ್ನೆಗೆ ೧೦ ಆಯ್ಕೆಗಳು ಹಾಗೂ ಪ್ರತಿಯೊಬ್ಬರೂ ೩ ಮತಗಳನ್ನು ಚಲಾಯಿಸಬಹುದಿತ್ತು. ಪ್ರತಿ ಪ್ರಶ್ನೆಗೆ ೨೪ ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಸಾವಿರಾರು ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಆಯ್ಕೆಗಳಿಗೆ ಮತ ಚಲಾಯಿಸಿದ್ದಾರೆ.

ಕರ್ನಾಟಕ, ಕನ್ನಡ, ಕನ್ನಡ ನಾಡು ಎಂದ ಕೂಡಲೇ, ಕೆಲವರು ಸಿನಿಮಾಗಳು ಕನ್ನಡವನ್ನು ಪ್ರತಿನಿಧಿಸುತ್ತವೆ ಎಂದು ನಂಬುತ್ತಾರೆ. ಕನ್ನಡ ಉಳಿಯಬೇಕಾದರೆ ಕನ್ನಡ ಸಿನಿಮಾ ಮಾತ್ರ ನೋಡಬೇಕು ಎಂಬುದು ಅವರ ಅಂಬೋಣ. ಕೆಲ ಕನ್ನಡ ಸಿನಿಮಾಗಳು, ಜನರ ಜೀವನವನ್ನೇ ಬೆಳಗಿಸಿರುತ್ತವೆ. ಸಿನಿಮಾ ಎಂಬ ಮಾಧ್ಯಮದಿಂದ ಕನ್ನಡ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ ಎಂಬುದು ಹಲವರ ಅಭಿಪ್ರಾಯ. ತಕ್ಕಮಟ್ಟಿಗೆ ಇದು ನಿಜವೂ ಹೌದು.  ಇನ್ನು ಸಿನಿಮಾ ಒಳಗಿಳಿದರೆ ಅದರಲ್ಲಿನ ನಾಯಕ ನಟ, ನಟಿ, ಪೋಷಕ ನಟ, ನಿರ್ದೇಶಕ, ಗಾಯಕ- ಗಾಯಕಿಯರು – ಇವರನ್ನೇ ಆರಾಧ್ಯ ದೈವ ಎಂದು ಪರಿಗಣಿಸುವ ಜನರಿರುತ್ತಾರೆ. ಸಿನಿಮಾ – ಬೆಳ್ಳಿ ಪೆರದೆ ಒಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತದೆಯಾದರೆ, ಕಿರುತೆರೆಯ  ಕಾರ್ಯಕ್ರಮಗಳು, ಅವುಗಳ ನಿರೂಪಣೆ, ಸಾರುವ ಸಂದೇಶ ಈಗಿನ ದಿನಗಳಲ್ಲಿ ತನ್ನದೇ ರೀತಿಯಲ್ಲಿ ಆಕರ್ಷಿಸುತ್ತಿದೆ. ಕೆಲ ಕಿರುತೆರೆಯ ಕಾರ್ಯಕ್ರಮಗಳು ದಾಖಲೆಗಳನ್ನು ಸೃಷ್ಟಿಸಿವೆ.  ಈ ರೀತಿಯ ನಮ್ಮ ಕನ್ನಡ ಕಾರ್ಯಕ್ರಮಗಳನ್ನು ಬೇರೆ ರಾಜ್ಯಗಳಿಗೆ ಅವರ ಭಾಷೆಯಲ್ಲಿ ತರುವ ಪ್ರಯತ್ನ ನಡೆದರೆ ನಮ್ಮಲ್ಲಿ ಹೆಮ್ಮೆ ಮೂಡದೇ  ಇರದು. 

 ಕೆಲವರಿಗೆ ಭಾವ ಗೀತೆಗಳು, ಕವಿಗಳು, ಸಾಹಿತ್ಯ, ಪುಸ್ತಕ, ಕಾದಂಬರಿ ಇವುಗಳು ಕನ್ನಡವನ್ನು ಪ್ರತಿನಿಧಿಸುತ್ತವೆ. ಕನ್ನಡವೆಂಬ ಭಾಷೆ ಉಳಿದಿರುವುದು ಈ ಸಾಹಿತ್ಯದಿಂದಲೇ. ಆದ್ದರಿಂದ ಸಾಹಿತ್ಯ ಕಲಿಸುವ ಪಾಠ, ರೂಪಿಸುವ ಬದುಕು ಅತಿ ವಿಶಿಷ್ಟ ಎಂಬ ಬಲವಾದ ನಂಬಿಕೆ. ಇನ್ನು ಕೆಲವರಿಗೆ ಜಾನಪದ ಸಾಹಿತ್ಯದಲ್ಲಿನ ಸೊಗಡು, ಲಾಲಿತ್ಯ ಕನ್ನಡದ ಭಾವವನ್ನು ಎಲ್ಲರಲ್ಲಿ ಮೂಡಿಸುವಲ್ಲಿ ಪಾತ್ರವಹಿಸುತ್ತವೆ ಎಂದು ಪರಿಭಾವಿಸುತ್ತಾರೆ.

  ನಮ್ಮಲ್ಲಿನ ಭಾಷೆ ಕನ್ನಡವಾದರೂ, ಭಾಷೆಯ ಶೈಲಿ ಊರಿಂದ ಊರಿಗೆ ಬದಲಾಗುತ್ತಾ, ಮೂಲ ಸಂಸ್ಕೃತಿ ಒಂದೇ ಆದರೂ ಆಚರಣಾ ಪದ್ಧತಿ ಬದಲಾಗುತ್ತಾ ಹೋಗುತ್ತವೆ. ತಿಂಡಿ ತಿನಿಸುಗಳು  ಊರಿಂದ ಊರಿಗೆ ಬದಲಾಗುತ್ತವೆ, ಕೆಲ ಜಿಲ್ಲೆಗಳು ಖಾರದ ತಿಂಡಿಗೆ ಪ್ರಖ್ಯಾತಿ ಮತ್ತೆ ಕೆಲವು ಸಿಹಿ ತಿಂಡಿಗೆ. ಊರಿನಿಂದ ಊರಿಗೆ ಹೋದಂತೆ, ಕಾಣ ಸಿಗುವ ಪ್ರೇಕ್ಷಣೀಯ ಸ್ಥಳಗಳ ವೈಖರಿಯೇ ಬೇರೆ. ಕೋಟೆ ಕೊತ್ತಲಗಳು, ಅರಮನೆಗಳು, ದೇವಸ್ಥಾನಗಳು, ಜಲಪಾತಗಳು, ಬೆಟ್ಟಗುಡ್ಡಗಳು ಜನರನ್ನು ತಂತಮ್ಮ ರೀತಿಯಲ್ಲಿ ಆಕರ್ಷಿಸುತ್ತವೆ. ಆದ್ದರಿಂದ ಕೆಲವರಿಗೆ ಈ ಪ್ರವಾಸಿ ತಾಣಗಳು, ತಿಂಡಿ ತಿನಿಸುಗಳು ಅವುಗಳ ಜೊತೆ ಬೆಸೆದಿರುವ ಕಥೆಗಳು, ಅವುಗಳ ಅಂಕಿಅಂಶಗಳು ಜಗತ್ತಿಗೆ ಪರಿಚಯವಾಗಬೇಕು ಹಾಗೂ ಕರ್ನಾಟಕಕ್ಕೇ ಮುಕುಟದಂತಿರುವ ಈ ಸ್ಥಳಗಳು, ತಿಂಡಿ ತಿನಿಸುಗಳು  ಸರ್ವಕಾಲಕ್ಕೂ  ಹೆಮ್ಮೆಯಷ್ಟೇ ಅಲ್ಲದೇ ಅಸೂಯೆಯನ್ನೂ ಹುಟ್ಟಿಸುತ್ತವೆ ಎಂಬ ಭಾವವಿರಿಸಿಕೊಂಡಿರುತ್ತಾರೆ.

ಹೀಗೆ ನಾನಾ ತರಹದ ಪ್ರಶ್ನೆಗಳನ್ನು ಮುಂದಿಡುತ್ತಾ, ವಿಶ್ವ ಸಂವಾದ ಕೇಂದ್ರ ಒಟ್ಟು ೧೨ ಪ್ರಶ್ನೆಗಳನ್ನು ಕೇಳಿತು. ಒಂದು ಪ್ರಶ್ನೆ ಹೊರತುಪಡಿಸಿ (ನಮ್ಮಲ್ಲಿ ಬಂದ ಕಡೆಯ ಪ್ರಶ್ನೆ – ಮಾತೃಭಾಷೆಯಲ್ಲಿ ಶಿಕ್ಷಣ ಬೇಕೆ /ಬೇಡವೇ.) ಈ ಪ್ರಶ್ನೆಗಳಿಗೆ ಆಯ್ಕೆಗಳನ್ನು ಒಂದು ತಜ್ಞರ ತಂಡ ರಚಿಸಿತು.  ಎಲ್ಲ ರೀತಿಯ ಜನರು, ವಯಸ್ಸು, ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆಗಳನ್ನು ನೀಡಲಾಗಿತ್ತು. ಅಲ್ಲದೆ ಪ್ರತಿ ಪ್ರಶ್ನೆಗೆ, ಪ್ರತಿಯೊಬ್ಬರಿಗೂ ೩ ಮತಗಳಿದ್ದವು. ಇಷ್ಟವಾಗುವ ೩ ಆಯ್ಕೆಗಳಿಗೆ ಜನರು ಮತ ಚಲಾಯಿಸಬಹುದಾಗಿತ್ತು.

ನವೆಂಬರ್ ಮುಗಿಯುತ್ತ ಬಂತು. ನವೆಂಬರ್ ಎಂದರೆ ಕನ್ನಡದ ತಿಂಗಳು ಎಂದು ಕೇವಲ ಕನ್ನಡಿಗರಷ್ಟೇ ಅಲ್ಲದೆ ಉಳಿದವರೂ ಹೇಳುವಷ್ಟರ ಮಟ್ಟಿಗೆ ನಮ್ಮ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಹೀಗೆ ಬಂದ ಕೆಲ ಪ್ರಶ್ನೆಗಳ ಅಭಿಪ್ರಾಯಗಳನ್ನು ವಿಶ್ಲೇಷಿಸಿ, ಕಂತುಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಓದಿಕೊಳ್ಳಿ. ನಿಮ್ಮ ಅಭಿಪ್ರಾಯವನ್ನು ತಿಳಿಸಿಕೊಡಿ.

The post ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು?” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ.

ಮಲೆಗಳಲ್ಲಿ ಮದುಮಗಳು, ವಂಶ ವೃಕ್ಷ ಮತ್ತು ದುರ್ಗಾಸ್ತಮಾನ ಕಾದಂಬರಿಗಳು ಮೊದಲ ಮೂರು ಸ್ಥಾನ ಗಳಿಸಿವೆ. ಕುವೆಂಪು ಮತ್ತು ಎಸ್.ಎಲ್. ಬೈರಪ್ಪ ಅವರ ಕೃತಿಗಳು ಶೇಕಡಾ 17ಮತಗಳನ್ನು ಗಳಿಸಿ ಮೊದಲ ಸ್ಥಾನದಲ್ಲೇ ಇವೆ. ತ.ರಾ.ಸು. ಅವರ ದುರ್ಗಾಸ್ತಮಾನ ಶೇಕಡಾ 15 ಮತಗಳನ್ನು ಗಳಿಸಿದೆ. ಈ ಮೂರು ಕಾದಂಬರಿಗಳು ಅರ್ಧದಷ್ಟು ಮತಗಳನ್ನು ಗಳಿಸಿವೆ. ಸಮೀಕ್ಷೆಯಲ್ಲಿ ಇನ್ನೂ ಏಳು ಕಾದಂಬರಿಗಳಿದ್ದವು. ಆ ಕಾದಂಬರಿಗಳು – ಮಹಾಕ್ಷತ್ರಿಯ, ಚೋಮನ ದುಡಿ, ಕರ್ವಾಲೋ, ತುಳಸೀದಳ, ಅಜೇಯ, ಸಂಸ್ಕಾರ, ಮತ್ತು ಚಿಕವೀರ ರಾಜೇಂದ್ರ ಕೃತಿಗಳು – ಉಳಿದ ಅರ್ಧ ಮತಗಳನ್ನು ಗಳಿಸಿವೆ.

ಎಸ್.ಎಲ್. ಬೈರಪ್ಪ ಮತ್ತು ತ.ರಾ.ಸು ಅವರುಗಳು ತಮ್ಮ ಅಭಿವ್ಯಕ್ತಿಯನ್ನು ಕಾದಂಬರಿ ಪ್ರಕಾರ ಒಂದರ ಮೂಲಕವೇ ಮಾಡುವ ಲೇಖಕರು. ಅಷ್ಟೇ ಅಲ್ಲ, ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಮತ್ತು ನಿಯಮಿತವಾಗಿ ಕಾದಂಬರಿಗಳನ್ನು ರಚಿಸಿದವರು. ಬಹು ಪ್ರಸಿದ್ಧರು. ವಂಶ ವೃಕ್ಷ ಮತ್ತು ದುರ್ಗಾಸ್ತಮಾನ ಕಾದಂಬರಿಗಳು ಈ ಲೇಖಕರ ಮುಖ್ಯ ಕೃತಿಗಳಲ್ಲಿ ಒಂದು. ಈ ದೃಷ್ಟಿಯಿಂದ ಈ ಎರಡೂ ಕೃತಿಗಳು ಮೊದಲ ಮೂರುಸ್ಥಾನದಲ್ಲಿ ಇರುವುದು ಸಹಜವಾಗಿ ಕಾಣುತ್ತದೆ. ‘ಮಲೆಗಳಲ್ಲಿ ಮದುಮಗಳು’ ಕುವೆಂಪು ಅವರು ಬರೆದಿರುವ ಕೇವಲ ಎರಡು ಕಾದಂಬರಿಗಳಲ್ಲಿ ಒಂದು. ‘ಕಾನೂರು ಹೆಗ್ಗಡತಿ’ಯ ನಂತರದ ಪ್ರಾಮುಖ್ಯತೆ ಇದರದ್ದು ಎಂಬುದು ವಿಮರ್ಶಕರ ನಿಲುವು. ಅಧಿಕೃತ ಅಭಿಪ್ರಾಯ. ಆದರೆ, ಕಥಾ ಹಂದರ, ವಸ್ತು ಮತ್ತು ಶೈಲಿಗಳಿಂದ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಹೆಚ್ಚು ಆಕರ್ಷಕ ಎನ್ನುವ ಅಭಿಪ್ರಾಯವನ್ನು ಸಮೀಕ್ಷೆಯು ಸಮರ್ಥಿಸಿದೆ. ಸೃಜನಶೀಲತೆಯನ್ನು ಸಂಖ್ಯೆಯಲ್ಲಿ ಅಳೆಯಲಾಗುವುದಿಲ್ಲ ಎಂಬುದನ್ನೂ ಮತ್ತು ಸಾಹಿತಿಯ ಅನುಭವ, ಕೃತಿಯ ಗುಣಮಟ್ಟವನ್ನು ಸೂಚಿಸುತ್ತದೆ ಎಂಬುದನ್ನೂ ತಿಳಿಸುತ್ತಿದೆ.

ಸಮೀಕ್ಷೆಯಲ್ಲಿದ್ದ ಇತರ ಕೃತಿಗಳ ಮಹತ್ವ ಎಲ್ಲರಿಗೂ ತಿಳಿದಿರುವುದೇ. ಆಧ್ಯಾತ್ಮವನ್ನು ಅಧಿಕೃತವಾಗಿ ಕಥಾವಸ್ತುವಿನಲ್ಲಿ ಸೇರಿಸುವ ಮಹಾಕ್ಷತ್ರಿಯ, ಐತಿಹಾಸಿಕ ವ್ಯಕ್ತಿತ್ವಗಳ ಸುತ್ತಾ ಹೆಣೆದ ಅಜೇಯ ಮತ್ತು ಚಿಕವೀರ ರಾಜೇಂದ್ರ, ಕಾರಂತರ ನುರಿತ ಬರಹದ ಚೋಮನ ದುಡಿ, ತೇಜಸ್ವಿ ಅವರ ಬಿ.ಜಿ.ಎಲ್. ಸ್ವಾಮಿ ಶೈಲಿಯ ಕರ್ವಾಲೋ, ಅನುವಾದಿತ ಥ್ರಿಲ್ಲರ್ ತುಳಸಿದಳ ಮತ್ತು ನವ್ಯದ ದಿಗ್ಗಜ ಅನಂತ ಮೂರ್ತಿಯವರ ಪ್ರಸಿದ್ದ ಕೃತಿಗಳು ಸಮೀಕ್ಷೆಯಲ್ಲಿ ಸಹಜವಾಗಿ ಸೇರಿಕೊಂಡಿದೆ. ಅವುಗಳ ಜನಪ್ರಿಯತೆಯನ್ನು ಹೇಳುತ್ತಿದೆ. ಆದರೆ, ಈ ಕೃತಿಗಳು ವಾಸ್ತವತೆಯನ್ನು ನಿಭಾಯಿಸುವ, ಶೈಲಿಯನ್ನು ಅನ್ವೇಷಿಸುವ, ತತ್ವಗಳ ಅಥವಾ ನವ್ಯದ ಅಮೂರ್ತತೆಯನ್ನು ಕೃತಿಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಜನರ ಮೆಚ್ಚುಗೆಯನ್ನು ಮೊದಲ ಮೂರು ಕೃತಿಗಳಿಗೆಗೆ ಬಿಟ್ಟು ಕೊಟ್ಟಿವೆ.

