Quantcast
Channel: Samvada
Viewing all articles
Browse latest Browse all 3435

ಶ್ರೀಕೃ​ಷ್ಣ​ದೇ​ವ​ರಾ​ಯ ನಿಧನವಾದ ದಿನವನ್ನು ಸ್ಪಷ್ಟ​ವಾಗಿ ತಿಳಿ​ಸು​ವ ಶಾಸನ ತುಮಕೂರಿನಲ್ಲಿ ಪತ್ತೆ

$
0
0

ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಕಾಲವಾದ ದಿನದ ಕುರಿತು ಸ್ಪಷ್ಟವಾದ ಉಲ್ಲೇಖವಿರುವ ಶಾಸನವೊಂದು ತುಮಕೂರು ಸಮೀಪದ ಹೊನ್ನೇನಹಳ್ಳಿಯಲ್ಲಿ ಶಾಸನವೊಂದು ಪತ್ತೆಯಾಗಿದೆ. ಈ ಮೂಲಕ ಈವರೆಗೆ ಶ್ರೀಕೃಷ್ಣದೇವರಾಯನ ಕಾಲಮಾನದ ಕುರಿತ ಅಸ್ಪಷ್ಟತೆ ದೂರವಾಗಿದೆ.

ಈ ಶಾಸನದಲ್ಲಿ ಕ್ರಿಸ್ತಶಕ 1529ರ ಅಕ್ಟೋಬರ್‌ 17ರಂದು ಶ್ರೀಕೃಷ್ಣದೇವರಾಯ ಕಾಲ​ವಾ​ದರು ಎಂಬ ಉಲ್ಲೇಖವಿದೆ. ಕ್ರಿಸ್ತ ಶಕ 1336ರಲ್ಲಿ ಹಕ್ಕ, ಬುಕ್ಕರಿಂದ ಆರಂಭವಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಸಾವಿನ ಕುರಿತಾದ ನಿಖರತೆ ಈವರೆಗೂ ಇತಿಹಾಸಕಾರರಿಗೆ ಲಭ್ಯವಾಗಿರಲಿಲ್ಲ. ಈವರೆಗೆ ಕೃಷ್ಣದೇವರಾಯ ಮರಣ ಕಾಲವನ್ನು 1529ರ ಅಕ್ಟೋಬರ್‌ ಅಥವಾ ನವೆಂಬರ್‌ ಎಂದು ಅಂದಾಜಿಸಲಾಗಿತ್ತು. ಇದೀಗ ಹೊನ್ನೇ​ನಹ​ಳ್ಳಿ​ಯಲ್ಲಿ ದೊರೆತ ಶಾಸನದಲ್ಲಿ ಶಾಲಿವಾಹನ ಶಕ ವಿರೋಧಿ ನಾಮ ಸಂವತ್ಸರ 1452ರ ಕಾರ್ತಿಕ ಶುದ್ದ15 ಎಂದರೆ ಕ್ರಿಸ್ತಶಕ 1529ರ ಅಕ್ಟೋಬರ್‌ 17ರಂದು ಶ್ರೀಕೃಷ್ಣದೇವರಾಯ ಅಸ್ತಂಗ​ತ​ರಾ​ಗಿ​ದ್ದಾರೆ ಎಂದು ನಮೂದಿಸಿದೆ. ಈ ಸಂಬಂಧ ಈ ಶಾಸ​ನ​ವ​ನ್ನು ತುಮಕೂರು ಸೀಮೆಯ ತಿಮ್ಮಣ್ಣ ನಾಯಕರು ಗ್ರಾಮವೊಂದನ್ನು ತುಮಕೂರು ವೀರಪ್ರಸನ್ನ ಹನುಮಂತ ದೇವರ ಪೂಜೆಗಾಗಿ ಧಾರೆ ಎರೆದು ಕೊಟ್ಟಿರುವ ಉಲ್ಲೇ​ಖ​ವಿ​ದೆ.

15 ಸಾಲುಗಳನ್ನು ಒಳಗೊಂಡಿರುವ ಶಾಸನದಲ್ಲಿ 12 ಸಾಲು​ಗ​ಳನ್ನು ಸ್ಪಷ್ಟ​ವಾಗಿ ಓದಬಹುದಾ​ಗಿ​ದೆ. ಶಾಸನದ ಮೇಲ್ಭಾಗದಲ್ಲಿ ಶಂಖ, ಚಕ್ರಗಳ ನಡುವೆ ಆಂಜನೇಯನ ಉಬ್ಬು ಚಿತ್ರವಿದ್ದು, ಸೂರ್ಯ, ಚಂದ್ರರ ಗುರುತುಗಳು ಇವೆ. ಶಿಲೆಯ ಹಿಂಭಾಗದಲ್ಲಿ ಮಾರುತಿಯ ಚಿತ್ರವಿದೆ. ಬಾಲದಲ್ಲಿ ಗಂಟೆಯಿದೆ.

ಕೃಪೆ: ಕನ್ನಡಪ್ರಭ


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>