Quantcast
Channel: Samvada
Viewing all articles
Browse latest Browse all 3435

ಸೈಬರ್ ಕನ್ನದಿಂದ ಸುರಕ್ಷಿತವಾಗಿರಲು ಕಾನೂನಿನ ಅರಿವೂ ಅತ್ಯಗತ್ಯ

$
0
0
Icon graphic interface showing secure firewall technology for online data access defense against hacker, virus and insecure information for privacy.

ಮಾನವ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆದಂತೆ ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದ ಹಾಗೂ ಕಾನೂನಿನ ಕೈಗೂ ನಿಲುಕದ ಅನೇಕ ಬಾರದಿರುವ ಅನೇಕ ಅಪರಾಧಗಳು ಹೆಚ್ಚುತ್ತಿದೆ. ಅವುಗಳಲ್ಲಿ, ಸೈಬರ್ ಅಪರಾಧವೂ ಒಂದು.

ಇಂದು ದಿನಂಪ್ರತಿ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನ ನಾನಾ ರೀತಿಯ ಉಪಯೋಗಗಳಿಗೆ ಅಂತರ್ಜಾಲವನ್ನು ನಂಬಿರುವುದರಿಂದ, ಅದೂ ಒಂದು ದಿನನಿತ್ಯದ ಭಾಗವಾಗಿ ಹೋಗಿದೆ. ಒಂದು ಅಂಕಿಅಂಶದ ಪ್ರಕಾರ ಇಂದು ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ೬೨.೪ ಕೋಟಿ, ಅಂದರೆ ದೇಶದ ಜನಸಂಖ್ಯೆಯ ಶೇ ೪೫ರಷ್ಟು ಜನ ಒಂದಲ್ಲ ಒಂದು ರೀತಿಯಲ್ಲಿ ಅಂತರ್ಜಾಲದ ಸಂಪರ್ಕದಲ್ಲಿ ಸೇರಿಕೊಂಡಿದ್ದಾರೆ. ಜೊತೆಗೆ ಅಂತರ್ಜಾಲ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿದೆ. ೨೦೨೦ರಿಂದ ೨೦೨೧ರ ಅವಧಿಯಲ್ಲಿ ೪.೭ಕೋಟಿಯಷ್ಟು ಅಂತರ್ಜಾಲ ಬಳಕೆದಾರರು ಹೊಸದಾಗಿ ಸೇರಿಕೊಂಡರು. ಹಾಗೆಯೇ ಇನ್ನೊಂದು ಮಹತ್ವದ ಅಂಶವೆಂದರೆ ಫೇಸ್‌ಬುಕ್,  ಟ್ವಿಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳ ಬಳಕೆದಾರರು. ಭಾರತದಲ್ಲಿ ಇಂದು ೪೪.೮ ಕೋಟಿ ಅಂದರೆ ಜನಸಂಖ್ಯೆಯ ಶೇ೩೨.೩ರಷ್ಟು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಕಳೆದ ಒಂದು ವರ್ಷದಲ್ಲಿ ಈ ಸಂಖ್ಯೆ ೭.೮ಕೋಟಿ ಏರಿಕೆಯಾಗಿದೆ. ಇನ್ನೊಂದು ಅಂಕಿಅಂಶವನ್ನು ನೋಡುವುದಾದರೆ ದೇಶದಲ್ಲಿ ಇಂದು ಸುಮಾರು ೧೧೦ಕೋಟಿ ಮೊಬೈಲ್ ಸಂಪರ್ಕವಿದೆ. ಮತ್ತು ಹೆಚ್ಚಿನ ಮೊಬೈಲ್ ಸಂಪರ್ಕಗಳು ಇಂಟರ್ನೆಟ್ ಸಂಪರ್ಕ ಹೊಂದಿವೆ.

