Quantcast
Channel: Samvada
Viewing all articles
Browse latest Browse all 3435

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರಿಂದ ಅರ್ಜಿ ಅಹ್ವಾನ ; ಪಿಯು, ಪದವಿ ಜೊತೆಗೆ ಭಾರತೀಯ ಆಡಳಿತ ಸೇವೆ IAS ಪ್ರವೇಶ ಪರೀಕ್ಷೆಗೆ ತರಬೇತಿ.

$
0
0

ಶಿವಮೊಗ್ಗದ ತೇಜಸ್ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಬಾಲಕರು ಹಾಗೂ ಬಾಲಕಿಯರಿಗೆ ಪಿಯುಸಿ, ಪದವಿ ಹಾಗೂ ಭಾರತೀಯ ಆಡಳಿತ ಸೇವೆ UPSC (IAS) ಪ್ರವೇಶ ಪರೀಕ್ಷೆಗೆ ತರಬೇತಿ ನೀಡುತ್ತಿದೆ. ಈ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ನಿಮ್ಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ಬಾಲಕರು ಹಾಗೂ ಬಾಲಕಿಯರಿಗೆ ಇದೊಂದು ಸದವಕಾಶ.

ತೇಜಸ್ ಶಿವಮೊಗ್ಗ

  • ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿಯನ್ನು ಪೂರೈಸುವ  ಪ್ರತಿಭಾವಂತ ತಲಾ 10 ಬಾಲಕರನ್ನು ಮತ್ತು ಬಾಲಕಿಯರನ್ನು ಆರಿಸಲಾಗುವುದು.
  • ಎರಡು ವರ್ಷಗಳ ಪಿಯುಸಿ, 3 ವರ್ಷಗಳ ಪದವಿ ಶಿಕ್ಷಣವನ್ನು ನೀಡುವುದರೊಂದಿಗೆ ಅವರನ್ನು UPSC (IAS) – ಪ್ರವೇಶ ಪರೀಕ್ಷೆಗೆ 2 ವರ್ಷಗಳ ಕಾಲ ತರಬೇತುಗೊಳಿಸಲಾಗುವುದು.
  • ಪ್ರಸಕ್ತ 8 ವಿದ್ಯಾರ್ಥಿಗಳು ತೇಜಸ್ ನ ಅಡಿಯಲ್ಲಿ ಪಿ.ಯು. ಶಿಕ್ಷಣವನ್ನು ಹಾಗೂ 12 ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
  • ಕಳೆದ ವರ್ಷ ನಾಲ್ಕು ವಿದ್ಯಾರ್ಥಿಗಳು ಅಂತಿಮ ವರ್ಷದ ಪದವಿ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಪ್ರಸ್ತುತ ದೆಹಲಿಯ ಪ್ರಖ್ಯಾತ “ಸಂಕಲ್ಪ ಅಕಾಡೆಮಿ” ಯಲ್ಲಿ ನಾಗರೀಕ ಸೇವಾ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ ಪಡೆಯುತ್ತಿದ್ದಾರೆ.

ಅರ್ಹತೆ

  • ಕಳೆದ ಸಾಲಿನಲ್ಲಿ ನಡೆದ 9ನೇ ತರಗತಿ ಅಂತಿಮ ಪರೀಕ್ಷೆಯಲ್ಲಿ ಶೇ. 80ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
  • ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 85 ಅಂಕಗಳನ್ನು ಗಳಿಸಬೇಕು. (ಎಸ್.ಎಸ್.ಎಲ್.ಸಿ. ಬೋರ್ಡ್ ನವರು ನಡೆಸುವ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಗಮನಕ್ಕೆ ತೆಗೆದುಕೊಳ್ಳಲಾಗುವುದು.)
  • ಆರ್ಥಿಕವಾಗಿ ಹಿಂದುಳಿದವರಿಗೆ ಆದ್ಯತೆ.

ಆಯ್ಕೆ ವಿಧಾನ

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಏಪ್ರಿಲ್ 22, 2021 (ಮುಖ್ಯೋಪಾಧ್ಯಾಯರು ಕಳಿಸುವುದು).
  • ಲಿಖಿತ ಪರೀಕ್ಷೆ ಮೇ 2, 2021ರ ಭಾನುವಾರದಂದು ನಡೆಯಲಿದೆ.
  • ಪರೀಕ್ಷಾ ಕೇಂದ್ರಗಳು – ಶಿವಮೊಗ್ಗ. ಭದ್ರಾವತಿ, ಸಾಗರ, ತೀರ್ಥಹಳ್ಳಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಪ್ಪ, ಕಳಸ ಶಿಕಾರಿಪುರ.(ಸ್ಥಳವನ್ನು ನಂತರ ತಿಳಿಸಲಾಗುವುದು)
  • ವಿದ್ಯಾರ್ಥಿಯ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯುತ್ತದೆ.
  • ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ತಿಳಿಸಲಾಗುವುದು.

ಲಿಖಿತ ಪರೀಕ್ಷೆಯ ಸ್ವರೂಪ

ಬಹು ಆಯ್ಕೆ ಪ್ರಶ್ನೆಗಳಿರುತ್ತವೆ.

ಪ್ರತಿ ಪತ್ರಿಕೆಗೂ 60 ನಿಮಿಷ ಕಾಲಾವಕಾಶ ಇರುತ್ತದೆ.

ಹತ್ತನೆಯ ತರಗತಿಯ ಗಣಿತ – 25 ಅಂಕಗಳು,   ವಿಜ್ಞಾನ – 25 ಅಂಕಗಳು,  ಸಮಾಜ ವಿಜ್ಞಾನ – 25 ಅಂಕಗಳು, ಸಾಮಾನ್ಯ ಇಂಗ್ಲಿಷ್ – ೨25 ಅಂಕಗಳು,  ಬೌದ್ಧಿಕ ಸಾಮರ್ಥ್ಯ (Reasoning)  25 – ಅಂಕಗಳು ಇರುತ್ತವೆ.

ಮನವಿ

ಅರ್ಹ ವಿದ್ಯಾರ್ಥಿಗಳು ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ,  ಅಣಿಗೊಳಿಸಿ.

ಆಯ್ಕೆ ಪರೀಕ್ಷೆಗೆ ಯಾವುದೇ ಶುಲ್ಕವಿಲ್ಲ.

ದೇಶದ ಸೇವೆಯಲ್ಲಿ ದಕ್ಷ, ಪ್ರಾಮಾಣಿಕ ಮತ್ತು ದೇಶನಿಷ್ಠ ಅಧಿಕಾರಿಗಳು ಇರಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ತಾವು ಸಹಕರಿಸಬೇಕೆಂದು ಕೋರಿಕೆ.

ಸಂಯೋಜಕರು: ತೇಜಸ್ ಪ್ರಕಲ್ಪ, ವಿಕಾಸ ಪ್ರೌಢಶಾಲೆ,  ಆಲ್ಕೊಳ, ಶಿವಮೊಗ್ಗ-೫೭೭ ೨೦೪

ಸಂಪರ್ಕಿಸಿ: 99800 52300 (ಮಧುಕರ್), 92433 14305 (ರಾಮಚಂದ್ರ), 94493 61321 (ರಮೇಶ್)


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>