Quantcast
Channel: Samvada
Viewing all articles
Browse latest Browse all 3435

ಮತ್ತೊಬ್ಬರ ಬದುಕಿಗಾಗಿ ಬದುಕುವುದೇ ನಿಜವಾದ ಬದುಕು: ಶಂಕರಾನಂದ

$
0
0

ಧಾರವಾಡ: ಯಾವುದೇ ವೃಕ್ಷದ ಬೇರುಗಳೇ ಆ ಗಿಡದ ನಿಜವಾದ ಶಕ್ತಿಯಾಗಿರುತ್ತವೆ. ಆ ಬೇರುಗಳು ತಮ್ಮ ಸ್ವಾರ್ಥವನ್ನು ಪಕ್ಕಕ್ಕಿಟ್ಟು ಸಸ್ಯದ ಬೆಳವಣಿಗೆಗೆ ತಮ್ಮಜೀವನವನ್ನೇ ಅರ್ಪಿಸುತ್ತವೆ. ಅದೇ ತರಹ ಮತ್ತೊಬ್ಬರ ಬದುಕಿಗಾಗಿ ಬದುಕುವುದೇ ನಿಜವಾದ ಬದುಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉತ್ತರ ಪ್ರಾಂತ ಪ್ರಚಾರಕ ಶಂಕರಾನಂದ ನುಡಿದರು.

RSS Pranth Pracharak Shankaranand addressing the gathering

RSS Pranth Pracharak Shankaranand addressing the gathering

ಜುಲೈ 6 ರಂದು ಅವರು ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಯೋಜಿಸಲಾಗಿದ್ದ  ವಿದ್ಯಾಕೇಂದ್ರದ ಕಳೆದ ಆರೂ ಶೈಕ್ಷಣಿಕ ವರ್ಷದ ಹಳೆಯ ವಿದ್ಯಾರ್ಥಿಗಳ (ರೂಟ್ಸ) ಸಹಮಿಲನ ಕಾರ‍್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.

ಅವರು ಮುಂದುವರಿಯುತ್ತಾ, ನಮ್ಮ ಜೀವನವನ್ನು ರೂಪಿಸುವಲ್ಲಿ ತಂದೆ-ತಾಯಿ, ಗುರುಗಳು ಮತ್ತು ಸಾಧು-ಸಂತರು ಬಹು ಮುಖ್ಯ  ಪಾತ್ರ ವಹಿಸುತ್ತಾರೆ. ಈ ಮೂವರೂ  ಕಲಿಸುವ ಪಾಠ ಒಂದೇ ಆದರೆ ಅವರು ಅನುಸರಿಸುವ ವಿಧಾನ ಮಾತ್ರ ಬೇರೆ. ಬದುಕಿರುವ ಪ್ರತಿಯೊಬ್ಬರಿಗೂ ನಾವು ಏಕೆ ಬದುಕಬೇಕು? ಮತ್ತು ಹೇಗೆ ಬದುಕಬೇಕು? ಎಂಬ ಎರಡು ಪ್ರಶ್ನೆಗಳು ಕಾಡುತ್ತವೆ. ಈ ಪ್ರಶ್ನೆಗಳಿಗೆ ಮೂವರೂ ಉತ್ತರ ಕೊಡಬಲ್ಲರು. ಇನ್ನೊಬ್ಬರಿಗಾಗಿ ಬದುಕಬೇಕು ಮತ್ತು ಮೋಕ್ಷದ ಸಾಧನೆಯೆ ಅವುಗಳಿಗೆ ಉತ್ತರವಾಗಿವೆ. ಅಹಂಕಾರ, ಸ್ವಾರ್ಥತೊರೆದ ಬದುಕೇ ಸಾರ್ಥಕ ಬದುಕು. ಅದಕ್ಕೆ ನಾವು ನಮ್ಮ ಸುತ್ತಮುತ್ತಲಿನವರನ್ನು ನಮ್ಮವರೆಂದು ತಿಳಿದು, ಅವರ ಕಷ್ಟ – ದುಖಗಳೆಲ್ಲ ನನ್ನದೆಂದೆ ತಿಳಿದು  ಅವುಗಳ ನಿವಾರಣೆಗಾಗಿ ನಮ್ಮ ಬದುಕನ್ನು ಮುಡಿಪಾಗಿಡಲು ಕಂಕಣಬದ್ಧರಾಗುವುದೇ ಸಾರ್ಥಕ ಬದುಕಿನ ಮೊದಲ ಹಂತ ಎಂದು ಅವರು ನುಡಿದರು. ಜಗತ್ತಿನ ಸುಪ್ರಸಿದ್ಧ ಪುಸ್ತಕಗಳನ್ನು ಬರೆದ ಕೊಟ್ಯಾಧಿಪತಿ ಡೋಮಿನಿಕ ಲ್ಯಾಂಪಿಯರ್ ಭಾರತವನ್ನು ಕಂಡು ಇಲ್ಲಿನ ಜನರ ಮನೋಭಾವನೆಗೆ ಮನಸೋತು ತನ್ನ ಇಡೀ ಜೀವನವನ್ನೇ ಇಲ್ಲಿನ ಜನರ ಉದ್ಧಾರಕ್ಕಾಗಿ ಮೀಸಲಿಡಬಹುದಾದರೆ ಭಾರತೀಯರೇ ಆದ ನಮಗೇಕೆ ಸಾಧ್ಯವಾಗದು? ನಮ್ಮ ಶಿಕ್ಷಣದ ನಂತರ ನಮ್ಮ ಜೀವನದ ಒಂದು ವರ್ಷವನ್ನು ಸಮಾಜ ಸೇವೆ-ದೇಶಸೇವೆಗಾಗಿ ಮೀಸಲಿಡಬೇಕಾದ ಅಗತ್ಯವಿದೆ ಎಂದವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾ ಕೇಂದ್ರದ ಕಾರ್ಯದರ್ಶಿಗಳಾದ ಅಶೋಕ ಸೋನಕರ ಮಾತನಾಡುತ್ತಾ ಇಲ್ಲಿಂದ ವಿದ್ಯಾವಂತರಾಗಿ ಹೋದ ಬಳಿಕ ನೀವು ಇಲ್ಲಿರುವವರಿಗೆ ಆದರ್ಶವಾಗಿರುವಂತೆ ನಿಮ್ಮ ಬದುಕನ್ನು ನಿರೂಪಿಸಿಕೊಳ್ಳಬೇಕು, ನಿಮ್ಮ ಕ್ಷೇತ್ರಗಳಲ್ಲಿ ನೀವೆಲ್ಲ ರಾಷ್ಟ್ರೋತ್ಥಾನದ ರಾಯಭಾರಿಗಳಾಗಿ ಕೆಲಸ ಮಾಡಬೇಕೆಂದುಕರೆ ನೀಡಿದರು.

ಕಾರ‍್ಯಕ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಲಯದ ಪ್ರಧಾನ ಗುರು ತಿಮ್ಮಾಪೂರ ಹಾಗೂ ಪ್ರಾಚಾರ್ಯೆ ಅನೀತಾರೈ ಉಪಸ್ಥಿತರಿದ್ದರು. ಮಂಜುನಾಥ ಪ್ರಾರ್ಥಿಸಿ, ಶ್ರೀಧರ ಜೋಷಿ ಸ್ವಾಗತಿಸಿದರು. ಶಿವಾಜಿ ನಾಯ್ಕ ನಿರೂಪಿಸಿದರು. ಆನಂದ ಪಾಟೀಲ ವಂದಿಸಿದರು.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>