ಅಂತರ್ಜಾಲದ ಬಳಕೆ ಹೆಚ್ಚಿದಂತೆಲ್ಲ ಅದನ್ನು ದುರುಪಯೋಗ ಮಾಡಿಕೊಳ್ಳುವವರು, ಅಂತರ್ಜಾಲದ ಮೂಲಕ ಕನ್ನ ಹಾಕುವ ಸೈಬರ್ ಅಪರಾಧಗಳಿಗೂ ಅವಕಾಶ ಇದ್ದೇ ಇರುತ್ತದೆ. ದಿನನಿತ್ಯದ ವ್ಯವಹಾರಗಳಿಗೆ ಅಂತರ್ಜಾಲವನ್ನು ನೆಚ್ಚಿಕೊಂಡಿರುವ ನಾವೆಲ್ಲ ಅಂತಹ ಸೈಬರ್ ಕನ್ನಕ್ಕೆ ಗುರಿಯಾಗಿದ್ದೇವೆ. ಹಾಗಾಗಿ ಸೈಬರ್ ಅಪರಾಧಗಳ ಬಗ್ಗೆ, ಅದನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಅಥವಾ ಸೈಬರ್ ಅಪರಾಧಗಳು ವೈಯಕ್ತಿಕವಾಗಿ ಸಂಭವಿಸಿದಾಗ ಅದರ ಬಗ್ಗೆ ಎಲ್ಲಿ ದೂರು ದಾಖಲಿಸಬೇಕು ಎಂಬ ಅರಿವು ಜನಸಾಮಾನ್ಯರಲ್ಲಿ ಮೂಡಬೇಕಾದದ್ದು ಇಂದಿನ ಕಾಲದ ಅತ್ಯಂತ ಅನಿವಾರ್ಯ ಅಗತ್ಯ.

‘ಸೈಬರ್ ಅಪರಾಧಗಳು ಎಂದರೇನು?

ಸೈಬರ್ ಅಪರಾಧಗಳಿಗೆ ಕಂಪ್ಯೂಟರ್, ಮೊಬೈಲ್ ಹಾಗೂ ಅಂತರ್ಜಾಲ ಉಪಯೋಗಿಸಬಲ್ಲ ಸಂಪನ್ಮೂಲಗಳು ಮತ್ತು ಅಂತರ್ಜಾಲ ಸಂಪರ್ಕ ಹೊಂದಿರುವ ವಸ್ತುಗಳು.

ದುರುದ್ದೇಶದಿಂದ ಹರಡುವ ವಿವಿಧ ರೀತಿಯ ಸಾಫ್ಟ್‌ವೇರ್‌ಗಳು(ಮಾಲ್‌ವೇರ್), ನಕಲಿ ಜಾಹೀರಾತುಗಳು (Spam), ವೈಯಕ್ತಿಕ ಮಾಹಿತಿಗಳು ಇರುವ ಡೆಬಿಟ್/ಕ್ರೆಡಿಟ್ ಕಾರ್ಡುಗಳನ್ನು ನಕಲು ಮಾಡುವುದು (Phishing), ಮತ್ತು ಇನ್ನೊಬ್ಬರ ಬಗೆಗೆ ತಪ್ಪು ಮಾಹಿತಿ ಹರಡುವುದು ಅಥವಾ ತಪ್ಪು ಅಭಿಪ್ರಾಯ ಬರುವಂತೆ ಮಾಡುವುದು (Spoofing), ಬೆದರಿಕೆಯ ಮೂಲಕ ಭಯೋತ್ಪಾದನೆ ಹರಡುವುದು (Cyber Terrorism) ಇತ್ಯಾದಿಗಳು ಕಾನೂನು ಗುರುತಿಸುವ ’ಸೈಬರ್ ಅಪರಾಧಗಳ’ ಯಾದಿಯಲ್ಲಿ ಬರುತ್ತವೆ.

ಕೆಲವು ಉದಹರಣೆಗಳು ನೋಡುವುದಾದರೆ:

ಇಮೇಲ್‌ಗಳು ಫೋಟೋಗಳನ್ನು ಅಥವಾ ಲಿಂಕ್ ಗಳನ್ನ ಕಳುಹಿಸಿ ಅದನ್ನು ಒತ್ತಿದಲ್ಲಿ ಬಹುಮಾನಗಳನ್ನು ಗೆಲ್ಲಬಹದು ಎಂಬ ಆಸೆ ಮೂಡಿಸುತ್ತಾರೆ. ಬಂದಿರುವ ಲಿಂಕ್ ಕ್ಲಿಕ್ ಮಾಡಿದಲ್ಲಿ, ನಿಮಗರಿವಿಲ್ಲದೆ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಮಾಲ್‌ವೇರ್‌ಗಳು ಸೇರಿಕೊಳ್ಳುತ್ತವೆ. ನಂತರ, ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರಿಗೆ ದೂರದಲ್ಲೆಲ್ಲೋ ಕುಳಿತ ಸೈಬರ್ ಕ್ರಿಮಿನಲ್ ಕನ್ನ ಹಾಕುತ್ತಾನೆ, ಮಾಹಿತಿಯನ್ನು ಕದಿಯುತ್ತಾನೆ. ನಿಮ್ಮ ಉಪಕರಣದ ಪ್ರತಿಯೊಂದು ಚಟುವಟಿಕೆಯೂ ಆತನಿಗೆ ತಿಯಿಯುತ್ತದೆ. ಉದಾಹರಣೆಗೆ ಬ್ಯಾಂಕಿನಿಂದ ಬರುವ ಓಟಿಪಿ, ಪಾಸ್‌ವರ್ಡ್, ಸಂದೇಶ. ಇವುಗಳನ್ನು ಬಳಸಿ ಆ ಕ್ರಿಮಿನಲ್ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು. ಇಂತಹ ಮೋಸದ ಇಮೇಲ್ ಮೂಲಕ ಅಪರಾಧಗಳಿಗೆ ಒಳಗಾಗುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಸಾಮಾನ್ಯವಾಗಿ, ಬ್ಯಾಂಕುಗಳ ಹೆಸರಿನಿಂದ ಬರುವ ಮೆಸೇಜ್‌ಗಳು, ವೈಯಕ್ತಿಕ ಮಾಹಿತಿಗಳನ್ನು ಕೇಳುವುದು ಹೆಚ್ಚುತ್ತಿದ್ದು, ಇವುಗಳಲ್ಲಿ ಹೆಚ್ಚಿನವು ನಕಲಿಗಳು ಹಾಗೂ ನ್ಯಾಯಯುತವಲ್ಲದವು. ಆದರೆ ಯಾವ ಬ್ಯಾಂಕುಗಳು ಸಹ ಓಟಿಪಿ, ಪಾಸ್‌ವರ್ಡ್ ಇತ್ಯಾದಿ ಯಾವುದೇ ವಿಷಯಗಳನ್ನು ಹಂಚಿಕೊಳ್ಳುವಂತೆ ಇಮೇಲ್ ಅಥವಾ ಮೆಸೇಜ್ ಕಳಿಸಿ ಕೇಳುವುದಿಲ್ಲ. ಬ್ಯಾಂಕುಗಳು ಸಹ ಎಚ್ಚರದಿಂದ ವ್ಯವಹರಿಸುವಂತೆ ಇಮೇಲ್ ಅಥವಾ ಮೆಸೇಜ್ ಮೂಲಕ ಸಂದೇಶಗಳನ್ನು ಕಳುಹಿಸುತ್ತಾರೆ.

ಕಾನೂನು ಏನೆನ್ನುತ್ತದೆ?

ಸೈಬರ್ ಅಪರಾಧಗಳಿಗೆ ಸಂಬಂಧಪಟ್ಟಂತೆ ಭಾರತ ಸರ್ಕಾರವು ಮಾಹಿತಿ ತಂತ್ರಾಜ್ಞಾನ ಅಧಿನಿಯಮ (Information Technology Act), ೨೦೦೦ ಜಾರಿಗೆ ತಂದಿದೆ. ಆದರೆ ಈ ಕಾನೂನಿನಿಂದ ಸೈಬರ್ ಅಪರಾಧಗಳನ್ನು ಮಟ್ಟ ಹಾಕುವಲ್ಲಿ ಸ್ವಲ್ಪ ಮಟ್ಟಿಗಿನ ಅಸಫಲತೆ ಕಾಡುತ್ತಿದೆ ಎನ್ನಬಹುದು. ಹಾಗೂ ಇದೊಂದು ಇತ್ತೀಚೆಗೆ ಹೆಚ್ಚು ವ್ಯಾಪಕವಾಗುತ್ತಿರುವ ವಿಷಯವಾದ ಕಾರಣ ಜನ ಸಾಮಾನ್ಯರಲ್ಲಿಯೂ ಸಹ ಈ ಕಾನೂನಿನ ಕುರಿತ ಮಾಹಿತಿ, ತಿಳುವಳಿಕೆಯೂ ಕಡಿಮೆಯೇ ಎನ್ನಬಹುದು.

ಭಾರತದ  IT Act, 2000  ಅನ್ವಯ ಸೈಬರ್ ಅಪರಾಧ ಮತ್ತು ಅದರ ನಿರ್ದಿಷ್ಟ ಪ್ರಕಾರಗಳನ್ನು  ದಂಡ ವಿಧಿಸಲು ಅವಕಾಶವಿದೆ. IT ಕಾನೂನಿಗೆ ಪೂರಕವಾಗಿ ಭಾರತೀಯ ದಂಡ ಸಂಹಿತೆ (IPC) 1860, ಭಾರತೀಯ ಸಾಕ್ಷ್ಯ ಅಧಿನಿಯಮ (Indian Evidence Act) 1872, ಬ್ಯಾಂಕುಗಳ ಪುಸ್ತಕ ಸಾಕ್ಷ್ಯ ಅಧಿನಿಯಮ (Banking Book Evidence Act), 1891 ರಿಸರ್ವ್ ಬ್ಯಾಂಕ್ ಅಧಿನಿಯಮ (RBI Act) 1934 ಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ.