ಗಟ್ಟಿ ಕಥಾನಕಗಳನ್ನು ಹೊಂದಿರುವ, ಸಾಂಪ್ರದಾಯಿಕ ಶೈಲಿ ಎನ್ನಬಹುದಾದ ಕಾದಂಬರಿಗಳೇ ಮೊದಲ ಮೂರು ಸ್ಥಾನಗಳಲ್ಲಿ ಇರುವುದು ಸಾಹಿತ್ಯ ಕ್ಷೇತ್ರದ ಕೆಲವು ಆಸಕ್ತಿಕರ ಚರ್ಚೆಗಳತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಸಮೀಕ್ಷೆಯಲ್ಲಿ ಪರಿಗಣಿತವಾದ ಎಲ್ಲಾ ಹತ್ತೂ ಕಾದಂಬರಿಗಳೂ ಸಹ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ಇವೆ. ವಿವಿಧ ಕಾಲಘಟ್ಟದಲ್ಲಿ ಬಂದ ಹಲವು ಕಾದಂಬರಿ ಶೈಲಿಗಳು – ನವ್ಯ, ಬಂಡಾಯ, ದಲಿತ ಮತ್ತು ಶೂದ್ರ – ಕಾಲದ ಪರೀಕ್ಷೆಯಲ್ಲಿ ನಪಾಸಾಗುತ್ತಿವೆಯೋ? ಜನರ ಮನಸ್ಸನ್ನು ಗೆಲ್ಲಲು ಸೋತಿವೆಯೇ? ಸೈದ್ಧಾಂತಿಕ ಹೊರೆಯನ್ನು ಅನಿವಾರ್ಯವಾಗಿ ಹೊರುವ ಆಧುನಿಕ ಕಾದಂಬರಿ ಶೈಲಿಗಳು ಕಥಾ ಹಂದರಕ್ಕೆ ನ್ಯಾಯ ಒದಗಿಸಲು ಶಕ್ತವಾಗುತ್ತವೆಯೇ? ಸಮೀಕ್ಷೆಯು ‘ಇಲ್ಲ’ ಎಂಬ ಉತ್ತರವನ್ನು ನೀಡುತ್ತಿದೆ. ನೇರವಾಗಿ ಜನರನ್ನು ತಲುಪುತ್ತಿದ್ದ ಎಂ.ಕೆ.ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ, ಆ.ನ.ಕೃ ಅವರ ಕೃತಿಗಳು ಸಮೀಕ್ಷೆಯಲ್ಲಿ ಇಲ್ಲ – ಸಮೀಕ್ಷೆಗೆ ಸೇರಲು ಇದ್ದ ಮಿತಿಯೊಳಗೆ ಬರಲು ಅವುಗಳಿಗೆ ಆಗಿಲ್ಲ. ಈ ಅಂಶವು ವಿಮರ್ಶಕರ ಮತ್ತು ಜನ ಸಾಮನ್ಯರ ನಿಲುವುಗಳಲ್ಲಿ ಹಲವು ಸಾಮ್ಯತೆಗಳು ಇವೆ ಎಂದು ತೋರುತ್ತಿದೆ. ಆದರೆ ತರಾಸು, ಕುವೆಂಪು ಮತ್ತು ಬೈರಪ್ಪನವರನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ ಸಮೀಕ್ಷೆಯ ಬಗ್ಗೆ ವಿಮರ್ಶಾ ಲೋಕದಲ್ಲಿ ಕೆಲವಾದರೂ ಆಕ್ಷೇಪಗಳು ಇರಬಹುದು. ಈ ಸಮೀಕ್ಷೆಯು ವಿಮರ್ಶೆಯ ಜಗತ್ತಿನ ಚೌಕಟ್ಟನ್ನು ಈ ದೃಷ್ಟಿಯಲ್ಲಿ ಮೀರಿದೆ.

ಎಲ್ಲಾ ಹತ್ತೂ ಕಾದಂಬರಿಗಳೂ ದಶಕಗಳಷ್ಟು ಹಳತು. ಹಾಗಾದರೆ, ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆಯೇ? ಹೊಸ ಕೃತಿಗಳು, ಲೇಖಕರು, ಓದುಗರು ಬರುತ್ತಿಲ್ಲವೇ? ವಿಮರ್ಶಕರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೇ? ಹೊಸ ಮಾಧ್ಯಮಗಳ ಉಗಮದೊಂದಿಗೆ ಕನ್ನಡ ಕಾದಂಬರಿ ಲೋಕದ ಪ್ರಭಾವ ಕ್ಷೀಣಿಸುತ್ತಿರುವುದರ ಪರಿಣಾಮವೇ? ಅಥವಾ ಗುಣಮಟ್ಟದ ದೃಷ್ಟಿಯಿಂದ ಇವು ಸಾರ್ವಕಾಲಿಕ ಕೃತಿಗಳೇ ಆದ್ದರಿಂದ ಈ ಪ್ರಶ್ನೆಗಳು ಅನಗತ್ಯವೇ?

ಏನೇ ಇರಲಿ, ಈ ಸಮೀಕ್ಷೆ ಸಾಹಿತ್ಯ ಪ್ರಶ್ನೆಯತ್ತ ಜನರ ಮನಸ್ಸನ್ನು ಯಶಸ್ವಿಯಾಗಿ ಸೆಳೆಯುವುದರಲ್ಲಿ ಸಫಲವಾಗಿರುವುದು ನಿಜ. ಒಳ್ಳೆಯ ಬೆಳವಣಿಗೆ. ನವೆಂಬರ್ ನಲ್ಲಿ ಇಂತಹ ಪ್ರಯತ್ನಗಳು ಮುಂದುವರೆದರೆ, ಕೃತಿಗಳ ಬೆಲೆಯ ಬಗ್ಗೆ ನಿರ್ದಿಷ್ಟ ಅಭಿಪ್ರಾಯಗಳನ್ನು ರೂಪಿಸುವುದು ಸಾಧ್ಯವಾಗುತ್ತದೆ. ವಿಮರ್ಶೆ ಮತ್ತು ಜನಾಭಿಪ್ರಾಯಗಳ ಮಧ್ಯದ ಅಂತರ ಕಡಿಮೆ ಆಗಲೂ ಬಹುದು.

The post ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು?” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ.

ಸಿನಿಮಾ ಎಲ್ಲರಿಗೂ ಎಟುಕದ ಸ್ಥಿತಿಯಲ್ಲಿದ್ದ ಸಮಯದಲ್ಲಿ ಕಿರುತೆರೆ ಜನರನ್ನು ಆಕರ್ಷಿಸತೊಡಗಿತು. ದೂರದರ್ಶನವೆಂಬ ಒಂದೇ ವಾಹಿನಿಯಿದ್ದಾಗಿನಿಂದ ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳು ಪ್ರಕಟವಾಗಿವೆ. ಧಾರವಾಹಿ ರೂಪಾರಲ್ಲಿ ೧೩ ವಾರಗಳಿಗೆಂದೇ ಸಮಯಾವಕಾಶ ಕೊಡುತ್ತಿದ್ದ ಮುಂಚಿನ ದಿನಗಳನ್ನು ಈಗ ತುಲನೆ ಮಾಡಬೇಕಾಗಿರುವುದು ನಿತ್ಯ ಬರುವ ಧಾರಾವಾಹಿ ಕಂತುಗಳಿಗೆ. ಸಿನಿಮಾ ಶೈಲಿಯಲ್ಲೇ ಮೂಡಿಬರುವ ಹಲವು ಧಾರಾವಾಹಿಗಳಿವೆ. ಕೆಲವನ್ನು ಜನರು ಬಹಳವಾಗಿ ಇಷ್ಟಪಟ್ಟಿದ್ದಾರೆ. ಮತ್ತೆ ಕೆಲವನ್ನು ಖಂಡಿಸಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದಂತೆ, ಹಾಡುಗಾರಿಕೆಗೆ ಸಂಬಂಧಿಸಿದಂತೆ ಹಲವು ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಜನರು ವೀಕ್ಷಿಸಿ ಇಷ್ಟಪಟ್ಟಿದ್ದಾರೆ. ರಸಪ್ರಶ್ನೆ, ಜ್ಞಾನಾರ್ಜನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಕಿರುತೆರೆಯಲ್ಲಿ ಮೂಡಿಬಂದಿವೆ.

ನಮ್ಮ ಪಟ್ಟಿಯಲ್ಲಿದ್ದ ೧೦ ಕಾರ್ಯಕ್ರಮಗಳಲ್ಲಿ ಹೆಚ್ಚು ಅಂಕ ಪಡೆದ ಮೊದಲ ೩ ಕಾರ್ಯಕ್ರಮಗಳು ಬೇರೆ ಬೇರೆಯ ಪ್ರಕಾರದ್ದು ಎಂಬುದೇ ವಿಶೇಷ. ಅತಿ ಹೆಚ್ಚು ಅಂಕ ಪಡೆದ ಎದೆ ತುಂಬಿ ಹಾಡುವೆನು ಸಂಗೀತಕ್ಕೆ ಸಂಬಂಧಿಸಿದ್ದಾದರೆ, ನಾ ಸೋಮೇಶ್ವರರು ನಡೆಸಿಕೊಡುವ ‘ಥಟ್ ಅಂತ ಹೇಳಿ’ ಜ್ಞಾನ, ಓದು, ಪುಸ್ತಕ, ಇವುಗಳಿಗೆ ಸಂಬಂಧಿಸಿದ್ದು. ನಂತರ ಸ್ಥಾನದಲ್ಲಿ – ದೂರದರ್ಶನದಲ್ಲಿ ಹಿಂದೆ ಪ್ರಸಾರವಾಗುತ್ತಿದ್ದ ಟಿ ಏನ್ ಸೀತಾರಾಮ್ ಅವರ ಮಾಯಾಮೃಗ ಧಾರವಾಹಿ.

ಸಂಗೀತಕ್ಕೆ ಹೆಚ್ಚು ಮತ ದೊರೆತಿದೆ ಎಂದು ಒಂದು ತರಹದಲ್ಲಿ ವಿಶ್ಲೇಷಿಸಿದರೆ, ಇಂದಿನ ದಿನಕ್ಕೆ ಗಮನಿಸಬೇಕಾದ್ದು ಈ ಕಾರ್ಯಕ್ರಮದಿಂದ ಬಹಳಷ್ಟಿವೆ. ರಿಯಾಲಿಟಿ ಷೋ ಅಂದರೆ ಅದೊಂದು ಟಿಆರ್ಪಿ ವಸ್ತು ಎಂಬಂತೆ ಆಗಿರುವ ಹಾಗೂ ಪ್ರಕಟವಾಗುವ ಇಂದಿನ ಸಂಗೀತದ ಕಾರ್ಯಕ್ರಮಗಳ ಮುಂದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಅತಿಯಾದ ರಂಜನೆ, ಅತಿಯಾದ ಆಡಂಬರ ಕಾಣಸಿಗುತ್ತಿರಲಿಲ್ಲ. ಸಂಗೀತಕ್ಕೆ ಆದ್ಯತೆ, ಎಲ್ಲರನ್ನು ಪ್ರೋತ್ಸಾಹಿಸುವ ಕೆಲಸ ಈ ಕಾರ್ಯಕ್ರಮದಿಂದ ನಡೆಯುತ್ತಿತ್ತು. ಸ್ಪರ್ಧೆಯಿಂದ ದೂರ ಉಳಿಯಬೇಕಾದವರನ್ನು ಅಳುವಂತೆ ಮಾಡಿ ಟಿಆರ್ಪಿ ಹೆಚ್ಚಿಸಿಕೊಳ್ಳುವ ಕೆಲಸಕ್ಕೆ ಈ ಕಾರ್ಯಕ್ರಮ ಎಂದೂ ಕೈ ಹಾಕಲಿಲ್ಲ. ಈ ಕಾರ್ಯಕ್ರಮದಿಂದ ಹಲವಾರು ಪ್ರತಿಭೆಗಳಿಗೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಲಭಿಸಿದೆ.

ಇನ್ನು ಥಟ್ ಅಂತ ಹೇಳಿ ಎಂಬ ರಸಪ್ರಶ್ನೆಯ ಬಗ್ಗೆ, ನಿರೂಪಣೆಯಲ್ಲಿ ಏಕತಾನತೆ ಹೊಂದಿದೆಯೆಂದು ಅಭಿಪ್ರಾಯಪಡುತ್ತಾರಾದರೂ, ಜ್ಞಾನಾರ್ಜನೆಗೆ, ನಿರೂಪಕರಾದ ಡಾ. ನಾ ಸೋಮೇಶ್ವರ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮೂಡಿ ಬರುವ ಹಲವಾರು ಪುಸ್ತಕಗಳು, ಅವುಗಳ ಪರಿಚಯ ಹಲವು ಜನರನ್ನು ಆಕರ್ಷಿಸಿದೆ. ೩೦೦೦ಕ್ಕೂ ಹೆಚ್ಚು ಸಂಚಿಕೆಗಳು ಪ್ರಕಟವಾಗಿವೆ ಹಾಗೂ ದೂರದರ್ಶನದ ಕೆಲವೇ ಕೆಲವು ಕಾರ್ಯಕ್ರಮಗಳಲ್ಲಿ ಆಸ್ಥೆಯಿಂದ ನೋಡುವ ಕಾರ್ಯಕ್ರಮ ಇದಾಗಿದೆ ಎಂದರೆ ತಪ್ಪಾಗಲಾರದು.

ಇನ್ನು ದೂರದರ್ಶನದಲ್ಲಿ ಪ್ರಕಟವಾದ ಮೊಟ್ಟ ಮೊದಲ ದೈನಂದಿನ ಧಾರಾವಾಹಿ “ಮಾಯಾಮೃಗ” ನಾಲ್ಕು ಸಾಮಾನ್ಯ ಮನೆಗಳ ಕಥೆಗಳನ್ನು ತೆಗೆದುಕೊಂಡು ನಿರ್ದೇಶಕ ಟಿ ಏನ್ ಸೀತಾರಾಮ್ ಈ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದರು. ಮೊದಲೆಲ್ಲ ಈ ಪ್ರಯತ್ನ ಫಲಕಾರಿಯಾಗುವುದೋ ಇಲ್ಲವೋ ಎಂಬ ಅನುಮಾನವಿತ್ತಾದರೂ, ಮುಂದಿನ ದಿನಗಳಲ್ಲಿ ದೈನಂದಿನ ಧಾರಾವಾಹಿಗೆ ಮುನ್ನುಡಿ ಬರೆದದ್ದು ಮಾಯಾಮೃಗ. ಇಂದಿನ ಧಾರಾವಾಹಿಗಳಲ್ಲಿ ಬರುವ ಇಬ್ಬರ ನಡುವಿನ ಕಲಹ, ಅತ್ತೆ ಸೊಸೆ ಜಗಳ, ಗಂಡ ಹೆಂಡತಿ ವೈಮನಸ್ಸು ಇವಾವುದನ್ನೂ ತೋರಿಸದೆ ಸಾತ್ವಿಕ ರೀತಿಯ ಧಾರಾವಾಹಿಯನ್ನು ಅಂದು ನಿರ್ದೇಶಿಸಿದ್ದರು. ಇದರಲ್ಲಿ ಬರುವ ನ್ಯಾಯಾಲಯದ ಸೀನುಗಳು ನಿಜವೇನೋ ಎಂಬಂತೆ ಚಿತ್ರಿಸಿದ್ದ ಸೀತಾರಾಮ್ ಅವರಿಗೊಂದು ವಿಶೇಷ ಅಭಿಮಾನಿ ವರ್ಗ ಹುಟ್ಟಿಕೊಂಡಿತು.

The post ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

ಆರೆಸ್ಸೆಸ್ ನ ಹಿರಿಯ ಪ್ರಚಾರಕ ಶ್ರೀ ‌ಶಿವಶಂಕರ್ ನಿಧನ #ಶ್ರದ್ಧಾಂಜಲಿ #ಓಂ_ಶಾಂತಿ

$
0
0

ಆರೆಸ್ಸೆಸ್ ನ ಹಿರಿಯ ಪ್ರಚಾರಕ ಶ್ರೀ ‌ಶಿವಶಂಕರ್ ನವೆಂಬರ್ 30 ರ ಮಧ್ಯಾಹ್ನ ತಮ್ಮ ಬದುಕಿನ ಪಯಣವನ್ನು ಪೂರ್ಣಗೊಳಿಸಿದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.  ಇತ್ತೀಚಿನ ದಿನಗಳಲ್ಲಿ ಅವರು ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ವಾಸಿಸುತ್ತಿದ್ದರು. ಶಿವಶಂಕರ್ ಅವರದ್ದು 42 ವರ್ಷಗಳ ಸುದೀರ್ಘ ಪ್ರಚಾರಕ ಜೀವನ. 


ಪರಿಚಯ:
ಶಿವಶಂಕರ್ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಬಾಳೆಹೊನ್ನೂರು ನಡುವಿನ ಕೆಮ್ಮಣ್ಣು ಗ್ರಾಮದಲ್ಲಿ. ಜನಾರ್ಧನಯ್ಯ, ಗೌರಮ್ಮ ದಂಪತಿಗಳ ತುಂಬು ಕುಟುಂಬದ ಏಳು ಮಕ್ಕಳಲ್ಲಿ ಶಿವಶಂಕರ್ ಆರನೆಯವರು. ಶಾಲಾ ಶಿಕ್ಷಣ ಪೂರೈಸಿ ಕಾಲೇಜು ಮೆಟ್ಟಿಲೇರಿದ ಶಿವಶಂಕರ್ ಪಡೆದುಕೊಂಡಿದ್ದು ಬಿ. ಬಿ. ಎಂ. ಪದವಿಯನ್ನು. ನಾಲ್ಕು ದಶಕಗಳ ಹಿಂದಿನ ಬಿ. ಬಿ. ಎಂ. ಅಂದರೆ ಪ್ರಾಯಶಃ ಮೊದಲ ಗುಂಪಿನ ಪದವೀಧರರಿರಬೇಕು. ನಾನು ಮೊದಲ ಬ್ಯಾಚ್ ನ ಬಿ. ಬಿ. ಎಂ. ಪದವೀಧರ ಎಂದು ಅವರೇ ಕೆಲವೊಮ್ಮೆ ಹೇಳುತ್ತಿದ್ದರು. ವಿದ್ಯಾರ್ಥಿ ದಿನಗಳಲ್ಲೇ ಆರೆಸ್ಸೆಸ್ ನ‌ ಸಂಪರ್ಕ. ಶೃಂಗೇರಿ, ಕೊಪ್ಪ, ಕಳಸ, ಸಾಗರದ ಮಲೆನಾಡಿನ ಪರಿಸರದಲ್ಲಿ ಆರೆಸ್ಸೆಸ್ ಬಲಿಷ್ಠ ಹೆಜ್ಜೆಗಳನ್ನು ಇಡುತ್ತಿದ್ದ ದಿನಗಳಲ್ಲಿ ಅದಾಗಲೇ ಕೆಲವರು ಪ್ರಚಾರಕರಾಗಿ‌ ಹೊರಟಿದ್ದರು. ಅದೇ ಸಾಲಿನಲ್ಲಿ ಮಲೆನಾಡಿನಿಂದ ಹೊರಟ ಇನ್ನೋರ್ವ ಪ್ರಚಾರಕ ಶಿವಶಂಕರ್. 
ಆರಂಭದ ದಿನಗಳಲ್ಲಿ ಸಕಲೇಶಪುರ ನಂತರ ಬೆಂಗಳೂರು ದಕ್ಷಿಣ ಜಿಲ್ಲೆ, ಶಿವಮೊಗ್ಗದ ಸಹ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದರು. ಹಲವು ಪ್ರದೇಶಗಳಲ್ಲಿ ಕೆಲಸ ಮಾಡಿದ ಅನುಭವ ಸಮೃದ್ಧಿ ಅವರದ್ದಾಗಿತ್ತು. ತೊಂಭತ್ತರ ದಶಕದ ಅಂತ್ಯದಲ್ಲಿ ಶಿವಮೊಗ್ಗ ಜಿಲ್ಲೆ ಕಂಡ ಸಂಘಕಾರ್ಯದ ತ್ವರಿತ ಏರಿಕೆಯನ್ನು ಸ್ಥಿರಗೊಳಿಸುವ ಹೊಣೆ ಹೊತ್ತವರು‌ ಶಿವಶಂಕರ್. 

