ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನಗಲಿದ್ದಾರೆ. ಆರೆಸ್ಸೆಸ್ ಸರಕಾರ್ಯವಾಹರ ಶ್ರದ್ಧಾಂಜಲಿ ಸಂದೇಶ

ॐ ಶಾಂತಿಃ
ಪರಮ ಗತಿ ಪಡೆದ ಮಹಾನ್ ಜೀವಿ ಗೆ ಅಂತಿಮ ನಮನಗಳು.
ಪೂರ್ಣಬದುಕು, ಸಾರ್ಥಕ ಬದುಕು, ಆನಂದದ ಬದುಕು ಇವುಗಳಿಗೆ ಶ್ರೇಷ್ಠ ಉದಾಹರಣೆಯಾಗಿದ್ದ ಪ್ರೊ। ಜಿ.ವಿ. ಕನ್ನಡ ನಾಡು-ನುಡಿಗಳ ಸಾಧಕ, ಸೇವಕ, ಪೋಷಕ, ರಕ್ಷಕನಾಗಿ ಜೀವತೇಯ್ದರು.
ಆದರ್ಶ ಶಿಕ್ಷಕನಾಗಿ, ಹೆಮ್ಮೆಯ ರಾಷ್ಟ್ರಕನಾಗಿ ಸಂಸ್ಕೃತಿಯ ದೀಪಸ್ತಂಭವಾಗಿದ್ದ ಅವರು ಚಿರಂ’ಜೀವಿ’. ಇಹಯಾತ್ರೆ ಮುಗಿಸಿದ ಜಿವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.
–
ದತ್ತಾತ್ರೇಯ ಹೊಸಬಾಳೆ,
ಸರಕಾರ್ಯವಾಹ, ಆರೆಸ್ಸೆಸ್.