
ಭಾರತೀಯ ಸಂಸ್ಕೃತಿಯ ಪ್ರತಿರೂಪ, ಹಿಂದುಗಳ ಆರಾಧ‍್ಯದೈವ ಶ್ರೀರಾಮಚಂದ್ರ ತನ್ನ ರಾಜಪಟ್ಟ ತೊರೆದು ವನವಾಸ ಕೈಗೊಂಡ ಮಾರ್ಗವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಶ್ರೀರಾಮಚಂದ್ರ ತಮ್ಮ 14 ವರ್ಷಗಳ ವನವಾಸದಲ್ಲಿ ನಡೆದೇ ಸಂಚರಿಸಿದ ಉತ್ತರಪ್ರದೇಶದಲ್ಲಿರುವ 201 ಕಿ.ಮೀ ಮಾರ್ಗವನ್ನು ಗುರುತಿಸಲಾಗಿದೆ. ಉತ್ತರಪ್ರದೇಶದ ಅಯೋಧ್ಯೆಯಿಂದ ಹಿಡಿದು ಮಧ್ಯಪ್ರದೇಶದ ಚಿತ್ರಕೂಟದವರೆಗಿನ ಈ ಮಾರ್ಗವನ್ನು ‘ರಾಮ ವನ ಗಮನ ಮಾರ್ಗ’ ಎಂಬ ಹೆಸರಿನಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆಚ್ಚಾರಿ ಸಚಿವಾಲಯ ನಿರ್ಧರಿಸಿದೆ.
ಅಯೋಧ್ಯೆ ಮತ್ತು ಚಿತ್ರಕೂಟ ನಗರಗಳ ನಡುವೆ ಹಾದುಹೋಗುವ ಉತ್ತರಪ್ರದೇಶದ ಫೈಝಾಬಾದ್, ಸುಲ್ತಾನ್‌ಪುರ, ಪ್ರತಾಪ್‌ಗಢ, ಜೇಥ್ವಾರ್, ಶೃಂಗವೇರ್‌ಪುರ, ಮಂಝನಾಪುರ, ರಾಜಾಪುರ ಪ್ರದೇಶದಲ್ಲಿಈ ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದ ಈ ಯೋಜನೆಯನ್ನು 138 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಸಚಿವಾಲಯ ಉದ್ದೇಶಿಸಿದೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯದ ಮೂಲಕವೂ ‘ರಾಮ ವನ ಗಮನ ಮಾರ್ಗ’ವು ಹಾದು ಹೋಗುತ್ತಿದ್ದು, ಆ ರಾಜ್ಯಗಳು ಕೂಡಾ ಈಗಾಗಲೇ ಪ್ರತ್ಯೇಕವಾಗಿ ಮಾರ್ಗ ಅಭಿವೃದ್ಧಿಗೆ ಯೋಜಿಸಿದ್ದು, ಕೇಂದ್ರ ಸರ್ಕಾರದ ನೆರವು ಕೋರಿವೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವಾಗಲೇ ‘ರಾಮ ವನ ಗಮನ ಮಾರ್ಗ’ದ ಅಭಿವೃದ್ದಿಪಡಿಸುತ್ತಿರುವುದು ಭಾರತದೆಲ್ಲೆಡೆ ಮುಚ್ಚುಗೆ ವ್ಯಕ್ತವಾಗಿದೆ.