ಶ್ರೀ ‌ಶಿವಶಂಕರ್, 1954-2020


ಮಂಗಳೂರು ಮತ್ತು ಬೆಂಗಳೂರಿನ ಆರೆಸ್ಸೆಸ್ ಕಾರ್ಯಾಲಯಗಳ ಪ್ರಮುಖರಾಗಿ ಹಲವು ವರ್ಷ ಶಿವಶಂಕರ್ ಕೆಲಸ ಮಾಡಿದ್ದಾರೆ. ಅವರ ಸದಾ ಹಸನ್ಮುಖಿ, ನಿರುದ್ವಿಗ್ನ, ಮೃದು – ಮಿತ ಭಾಷಿ ಗುಣಗಳು ಶಿವಶಂಕರ್ ಅವರ ಸಂಪರ್ಕಕ್ಕೆ ಬಂದವರು ಗುರುತಿಸುತ್ತಿದ್ದರು. ಅವರೊಂದಿಗಿನ ಬಹುತೇಕ ಎಲ್ಲರ ಅನುಭವವೂ ಇದೇ ಅಗಿತ್ತು. ಆಪ್ತವಲಯದಲ್ಲಿ ಅವರು “ಅಣ್ಣಯ್ಯ” ಎಂದೇ ಪರಿಚಿತರು. 


ಶಿವಶಂಕರ್ ಅವರಿಗೆ ಆತ್ಮೀಯರಾಗಿದ್ದವರನ್ನು ಸಂಪರ್ಕಿಸಿದಾಗ, ಭಗವದ್ಗೀತೆಯ “ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್”‌ ಸಾಲನ್ನು ಉದ್ಧರಿಸುತ್ತ ಇದು ನಮ್ಮ ಅಣ್ಣಯ್ಯನ ಬದುಕನ್ನು, ಸ್ವಭಾವವನ್ನು ಸರಿಯಾಗಿ ಹಿಡಿದಿಡುತ್ತದೆ ಎಂದರು. 

ಆರೆಸ್ಸೆಸ್ ನ‌ ಸಹ ಸರಕಾರ್ಯವಾಹ ಶ್ರೀ ಮುಕುಂದ, ಕ್ಷೇತ್ರ ‌ಸಂಘಚಾಲಕ ವಿ. ನಾಗರಾಜ್, ಪ್ರಾಂತ ಸಂಘಚಾಲಕ ಮ. ವೆಂಕಟರಾಮು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

The post ಆರೆಸ್ಸೆಸ್ ನ ಹಿರಿಯ ಪ್ರಚಾರಕ ಶ್ರೀ ‌ಶಿವಶಂಕರ್ ನಿಧನ #ಶ್ರದ್ಧಾಂಜಲಿ #ಓಂ_ಶಾಂತಿ first appeared on Vishwa Samvada Kendra.

“ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ.

ಕನ್ನಡದ ಭಾವಗೀತೆಗಳಲ್ಲಿ, ಜಾನಪದ ಗೀತೆಗಳಲ್ಲಿ ನಿಮಗೆ ಇಷ್ಟವಾಗುವ ಹಾಗೂ ಕನ್ನಡತನವನ್ನು ಹೆಚ್ಚಿಸುವ ಗೀತೆ ಯಾವುವು ಎಂಬವು ಪ್ರಶ್ನೆಗಳಾಗಿದ್ದವು. ನಮಗೆಲ್ಲರಿಗೂ ತಿಳಿದಂತೆ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತದ ಪ್ರಾಕಾರದಂತೆ ಭಾವಗೀತೆಯ ಪ್ರಾಕಾರ ನಮ್ಮಲ್ಲಿವೆ. ಅವುಗಳನ್ನು ಇಷ್ಟ ಪಡುವ, ಅವುಗಳನ್ನೇ ಹೆಚ್ಚಾಗಿ ಕೇಳುವ ವರ್ಗ ನಮ್ಮಲ್ಲಿದೆ. ಬೇರೆಯ ಭಾಷೆಗಳಲ್ಲಿ ಬಹುಶಃ ಇಷ್ಟು ಮಟ್ಟದ ಅಭಿಮಾನವಿಲ್ಲದ ಆದರೆ ನಮ್ಮಲ್ಲಿ ಅವುಗಳನ್ನು ಅತಿಯಾಗಿ ಪ್ರೀತಿಸುವ ಭಾವ ಜೀವಿಗಳನ್ನು ಗಮನಿಸಿರುತ್ತೇವೆ. ಸಂಗೀತ ಸ್ಪರ್ಧೆಯೊಂದು ನಡೆದರೆ ಶಾಸ್ತ್ರೀಯ ಸಂಗೀತ ಗಾಯನದ ಜೊತೆಗೆ ಭಾವಗೀತೆಯ, ಜಾನಪದ ಗೀತೆಯ ಗಾಯನವೂ ಇದ್ದೇ ಇರುತ್ತದೆ. ಎಫ್ ಎಂ ಗಳಲ್ಲಿ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡುವುದರ ಜೊತೆ ಭಾವಗೀತೆಗಳನ್ನು ಪ್ರಸಾರ ಮಾಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುತ್ತದೆ. ಹೀಗೆ ಹೇಳುವಾಗ ಜಾನಪದ ಹಾಡುಗಳನ್ನು ಮರೆಯುವಂತಿಲ್ಲ. ಬಾಯಿಂದ ಬಾಯಿಗೆ ಹರಿದು ಬಂದ ಈ ಜಾನಪದ ಗೀತೆಗಳಲ್ಲಿ ದೇವರ ಆರಾಧನೆ, ಪ್ರಕೃತಿಯ ಆರಾಧನೆ, ಹೆಣ್ಣು ಮಗಳೊಬ್ಬಳ ಬಯಕೆ, ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ, ಜೀವನದ ಪಾಠ ಕಲಿಸುವ ಸಾಲುಗಳೇ ಹೆಚ್ಚು. ಭಾರತೀಯತೆಯ ತತ್ತ್ವವನ್ನು ಸಾರುವ, ಶ್ರೇಷ್ಠ ನೀತಿಯನ್ನು ಎತ್ತಿಹಿಡಿಯುವ ಈ ಜಾನಪದ ಸಾಹಿತ್ಯದಿಂದ ಕಲಿಯಲಿಕ್ಕೆ, ಜೀವನದಲ್ಲಿ ಅಳವಡಿಸಲಿಕ್ಕೆ ಸಾಕಷ್ಟು ಅವಕಾಶಗಳಿವೆ.

ನಮ್ಮ ಪಟ್ಟಿಯಲ್ಲಿ ಇದ್ದ ೧೦ ಭಾವಗೀತೆಗಳು ಒಂದಕ್ಕಿಂತಲೂ ಮತ್ತೊಂದು ಮಿಗಿಲಾದ ಹಾಡುಗಳೇ. ಈ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ, ಗಾಯನದ ಮೂಲಕ ಪ್ರಸ್ತುತ ಪಡಿಸಿ, ಪ್ರಸಿದ್ಧಿಗೊಂಡ ಹಾಡುಗಳು ಭಾವಗೀತೆಗಳೋ ಜಾನಪದವೋ ಎನ್ನುವಷ್ಟು ಪ್ರಸಿದ್ಧಿ ಹೊಂದಿವೆ. ಕವಿಗಳು ರಚಿಸಿರುವ ಹಾಡುಗಳಿಗೆ ಮೈಸೂರು ಅನಂತಸ್ವಾಮಿ, ಸಿ ಅಶ್ವತ್ಥ, ಸೇರಿದಂತೆ ಹಲವು ಅತ್ಯುನ್ನತ ರಾಜ ಸಂಯೋಜಕರು ನಿಜಾರ್ಥದಲ್ಲಿ ಭಾವ ತುಂಬಿದ್ದಾರೆ. ಹೀಗೆ ಇರುವ ಹಾಡುಗಳು ಸಾವಿರಾರು ದಾಟಬಹುದು. ಹಿಂದೊಮ್ಮೆ ಸಿ ಅಶ್ವತ್ಥ ಅವರು ಸಾವಿರಾರು ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕುವೆಂಪು ಅವರ ಭಾವಗೀತೆಗಳ ಸಂಗೀತ ಕಚೇರಿಯನ್ನು ಪ್ರಸ್ತುತ ಪಡಿಸಿದ್ದರು. ಭಾವಗೀತೆಗಳನ್ನು ಒಳಗೊಂಡ ಕಾರ್ಯಕ್ರಮಗಳಿಗೆ ಜನರು ಸಿನಿಮಾ ಹಾಡುಗಳನ್ನು ಕೇಳಲು ಮುಗಿಬೀಳುವುದಕ್ಕಿಂತಲೂ ಹೆಚ್ಚು ಸೇರುತ್ತಿದ್ದ ಕಾಲವೊಂದಿತ್ತು.

ಆಯ್ಕೆಗಳಲ್ಲಿ ಹೆಚ್ಚು ಮತ ಪಡೆದ ಭಾವಗೀತೆ – “ಜೋಗದ ಸಿರಿ ಬೆಳಕಿನಲ್ಲಿ…” ಕವಿ ನಿಸಾರ್ ಅಹಮದ್ ಅವರ ಲೇಖನಿಯಿಂದ ಹೊರಹೊಮ್ಮಿರುವ ಈ ಗೀತೆ ಕರ್ನಾಟಕದ ನಾಡಗೀತೆಯಷ್ಟೇ ಪ್ರಸಿದ್ಧ. ಜೋಗದ ವೈಭವವನ್ನು ಸಾರುವ ಈ ಕವಿತೆಯನ್ನು ನಿತ್ಯೋತ್ಸವ ಎಂದು ಕವಿಗಳು ಕರೆದಿದ್ದಾರೆ. ಜೋಗದ ವೈಭವವೇ, ಪರಿಸರ ಆರಾಧನೆಯನ್ನೇ ನಿತ್ಯ ಉತ್ಸವ ಎಂದು ಬರೆಯುವ ಕವಿಗಳು ಮುಸ್ಲಿಮರಾದರೂ ಅವರನ್ನು ‘ಕನ್ನಡಿಗರು, ಶ್ರೇಷ್ಠ ಕವಿಗಳಲ್ಲಿ ಒಬ್ಬರು’ ಎಂದಷ್ಟೇ ಹೆಮ್ಮೆಯಿಂದ ನೋಡಿದ ಜನರು ನಾವು.
ಎರಡನೆಯ ಸ್ಥಾನದಲ್ಲಿದ್ದ ಗೀತೆ ಕೆ ಎಸ್ ನರಸಿಂಹಸ್ವಾಮಿಯವರು ಬರೆದಿರುವ ದೀಪವು ನಿನ್ನದೇ, ಗಾಳಿಯು ನಿನ್ನದೇ. ಜೀವನದಲ್ಲಿ ಸರ್ವಶಕ್ತನಾದ ಭಗವಂತನಿಗಿರುವ ಶಕ್ತಿಯಲ್ಲಿ ನಂಬಿಕೆಯಿಡುತ್ತಾ, ಜೀವನ ಹಳಿ ತಪ್ಪದಿರಲಿ ಎಂಬ ಸಾರ ಈ ಕವನದ್ದು. ಇನ್ನು ಅಷ್ಟೇ ಶ್ರೇಷ್ಠವೆನಿಸುವ “ಯಾವ ಮೋಹನ ಮುರಳಿ ಕರೆಯಿತು…” ಕವಿ ಎಂ ಗೋಪಾಲಕೃಷ್ಣ ಅಡಿಗರ ಕವನದಲ್ಲಿ ಜೀವನದಲ್ಲಿ ಇರುವ ಸುಖಗಳನ್ನು ಬಿಟ್ಟು ಮತ್ತೆಲ್ಲಿಯದೋ ಸುಖಕ್ಕಾಗಿ ಹಂಬಲಿಸುವುದನ್ನು ಕುರಿತು ಗೀತೆ ರಚನೆಯಾಗಿದೆ. ಅಧ್ಯಾತ್ಮದ ಸಾರವನ್ನು ಸಾರುವ ಈ ಕವನದಲ್ಲಿ ಬರುವ ಸಾಲುಗಳಲ್ಲಿ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ನಿಜಾರ್ಥದಲ್ಲಿ ಮನುಷ್ಯನ ಸಹಜ ವರ್ತನೆಯನ್ನು ಬಿಂಬಿಸಿದ್ದಾರೆ.

ನಮ್ಮ ಪಟ್ಟಿಯಲ್ಲಿ ಇದ್ದ ಆಯ್ಕೆಗಳೆಲ್ಲವೂ ಹಳೆಯ ಭಾವಗೀತೆಗಳೇ. ಇಂದು ಭಾವಗೀತೆಗಳು, ಕವನಗಳು ರಚಿತವಾಗುತ್ತಿವೆಯಾದರೂ, ಅವುಗಳು ಜನರನ್ನು ಸೆಳೆಯುತ್ತಿರುವುದು ಕಡಿಮೆಯೇ ಎಂದನಿಸದಿರದು. ಇಂದಿನ ಕಾಲ ಘಟ್ಟಕ್ಕೆ ಹಳೆಯ ಹಾಡುಗಳ ಜೊತೆಗೆ ಇಂದಿನ ಕಾಲಕ್ಕೆ ಸರಿಹೊಂದುವ ಅರ್ಥಪೂರ್ಣ ಅಧ್ಯಾತ್ಮ, ಭಾವನೆಗಳ ಮಿಶ್ರಿಸಿದ ಕವನಗಳು, ಅದಕ್ಕೆ ಸರಿಯಾದ ರಾಗ ಸಂಯೋಜನೆ, ಗಾಯನ ರೂಪದಲ್ಲಿ ಮೂಡಿಬಂದರೆ ಈ ಗೀತೆಗಳು ಹೊಸ ತಲೆಮಾರಿಗೆ ಒಳ್ಳೆಯ ಸಂದೇಶ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನಷ್ಟು ಭಾವಗೀತೆಗಳನ್ನು ಕೇಳುವಂತಾಗಲಿ, ಹೆಚ್ಚು ಕವಿಗಳು, ರಾಗ ಸಂಯೋಜಕರು, ಗಾಯಕರು ಪರಿಚಯವಾಗುವುದರಿಂದ ಕನ್ನಡಕ್ಕೆ, ಹಾಗೂ ಕರ್ನಾಟಕಕ್ಕೇ, ಹಾಗೂ ಸಾಹಿತ್ಯ-ಸಂಗೀತ ಲೋಕಕ್ಕೆ ಉತ್ತಮ ಕೊಡುಗೆಯಾದೀತು.

ಇನ್ನು ಜಾನಪದ ಹಾಡುಗಳಾದ ಚೆಲ್ಲಿದರು ಮಲ್ಲಿಗೆಯಾ, ಮಾಯದಂಥ ಮಳೆ ಬಂತಣ್ಣಾ, ಭಾಗ್ಯದ ಬಳೆಗಾರ ಕ್ರಮವಾಗಿ ಜನರ ಮತಗಳನ್ನು ಹೆಚ್ಚಾಗಿ ಪಡೆದ ಮೂರು ಗೀತೆಗಳು.

The post “ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

“ಕರ್ನಾಟಕದ ನಿಮ್ಮ ನೆಚ್ಚಿನ ಪ್ರವಾಸಿ ತಾಣ ಯಾವುದು”ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ಕರ್ನಾಟಕದ ನಿಮ್ಮ ನೆಚ್ಚಿನ ಪ್ರವಾಸಿ ತಾಣ ಯಾವುದು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ.

ಕರ್ನಾಟಕದಲ್ಲಿನ ನಯನ ಮನೋಹರ ಪ್ರವಾಸಿ ತಾಣಗಳಲ್ಲಿ ನಿಮ್ಮ ಮತ ಯಾವುದಕ್ಕೆ ಎಂಬ ಪ್ರಶ್ನೆಗೆ ಮೈಸೂರು ಅರಮನೆ, ಹಂಪಿ, ಹಾಗೂ ಜೋಗ ಜಲಪಾತ ಮೊದಲ ಮೂರು ಸ್ಥಾನದಲ್ಲಿದ್ದವು. ಪ್ರವಾಸ ಎಲ್ಲರಿಗೂ ಮುದ ನೀಡುತ್ತದೆ. ಯಾವ ಸ್ಥಳಕ್ಕೆ ಹೋಗಬೇಕು ಎಂಬುದು ಸಂದರ್ಭಕ್ಕೆ ತಕ್ಕಂತೆ, ಕಾಲಕ್ಕೆ ತಕ್ಕಂತೆ ಜನರ ಮನದಲ್ಲಿ ಬದಲಾಗುತ್ತಿರುತ್ತದೆ. ಚಾರಣಕ್ಕೆ ಹೋಗಲು ಮಳೆಗಾಲ ಸೂಕ್ತವಲ್ಲ. ಜಲಪಾತ ನೋಡಲು ಮಳೆಗಾಲದಲ್ಲಲ್ಲದೆ ಬೇಸಿಗೆಯಲ್ಲಿ ಹೋದರೆ ಅದರ ವೈಭವ ಸವೆಯುವುದು ಕಷ್ಟಸಾಧ್ಯ. ದೇವಸ್ಥಾನಗಳಿಗೆ ಸದಾ ಕಾಲ ಹೋಗಬಹುದು. ಕೋಟೆ ಕೊತ್ತಲಗಳನ್ನು ನೋಡಲು ಸೂಕ್ತ ಸಮಯವನ್ನು ಗುರುತು ಮಾಡಿಕೊಳ್ಳಬೇಕಾಗುತ್ತದೆ.

