
ಬೆಂಗಳೂರು: ಕೊರೋನಾ ನಂತರ ಇದೀಗ ಶಾಲೆ ಕಾಲೇಜುಗಳು ಪುನರಾರಂಭಗೊಳ್ಳುತ್ತಿವೆ, ಈ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ತಿನ ವಿಶೇಷ ಶೈಕ್ಷಣಿಕ ಯೋಜನೆ ತಪಸ್ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ಅವರ ಸಂವಾದ ಕಾರ್ಯಕ್ರಮ ನಡೆಯಿತು.

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗರಾಜ್ ಅವರು ಮಹಾಪುರುಷರ ಜೀವನ ಘಟನೆಗಳನ್ನು ಓದಿ, ಅದರಿಂದ ಪ್ರೇರಣೆ ಪಡೆಯಿರಿ, ದೇಶಕ್ಕೋಸ್ಕರ ಸಮಾಜಕ್ಕೋಸ್ಕರ ಬದುಕುವ; ಅದಕ್ಕೋಸ್ಕರ ತಮ್ಮ ಜೀವನದಲ್ಲಿ ಒಂದು ಮಹಾನ್ ಸಾಧನೆ ಮಾಡುವ ಸಂಕಲ್ಪವನ್ನು ಕೈಗೊಳ್ಳಿ. ಸಮಾಜಹಿತದ ಕೆಲಸಗಳನ್ನು ಜೀವನದುದ್ದಕ್ಕೂ ಮಾಡುತ್ತಾ ಹೋಗೋಣ ಸಮಾಜಕ್ಕೆ ಶಕ್ತಿಯಾಗೋಣ. ಾನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಸಮಾಜಿಕ ಸೇವೆ, ಸಮಾಜದ ಕುರಿತು ಯೋಚಿಸುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ. ಆದರ್ಶದ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ತಪಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬನಶಂಕರಿಯ ಪ್ರಾಂಶುಪಾಲರಾದ ವಸಂತ್ ಕುಮಾರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾಲೇಜು ವಿದ್ಯಾರ್ಥಿ ಪ್ರಮುಖ್ ರಾಜೇಶ್ ಪದ್ಮಾರ್ ಅವರು ಉಪಸ್ಥಿತರಿದ್ದರು.

The post ಕಾಲೇಜು ಶುಭಾರಂಭ: ತಪಸ್ ವಿದ್ಯಾರ್ಥಿಗಳೊಂದಿಗೆ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ಸಂವಾದ first appeared on Vishwa Samvada Kendra.