Quantcast
Channel: Samvada
Viewing all articles
Browse latest Browse all 3435

60 bplaces, 28,817 students of ABVP participated in statewide protest against increasing rape, crime against women

$
0
0

Bangalore July 17: ABVP today held statewide protest, demanding severe punishment for culprits of Bangalore rape case. In the statewide protest held at 60 places, 28,817 students participated. The protesters also demanded resignation of Home Minsiter K George, alleging him ineffective to regulate the increasing crime against women and female students in the state.

ABVP Protest at Mysore

ABVP Protest at Mysore

ಬೆಂಗಳೂರಿನ ಅತ್ಯಾಚಾರ ಪ್ರಕರಣ ಆರೋಪಿಯನ್ನು ಗಲ್ಲಿಗೇರಿಸಲು ಆಗ್ರಹಿಸಿ ಇಂದು ಎಬಿವಿಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ : ರಾಜ್ಯದ 60 ಸ್ಥಾನಗಳಲ್ಲಿ 28,817 ವಿದ್ಯಾರ್ಥಿಗಳು ಭಾಗಿ ಬೆಂಗಳೂರಿನ ಪ್ರೇಜರ್ಟೌನ್ನಲ್ಲಿ ಸ್ನಾತ್ತಕೋತ್ತರ ವಿದ್ಯಾರ್ಥಿನಿಯ ಮೇಲೆ ಆಕೆಯ ಗೆಳೆಯನ ಸಮ್ಮುಖದಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ನಾಸೀರ್ ಹೈದರ್ನನ್ನು ಗಲ್ಲಿಗೇರಿಸಬೇಕು, ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಹಾಗೂ ಅತ್ಯಾಚಾರದ ಬಗ್ಗೆ ದೂರು ಕೊಟ್ಟರೂ ಕೂಡ ಸೂಕ್ತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳದೇ ಉದಾಸೀನ ತೋರಿದ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ನನ್ನು ಕರ್ತವ್ಯದಿಂದ ವಜಾಗೊಳಿಸಿ ಬಂಧಿಸಬೇಕೆಂದು ಆಗ್ರಹಿಸಿ ಇಂದು ಎಬಿವಿಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ರಾಜ್ಯದ ಒಟ್ಟು ರಾಜ್ಯದ ೬೦ ಸ್ಥಾನದಲ್ಲಿ ೨೮,೮೧೭ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯದ ಗುಲ್ಬರ್ಗಾ, ಅಬಜಲಪುರ, ಗುರುಮಿಠಕಲ್. ಬೀದರ್, ಹುಮನಾಬಾದ್, ಬಾಲ್ಕಿ, ಬಳ್ಳಾರಿ, ಕೊಪ್ಪಳ, ವಿಜಾಪುರ, ಮುದ್ದೇಬಿಹಾಳ, ಬಾಗಲಕೋಟೆ, ಬೆಳಗಾವಿ ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಹೊಸದುರ್ಗ, ಚಳ್ಳಿಕೇರೆ, ಹರಪನಹಳ್ಳಿ, ಮಂಗಳೂರು, ಉಡುಪಿ, ಬೈಂದೂರು, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗೃಹ ಸಚಿವರ ಮನೆ ಎದುರು ಮತ್ತು ಮೈಸೂರು ಬ್ಯಾಂಕ್ವೃತ್ತದಲ್ಲಿ ಸೇರಿದಂತೆ ರಾಜ್ಯದ ಇತರೆಡೆ ಪ್ರತಿಭಟನೆ ನಡೆಸಿತು. ಈ ಪ್ರಕರಣಗಳ ಬೆನ್ನಲ್ಲೇ ಮೇಲೆ ಮಾರತ್ಹಳ್ಳಿ ಬಳಿಯ ತೂಬರಹಳ್ಳಿಯ ವಿಬಗಯಾರ್ ಶಾಲೆ ವಿದ್ಯಾರ್ಥಿನಿ ಮೇಲೆ ಶಾಲೆಯ ಸಿಬ್ಬಂದಿಗಳೇ ದುಷ್ಕೃತ್ಯ ನಡೆಸಿದ ಘಟನೆ ಹಾಗೂ ಬೈಂದೂರಿನ ಆಲಂದೂರಿನ ರತ್ನಾ ಎಂಬ ಪಿಯುಸಿ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ.