ಇವನ್ನೆಲ್ಲ ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ, ನಾಡಿನ ಸಂಸ್ಕೃತಿ ಸಾರುವುದು ನಮ್ಮ ರಾಜ ಮಹಾರಾಜರ ಆಳ್ವಿಕೆಯಲ್ಲಿ ನಿರ್ಮಿತವಾದ ಅರಮನೆಗಳು, ಕೋಟೆ, ದೇವಸ್ಥಾನಗಳು ಎಂಬುದು ನಾವು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಬಂದ ರೀತಿಯಿಂದ ತಿಳಿದು ಬರುತ್ತದೆ. ಮೈಸೂರಿನ ಅರಮನೆಯನ್ನು ನೋಡಲು, ಕಣ್ಣು ತುಂಬಿಸಿಕೊಳ್ಳಲು ಕೇವಲ ನಮ್ಮ ರಾಜ್ಯ, ದೇಶಗಳಿಂದಲ್ಲದೇ ಹೊರದೇಶಗಳಿಂದಲೂ ಜನರು ಬರುತ್ತಾರೆ. ಸಾಂಸ್ಕೃತಿಕ ನಗರಿ ಎಂದೇ ಕರೆಯಲ್ಪಡುವ ಮೈಸೂರು, ಕರ್ನಾಟಕದ ಸಂಸ್ಕೃತಿಯನ್ನು ಸಾರುತ್ತದೆ. ಅರಮನೆಯನ್ನು ನೋಡುವಾಗ, ನಮ್ಮದೇ ರಾಜ್ಯದಲ್ಲಿ ಮೈಸೂರಿನ ಅರಸರನ್ನು ಬಿಟ್ಟು ಮೈಸೂರಿನ ರಾಜರನ್ನು , ಕನ್ನಡವನ್ನು ಕಡೆಗಣಿಸಿದ, ಟಿಪ್ಪುವಿನ ಜಯಂತಿ ಮಾಡಿದ ಸರ್ಕಾರವನ್ನು ನೆನೆದು ಹೇವರಿಕೆ ಹುಟ್ಟುತ್ತದೆ. ಇನ್ನು ಹಂಪಿ. ಕುವೆಂಪುರವರು ಬರೆದಿರುವಂತೆ, “ಹಾಳಾಗಿಹ ಹಂಪೆಗೆ ಕೊರಗುವ ಮನ.” ಹಂಪಿಗೆ ಹೋದ ಯಾತ್ರಿಕರು ನೆನಪಿಸಿಕೊಳ್ಳುವ ಸಂಗತಿಯಂದರೆ, ಅವರಿಗೆ ಅಲ್ಲಿನ ಯಾತ್ರಾ ಮಾರ್ಗದರ್ಶಕ ಕೇಳುವ ಮೊದಲ ಪ್ರಶ್ನೆ- “ನೀವು ಎಷ್ಟು ದಿನ ಇಲ್ಲಿ ಇರುತ್ತೀರಿ?” ತಿಂಗಳುಗಟ್ಟಲೆ ಇರುವಿರಾದರೆ ಹಂಪಿಯನ್ನು ನೋಡುವ ವಿಧಾನ, ಒಂದೆರಡು ದಿನಗಳಲ್ಲಿ ನೋಡಬೇಕಾದರೆ ನೋಡುವ ವಿಧಾನ, ಒಂದು ವಾರ ಇರುವುದಾದರೆ ನೋಡುವ ವಿಧಾನವೇ ಬೇರೆ. ಪ್ರತಿ ಬಾರಿ ಹಂಪಿಯಲ್ಲಿ ಪ್ರವಾಸ ಮಾಡುವಾಗ ಅಲ್ಲಿನ ದೇವಸ್ಥಾನಗಳನ್ನು ನಿಧಿಗಾಗಿ, ಹಿಂದೂ ಸಂಸ್ಕೃತಿಯ ನಾಶಕ್ಕಾಗಿ ಹಂಬಲಿಸಿದ ಮುಸಲ್ಮಾನ ರಾಜರುಗಳನ್ನು ಹಳಿಯುವ ಪರಿಸ್ಥಿತಿ ಉಂಟಾಗುತ್ತದೆ.

ಮೂರನೆಯ ಸ್ಥಾನದಲ್ಲಿ ಜೋಗ ಜಲಪಾತ. ಜೋಗ ಜಲಪಾತ ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದು. ಶರಾವತಿ ನದಿಯು ರಾಜಾ-ರಾಣಿ-ರಾಕೆಟ್-ರೋರರ್ ಎಂಬಾಗಿ ಸೀಳೊಡೆದು ಧುಮುಕುವ ಈ ಜಲಪಾತ ಮಳೆಗಾಲದಲ್ಲಿ ಸುತ್ತಲಿನ ಹಸಿರು, ಬೆಟ್ಟ ಗುಡ್ಡಗಳ ಜೊತೆ ನೋಡಲು ರಮಣೀಯ.

The post "ಕರ್ನಾಟಕದ ನಿಮ್ಮ ನೆಚ್ಚಿನ ಪ್ರವಾಸಿ ತಾಣ ಯಾವುದು" ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.


ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ಮತಚಲಾವಣೆಯಾದ ಆಯ್ಕೆಗಳಿಗೆ ಶ್ರೀ ಶ್ರೀರಾಜ ಗುಡಿ, ಮಣಿಪಾಲದ ಸಂವಹನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು ಇವರು ಮಾಡಿರುವ ವಿಶ್ಲೇಷಣೆ

ಕನ್ನಡ ಚಲನಚಿತ್ರ ಕುರಿತು ಮಾಧ್ಯಮದಲ್ಲಿ ವಿಸ್ತ್ರತವಾಗಿ ನಡೆದಿರುವ ಸಮೀಕ್ಷೆಗಳು ಬಲು ಅಪರೂಪ ಎನ್ನಬಹುದು.ಸಂವಾದ ನಡೆಸಿರುವ ಈ ಸಮೀಕ್ಷೆ ಚಿತ್ರ ರಂಗದ ಒಳಗೂ ಮತ್ತು ಹೊರಗೂ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಬಲ್ಲಷ್ಟು ಸಮರ್ಥವಾಗಿದೆ. ಚಲನಚಿತ್ರ ಹೊಸ ಹೊಳಹುಗಳನ್ನು ಕಂಡು ಕೊಳ್ಳುತ್ತಿರುವ ಈ ನವ ಯುಗದಲ್ಲಿ, ನೋಡುಗನ ರುಚಿ ಕುರಿತಾಗಿಯೂ, ಚಿತ್ರ ರಂಗ ಅರಿಯಲು ಇದು ಸಹಾಯಕವಾಗಬಲ್ಲದು.


ಕರ್ನಾಟಕವನ್ನು ಪ್ರಭಾವಿಸಿದ ಸಿನೆಮಾಗಳ ಸಮೀಕ್ಷೆಯಲ್ಲಿ, ನಾಗರಹಾವು. ಬಂಗಾರದ ಮನುಷ್ಯ, ಮುಂಗಾರು ಮಳೆ, ಪ್ರೇಮಲೋಕ, ಸಾಂಗ್ಲಿಯಾನ, ಗೌರಿ ಗಣೇಶ, ಗಂಧದ ಗುಡಿ, ಜನುಮದ ಜೋಡಿ, ಅಂತ, ದ್ವೀಪ, ಚಿತ್ರಗಳನ್ನು ಓದುಗರ ಮುಂದೆ ಇಡಲಾಗಿತ್ತು. ಇವುಗಳಲ್ಲಿ ಬಂಗಾರದ ಮನುಷ್ಯ, ನಾಗರ ಹಾವು ಮತ್ತು ಗಂಧದ ಗುಡಿ ಚಿತ್ರಗಳು ಮೊದಲ ಮೂರು ಸ್ಥಾನ ಪಡೆದಿವೆ. ಎಲ್ಲ ಸಿನೆಮಾಗಳು ಪಡೆದಿರುವ ಮತವನ್ನು ಬದಿಗಿಟ್ಟು ನೋಡುವುದಾದರೇ, ಈ ಎಲ್ಲಾ ಚಿತ್ರ ಗಳು ತಮ್ಮದೇ ಆದ ಪ್ರಭಾವವನ್ನು ನೋಡುಗನ ಮೇಲೆ ಕಾಯಂ ಆಗಿ ಮೂಡಿಸಿದವು. ಪ್ರೇಮಲೋಕ, ಜನುಮದ ಜೋಡಿ ಚಿತ್ರಗಳು ಮೊದಲ್ ಮೂರು ಸ್ಥಾನ ಪಡೆಯಲು ವಿಫಲವಾಗಿದ್ದರೂ, ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರಗಳು ಮಾಡಿದ ಮೋಡಿಯನ್ನು ಮರೆಯಲಾಗದು. ರವಿಚಂದ್ರ ಈ ಚಿತ್ರದ ಮುಖಾಂತರ ನಾಡಿನ ರಸಿಕರ ಮುಂದೆ ಒನ್ದು ಹೊಸ ಸಾಧ್ಯತೆಯನ್ನೇ ತೆರೆದಿಟ್ಟರು. ಪೊಪ್ಯುಲರ ಸಿನೆಮಾಕ್ಕೆ ಆದ ಒಂದು ವಾಖ್ಯೆಯನ್ನು ಪ್ರೇಮಲೋಕ ನೀಡಿದ್ದು ಸುಳ್ಳಲ್ಲ. 

ಅದೇ ರೀತಿ ದ್ವೀಪದ ಮುಖಾಂತರ ನಿಜವಾಗಿಯೂ ನಿಂತ ನೀರಾಗಿದ್ದ ಕನ್ನಡ ಚಿತ್ರ ರಂಗಕ್ಕೆ, ಒಂದು ಆಶಾದ್ವೀಪವನ್ನುತೋರಿಸಿದವರು ಕಾಸರವಳ್ಳ್.  ಇದರಲ್ಲಿ ಸೌಂದರ್ಯ ಅಭಿನಯ ಒನ್ದು ಮಾದರಿ ಎನೆಸಿದರೇ, ಗಿರೀಶ ನಿರ್ದೇಶನವೇ ಇನ್ನೊಂದು ಮಾದರಿ ಎಂದರೇ ಆಶ್ಚರ್ಯವಿಲ್ಲ. ಸಾಂಗ್ಲಿಯಾನ, ಗೌರಿ ಗಣೇಶದಲ್ಲಿ ಅನಂತ ನಾಗ ಮತ್ತು ಶಂಕರ ನಾಗ ಅಭಿನಯ ಮಧ್ಯಮವರ್ಗವನ್ನು ಕಟ್ಟಿ ಹಾಕಿದ್ದಲ್ಲದೇ, ಗಣೇಶ ಸಿರೀಸ್ ಗಳ ಮುಖಾಂತರ ಫಣಿ ರಾಮಚಂದ್ರ ಕನ್ನಡಕ್ಕೆ ಇನ್ನೊಂದು ಸಾಧ್ಯತೆಯನ್ನು ತೋರಿಸಿದರು. ಇವೆಲ್ಲ್ದರ ಮಧ್ಯ ಸಮೀಕ್ಷೆಯನ್ನೇ ಮೂಲವಾಗಿಟ್ಟುಕೊಂಡು ನೊಡುವುದಾದರೇ, ರಾಜ್ ಯುಗ ಕನ್ನಡ ದ ಚಿತ್ರರಂಗದ ಪಾಲಿಗೆ ಸುವರ್ಣ ಯುಗವೆಂದೇ ಹೇಳಬಹುದು. ೬೦ ರಿಂದ ೯೦ ರ ಆದಿ ಭಾಗದವರೆಗೆ, ರಾಜ್ ಕಾಲದಲ್ಲಿ ಮೂಡಿಬಂದ ಚಿತ್ರಗಳು ಒಂದು ಪ್ರೇಕ್ಷಕ ವರ್ಗವನ್ನೇ ನಿರ್ಮಾಣಮಾಡಿದ್ದವು. ಸಿದ್ದಲಿಂಗಯ್ಯ ನಿರ್ದೇಶಿಸಿದ, ಬಂಗಾರದ ಮನುಷ್ಯ, ೧೦೪ ವಾರಗಳಕಾಲ ನಿರಂತರವಾಗಿ  ಪ್ರದರ್ಶನಗೊಂಡು, ಹೊಸ ದಾಖಲೆಯನ್ನೇ ಹುಟ್ಟುಹಾಕಿದವು. ಅದೇ ರೀತಿ, ತಾರಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ದಿಗ್ದರ್ಶನದಲ್ಲಿ ಮೂಡಿಬಂದ ವಿಷ್ಣುವರ್ಧನ ಅಭಿನಯದ ಮೊದಲ ಚಿತ್ರ ನಾಗರಹಾವು ಕೂಡ ತನ್ನ ನಟನೆ ಹಾಗು ಬಿಗು ಕಥಾಹಂದರಕ್ಕಾಗಿ ಪ್ರೇಕ್ಷಕನನ್ನು ಕಟ್ಟಿ ಹಾಕುವಂತಹದು. ಆದರೆ, ನವ ಹಾಗು ಇಂಟರ್ ನೆಟ್ ಯುಗದ ಚಿತ್ರಗಳಾದ ಮುಂಗಾರು ಮಳೆ, ತನ್ನ ಕಥೆ, ಹಾಡು ಹಾಗು ಗಣೇಶ್ ಅಭಿನಯ ಮತ್ತು ಭಟ್ಟರ ಕರ್ಣಧಾರತ್ವದ ಮುಖಾಂತರ ಗಲ್ಲಾ ಪಟ್ಟಿಗೆಯನ್ನು ಸೂರು ಮಾಡಿಹಾಕಿದರೂ, ಯಾಕೋ ಈ ಸಮೀಕ್ಷೆಯಲ್ಲಿ ಸ್ಥಾನಗಳಿಸಿಲ್ಲ. ಇದರ ಅರ್ಥ, ನಾಡಿನ ಚಿತ್ರ ವೀಕ್ಷಕ ಇವತ್ತಿಗೂ, ಪುಟ್ಟಣ್ಣ, ರಾಜ್, ವಿಷ್ಣು, ಅಥವಾ ಶಂಕರ್ ನಾಗ್ ತರಹದ ಆದರ್ಶವಾದಿ ನಟನೆಯನ್ನು ತೆರೆ ಮೇಲೆ ಇಶ್ಟಪಡುತ್ತಾನೆ ಎಂದು ಕಾಣಿಸುತ್ತದೆ.


ಆದರೆ ಜನಪ್ರೀಯ ನಿರ್ದೇಶಕರಲ್ಲಿ ಪುಟ್ಟಣ್ಣ ಕಣಗಾಲ ತಮ್ಮ ಸಮಕಾಲೀನ ಹಾಗು ನಂತರದ ಪೀಳಿಗೆಯ ದಿಗ್ದರ್ಶಕರನ್ನು ಬದಿಗೊತ್ತಿ, ಇವತ್ತಿಗೂ, ನಂಬರ್ ೧ ಸ್ಥಾನವನ್ನು ಉಳಿಸಿಕೊಂಡಿದ್ದು. ಇಂದಿನ ತಲೆಮಾರಿನ ಬಹುತೇಕ ಕನ್ನಡ ಚಿತ್ರ ನಿರ್ದೇಶಕರಿಗೆ ಪುಟ್ಟಣ್ಣ ಆದರ್ಶವಾಗಿ ಕಂಡಿರಲು ಸಾಕು. ತಮ್ಮ ಪ್ರತಿ ಚಿತ್ರವನ್ನೂ ಒಂದು ಪ್ರಯೋಗವಾಗಿ ಮುಂದಿಟ್ಟ ಪುಟ್ಟಣ್ಣ ಅವರಿಗೆ ಅವರೇ ಸಾಟಿ. ಚಲನಚಿತ್ರ ನಿರ್ದೇಶನ ಮತ್ತು ಅಧ್ಯಯನದಲ್ಲಿ ಜಪಾನ್, ಇರಾನಿ, ಫ್ರೆಂಚ್ ಮತ್ತು ಭಾರತೀಯ ಭಾಷೆಗಳಲ್ಲಿ ಬೆಂಗಾಲಿಗೆ ಪ್ರಾಶಸ್ತ ಕೊಡುವ ನಮ್ಮ ಶಿಕ್ಷಣ ಪಂಡಿತರಿಗೆ, ಪುಟ್ಟಣ್ಣ ಕಾಣದೇ ಇರುವುದೇ ನಮ್ಮ ದೌರ್ಭಾಗ್ಯ. ಮೂಲ ವಾಹಿನಿ ಹಾಗು ಕಲಾತ್ಮಕ ಎರಡಲ್ಲೂ ನವ ಭಾಷ್ಯ ಬರೆದ ಪುಟ್ಟಣ್ಣ  ಸಿನಿ ಜೀವನವೇ ನಿಜವಾಗಿಯೂ ಒಂದು ಅಧ್ಯಯನವೇ ಸರಿ. ಉಳಿದಂತೆ ಏ ಅನ್ನುತ್ತಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಉಪೇಂದ್ರ ಕೇವಲ ಬುದ್ಡಿವಂತರಿಗೆ ಮಾತ್ರವೇ ಉಳಿದಿಕೊಳ್ಳದೇ ಜನಮಾನಸದಲ್ಳಿ ಶ್ !!! ಎನ್ನುತ್ತಲೇ ಹೊಸ ಸದ್ದು ಮಾಡಿದವರು. ದೊರೆ-ಭಗವಾನ್ ಜೋಡಿ ಕನ್ನಡ ಸಿನೇಮಾದ ಕೋಟಿ ಚನ್ನಯ್ಯರೇ ಸರಿ. ೧೯೬೫ ರಿಂದ ೯೦ ರ ಆದಿ ಭಾಗದವರೆಗೆ ಸಂಧ್ಯಾರಾಗ, ಚಂದನದ ಗೊಂಬೆ, ಕಸ್ತೂರಿ ನಿವಾಸ ಮತ್ತು ಜೀವನ ಚೈತ್ರ ಮುಂತಾದವುಗಳು ಮುಖಾಂತರ ಬಾಕ್ಸ್ ಆಫೀಸನಲ್ಲಿ ಸಾಕಷ್ಟು ಸಂಚಲನ ತಂದಿದ್ದು, ಆದರೆ ತಾಂತ್ರಿಕವಾಗಿ ಚಿತ್ರಗಳನ್ನು ನೋಡಿದಾಗ ಅಷ್ಟೊಂದು ಮಹತ್ವ ಕೊಡದೇ, ಮಧ್ಯಮ ವರ್ಗ ಕುಳಿತು ನೋಡಬಹುದಾದ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಿದ್ದು ಕಂಡುಬರುತ್ತದೆ. ಸಿದ್ದಲಿಂಗಯ್ಯ ಸ್ಥಾನವನ್ನು ಏಕೆ ಪಡಿಲಿಲ್ಲ ಎನ್ನುವುದು ಸಮೀಕ್ಷೆಯಲ್ಲಿ ಭಾಗವಹಿಸಿದವರ ವಿಮರ್ಶೆಗೆ ಬಿಟ್ಟಿದ್ದು.


ನೆಗೆಟಿವ್ ಪರ್ಸಾನಾಲಿಟಿಯನ್ನು ಹೋಲುವ ಅವಕಾಶವನ್ನು ಪಡೆದ ವಜ್ರಮುನಿ ಕನ್ನಡ ಚಿತ್ರರಂಗ ಕಂಡ ಅಂಬರೀಶ್ ಪುರಿ ಎನ್ನಬಹುದು. ತಮ್ಮ ಪ್ರತಿಚಿತ್ರದಲ್ಲೂ ನಾಯಕನಿಗೆ ಸಮನಾಗಿ ಛಾಪನ್ನು ಒತ್ತಿದ ಶ್ರೇಯಸ್ಸು ವಜ್ರಮುನಿ ಅವರದ್ದೂ. ಇನ್ನು ಪ್ರೋಫೆಸರ ಹುಚ್ಚುರಾಯರದ ನರಸಿಂಹ ರಾಜು, ನಟನೆ ಇವತ್ತಿಗೂ ಯಾರಿಗೂ ತುಂಬಲು ಸಾಧ್ಯವಾಗಿಲ್ಲ. ಚಾರ್ಲಿ ಚಾಪ್ಲಿನ್ ಹೋಲುವ ದೇಹ ಸೌಷ್ಟವ ಅವರದ್ದಾಗಿದ್ದೂ ಅಲ್ಲದೇ ನಟನೆ ಕೂಡ ಚಾಪ್ಲಿನ್ ಗೆ ಸಮಾನಾಂತರವೇ ಆಗಿತ್ತು, ಹಾಸ್ಯವನ್ನು ಯಾವುದೇ ಅಪಾರ್ಥಕ್ಕೆ ಎಡೆ ಮಾಡದೇ ಮುಂದಿಡುವಲ್ಲಿ ನರಸಿಂಹ ರಾಜು ನಿಜಕ್ಕೂ ಎತ್ತಿದ ಕೈ.


