
ನವದೆಹಲಿ: ಕೊರೋನಾ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ವಿಶೇಷ ಗಮನ ನೀಡುತ್ತಿದೆ. ಇನ್ನೊಂದೆಡೆ ಕೆಲವು ರಾಜ್ಯ ಸರ್ಕಾರಗಳು ಶೇ.23 ರಷ್ಟು ಲಸಿಕೆಗಳನ್ನು ಪೋಲಾಗಿಸಿವೆ ಎಂಬುದು ಆರ್ ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.
ದೇಶದಲ್ಲಿ ಏಪ್ರಿಲ್ 11 ರ ವರೆಗೆ 10.34 ಕೋಟಿ ಡೋಸ್ ಲಸಿಕೆಗಳು ವಿವಿಧ ರಾಜ್ಯಗಳಿಗೆ ಕೇಂದ್ರ ಸರ್ಕಾರ ವಿತರಿಸಿದ್ದು, ಇವುಗಳ ಪೈಕಿ ಒಟ್ಟು 44.28 ಲಕ್ಷ ಲಸಿಕೆ ಡೋಸ್ ಗಳು
ಈ ಲಸಿಕೆ ವ್ಯರ್ಥಗೊಳಿಸಿದ ರಾಜ್ಯಗಳಲ್ಲಿ ತಮಿಳುನಾಡು ( 12.1%) ಮೊದಲ ಸ್ಥಾನದಲ್ಲಿದೆ. ಹರ್ಯಾಣ (9.7%), ಪಂಜಾಬ್ (8.1%), ಮಣಿಪುರ (7.8%), ತೆಲಂಗಾಣ (7.5%)ಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೋಲಾಗಿಸಿದ ಇತರ ರಾಜ್ಯಗಳು ಎಂದು ಎನ್ ಡಿಟಿವಿಯಲ್ಲಿ ವರದಿ ಮಾಡಿದೆ.
ಲಸಿಕೆ ಉತ್ಪಾದನೆಗೆ ವೇಗ ನೀಡುವ ಸಲುವಾಗಿ ಕೇಂದ್ರ ಹಣಕಾಸು ಇಲಾಖೆ ಲಸಿಕೆ ಉತ್ಪಾದಿಸುವ ಕಂಪೆನಿಗಳಿಗೆ ನಿನ್ನೆಯಷ್ಟೇ 4,500 ಕೋಟಿ ರೂ. ಮುಂಗಡ ಹಣ ನೀಡಿತ್ತು. ಇದೀಗ ಲಸಿಕೆ ವ್ಯರ್ಥಗೊಳಿಸುವ ರಾಜ್ಯಗಳ ಬೇಜವಾಬ್ದಾರಿತನಕ್ಕೆ ಏನು ಹೇಳಬಹುದು.
ಮಿಜೋರಾಮ್, ಗೋವಾ, ದಾಮನ್, ಡಿಯು, ಅಂಡಮಾನ್ ನಿಕೋಬಾರ್ ದ್ವೀಪ, ಲಕ್ಷದ್ವೀಪ, ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶಗಳಲ್ಲಿ ಶೂನ್ಯ ಪ್ರಮಾಣದಲ್ಲಿ ಲಸಿಕೆ ಪೋಲಾಗಿದೆ ಎಂಬುದು ಸಮಾಧಾನದ ವಿಷಯ.
ಭಾರತದಲ್ಲಿ ಈವರೆಗೆ 12.69 ಕೋಟಿ ಕೋವಿಡ್-19 ಲಸಿಕೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲ ಭಾರತೀಯರಿಗೂ ಲಸಿಕೆ ಸಿಗಲಿದೆ.