ಮಾಹಿತಿ ತಂತ್ರಜ್ಞಾನ ಅಧಿನಿಯಮ ೨೦೦೦ರ ಸೆಕ್ಷನ್ ೬೫ರ ಅನ್ವಯ ಯಾವುದೇ ಕಂಪ್ಯೂಟರ್ ಅಥವಾ ಅಂತರ್ಜಾಲದ ರೂಪುರೇಷೆಗಳನ್ನು ತಿಳಿಯದೆ ಅಥವಾ ಉದ್ದೇಶಪೂರ್ವಕವಾಗಿತಿಳಿಯದಂತಿದ್ದರೂ ನಾಶಮಾಡುವುದು ಅಥವಾ ವ್ಯತ್ಯಾಸಗೊಳಿಸುವುದು ಮಾಡಿದಲ್ಲಿ ಅಥವಾ ಇನ್ನಾವುದೇ ಸಂಬಂಧಪಟ್ಟ ರೀತಿಯ ಅಪರಾಧಗಳು ಸಾಬೀತಾದಲ್ಲಿ ೩ ವರ್ಷಗಳವರೆಗೆ ಕಾರಾಗೃಹ ವಾಸ ಅಥವಾ ೨ ಲಕ್ಷದವರೆಗೆ ದಂಡ ಅಥವಾ ಅವೆರಡೂ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ.

ಸೆಕ್ಷನ್೬೬ ಹಲವು ಸೈಬರ್ ಅಪರಾಧಗಳಿಗೆ ದಂಡ ಮತ್ತು ಶಿಕ್ಷೆಯನ್ನು ವಿಧಿಸುತ್ತದೆ, ಕೆಲವು ಕೆಳಗಿನಂತಿವೆ:

  • ಕಂಪ್ಯೂಟರ್ ಅಥವಾ ಅಂತರ್ಜಾಲದ ಮೂಲಕ ಯಾವುದೇ ವ್ಯಕ್ತಿಗೆ ಅಕ್ರಮ ಅಥವಾ ಅಶ್ಲೀಲ ಸಂದೇಶ ಕಳುಹಿಸುವುದು.
  • ಕಳವು ಮಾಡಿದ ಮೊಬೈಲ್ ಅಥವಾ ಕಂಪ್ಯೂಟರ್‌ಗಳನ್ನು ಅಥವಾ ಅವುಗಳ ಮುಖಾಂತರ ಅಂತರ್ಜಾಲ ಸಂಪರ್ಕವನ್ನು ಉಪಯೋಗಿಸುವುದರಿಂದ ಅವುಗಳೂ ಸಹ ಸೈಬರ್ ಅಪರಾಧಗಳ ಭಾಗವಾಗಿ ಪರಿಗಣಿಸಲ್ಪಡುತ್ತದೆ.
  • ವೈಯಕ್ತಿಕ ಮಾಹಿತಿಗಳಾದಂತಹ ಡಿಜಿಟಲ್ ಸಿಗ್ನೇಚರ್, ವಿಶಿಷ್ಟ ಗುರುತಿನ ಸಂಖ್ಯೆ ಹಾಗೂ ಇತರ ವೈಕತ್ತಿಕ ವಿವರಗಳನ್ನು ಕುಕೃತ್ಯಗಳಿಗೆ ಬಳಸಿಕೊಳ್ಳುವುದು.
  • ಯಾವುದೇ ವ್ಯಕ್ತಿಯ ಗುರುತನ್ನು ತಿರುಚಿ (ಉದಾಹರಣೆಗೆ – ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸುವುದು) ಮೋಸ ಮಾಡುವುದು.
  • ಕಂಪ್ಯೂಟರ್ ಅಥವಾ ಅಂತರ್ಜಾಲದ ಇನ್ನಾವುದೇ ಸಂಪರ್ಕ ಮಾದ್ಯಮದ ಮೂಲಕ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳ ಗೌಪ್ಯತೆಗೆ ಧಕ್ಕೆ ತರುವುದು ಅಥವಾ ಮಾಹಿತಿಗಳನ್ನು ಕಾನೂಬಾಹಿರ ಕೆಲಸಗಳಿಗಾಗಿ ದುರುಪಯೋಗಪಡಿಸಿಕೊಳ್ಳುವುದು.
  • ಅಂತರ್ಜಾಲದ ಮೂಲಕ ಭಯೋತ್ಪಾದನೆ; ಪ್ರಚೋದನಕಾರಿ ವಿಷಯಗಳನ್ನು ಹರಡುವುದು.
  • ಅಶ್ಲೀಲವಾದ ಮಾಹಿತಿಗಳನ್ನು ಪ್ರಕಟಿಸುವುದು, ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಗಳ ರವನೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳವುದು ಹಾಗೂ ಅದಕ್ಕೆ ಸಹಕರಿಸುವುದು ಕೂಡ ಅಪರಾಧಗಳಾಗಿ ಪರಿಗಣಿಸಲ್ಪಡುತ್ತದೆ.