ಸಂಗೀತಕ್ಕೆ ಚಲನ ಚಿತ್ರ ನೀಡಿರುವ ಕಾಣಿಕೆಯೇ ಅದ್ಭುತ. ದಾಸರ ಪದಗಳು, ವಚನಗಳು, ನವೋದಯ, ನವ್ಯದ  ಸಾಕಷ್ಟು ರಚನೆಗಳನ್ನು ಜನಮಾನಸದಲ್ಲಿ ಜೀವಂತವಾಗಿರಿಸಿದ್ದೇ ಚಿತ್ರರಂಗ. ಅವುಗಳಿಗೆ ಬಹುತೇಕ ಯೋಗ್ಯಸ್ಥಾನ್ವನ್ನು ಕೊಟ್ಟ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಕುಲದಲ್ಲಿ ಮೇಲಾವುದೋ ಹುಚ್ಚಪ್ಪ ಇದು ಯಾವ ಕಾಲಕ್ಕೂ ಹೋಲುವ ಅಪರೂಪದ ಹಾಡು. ಮನುಷ್ಯ ಜೀವ ಹಾಗೂ ಜೀವನ ಪ್ರೀತಿ ಉಳಿದೆಲ್ಲವುಕ್ಕಿಂತಲೂ ಮಿಗಿಲಾದದ್ದು ಎನ್ನುವ ಸಂದೇಶದ ಈ ಗೀತೆ, ಮಾಹಾಮಾರಿಯ ಸಂಕಷ್ಟದ ಈ ಕಾಲಕ್ಕಿಂತಲೂ ಬೇರೆ ಯಾವಗ ಪ್ರಸ್ತುತವಾಗಿರಲು ಸಾಧ್ಯ?ಮೂಲ ಕನ್ನಡಿಗರು ಅಲ್ಲದೇ ಇದ್ದರೂ, ಎಸ್ ಜಾನಕಿ, ವಾಣಿ ಜಯರಾಂ, ಪಿ ಸುಶೀಲಾ ಚಿತ್ರ ವೀಕ್ಷಕರು ಮನಸ್ಸಿನಲ್ಲಿ ಅಲ್ಲದೇ ಸಾಮಾನ್ಯ ಜನತೆಯ ಮನದಲ್ಲೂ ಖಾಯಂ ನಿವಾಸಿಗಳಾಗಿರುವರು.

ಏನೇ ಇರಲಿ, ವ್ಯಕ್ತಿಯೊಬ್ಬನ ಸಾಧನೆಗೆ ಒಂದು ಸಮೀಕ್ಷೆ ಮಾನದಂಡವಾಗಲು ಸಾಧ್ಯವಿಲ್ಲ. ಆದರೆ ಇಂತಹ ಪ್ರಯತ್ನಗಳ ಮುಖಾಂತರ ಗತ, ಪ್ರಸ್ತುತ ಹಾಗುಮುಂದಿನ ತಲೆಮಾರನ್ನು ಜೋಡಿಸುವ ಪ್ರಯತ್ನಕ್ಕೆ ಜೈ ಎನ್ನಲೇಬೇಕು. ಆದರೆ ಇದು ಕೇವಲ ನವೆಂಬರ ಪ್ರಯತ್ನವಾಗಿ ಮಾತ್ರ ಉಳಿಯದಿರಲಿ ಎಂಬುದೇ ಒಂದು ಆಶಯ.

ಶ್ರೀರಾಜ ಗುಡಿ, ಮಣಿಪಾಲದ ಸಂವಹನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು

The post ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ : 92% ಹೌದು ಎನ್ನುತ್ತಾರೆ! #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

$
0
0

‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ ಎಂಬುದು ನಮ್ಮ ಕಡೆಯ ಹಾಗೂ ಮಹತ್ವದ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಡಾ. ಎಂ ಕೆ ಶ್ರೀಧರನ್, ಐಟಿ ಉದ್ಯೋಗಿ ಹೀಗೆ ವಿಶ್ಲೇಷಿಸುತ್ತಾರೆ.

ಶೇಕಡಾ 92 ಮಂದಿ ‘ಹೌದು’ ಎಂದು ಉತ್ತರಿಸಿದ್ದಾರೆ. ಶೇಕಡಾ 8ರಷ್ಟು ಕೆಲವೇ ಕೆಲವು ಜನ ‘ಇಲ್ಲ’ ಎಂದಿದ್ದಾರೆ. ‘ಇಲ್ಲ’ ಎನ್ನುವವರಲ್ಲೂ ಕೂಡ ‘ಕಡ್ಡಾಯ’ಕ್ಕೆ ಇಲ್ಲ ಎಂದು ಹೇಳಿರಬಹುದೇ ಹೊರತು, ಮಾತೃ/ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವುದಕ್ಕಲ್ಲ ಎನ್ನುವುದನ್ನೂ ಕೂಡ ಊಹಿಸಬಹುದು. ಒಟ್ಟಿನಲ್ಲಿ ಇಷ್ಟು ವ್ಯಾಪಕವಾಗಿ ಏಕ ಅಭಿಪ್ರಾಯ ಸಿಗುವ ಪ್ರಶ್ನೆಗೆ ಸಮೀಕ್ಷೆ ಮಾಡಬೇಕಾಗಿತ್ತೇ ಎಂಬುದೇ ನಾವು ಕೇಳಬೇಕಾದ ಮೊದಲ ಪ್ರಶ್ನೆಯಾಗುತ್ತದೆ.


ಪ್ರಸ್ತುತ ಸಂದರ್ಭದಲ್ಲಿ ಈ ಪ್ರಶ್ನೆ / ಸಮೀಕ್ಷೆ ಸೂಕ್ತವಾಗಿದೆ. ಏಕೆಂದರೆ, ಆಂಗ್ಲ ಭಾಷಾ ಮಾಧ್ಯಮ ಶಾಲೆಗಳು ಹೆಚ್ಚುತ್ತಿವೆ. ಪ್ರಾದೇಶಿಕ/ಮಾತೃಭಾಷಾ ಮಾಧ್ಯಮದ ಶಾಲೆಗಳು ಕಡಿಮೆಯಾಗುತ್ತಿವೆ. ಹದಿಹರೆಯದವರಿಗೆ ಕನ್ನಡಕ್ಕಿಂತ ಆಂಗ್ಲ ಭಾಷೆಯ ಮೇಲೆ ಹಿಡಿತ ಚೆನ್ನಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಜನರ ಅಭಿಪ್ರಾಯವನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ತಿಳಿದುಕೊಳ್ಳುವುದು ಸೂಕ್ತವಾಗಿದೆ. ಈ ಪ್ರಬಲ ಜನಾಭಿಪ್ರಾಯವು ಕನ್ನಡಕ್ಕೆ ಸಿಗಬೇಕಾದ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲು ಹೇಗೆ ಅನುಕೂಲ ಮಾಡಿಕೊಡುತ್ತದೆ ಎನ್ನುವ ಕಡೆ ನಮ್ಮ ಗಮನ ಹರಿಸಲು ಅನುಕೂಲ ಮಾಡಿಕೊಡುತ್ತದೆ.


ಕನ್ನಡದ ಹೋರಾಟಗಾರರು ಸಾರ್ವಜನಿಕರ ನೆಲೆಯಲ್ಲಿ ನಿಂತು ಸರ್ಕಾರದತ್ತ ಬೆರಳು ತೋರಿಸುವ ಸನ್ನಿವೇಶಗಳನ್ನು ನಾವು ಗಮನಿಸಬಹುದು. ಸರಿಯಾಗಿ ಹೇಳಬೇಕೆಂದರೆ, ಸರ್ಕಾರಕ್ಕೆ, ನೀತಿನಿರೂಪಣೆ-ಆಡಳಿತ-ಕಾನೂನುರಚನೆ ಮತ್ತು ಕಾನೂನುನಿಷ್ಕರ್ಷೆಗಳ ಮುಖಗಳಿವೆ. ಪ್ರಸ್ತುತ ಕನ್ನಡದ ಪರಿಸ್ಥಿತಿ ಮತ್ತು ಸಮೀಕ್ಷೆಯ ಫಲಿತಾಂಶಗಳನ್ನು ನೋಡಿದಾಗ ಜನಾಭಿಪ್ರಾಯ ಮತ್ತು ನೀತಿಗಳ ಮಧ್ಯೆ ಕಂದರ ಇದೆಯೇ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ.


ಭಾಷಾ ನೀತಿಯ ಬಗ್ಗೆ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪುಗಳನ್ನು ನೀಡಿದೆ. ಈ ತೀರ್ಪು ಪ್ರಾದೇಶಿಕ ಭಾಷೆಯನ್ನು ಕಡ್ಡಾಯ ಮಾಡುವ ರಾಜ್ಯ ಸರ್ಕಾರಗಳ ಕ್ರಮಗಳ ಹಿನ್ನೆಲೆಯಲ್ಲಿ ನೀಡಲಾಗಿದೆ. ಮತ್ತು ಈ ತೀರ್ಪಿನ ಸಾರಾಂಶ ಎಂದರೆ, ಮಕ್ಕಳ ಭಾಷಾ ಕಲಿಕೆಯನ್ನು ಪ್ರಾಥಮಿಕ ಹಂತದಲ್ಲಿ ನಿರ್ಧರಿಸಬೇಕಾದ್ದು ಅವರ ಪಾಲಕರೇ ಹೊರತು ಸರ್ಕಾರಗಳಲ್ಲ ಎಂಬುದೇ ಆಗಿದೆ. ಇತ್ತೀಚೆಗೆ ಸ್ವೀಕೃತವಾದ ನೂತನ ಶಿಕ್ಷಣ ನೀತಿಯೂ ಸಹ ಮಾತೃಭಾಷೆ / ಪ್ರಾದೇಶಿಕ ಭಾಷಾ ಶಿಕ್ಷಣವನ್ನು ಅನುಮೋದಿಸಿದೆ. ಶಿಕ್ಷಣ ತಜ್ಞರು ಸಾಮಾನ್ಯವಾಗಿ ಮಾತೃ ಭಾಷಾ ಶಿಕ್ಷಣಕ್ಕೆ ಆದ್ಯತೆಯನ್ನು ಕೊಡುತ್ತಾರೆ.


ಜನಾಭಿಪ್ರಾಯ, ನ್ಯಾಯಾಲಯದ ತೀರ್ಪುಗಳು ಮತ್ತು ನೀತಿ ನಿರೂಪಕರ ಅಭಿಪ್ರಾಯಗಳು ಮಾತೃ/ ಪ್ರಾದೇಶಿಕ ಭಾಷೆಯ ಪರವಾಗಿ ಇದ್ದರೂ ಸಹ ಆಂಗ್ಲ ಭಾಷಾ ಮಾಧ್ಯಮದ ಶಾಲೆಗಳು ಏಕೆ ಹೆಚ್ಚುತ್ತಿವೆ? ಏಕೆ ಸರ್ಕಾರಗಳು ಆಂಗ್ಲ ಭಾಷಾ ಶಾಲೆಗಳಿಗೆ ಅನುಮತಿ ನೀಡುತ್ತಿವೆ ಪ್ರಾದೇಶಿಕ/ಮಾತೃಭಾಷೆ ಕಡ್ಡಾಯ ಮಾಡಲು ಹಿಂದೆ-ಮುಂದೆ ನೋಡುತ್ತಿವೆ. ಜನಾಭಿಪ್ರಾಯ ವ್ಯಕ್ತವಾಗುತ್ತಿದ್ದಾಗಲೂ ವಿರೋಧೀ ಧ್ವನಿಗಳು ಕಾಣದಿದ್ದಾಗಲೂ ಸರ್ಕಾರದ ವರ್ತನೆ ಏಕೆ ಈ ರೀತಿ ಇವೆ ಎಂಬುದೇ ಮುಂದಿನ ಪ್ರಶ್ನೆಯಾಗಿದೆ.
ಸರ್ಕಾರದ ಶಿಕ್ಷಣ ಇಲಾಖೆಯು ಬೇಡಿಕೆಗೆ ಅನುಗುಣವಾಗಿ ಶಾಲೆಗಳನ್ನು ತೆಗೆಯಲು ಅನುಮತಿ ನೀಡುತ್ತದೆ. ಖಾಸಗೀ ಶಾಲೆಗಳು ಜನರ ಬೇಡಿಕೆಗಳಿಗೆ ಅನುಗುಣವಾಗಿ ಮಾಧ್ಯಮಗಳನ್ನು ತೆರೆಯುತ್ತವೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಆಂಗ್ಲ ಭಾಷಾ ಮಾಧ್ಯಮಗಳಿಗೆ ಸೇರಿಸುವುದರಿಂದ ಕನ್ನಡ ಮಾಧ್ಯಮ ಶಾಲೆಗೆ ಬೇಡಿಕೆ ಕುಸಿದಿದೆ. ಚುನಾವಣೆ ಎದುರಿಸಬೇಕಾದ ಪಕ್ಷಗಳು ಮಾತೃಭಾಷೆ/ಪ್ರಾದೇಶಿಕ ಭಾಷೆಯನ್ನು ಕಡ್ಡಾಯ ಮಾಡುವ ಸಾಹಸಕ್ಕೆ ಹಿಂಜರಿಯುತ್ತಿದ್ದಾರೆ.

ಸರ್ಕಾರೀ ಶಾಲೆಗಳು ಮತ್ತು ಪ್ರಾದೇಶಿಕ ಭಾಷಾ ಮಾಧ್ಯಮದ ಶಾಲೆಗಳು ಗುಣಮಟ್ಟದ ಶಿಕ್ಷಣ ಕೊಡಬಲ್ಲವು ಎಂಬುದನ್ನು ಸಾರ್ವಜನಿಕರು ಒಪ್ಪುವಂತೆ ಕಾಣುವುದಿಲ್ಲ. ಈ ತಪ್ಪು ಅಭಿಪ್ರಾಯವನ್ನು ಶಾಸನದ ಬಲದಿಂದ ತಿದ್ದುವ ಸ್ಥೈರ್ಯ ಸರ್ಕಾರಗಳು ತೋರುತ್ತಿಲ್ಲ. ಖಾಸಗೀ ಹಿತಾಸಕ್ತಿಗಳು ನೀತಿ-ನ್ಯಾಯಾಲಯ-ಆಡಳಿತವನ್ನು ಪ್ರಭಾವಿಸುವಂತೆ ಮಾತೃಭಾಷೆ / ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುವ ಸಾರ್ವಜನಿಕ ಹಿತಾಸಕ್ತಿಗಳು ಸಕ್ರಿಯವಾಗುತ್ತಿಲ್ಲ.


ಹೀಗೆ ಸಾರ್ವಜನಿಕ ಅಭಿಪ್ರಾಯದಲ್ಲಿ ಮತ್ತು ಆಡಳಿತದಲ್ಲಿ ವಿರೋಧಾಭಾಸಗಳು ಇರುವುದು ವ್ಯಕ್ತವಾಗುತ್ತಿದೆ. ತಾತ್ವಿಕವಾಗಿ ಮಾತೃ/ಪ್ರಾದೇಶಿಕ ಭಾಷೆಯ ಮಹತ್ವ ಅವರ ಅರಿವಿನಲ್ಲಿ ಇದೆ. ಆದರೆ, ಮಹತ್ವದ ಮಾತೃಭಾಷಾ ಶಿಕ್ಷಣವನ್ನು ತಮ್ಮ ಮಕ್ಕಳಿಗೆ/ಸಮಾಜಕ್ಕೆ ಒದಗಿಸುವಲ್ಲಿ ಅವರಿಗೆ ವ್ಯಾವಹಾರಿಕ ಗೊಂದಲ/ತೊಂದರೆಗಳಿವೆ.
ಭಾಷಾ ವಿಚಾರದಲ್ಲಿ ಈ ಸಮೀಕ್ಷೆಯು ಬಿಚ್ಚಿಟ್ಟಿರುವ ವಿರೋಧಾಭಾಸವು ದೇಶೀ ಭಾಷೆಗಳನ್ನು ಪ್ರಮುಖವಾಗಿಸುವ ನಮ್ಮ ಆಶಯಕ್ಕೆ ಇನ್ನೂ ಕೆಲವು ಒಳನೋಟಗಳು ಬೇಕಾಗಿವೆ ಎನ್ನುವುದನ್ನು ಹೇಳುತ್ತಿದೆ. ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಗಳು ಬಹುಜನರಿಗೆ ಒಂದೇ ಆಗಿರಬಹುದು. ಆದರೆ ಎಲ್ಲರಿಗೂ ಅಲ್ಲ. ಭಾಷಾ ಕಲಿಕೆಯ ಮತ್ತು ಮಾಧ್ಯಮಗಳ ಚರ್ಚೆಗಳನ್ನು ಬಿಡಿಸುವುದರಿಂದ ಹಲವು ಲಾಭಗಳಿವೆ. ಮುಖ್ಯವಾಗಿ ವಿಷಯ ನಿರೂಪಣೆಯಲ್ಲಿ ಸ್ಪಷ್ಟತೆ ಮೂಡಿ ಈಗ ಇರುವ ಹಲವಾರು ಗೊಂದಲಗಳು ಪರಿಹಾರ ಆಗುವ ಸಾಧ್ಯತೆಗಳಿವೆ. ಭಾಷೆಯನ್ನು ಕಡ್ಡಾಯ ಗೊಳಿಸುವ ಮತ್ತು ಭಾಷಾ ಆಯ್ಕೆಯ ನಿರಾಕರಣೆ – ಈ ಎರಡೂ ತುದಿಗಳಲ್ಲಿ ನಿಲ್ಲದೇ – ಚರ್ಚೆ ಮುಂದುವರೆಸಬೇಕಾಗಿದೆ. ಪ್ರತಿಯೊಂದು ಶಾಲೆಯ ಸುತ್ತಾ ಇಂದು ಒಂದು ಆವರಣ ಇದೆ. ಖಾಸಗೀ ಶಾಲಾ ಆಡಳಿತ ಮಂಡಳಿಗಳ ಪರಿಧಿ ಬಿಗಿಯಾಗಿದೆ. ಕಲಿಕೆಯನ್ನು ಈ ಪರಿಧಿಯೊಳಗಿನಿಂದ ಬಿಡಿಸುವ ಇಂಗಿತವನ್ನು ಇತ್ತೀಚೆಗೆ ಅಂಗೀಕೃತವಾದ ಶಿಕ್ಷಣ ನೀತಿ ವ್ಯಕ್ತಪಡಿಸುತ್ತಿದೆ. ಭಾಷಾ ವಿಚಾರದಲ್ಲಿ, ನ್ಯಾಯಾಂಗದ ತೀರ್ಪಿಸ ಆಶಯವನ್ನು ಸಾಕಾರಗೊಳಿಸಲೂ ಸಹ, ಶಿಕ್ಷಕರನ್ನು ಶಾಲಾ ಪರಿಧಿಯೊಳದಿಂದ ಬಿಡಿಸುವ ಅಗತ್ಯತೆಯನ್ನು ಈ ಸಮೀಕ್ಷೆಯ ವಿಮರ್ಶೆ ತಿಳಿಸಿಕೊಡುತ್ತದೆ.

