
ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಸಂಸ್ಕೃತ ಕಲಿಕೆಯನ್ನು ಉತ್ತೇಜಿಸುವ ‘ಲಿಟಲ್ ಗುರು’ ಎಂಬ ಆ್ಯಪ್ ನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದೆ.
ಈ ‘ಲಿಟಲ್ ಗುರು’ ಅಪ್ಲಿಕೇಶನ್ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಹಾಯ ಮಾಡುತ್ತದೆ. ತಮಗೆ ಬೇಕಾದ ಸಮಯದಲ್ಲಿ ಈ ಅಪ್ಲಿಕೇಶನ್ ನ ಮೂಲಕ ಸಂಸ್ಕೃತವನ್ನು ಕಲಿತುಕೊಳ್ಳಬಹುದಾಗಿದೆ. ಸಂಸ್ಕೃತ ಕಲಿಕೆಯನ್ನು ಸುಲಭಗೊಳಿಸುವ ಮತ್ತು ಮನರಂಜನೆ ನೀಡುವ ಉದ್ದೇಶವನ್ನು ಈ ಆ್ಯಪ್ ಹೊಂದಿದೆ.
ಈ ಅಪ್ಲಿಕೇಶನ್ ನನ್ನು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ – ICCR) ಅಭಿವೃದ್ಧಿಪಡಿಸಿದೆ. ಬೆಂಗಳೂರು ಮೂಲದ Gamapp SportsWizz Tech Pvt. Ltd (ಗ್ಯಾಮ್ ಆ್ಯಫ್ ಸ್ಪೋರ್ಟ್ಸ್ ವಿಜ್) ಈ ಅಪ್ಲಿಕೇಷನ್ ನನ್ನು ನಿರ್ಮಿಸಿದ್ದಾರೆ. ಇದು ಗೂಗಲ್ ಪ್ಲೇ-ಸ್ಟೋರ್ ನಲ್ಲಿ ಲಭ್ಯವಿದೆ.

ಸಂಸ್ಕೃತ ಅತ್ಯಂತ ಆಧುನಿಕ ಹಾಗೂ ವೈಜ್ಞಾನಿಕ ಭಾಷೆ ಎಂಬುದನ್ನು ಅನೇಕ ಭಾಷಾಪ್ರವೀಣರು, ಪ್ರೋಗ್ರಾಮಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಂಸ್ಕೃತ ಕಲಿಕೆಗೆ ಜಗತ್ತಿನೆಲ್ಲೆಡೆಯ ಜನರು ಆಕರ್ಷಿತರಾಗುತ್ತಿದ್ದಾರೆ. ಈಗಾಗಲೇ ವಿಶ್ವದ ಹಲವು ದೇಶಗಳ ವಿಶ್ವವಿದ್ಯಾಲಯಗಳು ಸಂಸ್ಕೃತ ಕಲಿಕೆಗೆ ಅವಕಾಶ ನೆರವು ಮತ್ತು ಉತ್ತೇಜನ ನೀಡುತ್ತಿವೆ. ಈ ಆ್ಯಪ್ ಇಂತಹ ಸಂಸ್ಕೃತಾಸಕ್ತರಿಗೆ ನೆರವಾಗುತ್ತದೆ.
‘ನಾವು ವಿಶ್ವದೆಲ್ಲೆಡೆ ಸಂಸ್ಕೃತ ಬೋಧನೆಗೆ ಏನು ಮಾಡಬೇಕೆಂದು ಪ್ರಸ್ತಾಪಿಸಿದ್ದೇವೆ ಎಂಬುದರ ಸುಂದರ ಸಂಕೇತವಾಗಿ ‘ಲಿಟಲ್ ಗುರು’ ಇದೆ ಎನ್ನುತ್ತಾರೆ ಐಸಿಸಿಆರ್ ಡಿ.ಜಿ. ದಿನೇಶ್ ಕೆ ಪಟ್ನಾಯಕ್ ಅವರು.

ಗೂಗಲ್ ಪ್ಲೇ-ಸ್ಟೋರ್ ನಲ್ಲಿ ಲಭ್ಯ :
Google Play: https://bit.ly/3mDhnXo
and App Store: https://apple.co/3t8tAWv.