ABVP Protest at Haveri

ABVP Protest at Haveri

ಪ್ರತಿಭಟನಾ ನಿರತ ಕಾರ್ಯಕರ್ತರ ಮೇಲೆ ಹಲ್ಲೆ, ಬಂಧನ : ಪ್ರತಿಭಟನೆ ಹತ್ತಿಕ್ಕುವ ಹುನ್ನಾರ : ಎಬಿವಿಪಿ ಖಂಡನೆ ಬೆಂಗಳೂರಿನಲ್ಲಿ ಗೃಹ ಸಚಿವರ ಮನೆ ಎದುರು ಪ್ರತಿಭಟನಾ ನಿರತ ಕಾರ್ಯಕರ್ತರ ಮೇಲೆ ಪೋಲಿಸರು ಹಲ್ಲೆ ಮಾಡಿರುವುದನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದ ಗೃಹ ಮಂತ್ರಿಗಳಿಗೆ ನೈಜ ಸಾಮಾಜಿಕ ಕಳಕಳಿ ಇದ್ದಿದ್ದರೆ ಅನ್ಯಾಯವನ್ನು ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಶ್ಲಾಘಿಸಿ, ಸ್ವತಹ ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಸಾರ್ವಜನಿಕರ ರಕ್ಷಣೆಯ ಭರವಸೆಯನ್ನು ಮೂಡಿಸಬೇಕಾಗಿತ್ತು ಆದರೆ ತದ್ವಿರುದ್ಧವಾಗಿ ಅಮಾಯಕ ವಿದ್ಯಾರ್ಥಿಗಳ ಮೇಲೆ ಪೋಲಿಸರ ಮೂಲಕ ದಬ್ಬಾಳಿಕೆ ನಡೆಸಿದ್ದು ಖಂಡನೀಯ. ಸರ್ಕಾರ ಅತ್ಯಾಚಾರ ಮಾಡಿರುವ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು, ಪ್ರತಿಭಟನಾ ನಿರತ, ನ್ಯಾಯಯುತ ಬೇಡಿಕೆಯನ್ನಿಟ್ಟು ಹೋರಾಟ ಮಾಡಿದ ೨೬ ಎಬಿವಿಪಿ ಕಾರ್ಯಕರ್ತರನ್ನು ಅಂಗಿಯ ಕಾಲರ್ ಹಿಡಿದು ಎಳೆದಾಡಿ, ಹಲ್ಲೆ ಮಾಡಿರುವುದು ಪೋಲಿಸರ ಅಮಾನವೀಯತೆಯನ್ನು ತೋರಿಸುತ್ತದೆ. ಅತ್ಯಾಚಾರಿಗಳು, ಅನ್ಯಾಯವೆಸಗುವ ವ್ಯಕ್ತಿಗಳ ಮೇಲೆ ತೋರಿಸಲಾಗದ ಪೌರುಷವನ್ನು ಪೋಲಿಸರು ಅಮಾಯಕ ವಿದ್ಯಾರ್ಥಿಗಳ ಮೇಲೆ ತೋರಿಸಿರುವುದು ಶೋಷನೀಯ. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗೂಂಡಾಗಿರಿ ನಡೆಸಿ ಬಂಧಿಸಿರುವ ಸರ್ಕಾರದ ಕ್ರಮ ಖಂಡನೀಯ. ಅನ್ಯಾಯ, ಅತ್ಯಾಚಾರಗಳ ವಿರುದ್ಧ ಹೋರಾಡುವ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ. ಅತ್ಯಾಚಾರದ ಪ್ರಕರಣಗಳ ಕುರಿತು ಕೇವಲ ಚರ್ಚೆಯಾಗದೇ, ಕುಕೃತ್ಯ ಎಸಗಿದವರ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವ ಸಾಮಾಜಿಕ ಬದ್ಧತೆಯನ್ನು ಸರ್ಕಾರ ತೋರಿಸಬೇಕು. ಇಂತಹ ಹೀನ ಕೃತ್ಯಗಳನ್ನು ಎಸಗುವ ವ್ಯಕ್ತಿಗಳು ಮತ್ತು ಅವರ ರಕ್ಷಣೆಗೆ ನಿಲ್ಲುವ ಪೋಲಿಸ್ ಅಧಿಕಾರಿಗಳನ್ನು ಶಿಕ್ಷಿಸಬೇಕು. ಇಂತಹ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ಸರ್ಕಾರಕ್ಕೆ ಆಗ್ರಹಿಸುತ್ತದೆ.

ಎಬಿವಿಪಿ ಬೇಡಿಕೆಗಳು ೧. ಅತ್ಯಾಚಾರಿಗಳನ್ನು ತಕ್ಷಣ ಗಲ್ಲಿಗೇರಿಸಬೇಕು. ೨. ನಿರ್ಲಕ್ಷ್ಯ ವಹಿಸುವ ಇನ್ಸಪೇಕ್ಟರ್ನ್ನು ಕೂಡಲೇ ಅಮಾನತುಗೊಳಿಸಬೇಕು. ೩. ಅತ್ಯಾಚಾರ ಪ್ರಕರಣಗಳ ತುರ್ತುತನಿಖೆ ನಡೆಸಿ, ತೀರ್ಪು ಬರುವಂತೆ ಪ್ರಬಲ ಕಾನೂನು ಜಾರಿಗೊಳಿಸಬೇಕು. ೪. ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಇಂತಹ ಅತ್ಯಾಚಾರದಂತಹ ದುಷ್ಕೃತ್ಯ ನಡೆದರೆ ಅಂತಹ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು. ೫. ಮಹಿಳೆಯರ ಸುರಕ್ಷತೆಗಾಗಿ ಉಚಿತ ಹೆಲ್ಪಲೈನ್ ಆರಂಭಿಸಬೇಕು.

ABVP Protest at Tumkur

ABVP Protest at Tumkur

 

ABVP Protest at Tiptur

ABVP Protest at Tiptur

Mysore

Mysore

ABVP Protest at Muddebihal

ABVP Protest at Muddebihal

Mandya

Mandya

ABVP Protest at Mandya

ABVP Protest at Mandya

ABVP Protest at Koppala

ABVP Protest at Koppala

ABVP Protest at Hubli

ABVP Protest at Hubli

ABVP Protest at Chamarajanagar

ABVP Protest at Chamarajanagar

ABVP Protest at Bijapur

ABVP Protest at Bijapur

BHALKI

ABVP Protest at Baindur

ABVP Protest at Baindur


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>