ಡಾ. ಎಂ ಕೆ ಶ್ರೀಧರನ್, ಐಟಿ ಉದ್ಯೋಗಿ

The post ‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ : 92% ಹೌದು ಎನ್ನುತ್ತಾರೆ! #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ first appeared on Vishwa Samvada Kendra.

ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನಿಧನ –ಬಹಳ ದುಃಖದ ಸುದ್ದಿ : ದತ್ತಾಜಿ ಶ್ರದ್ಧಾಂಜಲಿ

$
0
0




ಸಂಸ್ಕೃತ ವಿದ್ವಾಂಸರು, ಖ್ಯಾತ ವಾಗ್ಮಿಗಳಾದ ಬನ್ನಂಜೆ ಗೋವಿಂದಾಚಾರ್ಯರು ಇಂದು ನಿಧನರಾಗಿದ್ದಾರೆ. ಉಡುಪಿಯ ಅಂಬಲಪಾಡಿಯ ಸ್ವಗೃಹದಲ್ಲಿ ಬನ್ನಂಜೆಯವರು ಇಂದು ಬೆಳಿಗ್ಗೆ ಅಸುನೀಗಿದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಬನ್ನಂಜೆ ಎಂದೇ ಪ್ರಸಿದ್ಧರಾಗಿದ್ದ ಅವರು ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಹಲವಾರು ಲೇಖನಗಳನ್ನು ಬರೆದಿದ್ದಾರೆ.

ಬನ್ನಂಜೆಯವರ ಕಿರಿಯ ಪುತ್ರ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ತತ್ಸಂಬಂಧದ ವಿಧಿಗಳನ್ನು ಮನೆಯಲ್ಲಿಯೇ ನಡೆಸಲಾಗುತ್ತಿತ್ತು.

ಬನ್ನಂಜೆ ಗೋವಿಂದಾಚಾರ್ಯ 1936 – 2020
"ನಾಡಿನ ಖ್ಯಾತ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ನಮ್ಮನ್ನು ಅಗಲಿರುವುದು ಬಹಳ ದುಃಖದ ಸುದ್ದಿ. ಒಂದೇ ಮನೆಯಲ್ಲಿ ೧೨ ದಿನಗಳ ಅಂತರದಲ್ಲಿ ಎರಡು ಪೀಳಿಗೆಯ ಇಬ್ಬರು (ತಂದೆ-ಮಗ) ಕಾಲವಾದುದು ಅತ್ಯಂತ ನೋವಿನ ಸಂಗತಿ. ಬನ್ನಂಜೆಯವರು ಈ ತಲೆಮಾರಿನ ಮೇರು ವಿದ್ವಾಂಸರು, ಉದ್ದಾಮ ಲೇಖಕರು, ಪ್ರಭಾವೀ ವಾಗ್ಮಿಯಾಗಿದ್ದರು. ಭಾರತೀಯ ಸಂಸ್ಕೃತಿಯ ಶ್ರೇಷ್ಠ ವ್ಯಾಖ್ಯಾನಕಾರರು. ಅವರ ನಿಧನದಿಂದ ದೇಶದ ವಿದ್ವದ್ವಲಯಕ್ಕೂ ಸಾಂಸ್ಕೃತಿಕ ರಂಗಕ್ಕೂ ಅಪಾರ ನಷ್ಟ ಉಂಟಾಗಿದೆ. ಧ್ವನಿಮುದ್ರಿತವಾಗಿರುವ ಅವರ ವಾಣಿ-ವಿವೇಕ ನಾಡಿನ ಜನತೆಯನ್ನು ಮುಂದೆಯೂ ನಿಶ್ಚಿತವಾಗಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತವೆ. ಅವರ ಸ್ಮೃತಿ ಅಮರವಾಗಿರಲೆಂದು ಪ್ರಾರ್ಥಿಸಿ ನನ್ನ ನಮನಗಳನ್ನು ಅರ್ಪಿಸುತ್ತೇನೆ. ದಿವಂಗತ ಆತ್ಮಕ್ಕೆ ಸದ್ಗತಿ ದೊರೆಯಲಿ," ಎಂದು ಆರೆಸ್ಸೆಸ್ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಅಗಲಿದ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಕುರಿತು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಆರೆಸ್ಸೆಸ್ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ

The post ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನಿಧನ - ಬಹಳ ದುಃಖದ ಸುದ್ದಿ : ದತ್ತಾಜಿ ಶ್ರದ್ಧಾಂಜಲಿ first appeared on Vishwa Samvada Kendra.

ಖ್ಯಾತ ಏರೋಸ್ಪೇಸ್ ವಿಜ್ಞಾನಿ ರೊಡ್ಡಮ್ ನರಸಿಂಹ ನಿಧನ. ಆರೆಸ್ಸೆಸ್ ಕ್ಷೇತ್ರ ಸಂಘಚಾಲಕ ವಿ ನಾಗರಾಜ್ ಸಂತಾಪ.

$
0
0

ಖ್ಯಾತ ಏರೋಸ್ಪೇಸ್ ವಿಜ್ಞಾನಿ ರೊಡ್ಡಮ್ ನರಸಿಂಹ ನಿಧನ, ಆರೆಸ್ಸೆಸ್ ಕ್ಷೇತ್ರ ಸಂಘಚಾಲಕ ವಿ ನಾಗರಾಜ್ ಸಂತಾಪ.

ಬೆಂಗಳೂರು, ೧೫ ಡಿಸೆಂಬರ್ : ಭಾರತದ ಖ್ಯಾತ ಏರೋಸ್ಪೇಸ್ ವಿಜ್ಞಾನಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರೊಡ್ಡಮ್ ನರಸಿಂಹ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ಫ್ಲ್ಯೂಯಿಡ್ ಡೈನಾಮಿಕ್ಸ್ ವಿಷಯದಲ್ಲಿ ಅವರಿಗೆ ಹೆಚ್ಚಿನ ಅಭಿರುಚಿ ಇತ್ತು. ಬೆಂಗಳೂರಿನ ಐಐಎಸ್ಸಿ ಯಲ್ಲಿ ಏರೋಸ್ಪೇಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಪ್ರತಿಷ್ಠಿತ ನ್ಯಾಷನಲ್ ಏರೋಸ್ಪೇಸ್ ಲಾಬೊರೇಟರಿಯಲ್ಲಿ ನಿರ್ದೇಶಕರಾಗಿ ರೊಡ್ಡಮ್ ನರಸಿಂಹ ಕಾರ್ಯ ನಿರ್ವಹಿಸಿದ್ದರು.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರೊಡ್ಡಮ್ ನರಸಿಂಹ, 1933-2020
ದೇಶ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ರೊಡ್ಡಮ್ ನರಸಿಂಹ ಅವರ ಅಗಲುವಿಕೆ ಅತ್ಯಂತ ನೋವಿನ ಸಂಗತಿ. ವಿಜ್ಞಾನ ಮತ್ತು ಅಧ್ಯಾತ್ಮಗಳನ್ನು ಬೇರೆಬೇರೆಯಾಗಿ ನೋಡದೇ, ಅವೆರಡೂ ಒಂದಕ್ಕೊಂದು ಪೂರಕವೆಂಬ ದೃಷ್ಟಿಯಲ್ಲಿ ಕೆಲಸ ಮಾಡಿದವರು. ನಮ್ಮ ಗಡಿಸುರಕ್ಷೆಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಉತ್ತಮ ಸಲಹೆಗಳನ್ನು ಅವರು ಸರ್ಕಾರಕ್ಕೆ ನೀಡಿದ್ದರು. ಆರೆಸ್ಸೆಸ್ಸಿನ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ಬೆಂಗಳೂರಿಗೆ ಬಂದಿದ್ದಾಗ ನಡೆದ ಭೇಟಿಯಲ್ಲಿ ದೇಶದ ಆಗುಹೋಗುಗಳ ಬಗ್ಗೆ ಉತ್ತಮ ಚರ್ಚೆ ನಡೆದಿತ್ತು. ಇಂದಿನ ಯುವಪೀಳಿಗೆಗೆ ಅವರ ಜೀವನ ಮತ್ತು ಸಾಧನೆಗಳು ಪ್ರೇರಣೆ ನೀಡುವಂಥವು. ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ವ್ಯಕ್ತಪಡಿಸುತ್ತದೆ. ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಸಂಘಚಾಲಕರಾದ ವಿ ನಾಗರಾಜ್ ತಮ್ಮ ಸಂದೇಶದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಸಂಘಚಾಲಕ, ವಿ ನಾಗರಾಜ್

The post ಖ್ಯಾತ ಏರೋಸ್ಪೇಸ್ ವಿಜ್ಞಾನಿ ರೊಡ್ಡಮ್ ನರಸಿಂಹ ನಿಧನ. ಆರೆಸ್ಸೆಸ್ ಕ್ಷೇತ್ರ ಸಂಘಚಾಲಕ ವಿ ನಾಗರಾಜ್ ಸಂತಾಪ. first appeared on Vishwa Samvada Kendra.

ಹೈದರಾಬಾದ್ ’ಭಾಗ್ಯನಗರ’ ಆಗಿತ್ತೆ? ಇತಿಹಾಸ ಹೇಳುವುದೇನು?

$
0
0

ಇತ್ತೀಚೆಗೆ ನಡೆದ ಹೈದರಾಬಾದ್ ಮಹಾನಗರ ಪಾಲಿಕೆ ದೇಶದಾದ್ಯಂತ ಹಲವು ವಿಷಯಗಳಿಗಾಗಿ ಚರ್ಚೆಯಾಯಿತು. ಇದರಲ್ಲಿ ಬಹುಮಖ್ಯ ವಿಷಯಗಳಲ್ಲೊಂದು ಭಾಗ್ಯನಗರ ಎಂದು ಮರುನಾಮಕರಣದ ವಿಷಯ. ಯುವಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯರ ಟ್ವೀಟ್ ನಿಂದ ಪ್ರಾರಂಭವಾದ ಚರ್ಚೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೈದರಾಬಾದ್‌ನ್ನು ಭಾಗ್ಯನಗರ ಹೆಸರು ಬದಲಾಯಿಸುವುದಾಗಿ ಬಹಿರಂಗವಾಗಿ ಹೇಳುವ ಮೂಲಕ ಚರ್ಚೆ ಮುನ್ನೆಲೆಗೆ ಕಾರಣವಾಯಿತು.

ನಮ್ಮ ಜಾತ್ಯತೀತವಾದಿ-ಇಸ್ಲಾಮಿಸ್ಟ್ ಇತಿಹಾಸಕಾರರು, ಮಾಧ್ಯಮಗಳು ಹೈದರಾಬಾದಿನ ಹಿಂದೂ ಇತಿಹಾಸ ಮತ್ತು ಪರಂಪರೆಯನ್ನು ಮುಚ್ಚಿಹಾಕಲು ಮತ್ತು ವಿರೂಪಗೊಳಿಸಲು ನಿರಂತರ ದಣಿವರಿಯದ ಆಂದೋಲನವನ್ನೇ ನಡೆಸುತ್ತಿವೆ. ಹೈದರಾಬಾದ್ ಎಂದೂ ‘ಭಾಗ್ಯನಗರ’ವಾಗಿರಲಿಲ್ಲ; ’ಭಾಗ್ಮತಿ’ ಎನ್ನುವಾಕೆ ಇರಲೇ ಇಲ್ಲ ಎಂದು ಅವರು ಹೇಳುತ್ತಾ ಬಂದಿದ್ದಾರೆ. ಸ್ಪಷ್ಟವಾದ ಐತಿಹಾಸಿಕ ದಾಖಲೆ ಸಾಕ್ಷ್ಯಗಳು ಇದ್ದರೂ ಕೂಡಾ ಅಂತಹ ಸುಳ್ಳಿನ ಅಭಿಯಾನವು ನಡೆಯುತ್ತಿರುವುದು ಆಘಾತಕಾರಿ.

ಚಿತ್ರದ ಮೂಲ: ಆಶ್ಮೋಲಿಯನ್ ಮ್ಯೂಸಿಯಮ್

ಕುತುಬ್ ಶಾ ಮತ್ತು ಆತನ ಹಿಂದೂ ಪತ್ನಿ ಭಾಗ್ಮತಿಯ ದಿಬ್ಬಣವನ್ನು ಚಿತ್ರಿಸುವ ಒಂದು ಸಮಕಾಲೀನ ಕುತುಬ್ ಶಾಹಿ ಪೈಂಟಿಂಗ್ ಇಲ್ಲಿದೆ. ಹೈದರಾಬಾದಿಗೆ ಆಕೆಯ ಹೆಸರನ್ನು ಇಡಲಾಗಿತ್ತು. ಸುಮಂಗಲಿಯರು ಆರತಿಗಳನ್ನು ಹಿಡಿದಿರುವ ಈ ಹಿಂದೂ ಶೈಲಿಯ ಮದುವೆಯನ್ನು ಗಮನಿಸಿ. ಇದರ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಗಮನಿಸೋಣ.

ಕುತುಬ್‌ಶಾಹಿ ವಂಶವನ್ನು ಸುಲ್ತಾನ್ ಕೂಲಿ ಕುತುಬ್ ಮುಲ್ಕ್ (ಕ್ರಿ.ಶ. ೧೪೭೦ ರಿಂದ ೧೫೪೩) ಸ್ಥಾಪಿಸಿದನು. ಆತ ಇರಾನ್‌ನಿಂದ ಭಾರತಕ್ಕೆ ಬಂದನು. ಭಾರತವು ಆಗ ಸಂಪತ್ತು ಮತ್ತು ಅಪರಿಮಿತ ಅವಕಾಶಗಳ ನಾಡಾಗಿತ್ತು. ಮೊದಲಿಗೆ ಭಾರತದ ಪಶ್ಚಿಮ ಕರಾವಳಿಯ ಬಂದರು ನಗರ ಚೌಲ್‌ನಲ್ಲಿ ಹೆಜ್ಜೆಯಿರಿಸಿದ ಆತ ಒಂದು ಹಿಡಿ ಜೇಡಿಮಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಭಾರತದಾದ್ಯಂತ ಶಿಯಾ ಮತವನ್ನು ಹಬ್ಬಿಸುವುದಾಗಿ ಪ್ರತಿಜ್ಞೆ ಮಾಡಿದ.

ಬಹಮನಿ ದೊರೆ ಶಿಹಾಬುದ್ದೀನ್ ಮಹಮದ್‌ನ ಸೇವೆಯಲ್ಲಿ ಸುಲ್ತಾನ್ ಕೂಲಿ ತನ್ನ ಜೀವನವನ್ನು ಆರಂಭಿಸಿದನು. ಬಹುಬೇಗ ಆತ ತನ್ನ ಹುದ್ದೆಗಳಲ್ಲಿ ಮೇಲಕ್ಕೇರಿದಾಗ ತೆಲಿಂಗ ನಾಡಿನ ರಾಜ್ಯಪಾಲ ಹುದ್ದೆಯನ್ನು ಆತನಿಗೆ ನೀಡಲಾಯಿತು. ೧೫೧೮ರಲ್ಲಿ ಬಹಮನಿ ಸುಲ್ತಾನನು ಮರಣ ಹೊಂದಿದಾಗ ಸುಲ್ತಾನ್ ಕೂಲಿ ತಾನೇ ಗೋಲ್ಕೊಂಡದ ಸ್ವತಂತ್ರ ದೊರೆ ಎಂದು ಘೋಷಿಸಿಕೊಂಡನು.

ಆದರೆ ಸೆಕ್ಯುಲರ್‌ವಾದಿ ಇತಿಹಾಸಕಾರರು ಗೋಲ್ಕೊಂಡ ಕೋಟೆಯನ್ನು ಸುಲ್ತಾನ್ ಕೂಲಿ ೧೬ನೇ ಶತಮಾನದಲ್ಲಿ ಕಟ್ಟಿಸಿದನೆಂದು ನಮಗೆ ಒಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಅವರು ಗೋಲ್ಕೊಂಡದ ಪಂಚಶತಮಾನೋತ್ಸವವನ್ನು ಆಚರಿಸಿದರು. ನಿಜವೆಂದರೆ ಗೋಲ್ಕೊಂಡ ಕೋಟೆಯನ್ನು ಸುಲ್ತಾನ್ ಕೂಲಿ ಕಟ್ಟಿಸಿದ್ದೇ ಅಲ್ಲ. ಸುಲ್ತಾನ್ ಕೂಲಿ ಹುಟ್ಟುವುದಕ್ಕೆ ಸಾಕಷ್ಟು ಮೊದಲೇ ಅದು ಇತ್ತು. ಅದನ್ನು ಕಾಕತೀಯರು ನಿರ್ಮಿಸಿದರು. ನಿಜವೆಂದರೆ, ಮುಸ್ಲಿಮರಿಗೆ ಹಸ್ತಾಂತರಿಸುವ ಮುನ್ನ ಅದು ಹಿಂದೂ ರಾಜರ ಅಧೀನದಲ್ಲಿತ್ತು ಎಂದು ಮಾಸಿರ್-ಐ-ಆಲಂಗಿರಿ ಮತ್ತು ಮುಂತಖಾಬ್ ಅಲ್ ಎಬಾಬ್‌ನಂತಹ ಮೊಘಲ್ ಪತ್ರಿಕೆಗಳು ದಾಖಲಿಸಿವೆ. –

ಗೋಲ್ಕೊಂಡ ಕೋಟೆ ಕನಿಷ್ಠ ಪಕ್ಷ 13ನೇ ಶತಮಾನದಷ್ಟು ಹಿಂದಿನದೆಂದು ಪ್ರಾಚ್ಯವಸ್ತು ಸಂಶೋಧನ ಸಂಸ್ಥೆಯು ಒದಗಿಸಿದ ನೇರ ಸಾಕ್ಷ್ಯದಿಂದ ತಿಳಿದುಬರುತ್ತದೆ. ಗೋಲ್ಕೊಂಡ ಕೋಟೆಯ ಒಳಗಿನ ಗೋಡೆಗಳು 13ನೇ ಶತಮಾನದಷ್ಟು ಪ್ರಾಚೀನವೆಂದು ಪ್ರಾಚ್ಯವಸ್ತು ಸಂಶೋಧಕ ಮಾಣಿಕ ಸರ್ದಾರ್ ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆ. ಬಲ ಹಿಸ್ಸಾರ್ (ಎತ್ತರದ ಕೋಟೆ)ಯ ಬೃಹತ್ ಬ್ಲಾಕ್‌ಗಳು ಆ ಕಾಲಕ್ಕೆ ಸೇರಿದಂಥವು.