ತೆಗೆದುಕೊಳ್ಳಬಹುದಾದ ಕಾನೂನು ಕ್ರಮಗಳು

ಇಂದು ಪ್ರತಿಯೊಬ್ಬರ ಬೆರಳ ತುದಿಯಲ್ಲಿದೆ ಅಂತರ್ಜಾಲ. ವಿಶ್ವದ ಸಂಪರ್ಕ, ಮಾಹಿತಿಗಳ ಆಕರಕ್ಕೆ ಕೊಂಡಿಯಾದ ಈ ಅಂತರ್ಜಾಲ ಸಂಪರ್ಕ ನಮ್ಮನ್ನು ದೂರದಲ್ಲೆಲ್ಲೋ ಕೇಳಿಯೂ ತಿಳಿದಿರದ ಜಾಗದಲ್ಲಿ ಕುಳಿತ ಸೈಬರ್ ಖದೀಮರಿಗೂ ನಮ್ಮನ್ನು ತೆರೆದಿಡುತ್ತದೆ. ಹಾಗಾಗಿ ಅಂತವರಿಂದ ನಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಜಾಗೃತರಾಗಿರುವುದೂ ಅತ್ಯಗತ್ಯ. ಅದರಲ್ಲಿ ಒಂದು ಪ್ರಮುಖ ಸಂಗತಿ ಸೈಬರ್ ಅಪರಾಧಗಳ ಸ್ವರೂಪವನ್ನು ತಿಳಿದುಕೊಳ್ಳುವುದು ಮತ್ತು ಅದರ ಕುರಿತು ನಮ್ಮ ದಿನನಿತ್ಯದ ವ್ಯಹಹಾರಗಳಲ್ಲಿ ನಿಗಾ ವಹಿಸುವುದು. ಅಕಸ್ಮಾತ್ ಅಂತಹ ಸೈಬರ್ ಅಪರಾಧಕ್ಕೆ ತುತ್ತಾದರೆ ಕಾನೂನಿನ ಮುಖಾಂತರ ಪರಿಹಾರಕ್ಕೆ ತತ್‌ಕ್ಷಣಕ್ಕೆ ಮುಂದಾಗುವುದು. ಸೈಬರ್ ಅಪರಾಧಗಳಿಂದ ತೊಂದರೆಗೀಡಾದ ವ್ಯಕ್ತಿಗಳು ಕೂಡಲೇ ಸಮೀಪದ ಪೋಲಿಸ್ ಠಾಣೆಗಳಿಗೆ ತೆರಳಿ ದೂರು ದಾಖಲಿಸಬಹುದು, ಅದಕ್ಕಾಗಿ ಅನೇಕ ಕಡೆಗಳಲ್ಲಿ ಪೋಲಿಸ್ ಇಲಾಖೆ ವ್ಯವಸ್ಥೆ ಮಾಡಿದೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿ ಬರುವ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಅಂತರ್ಜಾಲ ಪೋರ್ಟ್‌ಲ್ www.cybercrime.gov.in ಇದರಲ್ಲಿಯೂ ಸಹ ದೂರುಗಳನ್ನು ದಾಖಲಿಸಬಹುದು.

ಹಾಗೆಯೇ ಸೈಬರ್ ಅಪರಾಧಗಳು ದಿನೇದಿನೇ ಹೊಸ ಹೊಸ ಆಯಾಮಗಳನ್ನು ತೆರೆದುಕೊಳ್ಳುತ್ತದೆ. ಈ ಕುರಿತು ಪ್ರಜ್ಞಾವಂತ ನಾಗರಿಕರು ಕಾಲಕ್ಕೆ ತಕ್ಕಂತೆ ಕಾನೂನಿನ ಅಗತ್ಯಗಳ ವಿಷಯದಲ್ಲಿ ಜನಜಾಗೃತಿ ಮೂಡಿಸುವುದೂ ಸಹ ಅತ್ಯಗತ್ಯವಾಗಿದೆ.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>