Quantcast
Channel: Samvada
Viewing all articles
Browse latest Browse all 3435

ಪೇಜಾವರ ಶ್ರೀಗಳು ಆಧ್ಯಾತ್ಮಿಕ ಮೇರುಗಿರಿ, ಸಾಮಾಜಿಕ ಕ್ರಾಂತಿಯ ಹರಿಕಾರ, ರಾಷ್ಟ್ರೀಯತೆಯ ಪರಮ ಆರಾಧಕ, ಮಾನವೀಯತೆಯ ಮಮತಾಮೂರ್ತಿಯಾಗಿದ್ದರು : ದತ್ತಾತ್ರೇಯ ಹೊಸಬಾಳೆ

$
0
0

ಆರೆಸ್ಸೆಸ್ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ದೈವಾಧೀನರಾದ ಉಡುಪಿಯ ಪೂಜ್ಯ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇಂಥ ಒಬ್ಬ ಮಹಾಯತಿಗಳನ್ನು ನೋಡುವ, ಅವರ ಮಾತನ್ನು ಕೇಳುವ, ಅವರೊಂದಿಗೆ ಮಾತನಾಡುವ ಮಹಾಭಾಗ್ಯ ನನಗೆ ದೊರೆತದಕ್ಕಾಗಿ ನನ್ನ ಜೀವನ ಧನ್ಯವೆನಿಸಿದೆ.
ಪೂಜ್ಯ ವಿಶ್ವೇಶ ತೀರ್ಥರು ಒಬ್ಬ ಯುಗಪುರುಷ, ಆಧ್ಯಾತ್ಮಿಕ ಮೇರುಗಿರಿ, ಸಾಮಾಜಿಕ ಕ್ರಾಂತಿಯ ಹರಿಕಾರ, ರಾಷ್ಟ್ರೀಯತೆಯ ಪರಮ ಆರಾಧಕ, ಮಾನವೀಯತೆಯ ಮಮತಾಮೂರ್ತಿ,
ಪರಂಪರೆ-ಆಧುನಿಕತೆಗಳ ಸಮನ್ವಯಕ.
ಧರ್ಮದ ಯುಗಾನುಕೂಲ ವ್ಯಾಖ್ಯಾನಕಾರ.
ಅವರು ಪರಂಧಾಮಕ್ಕೆ ತೆರಳಿದ್ದರಿಂದ ತುಂಬಲಾಗದ ವ್ಯಾಕುಲತೆ ಉಂಟಾಗಿದೆ. ಅವರ ಪಾವನ ಸ್ಮೃತಿಗಿದೋ ಸಹಸ್ರ ಸಹಸ್ರ ನಮನ.

ದತ್ತಾತ್ರೇಯ ಹೊಸಬಾಳೆ
ಆರೆಸ್ಸೆಸ್ ಸಹಸರಕಾರ್ಯವಾಹ

Sahsarkayavah Sri Dattatreya Hosabale


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>