ಸುಲ್ತಾನ್ ಕೂಲಿ ಗೋಲ್ಕೊಂಡವನ್ನು ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ಸ್ಥಳದಲ್ಲಿ ಹಲವು ಬದಲಾವಣೆಗಳನ್ನು ಮಾಡಿದನು; ಕೋಟೆಗೆ ಇನ್ನಷ್ಟು ನಿರ್ಮಾಣಗಳನ್ನು ಸೇರಿಸಿದ. ಅದಲ್ಲದೆ ಆತ ಗೋಲ್ಕೊಂಡ ಕೋಟೆಯ ಮಧ್ಯದ ದೇವಾಲಯವನ್ನು ಜಾಮಿ ಮಸೀದಿಯಾಗಿ ಪರಿವರ್ತಿಸಿದನು. ಈಗ ಅದನ್ನು ’ಹೈದರಾಬಾದಿನ ಅತಿ ಪ್ರಾಚೀನ ಮಸೀದಿ’ ಎಂದು ಗುರುತಿಸುತ್ತಾರೆ.

ಗೋಲ್ಕೊಂಡ ಜಾಮಿ ಮಸೀದಿಯಲ್ಲಿ ಹಿಂದೂ ದೇವಾಲಯಗಳ ಗುರುತುಗಳನ್ನು ನಾವು ಈಗಲೂ ಕಾಣಬಹುದು. ಸ್ತಂಭಗಳು, ರತ್ನಗಳು, ವಲ್ಲಿಗಳು ಮತ್ತು ಶಾಖಾಗಳಂತಹ ಕಾಕತೀಯ ದೇವಾಲಯಗಳ ಅಲಂಕಾರಗಳನ್ನು ದ್ವಾರಗಳಲ್ಲಿ ಈಗಲೂ ಕಾಣಬಹುದು.

ಗೋಲ್ಕೊಂಡದ ಹಿಂದೂ ಸ್ವರೂಪವನ್ನು ನಿಧಾನವಾಗಿ ಅಳಿಸಿಹಾಕಲಾಯಿತು. ಮುಂದೆ ಬೆಟ್ಟದ ಮೇಲಿನ ಈ ದೇವಾಲಯವನ್ನು ತಾರಾಮತಿ ಮಸೀದಿಯಾಗಿ ಪರಿವರ್ತಿಸಲಾಯಿತು. ಮತ್ತಷ್ಟು ಕಾಲದ ನಂತರ ಅಕ್ಕಣ್ಣ ಮಾದಣ್ಣ ದೇವಾಲಯವನ್ನು ಔರಂಗಜೇಬನು ನಾಶಗೊಳಿಸಿದನು. ಆದರೆ ಗುಹಾದೇವಾಲಯಗಳು ಉಳಿದುಕೊಂಡವು. ಜಗದಂಬಾ ಗುಹಾ ದೇವಾಲಯವು ಗೋಲ್ಕೊಂಡ ಕೋಟೆಯೊಳಗೆ ಇಂದಿಗೂ ಇದೆ.

ಹಿಂದೂ ದೇವಾಲಯದ ಮೇಲೆ ಆತ ನಿರ್ಮಿಸಿದ ಮಸೀದಿಯಲ್ಲೇ ನಮಾಜ್ ಮಾಡುತ್ತಿದ್ದಾಗ ಸುಲ್ತಾನ್ ಕೂಲಿಯ ಕೊಲೆ ನಡೆಯಿತು. ವಿಧಿಲಿಖಿತವೋ ಎಂಬಂತೆ ಕೊಲೆಗೈದದ್ದು ಸ್ವತಃ ಆತನ ಪುತ್ರ ಜಂಷೆಡ್ ಕೂಲಿ; ತಂದೆಯನ್ನು ಕೊಂದು ಆತ ರಾಜನಾದನು.

ಜಂಷೆಡ್ ಕೂಲಿ ಅನಂತರ ತನ್ನ ಸಹೋದರ ಇಬ್ರಾಹಿಂ ಕೂಲಿಯ ಹುಡುಕಾಟದಲ್ಲಿ ತೊಡಗಿದನು. ಇಬ್ರಾಹಿಂ ಗೋಲ್ಕೊಂಡದಿಂದ ಪಾರಾಗಿ ಹಿಂದೂ ಸಾಮ್ರಾಜ್ಯ ವಿಜಯನಗರದಲ್ಲಿ ಆಶ್ರಯವನ್ನು ಬೇಡಿದನು. ವಿಜಯನಗರದ ರಾಜ ರಾಮರಾಯ ಅವನನ್ನು ಹಾರ್ದಿಕವಾಗಿ ಸ್ವಾಗತಿಸಿದನು. ಏಳು ವರ್ಷಗಳ ಕಾಲ ವಿಜಯನಗರದಲ್ಲಿ ಸಂತೋಷವಾಗಿ ಕಾಲಕಳೆದ ಇಬ್ರಾಹಿಂ ಕೂಲಿಗೆ ಜಹಗೀರನ್ನು ಕೂಡ ನೀಡಲಾಗಿತ್ತು.

ವಿಜಯನಗರದ ಚಕ್ರವರ್ತಿ ರಾಮರಾಯನ ಬಗ್ಗೆ ಇಲ್ಲಿ ಒಂದೆರಡು ಮಾತುಗಳನ್ನು ಹೇಳಬಹುದು. ರಾಮರಾಯ ತುಂಬ ’ಜಾತ್ಯಾತೀತ’ನಾಗಿದ್ದ. ಮುಸ್ಲಿಂ ಸೈನಿಕರನ್ನು ಪ್ರೋತ್ಸಾಹಿಸುತ್ತಿದ್ದ ಆತ, ಕುರಾನನ್ನು ಸಿಂಹಾಸನದ ಮೇಲಿಟ್ಟು ಅದನ್ನು ಗೌರವಿಸಬೇಕೆಂದು ಆಸ್ಥಾನಿಕರಿಗೆ ಆದೇಶಿಸಿದ್ದ. ಮಸೀದಿಗಳನ್ನು ಕಟ್ಟಲು ಅನುಮತಿ ನೀಡಿದ್ದನು; ಮತ್ತು ಪ್ರಾಣಿ (ಗೋವು) ವಧೆಗೆ ಅವಕಾಶ ನೀಡಿದ್ದನು. ಆದರೆ ಅದಕ್ಕೆ ಆತನ ಸಹೋದರನ ವಿರೋಧವಿತ್ತು.

ಇಬ್ರಾಹಿಂ ಕೂಲಿ ರಾಮರಾಯನ ಅರಸೊತ್ತಿಗೆಯಲ್ಲಿ ಆರಾಮವಾಗಿದ್ದನು. ಭಾಗೀರಥ ಎನ್ನುವ ವಿಜಯನಗರ ರಾಜ ಪರಿವಾರದ ಓರ್ವ ಮಹಿಳೆಯೊಂದಿಗೆ ಆತನ ವಿವಾಹವಾಗಿತ್ತು. ರಾಮರಾಯ ಆತನನ್ನು ಫರ್ಝಂದ್ (ಮಗ) ಎಂದು ಕರೆಯುತ್ತಿದ್ದನು. ಏಳು ವರ್ಷಗಳಾಗುವಾಗ ಜಂಷೆದ್ ಕೂಲಿ ಮರಣ ಹೊಂದಿದನು; ಇಬ್ರಾಹಿಂ ಕೂಲಿ ಗೋಲ್ಕೊಂಡಕ್ಕೆ ವಾಪಸಾಗಿ, ಉತ್ತರಾಧಿಕಾರಕ್ಕಾಗಿ ನಡೆದ ಯುದ್ಧದಲ್ಲಿ ಗೆದ್ದು ಸಿಂಹಾಸವನ್ನೇರಿದನು.

ಉತ್ತರಾಧಿಕಾರಕ್ಕಾಗಿ ನಡೆದ ಆ ಯುದ್ಧದಲ್ಲಿ ರಾಮರಾಯನ ಅಡಿಯಲ್ಲಿ ಇಬ್ರಾಹಿಂಗೆ ಹಿಂದುಗಳ ಬಹಳಷ್ಟು ಬೆಂಬಲ ದೊರೆಯಿತು ಎಂಬುದು ಗಮನಾರ್ಹ. ಆತ ಗೋಲ್ಕೊಂಡಕ್ಕೆ ಹೋಗುವಾಗ ಮಧ್ಯದ ಕೋಯಿಲ್ಕೊಂಡ ಕೋಟೆಯಲ್ಲಿ ಹಿಂದುಗಳು ತಮ್ಮ ವಿಧೇಯತೆ ಮತ್ತು ಬೆಂಬಲಗಳನ್ನು ಪ್ರಕಟಿಸಿದರೆಂದು ಕೋಯಿಲ್ಕೊಂಡದ ಶಾಸನ ಹೇಳುತ್ತದೆ.

ಹಿಂದುಗಳು ಕೋಯಿಲ್ಕೊಂಡ ಶಾಸನದಲ್ಲಿ ಇಬ್ರಾಹಿಂ ಕೂಲಿಯನ್ನು ಬೆಂಬಲಿಸುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ. ನಮ್ಮಲ್ಲಿ ಯಾರೇ ಆಗಲಿ ಈ ಪ್ರತಿಜ್ಞೆಯನ್ನು ಭಂಗ ಮಾಡಿದಲ್ಲಿ ಅವರಿಗೆ ವಾರಣಾಸಿಯಲ್ಲಿ ಗೋವು ಮತ್ತು ಬ್ರಾಹ್ಮಣರನ್ನು ಕೊಂದ ಪಾಪವು ಬರಲಿ ಎಂದು ಪ್ರತಿಜ್ಞೆ ಮಾಡಿದ್ದಾರೆ. ಮುಂದೆ ಆತನನ್ನು ’ಮಾಲ್ಕಿಂಬ’ ಎಂದು ಕರೆಯಲಾಗಿದೆ. (ಮಾಲಿಕ್) ನನ್ನು ಮಾಲ್ಕಿಂಬ ಎನ್ನುವ ಮೂಲಕ ಆತನನ್ನು ರಾಮನೊಂದಿಗೆ ಸಮೀಕರಿಸಲಾಯಿತು.

ಅಂತಹ ಬೆಂಬಲವಿದ್ದ ಕಾರಣ ಇಬ್ರಾಹಿಂ ಸಹಜವಾಗಿ ಜಯಶೀಲನಾಗಿ ಸಿಂಹಾಸನವನ್ನು ಗಳಿಸಿ ರಾಜನಾದ. ಆದರೆ ಅದೇ ಇಬ್ರಾಹಿಂ ಮುಂದೆ ದಕ್ಷಿಣದ ಇತರ ಮುಸ್ಲಿಂ ಸುಲ್ತಾನರೊಂದಿಗೆ ಕೈಜೋಡಿಸಿ, 1565ರಲ್ಲಿ ನಡೆದ ತಾಳೀಕೋಟೆ ಯುದ್ಧದಲ್ಲಿ ವಿಜಯನಗರದ ವಿರುದ್ಧ ಕಾದಾಡಿದನು. ಇದೂ ಒಂದು ಬಗೆಯ ಕೃತಜ್ಞತೆ!

ತಾಳೀಕೋಟೆ ಯುದ್ಧದಲ್ಲಿ ಗಿಲಾನಿ ಸಹೋದರರ ಕೆಳಗಿದ್ದ ಮುಸ್ಲಿಂ ಸೇನಾ ತುಕಡಿಯವರು ದೇಶದ್ರೋಹಿಗಳಾಗಿ ದಾಳಿಕೋರ ಸುಲ್ತಾನರೊಂದಿಗೆ ಕೈಜೋಡಿಸಿದರು. ಯುದ್ಧದಲ್ಲಿ ವಿಜಯನಗರವು ಸೋತು ರಣರಂಗದಲ್ಲಿ ರಾಮರಾಯನ ಶಿರಚ್ಛೇದನವನ್ನು ಮಾಡಲಾಯಿತು; ಪ್ರಬಲವಾಗಿದ್ದ ವಿಜಯನಗರ ಸಾಮ್ರಾಜ್ಯ ಅಲ್ಲಿಗೆ ಕುಸಿಯಿತು.

ಯುದ್ಧದ ನಂತರ ದಕ್ಖಣದ ಸುಲ್ತಾನರು ಆರು ತಿಂಗಳು ಕಾಲ ವಿಜಯನಗರವನ್ನು ಅರಾಜಕತೆಗೆ ಒಳಪಡಿಸಿ, ಕಣ್ಣಿಗೆ ಕಂಡದ್ದನ್ನೆಲ್ಲ ಲೂಟಿ ಮಾಡಿದರು ಮತ್ತು ಸುಟ್ಟುಹಾಕಿದರು. ರಾಮರಾಯನ ’ಮಗ’ (ಫರ್ಝಂದ್) ಇಬ್ರಾಹಿಂ ತನ್ನ ಭಾವ (ಸೋದರಿಯ ಪತಿ) ಮತ್ತು ಒಬ್ಬ ಮಂತ್ರಿಯನ್ನು ನಾಶಪಡಿಸುವುದಕ್ಕೆ ಮತ್ತು ಲೂಟಿಗಾಗಿ ನೇಮಿಸಿದನು. ವಿಜಯನಗರದಲ್ಲಿ ಕುತುಬ್ ಶಾಹಿಗಳು ಮಾಡಿದ ಲೂಟಿ ಎಷ್ಟಿತ್ತೆಂದರೆ, ಸುಮಾರು 30 ವರ್ಷಗಳ ಅನಂತರ ಹೈದರಾಬಾದನ್ನು ನಿರ್ಮಿಸುವುದಕ್ಕೆ ಆ ಲೂಟಿಯ ಒಂದು ಭಾಗ ಸಾಕಾಗಿತ್ತು; ತನ್ನ ತಂದೆ ಕೂಡಿಟ್ಟ ವಿಜಯನಗರದ ಲೂಟಿಯ ಒಂದು ಭಾಗದಿಂದ ಮಹಮ್ಮದ್ ಕೂಲಿ ಹೈದರಾಬಾದನ್ನು ಕಟ್ಟಿದನು.

ಇಬ್ರಾಹಿಂ ಕೂಲಿ ಮರಣ ಹೊಂದಿದಾಗ ಆತನ ಮಗ ಮಹಮದ್ ಕೂಲಿ ಉತ್ತರಾಧಿಕಾರಿಯಾಗಿ ಪಟ್ಟವೇರಿದನು; ಆತನೇ ಭಾಗ್ಮತಿಯ ಪತಿ. ಹೈದರಾಬಾದಿಗೆ ಆಕೆಯ ಹೆಸರನ್ನು ಇಡಲಾಯಿತು. ಹೈದರಾಬಾದನ್ನು ನಿರ್ಮಿಸಿ ಚಾರ್ಮಿನಾರ್ ಕಟ್ಟಿಸಿದವರು ಇದೇ ಮಹಮದ್ ಕೂಲಿ.

ಮಹಮದ್ ಕೂಲಿಯನ್ನು ಆತನ ಹಿಂದೂ ತಾಯಿ ಬೆಳೆಸಿದ್ದಳು. ಆತ ಸಣ್ಣ ಪ್ರಾಯದಲ್ಲೇ (ಸುಮಾರು ಕ್ರಿ.ಶ. 1589) ಭಾಗ್ಮತಿಯನ್ನು ಪ್ರೀತಿಸಿ ಮದುವೆಯಾದನು. ‘ಕುಲ್ಲಿಯಾರ್’ ಎನ್ನುವ ಉರ್ದು ಪದ್ಯಗಳಲ್ಲಿ ಆತ ತನ್ನ ಬಗೆಗೆ ಕೆಲವು ಆಘಾತಕಾರಿ ಸತ್ಯಗಳನ್ನು ಹೇಳಿದ್ದಾನೆ. ಬಾಲ್ಯದಲ್ಲಿ ತಾನೊಬ್ಬ ಹಿಂದುವಾಗಿದ್ದೆ ಎಂದು ಮಹಮ್ಮದ್ ಕೂಲಿ ಹೇಳುತ್ತಾನೆ. ಆತನ ಹಿಂದೂ ತಾಯಿಯ ಮತಶ್ರದ್ಧೆಗೆ ಅನುಗುಣವಾಗಿ ಆತನನ್ನು ಬೆಳೆಸಲಾಗಿತ್ತು. ಮುಂದೆ ತನ್ನ ಜೀವನದಲ್ಲಿ ಆತ ಹಿಂದೂ ಧರ್ಮವನ್ನು ತೊರೆದು, ತನ್ನ ತಂದೆಯ ಪೂರ್ವಿಕರ ಮುಸ್ಲಿಂ ಶಿಯಾ ಪಂಥಕ್ಕೆ ಮತಾಂತರಗೊಂಡನು. ತನ್ನ ಕುಲ್ಲಿಯತ್‌ನಲ್ಲಿ ಆತ ಇದನ್ನು ಹೇಳಿದ್ದಾನೆ.

ಕೂಲಿ ಹೇಳಿಕೊಂಡಂತೆ ಭಾಗ್ಮತಿಯನ್ನು ವಿವಾಹವಾಗುವಾಗ ಆತ ಹಿಂದುವಾಗಿದ್ದ. ಭಾಗ್ಮತಿ ಎಂದಾದರೂ ಮತಾಂತರಗೊಂಡಿದ್ದಳು ಎಂಬುದಕ್ಕೆ ಪುರಾವೆಯಿಲ್ಲ. ಆಕೆಯ ಗೋರಿ ಇಲ್ಲದಿರುವುದೇ ಅದಕ್ಕೊಂದು ಪುರಾವೆ. ಆತನ ವಿವಾಹವು ಹಿಂದೂ ಆಚರಣೆಗಳಿಗೆ ಅನುಗುಣವಾಗಿ ನಡೆದುದಕ್ಕೆ ಕೂಡ ಇದೇ ವಿವರಣೆಯಾಗಿದೆ.

ಭಾಗ್ಮತಿಗೆ (ಹೈದರಾಬಾದಿನ ಸಾಲಾರ್‌ಜಂಗ್ ಮ್ಯೂಸಿಯಂನಲ್ಲಿ ಆಕೆಯ ಒಂದು ಹಳೆಯ ಪೈಂಟಿಂಗ್ ಲಭ್ಯವಿದೆ.ದೆ) ತುಂಬ ಪ್ರಭಾವ ಇದ್ದಿರಬೇಕು. 1,000ಸೈನಿಕರಿದ್ದ ಒಂದು ಸೇನಾತುಕಡಿ ಅವಳೊಂದಿಗೆ ಸದಾ ಇರುತ್ತಿತ್ತು. ಕೂಲಿ ಆಕೆಯನ್ನು ‘ಹೈದರ್‌ಮಹಲ್’ (ಪ್ರೀತಿಯ ಧೈರ್ಯವಂತೆ) ಎಂದು ಕರೆಯುತ್ತಿದ್ದ. ಹೈದರಾಬಾದ್ ಮತ್ತು ಭಾಗ್ಯನಗರ ಎರಡೂ ಹೆಸರುಗಳು ಆಕೆಯ ಮೇಲೆಯೇ ಇವೆ.

ಹೈದರ್ ಮಹಲ್/ ಭಾಗ್ಮತಿ ಕಿರೀಟವನ್ನು ಧರಿಸುತ್ತಿದ್ದಳು; ಮತ್ತು ಕುತುಬ್ ಶಾಹಿ ಸಂಸ್ಥಾನದಲ್ಲಿ ಆಕೆಯ ಮಾತಿಗೆ ತಪ್ಪುವಂತಿರಲಿಲ್ಲ. ಮಹಮದ್ ಕೂಲಿಯ ಕುಲ್ಲಿಯತ್‌ನಲ್ಲಿರುವ ಈ ಪದ್ಯ ಆಕೆ ಕಿರೀಟ ಧರಿಸಿದ್ದನ್ನು ಸಮರ್ಥಿಸುತ್ತದೆ;

ಶೇರ್ವಾನಿ ಮತ್ತು ಫರೂಕಿಯಂತಹ ಕೆಲವು ಇತಿಹಾಸಕಾರರು ಭಾಗ್ಮತಿಗೆ ಐತಿಹಾಸಿಕತೆಯನ್ನು ನಿರಾಕರಿಸಿ (ಫ್ರೆಂಚ್ ಪ್ರವಾಸಿಗರ ವರದಿಗಳನ್ನು ಉಲ್ಲೇಖಿಸಿ) ಭಾಗ್‌ನಗರ್ ಭಾಗ್‌ನಿಂದ ಬಂತು ಎನ್ನುತ್ತಾರೆ. ಭಾಗ್ ಎಂದರೆ ಹೂದೋಟ. ಫ್ರೆಂಚ್ ಪ್ರವಾಸಿಗ ನಿಜವಾಗಿಯೂ ಹಾಗೆ ಹೇಳಿದ್ದಾನೆಯೇ?

ಪ್ರೊ|| ಫಾರೂಕಿ ಅವರು ಈ ಕುರಿತು ಹೇಳುತ್ತಾ, ಫ್ರೆಂಚ್ ಪ್ರವಾಸಿಗರ ಪ್ರಕಾರ ’ಭಾಗ್’ ಎಂದರೆ ಉದ್ಯಾನ. ಗೋಲ್ಕೊಂಡ ಕೋಟೆಯ ಸುತ್ತ ಇರುವ ಉದ್ಯಾನದಿಂದಾಗಿ ಉರ್ದು ಶಬ್ದ ’ಭಾಗ್’ ಅನ್ನು ಇಲ್ಲಿ ಹೈದರಾಬಾದನ್ನು ವರ್ಣಿಸುವಾಗ ಹಲವು ಸಲ ಬಳಸಲಾಗಿದೆ. ಆದ್ದರಿಂದಲೇ ಅದನ್ನು ’ಭಾಗ್‌ನಗರ್’ ಎಂದು ಕೂಡ ಕರೆಯುತ್ತಿದ್ದರು ಎನ್ನುತ್ತಾರೆ. ಭಾಗ್ ಶಬ್ದವನ್ನು ಹಿಡಿದುಕೊಂಡು ಕುತುಬ್ ಶಾ ವಂಶದ ಬಗ್ಗೆ ಹತ್ತಾರು ಕಥೆಗಳನ್ನು ಕಟ್ಟಲಾಗಿದೆ. ಆದರೆ ಭಾಗ್ಯನಗರ ಎಂಬುದರ ಬಗ್ಗೆ ಯಾವುದೇ ವಾಸ್ತವಿಕ (ಭೌತಿಕ) ಸಾಕ್ಷ್ಯ ಸಿಗುವುದಿಲ್ಲ.

ನಿಜವೆಂದರೆ, ಮಹಮದ್ ಕೂಲಿ ಪತ್ನಿಯ ಕೋರಿಕೆಯ ಮೇರೆಗೆ ಭಾಗ್‌ನಗರ್ ಎನ್ನುವ ಹೆಸರನ್ನು ಇಟ್ಟನೆಂದು ಫ್ರೆಂಚ್ ಪ್ರವಾಸಿಗ ಹೇಳುತ್ತಾನೆ. ಶೇರ್ವಾನಿ ಇದನ್ನು ಪೂರ್ತಿಯಾಗಿ ಅಲಕ್ಷಿಸಿ, ಯಾವುದೇ ಹಿನ್ನೆಲೆ- ವಿವರಣೆಗಳಿಲ್ಲದೆ ಭಾಗ್ ಶಬ್ದಕ್ಕೆ ಉದ್ಯಾನವನ್ನು ತರುತ್ತಾನೆ.

ಭಾಗ್ಯನಗರ ಎನ್ನುವ ಹೆಸರು ಗಾರ್ಡನ್‌ನಿಂದಾಗಿ ಬಂತು ಎಂದು ಹೇಳುವುದು ಅತ್ಯಂತ ಮೂರ್ಖತನವೇ ಸರಿ. ಅವರು ನಿಜವಾಗಿ ಯಾವ ಗಾರ್ಡನ್ ಬಗ್ಗೆ ಮಾತನಾಡುತ್ತಿದ್ದಾರೆ?  ಹೈದರಾಬಾದ್‌ನಲ್ಲಿ ಹಿಂದೆ ನೀರಿನ ತೀವ್ರ ಅಭಾವವಿತ್ತು. ಆ ದಿನಗಳಲ್ಲಿ ಹೂದೋಟವನ್ನು ಬೆಳೆಸಿ ಉಳಿಸಿಕೊಳ್ಳುವುದು ಬಹುತೇಕ ಅಸಾಧ್ಯವಾಗಿತ್ತು; ಮತ್ತು ಇಬ್ರಾಹಿಂ ಕೂಲಿಯ ಆ ಬಗೆಗಿನ ಪ್ರಯತ್ನ ವಿಫಲವಾಗಿತ್ತು.

ಮೊದಲಿಗೆ ಕೇವಲ ಗೋಲ್ಕೊಂಡ ಕೋಟೆಯ ಒಳಗಡೆ ಸಣ್ಣ ಉದ್ಯಾನವಿತ್ತು. ಅದನ್ನು ಭಾಗ್‌ನಗರ್ ಎಂದು ಕರೆಯುವಾಗ ಚಿಚ್ಲಮ್ ಪ್ರದೇಶದಲ್ಲಿ ಹೂದೋಟ ಇರಲೇ ಇಲ್ಲ. ಕೇವಲ 17ನೇ ಶತಮಾನದಲ್ಲಿ ಅಲ್ಲೊಂದು ಹೂದೋಟವನ್ನು ಬೆಳೆಸಲಾಯಿತು. ಮುಂದೆ ಸಾಕಷ್ಟು ಸಮಯದ ನಂತರ, ಬಶೀರ್‌ಬಾಗ್ ಬಳಿ ಮತ್ತು ಹುಸೇನ್‌ಸಾಗರ್‌ನಲ್ಲಿ ಗಾರ್ಡನ್‌ಗಳನ್ನು ಮಾಡಲಾಯಿತು.

ಭಾಗ್ಯಮತಿ ಎನ್ನುವ ಹೆಸರಿನಿಂದ ಭಾಗ್ಯನಗರ ಎಂಬುದು ಬಂತು; ಇದಕ್ಕೂ ಹೂದೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಾಣ್ಯಗಳ ದಾಖಲೆಯೂ ಸಮರ್ಥಿಸುತ್ತದೆ. ಹಳೆಯ ಕಾಲದ ನಾಣ್ಯಗಳಲ್ಲಿ ಹೈದರಾಬಾದನ್ನು ’ಫರ್ಖುಂದಾಬುನ್ಯಾದ್’ ಎಂದು ಕರೆಯಲಾಗಿದೆ. ಪರ್ಷಿಯನ್ ಭಾಷೆಯಲ್ಲಿ ಫರ್ಖುಂದಾ ಎಂದರೆ ಅದೃಷ್ಟ (ಸಂಸ್ಕೃತದ ಭಾಗ್ಯ); ಬದಲಾಗಿ ಪರ್ಷಿಯನ್ ಭಾಷೆಯ ಬಾಗ್ (ಉದ್ಯಾನ) ಅಲ್ಲ.

ಭಾಗ್ಮತಿ ಎನ್ನುವಾಕೆ ಇದ್ದಳೆನ್ನುವುದಕ್ಕೆ ಸಮಕಾಲೀನ ಮೊಘಲ್ ಸಾಕ್ಷ್ಯ ಸಿಗುತ್ತದೆ. ಆಕೆ ಜೀವಿಸಿದ್ದಾಗ 1591ರಲ್ಲಿ ಅಬುಲ್ ಫಝಲ್‌ನ ಸಹೋದರ ಹೈದರಾಬಾದಿಗೆ ಬಂದಿದ್ದ. ಆತ ನೀಡಿದ ವಿವರವು ಭಾಗ್ಮತಿ ಇದ್ದಳೆನ್ನುವುದನ್ನು ಸಾಬೀತುಪಡಿಸುತ್ತದೆ. ಇದು ಆಕೆಯ ಐತಿಹಾಸಿಕತೆಯನ್ನು ಅಲ್ಲಗಳೆಯುವವರಿಗೆ ಬಿಗಿದ ಏಟಿನಂತಿದೆ. ಆಕೆಯ ಬಗೆಗೆ ಆತ ಬಳಸಿದ ಭಾಷೆಯನ್ನು ಗಮನಿಸಿ:

ನಿಜಾಮುದ್ದೀನ್ ಎನ್ನುವ ಇನ್ನೊಂದು ಸಮಕಾಲೀನ ಮುಸ್ಲಿಂ ದಾಖಲೆ ಕೂಡ 1594ರಲ್ಲಿ ಭಾಗ್ಮತಿ ಬದುಕಿದ್ದಾಗಿನ ವಿವರವನ್ನು ನೀಡುತ್ತದೆ. ಹೈದರಾಬಾದ್/ಭಾಗ್‌ನಗರ್ ಆಕೆಯ ಹೆಸರನ್ನೇ ಹೊಂದಿದೆ ಎಂದಾತ ದೃಢಪಡಿಸುತ್ತಾನೆ. ಆಕೆಯ ಬಗೆಗೆ ಬಳಸಿದ ಭಾಷೆಯನ್ನು ಇನ್ನೊಮ್ಮೆ ಗಮನಿಸಿ. ಆಕೆಯ ವಿರುದ್ಧ ಅಂತಹ ಪದಗಳನ್ನು ಏಕೆ ಬಳಸಿದರೆನ್ನುವುದಕ್ಕೆ ಸರಿಯಾದ ಕಾರಣವಿದೆ.

ಕ್ರಿ.ಶ. ೧೫೯೪ರಲ್ಲಿ ತನ್ನ ತಬ್ಕತ್-ಇ-ಅಕ್ಬರ್‌ಶಾಹಿಯನ್ನು ಬರೆದ ನಿಜಾಮುದ್ದೀನ್ ಈ ರೀತಿಯಲ್ಲಿ ಅದನ್ನು ದೃಢಪಡಿಸುತ್ತಾನೆ : ಇಬ್ರಾಹಿಂನ ಮಗ ಮಹಮದ್ ಅಲ್ ಕುತುಬುಲ್ ಮುಲ್ಕ್ ತನ್ನ ತಂದೆಯ ನಂತರ ಅಧಿಕಾರಕ್ಕೆ ಬಂದನು. ಭಾಗ್ಮತಿ ಎನ್ನುವ ಓರ್ವ ಹಿಂದೂ ವೇಶ್ಯೆ (ಪಾತರದವಳು)ಯ ಮೇಲೆ ಆತ ಎಷ್ಟೊಂದು ಮೋಹಗೊಂಡನೆಂದರೆ ಅವಳ ಹೆಸರಿನಲ್ಲಿ ಒಂದು ನಗರವನ್ನು ನಿರ್ಮಿಸಿ ಅದನ್ನು ‘ಭಾಗ್‌ನಗರ್;’ ಎಂದು ಕರೆದನು; ಮತ್ತು ಆ ವೇಶ್ಯೆಯೊಂದಿಗೆ (ಫಹಿಷ) ಯಾವಾಗಲೂ ೧೦೦೦ ಕುದುರೆ ಸವಾರ ಭಟರು ಕಾವಲಿರಬೇಕೆಂದು ಆಜ್ಞೆ ಹೊರಡಿಸಿದನು.

ಇನ್ನೊಬ್ಬ ಸಮಕಾಲೀನ ಮಸ್ಲಿಂ ಇತಿಹಾಸಕಾರ ಫರಿಶ್ತಾ ಕೂಡ ಭಾಗ್ಯನಗರ್/ ಹೈದರಾಬಾದ್ ಎಂಬ ಹೆಸರು ಭಾಗ್ಮತಿಯಿಂದ ಬಂದುದೆಂದು ಹೇಳಿದ್ದಾನೆ. ಅವರಿಗೆ ಉಂಟಾದ ಇರಿಸುಮುರಿಸು ಮತ್ತು ನಿಂದನಾತ್ಮಕ ಭಾಷೆ ಬಳಕೆಗೆ ಕಾರಣವೇನು- ಹೈದರಾಬಾದ್ ಎನ್ನುವ ಹೆಸರು ಓರ್ವ ಹಿಂದೂ ರಾಣಿಯಿಂದ ಬಂದದ್ದು ಮತ್ತು ಆಕೆ ಎಂದೂ ಮತಾಂತರಗೊಳ್ಳಲಿಲ್ಲ ಎಂಬುದು ಆ ಮುಸ್ಲಿಂ ಇತಿಹಾಸಕಾರರಿಗೆ ಇಷ್ಟದ ವಿಷಯವಾಗಿರಲಿಲ್ಲ.

‘ಭಾಗ್ಯನಗರ’ ಎನ್ನುವ ಹೆಸರು ಬಳಕೆಯಿಂದ ಆಚೆಗೆ ಹೋಗಲೇಇಲ್ಲ; ಮತ್ತು 19ನೇ ಶತಮಾನದಲ್ಲಿ ಕೂಡ ಅದನ್ನು ಬಳಸುತ್ತಿದ್ದರು. 1816ರ ಒಂದು ನಕಾಶೆಯಲ್ಲಿ ಭಾಗ್‌ನಗರ್ ಎನ್ನುವ ಹೆಸರಿದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಭೂಪಟಕಾರ ಆರನ್ ಆರೋಸ್ಮಿತ್ ಅದನ್ನು ತಯಾರಿಸಿದ್ದಾನೆ.

ಹೈದರಾಬಾದಿನ ಹೆಸರು ಭಾಗ್ಮತಿಯಿಂದ ಬಂತು ಎಂಬುದನ್ನು ಈ ಸಾಕ್ಷ್ಯಗಳು ಸ್ಪಷ್ಟವಾಗಿ ಸಾರುತ್ತವೆ. ಆದರೆ ಭಾಗ್ಯಲಕ್ಷ್ಮಿ ದೇವಾಲಯದ ಮೇಲೆ ದಾಳಿ ನಡೆಯುತ್ತಿದೆ. ’ಸೆಕ್ಯುಲರ್’ ಭಾರತ ಪ್ರಾಚ್ಯ ಮತ್ತು ಸಂಶೋಧನ ಸಂಸ್ಥೆ (ಎಎಸ್‌ಐ) ಭಾಗಲಕ್ಷ್ಮಿ ದೇವಾಲಯವನ್ನು ’ಅನಧಿಕೃತ ನಿರ್ಮಾಣ’ ಎಂದು ಹೇಳಿ ಅದನ್ನು ಕೆಡವಲು ಸೂಚಿಸಿತು. ಆದರೆ ಇತ್ತ ಎಎಸ್‌ಐ ಈ ದೇವಾಲಯವನ್ನು ’ಅನಧಿಕೃತ ನಿರ್ಮಾಣ’ ಎಂದು ಹೇಳಿದರೆ ಅತ್ತ ಸರ್ಕಾರದ ಮುಜರಾಯಿ ಇಲಾಖೆ ಚಾರ್ಮಿನಾರ್‌ನಲ್ಲಿರುವ ಭಾಗ್ಯಲಕ್ಷ್ಮಿ ದೇವಾಲಯವನ್ನು ’ನೋಂದಾಯಿತ ದೇವಾಲಯಗಳ ಪಟ್ಟಿಗೆ ಸೇರಿಸಿದೆ. ದೇವಾಲಯದ ಆದಾಯವನ್ನು ರಾಜ್ಯ ಸರ್ಕಾರ ’ಜಾತ್ಯತೀತ’ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ!

೨೦೧೨ರಲ್ಲಿ ದೇವಾಲಯದ ಸಂಘಟಕರು ದೀಪಾವಳಿಯ ಸಂದರ್ಭದಲ್ಲಿ ತಾತ್ಕಾಲಿಕ ರಚನೆ (ಚಪ್ಪರ..) ಮಾಡಲು ಹೊರಟಾಗ ಪೊಲೀಸರು ಬಲಾತ್ಕಾರವಾಗಿ ಅವರನ್ನು ತಡೆದರು. ಅಂದರೆ ೧) ಅವರಿಗೆ ದೇವಾಲಯದ ಹಣ ಬೇಕು. ೨) ಅದೇ ಉಸಿರಿನಲ್ಲಿ ಅವರು ದೇವಾಲಯವನ್ನು ’ಅನಧಿಕೃತ’ ಎಂದು ಹೇಳಿ ಯಾವುದೋ ತಾತ್ಕಾಲಿಕ ನಿರ್ಮಾಣಕ್ಕೂ ಅವಕಾಶ ನೀಡುವುದಿಲ್ಲ.

ಇಂಗ್ಲಿಷ್ ಮೂಲ: ಭಾರಧ್ವಾಜ್

ಕನ್ನಡ ಅನುವಾದ : ಮಂಜುನಾಥ್ ಭಟ್ಟ್ ಎಚ್.

The post ಹೈದರಾಬಾದ್ ’ಭಾಗ್ಯನಗರ’ ಆಗಿತ್ತೆ? ಇತಿಹಾಸ ಹೇಳುವುದೇನು? first appeared on Vishwa Samvada Kendra.

Viewing all 3435 articles
Browse latest View live


<script src="https://jsc.adskeeper.com/r/s/rssing.com.1596347.js" async> </script>